10ನೇ ತರಗತಿ ಹಲಗಲಿ ಬೇಡರು ಕನ್ನಡ ನೋಟ್ಸ್ | 10th Stanadard Halagali Bedaru Kannada Notes

10ನೇ ತರಗತಿ ಹಲಗಲಿ ಬೇಡರು ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 10th Class Halagali Bedaru Notes in Kannada Question Answer Pdf Download 2023 10th Stanadard halagali bedaru

ತರಗತಿ : 10ನೇ ತರಗತಿ

ಪದ್ಯದ ಹೆಸರು : ಹಲಗಲಿ ಬೇಡರು

Table of Contents

10th halagali bedaru notes

ಇದು ಜನಪದ ಸಾಹಿತ್ಯದ ವಿಶಿಷ್ಟ ಪ್ರಕಾರಗಳಲ್ಲಿ ಒಂದಾದ ಲಾವಣಿಯಾಗಿದೆ . ಲಾವಣಿಗಳು ವೀರತನ ಸಾಹಸವನ್ನು ವರ್ಣಿಸುವುದರಿಂದ ವೀರಗೀತೆಗಳೆಂದೂ ಸಹ ಕರೆಯುತ್ತಾರೆ . ಲಾವಣಿಗಳು ಗದ್ಯದ ಹೊಳಪನ್ನು ಹಾಗೂ ಭಾವಗೀತೆಯ ಸತ್ವವನ್ನು ಒಳಗೊಂಡಿವೆ . ಪ್ರಸ್ತುತ ಲಾವಣೆಯನ್ನು ಡಾ || ಗದ್ದಗಿಮಠರವರು ಸಂಪಾದಿಸಿರುವ ‘ ಕನ್ನಡ ಜನಪದ ಗೀತೆಗಳು ‘ ಕೃತಿಯಿಂದ ಆಯ್ಕೆಮಾಡಿಕೊಳ್ಳಲಾಗಿದೆ .

10th class halagali bedaru

Halagali Bedaru Notes Question Answer

ಅ] ಒಂದು ವಾಕ್ಯದಲ್ಲಿ ಉತ್ತರಿಸಿ .

1.ಹಲಗಲಿಯ ಗುರುತು ಉಳಿಯದಂತಾದದು ಏಕೆ ?

ಹಲಗಲಿಯ ಮೇಲೆ ಬಿಜೆಟಿಲು ಸರ್ಕಾರದ ದಂಡು ದಾಳಿ ಮಾಡಿ , ಬೆಂಕಿ ಹಚ್ಚಿದ್ದರಿಂದ ಹಲಗಲಿಯ ಗುರುತು ಉಳಿಯದಂತಾಯಿತು .

2. ಯಾವ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ ?

ಹಲಗಲಿಯ ಬೇಡರ ಹತಾರ ಕದನ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ .

3. ಹಲಗಲಿ ಗ್ರಾಮ ಎಲ್ಲಿದೆ ?

ಹಲಗಲಿ ಮುಧೋಳ ಸಂಸ್ಥಾನದಲ್ಲಿದ್ದು ಇಂದಿನ ಬಾಗಲಕೋಟೆ ಜಿಲ್ಲೆಗೆ ಸೇರಿದೆ .

4. ಕುಂಪಣಿ ಸರ್ಕಾರ ಹೊರಡಿಸಿದ ಆದೇಶ ಏನು ?

ಕುಂಪಣಿ ಸರ್ಕಾರದ ಅನುಮತಿ ಇಲ್ಲದೆ ಭಾರತೀಯರು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಮತ್ತು ತಮ್ಮಲ್ಲಿರುವ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಿಬೇಕು ಎಂಬ ಆದೇಶ ಹೊರಡಿಸಿತು .

5. ಹಲಗಲಿಯ ನಾಲ್ವರು ಪ್ರಮುಖರು ಯಾರು ?

ಪೂಜೇರಿ ಹನುಮ , ಬ್ಯಾಡರ ಬಾಲ , ಜಡಗ , ರಾಮ ಈ ನಾಲ್ವರು ಹಲಗಲಿಯ ಪ್ರಮುಖರು

ಆ ] ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ

1. ದಂಡು ಹಲಗಲಿಯ ಮೇಲೆ ಹೇಗೆ ದಾಳಿ ನಡೆಸಿತು ?

ನಿಶ್ಯಸ್ತ್ರೀಕರಣದ ಆದೇಶವನ್ನು ವಿರೋಧಿಸಿ ಬ್ರಿಟಿಷ್ ಸರ್ಕಾರದ ವಿರುದ್ಧ ದಂಗೆ ಎದ್ದ ಹಲಗಲಿಯ ಬೇಡರನ್ನು ಬಗ್ಗುಬಡಿಯಲು ಬ್ರಿಟಿಷರ ದಂಡು ಬಂದಿತು . ಬ್ರಿಟಿಷರು ದಂಡಿನ ಸಿಪಾಯಿಗಳು ಹಲಗಲಿಯ ಬೇಡರ ಬೆನ್ನು ಹತ್ತಿ ಕೊಂದರು . ಎದುರಿಗೆ ಸಿಕ್ಕಸಿಕ್ಕವರಿಗೆಲ್ಲ ಕರುಣೆ ಇಲ್ಲದೆ ಗುಂಡು ಹೊಡೆದು ಸಾಯಿಸಿದರು . ಬ್ರಿಟಿಷ್ ಸಿಪಾಯಿಗಳ ಗುಂಡಿಗೆ ಹೆದರಿ ಹಲಗಲಿಯ ಬೇಡರು ಗುಡ್ಡದ ಕಡೆಗೆ ಓಡಿ ತಲೆಮರೆಸಿಕೊಂಡರು .

2. ಲಾವಣಿಗಳನ್ನು ಏಕೆ ವೀರಗೀತೆಗಳು ಎನ್ನಲಾಗಿದೆ ?

ಲಾವಣಿಗಳು ಜನಪದ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ ಒಂದು ಘಟನೆಯನ್ನು ಆಧರಿಸಿ , ಕಥನಾತ್ಮಕವಾಗಿ ಕಟ್ಟಿದ ಹಾಡನ್ನು ಲಾವಣಿಗಳೆನ್ನುವರು . ಲಾವಣಿಗಳು ಸಾಮಾನ್ಯವಾಗಿ ವೀರತನ ಹಾಗೂ ಸಾಹಸವನ್ನು ವರ್ಣಿಸುವುದರಿಂದ ಅವುಗಳನ್ನು ವೀರಗೀತೆಗಳು ಎನ್ನುವರು ,

3. ಹಲಗಲಿಯ ಬೇಡರು ದಂಗೆ ಏಳಲು ಕಾರಣವೇನು

ಕ್ರಿ.ಶ. ೧೮೫೭ ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟಿಷರ ಸರ್ಕಾರದ ಅನುಮತಿ ಇಲ್ಲದೆ ಭಾರತೀಯರು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಮತ್ತು ತಮ್ಮಲ್ಲಿರುವ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂಬ ಆದೇಶವನ್ನು ನೀಡಿತು . ಈ ಆದೇಶವನ್ನು ವಿರೋಧಿಸಿ ಹಲಗಲಿಯ ಬೇಡರು ಪೂಜೇರಿ ಹನುಮ , ಬ್ಯಾಡರ ಬಾಲ , ಜಡಗ ರಾಮ , ಭೀಮ ಮೊದಲಾದ ವೀರರ ನಾಯಕತ್ವದಲ್ಲಿ ಸಭೆ ಸೇರಿ ತಮ್ಮ ಬದುಕಿನ ಆಧಾರವಾದ ಆಯುಧಗಳನ್ನು ಸರ್ಕಾರಕ್ಕೆ ಹಿಂದಿರುಗಿಸಲು ಒಪ್ಪಲಿಲ್ಲ . ಆದರೆ ಬ್ರಿಟಿಷ್ ಸಿಪಾಯಿಗಳು ಒಂದು ಬಲವಂತವಾಗಿ ಆಯುಧಗಳನ್ನು ಕಸಿದುಕೊಳ್ಳಲು ಪ್ರಾರಂಭಿಸಿದರು . ಇದು ಹಲಗಲಿಯ ಬೇಡರು ದಂಗೆ ಏಳಲು ಕಾರಣವಾಯಿತು .

4. ಹಲಗಲಿಗೆ ದಂಡು ಬರಲು ಕಾರಣವೇನು ?

ಹಲಗಲಿಯ ಬೇಡರಾದ ಪೂಜೇರಿ ಹನುಮ , ಬ್ಯಾಡರ ಬಾಲ , ರಾಮ , ಜಡಗ ಇವರುಗಳು ಬ್ರಿಟಿಷ್ ಸರ್ಕಾರ ಹೊರಡಿಸಿದ್ದ ನಿಶಸ್ತ್ರೀಕರಣದ ಆದೇಶವನ್ನು ವಿರೋಧಿಸಿ ತಮ್ಮಲ್ಲಿರುವ ಆಯುಧಗಳನ್ನು ಕೊಡಲು ಒಪ್ಪದ ದಂಗೆ ಎದ್ದರು . ಈ ದಂಗೆಯನ್ನು ಹತ್ತಿಕ್ಕಲು ಬಂದ ಕಾರಕೂನನ ಕಪಾಳಕ್ಕೆ ಹೊಡೆದು ಸಿಪಾಯಿಗಳನ್ನು ಹೊಡೆದುರುಳಿಸಿದರು ಇದರಿಂದ ಕೋಪಗೊಂಡ ಕುಂಪಣಿ ಸರ್ಕಾರದ ಅಧಿಕಾರಿಗಳು ಹಲಗಲಿಯ ಬೇಡರ ದಂಗೆಯನ್ನು ಬಗ್ಗುಬಡಿಯಲು ದಂಡನ್ನು ಕರೆಯಿಸಿದರು

ಇ ] ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .

1. ಹಲಗಲಿ ದಂಗೆಗೆ ಕಾರಣವೇನು ? ಸರಕಾರ ಅದನ್ನು ಹೇಗೆ ನಿಯಂತ್ರಿಸಿತು ?

೧೮೫೭ ರ ಸಿಪಾಯಿದಂಗೆ ಅಥವಾ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟಿಷರು ನಿಶ್ಯಸ್ತ್ರೀಕರಣ ಕಾಯಿದೆಯನ್ನು ಜಾರಿಗೆ ತಂದರು . ಅದರ ಪ್ರಕಾರ ಭಾರತೀಯರು ಬಿಟಿಷರ ಅನುಮತಿಯಿಲ್ಲದೆ ಆಯುಧಗಳನ್ನು ಹೊಂದುವ ಹಾಗಿರಲಿಲ್ಲ , ಮತ್ತು ಈಗಾಗಲೇ ಹೊಂದಿರುವ ಆಯುಧಗಳನ್ನು ಮರಳಿಸಬೇಕಿತ್ತು . ಹಲಗಲಿ ಬೇಡರಿಗೆ ಆಯುಧಗಳೆ ಜೀವವಾಗಿತ್ತು , ಆಯುಧಗಳನ್ನು ಮರಳಿಸಲು ಒಪ್ಪದ ಹಲಗಲಿ ಬೇಡರು ಹನುಮ , ಬಾಲ , ಜಡಗ ರಾಮರ ನೇತೃತ್ವದಲ್ಲಿ ಕಂಪನಿ ಸರಕಾರದ ವಿರುದ್ಧ ದಂಗೆ ಎದ್ದರು . ಸಿಪಾಯಿಗಳ ಕೆನ್ನೆಗೆ ಬಾರಿಸಿದರು . ಮನವೊಲಿಸಲು ಬಂದ ಹೆಬಲಕ್ ಎಂಬ ಅಧಿಕಾರಿಯನ್ನು ಕೊಂದರು . ಕೋಪಗೊಂಡ ಕಂಪನಿಯ ಸರಕಾರ ಬೇಡರನ್ನು ಕಂಡಕಂಡಲ್ಲಿ ಸಾಯಿಸಿತು . ಬೇಡರ ಮುಖಂಡರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆಗೈಯ್ಯಲಾಯಿತು , ಹಲಗಲಿ ಊರನ್ನು ಲೂಟಿಮಾಡಿ ಬೆಂಕಿ ಹಚ್ಚಲಾಯಿತು . ಹೀಗೆ ಹಲಗಲಿ ದಂಗೆಯನ್ನು ಸರಕಾರ ನಿಯಂತ್ರಿಸಿತು .

2. ಹಲಗಲಿ ದಂಗೆಯ ಪರಿಣಾಮವೇನು ?

