1st Puc Oru Manushyan English Notes Pdf 2023 | ಪ್ರಥಮ ಪಿ.ಯು.ಸಿ ಇಂಗ್ಲೀಷ್ ನೋಟ್ಸ್‌ Pdf

karnataka Class 1st Puc Chapter 4 Question Answer 1st Puc Oru Manushyan English Notes Pdf 2023 Kannada Medium kseeb solutions for 1st puc english 4th lesson Download summary of oru manushyan in english explanation Extract Notes pdf class 11

summary of oru manushyan in english explanation 2023

Class : 1st Puc

Chapter Name: Oru Manushyan

1st Puc Oru Manushyan English Notes Pdf
1st Puc Oru Manushyan English Notes Pdf

1st puc english oru manushyan summary in kannada

ಪ್ರಸ್ತುತ ಕಥೆಯಲ್ಲಿ ವೈಕಂ ಮಹಮ್ಮದ್‌ ಬಷೀರ್‌ ರವರು ನಿಜವಾಗಿಯೂ ಮನುಷ್ಯತ್ವ ಎಂದರೆ ಏನು ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕಹೊರಟಿದ್ದಾರೆ. ಗೊತ್ತುಗುರಿ ಇಲ್ಲದೆ. ನಮಗೆ ಅಪರಿಚಿತವಾದ, ಸ್ಥಳೀಯ ಭಾಷೆಯ ಬಾರದ ಪ್ರಾಂತ್ಯ ಒಂದರಲ್ಲಿ ಹೆಚ್ಚಿನ ಹಣವನನ್ನು ಹೊಂದಿರದೆ ಅಲೆದಾಡಲು ಹೊರಟರೆ ನಾವು ಅನೇಕ ಬಗೆಯ ಕಷ್ಟ ಕೋಟಲೆಗಳಿಗೆ ಈಡಾಗಬಹುದು. ಅಂತಹ ಕಷ್ಟಕರ ಸನ್ನಿವೇಶಗಳಲ್ಲಿ ನಾವು ಕಂಗೆಟ್ಟಿದ್ದಾಗ ಯಾರೋ ಒಬ್ಬ ಅಪರಿಚಿತ ಬಂದು ನಮಗೆ ನೆರವಾದರೆ ಅವನನ್ನು ನಾವು ಎಂದಿಗೂ ಮರೆಯುವುದಿಲ್ಲ.
ತಮಗೆ ಆದ ಅಂತಹುದೇ ಒಂದು ಅನುಭವವನ್ನು ಲೇಖಕರು ಇಲ್ಲಿ ನಿರೂಪಿಸಿದ್ದಾರೆ. ತಮ್ಮ ಸ್ವಂತ ಸ್ಥಳಕ್ಕಿಂತ ಸುಮಾರು 1500 ಮೈಲು ದೂರದಲ್ಲಿರುವ, ಬೆಟ್ಟದ ಕಣಿವೆಯನ್ನು ದೊಡ್ಡದೊಂದು ನಗರದಲ್ಲಿ ನಿರೂಪಕರು ವಾಸವಾಗಿದ್ದರು. ಅ ಊರಿನ ಜನ ತಮ್ಮದಯೆ, ಕರುಣೆ ಮುಂತಾದ ಉತ್ತಮ ಗುಣಗಳಿಗೆ ಪ್ರಸಿದ್ದರಾಗಿರಲಿಲ್ಲ.ಬದಲಿಗೆ ಕೊಲೆ ದರೋಡೆ ಡಕಾಯಿತಿಗಳಿಗೆ ಹೆಸರುವಾಸಿಯಾಗಿದ್ದರು. ಇನ್ನೂ ಹಲವರು ಬೇರೆ ಬೇರೆ ಊರುಗಳಲ್ಲಿ ಸೈನಿಕರು. ಲೇವಾದೇವಿ ವರ್ತಕರು ಕಾವಲುಗಾರರು ಮುಂತಾದ ಕೆಲಸಗಳಲ್ಲಿ ದುಡಿಯುತ್ತಿದ್ದರು. ಹಣಕ್ಕೆ ತುಂಬಾ ಬೆಲೆಯನ್ನು ಕೊಡುತ್ತಿದ್ದ ಅವರು ಅದಕ್ಕಾಗಿ ಕೊಲೆ ಮಾಡಲು ಹೇಸುತ್ತಿರಲಿಲ್ಲ.
ಅಂತಹ ಊರಿನ ಕೊಳಕು ಗಲ್ಲಿಯೊಂದರಲ್ಲಿದ್ದ ಇಕ್ಕಟ್ಟಾದ ಮಬ್ಬು ಕೊಠಡಿಯೊಂದರಲ್ಲಿ ನಿರೂಪಕರು ವಾಸವಾಗಿದ್ದರು. ರಾತ್ರಿ 9:30 ರಿಂದ 11 ಗಂಟೆಯವರೆಗೆ ಕೂಲಿ ಕಾರ್ಮಿಕರಿಗೆ ಇಂಗ್ಲೀಷ್‌ ನ್ನು ಕಲಿಸುವುದು ಅಲ್ಲಿ ಅವರು ಮಾಡುತ್ತಿದ್ದ ಕೆಲಸ. ಅಂಚೆ ಕಛೇರಿಯಲ್ಲಿ ಕುಳಿತು ಇಂಗ್ಲೀಷಿನಲ್ಲಿ ವಿಳಾಸಗಳನ್ನು ಬರೆದು ಒಂದೆರಡು ಆಣೆಗಳನ್ನು ಆಣೆಗಳನ್ನು ಸಂಪಾದಿಸುವುದು ಆ ಊರಿನ ಜನರ ರೂಢಿಯಾಗಿತ್ತು. ನಿರೂಪಕರು ಅದನ್ನು ಬರೆಯುವುದು ಹೆಳಿಕೊಡುವ ಮೂಲಕ ಸ್ವಲ್ಪ ಹಣವನ್ನು ಕೂಡಿಡಬಹುದೆಂದು ಲೆಕ್ಕ ಹಾಕಿದ್ದರು.
ನಿರೂಪಕರು ಹಗಲಿನ ವೇಳೆಯಲ್ಲಿ ಮಲಗಿ ಸಂಜೆ 4 ಗಂಟೆಗೆ ಏಳುವ ಅಭ್ಯಾಸವನ್ನು ರೂಢಿಮಾಡಿಕೊಂಡಿದ್ದರು. ಇದರಿಂದಾಗಿ ಬೆಳಗಿನ ಚಹಾ ಮತ್ತು ಟೀಗಾಗಿ ಹೊರ ಹೊರಟರು. ಅಗ ಅವರ ಕಿಸೆ ಯಲ್ಲಿದ್ದ ಪರ್ಸಿನಲ್ಲಿ ತಮ್ಮ ಜೀವಮಾನದ ಉಳಿಕೆಯಾದ 14ರೂಗಳಿದ್ದವು. ಜನಭರಿತವಾದ ಒಂದು ಹೋಟೆಲನ್ನು ಪ್ರವೇಶಿಸಿದ ಅವರು ಊಟವನ್ನು ಮುಗಿಸಿದರು. ಬಿಲ್‌ 11 ಆಣೆಯಾಗಿತ್ತು. ಹಣವನ್ನು ನೀಡಲೆಂದು ಪರ್ಸಿಗಾಗಿ ಜೇಬಿನಲ್ಲಿ ಕೈ ಹಾಕಿದಾಗ ನಿರೂಪಕರ ಎದೆ ಧಸಕ್ಕೆಂದಿತು. ಏಕೆಂದರೆ ಅವರ ಪರ್ಸ್‌ ಅಲ್ಲಿರಲಿಲ್ಲ.
“ನನ್ನ ಪರ್ಸ್‌ ಅನ್ನು ಯಾರೋ ಎಗರಿಸಿದ್ದಾರೆ!” ಎಂದು ಜೋರಾಗಿ ಅವರು ಕಿರುಚಿದರು. ಹೋಟೆಲ್‌ ನಲ್ಲಿ ತುಂಬಿದ್ದ ಜನರೆಲ್ಲ ನಿರೂಪಕರನ್ನೇ ನೋಡಲು ಆರಂಭಿಸಿದರು. ಗಲ್ಲಾದ ಮೇಲೆ ಕುಳಿತಿದ್ದ ಹೋಟೆಲ್‌ ಮಾಲೀಕ ಜೋರಾಗಿ ನಗುತ್ತಾ ಎದ್ದು ಬಂದು ನಿರೂಪಕರ ಕೋಟಿನ ಕತ್ತಿನ ಪಟ್ಟಿಯಲ್ಲಿ ಹಿಡಿದು ” ಈ ಆಟಗಳೆಲ್ಲಾ ಇಲ್ಲಿ ನಡೆಯುದಿಲ್ಲ. ಬಾಯಿ ಮುಚ್ಚಿಕೊಂಡು ಹಣ ಕೊಟ್ಟು ಹೊರಗೆ ಹೋಗು. ಇಲ್ಲದಿದ್ದರೆ ನಿನ್ನ ಕಣ್ಣುಗುಡ್ಡೆಗಳನ್ನು ಕಿತ್ತು ಬಿಡುತ್ತೇನೆ.” ಎಂದು ಅಬ್ಬರಿಸಿದ. ಸುತ್ತಲೂ ನೆರೆದಿದ್ದ ಯಾರೂ ನಿರೂಪಕರ ನೆರವಿಗೆ ಬರುವವರಂತೆ ಕಾಣಲಿಲ್ಲ. ಬೇರೆ ದಾರಿ ಕಾಣದೆ ಅವರು ನನ್ನ ಕೋಟು ಇಲ್ಲಿಯೇ ಇರಲಿ. ಮನೆಗೆ ಹೋಗಿ ಹಣ ತಂದು ಕೊಟ್ಟು ಕೋಟನ್ನು ಬಿಡಿಸಿಕೊಂಡು ಹೋಗುತ್ತೇನೆ. ಎಂದು ವಿನಂತಿಸಿಕೊಂಡರು.
ಆಗ ಮತ್ತೆ ಗಹಗಹಿಸಿ ನಕ್ಕ ಹೋಟೆಲ್‌ ಮಾಲೀಕ ಕೋಟನ್ನು ಬಿಚ್ಚುವಂತೆ ಹೇಳಿದ. ಅವರು ಅಂತೆಯೆ ಮಾಡಿದರು. ಅಂತೆಯೇ ಅವನು ಅವರ ಅಂಗಿ, ಶೂಗಳನ್ನು ಬಿಚ್ಚಿಸಿದನು;. ಕಡೆಗೆ ಅವನು ಅವರಿಗೆ ಪ್ರಯಾಂಟನ್ನು ಬಿಚ್ಚಲು ಹೇಳಿದಾಗ ತಮ್ಮನ್ನು ಗುಂಪಿನ ನಡುವೆ ಬೆತ್ತಲಾಗಿಸುವುದು ಅವನ ಉದ್ದೇಶವೆಂಬುದು ಅವರಿಗೆ ಅರ್ಥವಾಯಿತು. ಮೊದಲಿಗೆ ಪ್ರತಿಭಟಿಸಿದರಾದರೂ ತಮ್ಮ ಬೆಂಬಲಕ್ಕೆ ಬರುವವರು ಯಾರು ಇಲ್ಲವೆಂಬುದು ಖಚಿತವಾದಾಗ ನಿಧಾನವಾಗಿ ಒಂದೊಂದೆ ಗುಂಡಿಗಳನ್ನು ಬಿಚ್ಚಲಾರಂಭಿಸಿದರು. ಅಷ್ಟರಲ್ಲಿ ನಿಲ್ಲಿ ಆ ಹಣವನ್ನು ನಾನು ಕೊಡುತ್ತೇನೆ. ಎಂಬ ಧ್ವನಿ ಕೆಳಿಬಂದಿತು.
ಗುಂಪ್ನ ಮಧ್ಯದಲ್ಲಿ ಆರು ಅಡಿ ಎತ್ತರದ, ಕೆಂಪು ರುಮಾಲು ಮತ್ತು ಬಿಳಿಯ ಪ್ಯಾಂಟನ್ನು ಧರಿಸಿದ್ದ ಸುಂದರನೊಬ್ಬ ಮುಂದೆ ಬಂದು ಹಣ ತೆತ್ತನು. ಬಟ್ಟೆಯನ್ನು ಧರಿಸಿ ತನ್ನೊಂದಿಗೆ ಬರುವಂತೆ ನಿರೂಪಕರಿಗೆ ಅದೇಶಿಸಿದನು. ಸ್ವಲ್ಪ ದೂರ ಹೋದ ಮೇಲೆ ನಿರೂಪಕರು ಬಹಳ ಕೃತಜ್ಞತೆಯಿಂದ ನಿಮ್ಮಿಂದ ತುಂಬಾ ಉಪಕಾರವಾಯಿತು. ನಿಮ್ಮಷ್ಟು ಒಳ್ಳೆಯ ಮನುಷ್ಯರನ್ನು ನಾನು ಕಂಡೇ ಇಲ್ಲ ಎಂದಾಗ ಅವನು ನಕ್ಕು ಇವರ ಹೆಸರು. ಊರುಗಳನ್ನು ವಿಚಾರಿಸಿದನು. ಅದಕ್ಕೆ ಪ್ರತಿಯಾಗಿ ಅವರೂ ಅತನ ಹೆಸರನ್ನು ಕೇಳಿದಾಗ ಅವನು ನಕ್ಕು ತನಗೆ ಹೆಸರೆ ಇಲ್ಲವೆಂದನು. ಹಾಗಾಗಿದ್ದರೆ ಕರುಣೆ ಎನ್ನುವುದು ನಿಮ್ಮ ಹೆಸರಾಗಲಿ ಎಂದು ನಿರೂಪಕರು ನಕ್ಕರು. ಅದಕ್ಕೆ ಅವನು ಏನೂ ಪ್ರತಿಕ್ರಿಯಿಸಲಿಲ್ಲ.
ಅವರಿಬ್ಬರೂ ನಡೆಯುತ್ತಾ ಒಂದು ನಿರ್ಜನವಾಗಿದ್ದ ಸೆತುವೆಯ ಬಳಿ ಬಂದರು. ಅಗ ಅವನು ನೋಡು ನೀನು ಇಲ್ಲಿಂದ ಹಿಂದೆ ತಿರುಗಿ ನೋಡದೆ ಹೊರಟುಹೋಗಬೇಕು. ಯಾರಾದರೂ ನನ್ನನ್ನು ನೋಡಿದೆಯಾ ಎಂದು ಕೇಳಿದರೆ ಇಲ್ಲ ಎನ್ನಬೇಕು. ಎಂದ ಅದಕ್ಕೆ ನಿರೂಪಕರು ಒಪ್ಪಿದರು. ಆತ ತನ್ನ ಜೇಬಿನಿಂದ ಐದು ಬೇರೆ ಪರ್ಸುಗಳನ್ನು ತೆಗೆದ. ಅದರಲ್ಲಿ ಅವರ ಪರ್ಸು ಒಂದಾಗಿತ್ತು. ಅವನ ಆದೇಶದಂತೆ ಅದನ್ನು ತೆರೆದು ನೋಡಿದಾಗ ಇವರು ಅದರಲ್ಲಿ ಇಟ್ಟ ಹಣ ಹಾಗೆಯೇ ಇತ್ತು. ಆತ ಹೊರಡು ದೇವರು ನಿನಗೆ ಒಳ್ಳೆಯದು ಮಾಡಲಿ ಎಂದ. ನಿರೂಪಕರು ದೇವರು ನಿನಗೂ ಒಳ್ಳೆಯದನ್ನು ಮಾಡಲಿ? ಹರಸಿ ಅಲ್ಲಿಂದ ಹೊರಟರು.

karnataka Class 1st Puc Chapter 4 Question Answer

First Puc Oru Manushyan Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ

oru manushyan Extract Notes pdf class 11

ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 1st Puc Oru Manushyan English ನೋಟ್ಸ್‌ Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ. ನಿಮಗಾಗಿ ಉತ್ತಮ ಅಂಶಗಳನ್ನು ಒಳಗೊಂಡ Oru Manushyan ಇಂಗ್ಲೀಷ್ ನೋಟ್ಸ್‌ Pdf ಅನ್ನು ಇಲ್ಲಿ ಈ ಕೆಳಗೆ ನೀಡಲಾಗಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು.

oru manushyan questions and answers Kannada Medium

PDF Name 1st Puc English Oru Manushyan Notes Pdf
No. of Pages05
PDF Size75KB
LanguageEnglish
CategoryEnglish Notes
Download LinkAvailable ✓
Topics1st Puc English Oru Manushyan Notes Pdf

First Puc Oru Manushyan Textbook Questions Answers

Oru Manushyan summary class 11 PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

kseeb solutions for 1st puc english 4th lesson

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

Oru Manushyan Notes Download

ಇಲ್ಲಿ ನೀವು Prathama Puc Oru Manushyan Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು Oru Manushyan 1st Puc Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

FAQ:

 How far was the big city from the narrator’s home-town?

The big city was some thousand five hundred miles away from the narrator’s home-town.

For money people would do anything,

commit murder

ಇತರೆ ವಿಷಯ :

All Subjects Notes

1st Puc All Subject Notes

Kannada Notes

English Notes

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.