10ನೇ ತರಗತಿ ಯುದ್ಧ ಪಾಠದ ಪ್ರಶ್ನೆ ಉತ್ತರಗಳು, ಬಹು ಆಯ್ಕೆ ಪ್ರಶ್ನೆಗಳು, ಯುದ್ಧ ಪಾಠದ ನೋಟ್ಸ್,10th kannada yuddha lesson question answer notes
ತರಗತಿ : 10ನೇ ತರಗತಿ
ಪಾಠದ ಹೆಸರು : ಯುದ್ಧ
ಕೃತಿಕಾರರ ಹೆಸರು : ಸಾರಾ ಅಬೂಬಕ್ಕರ್
Table of Contents
ಲೇಖಕರ ಪರಿಚಯ :
ಸಾರಾ ಅಬೂಬಕ್ಕರ್
ಅವರು ೩೦ ಜೂನ್ ೧೯೩೬ ರಂದು ಕಾಸರಗೋಡಿನಲ್ಲಿ ಜನಿಸಿದರು . ಚಂದ್ರಗಿರಿಯ ತೀರದಲ್ಲಿ , ಸಹನಾ , ಕದನ ವಿರಾಮ , ವಜ್ರಗಳು , ಸುಳಿಯಲ್ಲಿ ಸಿಕ್ಕವರು , ತಳ ಒಡೆದ ದೋಣಿಯಲ್ಲಿ ಮೊದಲಾದುವು ಇವರ ಪ್ರಮುಖ ಕಾದಂಬರಿಗಳು , ಚಪ್ಪಲಿಗಳು , ಟೆಡ್ಡಾ , ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು , ಪಯಣ ಇವು ಕಥಾ ಸಂಕಲನಗಳು , ಇವರ ಸಾಹಿತ್ಯ ಕೃಷಿಗಾಗಿ ಅನೇಕ ಪ್ರಶಸ್ತಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ ಲಭಿಸಿವೆ .
10ನೇ ತರಗತಿ ಯುದ್ಧ ಪಾಠದ ಪ್ರಶ್ನೆ ಉತ್ತರಗಳು ನೋಟ್ಸ್
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
1. ಯುದ್ಧದ ಬಗೆಗೆ ಮುದುಕಿಯ ಅಭಿಪ್ರಾಯವೇನು ?
ಉ : “ ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದೇ ಯುದ್ಧದ ಪರಿ ” ಎಂಬುದು ಯುದ್ಧದ ಬಗೆಗೆ ಮುದುಕಿಯ ಅಭಿಪಾಯವಾಗಿದೆ .
2. ರಾಹಿಲನು ತುರ್ತುಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ ಹಿಡಿದುಕೊಂಡಿದ್ದೇನು ?
ಉ : ರಾಹಿಲನು ತುರ್ತು ಪರಿಸ್ಥಿತಿಗೆ ಬೇಕಾದ ಶಸ್ತ್ರ ಚಿಕಿತ್ಸಾ ಸಾಮಾನುಗಳ ಪೆಟ್ಟಿಗೆಯನ್ನು ಭದ್ರವಾಗಿ ಹಿಡಿದುಕೊಂಡನು .
3. ರಾಹಿಲನು ಯಾರು ?
ಉ : ರಾಹಿಲ ಸೈನ್ಯದಲ್ಲಿದ್ದ ಒಬ್ಬ ಡಾಕ್ಟರ್
4. ಗಡಿ ಪ್ರದೇಶಗಳಲ್ಲಿ ಬ್ಲಾಕ್ ಔಟ್ ‘ ನಿಯಮವನ್ನು ಏತಕ್ಕಾಗಿ ಪಾಲಿಸಲಾಗುತ್ತದೆ ?
ಉ : ಗಡಿ ಪ್ರದೇಶದಲ್ಲಿ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ‘ ಬ್ಲಾಕ್ ಔಟ್ ‘ ನಿಯಮ ಪಾಲಿಸಲಾಗುತ್ತಿದೆ .
5 , ರಾಹಿಲನು ಮುದುಕಿಯ ಎದುರಿಗೆ ನುಡಿದ ಗಂಭೀರವಾದ ಮಾತು ಯಾವುದು ?
ಉ : ರಾಹಿಲನು . “ ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ . ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು ” ಎಂದು ಗಂಭೀರವಾಗಿ ನುಡಿದನು .
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂ -ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .
1. ನಿರ್ಜೀವಾಗಿರುವ ಮಗುವನ್ನು ನೋಡಿ ಮುದುಕಿ ನಿರಾಶೆಯಿಂದ ಹೇಳಿದ್ದೇನು ?
ಉ : ನಿರ್ಜೀವಾಗಿರುವ ಮಗುವನ್ನು ನೋಡಿ ಮುದುಕಿಯು “ ಇಷ್ಟು ವರ್ಷಗಳಿಂದಲೂ ಹಂಬಲಿಸಿ ಹುಟ್ಟಿದ ಮಗು ಕೊನೆಗೂ ದಕ್ಕಲಿಲ್ಲವಲ್ಲ ? ಈ ಯುದ್ಧವಲ್ಲದೆ ಹೋಗಿದ್ದರೆ ನನ್ನ ಮಗುವನ್ನು ಹೇಗಾದರೂ ಬದುಕಿಸಿಕೊಳ್ಳುತ್ತಿದ್ದೆವಲ್ಲ ದೇವರೇ ? ಈ ಮನುಷ್ಯರಿಗೆ ಎಂತಹ ಬುದ್ದಿ ಕೊಡುತ್ತೀಯಾ ? ” ಎಂದು ನಿರಾಶೆಯಿಂದ ಹೇಳಿದಳು .
2. ಮಹಿಳೆಯ ಆರ್ತನಾದ ಕೇಳಿ ರಾಹಿಲನ ಮನದಲ್ಲಿ ಮೂಡಿದ ಪ್ರಶ್ನೆಗಳಾವುವು ?
ಉ : ಮಹಿಳೆಯ ಆರ್ತನಾದ ಕೇಳಿ ರಾಹಿಲನ ಮನದಲ್ಲಿ ಆ ಮಹಿಳೆ ಯಾವ ರೀತಿಯ ಅಪಾಯದಲ್ಲಿ ಸಿಲುಕಿದ್ದಾಳೆ ?ಆ ಮನೆಯೊಳಗೆ ಏನು ಸಂಭವಿಸುತ್ತಿದೆ ? ತಾನೀಗ ಈ ಕದವನ್ನು ತಟ್ಟಿದರೆ ಪರಿಣಾಮವೇನಾಗ ಬಹುದು ? ಆ ಮನೆಯಿಂದ ಒಂದೇ ಒಂದು ಬೆಳಕಿನ ಕಿರಣವೂ ಹೊರಗಡೆಗೆ ಹಾಯುತ್ತಿರಲಿಲ್ಲ . ಗಡಿ ಪ್ರದೇಶದಲ್ಲಿ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ‘ ಬ್ಲಾಕ್ ಔಟ್ ‘ ನಿಯಮ ಪಾಲಿಸಲಾಗುತ್ತಿದೆ . ಇಂತಹ ಈ ಸಮಯದಲ್ಲಿ ಆ ಮನೆಯೊಳಗೆ ಯಾವ ರೀತಿಯ ಕ್ರೌರ್ಯ ನಡೆಯುತ್ತಿದೆ ? ಎಂಬ ಪ್ರಶ್ನೆಗಳು ಮೂಡಿದವು .
3. ಮುದುಕಿಯು ರಾಹಿಲನ ಬಳಿ ಯುದ್ಧದ ಬಗ್ಗೆ ತಿರಸ್ಕಾರದಿಂದ ನುಡಿದ ಮಾತುಗಳೇನು ?
ಉ : “ ನೋಡಪ್ಪಾ , ನಾನು ಈ ಊರಿಗೆ ಬಂದು ಐವತ್ತು ವರ್ಷಗಳಾದರೂ ಆಗಿರಬಹುದು . ಮದುವೆಯಾಗಿ ನವ ವಧುವಾಗಿ ಈ ಊರನ್ನು ಪ್ರವೇಶಿಸಿದೆ . ಕೆಲವು ಕಾಲ ನೆಮ್ಮದಿಯಿಂದಲೇ ಇದ್ದೆವು , ಜಮೀನು ಆಸ್ತಿ ನಮಗೆ ಸಾಕಾಗುವಷ್ಟಿತ್ತು . ಈಗಲೂ ಇದೆಯೆನ್ನು ಆದರೆ ನೆಮ್ಮದಿಯಿಂದ ಬದುಕಲು ಈ ಜನ ಬಿಡಬೇಕಲ್ಲ ? ಯುದ್ಧವಂತೆ , ಯುದ್ಧ ! ” ತಿರಸ್ಕಾರದಿಂದ ನುಡಿದಳು ಮುದುಕಿ .
4. ಡಾಕ್ಟರ್‌ಗೆ ವಿಮಾನದ ಪೈಲಟ್ ಏನು ಹೇಳಿದನು ?
ಉ : “ ಡಾಕ್ಟರ್ ! ರೇಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ . ಗೌಂಡಿನೊಡನೆ ಸಂಪರ್ಕ ಬೆಳೆಸಲು ಸಾಧ್ಯವಾಗುತ್ತಿಲ್ಲ . ಎಲ್ಲಾದರೂ ಹೇಗಾದರೂ ಇಳಿಯೋಣವೆಂದರೆ ಈ ಕತ್ತಲೆಯಲ್ಲಿ ಏನೂ ಕಾಣಿಸ್ತಾ ಇಲ್ಲವಲ್ಲ ? ” ಎಮದು ವಿಮಾನದ ಪೈಲಟ್ ನುಡಿದನು .
ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .
1. ರಾಹಿಲನು ಮುದುಕಿಯ ಕುಟುಂಬಕ್ಕೂ , ಮುದುಕಿಯು ರಾಹಿಲನಿಗೂ ಮಾಡಿದ ಸಹಾಯವನ್ನು ಸಂಕ್ಷಿಪ್ತವಾಗಿ ವಿವರಿಸಿ
ಉ : ಸೈನ್ಯದಲ್ಲಿ ವೈದ್ಯನಾಗಿದ್ದ ರಾಹಿಲನು ಯುದ್ಧದಲ್ಲಿ ಗಾಯಗೊಂಡು ಶತ್ರು ಸೈನಿಕರಿಂದ ತಪ್ಪಿಸಿಕೊಂಡು ಮುದುಕಿ ಮನೆಗೆ ಬಂದಾಗ ಅವಳ ಸೊಸೆ ಹೆರಿಗೆ ನೋವಿನಿಂದ ನರಳುತ್ತಿದ್ದಳು . ಆ ಸಮಯದಲ್ಲಿ ಮುದುಕಿಯ ಮಗ ಯುದ್ಧಕ್ಕೆ ಹೋಗಿದ್ದನು . ಯುದ್ಧದ ವಾತಾವರಣ ಇದ್ದುದರಿಂದ ಡಾಕ್ಟರ್ ಅಥವಾ ಸೂಲಗಿತ್ತಿಯನ್ನು ಕರೆಯಲು ಸಾಧ್ಯವಾಗದೆ ಮುದುಕಿ ಸಂಕಟಪಡುತ್ತಿದ್ದಳು . ಈ ವಿಷಯವನ್ನು ಮುದುಕಿಯಿಂದ ತಿಳಿದ ರಾಹಿಲನು “ ತಾನು ಒಬ್ಬ ವೈದ್ಯನಾಗಿದ್ದು ಆಕೆಯನ್ನು ಪರೀಕ್ಷಿಸುವುದಾಗಿ ತಿಳಿಸಿದನು . ತನ್ನ ಕಾಲಿಗೆ ಪೆಟ್ಟಾಗಿದ್ದರೂ ನೋವನ್ನು ಸಹಿಸಿಕೊಂಡು ಬಹಳ ಹೊತ್ತು ಪ್ರಯತ್ನಿಸಿ ಮಗುವನ್ನು ಹೊರ ತೆಗೆದನು , ಆದರೆ ಅದು ನಿರ್ಜೀವವಾಗಿತ್ತು . ಅವರ ತಾಯಿ ಬದುಕಿದಳು . ರಾಹಿಲನನ್ನು ನೋಡಿದ ಮುದುಕಿಗೆ ಅವನು ‘ ತಮ್ಮವನೇ ? ಅಥವಾ ಶತ್ರುಗಳ ಕಡೆಯವನೇ ? ಎಂದು ಸಂದೇಹ ಉಂಟಾಯಿತು . ಅದೇ ಸಮಯಕ್ಕೆ ಅವನನ್ನು ಹುಡುಕಿಕೊಂಡು ಶತ್ರು ಸೈನಿಕರು ಮುದುಕಿ ಮನೆಯ ಬಾಗಿಲು ಬಡಿದರು . ಅವರು ತಮ್ಮ ವಿರೋಧಿ ಸೈನಿಕನೆಂಬ ಅವಳ ಅನುಮಾನ ನಿಜವಾಗಿತ್ತು . ಅವಳು ಅವನ ಕಡೆ ಕೋಪದಿಂದ ನೋಡಿದಳು . ಆದರೆ ರಾಹಿಲ ದಯನೀಯ ನೋಟದಿಂದ “ ಬಾಗಿಲು ತೆರೆಯಬೇಡಿ ” ಎಂದು ಕೈ ಸನ್ನೆ ಮಾಡಿದನು . ಅವನು ಸಂಕಷ್ಟದಲ್ಲಿ ತನ್ನ ಸೊಸೆಯ ಪ್ರಾಣ ಉಳಿಸಿದ್ದರಿಂದ ಮುದುಕಿಯು ಅವನನ್ನು ಸೊಸೆ ಮಲಗಿದ್ದ ಕೋಣೆಯಲ್ಲಿ ಮಂಚದಡಿಯಲ್ಲಿ ಬಚ್ಚಿಟ್ಟು ಅಲ್ಲಿಗೆ ಬಂದಿದ್ದ ಸೈನಿಕರಿಗೆ “ ಈ ಕಡೆ ಯಾರೂ ಬಂದಿಲ್ಲ ” ಎಂದು ಸುಳ್ಳು ಹೇಳಿ ರಾಹಿಲನನ್ನು ರಕ್ಷಿಸಿದಳು .