೧೮೫೭ ರ ಸಿಪಾಯಿದಂಗೆ ಅಥವಾ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗಾಮದ ನಂತರ ಬ್ರಿಟಿಷರು ನಿಶ್ಯಸ್ತ್ರೀಕರಣ ಕಾಯಿದೆಯನ್ನು ಜಾರಿಗೆ ತಂದರು . ಅದರ ಪ್ರಕಾರ ಭಾರತೀಯರು ಬ್ರಿಟಿಷರ ಅನುಮತಿಯಿಲ್ಲದೆ ಆಯುಧಗಳನ್ನು ಹೊಂದುವ ಹಾಗಿರಲಿಲ್ಲ ಮತ್ತು ಈಗಾಗಲೇ ಹೊಂದಿರುವ ಆಯುಧಗಳನ್ನು ಮರಳಿಸಬೇಕಿತ್ತು .. ಹಲಗಲಿ ಬೇಡರಿಗೆ ಆಯುಧಗಳೆ ಜೀವವಾಗಿತ್ತು , ಆಯುಧಗಳನ್ನು ಮರಳಿಸಲು ಒಪ್ಪದ ಹಲಗಲಿ ಬೇಡರು ಹನುಮ , ಬಾಲ , ಜಡಗ , ರಾಮರ ನೇತೃತ್ವದಲ್ಲಿ ಕಂಪನಿ ಸರಕಾರದ ವಿರುದ್ಧ ದಂಗೆ ಎದ್ದರು . ಸಿಪಾಯಿಗಳ ಕೆನ್ನೆಗೆ ಬಾರಿಸಿದರು . ಬೇಡರ ಮನವೊಲಿಸಲು ಬಂದ ಅಧಿಕಾರಿಯನ್ನೇ ಕೊಂದು ಹಾಕಿದರು . ಕ್ರೋಧಗೊಂಡ ಕಾರಾಸಾಹೇಬನ ಆದೇಶದಂತೆ ಕಂಪನಿಯ ದಂಡು ದೇಡರನ್ನು ಕಂಡ ಕಂಡಲ್ಲಿ ಬೇಟೆಯಾಡಿತು ಹನುಮ , ಭೀಮ , ಜಡಗ ರಾಮ , ಬಾಲರು ಮಾಡಿದ ಪ್ರಯತ್ನ ವಿಫಲವಾಯಿತು . ನಿರ್ದಯವಾಗಿ ಅವರನ್ನು ಸಾಯಿಸಲಾಯಿತು . ಬೇಡರ ಊರನ್ನು ಏನೂ ಉಳಿಸದಂತೆ ಲೂಟಿ ಮಾಡಲಾಯಿತು . ಊರಿಗೆ ಬೆಂಕಿ ಇಟ್ಟು ಗುರುತು ಸಿಗದಂತೆ ಬೂದಿ ಮಾಡಲಾಯಿತು ,

ಈ ] ಸಂದರ್ಭಾನುಸಾರ ಸ್ವಾರಸ್ಯ ವಿವರಿಸಿ.

1. “ ಹೊಡೆದರೂ ಗುಂಡ ಕರುಣ ಇಲ್ಲದ್ದಂಗ ”

ಸಂದರ್ಭ : – ನಿಶ್ಯಸ್ತ್ರೀಕರಣದ ಆದೇಶವನ್ನು ವಿರೋಧಿಸಿ ಬ್ರಿಟಿಷ್ ಸರ್ಕಾರದ ವಿರುದ್ಧ ದಂಗೆ ಎದ್ದ ಹಲಗಲಿಯ ಬೇಡರನ್ನು ಬಗ್ಗುಬಡಿಯಲು ಬ್ರಿಟಿಷರ ದಂಡು ಬಂದಿತು , ಹಲಗಲಿಯ ಬೇಡರ ಬೆನ್ನು ಹತ್ತಿ ಕೊಂದು , ಎದುರಿಗೆ ಸಿಕ್ಕಸಿಕ್ಕವರಿಗೆಲ್ಲ ಕರುಣೆ ಇಲ್ಲದೆ ಗುಂಡು ಹೊಡೆದು ಸಾಯಿಸಿದರು ಎಂದು ಲಾವಣಿಕಾರನು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ .

ಸ್ವಾರಸ್ಯ : – ಹಲಗಲಿಯ ದೇಡರ ಮೇಲೆ ನಿಷ್ಕರುಣೆಯಿಂದ ಗುಂಡು ಹಾರಿಸಿಕೊಲ್ಲುವ ಬ್ರಿಟಿಷರ ಕ್ರೌರ್ಯದ ಪರಮಾವಧಿಯನ್ನು ಈ ಮಾತಿನಲ್ಲಿ ವರ್ಣಿಸಲಾಗಿದೆ .

2. “ ಕೆಟ್ಟು ವರ್ಣಿಸಿ ಹೇಳಿದೆ ಕಂಡದ್ದು ?

ಸಂದರ್ಭ : – ಬ್ರಿಟಿಷ್ ಸೈನಿಕರು ಹಲಗಲಿಯನ್ನು ಲೂಟಿಮಾಡಿ , ಬೆಂಕಿ ಹಚ್ಚಿ ನಾಶಗೊಳಿಸಿದರು ಎಂದು ಲಾವಣಿಕಾರನು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ .

ಸ್ವಾರಸ್ಯ : – ” ಹಲಗಲಿಯ ಬೇಡರ ಮೇಲಿನ ಬ್ರಿಟಿಷರ ದೌರ್ಜನ್ಯವು ವರ್ಣಿಸಲು ಅಸಾಧ್ಯವಾದುದು ” ಎಂದು ಲಾವಣಿಕಾರನು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವರ್ಣಿಸಿದ್ದಾನೆ .

3. “ ಎಲ್ಲ ಜನರಿಗೆ ಚೋರ ಮಾಡಿ ಕಸಿದು ಕೊಳ್ಳಿರಿ ಹತಾರ ”

ಆಯ್ಕೆ : -ಈ ವಾಕ್ಯವನ್ನು ಡಾ . ಬಿ.ಎಸ್.ಗದ್ದಗಿಮಠ ಅವರು ಸಂಪಾದಿಸಿರುವ ‘ ಕನ್ನಡ ಜನಪದ ಗೀತೆಗಳು ‘ ಕೃತಿಯಿಂದ ಆಯ್ದ ‘ ಹಲಗಲಿಯ ಬೇಡರು ‘ ಎಂಬ ಲಾವಣಿಯಿಂದ ಆರಿಸಲಾಗಿದೆ . ಸಂದರ್ಭ : – ” ಕ್ರಿ.ಶ. ೧೮೫೭ ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟಿಷ್ ಸರ್ಕಾರ ಅನುಮತಿ ಇಲ್ಲದೆ ಭಾರತೀಯರು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಮತ್ತು ತಮ್ಮಲ್ಲಿರುವ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು ” ಎಂಬ ಆದೇಶವನ್ನು ನೀಡಿದ ಸಂದರ್ಭದಲ್ಲಿ ಈ ಮಾತು ಬಂದಿದೆ .

ಸ್ವಾರಸ್ಯ : – ಭಾರತೀಯರ ಮೇಲಿನ ಬ್ರಿಟಿಷರ ದರ್ಪ ಈ ಮಾತಿನಲ್ಲಿ ವ್ಯಕ್ತಗೊಂಡಿದೆ . ಇದೇ ಹಲಗಲಿ ದಂಗೆಯ ಜ್ವಾಲೆ ಹೆಚ್ಚಾಗಲು ಕಾರಣವಾಯಿತು .

4. “ ಜೀವ ಸತ್ತು ಹೋಗುವುದು ಗೊತ್ತ

ಸಂದರ್ಭ : – ಬ್ರಿಟಿಷರ ಆಜ್ಞೆಯನ್ನು ಹೊರಡಿಸಿ , ಜನರಿಂದ ಆಯುಧಗಳನ್ನು ಬಲವಂತವಾಗಿ ಕಿತ್ತುಕೊಳ್ಳಲು ಪ್ರಯತ್ನಿಸಿದಾಗ ಹಲಗಲಿಯ ಪೂಜೇರಿ ಹನುಮ , ಬ್ಯಾಡರ ಬಾಲ , ಜಡಗ , ರಾಮ ಮೊದಲಾದ ವೀರರು ತಮ್ಮಲ್ಲಿರುವ ಆಯುಧಗಳನ್ನು ಕೊಡಲು ಒಪ್ಪದೆ , ನೀಡಿದರೆ ತಾವು ಸತ್ತಂತೆ ಎಂದು ಹೇಳಿಕೊಂಡ ಸಂದರ್ಭದಲ್ಲಿ ಈ ಮಾತು ಬಂದಿದೆ .

