1st Puc Around a Medicinal Creeper English Notes Pdf First Puc Around A Medicinal Creeper Textbook Questions Answers kseeb solutions english notes class 1st Puc Chapter 3 11th Std English 3rd Chapter textbook pdf Karnataka Summary Around a Medicinal Creeper Lesson Notes Download 2023 Kannada Medium Story Kannada Medium Prathama Puc
Table of Contents
kseeb solutions english notes class 1st Puc Chapter 3
Class : 1st Puc
Chapter Name: Around a Medicinal Creeper
karnataka Class 1st Puc Chapter 3 Question Answer
Around a Medicinal Creeper summary Pdf download
First Puc Around a Medicinal Creeper Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್ಲೋಡ್ ಮಾಡಿ
Around A Medicinal Creeper Story Kannada Medium 1st Puc
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಒಂದು ಗಿಡಮೂಲಿಕೆಯ ಬಳ್ಳಿಯ ಬಗ್ಗೆ ಆಳವಾಗಿ ತಿಳಿದುಕೊಳ್ಳಲು ಇಪ್ಪತ್ತು ವರ್ಷಗಳು ಬೇಕಾದುವಂತೆ. ಇದರ ಅನುಭವಗಳನ್ನು ತುಂಬಾ ಸ್ವಾರಸ್ಯವಾಗಿ ಇಲ್ಲಿ ಮಂಡಿಸಿದ್ದಾರೆ.
ಒಮ್ಮೆ ನಿರೂಪಕರ ತೋಟದಲ್ಲಿ ಕಾಫಿ ಮೊಳಕೆಗಳನ್ನು ನಡುವ ಪಾತಿಗೆ ಚಪ್ಪರ ಹಾಕುತ್ತಿರುವಾಗ ಅಡ್ಡಗಳು ಕಟ್ಟಲು ಕಾಡಿನ ಬೀಳುಗಳು ಬೇಕಾದವು. ಸಣ್ಣ ಎಂಬ ಸೇವಕನು ಬೀಳುಗಳನ್ನು ಕಾಡಿನಿಂದ ತಂದನು. ಮಾರ ಎಂಬ ಮತ್ತೊಬ್ಬ ಕೆಲಸಗಾರ” ಈ ಬೀಳುಗಳನ್ನೇಕೆ ತಂದೆ? ಇದು ಔಷಧಿಯ ಬೀಳು, ಇದು ಕಾಣದಂತೆ ತಪ್ಪಿಸಿಕೊಂಡು ಹೋಗುತ್ತೇ” ಎಂದು ಅದನ್ನು ಮರದ ಕಾಂಡಕ್ಕೆ ಕಟ್ಟಿ ಹಾಕಿದನು. ನಿರೂಪಕರಿಗೆ ಆ ಗಿಡಮೂಲಿಕೆಯನ್ನು ನೋಡುವ ಆಸೆಯಾಯಿತು. ಅವರು ಮಾರ, ಸಣ್ಣ ಅವರೊಡನೆ ಕಾಡಿಗೆ ಹೋದರು. ಮಾರ ಈ ಬೀಳಿನ ವಿಚಾರ ಹೇಳುತ್ತಾ ” ಇದಕ್ಕೆ ಋಷಿ ಶಾಪವಿದೆ. ಇದು ಬೇಕಾದಾಗ ಬೇಕಾದವರಿಗೆ ಸಿಗಬಾರದು” ಎಂದು ಹೇಳಿದನು.
ಇದು ಮಳೆಗಾಲದಲ್ಲಿ ಚಿಗುರಿ ದ್ರಾಕ್ಷಿಯಂತಹ ಕಾಯಿಗಳನ್ನು ಬಿಟ್ಟು ಬೇಗ ಸಾಯುತ್ತದೆ. ವರ್ಷಕ್ಕೆ ಒಮ್ಮೆ ಮಾತ್ರ ಇದರ ದರ್ಶನ, ಮಾಸ್ತಿಬೈರ, ಅಪ್ಪಣ್ಣ, ಮಾರ, ಮೊದಲಾದವರು ನಿರೂಪಕರೊಡನೆ ಕಾಡನ್ನು ಸುತ್ತಿ ಅನೇಕ ವಿಷಯಗಳನ್ನು ತಿಳಿದುಕೊಂಡರು. ಈ ದಿನ ಭಾರತದಲ್ಲಿ ಕಾಡು ನಶಿಸುತ್ತಿದೆ. ಇದರಿಂದ ಅನೇಕ ಗಿಡಮೂಲಿಕೆಗಳು ಹೇಳ ಹೆಸರಿಲ್ಲದಂತಾಗಿದ್ದು ಅದರ ಔಷಧೀಯ ಉಪಯೋಗಕ್ಕೆ ತೆರೆ ಬಿದ್ದಿದೆ. ಜೊತೆಗೆ ಈ ಗಿಡಮೂಲಿಕೆಗಳ ಔಷಧೀಯ ಗುಣಗಳನ್ನು ತಿಳಿದ ನಾಟಿ ವೈದ್ಯರು ಇಂದು ಕಡಿಮೆಯಾಗಿದ್ದಾರೆ.
ಆದ್ದರಿಂದ ಒಂದು ಜ್ಞಾನ ಶಾಖೆಗೆ ತುಂಬಲಾರದ ನಷ್ಟವಾಗುತ್ತದೆ. ಎಂದು ನಿರೂಪಕರು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಇಂದು ನಗರಗಳಲ್ಲಿ ಜನ ವೈದ್ಯರ ಬಳಿ ಹೋಗುವ ಹಾಗಿಲ್ಲ. ಅವರು ಕೇಳುವ ಶುಲ್ಕವನ್ನು ಕೊಡಲು ಅನೇಕರಿಗೆ ಸಾಧ್ಯವಾಗದೆ ರೋಗವನ್ನಭವಿಸಬೇಕಾದ ಅನಿವಾರ್ಯತೆ ಒದಗಿದೆ. ಈ ಸಂದರ್ಭದಲ್ಲಿ ನಾಟಿ ವೈದ್ಯರಿಗೆ ಬೇಡಿಕೆ ಹೆಚ್ಚಾಗಿದೆ ಎನ್ನಬಹುದು”
ನಿರೂಪಕರಿಗೆ ಗಿಡಮೂಲಿಕೆಗಳ ಔಷಧೀಯ ಗುಣಗಳ ಬಗ್ಗೆ ವಿಜ್ಞಾನಿ ವೈದ್ಯರೊಡನೆ ಪ್ರಸ್ತಾಪ ಮಾಡಿದಾಗಲೆಲ್ಲ ಅವರು ಕೋಪಿಸಿಕೊಂಡು ನಿರೂಪಕರನ್ನು ʼಅಜ್ಞಾನಿʼ ಎನ್ನುತ್ತಿದ್ದರು. ನಾಟಿ ವೈದ್ಯ ಪದ್ದತಿಯ ಬಗ್ಗೆ ವಿಜ್ಞಾನಿ ವೈದ್ಯರಿಗೆ ಸಂಪೂರ್ಣ ತಿರಸ್ಕಾರವಿತ್ತು. ಈ ವೈದ್ಯರು ನಾಟಿ ವೈದ್ಯರು ನಾಟಿ ವೈದ್ಯರು ಹೇಳುವ ಗಿಡಮೂಲಿಕೆಗಳ ಕಥೆ, ಧಾರ್ಮಿಕತೆ ಹಾಗೂ ಕುರುಡು ನಂಬಿಕೆಗಳನ್ನು ಸಾರಾಸಗಟಾಗಿ ತಿರಸ್ಕರಿಸುತ್ತಿದ್ದರು. ಅಲ್ಲದೆ ಹೀಯಾಳಿಸುತ್ತಿದ್ದರು. ನಾಟಿ ವೈದ್ಯರು ತಮಗೆ ಗೊತ್ತಿರುವುದನ್ನು ತಮ್ಮ ಶಿಷ್ಯರಿಗಾಗಲೀ. ಮಕ್ಕಳಿಗಾಗಲೀ ಹೇಳದೆ ಸಾಯುವುದರಿಂದ ಈ ತಿಳುವಳಿಕೆ ಮುಂದಿನ ತಲೆಮಾರಿನವರಿಗೆ ದಕ್ಕುವ ಅವಕಾಶವಿಲ್ಲ. ಪ್ರತಿಯೊಬ್ಬ ನಾಟಿ ವೈದ್ಯನು ಸ್ವ ಪ್ರಯತ್ನ ಪರಿಶ್ರಮಗಳಿಂದ ನಾಟಿ ವೈದ್ಯಕೀಯವನ್ನು ಕಲಿಯಬೇಕಾದ ದುಃಸ್ಥಿತಿ ಇರುವುದರಿಂದ ಈ ಜ್ಞಾನ ಶಾಖೆ ಆಳ-ಅಗಲಗಳಲ್ಲಿ ಬೆಳೆಯಲಾಗಲಿಲ್ಲ.
ಅನೇಕ ಮಾರಾಣಾಂತಿಕ ರೋಗಗಳಿಗೆ ನಾಟಿ ವೈದ್ಯಕೀಯ ಹಿಂದೆ ಔಷಧಿ ಇದ್ದದ್ದು ಇಂದು ಇಲ್ಲವಾಗಿದೆ. ಮಾರ ಗಿಡಮೂಲಿಕೆಗಳಿಗೆ ಸಂಬಂಧಿಸಿದಂತೆ ಅನೇಕ ಕಥೇಗಳನ್ನು ನಿರೂಪಕರಿಗೆ ಹೇಳುತ್ತಿದ್ದರು. ಈ ಕಥೆಗಳು ತುಂಬ ಕುತೂಹಲ, ಆಶ್ಚರ್ಯವನ್ನುಂಟು ಮಾಡುವಂತಹ ರಸವತ್ತಾದ ಕಥೆಗಳು. ಒಮ್ಮೆ ಮಾರ ಕಳಲೆ ಕಡಿಯಲು ಕಾಡಿಗೆ ಹೋದನು. ಕಳಲೆ ಕಡಿಯುತ್ತಿರುವಾಗ ಕತ್ತಿಗೆ ಕೈಗೆ ತಾಕಿ ರಕ್ತದ ಕೋಡಿ ಹರಿಯಿತು. ತಕ್ಷಣ ಯಾವುದೋ ಎಲೆ ತಂದು ಗಾಯದ ಮೆಲಿಟ್ಟು ಪಂಚೆ ಹರಿದು ಬ್ಯಾಂಡೇಜ್ ಕಟ್ಟಲಾಯಿತು. ಅನಂತರ ಸಂಜೆ ಇಂಗ್ಲೀಷ್ ವೈದ್ಯರ ಬಳಿ ಹೋಗಿ ನಡೆದುದನ್ನು ಗಾಯವೇ ಇರಲಿಲ್ಲ. ವೈದ್ಯರು ಕೋಪಗೊಂಡರು. ಮಾರ ಎಲೆ ಕಟ್ಟಿದ್ದಕ್ಕೆ ಗಾಯ ಹೋಯಿತು ಎಂದನು. ಆ ಎಲೆಯನ್ನು ತೋರಿಸು. ಎಂದು ಅವನೊಡನೆ ವೈದ್ಯರು ಕಾಡಿಗೆ ಹೋದರು. ಮಾರ ಕಾಡೆಲ್ಲ ಸುತ್ತಿ ಆ ಎಲೆ ಸಿಗಲಿಲ್ಲವೆಂದನು. ಆಗ ವೈದ್ಯರು ಎಲೆ ತೋರಿಸದಿದ್ದರೆ ಗುಂಡಿಟ್ಟು ಕೊಲ್ಲುವುದಾಗಿ ಗುಡುಗಿದರು. ಮಾರ ಕೈ ಕಾಲು ಹಿಡದನೆ ವಿನಾ ಎಲೆ ತೋರಿಸಲಿಲ್ಲ.
ಮಾರನಿಗೆ ಬಲಗಡೆ ಹಲ್ಲುಗಳಿರಲಿಲ್ಲ. ಏಕೆ ಎಂದು ಪ್ರಶ್ನಿಸಿದಾಗ ಅವನೊಂದು ಕಥೆಯನ್ನು ಹೇಳಿದನು. ಒಮ್ಮೆ ಮಾರನು ಮೊಲ ಹಿಡಿಯಲು ಕಾಡಿನಲ್ಲಿ ಬಲೆ ಕಟ್ಟಿ ಬಂದಿದ್ದನು. ಬೆಳಿಗ್ಗೆ ಬೇಗನೆ ಎದ್ದು ಮೊಲ ತರಲು ಹೋದನು. ಮೊಲ ಬಲೆಗೆ ಬಿದ್ದಿರಲಿಲ್ಲ. ಅಲ್ಲಿಯೇ ಇದ್ದ ಹಳ್ಲದಲ್ಲಿ ಹಲ್ಲುಜ್ಜಲು ಹೋಗಿ ಗಿಡದ ಕಡ್ಡಿಯನ್ನು ಮುರಿದು ಬಜ್ಜಿ ಬ್ರಷ್ ನಂತೆ ಮಾಡಿಕೊಂಡು ಹಲ್ಲುಜ್ಜಿದನು.
ಆಗ ಅವನ ಬಾಯೊಳಗಿನ ಬಲಭಾಗದ ಎಲ್ಲಾ ಹಲ್ಲುಗಳು ಉದುರಿಹೋದವಂತೆ. ನಿರೂಪಕರು ಇದನ್ನು ಸುಳ್ಳು ಎಂದರು. ಆ ಕಡ್ಡಿ ತಂದುಕೊಡು ಎಂದರು. ಮಾರ ಕಡ್ಡಿಯನ್ನು ತರಲಾಗಲಿಲ್ಲ.
ಒಮ್ಮೆ ಮಾರ ಮತ್ತು ಅವರ ಜೊತೆಗಾರರು ಕಾಡುಕುರಿಗೆ ಉರುಳು ಹಾಕಿ ಹಿಡಿದರಂತೆ. ಎಲ್ಲರೂ ಸಮಪಾಲು ಮಾಡಿ ಕೊಂಡರು. ಅವರವರ ಪಾಲನ್ನು ಎಲೆಯಲ್ಲಿ ಕಟ್ಟಿಕೊಂಡು ಮನೆಗೆ ಹೋದರು. ಮಾರ ಮನೆಗೆ ಬಂದು ಎಲೆ ಬಿಚ್ಚಿದಾಗ ಎಲೆಯಲ್ಲಿ ಕಾಡುಕುರಿ ಇಡಿಯಾಗಿ ಮಲಗಿತ್ತು. ಮಾರನನ್ನು ನೋಡಿ ಓಡಿಹೋಯಿತಂತೆ! ಇಂತಹ ಕತೆಗಳನ್ನು ನಿರೂಪಕರಾಗಲೀ ಇತರರಾಗಲೀ ನಂಬುವಂತಿಲ್ಲ.
ಒಂದು ದಿನ ಅಪ್ಪಣ್ಣ ಕಾಡಿನಲ್ಲಿ ಒಂದು ಬಳ್ಳಿಯನ್ನು ಮರಕ್ಕೆ ಕಟ್ಟಿಹಾಕಿದನು. ಬಳ್ಳಿಯ ಎಲೆಯನ್ನು ಹಾಲಿಗೆ ಹಿಂಡಿದರೆ ಹಾಲು ಗಟ್ಟಿಯಾಗುತ್ತದೆ ಎಂದನು. ನಿರೂಪಕರಿಗೆ ಪ್ರಯೋಗ ಮಾಡಬೇಕೆನಿಸಿತು. ನಿರೂಪಕರು ಒಂದು ಲೀಟರ್ ಹಾಲನ್ನು ತರಿಸಿ ಎಲೆಯನ್ನು ಮಿಕ್ಸಿಗೆ ಹಾಕಿ ರುಬ್ಬಿ ಪಾತ್ರೆಗೆ ಸುರಿದ ಕೆಲವೇ ನಿಮಿಷಗಳಲ್ಲಿ ಹಾಲು ರಬ್ಬರಿನಂತೆ ಗಟ್ಟಿಯಾಯಿತು. ಆದರೆ ಆ ವಸ್ತು ಯಾವ ರೋಗಕ್ಕೆ ಔಷಧಿ ಎಂದು ತಿಳಿಯಲಿಲ್ಲ.
ಕೃಷ್ಣ ಎಂಬುವವನು ನಿರೂಪಕರ ತೋಟದಲ್ಲಿ ಕೆಲಸ ಮಾಡುತ್ತಿದ್ದನು. ತೋಟದ ಕೆಲಸ ಬಿಟ್ಟು ರಿಕ್ಷ ಓಡಿಸಲಾರಂಭಿಸಿದನು. ಅವನಿಗೆ ಕೆಲವು ದಿನಗಳಲ್ಲಿ ಮೂಲವ್ಯಾಧಿ ಉಂಟಾಯಿತು. ಶಸ್ತ್ರಚಿಕಿತ್ಸೆ ಯಾಗಬೇಕೆಂದು ವೈದ್ಯರು ಹೇಳಿದರು. ಅವನಲ್ಲಿ ಹಣ ಇರಲಿಲ್ಲ. ಆದ್ದರಿಂದ ನಾಟಿ ವೈದ್ಯ ಮಾಡುವ ಸನ್ಯಾಸಿಯ ಬಳಿಗೆ ಹೋದನು. ಆ ಸನ್ಯಾಸಿ ಹೇಳಿದ ಗಿಡಮೂಲಿಕೆಯ ಗಡ್ಡೆಯನ್ನು ತಂದು ಅದನ್ನು ಕಡೆದು ಹಾಲಿನಲ್ಲಿ ಅರೆದು ಕುಡಿದನು. ಅವನ ರೋಗ ವಾಸಿಯಾಯಿತು. ಇದೆ ಔಷಧಿ ಯನ್ನು ನಿರೂಪಕರು ರುಚಿ ನೋಡಲೆಂದು ಕುಡಿದರು. ಮಾರನೆಯ ದಿನ ಅವರ ಕಾಲಿನಲ್ಲಿ ಗಡ್ಡೆ ಮಾಯವಾಯಿತು. ಈ ರೀತಿ ಕೆಲವು ನಾಟಿ ಔಷಧಿಗಳು ಅಧ್ಭುತ ಪರಿಣಾಮವನ್ನು ಬೀರುವ ಶಕ್ತಿಯನ್ನು ಹೊಂದಿವೆ. ಆದರೆ ನಾಟಿ ವೈದ್ಯರು ಇದರ ವಿವರಗಳನ್ನು ಬರೆದಿಡದೆ ಇತರರಿಗೆ ಹೇಳದೆ ಇರುವುದರಿಂದ ಈ ವೈದ್ಯಪದ್ದತಿ ವಿನಾಶದ ಅಂಚಿನಲ್ಲಿದೆ ಎಂದು ನಿರೂಪಕರು ವ್ಯಥೇಪಟ್ಟಿದ್ದಾರೆ. ಗ್ರಾಮೀಣ ಜನರು ಇಂದಿನ ಕಂಪ್ಯೂಟರ್ ಯುಗದಲ್ಲಿ ತಮಗೆ ತಿಳಿದ ಔಷಧಿಯ ಗುಣವುಳ್ಳ ಗಿಡಮೂಲಿಕೆಗಳ ಬಗ್ಗೆ ನಿಖರವಾಗಿ ಬರೆದು ರಕ್ಷಿಸಿದರೆ ಮುಂದಿನ ತಲೆಮಾರಿಗೆ ಸಂಶೋಧನೆಯನ್ನು ಆ ವಲಯದಲ್ಲಿ ಮುಂದುವರಿಸಲು ಅನುಕೂಲವಾಗುತ್ತದೆ.
11th Std English 3rd Chapter textbook pdf Karnataka
PDF Name | 1st Puc English Around a Medicinal Creeper Notes Pdf |
No. of Pages | 04 |
PDF Size | 75KB |
Language | English |
Category | English Notes |
Download Link | Available ✓ |
Topics | 1st Puc English Around a Medicinal Creeper Notes Pdf |
First Puc Around A Medicinal Creeper Textbook Questions Answers
ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 1st Puc Around a Medicinal Creeper English ನೋಟ್ಸ್ Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ. ನಿಮಗಾಗಿ ಉತ್ತಮ ಅಂಶಗಳನ್ನು ಒಳಗೊಂಡ Around a Medicinal Creeper ಇಂಗ್ಲೀಷ್ ನೋಟ್ಸ್ Pdf ಅನ್ನು ಇಲ್ಲಿ ಈ ಕೆಳಗೆ ನೀಡಲಾಗಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು.
kseeb solutions for 1st puc english Third lesson
Around a Medicinal Creeper summary class 11 PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
Around a Medicinal Creeper Notes Download
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
ಇಲ್ಲಿ ನೀವು Prathama Puc Around a Medicinal Creeper Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು Around a Medicinal Creeper 1st Puc Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download NowFAQ:
Mention the curse about the medicinal plant.
Mara narrated that the medicinal creeper has been cursed by a sage. The curse is that when someone needs this plant, they will not find it.
When would the medicines lose their potency according to the belief of the native doctors?
According to the native doctors, if they tell others about their medicines, the medicines would lose their potency