First Puc Babar Ali Textbook Questions Answers Mcq kseeb solutions for 1st puc english 6th lesson babar ali lesson summary class 11 pdf download 1st Puc Babar Ali English Notes Pdf 2023 Karnataka Babar Ali Extract Notes pdf class 11 Standard Kannada Medium
Class : 1st Puc
Chapter Name: Babar Ali
Table of Contents
karnataka Class 1st Puc Chapter 6 Question Answer
Babar Ali Summary In Kannada
ಪ್ರಸ್ತುತ ಲೇಖನದಲ್ಲಿ ಲೇಖಕಿಯು ಬಾಬರ್ ಅಲಿ ಎಂಬ ಜಗತ್ತಿನ ಅತ್ಯಂತ ಕಿರಿಯ ಮುಖ್ಯೋಪಾಧ್ಯಾರನ್ನು ಪರಿಚಯಿಸಿದ್ದಾರೆ. ʼಯೂತ್ ಲೀಡರ್ ಇಂಡಿಯಾʼದ ಬಾಂಗ್ಲಾದೇಶ ಮೂಲದ ಸ್ವಯಂ ಸೇವಕರಾದ ತರ್ ರವರು ಬಾಬರ್ ಅಲಿಯ ಸಾಹಸಗಾಥೆಯನ್ನು ವಿವರಿಸಿದ್ದಾರೆ.
ಬಾಬರ್ ಅಲಿಯು ಪಶ್ಚಿಮ ಬಂಗಾಲದ ಮುರ್ಷಿದಾಬಾದ್ ಬಳಿಯ ಗಂಗಾಪುರ್ ಎಂಬ ಹಳ್ಳಿಯ ನಿವಾಸಿ. ಈತನ ತಂದೆ ಸೆಣಬಿನ ವ್ಯಾಪಾರಿಯಾದ ನಸಿರುದ್ದೀನ್ ಶೇಖ್, ಸ್ಚತಃ ಸ್ವಲ್ಪ ಕಲಿತವನಾದ ನಜೀರುದ್ದೀನನಿಗೆ ವಿದ್ಯೆಯ ಮಹತ್ವ ಗೊತ್ತು. ಹಾಗಾಗಿ ಆತ ಬಾಬರ್‌ನ ಕಲಿಕೆಯನ್ನು ಪ್ರೋತ್ಸಾಹಿಸುತ್ತಿದ್ದಾನೆ. ಬಾಬರ್ ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಎದ್ದು ಸ್ವಲ್ಪ ಹೊತ್ತು ಮನೆಯ ಕೆಲಸಗಳನ್ನು ಮಾಡುತ್ತಾನೆ. ನಂತರ ಆಟೋ ಹಿಡುದು ಆಮೆಲೆ ಐದು ಕಿ.ಮೀ. ನಡೆದು ಕಾಸಿಂಬಜಾರ್ ರಾಜಾ ಗೋವಿಂದ ಸುಂದರಿ ವಿದ್ಯಾಪೀಠವನ್ನು ತಲುಪುತ್ತಾನೆ. ಅಲ್ಲಿ ಅವನು 12ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿ ನೀಳದೇಹದ ಚುರುಕುಬುದ್ದಿಯ, ಎಲ್ಲರಿಗೂ ಆದರ್ಶಪ್ರಾಯನಾದ ಹುಡುಗ.
ಆದರೆ ಶಾಲೆಯಲ್ಲಿನ ಅವನ ಸಾಧನೆಗಿಂತಲೂ ಅವನನ್ನು ಜಗತ್ಪ್ರಸಿದ್ದನನ್ನಾಗಿ ಮಾಡಿರುವುದು ಶಾಲೆಯ ನಂತರದ ಅವಧಿಯ ಅವನ ಸಾಧನೆಗಳು, ಶಾಲೆ ಮುಗಿದೊಡನೆ ಎಲ್ಲಾ ವಿದ್ಯಾರ್ಥಿಗಳು ಕ್ರಿಕೆಟ್ , ಪುಟ್ಬಾಲ್ ಅಥವಾ ಹಾಕಿಯನ್ನು ಆಡಲೆಂದು ಆಟದ ಮೈದಾನಗಳ ಕಡೆಗೆ ಓಡುವ ವೇಳೆಯಲ್ಲಿ ಬಾಬರ್ ಸುಮಾರು 800 ಜನ ವಿದ್ಯಾರ್ಥಿಗಳಿರುವ ತನ್ನ ಶಾಲೆಯ ಕಡೆಗೆ ನಡೆಯಲಾರಂಭಿಸುತ್ತಾನೆ. ಕೇವಲ 16 ವರ್ಷದ ಬಾಬರನೆ ಈ ಶಾಲೆಯ ಮುಖೋಪಾಧ್ಯಾಯ!
ಬಾಬರ್ ನ ಶಾಲೆ ಇರುವುದು ಅವರ ಮನೆಯ ಹಿಂದಿನ ಅಂಗಳದಲ್ಲೇ. ಅವನು ಸುಸ್ಸಜ್ಜಿತವಾದ ಕಟ್ಟಡವಲ್ಲ. ಆದರೆ ಹಾಳು ಬಿದ್ದಿರುವ ಒಂದು ಚಿಕ್ಕ ಕಾಂಕ್ರೀಟಿನ ಕೊಠಡಿಯೇ ಅವನ ಕಛೇರಿ. ಆದರೆ ಆತನ ಹೆಸರು ಇಂಗ್ಲೆಂಡಿನ ರಾಣಿಗೂ ಚಿರಪರಿಚಿತ. ಪ್ರಪಂಚದಾದ್ಯಂತ ಲಕ್ಷಾಂತರ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಿರುವ ಇಂದಿನ ಸನ್ನಿವೇಶದಲ್ಲಿ ಇಲ್ಲಿ ನೂರಾರು ಮಕ್ಕಳು ಹತ್ತಾರು ಮೈಲಿ ನಡೆದು ಬಂದು ಸಂಪೂರ್ಣ ಉಚಿತವಾಗಿ ವಿದ್ಯೆಯನ್ನು ಕಲಿಯುತ್ತಿದ್ದಾರೆ.
ಸಾಧಾರಣವಾಗಿ ಸರ್ಕಾರವು ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುತ್ತದೆಯಾದರೂ ಸಮವಸ್ತ್ರ ಪುಸ್ತಕ, ಮುಂತಾದವುಗಳಿಗಾಗಿ ಪೋಷಕರು ಹಣವನ್ನು ಖರ್ಚು ಮಾಡಲೇಬೆಕಾಗುತ್ತದೆ. ಈ ಖರ್ಚನ್ನು ಭರಿಸಲಾರದ ಬಡ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಬದಲಿಗೆ ಮೆಕ್ಯಾನಿಕ್ ಗಳಾಗಿಯೋ ದಿನಗೂಲಿಗಳಾಗಿಯೋ ಅಥವಾ ದನ ಮೇಯಿಸಲೋ ಕಳುಹಿಸುತ್ತಾರೆ. ಈ ಪರಿಸ್ಥಿತಿಯನ್ನು ಬದಲಿಸಲು ತೀರ್ಮಾನಿಸಿದ ಬಾಬರ್ ಅಲಿ ಆನಂದ್ ಶಿಕ್ಷಾ ನಿಕೇತನ ಎಂಬ ತನ್ನದೇ ಆದ ಶಾಲೆಯನ್ನು ಆರಂಭಿಸಿದ್ದಾನೆ. ಬಾಬರ್ ಅ;ಒ ತನ್ನ ಶಾಲೆಯನ್ನು ಆರಂಭಿಸಿದ್ದು ಆತ ಕೇವಲ 9 ವರ್ಷದವನಿದ್ದಾಗ ಎಂದರೆ ಆಶ್ಚರ್ಯವಾಗಬಹುದು. ಆದರೆ ಅದು ನಿಜ. ಆಗ ಬಾಬರ್ ಮತ್ತು ಅವನ ಗೆಳೆಯರು ಸ್ಕೂಲಿನ ಆಟವನ್ನು ಆಡುತ್ತಿದ್ದರು. ಅದರಲ್ಲಿ ಅವನೇ ಟೀಚರ್.
ಸ್ಕೂಲಿನ ಮುಖವನ್ನೇ ನೋಡಿರದಿದ್ದ ಅವನ ಸ್ನೆಹಿತರೆಲ್ಲ ಸಂತೋಷದಿಂದ ಈ ಆಟವನ್ನು ಆಡುತ್ತಿದ್ದರು. ಮತ್ತು ಆಡಾಡುತ್ತಲೇ ಗಣಿತವನ್ನು ಕಲಿತರು. ಹೀಗೆ 2002ರಲ್ಲಿ ಎಂಟು ಜನ ವಿದ್ಯಾರ್ಥಿಗಳೊಂದಿಗೆ ಈ ಶಾಲೆ ಅಸ್ತಿತ್ವಕ್ಕೆ ಬಂತು.
ನಿಧಾನವಾಗಿ ಬಾಬರ್ ನ ಶಾಲೆಯ ವಿಷಯ ಬಾಯಿಂದ ಬಾಯಿಗೆ ಹರಡಿದಂತೆ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿತು. ಬಾಬರನ ಶಾಲೆಯ ಅದ್ಯಾಪಕರು ಸೇರಿದಂತೆ ರಾಮಕೃಷ್ಣ ಮಠದ ಯತಿಗಳು, ಸಹೃದಯಿ ಐ.ಎ.ಎಸ್. ಅಧಿಕಾರಿಗಳು ಸ್ಥಳೀಯ ಪೋಲೀಸರು ಎಲ್ಲರೂ ಇವರ ನೆರವಿಗೆ ನಿಂತರು. ಮಧ್ಯಾಹ್ನದ ಊಟದ ಯೋಜನೆಯನ್ನು ಬಾಬರ್ ಆರಂಭಿಸಿದಾಗ ಮೊದಮೊದಲು ತಮ್ಮ ಗದ್ದೆಯ ಬೆಳೆಯನ್ನೇ ಆಶ್ರಯಿಸಿದ್ದ. ಇಂದು ಕೆಲವು ಅಧಿಕಾರಿಗಳ ಉದಾರತೆಯಿಂದಾಗಿ ಸರ್ಕಾರಿ ದಾಸ್ತಾನಿನಿಂದ ಅಕ್ಕಿ ಸರಬರಾಜಾಗುತ್ತಿದೆ. 9 ವರ್ಷದ ನಂತರ , ಇಂದು ಈ ಶಾಲೆಯಲ್ಲಿ 60 ಮಂದಿ ನಿಯತವಾಗಿ ಶಾಲೆಗೆ ಬರುವ ವಿದ್ಯಾರ್ಥಿಗಳಿದ್ದಾರೆ.
220 ಕ್ಕೂ ಹೆಚ್ಚು ಮಂದಿ ತಮ್ಮ ಹೆಸರುಗಳನ್ನು ನೊಂದಾಯಿಸಿದ್ದಾರೆ ಮತ್ತು ಒಟ್ಟಾರೆಯಾಗಿ 800 ವಿದ್ಯಾರ್ಥಿಗಳು 1ರಿಂದ 8ನೆ ತರಗತಿಯವರೆಗೆ ಬೋಧಿಸುವ ಹತ್ತು ಮಂದಿ ಸ್ವಯಂ ಸೇವಕ ಶಿಕ್ಷಕರೂ ಇದ್ದಾರೆ. ಶಿಕ್ಷಕರೆಲ್ಲಾ ಅತಿ ಹೆಚ್ಚು ಕಲಿತವನೆಂದರೆ ಬೆಹ್ರಾಂಪುರದ ಕಾಲೇಜಿನಲ್ಲಿ ಕಲಿಯುತ್ತಿರುವ ದೇಬರಿತಾ ಭಟ್ಟಾಚಾರ ತುಳು ರಾಣಿ ಹಾಡ್ತಾ ಎಂಬ ಅನಕ್ಷರಸ್ಥ , ಮೀನು ಮಾರುವ ಮುದುಕಿಯು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮೀನು ಮಾರುತ್ತಲೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾದ ಅಗತ್ಯವನ್ನು ಪೋಷಕರಿಗೆ ಮನದಟ್ಟು ಮಾಡಿಸುತ್ತಿದ್ದಾಳೆ. ಬಾಬರ್ ಅಲಿಯ ಶಾಲೆಗೆ ಯಾವುದೆ ಕಟ್ಟಡವಿಲ್ಲ. ಮಕ್ಕಳೆಲ್ಲಾ ನೀಲಿ ಆಕಾಶದ ಅಡಿಯಲ್ಲಿ ಮಣ್ಣಿನಲ್ಲಿ ಕುಳಿತೋ, ಮುರಿದ ಬೆಂಚಿನ ಮೇಲೆ ಕುಳಿತೋ ಕಲಿಯುತ್ತಿದ್ದಾರೆ. ಒಂದು ಮತ್ತು ಎರಡನೇ ತರಗತಿಯಲ್ಲಿರುವವರು 20 ಮಂದಿ. ಒಂದರಿಂದ ಐದನೇ ತರಗತಿಯವರೆಗಿನ ಪಠ್ಯಪುಸ್ತಕಗಳು ಉಚಿತ. ಮಿಕ್ಕವಕ್ಕೆ ಹೇಗಾದರೂ ಹಣವನ್ನು ಹೊಂಚಲಾಗುತ್ತದೆ. ಪ್ರತಿದಿನ ಕನಿಷ್ಟ 400 ಮಂದಿ ವಿದ್ಯಾರ್ಥಿಗಳು ಶಾಲೆಯಲ್ಲಿರುತ್ತಾರೆ. ಪಾಠ ಕಲಿಸುವವರಿಗೂ , ಕಲಿಯುವವರಿಗೂ ನಡುವಣ ವಯಸ್ಸಿನ ಅಂತರ ಬಹಳ ಕಡಿಮೆ ಇರುವುದರಿಂದ ಗುರು-ಶಿಷ್ಯರೆಂಬುದಕ್ಕಿಂತ ಸ್ನೆಹಿತರಂತೆ ಇವರೆಲ್ಲಾ ಸೇರಿ ಕಲಿಯುತ್ತಾರೆ. ಹಾಗಾಗಿ ಬಾಬರನ ಶಾಲೆಯಲ್ಲಿ ಬೆತ್ತದೆ ಬಳಕೆಯೆ ಇಲ್ಲ.
ಹೀಗೆ ಬಾಬರ್ ಅಲಿ ನೂರಾರು ಮಕ್ಕಳಿಗೆ ವಿದ್ಯಾದಾನ ಮಾಡುತ್ತಿದ್ದಾನೆ. ಮಾತ್ರವಲ್ಲ, ಸಹಸ್ರಾರು ಮಂದಿ ಯುವ ಜನರಿಗೆ ಅದರ್ಶಪ್ರಾಯವಾಗಿದ್ದಾನೆ. ಮನಸಿದ್ದರೆ ಮಾರ್ಗ ಎಂಬ ನಾಣ್ಣುಡಿಯ ಪ್ರತೀಕವಾಗಿರುವ ಬಾಬರ್ ಅಲಿಗೆ ನಮ್ಮ ಪ್ರಾಣಾನಗಳು ಎಂಬ ಹೇಳಿಕೆಯೊಂದಿಗೆ ಲೇಖಕಿ ಈ ಲೆಖನವನ್ನು ಮುಕ್ತಾಯಗೊಳಿಸಿದ್ದಾರೆ.
Babar Ali Extract Notes pdf class 11 Standard
First Puc Babar Ali Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 1st Puc Babar Ali English ನೋಟ್ಸ್ Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ. ನಿಮಗಾಗಿ ಉತ್ತಮ ಅಂಶಗಳನ್ನು ಒಳಗೊಂಡBabar Ali ಇಂಗ್ಲೀಷ್ ನೋಟ್ಸ್ Pdf ಅನ್ನು ಇಲ್ಲಿ ಈ ಕೆಳಗೆ ನೀಡಲಾಗಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು.
Babar Ali questions and answers Kannada Medium
PDF Name | 1st Puc English Babar Ali Notes Pdf |
No. of Pages | 04 |
PDF Size | 72KB |
Language | English |
Category | English Notes |
Download Link | Available ✓ |
Topics | 1st Puc English Babar Ali Notes Pdf |
First Puc Babar Ali Textbook Questions Answers
Babar Ali summary class 11 PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
kseeb solutions for 1st puc english 6th lesson
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
babar ali lesson summary class 11 pdf download
ಇಲ್ಲಿ ನೀವು Prathama Puc Babar Ali Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು Babar Ali 1st Puc Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download NowFAQ:
Where does Babar Ali run classes for poor children?
Babar Ali runs classes for poor children in the backyard of his house in Murshidabad, West Bengal.
What according to Babar’s father, is true religion?
According to Babar’s father Nasiruddin Sheikh Education is man’s true religion.