2. ಮುದುಕಿಯು ತನ್ನ ಮಗನು ಯುದ್ಧಕ್ಕೆ ಹೋದ ಸಂದರ್ಭವನ್ನು ಹೇಗೆ ವಿವರಿಸಿದಳು ?
ಉ : “ ಯುದ್ಧಕ್ಕೆ ಹೋಗಿದ್ದಾನೆ ! ನನ್ನ ಮಗನಿನ್ನೂ ಚಿಕ್ಕ ಹುಡುಗನಾಗಿದ್ದಾಗ ಯುದ್ಧಕ್ಕೆ ಹೋದ ಅವನ ತಂದೆ ಹಿಂತಿರುಗಲಿಲ್ಲ . ಎದೆ ತುಂಬ ಬೂದಿ ಮುಚ್ಚಿದ ಕೆಂಡ . ಎದೆಯ ಗಾಯ ಇಂದಿಗೂ ಇದೆ , ನೋಡು . ಎಲ್ಲ ದುಃಖ ನುಂಗಿಕೊಂಡು ಮಗನನ್ನು ಸಾಕಿ ಸಲಹಿದೆ . ಮದುವೆಯನ್ನೂ ಮಾಡಿದೆ . ಈಗ ಐದಾರು ವರ್ಷಗಳ ಬಳಿಕ ಸೊಸೆ ಗರ್ಭಿಣಿಯಾದಳು . ಮನೆಯಲ್ಲೊಂದು ಪಟ್ಟ ಮಗುವಿನ ಅಳು ಕೇಳಲು ನನ್ನ ಮಗನು ತುದಿಗಾಲಲ್ಲಿ ನಿಂತು ಕಾಯುತ್ತಿದ್ದನು . ಅಷ್ಟರಲ್ಲಿ ಬಂತು ಯುದ್ಧ ಅವನೊಮ್ಮೆ ಹಿಂತಿರುಗಿ ಬಂದಿದ್ದರೆ ಸಾಕಾಗಿತ್ತು . ಈ ವಿಷಯ ತಿಳಿದು ಅವನೆಷ್ಟು ಸಂಕಟ ಪಡುತ್ತಾನೋ … ” ಎಂದು ಮುದುಕಿಯು ತನ್ನ ಮಗನು ಯುದ್ಧಕ್ಕೆ ಹೋದ ಸಂದರ್ಭವನ್ನು ವಿವರಿಸಿದಳು .
3. ಯುದ್ಧದಿಂದ ಆಗುವ ಅನಾಹುತಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಬರೆಯಿರಿ .
ಉ : ಯುದ್ಧದ ಭೀಕರತೆಯು ಮೊದಲನೆಯದಾಗಿ ಧರ್ಮ , ದೇಶಗಳ ಭೇದವಿಲ್ಲದೆ ಭಾಗಿಯಾದ ಸೈನಿಕರಿಗೂ ಅವರ ಕುಟುಂಬ ವರ್ಗದವರಿಗೂ ಹಾಗೂ ದೇಶಕ್ಕೂ ನಾನಾ ರೀತಿಯ ಸಂಕಷ್ಟಗಳನ್ನು ತಂದೊಡ್ಡುತ್ತದೆ . ಯುದ್ಧದಿಂದಾಗಿ ಸಾವಿರಾರು ಜನ ಸೈನಿಕರು ಬಲಿಯಾಗುತ್ತಾರೆ . ಅದರಿಂದ ಅವರ ಕುಟುಂಬ ವರ್ಗ ಬೀದಿಪಾಲಾಗುತ್ತದೆ . ಆಸ್ತಿ – ಪಾಸ್ತಿ , ಮನೆ – ಮಠಗಳು ಹಾಳಾಗುತ್ತವೆ . ಯುದ್ಧದ ಸಂದರ್ಭದಲ್ಲಿ ಹಾಕಲಾಗುವ ಬಾಂಬ್ ಗಳಿಂದ ಆ ಪ್ರದೇಶವೇ ಸುಟ್ಟು ಹೋಗುವುದಲ್ಲದೆ ಹಲವಾರು ವರ್ಷಗಳವರೆಗೆ ಆ ಪ್ರದೇಶದ ಸುತ್ತಲೂ ವಾಸಿಸುವ ಜನ – ಜಾನುವಾರು – ಸಸ್ಯವರ್ಗ – ಜೀವ ಸಂಕುಲದ ವಂಶವಾಹಿಯ ಮೇಲೆ ಪರಿಣಾಮ ಬೀರುವುದಲ್ಲದೆ ಅಲ್ಲಿ ಜನಿಸುವ ಮಕ್ಕಳು ಅಂಗಹೀನರಾಗಿ ಹುಟ್ಟುತ್ತಾರೆ . ಇದಕ್ಕೆ ಹಿರೋಶಿಮಾ ಮತ್ತು ನಾಗಸಾಕಿಗಳೇ ಸಾಕ್ಷಿ . ಯುದ್ಧದಲ್ಲಿ ಭಾಗವಹಿಸುವ ಎರಡೂ ದೇಶಗಳು ನಷ್ಟಕ್ಕೀಡಾಗುತ್ತವೆ . ಆ ಮೂಲಕ ಆರ್ಥಿಕ ಸಂಕಷ್ಟ ತಲೆದೋರುತ್ತದೆ . ಯುದ್ಧದಿಂದ ಲಾಭವಾಗುವುದಕ್ಕಿಂತ ನಷ್ಟವೇ ಹೆಚ್ಚು . ಅದನ್ನರಿತು ಎಲ್ಲಾ ರಾಷ್ಟ್ರಗಳು ಶಾಂತಿಪಾಲನೆ ಮಾಡುವುದು ಅತ್ಯವಶ್ಯಕವಾಗಿದೆ .
ಈ ) ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ
1. “ ಯುದ್ಧಕ್ಕೆ ಹೋದ ತನ್ನ ಮಗನ ಕಣ್ಣುಗಳಂತೆಯೇ ಇವೆಯಲ್ಲ ? ”
ಉ : ಆಯ್ಕೆ : ಈ ವಾಕ್ಯವನ್ನು ಸಾರಾ ಅಬೂಬಕ್ಕರ್ ಅವರು ರಚಿಸಿರುವ ಚಪ್ಪಲಿಗಳು ‘ ಕವನ ಸಂಕಲನದಿಂದ ಆರಿಸಲಾಗಿರುವ ‘ ಯುದ್ಧ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ .
ಸಂದರ್ಭ : “ ಬಂದಿದ್ದಾತ ತಮ್ಮವನಲ್ಲ ” ಎಂಬ ಮುದುಕಿಯ ಸಂದೇಹ ನಿಜವಾಗಿತ್ತು . ತಮಗೆ , ತಮ್ಮ ದೇಶಕ್ಕೆ ದ್ರೋಹ ಬಗೆಯುವವನು . ಎಂದು ಕ್ಷಣಕಾಲ ಆಕೆಯ ಕಣ್ಣುಗಳು ರೋಷದಿಂದ ಕೆರಳಿ ಬಾಗಿಲ ಬಳಿ ಸಮೀಪಿಸುತ್ತಾ ಆತನ ಮುಖ ನೋಡಿದ ಸಂದರ್ಭದಲ್ಲಿ ” ಯುದ್ಧಕ್ಕೆ ಹೋದ ತನ್ನ ಮಗನ ಕಣ್ಣುಗಳಂತೆಯೇ ಇವೆಯಲ್ಲ ? ” ಎಂದು ಕೊಳ್ಳುತ್ತಾಳೆ . ಸ್ವಾರಸ್ಯ : ಕಷ್ಟದಲ್ಲಿದ್ದರೂ ತನ್ನ ಸೊಸೆಯ ಪ್ರಾಣ ಉಳಿಸಿದ ರಾಹಿಲನಲ್ಲಿ ತನ್ನ ಮಗನನ್ನು ಕಾಣುವ ಮುದುಕಿಯ ಪುತವಾತ್ಸಲ್ಯ ಇಲ್ಲಿಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .
2. “ ದಯವಿಟ್ಟು ಬಾಗಿಲು ತೆಗೆಯಿರಿ ನಾನು ಗಾಯಗೊಂಡಿದ್ದೇನೆ ”
ಉ : ಆಯ್ಕೆ : ಈ ವಾಕ್ಯವನ್ನು ಸಾರಾ ಅಬೂಬಕ್ಕರ್ ಅವರು ರಚಿಸಿರುವ ಚಪ್ಪಲಿಗಳು ‘ ಕವನ ಸಂಕಲನದಿಂದ ಆರಿಸಲಾಗಿರುವ ‘ ಯುದ್ಧ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ .
ಸಂದರ್ಭ : ಡಾಕ್ಟರ್ ರಾಹಿಲನು ಶತ್ರು ಸೈನಿಕರ ಧಾಳಿಯಿಂದ ಗಾಯಗೊಂಡು ತಪ್ಪಿಸಿಕೊಂಡು ಬರುವಾಗ ಧಾರಾಕಾರವಾದ ಮಳೆ ಸುರಿಯುತ್ತಿತ್ತು , ರಕ್ಷಣೆ ಪಡೆಯಲೆಂದು ಹುಡುಕುತ್ತಿದ್ದಾಗ ಒಂಟಿ ಮನೆಯೊಂದು ಕಾಣಿಸಿತು . ಹೇಗೋ ಹೋಗಿ ಬಾಗಿಲು ತಟ್ಟುವ ಸಂದರ್ಭದಲ್ಲಿ ” ದಯವಿಟ್ಟು ಬಾಗಿಲು ತೆಗೆಯಿರಿ ನಾನು ಗಾಯಗೊಂಡಿದ್ದೇನೆ ” ಎಂದು ಹೇಳುತ್ತಾನೆ . ತೆವಳಿಕೊಂಡು ಆ ಮನೆಯ ಬಳಿ ಸ್ವಾರಸ್ಯ : ರಾಹಿಲನು ಶತ್ರುಗಳಿಂದ ತಪ್ಪಿಸಿಕೊಂಡು ಶತ್ರುದೇಶದ ಮನೆಗೆ ಬಂದು ರಕ್ಷಣೆಗಾಗಿ ಬೇಡುವುದು ಕಥೆಯಲ್ಲಿ ಸ್ವಾರಸ್ಯ ಪೂರ್ಣವಾಗಿ ಮೂಡಿಬಂದಿದೆ .
3. “ ನಾನಾಕೆಯನ್ನು ಪರೀಕ್ಷಿಸುವ , ನೀವು ಬಿಸಿ ನೀರು ಸಿದ್ಧಪಡಿಸಿ ”
ಎಂಬ ಉ : ಆಯ್ಕೆ : ಈ ವಾಕ್ಯವನ್ನು ಸಾರಾ ಅಬೂಬಕ್ಕರ್ ಅವರು ರಚಿಸಿರುವ ‘ ಚಪ್ಪಲಿಗಳು ‘ ಕವನ ಸಂಕಲನದಿಂದ ಆರಿಸಲಾಗಿರುವ ‘ ಯುದ್ಧ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ .
ಸಂದರ್ಭ : ಮುದುಕಿಯು ” ನನ್ನ ಸೊಸೆ ಹೆರಿಗೆಯ ಬೇನೆ ತಿನ್ನುತ್ತಿದ್ದಾಳೆ . ಸಂಜೆಯಿಂದಲೇ ನೋವು ಪ್ರಾರಂಭವಾಗಿದೆ . ಡಾಕ್ಟರನ್ನು ಅಥವಾ ಸೂಲಗಿತ್ತಿಯನ್ನಾದರೂ ಕರೆಯೋಣವೆಂದರೆ ಈ ಬಾಂಬುಗಳು , ಬ್ಲಾಕ್ ಔಟ್ ” ಎಂದು ಹೇಳಿದ ಸಂದರ್ಭದಲ್ಲಿ ಕಾಲಿಗೆ ಪೆಟ್ಟಾಗಿದ್ದ ಡಾಕ್ಟರ್ ರಾಹಿಲನು “ ನಾನಾಕೆಯನ್ನು ಪರೀಕ್ಷಿಸುವೆ , ನೀವು ಬಿಸಿ ನೀರು ಸಿದ್ಧಪಡಿಸಿ ” ಎಂದು ಹೇಳುತ್ತಾನೆ . ಸ್ವಾರಸ್ಯ ತನ್ನ ಕಾಲಿಗೆ ಪೆಟ್ಟಾಗಿದ್ದರೂ ಅದನ್ನು ಲೆಕ್ಕಿಸದೆ ಮುದುಕಿಯ ಸೊಸೆಗೆ ಹೆರಿಗೆ ಮಾಡಿಸಲು ಮುಂದಾಗುವ ರಾಹಿಲನ ವೃತ್ತಿ ಧರ್ಮ ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .
4. “ ನನ್ನ ಮೊಮ್ಮಗುವಿನ ಹೆಣವಿದೆ ಅಲ್ಲಿ , ಅದನ್ನೂ ನೋಡಿ ! ”
ಉ : ಆಯ್ಕೆ : ಈ ವಾಕ್ಯವನ್ನು ಸಾರಾ ಅಬೂಬಕ್ಕರ್ ಅವರು ರಚಿಸಿರುವ ‘ ಚಪ್ಪಲಿಗಳು ‘ ಕವನ ಸಂಕಲನದಿಂದ ಆರಿಸಲಾಗಿರುವ ‘ ಯುದ್ಧ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಸೈನಿಕರ ಉಡುಪಿನಲ್ಲಿದ್ದ ನಾಲ್ಕೆದು ಜನರು , “ ಯಾರಾದರೂ ಗಾಯಗೊಂಡ ಸೈನಿಕರು ಈ ಕಡೆ ಬಂದಿದ್ದಾರೆಯೇ ? ” ಎಂದು ಕೇಳುತ್ತಾ ಮುದುಕಿಯ ಮನೆಗೆ ನುಗ್ಗಿದಾಗ ಮುದುಕಿಯು “ ಇಲ್ಲವಲ್ಲಾ ” ಎನ್ನುತ್ತಾಳೆ . ಆಗ ಅಧಿಕಾರಿ “ ಆದರೂ ಈ ಮನೆಯಲ್ಲೊಮ್ಮೆ ನೋಡಿ ಬಿಡಿ ” ಎಂದು ಸೈನಿಕರಿಗೆ ಅಪ್ಪಣೆ ಮಾಡಿದ ಸಂದರ್ಭದಲ್ಲಿ ರಾಹಿಲನನ್ನು ರಕ್ಷಿಸುವ ಸಲುವಾಗಿ ಮುದುಕಿ , “ ಹೂಂ … ನೋಡಿ ; ನನ್ನ ಮೊಮ್ಮಗುವಿನ ಹೆಣವಿದೆ ಅಲ್ಲಿ ಅದನ್ನೂ ನೋಡಿ ! ಈ ಯುದ್ಧ ನನ್ನ ಮೊಮ್ಮಗುವನ್ನೂ ಉಳಿಸಲಿಲ್ಲವಲ್ಲ ? ಯಾರಿಗಾಗಿ , ಯಾತಕ್ಕಾಗಿ ಈ ಯುದ್ಧ ? .. ” ಎಂದು ನಿರ್ಜೀವ ಮಗುವಿನ ಬಳಿ ಕುಳಿತು ಎದೆ ಬಡಿದುಕೊಂಡು ಅಳುತ್ತಾಳೆ , ಆಗ ಅವರೆಲ್ಲಾ ಹೊರಟು ಹೋಗುತ್ತಾರೆ . ಸ್ವಾರಸ್ಯ : ಶತ್ರು ದೇಶದವನಾದರೂ ತನ್ನ ಗಾಯವನ್ನು ಸಹಿಸಿಕೊಂಡು ಸೊಸೆಯ ಪ್ರಾಣ ಉಳಿಸಿದ ರಾಹಿಲನನ್ನು ರಕ್ಷಿಸಲು ಮುದುಕಿಯ ಉಪಾಯ ಮತ್ತು ಮಾನವೀಯತಾ ಗುಣ ಇಲ್ಲಿ ವ್ಯಕ್ತವಾಗಿದೆ .
ಉ ) ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ .
೧. ರಾಹಿಲನ ದೇಹದಲ್ಲಿ ಹೊಸರಕ್ತ ಸಂಚಾರವಾದಂತಾಯಿತು .
೨. ನರಳಾಟದ ಬೆನ್ನಲ್ಲೇ ಹಿರಿಯ ಹೆಂಗಸೊಬ್ಬಳ ಸಾಂತ್ವನ ಕೇಳಿ ಬಂತು .
೩. ಮುದುಕಿ ಮತ್ತು ಸೊಸೆಯ ರೋದನ ಮನೆಯ ಮೂಲೆ ಮೂಲೆಗಳಲ್ಲೂ ಪ್ರತಿಧ್ವನಿಸಿತು .
೪. ಯಾರಾದರೂ ಗಾಯಗೊಂಡ ಸೈನಿಕರು . ಈ ಕಡೆ ಬಂದಿದ್ದಾರೆಯೇ ?
೫. ಮನೆಯಲ್ಲೊಂದು ಪುಟ್ಟ ಮಗುವಿನ ಅಳು ಕೇಳಲು ನನ್ನ ಮಗನು ತುದಿಗಾಲಲ್ಲಿ ನಿಂತು ಕಾಯುತ್ತಿದ್ದನು .
ಭಾಷಾ ಚಟುವಟಿಕೆ
೧. ಕೊಟ್ಟಿರುವ ಪದಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರಗಳನ್ನು ಆರಿಸಿ ಬರೆಯಿರಿ .
ಉತ್ತರ : ವಿಜಾತೀಯ ಸಂಯುಕ್ತಾಕ್ಷರಗಳು : ಕಾರ್ಯ , ಶಸ್ತ್ರ ಸ್ಫೋಟಿಸು , ಅದ್ಭುತ , ಡಾಕ್ಟರ್ ( ರ್ಯ ಸ್ತ್ರ , ಸ್ಟೋ , ಮೈು , ಕ )
೨. ನೀಡಿರುವ ಪದಗಳಲ್ಲಿ ಅವರ್ಗೀಯ ವ್ಯಂಜನಾಕ್ಷರಗಳನ್ನು ಆರಿಸಿ ಬರೆಯಿರಿ .
ಉತ್ತರ : ಅವರ್ಗೀಯ ವ್ಯಂಜನಾಕ್ಷರಗಳು : ಸ . ಶ . ಯ , ರೂ , ೪ , ಲ , ವೆ . ಈ ಹೊ , ಳ
೩. ಈ ಪಾಠದಲ್ಲಿ ಬರುವ ಇಂಗ್ಲಿಷ್ ಪದಗಳನ್ನು ಪಟ್ಟಿ ಮಾಡಿ .
ಇಂಗ್ಲಿಷ್ ಪದಗಳು : ಡಾಕ್ಟರ್ , ರೇಡಿಯೋ , ಗೌಂಡಿ , ಪೈಲಟ್ , ಬ್ಲಾಕ್ ಔಟ್ , ಫೀಸ್
೪. ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಹೊಂದುವ ನಾಲ್ಕನೆಯ ಪದವನ್ನು ಬರೆಯಿರಿ .
ಅ ) ಕ್ . ಗ : ಅಲ್ಪಪಾಣಾಕ್ಷರಗಳು : : ಛೇ , ಝ್ : ಮಹಾಪ್ರಾಣಾಕ್ಷರಗಳು
ಆ ) ವರ್ಗೀಯ ವ್ಯಂಜನಾಕ್ಷರಗಳು : ೨೫ : : ಅವರ್ಗೀಯ ವ್ಯಂಜನಾಕ್ಷರಗಳು : ೩೪
ಇ ) ಆ , ಈ , ಊ : ದೀರ್ಘಸ್ವರಗಳು :: ಆ , ಇ , ಉ , ಋ : ಪ್ರಸ್ವಸ್ವರ
ಈ ) ಸ್ವರಗಳು : ೧೩ : : ಯೋಗವಾಹಗಳು : ೨
10ನೇ ತರಗತಿ ಯುದ್ಧ ಪಾಠದ ಪ್ರಶ್ನೆ ಉತ್ತರಗಳು, ಬಹು ಆಯ್ಕೆ ಪ್ರಶ್ನೆಗಳು, ಯುದ್ಧ ಪಾಠದ ನೋಟ್ಸ್,
ಇತರೆ ಪಾಠದ ನೋಟ್ಸ್: