1st Puc Frederick Douglass English Notes Pdf | ಪ್ರಥಮ ಪಿ.ಯು.ಸಿ ಇಂಗ್ಲೀಷ್ ನೋಟ್ಸ್‌ Pdf

1st Puc Frederick Douglass English Notes Pdf kseeb solutionsfor 1st puc Textbook english 10th lesson frederick douglass Extract questions and answers pdf 11th standard 10th lesson quick summary Pdf kannada medium Download 2023 karnataka frederick douglass chapter 11 class summary In kannada

1st Puc Frederick Douglass Question Answer Mcq

Class : 1st Puc

Chapter Name: Frederick Douglass

11th standard 10th lesson quick summary Pdf kannada medium

1st Puc Frederick Douglass English Notes Pdf
1st Puc Frederick Douglass English Notes Pdf

frederick douglass chapter 11 summary In kannada

ಫ್ರೆಡ್ರಿಕ್‌ ಡಗ್ಲಸ್‌ ದಕ್ಷಿಣ ಅಮೆರಿಕಾದಲ್ಲಿ ಒಬ್ಬ ಗುಲಾಮನಾಗಿ ಜನಿಸಿದರು. ಆತ್ಮ ಕಥನಾತ್ಮಕವಾದ ಈ ನಿರೂಪಣೆಯಲ್ಲಿ ಅವರು ತಾವು ಪಟ್ಟ ಪಾಡನ್ನು ವಿವರಿಸಿದ್ದಾರೆ.
“ನಾನು ಮೇರಿಲ್ಯಾಂಡಿನ ಟ್ಯಾಲ್ಬೋಟ್‌ ಕೌಂಟಿಗೆ ಸೇರಿದ ಈಟನ್‌ ಗೆ ಹನ್ನೆರಡು ಮೈಲಿ ದೂರದಲ್ಲಿರುವ ಟಕ್ಟೋದಲ್ಲಿ ಜನಿಸಿದ. ನಾನು ಹುಟ್ಟಿದ್ದು ಯಾವಾಗ ಎಂಬುದರ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳಿಲ್ಲದಿರುವುದರಿಂದ ನನ್ನ ವಯಸ್ಸು ಖಚಿತವಾಗಿ ಎಷ್ಟು ಎಂಬುದು ನನಗೆ ತಿಳಿದಿಲ್ಲ. ಬಹುಮಟ್ಟಿಗೆ ನಮ್ಮಂತಹ ಗುಲಾಮರೆಲ್ಲರ ಪಾಡು ಇದೆ ಅಗಿದೆ. ತಿಳಿದಿಲ್ಲ. ಬಹುಮಟ್ಟಿಗೆ ನಮ್ಮಂತಹ ಗುಲಾಮರೆಲ್ಲರ ಪಾಡೂ ಇದೇ ಆಗಿದೆ. ನಮ್ಮ ಮಾಲೀಕರು ನಾವು ಅಜ್ಞಾನದಲ್ಲಿರುವುದನ್ನೇ ಬಯಸುತ್ತಾರೆ. ಬಿಳಿಯರ ಮಕ್ಕಳಿಗೆ ಜನ್ಮದಿನಾಂಕ ತಿಳಿದಿರುವಾಗ ನಮಗೇಕೆ ಆ ಹಕ್ಕು ಇಲ್ಲ? ಈ ಬಗ್ಗೆ ನನ್ನ ಮಾಲೀಕನನ್ನು ಪ್ರಶ್ನಿಸುವ ಯಾವ ಅವಕಾಶವನ್ನೂ ಮಾಲೀಕ ನನಗೆ ನೀಡಲಿಲ್ಲ. ಹಾಗೆ ನೋಡಿದರೆ ಯಾವೊಬ್ಬ ಗುಲಾಮನಿಗೂ ತನ್ನ ಹುಟ್ಟಿದ ಸರಿಯಾದ ದಿನಾಂಕ ಗೊತ್ತಿರುವುದಿಲ್ಲ. ಅಬ್ಬಬ್ಬಾ ಎಂದರೆ ಬಿತ್ತನೆ ಕಾಲ, ಕುಯ್ಲಿನ ಕಾಲ, ಬೇಸಿಗೆ ಅಥವಾ ಚಳಿಗಾಲ ಎಂದಷ್ಟು ತಿಳಿದಿರಬಹುದು. ಬಹುಶಃ ನನಗೀಗ 27-28 ವಯಸ್ಸಾಗಿರಬಹುದು.
ನನ್ನ ತಾಯಿ ಹ್ಯಾರಿಯೆಟ್‌ ಬೇಯಿ. ಆಕೆ ಐಸಾಕ್‌ ಮತ್ತು ಬೆಟ್ಟೆ ಬೇಯಿಯ ಮಗಳು. ನನ್ನಮ್ಮ ಅವಳ ತಂದೆ ತಾಯಿಗಿಂತ ಕಪ್ಪಗಿದ್ದಳು. ನನ್ನ ಅಪ್ಪ ಒಬ್ಬ ಶ್ವೇತ ವರ್ಣೀಯ. ಬಹುಶಃ ನನ್ನ ಮಾಲೀಕನೇ ನನ್ನ ತಂದೆಯೂ ಆಗಿದ್ದನೆಂಬ ಗುಸುಗುಸು ಸುದ್ದಿ ಇತ್ತಾದರೂ ಅದರ ಬಗ್ಗೆ ನನಗೆ ಏನೂ ಖಚಿತವಾಗಿ ತಿಳಿದಿಲ್ಲ. ನಾನೂ ತೀರಾ ಪುಟ್ಟ ಮಗುವಾಗಿದ್ದಾಗಲೇ ನನ್ನ ತಾಯಿಯಿಂದ ನನ್ನನ್ನು ಬೇರ್ಪಡಿಸಲಾಯಿತು. ಮೇರಿಲ್ಯಾಂಡಿನಲ್ಲಲಿ 12 ತಿಂಗಳು ತುಂಬುವ ಮುನ್ನವೇ ಮಗುವನ್ನು ತಾಯಿಯಿಂದ ಬೇರ್ಪಡಿಸಿ ದೂರದ ವೃದ್ದೆಯ ಬಳಿ ಬಿಡುವ ಪರಿಪಾಠವಿದೆ. ಇದಕ್ಕೆ ಕಾರಣವೇನೋ ನನಗೆ ಗೊತ್ತಿಲ್ಲವಾದರೂ ಇದರಿಂದಾಗಿ ಮಗು ತಾಯಿಯ ವಾತ್ಸಲ್ಯದಿಂದ ವಂಚಿತಗೊಳ್ಳುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.
ನಿಜ ಹೇಳಬೇಕೆಂದರೆ ನಾನು ನನ್ನ ತಾಯಿಯನ್ನು ಸರಿಯಾಗಿ ನೋಡೇ ಇಲ್ಲ. ಆಕೆಯನ್ನು ನನ್ನ ಇಡಿಯ ಜೀವಮಾನದಲ್ಲಿ ನಾಲ್ಕಾರ ಬಾರಿ ಮಾತ್ರ ಕಂಡಿರಬಹುದು. ಅದೂ ಕೆಲವೇ ನಿಮಿದಷಗಳ ಕಾಲ ಮತ್ತು ರಾತ್ರಿ ವೇಳೆಯಲ್ಲಿ ಮಾತ್ರ. ಆಕೆ ನನ್ನ ಮನೆಗೆ ಸುಮಾರು 12 ಮೈಲಿ ದೂರದಲ್ಲಿದ್ದ ಸ್ಟೀವರ್ಟ್‌ ಎಂಬುವರ ಸೊತ್ತಾಗಿದ್ದಳು. ದಿನದ ಎಲ್ಲ ಕೆಲಸವನ್ನೂ ಮುಗಿಸಿ ಅಷ್ಟು ದೂರ ನಡೆದು ನನ್ನನ್ನು ಕಾಣಲೆಂದು ಆಕೆ ಬರಬೇಕಾಗಿತ್ತು. ಸೂರ್ಯ ಮೂಡುವ ವೇಳೆಗೆ ಗುಲಾಮರು ಅವರವರ ಜಾಗದಲ್ಲಿ ಇಲ್ಲದಿದ್ದರೆ ಅವರಿಗೆ ಛಡಿಏಟು ಖಾತ್ರಿಯಾಗಿತ್ತು. ಹಾಗಾದಿರಬೇಕಾದರೆ ಅವರು ಹಿಂದಿನ ದಿನವೇ ತಮ್ಮ ಮಾಲಿಕರ ಅನುಮತಿ ಪಡೆದಿರಬೇಕಿತ್ತು.