ಸ್ವಾರಸ್ಯ : – ಹಲಗಲಿಯ ಬೇಡರು ” ಆಯುಧಗಳು ತಮ್ಮ ಪ್ರಾಣಕ್ಕಿಂತ ಮಿಗಿಲಾದುದು ಎಂಬ ಭಾವನೆಯನ್ನು ಹೊಂದಿದ್ದರು ” ಎಂಬುದು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡಿದೆ .

ಊ) ಬಿಟ್ಟ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1. ಹಲಗಲಿ ಬಂಟರ ಕದನ  ವೀರರಸ ಪ್ರಧಾನವಾದ ಲಾವಣಿ

(ಕತೆ  ಗಾದೆ, ಒಗಟು, ಲಾವಣಿ)

2. ಹಲಗಲಿಯು ಈಗ ಈ ಜಿಲ್ಲೆಗೆ ಸೇರಿದೆ ಬಾಗಲಕೋಟೆ

(ಬಾಗಲಕೋಟೆ, ಕಲಾದಗಿ, ಮುಧೋಳ, ಹೆಬಲಕ)

3. ಕುಂಪಣಿ ಸರ್ಕಾರ ಜಾರಿಗೆ ತಂದ ಶಾಸನ ನಿಶ್ಶಸ್ತ್ರೀಕರಣ

(ಯುದ್ಧಶಾಸನ, ನಿಶ್ಶಸ್ತ್ರೀಕರಣ, ಕಬುಲಶಾಸನ, ಕುರ್ತಕೋಟಿಶಾಸನ)

4. ಲಾವಣಿಕಾರ ಅಂಕಿತಗೊಳಿಸಿರುವ ದೈವ ಕಲ್ಮೇಶ

(ಕಲ್ಮೇಶ, ಹನುಮ, ರಾಮ, ಲಕ್ಷ್ಮೀಶ)

5. ‘ವಿಲಾತಿ’ ಪದದ ಸರಿಯಾದ ರೂಪ ವಿಲಾಯಿತಿ

(ಆಯುಧ, ವಿಹಾರ, ವಿಲಂತಿ, ವಿಲಾಯಿತಿ)

ಭಾಷಾ ಚಟುವಟಿಕೆ

1. ಕೊಟ್ಟಿರುವ ಗ್ರಾಮ್ಯ ಪದಗಳಿಗೆ ಗ್ರಾಂಥಿಕ ರೂಪ ಬರೆಯಿರಿ.

ಹೀಂಗ, ಮ್ಯಾಗ, ಕಳುವ್ಯಾರೆ, ಇಲ್ಲದ್ಹಂಗ, ಇಸವಾಸ, ಸಕ್ಕಾರಿ.

ಹೀಂಗ ಹೀಗೆ
ಮ್ಯಾಗಮೇಲೆ
ಕಳುವ್ಯಾರೆಕಳುಹಿಸಿದ್ದಾರೆ
ಇಲ್ಲದ್ಹ೦ಗಇಲ್ಲದಹಾಗೆ
ಇಸವಾಸವಿಶ್ವಾಸ
ಸಕ್ಕಾರಿಸಕ್ಕರೆ

2. ಅಲಂಕಾರವನ್ನು ಹೆಸರಿಸಿ ಸಮನ್ವಯಿಸಿ.

ಅ) ಒಳಗಿನ ಮಂದಿ ಗುಂಡು ಹೊಡಿದರೊ ಮುಂಗಾರಿ ಸಿಡಿಲ ಸಿಡಿದ್ಹಾಂಗ

ಅಲ೦ಕಾರ: ಉಪಮಾಲಂಕಾರ ( ಧರ್ಮಲುಪ್ತೋ ಪಮಾಲಂಕಾರ )

ಉಪಮೇಯ: ಒಳಗಿನ ಮಂದಿ ಗುಂಡು ಹೊಡೆಯುವುದು

ಉಪಮಾನ: ಮುಂಗಾರಿನ ಸಿಡಿಲು ಸಿಡಿಯುವುದು

ಉಪಮಾ ವಾಚಕ: ಹಾಂಗ

ಸಮಾನ ಧರ್ಮ: ಸ್ಪಷ್ಟವಾಗಿಲ್ಲ (ಸಿಡಿಯುವುದು)ಸಮನ್ವಯ: ಇಲ್ಲಿ ಉಪಮೇಯವಾದ ಒಳಗಿನ ಮಂದಿ ಗುಂಡು ಹೊಡೆಯುವುದನ್ನು  ಉಪಮಾನವಾದ ಮುಂಗಾರಿನ ಸಿಡಿಲು ಸಿಡಿಯುವುದಕ್ಕೆ ಪರಸ್ಪರ  ಹೋಲಿಸಿ ವರ್ಣಿಸಲಾಗಿದೆ.

ಲಕ್ಷಣ: ಎರಡು ವಸ್ತುಗಳಿಗಿರುವ ಸಾದೃಶ್ಯಸಂಪತ್ತನ್ನು  ಹೋಲಿಸಿ ವರ್ಣಿಸಿದರೆ ಅದು ‘ಉಪಮಾಲಂಕಾರ

ಆ) ಸಿಡಿಲು ಸಿಡಿದ್ಹಾಂಗ ಗುಂಡು ಸುರಿದಾವ

ಅಲಂಕಾರ: ಉಪಮಾಲಂಕಾರ ( ಧರ್ಮಲುಪ್ತೋ ಪಮಾಲಂಕಾರ )

ಉಪಮೇಯ: ಗುಂಡು ಸುರಿಯುವುದು

ಉಪಮಾನ: ಸಿಡಿಲು ಸಿಡಿಯುವುದು

ಉಪಮಾ ವಾಚಕ: ಹಾಂಗ

ಸಮಾನ ಧರ್ಮ: ಸ್ಪಷ್ಟವಾಗಿಲ್ಲ (ಸುರಿಯುವುದು, ತೀವ್ರತೆ)

ಸಮನ್ವಯ:ಇಲ್ಲಿ ಉಪಮೇಯವಾದ ಗುಂಡು ಸುರಿಯುವುದನ್ನು  ಉಪಮಾನವಾದ ಸಿಡಿಲುಸಿಡಿಯುವುದಕ್ಕೆ ಪರಸ್ಪರ ಹೋಲಿಸಿವರ್ಣಿಸಲಾಗಿದೆ. 

ಲಕ್ಷಣ:ಎರಡು ವಸ್ತುಗಳಿಗಿರುವ ಸಾದೃಶ್ಯಸಂಪತ್ತನ್ನು  ಹೋಲಿಸಿ ವರ್ಣಿಸಿದರೆ ಅದು ‘ಉಪಮಾಲಂಕಾರ

3. ದೇಶ್ಯ-ಅನ್ಯದೇಶ್ಯ ಪದಗಳನ್ನು ಆರಿಸಿ ಬರೆಯಿರಿ.

ಹೊತ್ತು, ಹತಾರ, ಮಸಲತ್ತ, ಬಂಟರು, ಹುಕುಮ, ಮುಂಗೈ, ಸಾಹೇಬ, ಕಾರಕೂನ, ಸಿಪಾಯಿ, ಮುಂಗಾರು, ಕಬುಲ.

ದೇಶಿಯ ಪದಗಳುಹೊತ್ತು ,ಬಂಟರು , ಮುಂಗೈ , ಮುಂಗಾರು.
ಅನ್ಯದೇಶಿಯ ಪದಗಳುಹತಾರ , ಮಸಲತ್ತ , ಹುಕುಮ , ಸಾಹೇಬ , ಕಾರಕೂನ , ಸಿಪಾಯಿ , ಕಬುಲ.

4.ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸೂಕ್ತವಾದ ಉತ್ತರವನ್ನು ಆಯ್ದು ಬರೆಯಿರಿ

1. ‘ ವಿಲಾತಿ ‘ ಪದದ ಸಮಾರ್ಥಕ ಪದ : ವಿಲಾಯಿತಿ

2. * ಸಕ್ಕರೆ ‘ ಪದದ ತದ್ಭವರೂಪ : ಶರ್ಕರಾ

3. * ಚಟೇಕಾರ ‘ – ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ :ತದ್ದಿತಾಂತನಾಮ

4. ‘ ಮಂಗಳಸೂತ್ರ ‘ – ಪದವು ಈ ಸಮಾಸಕ್ಕೆ ಉದಾಹರಣೆ : ತತ್ಪುರುಷಸಮಾಸ

5. ಗುಡ್ಡದಾಗ ‘ ಪದದ ಗ್ರಾಂಥಿಕ ರೂಪ : ಗುಡ್ಡದಲ್ಲಿ

6 , ‘ ನಡುರಾತ್ರಿ ‘ ಪದವು ಈ ಸಮಾಸವಾಗಿದೆ : ಅಂಶಿಸಮಾಸ

7 , ‘ ಕಬುಲ ‘ ಪದದ ಅರ್ಥ : ಅನುಮತಿ

8. ‘ ವಿದ್ಯಾಧರ ‘ ಪದದ ತದ್ಭವ ರೂಪ : ಬಿಜ್ಜೋದರ

9. ‘ ಅಂಕುಶ ‘ ಪದದ ತತ್ಸಮ : ಅಂಕುಸ

10. ‘ದಮ್ಮಡಿ ‘ ಪದವು ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ : ಗ್ರೀಕ್‌ ಮತ್ತು ರೋಮನ್

11. ಅಬಕಾರಿ * ಪದವು ಈ ಭಾಷೆಯ ಪದವಾಗಿದೆ : ಫಾರ್ಸಿ

12. ಹುಕುಂ ‘ ಪದವು ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ : ಹಿಂದೂಸ್ಥಾನಿ

13 ಬಂದೂಕು ‘ ಪದವು ಈ ಭಾಷೆಯ ಶಬ್ದವಾಗಿದೆ : ಉರ್ದು

5.ಸಮಾಸಪದಗಳು :

1. ಮುಂಗೈ : ಕೈಯ + ಮುಂದು = ಅಂಶಿಸಮಾಸ

2. ನಡುರಾತ್ರ : ರಾತ್ರಿಯ + ನಡು = ಅಂಶಿಸಮಾಸ .

3. ಮುಂಗಾರು : ಕಾರಿನ + ಮುಂದು = ಅಂಶಿಸಮಾಸ .

4. ಮಂಗಳಸೂತ್ರ : ಮಂಗಳದ + ಸೂತ್ರ = ತತ್ಪರುಷಸಮಾಸ .

5. ಬುದ್ಧಿಮಾತು : ಬುದ್ಧಿಯ + ಮಾತು = ತತ್ಪುರಷಸಮಾಸ

6. ಮೋಸಮಾಡು : ಮೋಸವನ್ನು + ಮಾಡು = ಕ್ರಿಯಾಸಮಾಸ .

7. ಬೆನ್ನತ್ತು : ಬೆನ್ನನ್ನು + ಹತ್ತು = ಕ್ರಿಯಾಸಮಾಸ .

8. ಐನೂರಮಂದಿ : ಐದುನೂರು + ಮಂದಿ = ದ್ವಿಗುಸಮಾಸ

9. ನಾಲ್ಕುಮಂದಿ : ನಾಲ್ಕು + ಮಂದಿ = ದ್ವಿಗುಸಮಾಸ

10. ಹನುಮಭೀಮರಾಮ : ಹನುಮನೂ + ಭೀಮನೂ + ರಾಮನೂ = ದ್ವಂದ್ವಸಮಾಸ .

6.ತತ್ಸಮ – ತದ್ಭವ

  1. ದುಃಖ – ದುಗುಡ ( ದುಕ್ಕ)
  2. ಸಕ್ಕರೆ – ಶರ್ಕರಾ
  3. ರಕ್ತ – ರಕುತ

7.ತದ್ದಿತಾಂತನಾಮ

1.ಚಟೇಕಾರ

10th Class Halagali Bedaru Notes in Kannada Question Answer Pdf Download 2023

ಇತರೆ ಪಾಠಗಳು:

ಹಕ್ಕಿ ಹಾರುತಿದೆ ನೋಡಿದಿರಾ 

ಸಂಕಲ್ಪ ಗೀತೆ ಕನ್ನಡ ನೋಟ್ಸ್

Leave your vote

51 Points
Upvote Downvote

1 thoughts on “10ನೇ ತರಗತಿ ಹಲಗಲಿ ಬೇಡರು ಕನ್ನಡ ನೋಟ್ಸ್ | 10th Stanadard Halagali Bedaru Kannada Notes

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.