1st Puc English Two Gentlemen of Verona Notes Pdf | ಪ್ರಥಮ ಪಿ.ಯು.ಸಿ ಇಂಗ್ಲೀಷ್ ನೋಟ್ಸ್‌ Pdf

1st Puc English Two Gentlemen of Verona Notes Pdf First Puc Chapter 12 Mcq Textbook Guide Extract Questions Answers kseeb solutions for 1st puc english 12th lesson Karnataka for 1st puc english lesson summary class 11 pdf download Two Gentlemen of Verona questions and answers Kannada Medium Two Gentlemen of Verona Summary In Kannada 2023

kseeb solutions for 1st puc english

Class : 1st Puc

Chapter Name: Two Gentlemen of Verona

Two Gentlemen of Verona Question Answers Pdf

1st Puc English Two Gentlemen of Verona Notes Pdf
1st Puc English Two Gentlemen of Verona Notes Pdf

Two Gentlemen of Verona Summary In Kannada

ಈ ಹೃದಯಂಗಮವಾದ ಕಥಾನಕದಲ್ಲಿ ಲೇಖಕರು ಯುದ್ದದ ದುಷ್ಪರಿಣಾಮಗಳನ್ನು ಅದನ್ನು ದಿಟ್ಟತನದಿಂದ ಎದುರಿಸಿ ನಿಂತ ಇಬ್ಬರು ಹುಡುಗರ ಸಭ್ಯತೆಯನ್ನು ಬಹಳ ಚೆನ್ನಾಗಿ ಚಿತ್ರಿಸಿದ್ದಾರೆ.
ನಿರೂಪಕರು ತಮ್ಮ ಜೊತೆಗಾರರೊಂದಿಗೆ ಕಾರಿನಲ್ಲಿ ಕುಳಿತು ಆಲ್ಸ್‌ ಪರ್ವತ ಶ್ರೇಣಿಯ ಬುಡದಲ್ಲಿ ಪ್ರಯಾಣಿಸುತ್ತಿದ್ದಾಗ ವೆರೋನಾ ನಗರದ ಹೊರವಲಯದಲ್ಲಿ ಇಬ್ಬರು ಹುಡುಗರು ಬುಟ್ಟಿಯಲ್ಲಿ ಸ್ಟ್ರಾಬರಿ ಹಣ್ಣುಗಳನ್ನು ಇಟ್ಟುಕೊಂಡು ಮಾರುತ್ತಿದ್ದುದನ್ನು ನೋಡಿದರು. ನೋಡಲು ಆಕರ್ಷಕವಾಗಿದ್ದ ಆ ಹಣ್ಣುಗಳನ್ನು ಕೊಳ್ಳಬೇಕೆಂದು ಅವರಿಗೆ ಮನಸ್ಸಾಯಿತಾದರು ನಾಜೂಕಲ್ಲದ ವೇಷಭೂಷಣಗಳನ್ನು ನೋಡಿದ ಅವರ ಚಾಲಕನಾಗಿದ್ದ ಲೂಗಿ ಆ ಹುಡುಗರ ಬಳಿ ಹಣ್ಣು ಕೊಳ್ಳುವುದು ಬೇಡವೆಂದು ಎಚ್ಚರಿಸಿದ.
ಆದರೂ ಹುಡುಗರ ಬಗ್ಗೆ ಆಸಕ್ತರಾದ ನಿರೂಪಕರ ಗೆಳೆಯರು ಕಾರನ್ನು ನಿಲ್ಲಿಸಿ ಅವರೊಂದಿಗೆ ಮಾತನಾಡಿ ಅವರಿಬ್ಬರೂ ಅಣ್ಣ ತಮ್ಮಂದಿರೆಂಬುದನ್ನೂ ತಿಳಿದುಕೊಡರು. ದೊಡ್ಡವ 13 ವರ್ಷದ ನಿಕೋಲ ಮತ್ತು ತಮ್ಮ 12 ವರ್ಷ ಸುಮಾರಿನ ಜಾಕೋಪೋ, ಅವರ ಬಳಿ ಇದ್ದ ಅತಿ ದೊಡ್ಡ ಹಣ್ಣಿನ ಬುಟ್ಟಿಯನ್ನೇ ಖರೀದಿಸಿ ನಿರೂಪಕರು ವೆರೋನಾ ನಗರವನ್ನು ತಲುಪಿದರು.
ವೆರೋನ ರೋಮ್ ನ ಅತ್ಯಂತ ಸುಂದರವಾದ ನಗರಗಳಲ್ಲಿ ಒಂದು ಮಧ್ಯಕಾಲೀನ ಯುಗದ ಕಟ್ಟಡಗಳು ಮತ್ತು ಬೀದಿಗಳನ್ನು ಹೊಂದಿರುವ ಈ ಊರಿನಲ್ಲಿಯೆ ರೋಮಿಯೋ ಮತ್ತು ಜೂಲಿಯೆಟ್‌ ರು ವಾಸಿಸುತ್ತಿದ್ದರೆಂಬ ನಂಬಿಕೆಯಿದೆ. ಇತ್ತೀಚಿನ ಯುದ್ದದ ವೇಳೆ ನಡೆದ ಬಾಂಬ್‌ ದಾಳಿಯಲ್ಲಿ ಇಲ್ಲಿಯ ಸೇತುವೆಗಳು ನಾಶವಾಗಿವೆಯಾದರೂ ಈ ಊರಿನ ಸೌಂದರ್ಯ ಮಾಸಿಲ್ಲ.
ಮರುದಿನ ಮುಂಜಾನೆ ಹೋಟೇಲಿನಿಂದ ನಿರೂಪಕರು ಹೊರಟು ರಸ್ತೆಗೆ ಬಂದಾಗ ಅಲ್ಲಿಯ ಚೌಕದಲ್ಲಿದ್ದ ಕಾರಂಜಿಯ ಬಳಿ ಹಿಂದಿನ ಮಧ್ಯಾಹ್ನ ಕಂಡ ಇಬ್ಬರು ಹುಡುಗರು ಗಿರಾಕಿಗಳ ಶೂಗಳನ್ನು ಪಾಲಿಷ್‌ ಮಾಡುತ್ತಿರುವುದನ್ನು ಕಂಡು ಹೋಗಿ ಅವರನ್ನು ಮಾತಾನಾಡಿಸಿದರು. ʼಜೀವನೋಪಾಯಕ್ಕಾಗಿ ನೀವು ಹಣ್ಣೂ ಮಾರುತ್ತೀರಿ ಎಂದು ಭಾವಿಸಿದ್ದೆ ʼ ಎಂದು ನಿರೂಪಕರು ಹೇಳಿದಾಗ ನಾವು ಅನೇಕ ವೃತ್ತೀಗಳನ್ನು ಮಾಡುತ್ತೇವೆ ಸಾರ್‌ . ಅಗಾಗ ನಾವು ಪ್ರವಾಸಿಗಳನ್ನು ಜೂಲಿಯೆಟ್‌ ಳ ಸಮಾಧಿ ಮುಂತಾದ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಿಕೊಂಡು ಬರುವುದೂ ಇದೆ. ಎಂದು ನೀಕೋಲ ಗಂಭಿರವಾಗಿ ಉತ್ತರಿಸಿದ. ಹಾಗಾದರೆ ಇಂದು ನೀವೆ ನಮ್ಮನ್ನು ಕರೆದುಕೋಂಡು ಹೋಗಿ ಎಂದು ಅವರು ಆ ಹುಡುಗರೊಂದಿಗೆ ಸುತ್ತಾಡಿದರು.
ಆ ಹುಡುಗರು ತಮ್ಮ ವಯಸ್ಸಿಗೆ ತಕ್ಕುದಾದ ತುಂಟತನವನ್ನು ಹೊಂದಿದ್ದರು ಅದಕ್ಕಿಂತ ಹೆಚ್ಚಾಗಿ ವಯಸ್ಸಿಗೆ ಮೀರಿದ ಗಂಭಿರತೆ ಮತ್ತು ಜವಾಬ್ದಾರಿಯುತ ನಡವಳಿಕೆಯನ್ನು ಹೊಂದಿರುವುದನ್ನು ಸುತ್ತಾಟದ ಸಂದರ್ಭದಲ್ಲಿ ನಿರೂಪಕರು ಗಮನಿಸಿದರು. ಮುಂದಿನ ಒಂದು ವಾರದಲ್ಲಿ ನಿರೂಪಕರು ಆ ಹುಡುಗರನ್ನು ಹಲವು ಬಾರಿ ಭೇಟಿಯಾಗುವ ಸಂದರ್ಭಗಳು ಒದಗಿದವು. ಅಮೆರಿಕಾದ ಸಿಗರೇಟ್‌ ಪ್ಯಾಕ್‌ ತರುವುದು, ನಾಟಕಕ್ಕೆ ಸೀಟುಗಳನ್ನು ಕಾದಿರಿಸುವುದು, ಒಳ್ಳೆಯ ಇಟಾಲಿಯನ್‌ ಪ್ಯಾಹ್ನ ನೀಡುವ ಹೋಟೇಲನ್ನು ಹುಡುಕಿಕೊಡುವುದು ಮುಂತಾದ ಎಲ್ಲ ಸಂದರ್ಭಗಳಲ್ಲಿಯೂ ಅವರಿಬ್ಬರೂ ಹುಡುಗರು ನಿರೂಪಕರ ತಂಡಕ್ಕೆ ನಗುಮೊಗದಿಂದ ನೆರವಾದರು . ಬೇಸಿಗೆಯ ಆ ಸುಡು ಬಿಸಿಲಿನಲ್ಲಿಯೂ ಅವರು ಅನೇಕ ಶ್ರಮಭರಿತ ಕೆಲಸಗಳನ್ನು ಪದುವಾದಿಂದ ಬರುವ ಕೊನೆಯ ಬಸ್‌ ನ ಪ್ರಯಾಣಿಕರಿಗೆ ವೃತ್ತಪತ್ರಿಕೆಗಳನ್ನು ಮಾರಲೆಂದು ತೂಕಡಿಸುತ್ತಾ ಕುಳಿತ್ತಿದ್ದನ್ನು ಕಂಡಾಗಲಂತೂ ಅವರಿಗೆ ತುಂಬಾ ಸಂತೋಷವಾಗಿತ್ತು. ಅವರಿಬ್ಬರೂ ಪಡುತ್ತಿರುವ ಶ್ರಮದ ಬಗ್ಗೆ ನಿರೂಪಕರು ತಮ್ಮ ಸಹಾನುಭೂತಿಯನ್ನು ವ್ಯಕ್ತಪಡಿಸಿದಾಗ ತಮಗೆ ಆ ಬಗ್ಗೆ ಚಿಂತೆಯಿಲ್ಲ ವೆಂದಷ್ಟೇ ಅವರು ಹೇಳಿದರು.
ಮರುದಿನ ಕಾರಂಜಿಯ ಬಳಿ ಹುಡುಗರನ್ನು ಬೇಟಿ ಮಾಡಿದಾಗ ನಿರೂಪಕರು ಹಣವನ್ನು ಸಂಪಾದಿಸಿ ಅಮೆರಿಕಾಕ್ಕೆ ಹಾರುವ ಯೋಚನೆ ಇದೆಯೇ ” ಎಂದಾಗ ಅಮೆರಿಕಾಕ್ಕೆ ಹೋಗಬೇಕು ಎಂಬ ಆಸೆಯೇನೋ ಇದೆ. ಆದರೆ ಅದಕ್ಕಿಂತ ಭಿನ್ನವಾದ ಯೋಜನೆಯಿದೆ. ಎಂಬ ಉತ್ತರ ದೊರೆಯಿತಾದರೂ ಆ ಯೋಜನೆ ಏನೆಂದು ಅವರು ಬಾಯಿಬಿಡಲಿಲ್ಲ. ಕಡೆಗೆ ನಿರೂಪಕರು ತಾವು ಈ ಸೋಮವಾರ ತಮ್ಮ ಊರಿಗೆ ಹಿಂದಿರುಗುತ್ತಿರುದಾಗಿಯೂ ಅದಕ್ಕೆ ಮುನ್ನ ತಾವು ಅವರಿಗೆ ಯಾವುದಾದರೂ ಸಹಾಯ ಮಾಡಬಹುದೇ ಎಂದು ಕೇಳಿದರು.
ಸ್ವಲ್ಪ ಯೋಚಿಸಿದ ನಂತರ ಜಾಕೋಪೋನು “ಸರ್, ಪ್ರತಿ ಭಾನುವಾರ ನಾವು ಬಾಡಿಗೆ ಸೈಕಲ್‌ ಪಡೆದು ಇಲ್ಲಿಂದ 30 ಕಿ. ಮೀ ಈ ಬಾರಿ ನಮ್ಮನ್ನು ನಿಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ ಉಪಕರಿಸಬಹದು” ಎಂದನು. ನಿರೂಪಕರು ತಮ್ಮ ಚಾಲಕನಿಗೆ ಭಾನುವಾರದ ರಜೆಯನ್ನು ನೀಡಿದ್ದುದರಿಂದ ತಾವೇ ಡ್ರೈವ್‌ ಮಾಡಿಕೊಂಡು ಅವರನ್ನು ಕರೆದೊಯ್ಯುವುದಾಗಿ ಹೇಳಿ ಒಪ್ಪಿಸಿದರು.
ಮರುದಿನ ಮಧ್ಯಾಹ್ನ ಅತ್ಯಂತ ಸುಂದರವಾಗಿ ಪ್ರಕೃತಿಯ ಮಡಿಲಿನಲ್ಲಿ ಮಲಗಿದ್ದ ಪುಟ್ಟ ಹಳ್ಳಿಗೆ ಇವರೆಲ್ಲ ಪಯಣ ಬೆಳೆಸಿದರು. ಬಹುಶಃ ತಾವು ಒಂದು ಪುಟ್ಟ ಗುಡಿಸಲಿನ ಬಳಿಗೆ ಹೋಗಬೇಕಾಗಬಹುದು ಎಂದು ನಿರೂಪಕರು ಭಾವಿಸಿದರು. ಆದರೆ ಜಾಕೋಪೋ ಮಾರ್ಗದರ್ಶಿಸಿದ್ದೂ ಭವ್ಯವಾದ ಬಂಗಲೆಯೊಂದರ ಕಡೆಗೆ. ನಾವು ತುಂಬಾ ಹೊತ್ತು ನಿಮ್ಮನ್ನು ಕಾಯಿಸುವುದಿಲ್ಲ. ಒಂದು ತಾಸಿನೊಳಗೆ ಬಂದು ಬಿಡುತ್ತೆವೆ. ಅಷ್ಟರಲ್ಲಿ ನೀವು ಕೆಫೆಗೆ ಹೋಗಿಬರಬಹುದು. ಎಂದು ಹೇಳಿ ಅವರಿಬ್ಬರೂ ಕಟ್ಟಡದ ಒಳಹೊಕ್ಕರು.
ಇವರಿಬ್ಬರೂ ಇಲ್ಲಿಗೇಕೆ ಬಂದಿರುವರೆನ್ನುವ ಕುತೂಹಲವನ್ನು ತಾಳಲಾರದೆ ಸ್ವಲ್ಪ ಸಮಯದ ನಂತರ ಲೇಖಕರು ಒಳಹೋಗಲೆಂದು ಕರೆಗಂಟೆಯನ್ನು ಒತ್ತಿದ್ದಾಗ ಒಬ್ಬ ಪ್ರಸನ್ನ ಮೊಗದ ದಾದಿಯೊಬ್ಬಳು ಬಾಗಿಲು ತೆರೆದಳು. ತಾವು ನಿಕೋಲ ಮತ್ತು ಜಾಕೋಪಾ ರ ಜೊತೆ ಬಂದವರೆಂಬುದನ್ನು ಆಕೆಗೆ ತಿಳಿಸಿದಾಗ ಆಕೆ ಪರಿವರ್ತಿಸಿದಾಗಿದ್ದ ಭವ್ಯಸೌಧ , ಮೇಲುಪ್ಪರಿಗೆಯಲ್ಲಿದ್ದ ಗಾಜಿನ ಬಾಗಿಲಿನ ಕೊಠಡಿಯೋಂದರ ಕಡೆಗೆ ಕೈ ತೋರಿಸಿದರು.
ಅಲ್ಲಿ ಸುಮಾರು ಇಪ್ಪತ್ತು ವರ್ಷ ವಯಸ್ಸಿನ ಒಬ್ಬ ಕೋಮಲಕಾಯದ ತರುಣಿ ಮಲಗಿದ್ದಳು. ಬದಿಯಲ್ಲಿ ನಿಕೋಲೋ ಮತ್ತು ಜಾಕೋಪೋ ಇಬ್ಬರೂ ಕುಳಿತೂ ಆಕೆಯೊಂದಿಗೆ ನಗುನಗುತ್ತಾ ಸಂಭಾಷಿಸುತ್ತಿದ್ದರು. ಕಾಡು ಹೂಗಳಿದ್ದ ಒಂದು ಹೂ ಕುಂಡ, ಹಣ್ಣುಗಳ ಬುಟ್ಟಿ, ಕೆಲವು ಪುಸ್ತಕಗಳು ಇವೆಲ್ಲ ಮೇಜಿನ ಮೇಲಿದ್ದವು. ಒಳಹೋಗುವಂತೆ ನರ್ಸ್‌ ನಿರೂಪಕರಿಗೆ ಸೂಚಿಸಿದರು. ಆ ಪುಟ್ಟ ಕುಟುಂಬದ ಆಂತರಿಕ ವ್ಯವಹಾರಗಳಲ್ಲಿ ತಲೆಹಾಕುವ ಉದ್ದೇಶ ಇರಲಿಲ್ಲವಾದ್ದರಿಂದ ನಿರೂಪಕರು ಒಳಗೆ ಹೋಗಲಿಲ್ಲ.
ಹೊರಹೊರಟ ನಂತರ ನರ್ಸ್ ನಿಂದ ತಿಳಿದು ಸಂಗತಿಯೆಂದರೆ ಮಲಗಿದಾಕೆ ಹುಡುಗರ ಅಕ್ಕನಾದ ಲೂಸಿಯಾ. ಇವರ ತಂದೆ ಒಬ್ಬ ವಿಧುರನಾಗಿದ್ದು ಪ್ರಸಿದ್ದ ಹಾಡುಗಾರನಾಗಿದ್ದ. ಯುದ್ದದ ಸಂದರ್ಭದಲ್ಲಿ ಆತನ ಕೊಲೆಯಾಗಿತ್ತು. ಮನೆಯ ಮೇಲೆ ಬಾಂಬು ಬಿದ್ದು ಮೂವರು ಮಕ್ಕಳು ಬೀದಿಗೆ ಬಿದ್ದಿದ್ದರು. ಅತ್ಯಂತ ಸಂಭಾವಿತ ಹಾಗೂ ಸುಸಂಸ್ಕೃತ ಜೀವನವನ್ನು ನಡೆಸುತ್ತಿದ್ದ ಕುಟುಂಬ ಬೀದಿ ಪಾಲಾಗಿತ್ತು. ಕೆಲ ದಿವಸಗಳ ಕಾಲ ಈ ಹುಡುಗರು ತಾವೆ ಕಟ್ಟಿಕೊಂಡ ತಡಿಕೆಯಲ್ಲಿ ಕಷ್ಟದಿಂದ ಜೀವ ಹಿಡಿದುಕೊಂಡಿದ್ದರು.
ಆ ವೇಳೆಗೆ ಜರ್ಮನ್‌ ಎಲೈಟ್‌ ಗಾರ್ಡ್‌ ಗಳು ವೆರೊನಾ ನಗರವನ್ನು ತಮ್ಮ ಕೇಂದ್ರ ಸ್ಥಳವನ್ನಾಗಿ ಮಾಡಿಕೊಂಡು ಮೂರು ವರ್ಷಗಳ ಕಾಲ ದಬ್ಬಾಳಿಕೆಯಿಂದ ಅದನ್ನು ಹೊಸಹಾಕಿದರು. ಈ ದುರಾಡಳಿತದ ಬಗ್ಗೆ ಕ್ರೋಧಗೊಂಡಿದ್ದ ಇಬ್ಬರು ಹುಡುಗರು ಅದರ ವಿರುದ್ದ ನಡೆಯುತ್ತಿದ್ದ ಪ್ರತಿಭಟನಾತ್ಮಕ ಗುಪ್ತಚಳುವಳಿಗೆ ಸೇರಿದರು. ಹೋರಾಗಾರರಿಗೆ ಗುಪ್ತಕಪತ್ರಗಳನ್ನು ರವಾನಿಸುವ ಅತ್ಯಂತ ಅಪಾಯಕಾರಿ ಕೆಲಸವನ್ನು ಬಹಳ ಜವಾಬ್ದಾರಿಯಿಂದ ನಿರ್ವಹಿಸಿದರು.
ದುರಾಡಳಿತದ ಕಥೆಯೆಲ್ಲ ಮುಗಿದ ಮೆಲೆ ಅವರು ತಮ್ಮ ಅಕ್ಕನ ಬಳಿ ಬಂದರು. ಆ ವೇಳೆಗೆ ಆಕೆಗೆ ಕ್ಷಯರೋಗ ಅಂಟಿಕೊಂಡಿತ್ತು. ಆದರೂ ಅವರು ಆಕೆಯನ್ನು ಉಳಿಸಿಕೊಳ್ಳುವ ಹಠ ಬಿಡಲಿಲ್ಲ. ಕಳೆದ 12 ತಿಂಗಳುಗಳಿಂದ ಆಕೆ ಆಸ್ಪತ್ರೆಯಲ್ಲಿ ಇದ್ದಾಳೆ. ಅವಳ ಆರೋಗ್ಯವೇನೋ ಉತ್ತಮಗೊಳ್ಳುತ್ತಿದೆ. ಆದರೆ ಯುದ್ದಾನಂತರ ಅವರ ಜೀವನ ದುರ್ಭರವಾಗಿದೆ. ಆಹಾರದ ಬೆಲರೆ ಗಗನಕ್ಕೇರಿದೆ. ರೋಗಿಗಳಿಂದ ಹಣವನ್ನು ತೆಗೆದುಕೊಳ್ಳದೆ ನಾವು ಆಸ್ಪತ್ರೆಯನ್ನು ನಡೆಸುವ ಸ್ಥಿತಿಯಲ್ಲಿಲ್ಲ. ಆದರೆ ಪ್ರತಿವಾರ ಆ ಇಬ್ಬರು ಹುಡುಗರು ಆಕೆಯ ಚಿಕಿತ್ಸೆಯ ಹಣವನ್ನು ತುಂಬುತ್ತಿದ್ದಾರೆ. ಅವರು ಏನೇನು ಕಷ್ಟಪಡುತ್ತಿದ್ದಾರೋ ದೇವರಿಗೆ ಗೊತ್ತು. ಎಂದು ಆಕೆ ನಿಟ್ಟುಸಿರುಬಿಟ್ಟರು.
ನಿರೂಪಕರೊಂದಿಗೆ ವೆರೋನಾಕ್ಕೆ ಹಿಂದಿರುಗುವಾಗ ಹುಡುಗರು ತಾವು ಅಲ್ಲಿಗೆ ಬಂದುದೇಕೆ ಎಂಬುದನ್ನು ಹೇಳಲಿಲ್ಲ. ನಿರೂಪಕರು ತಮಗೆ ಅವರ ಕುಟುಂಬದ ವಿಷಯವೆಲ್ಲ ತಿಳಿದಿದೆ ಎಂಬುದನ್ನು ತೋರಿಸಿಕೊಳ್ಳುವ ಪ್ರಯತ್ನವನ್ನೂ ಮಾಡಲಿಲ್ಲ. ಏಕೆಂದರೆ ಆ ಹುಡುಗರು ಸಮಾಜದಿಂದ ನಿರೀಕ್ಷಿಸುತ್ತಿದ್ದುದ್ದು ಸಹಾನುಭೂತಿ, ಅನುಕಂಪಗಳನ್ನಲ್ಲ: ಬದಲಿಗೆ ಗೌರವಪೂರ್ಣ ವಾದ ನೆರವನ್ನು ಮಾತ್ರ. ಯುದ್ದದ ಪರಿಣಾಮದಿಂದಾಗಿ ವಯಸ್ಸಿಗೆ ಮೀರಿದ ಪ್ರೌಢತ್ವವು ಆ ಹುಡುಗರನ್ನು ಆಕ್ರಮಿಸಿತಾದರೂ ಅವರು ಅದನ್ನು ಧೈರ್ಯ ಮತ್ತು ಘನತೆಯಿಂದ ಒಪ್ಪಿಕೊಂಡಿದ್ದಾರೆ. ಸ್ವಾರ್ಥರಹಿತವಾದ ಅವರ ನಡವಳಿಕೆ ಮಾನವ ಸಮುದಾಯಕ್ಕೆ ಹೊಸದೊಂದು ಆಶಾಕಿರಣವನ್ನು ತಂದಿದೆ. ಎಂಬುದು ನಿರೂಪಕರ ಅಭಿಪ್ರಾಯವಾಗಿತ್ತು.

Two Gentlemen of Verona questions and answers Kannada Medium

PDF Name 1st Puc English Two Gentlemen of Verona Notes Pdf
No. of Pages07
PDF Size89KB
LanguageEnglish
CategoryEnglish Notes
Download LinkAvailable ✓
Topics1st Puc English Two Gentlemen of Verona Notes Pdf

First Puc Chapter 12 Mcq Textbook Extract Questions Answers

Two Gentlemen of Verona summary class 11 PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

kseeb solutions for 1st puc english 12th lesson

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

Two Gentlemen of Verona lesson summary class 11 pdf download

ಇಲ್ಲಿ ನೀವು Prathama Puc Two Gentlemen of Verona Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು Two Gentlemen of Verona 1st Puc Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

FAQ:

The narrator did not follow the boys because 

He wanted to respect their privacy.

What had made the two boys and their sister homeless?

The two boys and their sister had been made homeless because a bomb had destroyed their home.

ಇತರೆ ವಿಷಯ :

All Subjects Notes

1st Puc All Subject Notes

Kannada Notes

English Notes

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.