ಅಂತಹ ಅನುಮತಿ ದೊರೆಯುವುದು ಅಪರೂಪವಾಗಿತ್ತು. ನೀಡಿದವನು ಮಹಾ ಉದಾರಿ ಎನಿಸಿಕೊಳ್ಳುತ್ತಿದ್ದ. ಆಕೆ ನನ್ನ ಪಕ್ಕದಲ್ಲಿ ಮಲಗಿ ನನ್ನನ್ನು ತಟ್ಟಿ ಮಲಗಿಸುತ್ತಿದ್ದಳು. ಮತ್ತು ನಾನು ಎಚ್ಚರಾಗುವ ವೇಳೆಗೆ ಅವಳು ಹೊರಟು ಹೋಗಿರುತ್ತಿದ್ದಳು. ನಾನು ಏಳು ವರ್ಷದವನಿರುವಾಗ ಅವಳ ಸಾವು ನಮ್ಮಿಬ್ಬರನ್ನೂ ಶಾಶ್ವತವಾಗಿ ಬೇರ್ಪಡಿಸಿತು. ಆಕೆಯ ಅನಾರೋಗ್ಯ, ಸಾವು. ಶವಸಂಸ್ಕಾರ-ಯಾವ ಸಂದರ್ಭದಲ್ಲಿಯೂ ನಾನು ಅಕೆಯ ಜೊತೆಗಿರುವ ಅವಕಾಶ ನನಗೆ ಒದಗಲಿಲ್ಲ. ಬದುಕಿನಲ್ಲಿ ಯಾವ ಸುಖವನ್ನೂ ಕಾಣದ ಅದರೆ ವಾತ್ಸಲ್ಯವೇ ಮೂರ್ತಿವೆತ್ತಂತಿದ್ದ ಆಕೆಯೇ ಸಾವು ಯಾರೋ ಅಪರಿಚಿತರ ಸಾವಿನಷ್ಟೇ ನಿರ್ಭಾವುಕವಾಗಿತ್ತು. ನನ್ನ ತಾಯಿ ಹೀಗೆ ಹಠಾತ್ತಾಗಿ ಸತ್ತುದರಿಂದ ನನ್ನ ತಂದೆಯವರು ಯಾರು ಎಂದು ತಿಳಿಯುವ ಅವಕಾಶವನ್ನೂ ನಾನು ಕಳೆದುಕೊಂಡೆ . ಮಾಲೀಕರು ತಮ್ಮ ಮಹಿಳಾ ಗುಲಾಮರನ್ನು ತಮ್ಮ ಕಾಮತೃಷೆಗೆ ಬಳಸಿಕೊಳ್ಳವುದು ಬಹಳ ಸಾಮಾನ್ಯವಾಗಿದ್ದ ಕಾಲ ಅದು. ಹಾಗಾಗಿ ಅನೇಕ ವೇಳೆಯಲ್ಲಿ ಗುಲಾಮರಿಗೆ ಆ ವ್ಯಕ್ತಿ ಏಕಕಾಲಕ್ಕೆ ಮಾಲೀಕ ಮತ್ತು ತಂದೆ ಎರಡೂ ಅಗಿರುತ್ತಿದ್ದ. ಇಂತಹ ಗುಲಾಮರು ಇತರ ಗುಲಾಮರಿಗಿಂತ ಹೆಚ್ಚು ಕಷ್ಟವನ್ನು ಅನುಭವಿಸಬೇಕಾಗುತ್ತಿತ್ತು. ಏಕೆಂದರೆ ಮಾಲೀಕನ ಪತ್ನಿಯ ಕ್ರೂರ ದೃಷ್ಟಿ ಸದಾ ತನ್ನ ಮಲಮಗನ ಕಡೆಗೆ ಇರುತ್ತಿತ್ತು. ಮಲಮಕ್ಕಳ ಬಗೆಗೆ ತನ್ನ ಗಂಡನೇನಾದರೂ ಸ್ವಲ್ಪವಾದರೂ ಉದಾರವಾಗಿದ್ದಾನೆಂದು ಅವಳಿಗೆ ಅನ್ನಿಸಿದರೆ ಆ ಹುಡುಗನಿಗೆ ಛಡಿಏಟಿನ ಉಡುಗೊರೆ ತಪ್ಪುತ್ತಲೇ ಇರಲಿಲ್ಲ.
