Prathama Puc ಇಂಗ್ಲೀಷ್ ನೋಟ್ಸ್, 1st Puc The Gentlemen Of the Jungle Notes Pdf 2023 First Puc the gentlemen of the jungle textbook questions answers summary Pdf download kseeb solutions for 1st puc english 1st lesson story Kannada Medium english answer the gentlemen of the jungle 1st puc notes Pdf Karnataka 11th Std English 1st Chapter Pdf
Table of Contents
Prathama Puc The Gentlemen Of the Jungle Notes Pdf
Class : 1st Puc
Chapter Name: The Gentlemen Of the Jungle
the gentlemen of the jungle summary Pdf download
First Puc The Gentlemen Of The Jungle Textbook Questions Answers
ಈ ಕಥೆಯಲ್ಲಿ ಆಪ್ರಿಕಾದ ಲೇಖಕರಾದ ಯೋಮೋ ಕೆನಾಟರು ಅತ್ಯಂತ ವ್ಯಂಗ್ಯವಾಗಿ ಯುರೋಪಿಯನ್ನರ ವಸಾಹತುಶಾಹಿ ದಬ್ಬಾಳಿಕೆಯನ್ನು ವಿಡಂಬಿಸಿದ್ದಾರೆ.
ಒಂದಾನೊಂದು ಕಾಲದಲ್ಲಿ ಒಂದು ಆನೆಯು ಕಾಡಿನ ಅಂಚಿನಲ್ಲಿ ವಾಸವಾಗಿದ್ದ ಒಬ್ಬ ಮನುಷ್ಯನೊಂದಿಗೆ ಸ್ನೇಹವನ್ನು ಬೆಳೆಸಿತು. ಒಂದು ದಿನ ಭಾರಿ ಮಳೆ ಬಂದಿತು. ಆಲಿಕಲ್ಲಿನ ಮಳೆಯ ಹೊಡೆತವನ್ನು ತಾಳಲಾರದೆ ಆನೆಯು ಮನುಷ್ಯನ ಗುಡಿಸಲಿನ ಬಳಿ ಬಂದು, ” ಪ್ರಿಯ ಸ್ನೇಹಿತನೇ, ಮಳೆಯ ಹೊಡೆತವನ್ನು ತಾಳಲಾರೆ. ದಯವಿಟ್ಟು ನನ್ನ ಸೊಂಡಿಲನ್ನು ಮಾತ್ರ ನಿನ್ನ ಗುಡಿಸಲಿನ ಒಳಗೆ ಇಟ್ಟುಕೊಳ್ಲಲು ಅವಕಾಶ ನೀಡುವೆಯಾ?” ಎಂದು ಕೋರಿತು. ತನ್ನ ಗುಡಿಸಲಿನಲ್ಲಿ ಹೆಚ್ಚಿನ ಸ್ಥಳಾವಕಾಶ ಇಲ್ಲದಿದ್ದರೂ ಆನೆಯ ಮೇಲಿನ ಕರುಣೆಯಿಂದ ಮಾನವ ಸೊಂಡಿಲನ್ನು ಗುಡಿಸಲಿನೊಳಗೆ ಇಟ್ಟುಕೊಳ್ಳಲು ಆನೆಗೆ ಅವಕಾಶ ಮಾಡಿಕೊಟ್ಟ.
ಮೊದಲಿಗೆ ತುಂಬಾ ವಿಧೆಯತೆ ಮತ್ತು ಕೃತಜ್ಞತೆಗಳನ್ನು ಆನೆ ವ್ಯಕ್ತಪಡಿಸಿತಾದರೂ ನಿಧಾನವವಾಗಿ ತನ್ನ ಇಡಿಯ ದೇಹವನ್ನು ಗುಡಿಸಲಿನ ಒಳಗೆ ತೂರಿಸಿ ಮನುಷ್ಯನನ್ನು ಹೊರಗಟ್ಟಿತು.” ನನ್ನ ಚರ್ಮ ಕೋಮಲವಾಗಿದ್ದು ಮಳೆಯ ಹೊಡೆತವನ್ನು ತಡೆಯಲಾರದು. ನಿನ್ನ ಚರ್ಮ ಒರಟು. ಅದ್ದರಿಂದ ನೀನು ಮಳೆಯಲ್ಲಿ ನನೆದರೆ ತೊಂದರೆಯಿಲ್ಲ” ಎನ್ನುವುದು ಆನೆ ಕೊಟ್ಟ ಸಮಜಾಯಿಷಿ, ತನ್ನ ಒಳ್ಳೆಯತನವನ್ನು ಆನೆ ಹೀಗೆ ದುರುಪಯೋಗ ಮಾಡಿಕೊಂಡದ್ದನ್ನು ನೋಡಿ ಮನುಷ್ಯ ತುಂಬಾ ಸಿಡಿಮಿಡಿಗೊಂಡ. ತನಗಾದ ಅನ್ಯಾಯದ ವಿರುದ್ದ ಆತ ಕೂಗಾಡಲು ಆರಂಭಿಸಿದ. ಕಾಡಿನ ಇತರೆ ಪ್ರಾಣಿಗಳೆಲ್ಲ ಸುತ್ತಲೂ ನೆರೆದು ಆನೆ ಮತ್ತು ಮನುಷ್ಯರ ನಡುವಣ ವಾಗ್ವಾದವನ್ನು ಕುತೂಹಲದಿಂದ ನೋಡಲಾರಂಭಿಸಿದವು. ಈ ಗಲಾಟೆಯನ್ನೆಲ್ಲ ಕೇಳಿದ ಸಿಂಹವು ಅಲ್ಲಿಗೆ ಧಾವಿಸಿ ಬಂದಿತು. ” ನಾನು ಈ ಕಾಡಿನ ರಾಜನೆಂಬುದು ನಿಮಗೆ ಮರೆತುಹೋಯಿತೆ? ನನ್ನ ರಾಜ್ಯದ ಶಾಂತಿಯನ್ನು ಕದಡಲು ನಿಮಗೆಷ್ಟು ಧೈರ್ಯ” ಎಂದು ಕೋಪದಿಂದ ಅಬ್ಬರಿಸಿತು.
ಸಿಂಹದ ಆರ್ಭಟವನ್ನು ಕೇಳಿದ ಆತನ ಪ್ರಮುಖ ಮಂತ್ರಿಗಳಲ್ಲಿ ಒಂದಾದ ಆನೆಯು ಮಹಾಸ್ವಾಮಿ ತಮ್ಮ ಸಾಮ್ರಾಜ್ಯದ ಶಾಂತಿಗೆ ಯಾವುದೆ ಭಂಗವಿಲ್ಲ ತಾವು ನೊಡುತ್ತಿರುವಂತೆ ನಾನು ಈಗ ವಾಸವಾಗಿರುವ ಈ ಪುಟ್ಟ ಗುಡಿಸಲಿಗೆ ಸಂಬಂದಿಸಿದಂತೆ ಒಂದು ಚಿಕ್ಕ ವಿವಾದದ ವಿಷಯ ಮಾತಾನಡುತ್ತಿದ್ದೆವು ಅಷೇ” ಎಂದು ಅತ್ಯಂತ ವಿನಯವನ್ನು ನಟಿಸುತ್ತಾ ನುಡಿಯಿತು.
ತನ್ನ ಸಾಮ್ರಾಜ್ಯದಲ್ಲಿ ಶಾಂತಿ ಮತ್ತು ಸಮಾಧಾನಗಳು ಎಂದೂ ಹಾಳಾಗಬಾರದು ಎಂಬ ಉದ್ದೇಶ ಹೊಂದಿದ ಸಿಂಹವು ” ಈ ಸಮಸ್ಯೆಯನ್ನು ಬಗೆಹರಿಸಲು ಒಂದು ಸಮಿತಿಯನ್ನು ನೇಮಿಸಲು ನಾನು ನನ್ನ ಮಂತ್ರಿಗಳಿಗೆ ಅದೇಶಿಸುತೇನೆ. ಸಮಿತಿಯು ಕೂಡಲೇ ವಿಚಾರಣೆಯನ್ನು ನಡೆಸಿ ಒಂದು ವರದಿಯನ್ನು ಸಲ್ಲಿಸಬೇಕು. ಎಂದು ಅಜ್ಞಾಪಿಸಿತು.” ನೀನು ನಮ್ಮ ಪ್ರಜೆಗಳ ಜೊತೆಗೆ, ಅದರಲ್ಲಿಯೂ ವಿಶೇಷವಾಗಿ ನಮ್ಮ ಗೌರವಾನ್ವಿತ ಮಂತ್ರಿಗಳಲ್ಲಿ ಒಬ್ಬರಾದ ಅನೆಯ ಜೊತೆಗೆ ಸ್ನೇಹವನ್ನು ಬೆಳೆಸಿರುವುದು ತುಂಬಾ ಒಳ್ಳೆಯ ಸಂಗತಿ. ಗುಡಿಸಲು ನಿನ್ನ ಕೈ ತಪ್ಪಿಹೋಯಿತು ಎಂದು ಚಿಂತೆ ಬಿಟ್ಟುಬಿಡು.
ನಮ್ಮ ವಿಚಾರಣಾ ಆಯೋಗದ ಮುಂದೆ ನಿನ್ನ ವಾದವನ್ನು ಮಂಡಿಸುವ ಅವಕಾಶ ನಿನಗೆ ದೊರೆಯಲಿದೆ. ಆಯೋಗದ ತೀರ್ಮಾನ ಖಂಡಿತ ನಿನಗೆ ಸಂತೋಷ, ಸಮಾಧಾನಗಳನ್ನು ತರಲಿದೆ. ಎಂದು ಅವನನ್ನು ಸಮಾಧಾನಪಡಿಸಿತು. ಸಿಂಹದ ಮಾತಿನಿಂದ ಮನುಷ್ಯ ಸಮಾದಾನಗೊಂಡು ತನ್ನ ಗುಡಿಸಲು ತನಗೆ ವಾಪಸ್ ಸಿಗಬಹುದು ಎಂದು ಊಹಿಸಿದನು.
ರಾಜನ ಆಜ್ಞೆಯಂತೆ ನರಿಯ ಅಧ್ಯಕ್ಷತೆ ಮತ್ತು ಚಿರತೆಯ ಕಾರ್ಯದರ್ಶಿತ್ವದಲ್ಲಿ ಒಂದು ಆಯೋಗವು ನೇಮಕವಾಯಿತು. ಘೇಂಡಾಮೃಗ, ಕಾಡುಕೋಣ ಮತ್ತು ಮೊಸಳೆಗಳು ಸಮಿತಿಯ ಸದಸ್ಯರಾಗಿದ್ದರು. ಆಯೋಗದಲ್ಲಿ ಕೇವಲ ಪ್ರಾಣಿಗಳು ಮಾತ್ರವೆ ಇದ್ದು ಮನುಷ್ಯ ಪ್ರತಿನಿಧಿಗೆ ಅವಕಾಶ ಇಲ್ಲದ್ದನ್ನು ಕಂಡು ಮಾನವ ಪ್ರತಿಭಟಿಸಿದ. ಆದರೆ ಕಾಡಿನ ನ್ಯಾಯದ ಜಟಿಲತೆಯನ್ನು ಅರ್ಥಮಾಡಿಕೊಳ್ಳುವಷ್ಟು ವಿದ್ಯೆ ಇರುವ ಮನುಷ್ಯರಾರು ಇಲ್ಲ ಮತ್ತು ಸಮಿತಿಯ ಎಲ್ಲ ಸದಸ್ಯರೂ ನಿಷ್ಪಕ್ಷಪಾತವಾಗಿ ನ್ಯಾಯ ತೀರ್ಮಾನ ಮಾಡಬಲ್ಲ ದಕ್ಷರೂ ದೇವರಿಂದ ಕೋರೆಹಲ್ಲು, ಚೂಪಾದ ಉಗುರುಗಳನ್ನು ಪಡೆಯದೆ ಇರುವ ಜನಾಂಗಗಳ ರಕ್ಷ್ಣಣೆಯನ್ನು ಮಾಡಲು ಸಮರ್ಥರೂ ಆಗಿರುವುದರಿಂದ ಮನುಷ್ಯ ನ್ಯಾಯ ತೀರ್ಮಾನದ ಬಗ್ಗೆ ಚಿಂತಿಸಬೇಕಿಲ್ಲ ಎಂದು ಅವನನ್ನು ಸಮಾಧಾನ ಮಾಡಲಾಯಿತು. ಆಯೋಗದ ವಿಚಾರಣೆ ಆರಂಭವಾಯಿತು. ಮೊದಲಿಗೆ ಆನೆ ತನ್ನ ವಾದವನ್ನು ಮಂಡಿಸಲು ಮುಂದೆ ಬಂದಿತು. ” ಕಾಡಿನ ಗಣ್ಯರೆ, ನಡೆದ ಅಷ್ಟೂ ಸಂಗತಿಗಳನ್ನು ವಿವರಿಸಿ. ನಿಮ್ಮ ಅಮೂಲ್ಯವಾದ ಸಮಯವನ್ನು ನಾನು ಯಾವಾಗಲೂ ವ್ಯರ್ಥಮಾಡಲು ಇಚ್ಛಿಸುವುದಿಲ್ಲ. ನನ್ನ ಅರಿಕೆ ಇಷ್ಟೇ, ನಾನು ಯಾವಾಗಲು ನನ್ನ ಸ್ನೇಹಿತರು ಮತ್ತು ಹಿತೈಷಿಗಳಿಗೆ ಒಳಿತನ್ನೆ ಮಾಡುವಂತಹವು. ಈಗಲೂ ಅದನ್ನೇ ಮಾಡಿದ್ದೇನೆ. ಆದರೆ ನನ್ನ ಸ್ನೇಹಿತನಾದ ಮನುಷ್ಯ ಅದನ್ನು ತಪ್ಪು ತಿಳಿದಿದ್ದಾನೆ. ಅಂದು ಆತ ಚಂಡಮಾರುತದಿಂದ ಹಾರಿಹೋಗಲಿದ್ದ ತನ್ನ ಗುಡಿಸಿಲನ್ನು ರಕ್ಷಿಸು ಎಂದು ಕೋರಿ ನನ್ನಲ್ಲಿಗೆ ಬಂದ.
ನಾನು ಗುಡಿಸಲು ಖಾಲಿ ಇದ್ದರೆ ಚಂಡಮಾರುತ ಕಾರಣದಿಂದ ಅದು ಹಾರಿಹೋಗಬಹುದೆಂದು ಕಾರಣದಿಂದ ನನ್ನ ಗೆಳೆಯನಿಗೆ ಅನುಕೂಲವಾಗಲೆಂದೇ ಅದರೋಳಗೆ ಇದ್ದ ಜಾಗವನ್ನು ಆಕ್ರಮಿಸಿಕೊಂಡೆ. ಅಂತಹ ಸಂದರ್ಭದಲ್ಲಿ ನಾನಲ್ಲದೇ ನೀವು ಯಾರೆ ಇದ್ದರೂ ನಾನು ಮಾಡಿದ ಕೆಲಸವನ್ನು ನೀವೂ ಮಾಡುತ್ತೀದ್ದೀರಿ” ಎಂದು ಅದು ತನ್ನ ವಾದವನ್ನು ಮಂಡಿಸಿತು. ಕತ್ತೆ ಕಿರುಬ ಮುಂತಾದ ಇತರ ಪ್ರಾಣಿಗಳು ಆನೆಯ ವಾದವನ್ನು ಬೆಂಬಲಿಸಿದವು. ಇದಲ್ಲೆದರ ನಂತರ ಅಯೋಗವು ಮನುಷ್ಯನ್ನು ಅವನ ವಾದವನ್ನು ಮಂಡಿಸಲೆಂದು ಆಹ್ವಾನಿಸಿತು. ಆತ ತನ್ನ ವಾದವನ್ನು ಮಂಡಿಸಲು ಆರಂಭಿಸಿದಾಗ ” ನೋಡಪ್ಪಾ, ಆದಿನದ ಘಟನೆಯ ವಿವರಗಳನ್ನು ಬೇಕಾದಷ್ಟು ಜನ ನಮಗೆ ವಿವರಿಸಿದ್ದಾರೆ. ನೀನೂ ಮತ್ತೆ ಅದನ್ನೆ ಹೇಳುವುದು ಬೇಕಿಲ್ಲ. ಒಂದೇ ಒಂದು ಪ್ರಶ್ನೆಗೆ ಉತ್ತರ ಹೇಳು ಸಾಕು. ಆನೆ ಬಂದು ಆ ಖಾಲಿ ಜಾಗವನ್ನು ಬಳಸಿಕೊಳ್ಳುವ ಮೊದಲು ಇನ್ನಾರಾದರೂ ಅದರಲ್ಲಿ ವಾಸವಾಗಿದ್ದರೇ?” ಎಂದು ಆಯೋಗದ
ಸದಸ್ಯರು ಕೇಳಿದರು. “ಇಲ್ಲ, ಅದರೆ…” ಎಂದು ಮಾತನ್ನು ಮುಂದುವರೆಸಲು ಯತ್ನಿಸಿದಾಗ ಅವನನ್ನು ತಡೆದು ಸುಮ್ಮನಾಗಿಸಿದರು.
ಆನೆ ಕೊಡಿಸಿದ ಭೂರಿ ಭೋಜನದ ನಂತರ ಆಯೋಗದ ಸದಸ್ಯರು ಮನುಷ್ಯನನ್ನು ಕರೆದು ತಮ್ಮ ತೀರ್ಪನ್ನು ಹೀಗೆ ನೀಡಿದರು. ” ನಮ್ಮ ಅಭಿಪ್ರಾಯದಲ್ಲಿ ನೀನು ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಂಡಿರದ ಕಾರಣದಿಂದಾಗಿ ಈ ಸಮಸ್ಯೆ ಉದ್ಭವಿಸಿದೆ. ಮಾನ್ಯ ಆನೆಯು ತನ್ನ ಪವಿತ್ರವಾದ ಕರ್ತವ್ಯವನ್ನು ನಿರ್ವಹಿಸಲೆಂದೇ ಗುಡಿಸಲಿನಲ್ಲಿ ಪ್ರವೇಶಿಸಿದೆ. ಎಂಬುದು ನಮ್ಮ ಅಭಿಪ್ರಾಯ. ಆದರೆ ನೀನು ಗುಡಿಸಲನ್ನು ನಿಮ್ಮಿಬ್ವರಿಗೂ ಬೇಕಾಗುವಷ್ಟು ವಿಸ್ತಾರವಾಗಿ ನಿರ್ಮಿಸದೆ ಇದ್ದದ್ದೆ ಸಮಸ್ಯೆಗೆ ಮೂಲ ಕಾರಣ. ಅದ್ದರಿಂದ ತೀರ್ಮಾನವೇನೆಂದರೆ ಈಗ ಇರುವ ಗುಡಿಸಲಿನಲ್ಲಿ ಆನೆಯೆ ವಾಸಿಸಲಿ. ನೀನು ಸೂಕ್ತವಾದ ಇನ್ನೊಂದು ಜಾಗವನನ್ನು ನೋಡಿ ಗುಡಿಸಲನ್ನು ಕಟ್ಟಿಕೊಂಡು ಜೀವಿಸು” ಎಂದವು.
ಬೇರೆ ದಾರಿ ಕಾಣದೆ ಮಾನವ ಈ ಆದೇಶವನ್ನು ಒಪ್ಪಿ ಹೊಸ ಗುಡಿಸಿಲನ್ನು ಕಟ್ಟಿದ. ಆದರೆ ಕೂಡಲೇ ಘೇಂಡಾಮೃಗ ಅದನ್ನು ಆಕ್ರಮಿಸಿಕೊಂಡಿತು. ಪುನಃ ಮತ್ತೊಂದು ಆಯೋಗ ರಚನೆಯಾಯಿತು. ಮತ್ತೆ ಅದೇ ತೀರ್ಪು ಪುನರಾವರ್ತನೆಯಾಯಿತು. ಅವನು ನಂತರ ಕಟ್ಟಿದ ಗುಡಿಸಲನ್ನು ಕ್ರಮವಾಗಿ ಕಾಡುಕೋಣ, ಚಿರತೆ ಮತ್ತು ಕಾಡು ಕಿರುಬಗಳು ಆಕ್ರಮಿಸಿಕೊಂಡವು. ಇದರಿಂದ ದುಃಖಿತನಾದ ಮನುಷ್ಯ ಆಯೋಗ, ವಿಚಾರಣೆಗಳಾವುವು ತನ್ನ ರಕ್ಷಣೆಗೆ ಬಾರದಿರುವುದನ್ನು ಅರಿತು ಈ ಪ್ರಾಣಿಗಳಿಗೆಲ್ಲ ಬುದ್ದಿ ಕಲಿಸಲು ನಿರ್ಧರಿಸಿದ.
ಸ್ವಲ್ಪ ದಿನಗಳ ನಂತರ ಈ ಎಲ್ಲ ಪ್ರಾಣಿಗಳು ವಾಸವಿದ್ದ ಗುಡಿಸಲುಗಳು ಗಾಳಿ, ಮಳೆಗಳ ಹೊಡೆತಕ್ಕೆ ಸಿಕ್ಕು ಕುಸಿಯುಂತಾದವು. ಆಗ ಕೂಡಲೆ ಆನೆ. ಘೇಂಡಾಮೃಗ ಮುಂತಾದ ಕಾಡಿನ ಎಲ್ಲಾ ಪ್ರಾಣಿಗಳು ಅದರೊಳಗೆ ಸೇರಿಕೊಂಡು ತಮ್ಮ ಸ್ಥಾನಕ್ಕಾಗಿ ಜಗಳವಾಡಲಾರಂಭಿಸಿದವು. ಪ್ರಾಣಿಗಳೆಲ್ಲ ವಾಗ್ವಾದದಲ್ಲಿ ಮೈಮರೆತಿರುವಾಗ ಆ ಮನುಷ್ಯನು ಗುಡಿಸಲಿಗೆ ಬೆಂಕಿ ಹಚ್ಚಿ ಎಲ್ಲ ಪ್ರಾಣಿಗಳನ್ನು ಸುಟ್ಟು ಕೊಂದನು. ನಂತರ ಅವನು ʼಶಾಂತಿ ಎನ್ನುವುದು ಸ್ವಲ್ಪ ದುಬಾರಿ ಇರಬಹುದು, ಆದರೆ ತೆತ್ತ ಬೆಲೆಯೇನು ನಷ್ಟವಾಗಲಿಲ್ಲʼ ಎಂದುಕೊಳ್ಳುತ್ತಾ ಹಾಯಾಗಿ ಬದುಕಿದನು.
ಯೋಮೋ ಕನ್ಯಾಟಾ ಅವರು ಈ ಕಥೆಯ ಮೂಲಕ ಹೇಗೆ ಭಾರತ, ಆಫ್ರಿಕಾ ಮುಂತಾದ ದೇಶಗಳ ಮೇಲೆ ಯುರೋಪಿಯನ್ನರು ಆಕ್ರಮಣ ಮಾಡಿ ಅಲ್ಲಿನ ಮೂಲ ನಿವಾಸಿಗಳ ಹಕ್ಕುಗಳನ್ನು ಕಿತ್ತುಕೊಂಡರೆಂಬುದನ್ನು ಮತ್ತು ಮೂಲ ನಿವಾಸಿಗಳು ಹೇಗೆ ತಮ್ಮ ಬುದ್ದಿವಂತಿಕೆಯಿಂದ ತಮಗೆ ಬಂದಿದ್ದ ಕಷ್ಟವನ್ನು ನಿವಾರಿಸಿಕೊಂಡರೆಂಬುದನ್ನು ವಿವರಿಸಿದ್ದಾರೆ.
11th Std English 1st Chapter textbook pdf Karnataka
ಈ Pdf ನಿಮಗೆ ಸುಲಭವಾಗಿ ನೋಟ್ಸ್ ನಿಮಗೆ ಉಪಯುಕ್ತ ಹಾಗೂ ಓದಲು ನಿಮಗೆ ತುಂಬಾ ಸರಳ ಮತ್ತು ಉಚಿತವಾಗಿ ನೋಡಬಹುದು. ನೀವು ನಿಮ್ಮ ಜ್ಞಾನ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬಹುದು. 1st Puc The Gentlemen Of the Jungle ಇಂಗ್ಲೀಷ್ ನೋಟ್ಸ್ ಪ್ರಶ್ನೆ ಉತ್ತರಗಳು ನೋಟ್ಸ್ PDF ಅನ್ನು ಈ ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ. ವಿಧ್ಯಾರ್ಥಿಗಳೇ, ಇಲ್ಲಿ ನಾವು Class 11 The Gentlemen Of the Jungle ನೋಟ್ಸ್ ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. First Puc The Gentlemen Of the Jungle ನೋಟ್ಸ್ ಪಾಠದ ಪದ್ಯದ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
karnataka Class 1st Puc Chapter 1 Question Answer
PDF Name | 1st Puc English The Gentlemen Of the Jungle Notes Pdf |
No. of Pages | 06 |
PDF Size | 84KB |
Language | English |
Category | English Notes |
Download Link | Available ✓ |
Topics | 1st Puc English The Gentlemen Of the Jungle Notes Pdf |
gentleman of the jungle story Kannada Medium
ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 1st Puc The Gentlemen Of the Jungle English ನೋಟ್ಸ್ Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ. ನಿಮಗಾಗಿ ಉತ್ತಮ ಅಂಶಗಳನ್ನು ಒಳಗೊಂಡ The Gentlemen Of the Jungle ಇಂಗ್ಲೀಷ್ ನೋಟ್ಸ್ Pdf ಅನ್ನು ಇಲ್ಲಿ ಈ ಕೆಳಗೆ ನೀಡಲಾಗಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು.
kseeb solutions for 1st puc english 1st lesson
First Puc The Gentlemen Of the Jungle Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ
kseeb solutions english notes class 1st Puc Chapter 1
The Gentlemen Of the Jungle summary class 11 PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
The Gentlemen Of the Jungle Notes Download
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
ಇಲ್ಲಿ ನೀವು Prathama Puc The Gentlemen Of the Jungle Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು The Gentlemen Of the Jungle 1st Puc Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download NowFAQ:
According to the man his hut had room only for him
False
According to the elephant the man had invited him into the hut
To save the hut from the hurricane.