ನಮಸ್ಕಾರ ಸೇಹಿತರೇ ಕಾಂಗ್ರೆಸ್ ಸರ್ಕಾರದ ಅತ್ಯಂತ ಮಹತ್ವದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ, ಕರ್ನಾಟಕದ ಮಹಿಳೆಯರಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಪ್ರತಿ ತಿಂಗಳು ₹2000 ಹಣವನ್ನು ನೇರವಾಗಿ ಜಮಾ ಮಾಡುತ್ತಿದೆ. ಈ ಯೋಜನೆ 15ನೇ ಕಂತಿನ ಹಣವನ್ನು ಬಿಡುಗಡೆ ಮಾಡಲು ಸರ್ಕಾರ ಸಿದ್ಧವಾಗಿದೆ ಎಂಬ ಸುದ್ದಿ ಈಗ ಹೊರಬಿದ್ದಿದೆ.
Table of Contents
15ನೇ ಕಂತಿನ ವಿಮಾಹಿತಿ
ಗೃಹಲಕ್ಷ್ಮಿ ಯೋಜನೆಯ 14ನೇ ಕಂತಿನ ಹಣವನ್ನು ಯಶಸ್ವಿಯಾಗಿ ಬಿಡುಗಡೆಯಾದ ನಂತರ, 15ನೇ ಕಂತು ಡಿಸೆಂಬರ್ ಮೊದಲನೇ ವಾರದಲ್ಲಿ ಕೆಲವು ಆಯ್ದ ಜಿಲ್ಲೆಗಳಿಗೆ ಮೊದಲ ಹಂತವಾಗಿ ಬಿಡುಗಡೆ ಮಾಡಲಾಗುವುದು.
ಮೊದಲು ಹಣ ಜಮಾ ಆಗುವ ಜಿಲ್ಲೆಗಳು ಪಟ್ಟಿ :
ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹೇಳಿಕೆಯ ಪ್ರಕಾರ, ನಿಮ್ನ ಜಿಲ್ಲೆಗಳ ಮಹಿಳೆಯರಿಗೆ ಮೊದಲು ಹಣ ವರ್ಗಾವಣೆ ಮಾಡಲಾಗುತ್ತದೆ:
- ಬೆಂಗಳೂರು (ನಗರ ಮತ್ತು ಗ್ರಾಮಾಂತರ)
- ಬಾಗಲಕೋಟೆ
- ವಿಜಯಪುರ
- ಯಾದಗಿರಿ
- ಹಾವೇರಿ
- ದಾವಣಗೆರೆ
- ಶಿವಮೊಗ್ಗ
- ಕೊಪ್ಪಳ
- ಗುಲ್ಬರ್ಗ
- ಬೆಳಗಾವಿ
- ಕೊಡಗು
- ಚಿಕ್ಕಬಳ್ಳಾಪುರ
- ಮೈಸೂರು
ಗೃಹಲಕ್ಷ್ಮಿ ಯೋಜನೆಯ ಮಹತ್ವ:
ಈ ಯೋಜನೆ ಮಹಿಳೆಯರಿಗೆ ತಾವು ತಮ್ಮ ಮನೆ ಖರ್ಚುಗಳನ್ನು ನಿಭಾಯಿಸಲು ಹಾಗೂ ತಮ್ಮದೇ ಸ್ವಂತ ಉದ್ಯಮ ಆರಂಭಿಸಲು ಪ್ರಮುಖ ಸಹಾಯವಾಗಿದೆ. ಪ್ರತಿ ತಿಂಗಳು ನೀಡಲಾಗುವ ₹2000 ಹಣದಿಂದ ಅನೇಕ ಮಹಿಳೆಯರು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಂಡಿದ್ದಾರೆ.
15ನೇ ಕಂತಿನ ನಿರೀಕ್ಷೆ:
ಡಿಸೆಂಬರ್ ಮೊದಲ ವಾರದಲ್ಲಿ ಈ ಜಿಲ್ಲೆಗಳಲ್ಲಿ ಮೊದಲು ಹಣ ಬಿಡುಗಡೆ ಮಾಡಿ, ನಂತರ ಇತರೆ ಜಿಲ್ಲೆಗಳಿಗೆ ಕ್ರಮವಾಗಿ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಕರ್ನಾಟಕ ಸರ್ಕಾರದ ಈ ಯೋಜನೆಯ ಮೂಲಕ, ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸಲು ಮತ್ತು ಅವರ ಕುಟುಂಬದ ಜೀವನಮಟ್ಟವನ್ನು ಸುಧಾರಿಸಲು ಸಕಾರಾತ್ಮಕ ಬದಲಾವಣೆ ಸಾಧ್ಯವಾಗಿದೆ. 15ನೇ ಕಂತಿನ ನಿರೀಕ್ಷೆ ಮಹಿಳೆಯರ ಪಾಲಿಗೆ ಮತ್ತೊಂದು ಹಂತದ ಬದಲಾವಣೆಯನ್ನು ತರುವುದಾಗಿ ಕಾಣುತ್ತಿದೆ.
ಈ ಮೇಲ್ಕಂಡ ಗೃಹಲಕ್ಷಿ ಯೋಜನೆ ಮಾಹಿತಿಯನ್ನು ಕರ್ನಾಟಕದ ಎಲ್ಲ ಮಹಿಳೆಯರಿಗೂ ತಲುಪಿಸಿ ಧನ್ಯವಾದಗಳು