ಅಂತಹ ಹುಡುಗರನ್ನು ಬೇರೆ ಯಾರಿಗಾದರೂ ಮಾರಿಬಿಡಲು ಹೆಂಡತಿಯರು ತಮ್ಮ ಗಂಡಂದಿರನ್ನು ಒತ್ತಾಯಿಸುತ್ತಿದ್ದರು. ತಮ್ಮ ಕರುಳಿನ ಕುಡಿಯನ್ನು ತಾವೇ ಕೈಯಾರೆ ಇತರರಿಗೆ ಮಾರುವಂತಹ ಹೀನಕೃತ್ಯಕ್ಕೆ ಕೈ ಹಾಕಬೇಕಿತ್ತು. ಅಥವಾ ಅವನ ಬಳಿಯ ಮಗ ಸ್ವಲ್ಪ ಕರಿಯನಾದ ತನ್ನ ಸೋದರನನ್ನು ಕಂಬಕ್ಕೆ ಕಟ್ಟಿ ಚಾವಟಿಯಿಂದ ಹೊಡೆಯುವ ಅಮಾನುಷ ಕೃತ್ಯದಲ್ಲಿ ಭಾಗಿಯಾಗಬೇಕಾಗುತ್ತಿತ್ತು. ಇದಕ್ಕೆ ಸ್ವಲ್ಪ ಪ್ರತಿಭಟನೆ ವ್ಯಕ್ತವಾದರೂ ಇಬ್ಬರ ಪ್ರತಿಭಟನೆ ಇಬ್ಬರ ಪರಿಸ್ಥಿತಿಯೂ ಪೂರ್ತಿಯಾಗಿ ಹದಗೆಡುತ್ತಿತ್ತು.
ನಾನು ಇಬ್ಬರ ಯಜಮಾನರ ಕೈ ಕೆಳಗಿದ್ದೆ. ಮೊದಲನೆಯವನ ಹೆಸರು ಆಂಟೋನಿ. ಆತನ ಪೂರ್ತಿ ಹೆಸರೇನೋ ನನಗೆ ಗೊತ್ತಿಲ್ಲ. ಆತ ಸ್ವಲ್ಪ ದಿನ ನಾವಿಕನಾಗಿದ್ದುರಿಂದಲೋ ಏನೋ , ಎಲ್ಲರೂ ಅವನನ್ನು ಕ್ಯಾಪ್ಟನ್‌ ಆಂಟೋನಿ ಎಂದು ಕರೆಯುತ್ತಿದ್ದರು. ಆತ ಅಂಥಾ ಭಾರಿ ಜಮೀನ್ದಾರನೆನೊ ಆಗಿರಲಿಲ್ಲ. ಅವನ ಬಳಿ ಇದ್ದುದ್ದು ಎರಡೋ ಮೂರೋ ತೋಟಗಳು ಮತ್ತು ಸುಮಾರು ಮೂವತ್ತು ಮಂದಿ ಗುಲಾಮರು. ಇವೆಲ್ಲವನ್ನೂ ಪ್ಲಮ್ಮರ್‌ ಎಂಬಾತ ಮೇಲ್ವಿಚಾರಣೆ ನಡೆಸುತ್ತಿದ್ದ. ಈ ಪ್ಲಮ್ಮರ್‌ ಒಬ್ಬ ದೊಡ್ಡ ಕುಡುಕ, ಮಹಾ ಪಾಖಂಡಿ ಮತ್ತು ಅನಾಗರೀಕ ಪಶು. ಸದಾ ಕೈಯಲ್ಲಿ ಒಂದು ಚಾಟಿ ಮತ್ತು ದೊಣ್ಣೆಯನ್ನು ಹಿಡಿದಿರುತ್ತಿದ್ದ. ಪ್ಲಮ್ಮರ್‌ ತನ್ನ ಮಾಲೀಕನೂ ಅಸಹ್ಯಪಡುವಷ್ಟು ಕ್ರೂರಿಯಾಗಿದ್ದ.
ಹೆಣ್ಣು ಕೂಲಿಯಾಳುಗಳ ತಲೆ ಕತ್ತರಿಸಲೂ ಅವನು ಹಿಂದೆ ಮುಂದೆ ನೋಡುತ್ತಿರಲಿಲ್ಲ. ಮಾಲೀಕನೂ ಮನುಷ್ಯ ಹೃದಯದವನೆನೊ ಆಗಿರಲಿಲ್ಲ. ಗುಲಾಮರನ್ನು ಚಾವಟಿಯಿಂದ ಹೊಡೆಯುದರಲ್ಲಿಯೆ ಅವನಿಗೆ ಮಹಾದಾನಂದ. ಎಷ್ಟೋ ದಿನ ನಾನು ಬೆಳ್ಳಂಬೆಳಗ್ಗೆಯೇ ನನ್ನ ಒಬ್ಬ ಚಿಕ್ಕಮ್ಮ ಅವನ ಹೊಡೆತದಿಂದ ಚೀರುವುದನ್ನು ಕೇಳುತ್ತಲೇ ಮೆಲೆದ್ದಿದೇನೆ.
ಶಿಕ್ಷಿಸಬೇಕಾದವರನ್ನು ಕಂಬಕ್ಕೆ ಕಟ್ಟಿ ಅಕ್ಷರಶಃ ಅವರ ದೇಹವಿಡಿ ರಕ್ತದಲ್ಲಿ ತೊಯ್ದು ಹೋಗುವವರೆಗೂ ಅವನು ಅವರನ್ನು ಬಡಿಯುತ್ತಿದ್ದ. ಅಳು, ಚೀರಾಟ, ಪ್ರಾರ್ಥನೆ ಇವೆಲ್ಲವೂ ಅವನ ಹೊಡೆತವನ್ನು ಹೆಚ್ಚಿಸುತ್ತಿದ್ದವೇ ಹೊರತು ಅವನಲ್ಲಿ ಕರುಣೆ ಮೂಡುತ್ತಿರಲಿಲ್ಲ.
ನನಗೆ ಬುದ್ದಿ ಬಂದ ದಿನದಿಂದಲೂ ದಾಸ್ಯವೂ ತನ್ನ ಕಪಿಮುಷ್ಟಿಯಲ್ಲಿ ನನ್ನನ್ನು ಇರಿಸಿಕೊಳ್ಳುವುದನ್ನು ನಾನು ಎಂದಿಗೂ ಒಪ್ಪಿಕೊಳ್ಳಲಿಲ್ಲ. ಕಷ್ಟದ ಆ ದಿನಗಳಲ್ಲಿಯೂ ಎಂದಾದರೂ ಒಮ್ಮೆ ನನಗೆ ಸ್ವಾತಂತ್ರ್ಯ ಖಂಡಿತ ದೊರೆಯುವುದೆನ್ನುವ ಆಶ ಭಾವನೆಯು ದೈವಿವಾಣಿಯಂತೆ ನನ್ನನ್ನು ಕಾಪಾಡುತ್ತಿತ್ತು. ದೇವರೂ ಕಡೆಗೂ ಅಂತಹ ಅವಕಾಶವನ್ನು ನೀಡಿದ್ದಕ್ಕಾಗಿ ಅವನಿಗೆ ನಾನು ಅತ್ಯಂತ ಕೃತಜ್ಞನಾಗಿದ್ದೇನೆ”. ಎಂದು ಫ್ರಡಿಕ್‌ ಡಗ್ಲಸ್‌ ದಾಸ್ಯವನ್ನು ಕುರಿತಾದ ತಮ್ಮ ಅನುಭವವಗಳನ್ನು ರೂಪಿಸಿದ್ದಾರೆ.

Prathama Puc frederick douglass Extract questions and answers pdf

PDF Name1st Puc English Frederick Douglass Notes Pdf
No. of Pages05
PDF Size76KB
LanguageEnglish
CategoryEnglish Notes
Download LinkAvailable ✓
Topics1st Puc Frederick Douglass Notes Pdf

kseeb solutions for 1st puc english 10th lesson

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

Frederick Douglass lesson summary class 11 pdf download

ಇಲ್ಲಿ ನೀವು Prathama Puc Frederick Douglass Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು Frederick Douglass 1st Puc Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

FAQ:

How old was Douglass when he lost his mother?

Douglass was seven years old when he lost his mother.

Douglass was seven years old when he lost his mother.

Name the person who was believed to be both Douglass father and master

ಇತರೆ ವಿಷಯ :

All Subjects Notes

1st Puc All Subject

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh