9th Standard To My Countrymen English Notes Pdf 2023 kseeb solutions english notes class 9 pdf 8th Lesson 9th Standard To My Countrymen Notes Question Answer Mcq Pdf To My Countrymen Summary In Kannada Download Karnataka
Class : 9th Standard
Chapter Name: To My Countrymen
Table of Contents
kseeb solutions english notes class 9 pdf 8th Lesson
To My Countrymen Summary In Kannada
ಕನ್ನಡ ಸಾರಾಂಶ: ನನ್ನ ದೇಶಿಯರಿಗೆ
ಗದ್ಯಭಾಗವನ್ನು ಅಬ್ದುಲ್ ಕಲಾಂ ಅವರ “ಇನ್ನೈಟೆಡ್ ಮೈಂಡ್” ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ. ಅಭಿವೃದ್ದಿ ಹೊಂದಬೇಕಾದರೆ ನಾವು ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ಅಬ್ದುಲ್ ಕಲಾಂ ಅವರು ಈ ಕಾಲದಲ್ಲಿ ವಿವರಿಸಿದ್ದಾರೆ.
ಕಲಾಂ ಅವರು ತಮ್ಮ ಪುಸ್ತಕದಲ್ಲಿ ಕಲ್ಪನಾ ಶಕ್ತಿಯನ್ನು ಕುರಿತು ಹೇಳಿದ್ಸಾರೆ. ಕಲ್ಪನಾ ಶಕ್ತಿ ಸೃಷ್ಟಿಸುವ ಕಾರ್ಯದ ಕೇಂದ್ರದಲ್ಲಿದ್ದು ಜೀವನದ ಸಾರವಾಗಿದೆ. ಇವರೆರಡು ನಮ್ಮ ಬಯಕೆಯನ್ನು ಈಡೇರಿಸಲು ಆಕರ್ಷಕ ಶಕ್ತಿಯನ್ನು ಹೊಂದಿ ಕಾರ್ಯಪ್ರವೃತ್ತರಾಗುತ್ತಾರೋ ಅವರು ಜೀವನದಲ್ಲಿ ಏಳಿಗೆಯಾಗುತ್ತಾರೆ. ಅದು ಇಲ್ಲದಿದ್ದಾಗ ವಿಪಲರಾಗುತ್ತಾರೆ. ಕಲಾಂ ಅವರು 2020 ಇಸವಿ ಆಗುವಷ್ಟರಲ್ಲಿ ಭಾರತ ವಿಜ್ಞಾನಿಗಳು ಮತ್ತು ತಂತ್ರಜ್ಞರು ನಿರ್ದಿಷ್ಟ ಯೋಜನೆಯ ಗುರಿ ಸಾದಿಸಲು ಕೇಂದ್ರಿಕರಿಸಿ ಸಾಮಾನ್ಯ ಜನರಿಗೋಸ್ಕರ ಕೆಲಸ ಮಾಡುವಂತಹ ಪದ್ದತಿ ಬರಬೇಕು ಎಂದು ಕನಸು ಕಾಣುತ್ತಾರೆ.
ಈ ಕನಸು ನನಸಾಗಲು ನಾವು ಸಂಘಟಿತರಾಗಿ ಕೆಲಸ ಮಾಡಬೇಕು. ನಾವು ನಡೆಸುವ ಸಂಘ-ಸಂಸ್ಥೆಗಳು ನಮಗಿಂತ ನಮ್ಮಯೋಜನೆಗಳು , ಗುರಿಗಳು , ಗುರಿಸಾಧಿಸುವ ಮನಸ್ಸಿರಬೇಕು. ಮತ್ತು ಪ್ರಯತ್ನ ಮಾಡಬೇಕು. ಇವೆಲ್ಲವನ್ನು ಪರಿಗಣಿಸಿದಾಗ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ.
ಯಾವ ಇಲಾಖೆ ಅಥವಾ ಮಂತ್ರಾಲಯ ಮಾನವರನ್ನು ಮಂಗಳ ಗ್ರಹಕ್ಕೆ ಕೊಂಡೊಯ್ದು ಅಲ್ಲಿ ಜೀವಿಸುವಂತೆ ಮಾಡುತ್ತದೆ? ಸಮಗ್ರ ಪ್ರಯತ್ನವಿಲ್ಲದೆ, ಪ್ರತ್ಯೇಕ ಪ್ರಯತ್ನದಿಂದ ಉಷ್ಣ ಸ್ಥಾವರ , ಜಲವಿದ್ಯುತ್, ಅಣುಸ್ಥಾವರ ಮತ್ತು ಅಸಂಪ್ರದಾಯಕವಲಯಗಳಿಂದ 200000 ಮೆಗವ್ಯಾಟ್ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲು ಸಾಧ್ಯವೇ? ಜೈವಿಕ ತಂತ್ರಜ್ಞರು ನೀರಾವರಿ ಪರಿಣಿತರು ಮತ್ತು ಕೃಷಿ ವಿಜ್ಞಾನಿಗಳು ಒಟ್ಟಿಗೆ ಸೇರಿ ಕೆಲಸ ಮಾಡಿದರೆ ಎರಡನೆ ಹಸಿರು ಕ್ರಾಂತಿ ಸಾಧ್ಯವೇ? ಅಸ್ಪತ್ರೆಗಳಲ್ಲಿ ರೋಗಪತ್ತೆ ಹಚ್ಚಲು ಉತ್ತಮ ಸೌಲಭ್ಯ ಮತ್ತು ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ಔಷಧ ಮಾತ್ರೆಗಳು ದೊರೆಯುವಂತೆ ಮಾಡಬೇಕು .ಈ ಉದ್ದೇಶವನ್ನು ಇಟ್ಟುಕೊಳ್ಳದಿದ್ದರೆ ಜೈವಿಕ ಪ್ರಯೋಗಾಲಯಗಳಲ್ಲಿ ಅಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳು ಉಳಿಯಲು ಸಾಧ್ಯವಿಲ್ಲ ಆದ್ದರಿಂದ ಸಂಘಟಿತ ಕಾರ್ಯದಿಂದ ಮಾತ್ರ ನ್ಮಮ ಗುರಿಯನ್ನು ಸಾಧ್ಯ ಎಂದು ಕಲಾಂ ಅಭಿಪ್ರಾಯ ಪಡುತ್ತಾರೆ.
ಕಲಾಂ ಅವರು ನಮ್ಮ ಕಲ್ಪನಾ ಸಾಮರ್ಥ್ಯ್‌ದ ಬಗ್ಗೆ ತಮಗೆ ಆದ ಅನುಭವವನ್ನು ಹೇಳುತ್ತಾರೆ. ಇದು ನಮ್ಮ ಹೃದಯಾಂತರಾಳದಿಂದ ಬರುವ ಶಕ್ತಿ. ಈ ಶಕ್ತಿ ನಮ್ಮ ಉನ್ನತ ಏಳಿಗೆಗಾಗಿ ಪ್ರೇರೆಪಿಸುವ ಮೂಲ,ನಮ್ಮ ಸಂಘಟಿತ -ಸಾಮರ್ಥ್ಯ ಸ್ವಾತಂತ್ರ್ಯದ ಹೋರಾಟದಲ್ಲಿ ಮೊಳಗಿದೆ. ಈ ಸಾಮರ್ಥ್ಯದಿಂದಲೆ ನಾವು ಬ್ರಿಟಿಷ್ ಸಾಮ್ರಾಜ್ಯವನ್ನು ಮಣಿಸಿ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಯಿತು ಎಂದು ಕಲಾಂ ಹೇಳುತ್ತಾರೆ.
ಬ್ರಿಟಿಷರ ಅನುಮತಿ ಮತ್ತು ಸಹಕಾರ ಇಲ್ಲದಿದ್ದರು ಸಹ ಜೆ.ಆರ್. ಟಾಟಾ ಅವರು ಭಾರತದಲ್ಲಿ ಉಕ್ಕಿನ ಕಾರ್ಖಾನೆಯನನ್ನು ಆರಂಭಿಸುತ್ತಾರೆ. ಅಚಾರ್ಯ ಪಿ.ಸಿ. ರಾಯ್ ಅವರು ರಾಸಾಯನಿಕ ಮತ್ತು ಅಭಿವೃದ್ದಿಪಡಿಸುತ್ತಾರೆ.ಜಿ.ಎನ್.ಟಾಟಾ ಅವರು ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಆರಂಭಿಸುತ್ತಾರೆ. ಪಂಡಿತ್ ಮದನ್ ಮೋಹನ್ ಮಾಳವಿಯ ಅವರು ಬನಾರಸ್ ಹಿಂದೂ ವಿಶ್ವವಿದ್ಯಾಲಯವನ್ನೂ ಮತ್ತು ಸರ್, ಸಯ್ಯದ್ ಅಹ್ಮದ್ ಖಾನ್ ಅವರು ಅಲಿಗಡ್ ಮುಸ್ಲಿಂ ವಿಶ್ವವಿದ್ಯಾಲಯವನ್ನು ಆರಂಭಿಸುತ್ತಾರೆ.
ಬರೋಡಾದ ರಾಜರು ವಿಶ್ವವಿದ್ಯಾಲಯ ಸ್ಥಾಪಿಸಿದ ಹಾಗೆ ಅನೇಕ ಪ್ರಗತಿಪರ ರಾಜರುಗಳು ಅನೇಕ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುತ್ತಾರೆ. ಇವೆಲ್ಲವು ಭಾರತ ಪ್ರಪಂಚ ಮಟ್ಟದಲ್ಲಿ ಉತ್ಪನ್ನವಾದುದನ್ನು ಮಾಡಬಲ್ಲದು ಎಂದು ತೋರಿಸಲು ಪ್ರೇರಕ ಶಕ್ತಿಲಯಾಗಿದೆ. ಈ ಮಹನೀಯರು ತೋರಿಸಿದ ಸಾಹಸವನ್ನು ಮುಂದು ವರಿಸುವ ಸ್ಥಿತಿಯಲ್ಲಿ ನಾವಿದ್ದೇವೆಯೇ? ಭಾರತದಲ್ಲಿ ತಯಾರಿಸದ ಕಾರಗಳನ್ನು ಫ್ರಾಂಕ್ ಪರ್ಟ್ ಅಥವಾ ಸಿಯೋಲ್ ರಸ್ತೆಗಳಲ್ಲಿ ನೋಡಲು ಸಾಧ್ಯವೆ? ಭಾರತದ ಉಪಗ್ರಹ ಉಡ್ಡಯನವಾಹಕವು ಇತರೆ ದೇ ಭಾರತ, ಅಮೆರಿಕ, ಜಪಾನ್ ಮತ್ತು ಚೀನಾ ದೇಶಗಳಲ್ಲಿ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುತ್ತದೆಯೋ? ಹೀಗೆ ನಾವು ಈಗಿನಂತೆ ಚಿಕ್ಕ ಗುರಿಗಳನ್ನು ಹೊಂದಿದ್ದರೆ ಈಗಿನಂತೆ ಚಿಕ್ಕ ಗುರಿಗಳನ್ನು ಹೊಂದಿದ್ದರೆ ಈ ಎಲ್ಲಾ ಸಾಧ್ಯತೆಗಳು ತುಂಬಾ ದೂರದಲ್ಲಿವೆ ಮತ್ತು ಮರೀಚಿಕೆಯಂತಾಗುತ್ತವೆ.
ಇಂದು ನಾವು ಸಾಪ್ಟ್ ವೇರ್ ವಲಯದಲ್ಲಿ ತುಂಬಾ ಮುಂದುವರಿದದ್ದೇವೆ. ಅದರೆ ಹಾರ್ಡವೇರ್ ಗಳನ್ನು ನಾವು ಆಮದು ಮಾಡಿಕೊಳ್ಳುತ್ತಿದ್ದೇವೆ. ಆದರೆ ಹಾರ್ಡ್ ವೇರ್ ಗಳನ್ನು ನಾವು ಆಮದು ಮಾಡಿಕೊಳ್ಳುಬಾರದು? ಭಾರತವು ಕಂಪ್ಯೂಟರ್ ವಲಯದಲ್ಲಿ ಕಾರ್ಯನಿರ್ವಹಿಸಲು ಮಾಡಿದ ವಿನ್ಯಾಸ ಮನೆಮಾತಾಗುವಂತೆ ಮಾಡಲು ಸಾದ್ಯವಿಲ್ಲವೆ?
ನಮ್ಮ ರಫ್ತು ಹೆಚ್ಚಾಗಿ ಕಡಿಮೆ ಬೆಲೆಬಾಳುವ ಕಚ್ಚಾ ವಸ್ತುಗಳಾದ ಕಬ್ಬಿಣದ ಅದಿರು ಮತ್ತು ಬಾಕ್ಸಿಟ್ ಅದಿರು ಆಗಿದೆ. ನಾವೇಕೆ ಈ ಕಚ್ಚಾವಸ್ತುಗಳನ್ನು ಅನೇಕ ವಿಧವಾದ ಸಿದ್ದವಸ್ತುಗಳನ್ನಾಗಿ ತಯಾರಿಸಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಬಾರದು? ನಮ್ಮಲ್ಲಿ ರಕ್ಷಣಾ ಸಾಮಾಗ್ರಿಗಳನ್ನು ತಯಾರಿಸುವ ನೂರಾರು ಕಾರ್ಖಾನೆಗಳಿವೆ. ಅದರೆ ಯುದ್ದನೌಕೆ-ಯುದ್ದವಿಮಾನ, ಕ್ಷಿರ್ಪರಿ ಆದುನಿಕ ಬಂದೂಕುಗಳನ್ನು ನಾವೇಕೆ ತಯಾರಿಸಿ ಮಾರಾಟ ಮಾಡುತ್ತಿಲ್ಲ? ಬಹುಮುಖ ಪ್ರತಿಭೆಯ ಮಾನವ ಸಂಪನ್ಮೂಲ ಮತ್ತು ಮೂಲ ಸೌಲಭ್ಯಗಳು ಇದ್ದರೂ ಸಹ ನಾವೇಕೆ ಅಭಿವೃದ್ದಿ ಹೊಂದುತ್ತಿಲ್ಲ. ಈ ಎಲ್ಲಾ ಪ್ರಶ್ನೆಗಳನ್ನು ಮತ್ತು ಸಮಸ್ಯೆಗಳನ್ನು ಪರಿಹರಿಸಲು ನಮ್ಮಲ್ಲರುವ ಕೊರತೆಗಳೇನು ಅವುಗಳನ್ನು ಹೇಗೆ ಪರಿಹರಿಸಿ ಮುಂದುವರಿಯಬಹುದು- ಎಂದು ಕಲಾಂ ಅವರು ತಮ್ಮ ಅಭಿಪ್ರಾಯವನ್ನು ಹೀಗೆ ಹೇಳುತ್ತಾರೆ.
ಈಗ ನಾವು ಕಾರ್ಯ ನಿರ್ವಹಿಸುತ್ತಿರುವ ವಿಧಾನಕ್ಕೆ ಹೊಸ ಆಯಾಮವನ್ನು ಕೊಡಬೇಕು. ವಿವಿಧ ಮಂತ್ರಾಲಯಗಳ ಮತ್ತು ಕಾರ್ಖಾನೆಗಳ ಸ್ವಪ್ರತಿಷ್ಟೆ ಮತ್ತು ಸ್ವಾರ್ಥವನ್ನು ಬದಿಗಿಟ್ಟು ಸಮಗ್ರ ಕಾರ್ಯ ಯೋಜನೆ ತಯಾರಿಸಿಕೊಳ್ಳಬೇಕು, ಇದರಲ್ಲಿ ದೇಶಭಕ್ತಿ ದೇಶಪ್ರೇಮ ಅಡಗಿ ಪ್ರೇರೆಪಿಸುವಂತಿರಬೇಕು. ಇಡೀ ದೇಶಕ್ಕೆ ಅನ್ವಯಿಸುವ ಕಲ್ಪನಾಶಕ್ತಿ ಮತ್ತು ದೂರದೃಷ್ಟಿ ಇರಬೇಕು. ಇರಬೇಕೆಂದು ಕಲಾಂ ಅಭಿಪ್ರಾಯಪಡುತ್ತಾರೆ.
ಕೆಲವು ರಾಜ್ಯಗಳು ಇತೆ ರಾಜ್ಯಗಳಿಗಿಂತ ಅಭಿವೃದ್ದಿಯಾಗಿವೆ. ಕುಶಾಗ್ರಮತಿಯ ಯುವ ಸಾಹಸಿಗರು ರಾಷ್ಟ್ರ ಮಟ್ಟದ ತಾಂತ್ರಿಕ ವಲಯದಲ್ಲಿ ಶಕ್ತಿ ತುಂಬಿದ್ದಾರೆ. ಬೆಂಗಳೂರು, ಚೆನ್ನೈ , ಮುಂಬೈ ,ದೆಹಲಿ, ಹೈದರಾಬಾದ್ ಗಳು ಈ ಕಾರ್ಯಚಟುವಟಿಕೆಗಳ ಕೇಂದ್ರಗಳಾಗಿವೆ. ಆದರೆ ಮಾಹಿತಿ ತಂತ್ರಜ್ಞಾನ ಮಾತ್ರ ಇಲ್ಲಿ ಮುಂದುವರೆದಿದ್ದು ಬಂಡವಾಳವನ್ನು ಅಕರ್ಷಿಸುತ್ತಿವೆಯೆ ವಿನಹ ಸಮಗ್ರ ಅಭಿವೃದ್ದಿಯಾಗಿಲ್ಲ ಈ ಮಾಹಿತಿ ತಂತ್ರಜ್ಞಾನದ ವಲಯವನ್ನು ನಮ್ಮ ಅಭಿವೃದ್ದಿಯು ಗುರಿಯಾಗಿ ಇಟ್ಟುಕೊಂಡರೆ, ಇದಕ್ಕೂ ಸಹ, ಮಾನವ ಶಕ್ತಿ ಮುಖ್ಯವಾಗಿದೆ. ಈ ತಂತ್ರಜ್ಞಾನದ ನಗರದ ಮಾನವ ಶಕ್ತಿಯನ್ನು ಮಾತ್ರ ಬಳಸಿಕೊಳ್ಳದೆ ಗ್ರಾಮೀಣ ಭಾಗದ ಅಂದರೆ ನಗರದಿಂದ ದೂರವಿರವವರಿಗೂ ಸಹ ಉತ್ತಮ ಶಿಕ್ಷಣ ದೊರಕುವಂತೆ ಆಗಬೇಕು ಅ ಮೂಲಕ ಅವರು ಸಹ ಈ ತಂತ್ರಜ್ಞಾನವಲಯದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು. ಈ ಕೆಲ್ ಶೀಘ್ರವಾಗಿ ಮಾಡಬೇಕೆಂದು ಕಲಾಂ ಹೇಳುತ್ತಾರೆ. ಕಲಾಂ ಅವರು ಈಶನ್ಯ ರಾಜ್ಯಗಳಿಗೆ ಭೇಟಿ ಕೊಟ್ಟಾಗ ತ್ರಿಪುರ,ಅಸ್ತಾರಿ ಮತ್ತು ಜಾರ್ಖಂಡ್ ಗಳಲ್ಲಿ ಸಂಪನ್ಮೂಲಗಳ ಸಮರ್ಪಕ ಬಳಕೆಯಾಗದಿರುವುದನ್ನು ನೋಡುತ್ತಾರೆ. ಶ್ರೀಮುರದ ಆರ್ಥಿಕತೆ ಕಾಡಿನ ಸಂಪನ್ಮೂಲಗಳ ಮೇಲೆ ನಿಂತಿದೆ. ಹೇರಳವಾದ ಖನಿಜ ಸಂಪತ್ತುಗಳನ್ನು ಮತ್ತು ನೈಸರ್ಗಿಕ ಅನಿಲವಿದೆ.
ಆದರೆ ಸಾರಿಗೆ ಸಂರ್ಪಕ ಉತ್ತಮವಾಗಿದ್ದ ಪ್ರಯಾರಿ ಮಾಡಿ ಕಾರ್ಯಚಟುವಟಿಕೆ ಮಾಡಲು ತುಂಬಾ ಕಠಿಣ ಆದ್ದರಿಂದ ಆ ರಾಜ್ಯ ಒಂದು ರೀತಿ ಪ್ರತ್ಯೇಕವಾಗಿದೆ. ಜಾರ್ಖಂಡ್ ನಲ್ಲಿ ಖನಿಜ ಸಂಪತ್ತಿನ ಬಳಕೆಯಾಗಬೇಕಿದೆ. ಕಾಡಿನ ಸಂಪತ್ತು ಮತ್ತು ಕರಕುಶಲತೆ ಅಭಿವೃದ್ದಿಯಾಗಬೇಕಿದೆ.
ಅಸ್ಸಾಂನಲ್ಲಿ ಸಂಪತ್ತಿನ ಕೊರತೆ ಇದ್ದರೂ ಸಹ ಶೈಕ್ಷಣಿಕ ಸೌಲಭ್ಯಗಳು ಉತ್ತಮವಾಗಿದೆ. ಆರ್ಥಿಕ ಅಬಿವೃದ್ದಿಗೆ ಬೇಕಾದ ಎಲ್ಲಾ ಸೌಲಭ್ಯಗಳು ಅಸ್ವಾದಿನಲ್ಲಿವೆ, ಆದರೆ ಅಲ್ಲಿ ದಂಗೆಗಳು ಮತ್ತು ಜನರಲ್ಲಿ ಅಶಾಂತಿ ಇದೆ. ಕೇಂದ್ರೀಕೃತ ಗುರಿ ಮತ್ತು ಯೋಜನೆಗಳ ಮೂಲಕ ಜನರನ್ನು ಒಟ್ಟುಗೂಡಿಸಬಹುದು ಕಲಾಂ ಅಭಿಪ್ರಾಯ ಪಡುತ್ತಾರೆ. ತಮಿಳುನಾಡು ಆಂಧ್ರಪ್ರದೇಶ ಪಂಜಾಬ್ ಮತ್ತು ಕರ್ನಾಟಕ ರಾಜ್ಯಗಳು ಹೆಚ್ಚಿನದನ್ನು ಸಾಧಿಸಬಹುದೆಂದು ತಮಗೆ ಅರ್ಥ ಮಾಡಿಸಿವೆ ಎಂದು ಕಲಾಂ ಅವರು ಹೇಳುತ್ತಾರೆ. ಒಮ್ಮೆ ಒಂದು ರಾಜ್ಯ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಏಳಿಗೆಗೆ ಶ್ರಮಿಸಿ ಹಣಖರ್ಚು ಮಾಡಿ ಅಭಿವೃದ್ದಿಯಾದರೆ, ಅದು ಇತರೆ ರಾಜ್ಯಗಳ ಆರ್ಥಿಕ ಅಭಿವೃದ್ದಿಗೆ ಮಾದರಿಯಾಗುತ್ತದೆ.
ನಮ್ಮ ಬೌದ್ದಿಕ ಜ್ಞಾನವಂತ ಚರ್ಚಾಸಭೆಗಳು, ರಾಜಕೀಯ ವೆದಿಕೆಗಳು, ಶಿಕ್ಷಣ ಸಂಸ್ಥೇಗಳು , ವಾಣಿಜ್ಯ ಮಂಡಳಿಗಳು ಯಾವಾಗಲು ಸಂಭಾಷಣೆ ಮತ್ತು ಚರ್ಚೆಗಳಿಂದ ತುಂಬಿರುತ್ತದೆ. ಆ ಚರ್ಚೆ ವಿಷಯದಲ್ಲಿ ಗದ್ದಲದಿರುವುದು ನಿಜ ಆದರೆ ಚರ್ಚೆಗಳಿಗೆ ವಾದ ವಿವಾದಗಳಿಗೆ ,ಸಿದ್ದಾಂತಗಳಿಗೆ , ಕಲ್ಪನೆಗಳಿಗೆ ಕೊನೆಯಿಲ್ಲದಿದ್ದರೂ ಸಹ ಪ್ರಗತಿದಾಯಕವಾಗಿರುವುದಿಲ್ಲ ಸಭೆಗಳಲ್ಲಿ ಮತ್ತು ತಾಂತ್ರಿ ಕ ಸಮ್ಮೇಳನಗಳಲ್ಲಿ ಭಾರತದ ಅಭಿವೃದ್ದಿ ವಿಷಯದ ಬಗ್ಗೆ ಚರ್ಚಿಸುವುದಿಲ್ಲ. ಸಂಘಸಂಸ್ಥೆಗಳು ರಾಜಕೀಯ ಪಕ್ಷಗಳು, ಕಾರ್ಖಾನೆಗಳು, ಸಮಾಜ ಕುಟುಂಬಗಳು ಮತ್ತು ಪ್ರತಿಯೊಬ್ಬ ಪ್ರಜೆ ಎಲ್ಲರೂ ಎಲ್ಲಾ ಹಂತಗಳಲ್ಲಿ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ನಮ್ಮಲ್ಲಿ ಏನಿದೆ. ಮತ್ತು ಏನಿಲ್ಲಾ ಎನ್ನುವುದು ಅರಿತು ಕೆಲಸ ಮಾಡಬೇಕು. ಎಂದು ಕಲಾಂ ಹೇಳುತ್ತಾರೆ.
ನಾವು ಯಾರನ್ನು ತೆಗಳಬಾರದು ಪ್ರತಿಯೊಬ್ಬರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಲು ಮನಸ್ಸು ಮಾಡಬೇಕು. ಹೀಗೆ ಮಾಡಿದಾಗ ಮಾತ್ರ ನಮ್ಮ ಪ್ರಯತ್ನಕ್ಕೆ ತಕ್ಕಪ್ರತಿಫಲ ಎಲ್ಲರಿತಗೂ ಸಿಗುತ್ತದೆ. ವಿದ್ಯಾರ್ಥಿಗಳು ಭಾರತವನ್ನು ಅಭಿವೃದ್ದಿ ಹೊಂದಿದ ರಾಷ್ಟ್ರವನ್ನು ಮಾಡಲು ತಯಾರಾಗಬೇಕು. ನನಗೆ ಐದು ವರ್ಷದ ಮಗುವನ್ನು ಕೂಡಿ ಏಳು ವರ್ಷದ ನಂತರ ದೇವರಾಗಲಿ ಸಾಧ್ಯವಿಲ್ಲದಂತೆ ನಾನು ಪರಿವರ್ತಿಸುತ್ತೇನೆ. ಎಂದು ಶಿಕ್ಷಕರು ಹೇಳುವಂತಾಗಬೇಕು. ಎಂದು ಕಲಾಂ ಅಭಿಪ್ರಾಯಪಡುತ್ತಾರೆ.
9th Standard To My Countrymen Notes Question Answer Mcq Pdf
PDF Name | 9th English To My Countrymen Notes Pdf |
No. of Pages | 03 |
PDF Size | 66KB |
Language | English |
Category | English Notes |
Download Link | Available ✓ |
Topics | 9th Class English To My Countrymen Notes Pdf |
To My Countrymen pdf
9th Standard To My Countrymen Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ
9th Standard To My Countrymen English Notes Pdf
To My Countrymen summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
To My Countrymen 9th Standard
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
To My Countrymen English Chapter Noes Pdf Read Online
Read OnlineTo My Countrymen English Chapter Noes Pdf Download Now
Download NowFAQ:
Which state is rich in mineral wealth and natural gas?
Tripura is rich in mineral wealth and natural gas.
Where do you see insurgency and unrest among people?
We can see insurgency and unrest among the people of Assam.