10ನೇ ತರಗತಿ ಸಂಕಲ್ಪ ಗೀತೆ ಕನ್ನಡ ನೋಟ್ಸ್ | 10th Kannada Sankalpa Geete Poem Notes

10ನೇ ತರಗತಿ ಸಂಕಲ್ಪ ಗೀತೆ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು,10th Sankalpa Geethe Kannada Notes Question Answer Pdf Download 2023

ತರಗತಿ : 10ನೇ ತರಗತಿ

ಪದ್ಯದ ಹೆಸರು : ಸಂಕಲ್ಪ ಗೀತೆ

ಕೃತಿಕಾರರ ಹೆಸರು : ಜಿ.ಎಸ್.ಶಿವರುದ್ರಪ್ಪ

Table of Contents

sslc Sankalpa Geethe Kannada Notes Question Answer

ಕವಿ ಪರಿಚಯ:

ಜಿ.ಎಸ್.ಶಿವರುದ್ರಪ್ಪ ಎಂದೇ ಪ್ರಸಿದ್ಧರಾಗಿರುವ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ನವರು ಕ್ರಿ.ಶ.೧೯೨೬ರಲ್ಲಿ ಶಿವವಮೊಗ್ಗ ಜಿಲ್ಲೆಯ  ಶಿಕಾರಿಪುರದಲ್ಲಿ  ಜನಿಸಿದರು. ಆಧುನಿಕ ಕನ್ನಡದ  ಪ್ರಮುಖ ಕವಿಗಳಲ್ಲಿ  ಒಬ್ಬರಾದ ಶಿವರುದ್ರಪ್ಪನವರು  ಸಾಮಗಾನ, ಚೆಲುವು-ಒಲವು, ದೇವಶಿಲ್ಪ, ದೀಪದಹೆಜ್ಜೆ,ಅನಾವರಣ. ವಿಮರ್ಶೆಯ ಪೂರ್ವಪಶ್ಚಿಮ, ಮಾಸ್ಕೊದಲ್ಲಿ ಇಪ್ಪತ್ತೆರಡು ದಿನಗಳು, ಸೌಂದ¸ ರ‍್ಯ ಸಮೀಕ್ಷೆ ಮೊದಲಾದ ಕೃತಿಗಳನ್ನುರಚಿಸಿದ್ದಾರೆ.

ಕಾವ್ಯಾರ್ಥಚಿಂತನ ಕೃತಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಶಿವರುದ್ರಪ್ಪ ಅವರುಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ರಾಷ್ಟ್ರಕವಿ  ಅಭಿಧಾನ ಮತ್ತು ಪಂಪಪ್ರಶಸ್ತಿಗೆ  ಪಾತ್ರರಾಗಿದ್ದಾರೆ.

10th kannada poem sankalpa geete question answer

ಅ ] ಒಂದು ವಾಕ್ಯದಲ್ಲಿ ಉತ್ತರಿಸಿ ,

1. ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು ?

ಕಲುಷಿತವಾಗಿರುವ ನದೀಜಲಗಳಿಗೆ ಮುಂಗಾರಿನ ಮಳೆಯಾಗಬೇಕು ,

2 , ಕಾಡುಮೇಡುಗಳ ಸ್ಥಿತಿ ಹೇಗಿದೆ ?

ಕಾಡುಮೇಡುಗಳು ಬರಡಾಗಿವೆ .

3. ಯಾವುದನ್ನು ಎಚ್ಚರದಲ್ಲಿ ಮುನ್ನಡೆಸಬೇಕು ?

ಬಿರುಗಾಳಿಗೆ ಹೊಯ್ದಾಡುವ ಹಡಗನ್ನು ಎಚ್ಚರದಲ್ಲಿ ಮುನ್ನಡೆಸಬೇಕು .

4. ನದೀಜಲಗಳು ಏನಾಗಿದೆ ?

ನದೀಜಲಗಳು ಕಲುಷಿತವಾಗಿವೆ .

5. ಯಾವ ಎಚ್ಚರದೊಳು ಬದುಕಬೇಕಿದೆ ?

ಮತಗಳೆಲ್ಲವೂ ಪಥಗಳು ಎನ್ನುವ ಎಚ್ಚರದೊಳು ಬದುಕಬೇಕಿದೆ .

ಆ ] ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ ,

1. ಹೊಸ ಭರವಸೆಗಳನ್ನು ಮೂಡಿಸಿ ಯಾವುದರ ನಡುವೆ ಸೇತುವೆಯಾಗಬೇಕಿದೆ ?

ಭಾಷೆ , ಜಾತಿ , ಮತಧರ್ಮಗಳ ಭೇದಭಾವದಿಂದ ಮನುಜರ ನಡುವೆ ಅಡ್ಡಗೋಡೆಗಳು ನಿರ್ಮಾಣವಾಗಿವೆ . ಸ್ನೇಹ , ಪ್ರೀತಿ , ನಂಬಿಕೆಯ ಮೂಲಕ ಮನುಜರ ನಡುವಿನ ಈ ಅಡ್ಡಗೋಡೆಗಳನ್ನು ಕೆಡವಬೇಕು.ಬದುಕಿನಲ್ಲಿ ಹೊಸ ಭರವಸೆಗಳನ್ನು ಮೂಡಿಸಿ ಮನುಜ ಮನುಜರ ನಡುವೆ ಸೇತುವೆಯಾಗಬೇಕಿದೆ . ೪. ನಾಳಿನ ಕನಸನ್ನು ಬಿತ್ತಬೇಕಾದರೆ ನಾವು ಹೇಗೆ ಬದುಕಬೇಕು ? ಎಲ್ಲ ಮತಧರ್ಮಗಳು ದಾರಿ ತೋರಿಸುವ ದೀಪಗಳಾಗಿರುವುದರಿಂದ ಎಲ್ಲಾ ಮತಗಳನ್ನು ಪುರಸ್ಕರಿಸುವ ಎಚ್ಚರಿಕೆಯಲ್ಲಿ ನಾವು ಬದುಕಬೇಕು.ಭಯ ಮತ್ತು ಸಂಶಯಗಳಿಂದ ಮಸುಕಾಗಿರುವ ಮನದ ಕಣ್ಣಿನಲ್ಲಿ ಭವಿಷ್ಯದ ಕನಸನ್ನು ಬಿತ್ತುತ್ತ ಬದುಕು ನಡೆಸಬೇಕು ,

2. ಹಡಗನ್ನು ಯಾವುದರ ಬೆಳಕಿನಲ್ಲಿ ಮುನ್ನಡೆಸಬೇಕಿದೆ ?

ನಮ್ಮ ಬದುಕಿನ ಸುತ್ತಮುತ್ತಲು ಕವಿದಿರುವ ಕತ್ತಲೆಯನ್ನು ಕಳೆಯಲು ಪ್ರೀತಿಯೆಂಬ ಹಣತೆಯನ್ನು ಹಚ್ಚಬೇಕು.ಸಂಸಾರ ಸಾಗರದಲ್ಲಿ ಬಿರುಗಾಳಿಗೆ ಸಿಲುಕಿ ಹೊಯ್ದಾಡುತ್ತಿರುವ ಬದುಕೆಂಬ ಹಡಗನ್ನು ಜ್ಞಾನದೀವಿಗೆಯ ಮೂಲಕ ಎಚ್ಚರಿಕೆಯಿಂದ ಮುನ್ನಡೆಸಬೇಕಿದೆ . ೨. ಕಡುಗಳಿಗೆ ಹೇಗೆ ಮುಟ್ಟಬೇಕಿದೆ ‘ ಋತುಗಳ ರಾಜನಾದ ವಸಂತನು ಬರಡಾಗಿರುವ ಕಾಡುಗಳು ಹಚ್ಚಹಸಿರಿನಿಂದ ಕಂಗೊಳಿಸುವಂತೆ ಮುಟ್ಟಬೇಕಿದೆ.ವಸಂತನ ಆಗಮನದಿಂದ ಬರಡಾಗಿರುವ ಕಾಡಿನಲ್ಲಿ ಮರಗಿಡಗಳು ಚಿಗುರಿ ಪ್ರಕೃತಿಗೆ ನವಚೈತನ್ಯ ಮೂಡಬೇಕಿದೆ ಎಂಬುದು ಕವಿಯ ಆಶಯವಾಗಿದೆ .

ಇ ] ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ ,

1. ನಾವು ಯಾವ ಸಂಕಲ್ಪ ಕೈಗೊಳ್ಳಬೇಕೆಂಬುದು ಕವಿ ಶಿವರುದ್ರಪ್ಪನವರ ಆಶಯ ?

” ನಮ್ಮ ಸುತ್ತಲೂ ಹಬ್ಬಿರುವ ದ್ವೇಷದ ಕತ್ತಲೆಯನ್ನು ಕಳೆಯಲು , ಪ್ರೀತಿಯ ದೀಪವನ್ನು ಹಚ್ಚುವ , ಸಂಸಾರ ಸಾಗರದಲ್ಲಿ ಬಿರುಗಾಳಿಗೆ ಸಿಲುಕಿ ಹೊಯ್ದಾಡುತ್ತಿರುವ ಬದುಕೆಂಬ ಹಡಗನ್ನು ಎಚ್ಚರದಲ್ಲಿ ಮುನ್ನಡೆಸುವ , ಪರಿಸರ ಮಾಲಿನ್ಯದಿಂದ ಕಲುಷಿತವಾಗಿರುವ ನವೀಜಲಗಳಿಗೆ ಶುದ್ದೀಕರಿಸುವ ಮುಂಗಾರಿನ ಮಳೆಯಂತಹ ಪರಿಸರ ಪ್ರೇಮಿಯಾಗುವ , ಬರಡಾಗಿರುವ ಕಾಡುಮೇಡುಗಳು ಹಚ್ಚಹಸಿರಿನಿಂದ ಕಂಗೊಳಿಸಿ , ಸಮೃದ್ಧವಾಗುವಂತಹ ವಸಂತಕಾಲವಾಗುವ , ಅತ್ಯಾಚಾರ , ಅನಾಚಾರ , ಭ್ರಷ್ಟಾಚಾರ , ಅಸ್ಪೃಶ್ಯತೆ , ಅಸಮಾನತೆಗಳಿಂದ ಅಧಃಪತನಗೊಂಡಿರುವ ` ಸಮಾಜವನ್ನು ಹೊಸ ಭರವಸೆಗಳ ಮೂಲಕ ಮೇಲೆತ್ತುವ , ಭಾಷೆ , ಜಾತಿ , ಮತ , ಧರ್ಮಗಳ ಭೇದಭಾವದಿಂದ ಮನುಜ ಮನುಜರ ನಡುವೆ ಉಂಟಾಗಿರುವ ಅಸಮಾನತೆಯ ಅಡ್ಡಗೋಡೆಗಳನ್ನು ಕೆಡಹಿ , ಸಮಾನತೆಯ ಮನೋಭಾವನೆಯನ್ನು ಮೂಡಿಸುವ ಸೇತುವೆಯಾಗುವ ಎಲ್ಲ ಮತಗಳು ಸಾಧನೆಯ ದಾರಿಗಳು ಎಂಬ ಎಚ್ಚರದಲ್ಲಿ ಬದುಕುವ , ಭಯ ಹಾಗೂ ಸಂಶಯಗಳಿಂದ ಮಸುಕಾದ ಕಣ್ಣುಗಳಲ್ಲಿ ಭವಿಷ್ಯದ ಹೊಂಗನಸು ಕಾಣುವಂತೆ ಮಾಡುವ ದೃಢಸಂಕಲ್ಪವನ್ನು ಕೈಗೊಳ್ಳಬೇಕು ‘ ಎಂಬುದು ಕವಿ ಜಿ.ಎಸ್ . ಶಿವರುದ್ರಪ್ಪ ಅವರ ಆಶಯವಾಗಿದೆ .

2. ಸಂಕಲ್ಪ ಮತ್ತು ಅನುಷ್ಟಾನದ ಕುರಿತು ಕವಿ ಶಿವರುದ್ರಪ್ಪನವರ ಅಭಿಪ್ರಾಯವನ್ನು ವಿವರಿಸಿ .

ನಾವು ಜೀವನದಲ್ಲಿ ಪ್ರೀತಿಯ ದೀಪವನ್ನು ಹಚ್ಚುವ ಸಂಕಲ್ಪ ಕೈಗೊಳ್ಳುವುದರಿಂದ ದ್ವೇಷರಹಿತ ಸಮಾಜ ನಿರ್ಮಾಣ ಮಾಡಬಹುದು.ನಾವು ಬದುಕಿನಲ್ಲಿ ಎಚ್ಚರಿಕೆಯಿಂದ ಮುನ್ನಡೆಯುವ ಸಂಕಲ್ಪ ಕೈಗೊಳ್ಳುವುದರಿಂದ ಎಂತಹ ಸವಾಲುಗಳನ್ನು ಧೈರ್ಯವಾಗಿ ಎದುರಿಸಬಹುದು.ನಾವು ಮುಂಗಾರಿನ ಮಳೆಯಂತೆ ಪರಿಸರ ಸಂರಕ್ಷಿಸುವ ಸಂಕಲ್ಪ ಕೈಗೊಳ್ಳುವುದರಿಂದ ನದೀಜಲಗಳನ್ನು ಶುದ್ಧವಾಗಿ ಇಟ್ಟುಕೊಳ್ಳಬಹುದು.ನಾವು ವನಸಂರಕ್ಷಣೆಯ ಸಂಕಲ್ಪ ಕೈಗೊಳ್ಳುವುದರಿಂದ ಕಾಡುಗಳು ಹಚ್ಚಹಸುರಿನಿಂದ ಸಂವೃದ್ಧವಾಗುವಂತೆ ಮಾಡಬಹುದು.ನಾವು ಭರವಸೆಯನ್ನು ಮೂಡಿಸುವ ಸಂಕಲ್ಪ ಕೈಗೊಳ್ಳುವುದರಿಂದ ಸಮಾಜದ ನೈತಿಕ ಅಧಃಪತನವನ್ನು ತಡೆಯಬಹುದು.ನಾವು ಸಮಾನತೆ ಮನೋಭಾವನೆಯುಳ್ಳವರಾಗುವ ಸಂಕಲ್ಪ ಕೈಗೊಳ್ಳುವುದರಿಂದ ಮನುಜ ಮನುಜರ ನಡುವಿನ ಅಸಮಾನತೆಯ ಅಡ್ಡಗೋಡೆಗಳನ್ನು ಕೆಡುಹಬಹುದು.ಎಲ್ಲ ಮತಗಳು ಸಾಧನೆಯ ದಾರಿಗಳು ಎಂಬ ಎಚ್ಚರದಲ್ಲಿ ಬದುಕುವ ಸಂಕಲ್ಪ ಕೈಗೊಳ್ಳುವುದರಿಂದ ದೇಶದಲ್ಲಿ ಶಾಂತಿಯು ನೆಲೆಸುವಂತೆ ಮಾಡಬಹುದು.ಭಯ ಹಾಗೂ ಸಂಶಯಗಳಿಂದ ಮುಕ್ತರಾಗುವ ಸಂಕಲ್ಪ ಕೈಗೊಳ್ಳುವುದರಿಂದ ಭವಿಷ್ಯದ ಹೊಂಗನಸನ್ನು ಕಾಣಬಹುದು . ಹೀಗೆ ಕವಿ ಶ್ರೀ ಜಿ.ಎಸ್.ಶಿವರುದ್ರಪ್ಪನವರು ಸಂಕಲ್ಪ ಮತ್ತು ಅನುಷ್ಠಾನವನ್ನು ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ .

ಈ ] ಸಂದರ್ಭಾನುಸಾರ ಸ್ವಾರಸ್ಯ ಬರೆಯಿರಿ .

1. “ ಮುಂಗಾರಿನ ಮಳೆಯಾಗೋಣ ”

ಸಂದರ್ಭ – ಕವಿಗಳು “ ಜೀವನದಲ್ಲಿ ಧನಾತ್ಮಕ ಮನೋಭಾವನೆಯ ಧೃಡಸಂಕಲ್ಪವನ್ನು ಹೊಂದಿರಬೇಕು ” ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ .

ಸ್ವಾರಸ್ಯ : – “ ನಾವು ಮುಂಗಾರಿನ ಮಳೆಯಂತೆ ಪರಿಸರ ಸಂರಕ್ಷಿಸುವ ಸಂಕಲ್ಪ ಕೈಗೊಳ್ಳುವುದರಿಂದ ನದಿಜಲಗಳನ್ನು ಶುದ್ಧವಾಗಿ ಇಟ್ಟುಕೊಳ್ಳಬಹುದು ” ಎಂದು ಕವಿಗಳು ಸ್ವಾರಸ್ಯಪೂರ್ಣವಾಗಿ ತಮ್ಮ ಭಾವನೆಯನ್ನು ಅಭಿವ್ಯಕ್ತಪಡಿಸುತ್ತಾರೆ .

2. “ ಹೊಸ ಎಚ್ಚರದೊಳು ಬದುಕೋಣ ”

ಸಂದರ್ಭ – ಕವಿಗಳು “ ಜೀವನದಲ್ಲಿ ಧನಾತ್ಮಕ ಮನೋಭಾವನೆಯ ಧೃಡಸಂಕಲ್ಪವನ್ನು ಹೊಂದಿರಬೇಕು ” ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ .

ಸ್ವಾರಸ್ಯ : – “ ಎಲ್ಲ ಮತಗಳು ಸಾಧನೆಯ ದಾರಿಗಳು ಎಂಬ ಎಚ್ಚರದಲ್ಲಿ ಬದುಕುವ ಸಂಕಲ್ಪ ಕೈಗೊಳ್ಳುವುದರಿಂದ ದೇಶದಲ್ಲಿ ಶಾಂತಿಯು ನೆಲೆಸುವಂತೆ ಮಾಡಬಹುದು ” ಎಂದು ಕವಿಗಳು ಸ್ವಾರಸ್ಯಪೂರ್ಣವಾಗಿ ತಮ್ಮ ಭಾವನೆಯನ್ನು ಅಭಿವ್ಯಕ್ತಪಡಿಸುತ್ತಾರೆ .

3. “ ಪ್ರೀತಿಯ ಹಣತೆಯ ಹಟ್ಟೋಣ “

ಆಯ್ಕೆ : -ಈ ವಾಕ್ಯವನ್ನು ಕವಿ ಶ್ರೀ ಜಿ . ಎಸ್ . ಶಿವರುದ್ರಪ್ಪ ಅವರು ರಚಿಸಿರುವ ‘ ಎದೆತುಂಬಿ ಹಾಡಿದೆನು ‘ ಕವನ ಸಂಕಲನದಿಂದ ಆಯ್ದ ‘ ಸಂಕಲ್ಪಗೀತೆ ‘ ಎಂಬ ಕವಿತೆಯಿಂದ ಆರಿಸಲಾಗಿದೆ . ಸಂದರ್ಭ : – ಕವಿಗಳು “ ಜೀವನದಲ್ಲಿ ಧನಾತ್ಮಕ ಮನೋಭಾವನೆಯ ಧೃಡಸಂಕಲ್ಪವನ್ನು ಹೊಂದಿರಬೇಕು ” ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ .

ಸ್ವಾರಸ್ಯ : – “ ನಾವು ಜೀವನದಲ್ಲಿ ಪ್ರೀತಿಯ ದೀಪವನ್ನು ಹಚ್ಚುವ ಸಂಕಲ್ಪ ಕೈಗೊಳ್ಳುವುದರಿಂದ ದ್ವೇಷರಹಿತ ಸಮಾಜ ನಿರ್ಮಾಣ ಮಾಡಬಹುದು ” ಎಂದು ಕವಿಗಳು ಸ್ವಾರಸ್ಯಪೂರ್ಣವಾಗಿ ತಮ್ಮ ಭಾವನೆಯನ್ನು ಅಭಿವ್ಯಕ್ತಪಡಿಸುತ್ತಾರೆ .

4. “ ಹೊಸ ಭರವಸೆಗಳ ಕಟ್ಟೋಣ “

ಸಂದರ್ಭ : – ಕವಿಗಳು “ ಜೀವನದಲ್ಲಿ ಧನಾತ್ಮಕ ಮನೋಭಾವನೆಯ ಧೃಡಸಂಕಲ್ಪವನ್ನು ಹೊಂದಿರಬೇಕು ” ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ .

ಸ್ವಾರಸ್ಯ : – “ ನಾವು ಹೊಸ ಭರವಸೆಯನ್ನು ಮೂಡಿಸುವ ಸಂಕಲ್ಪ ಕೈಗೊಳ್ಳುವುದರಿಂದ ಸಮಾಜದ ನೈತಿಕ ಅಧಃಪತನವನ್ನು ತಡೆಯಬಹುದು ” ಎಂದು ಕವಿಗಳು ಸ್ವಾರಸ್ಯಪೂರ್ಣವಾಗಿ ತಮ್ಮ ಭಾವನೆಯನ್ನು ಅಭಿವ್ಯಕ್ತಪಡಿಸುತ್ತಾರೆ .

ಉ) ಬಿಟ್ಟ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1.‘ಸಂಕಲ್ಪ ಗೀತೆ ಪದ್ಯವನ್ನು ಎದೆತುಂಬಿ ಹಾಡಿದೆನು ಕವನ ಸಂಕಲನದಿಂದ  ಆರಿಸಿಕೊಳ್ಳಲಾಗಿದೆ.

2. ಕತ್ತಲೆಯೊಳಗೆ ಪ್ರೀತಿಯ ಹಣತೆಯ ಹಚ್ಚೋಣ .
3. ಜಿ.ಎಸ್.ಶಿವರುದ್ರಪ್ಪನವರು  ದಾವಣಗೆರೆ ಯಲ್ಲಿ ಸಮಾವೇಶಗೊಂಡ  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನದ ಅಧ್ಯಕ್ಷರಾಗಿದ್ದರು.

4 ಮತಗಳೆಲ್ಲವೂ ಪಥಗಳು ಎನ್ನುವ ಹೊಸ ಎಚರದೊಳು ಬದುಕೋಣ.
5. ಮನುಜರ ನಡುವಣ ಅಡ್ಡಗೋಡೆಗಳ ಕೆಡವುತ ಸೇತುವೆಯಾಗೋಣ.

ಮೊದಲೆರೆಡು ಪದಗಳಿಗಿರುವ ಸಂದಂತೆ  ಮೂರನೆಯ ಪದಕ್ಕೆ ಸಂಬಧಿಸಿದ ಪದ ಬರೆಯಿರಿ

1. ಸೇತುವೆಯಾಗೋಣ : ಸೇತುವೆ+ಆಗೋಣ :: ವಸಂತವಾಗುತ್ತಾ : ವಸಂತ+ಆಗುತಾ
2. ಕತ್ತಲೆಯೊಳಗೆ : ಆಗಮ  :: ಸೇತುವೆಯಾಗೋಣ : ಆಗಮ
3. ಬಿರುಗಾಳಿ : ಆದೇಶ ಸಂಧಿ :: ವಸಂತವಾಗುತ : ಆಗಮ
4. ನಿಲ್ಲಿಸು : ನಿಲ್ಲು :: ನಡೆಸು  : ನಡೆ
5. ಮುಟ್ಟೋಣ : ಮಟ್ಟು :: ಕಟ್ಟು : ಕಟ್ಟುವುದು
6. ಬಿದ್ದುದನ್ನು : ದ್ವಿತೀಯಾ :: ಜಲಕ್ಕೆ : ಚತುರ್ಥಿ
7. ಪ್ರಥಮಾ : ಕರ್ತ್ರರ್ಥ :: ಷಷ್ಠೀ : ಸಂಬಂದ 
8. ಅಪಾದಾನ : ಪಂಚಮೀ :: ಕರಣಾರ್ಥ : ತೃತೀಯಾ
9. ವಿಧ್ಯರ್ಥಕ : ತಿನ್ನಲಿ :: ನಿಷೇಧಾರ್ಥಕ : ತಿನ್ನಲು
10. ನಿಲ್ಲಿಸು : ನಿಲ್ಲು :: ನಡೆಸು   : ನಡೆ
11. ಮುಟ್ಟೋಣ : ಮುಟ್ಟು :: ಕಟ್ಟುವುದು : ಕಟ್ಟು

ಭಾಷಾ ಚಟುವಟಿಕೆ

೧. ಕೊಟ್ಟಿರುವ ಪದಗಳ ಧಾತುಗಳನ್ನು ಗುರುತಿಸಿ ಬರೆಯಿರಿ.

ನಿಲ್ಲಿಸು, ನಡೆಸು, ಹಚ್ಚುವುದು, ಮುಟ್ಟೋಣ, ಕಟ್ಟುವುದು, ಆಗೋಣ.

ನಿಲ್ಲಿಸು-ನಿಲ್ಲುನಡೆಸು – ನಡೆಹಚ್ಚುವುದು – ಹಚ್ಚುಮುಟ್ಟೋಣಮುಟ್ಟು– ಕಟ್ಟುವುದು – ಕಟ್ಟುಆಗೋಣ -ಆಗು

೨. ಕೊಟ್ಟಿರುವ ಪದಗಳಲ್ಲಿರುವ ವಿಭಕ್ತಿ ಪ್ರತ್ಯಯಗಳನ್ನು ಪ್ರತ್ಯೇಕಿಸಿ ಬರೆಯಿರಿ.

ಪ್ರೀತಿಯ, ಬಿರುಗಾಳಿಗೆ, ಜಲಕ್ಕೆ, ಬಿದ್ದುದನ್ನು, ಭರವಸೆಗಳ

ಪದಗಳುವಿಭಕ್ತಿ ಪ್ರತ್ಯಯವಿಭಕ್ತಿ ಹೆಸರು
ಪ್ರೀತಿಯಷಷ್ಠಿ
ಬಿರುಗಾಳಿಗೆಗೆಚತುರ್ಥಿ
ಜಲಕ್ಕೆಕ್ಕೆಚತುರ್ಥಿ
ಬಿದ್ದುದನ್ನುಅನ್ನುದ್ವಿತೀಯ
ಭರವಸೆಗಳಷಷ್ಠಿ

೩.ಕೊಟ್ಟಿರುವ ಪದಗಳಲ್ಲಿರುವ ವಿಭಕ್ತಿಯನ್ನು ಹೆಸರಿಸಿ.

ಸಂಶಯದೊಳ್, ಜಲದಿಂ, ಮರದತ್ತಣಿ೦, ರಾಯಂಗೆ

ಪದಗಳುವಿಭಕ್ತಿ ಪ್ರತ್ಯಯವಿಭಕ್ತಿ ಹೆಸರು
ಸಂಶಯದೊಳ್ಒಳ್ಸಪ್ತಮಿ
ಜಲದಿ೦ಇ೦ತೃತೀಯ
ಮರದತ್ತಣಿ೦ಅತ್ತಣಿ೦ಪ೦ಚಮಿ
ರಾಯ೦ಗೆಗೆಚತುರ್ಥಿ

೪. ಕೊಟ್ಟಿರುವ ಧಾತುಗಳಿಗೆ ವಿಧ್ಯರ್ಥಕ, ನಿಷೇಧಾರ್ಥಕ ಮತ್ತು ಸಂಭಾವನಾರ್ಥಕ ರೂಪಗಳನ್ನು ಬರೆಯಿರಿ.

ಹಾಡು, ನೋಡು, ಕಟ್ಟು, ಕೇಳು, ಓಡು, ಓದು, ಬರೆ.

ಧಾತು
ವಿದ್ಯರ್ಥಕ ರೂಫ

ನಿಷೇಧಾರ್ಥಕ ರೂಪ


ಸಂಭಾವನಾರ್ಥಕ ರೂಪ


ಹಾಡು 
ಹಾಡಲಿ/ಹಾಡಿರಿ

ಹಾಡನು  /ಹಾಡಳು  /ಹಾಡರು/ಹಾಡದು 


ಹಾಡಿಯಾನು/ಹಾಡಿಯಾರು/ಹಾಡೀತು

ನೋಡು


ನೋಡಲಿ/ನೋಡಿರಿ


ನೋಡನು/ನೋಡಳು/ನೋಡರು 

ನೋಡಿಯಾನು/ನೋಡಿಯಾಳು/ನೋಡಿಯಾರು/ನೋಡೀತು
ಕಟ್ಟು
ಕಟ್ಟಲಿ/ಕಟ್ಟಿರಿ

ಕಟ್ಟನು/ಕಟ್ಟಳು  /ಕಟ್ಟರು/ಕಟ್ಟದು



ಕಟ್ಟಯಾನು/ಕಟ್ಟಿಯಾಳು/ಕಟ್ಟಿಯಾರು/
ಕಟ್ಟೀತು

ಕೇಳು
ಕೇಳಲಿ/ಕೇಳಿರಿ

ಕೇಳನು/ಕೇಳಳು/ಕೇಳರು  /ಕೇಳದು 


ಕೇಳಿಯಾನು/ಕೇಳಿಯಾಳು/ಕೇಳಿಯಾರು/ಕೇಳೀತು

ಓಡು
ಓಡಲಿ/ಓಡಿರಿ

ಓಡನು/ಓಡಳು /ಓಡರು/ಓಡದು


ಓಡಿಯಾನು/ಓಡಿಯಾಳು/ಓಡಿಯಾರು/ಓಡೀತು

ಓದು
ಓದಲಿ/ಓದಿರಿ

ಓದನು/ಓದಲು  /ಓದರು/ಓದದು


ಓದಿಯಾನು/ಓದಿಯಾಳು/ಓದಿಯಾರು/ಓದಿತು

ಬರೆ

ಬರೆಯಲಿ/ಬರೆಯಿರಿ

ಬರೆಯನು/ಬರೆಯಳು/ಬರೆಯರು/
ಬರೆಯದು

ಬರೆದಾನು/ಬರೆದಾಳು/ಬರೆದಾರು/ಬರೆದೀತು

10ನೇ ತರಗತಿ ಸಂಕಲ್ಪ ಗೀತೆ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು,10th Sankalpa Geethe Kannada Notes Question Answer Pdf Download 2023

ಇತರ ಪಾಠಗಳು :

ಸುಕುಮಾರಸ್ವಾಮಿಯ ಕಥೆ ಕನ್ನಡ ನೋಟ್ಸ್

ವೃಕ್ಷಸಾಕ್ಷಿ ಕನ್ನಡ ನೋಟ್ಸ್

Leave your vote

57 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.