9th Standard My Beginnings English Question Answer Notes Pdf 2023 kseeb solutions English Notes Class 9 English Chapter 3 Second Language 9 English My Beginnings 9th Summary In Kannada 9th Class My Beginnings Extract Questions Answers Pdf Mcq Download
Table of Contents
9th Standard My Beginnings English Notes Pdf
Class : 9th Standard
Chapter Name: My Beginnings
kseeb solutions English Notes Class 9 English Chapter 3
My Beginnings 9th Summary In Kannada
ಕನ್ನಡ ಸಾರಾಶ: “ನನ್ನ ಆರಂಭದ ದಿನಗಳು”
ಕಪಿಲದೇವ ಅವರು ತಮ್ಮ ಆತ್ಮ ಕಥೆಯ ಪುಸ್ತಕದಲ್ಲಿ ತಮ್ಮ ಜೀವನದ ಪ್ರಾರಂಭಿಕ ದಿನಗಳ ಬಗ್ಗೆ ಮೆಲುಕು ಹಾಕಿದ್ದಾರೆ. ಅವರು ಹುಟ್ಟಿದ್ದು 1959, ಜನವರಿ 6ರಂದು. ತಮಗಿಂತ ಹಿರಿಯರಾದ ಆರು ಜನ ಸಹೋದರಿಯರು ಮತ್ತು ಸಹೋದರರ ಮದ್ಯದಲ್ಲಿ ಬೆಳೆದು ಬಂದರು. ಬಾಲ್ಯದಲ್ಲಿ ಅವರದು ತುಂಟಾಟ ಸ್ವಭಾವವಾಗಿತ್ತು. ತಮ್ಮ ಪ್ರಾರಂಭಿಕ ದಿನಗಳಲ್ಲಿ ಅವರು ಸುಮ್ಮನೆ ಕೂಡುತ್ತಿದ್ದಿಲ್ಲ. ಬಾಲ್ಯದಲ್ಲಿ ಕುತೂಹಲ ಸ್ವಭಾವ ಹೊಂದಿದ್ದರು. ಜಗತ್ತಿನ ತುಂಬೆಲ್ಲ ಸಂಚರಿಸಬೇಕೆನ್ನುವ ಹಾಗೂ ಮರ್ಸಿಡಿಸ್ ಬೆಂಜ್ ವಾಹನಗಳನ್ನು ಓಡಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು.
ಇಪ್ಪತೈದು ವರ್ಷಗಳ ಹಿಂದೆ ಈ ಕನಸುಗಳು ಅವರಿಗೆ ಗಾಳಿಯಲ್ಲಿ ಗೋಪುರವಾಗಿ ತೋರಿದ್ದವು. ಆದರೆ ಇಂದು ದೇವರ ದಯೆಯಿಂದ ಅವರ ಕನಸುಗಳು ಸಾಕಾರಗೊಳ್ಳಲ್ಪಟ್ಟಿವೆ.
ಅವರು ತಮ್ಮ ಬಾಲ್ಯದ ಜೀವನವನ್ನು ಇತರ ಮಕ್ಕಳಂತೆ ಕಳೆದರು. ಶಾಲೆಗೆ ಚಕ್ಕರ್ ಹೊಡೆದು ಕೂಡಿಟ್ಟ ಹಣದಿಂದ ಗೆಳೆಯರೊಂದಿಗೆ ಸಿನಿಮಾ ನೋಡುವುದು, ಹೋಟೇಲ್ ನಲ್ಲಿ ಕೋಳಿ ಊಟ ಮಾಡುವುದು. ಇತ್ಯಾದಿ ಮೋಜು ಮಸ್ತಿಗಳೊಂದಿಗೆ ದಿನಗಳನ್ನು ಕಳೆಯುತ್ತಿದ್ದರು. ಬೇಸರವಾದಾಗ ಚೆಲ್ಲಾಟವಾಡುವುದಕ್ಕಾಗಿ ನೆರೆಹೊರೆಯವರ ಮರಗಳಿಂದ ಹಣ್ಣುಗಳನ್ನು ಕಿತ್ತುಕೊಳ್ಳುತ್ತಿದ್ದರು. ಬಹುತೇಕ ವೇಳೆಯನ್ನು ಅವರು ತಮ್ಮ ಗೆಳೆಯರೊಂದಿಗೆ ತೋಟದಲ್ಲಿಯ ಪಪ್ಪಾಯಿ, ದಾಳಿಂಬೆ ಗಿಡಗಳಿಂದ ಹಣ್ಣುಗಳನ್ನು ಹೇಗೆ ಲಪಟಾಯಿಸಬೇಕೆಂಬ ಉಪಾಯಗಳನ್ನು ಮಾಡುವುದರಲ್ಲಿ ಕಳೆಯುತ್ತಿದ್ದರು.
ಹೀಗೆ ಒಂದು ತೋಟವು ಒಬ್ಬ ಗೃಹಿಣಿಗೆ ಸೇರಿತ್ತು. ಅಕೆಗೆ ತನ್ನ ತೋಟದ ಬಗ್ಗೆ ಅಭಿಮಾನವಿತ್ತು. ಒಮ್ಮೆ ಆ ಗೃಹಿಣಿಗೆ ದೆಹಲಿಗೆ ಹೋಗಬೇಕಾಗಿತ್ತು. ಹೋಗುವ ಮುನ್ನ ತನ್ನ ತನ್ನ ತೋಟದ ಗಿಡಗಳಲ್ಲಿದ್ದ ಹಣ್ಣುಗಳನ್ನು ಎಣಿಕೆ ಮಾಡಿದ್ದಳು. ಅಲ್ಲಿ 92 ದಾಳಿಂಬೆ ಹಣ್ಣುಗಳಿದ್ದವು. ಆಕೆಯು ದೆಹಲಿಗೆ ಹೋಗಿ ಬರುವ ಮುನ್ನ ಕಪಿಲದೇವ ಅವರು ತಮ್ ಗೆಳೆಯರೊಂದಿಗೆ ಎಲ್ಲಾ ಹಣ್ಣುಗಳನ್ನು ಕಬಳಿಸಿ ಸಾಕಾಗುವಷ್ಟು ತಿಂದು ಉಳಿದದ್ದನ್ನು ಇತರರಿಗೆ ಹಂಚಿದ್ದರು. ಗೃಹಿಣಿಯಿಂದ ವಿಷಯ ತಿಳಿದ ತಾಯಿಯು ಮಗನಿಗೆ ಚೆನ್ನಾಗಿ ತನ್ನ ಕೈಯಿಂದ ಬಾರಿಸಿದ್ದಳು. ಅದನ್ನು ಅವರು ಈಗಲೂ ಜ್ಞಾಪಿಸಿಕೊಳ್ಳುತ್ತಾರೆ.
ಕಪಿಲದೇವರವರು ಜ್ಞಾಪಿಸಿಕೊಳ್ಳುವ ಇನ್ನೊಂದು ತುಂಟಾಟವೆಂದರೆ ಪೋಲೀಸರ ಕುದುರೆಗಳನ್ನು ಸವಾರಿ ಮಾಡಿದ್ದು, ಅಲ್ಲೊಂದು ಹಸಿರುಮಯವಾದ ಬಯಲು ಪ್ರದೇಶವಿತ್ತು, ಅ ಬಯಲಿನಲ್ಲಿ ಪೋಲೀಸರ ಕುದುರೆಗಳು ಹುಲ್ಲನ್ನು ಮೇಯುತ್ತಿದ್ದವು. ಅವುಗಳಲ್ಲಿ ದೊಡ್ಡದಾದ ಕುದುರೆಗಳಿದ್ದವು. ಹಲವಾರು ಸಲ ಬಿದ್ದರೂ ಮೈ-ಕೈಗಳು ಕೆತ್ತಿ ಕೆಂಪಾದಾರೂ ಅವರು ಕುದುರೆ ಸವಾರಿ ಮಾಡುವುದನನ್ನು ಕಲಿತರು. ಕುದುರೆಯಮೇಲೆ ಥಡಿ ಇರದಿದ್ದರೂ ಸಲೀಸಾಗಿ ಕುಳಿತು ಸವಾರಿ ಮಾಡಿ ಸಂತೋಷಪಡಿಸುತ್ತಿದ್ದರು. ಒಮ್ಮೆ ತಮ್ಮ ನೆಚ್ಚಿನ ಕುದುರೆಯನ್ನು ಅಧೀನಗೊಳಿಸಿಕೊಳ್ಳುವುದನ್ನು ತಿಳಿದುಕೊಂಡಿದ್ದರು. ಹೀಗೆ ಕಪಿಲದೇವ ಮತ್ತು ಅವರ ಗೆಳೆಯರು ಧೈರ್ಯವನ್ನು ದಾಟಿ ಹೊರಗೆ ಹೋಗುವ ಸಾಹಸವನ್ನು ಗೈದರು. ಅವರಲ್ಲಿ ಯಾವುದೇ ವಿಷಯವನ್ನು ಮನನ ಮಾಡಿಕೊಳ್ಳುವುದಕ್ಕಿಂತ ಅದನ್ನು ಬೇದಿಸಿ ನಡೆಯುವ ಸ್ವಬಾವವನ್ನು ಯಾರು ಗಮನಕ್ಕೆ ತಂದುಕೊಂಡಿದ್ದಿಲ್ಲ.
ಒಮ್ಮೆ ಕುದುರೆಯನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಿ ಅಲ್ಲಯೇ ಅದನ್ನು ಇಟ್ಟುಕೊಳ್ಳಲು ನಿರ್ಧರಿಸಿದರು. ಆ ಕುದುರೆಯಿಂದ ರಾಧ್ಧಾಂತವಾಯಿತು. ಕುದುರೆ ಹತ್ತಿರ ಹೋಗುವ ದುಸ್ಸಾಸಹ ಮಾಡಬಾರದೆಂದು ಎದೆಗುಂದಿಸಿ ಅವರ ತಂದೆಯು ಗಂಭೀರವಾದ ಎಚ್ಚರಿಕೆಯನ್ನು ನೀಡಿದರು.
ಕಪಿಲ ದೇವರು ಅಭ್ಯಾಸ ನಿರತ ವಿದ್ಯಾರ್ಥಿಯಾಗಿದ್ದಿಲ್ಲ. ಸದಾ ತಮ್ಮ ವೇಳೆಯನ್ನು ಆಟಗಳನ್ನು ಆಡುವುದರಲ್ಲಿ ಹಾಗೂ ಅವುಗಳಲ್ಲಿ ಬಾಗವಹಿಸುವುದರಲ್ಲಿ ಕಳೆಯುತ್ತಿದ್ದರು. ಅವರು ಹೋಗುತ್ತಿದ್ದ ಶಾಲೆಯಲ್ಲಿ ಕ್ರಿಕೆಟ್ ಆಟ ಅಡುವ ಸೌಕರ್ಯಗಳಿದ್ದವು. ಆ ಶಾಲೆಯವರು ಬಾಸ್ಕೆಟ್ ಬಾಲ್, ಪುಟ್ ಬಾಲ್, ಟೇಬಲ್ ಟೆನಿಸ್ ಆಟಗಳ ಸೌಲಭ್ಯಗಳನ್ನು ಒದಗಿಸಿದ್ದರು. ಕಪಿಲ್ ದೇವ ಅವರು ಪುಟ್ ಬಾಲ್ ಆಟಗಾರನಾಗಬೇಕೆಂಬ ಆಸೆ ಹೊಂದಿದ್ದರು . ಆದರೆ ಅವರ ಗೆಳೆಯರು ಕ್ರಿಕೆಟ್ ಆಟದಲ್ಲಿ ಆಸಕ್ತಿ ಹೊಂದಿದ್ದರಿಂದ ಅವರನ್ನು ಕ್ರಿಕೆಟ್ ಆಟವನ್ನಾಡಲು ಮನವೊಲಿಸಿದರು. ಗೆಳೆಯರ ಬಯಕೆಯಂತೆ ಅವರು ಕ್ರಿಕೆಟ್ ಆಟಕ್ಕೆ ಹೊಂದಿಕೊಂಡು ಬಹಳಷ್ಟು ಸಮಯವನ್ನು ಕ್ರಿಕೆಟ್ ಆಟದ ಬಯಲಿನಲ್ಲಿ ಕಳೆದರು. ಅನೇಕ ಅಂತರ್ ಶಾಲಾ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸಿ ಭರವಸೆದಾಯಕ ಬಾಲ ಆಟಗಾರನೆಂದು ಪ್ರಶಂಸೆ ಗಿಟ್ಟಿಸಿಕೊಂಡರು.
ಬಾಲ್ಯದಲ್ಲಿ ಆಟವಾಡಿದ ಕ್ರಿಕೆಟ್ ಆಟ ತಮ್ಮನ್ನು ಯಾವ ಕಡೆ ಮುನ್ನಡೆಸಿಕೊಂಡು ಹೋಗುತ್ತದೆ. ಎಂಬುದನ್ನು ಅವರು ಊಹಿಸಿದ್ದಿಲ್ಲ. ಅವರಿಗೆ ತಾವು ಒಬ್ಬ ವೃತ್ತಿನಿರತ ಕ್ರಿಕೆಟ್ ಆಟಗಾರನಾಗುತ್ತೆನೆಂಬ ಸಂಗತಿ ಅವರ ಕನಸು ಮನಸ್ಸಿನಲ್ಲಿದ್ದಿಲ್ಲ. ಕೊನೆಗೂ ಅವರು ಒಬ್ಬ ಪ್ರಸಿದ್ದ ಕ್ರಿಕೆಟ್ ಆಟಗಾರನಾಗಿ, ಭಾರತಕ್ಕೆ ಕ್ರಿಕೆಟ್ ಜಗತ್ತಿನ ಪ್ರತಿಷ್ಟಿತ ಪುಡೆನ್ಸಿಯಲ್ ಕಪ್ ಅನ್ನು ದೊರಕಿಸಿಕಕೊಟ್ಟು ಈಗ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದಾರೆ.
My Beginnings Pdf 9th Standard
PDF Name | 9th English My Beginnings Notes Pdf |
No. of Pages | 05 |
PDF Size | 76KB |
Language | English |
Category | English Notes |
Download Link | Available ✓ |
Topics | 9th Class English My Beginnings Notes Pdf |
9th Class My Beginnings Extract Questions Answers Pdf
9th Standard My Beginnings Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್ಲೋಡ್ ಮಾಡಿ
My Beginnings Lesson In English Notes
My Beginnings summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
9th Standard My Beginnings English Notes Pdf
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
ಇಲ್ಲಿ ನೀವು 9th Standard My Beginnings Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 9th Standard My Beginnings Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
FAQ:
What did Kapil’s mother always regale with?
Kapil’s mother always regales with tales of his naughty behaviour.
In the third paragraph Kapil says his neighbour’s lady grew trees. What were the two trees grown there?
Kapil’s neighbour’s lady grew papaya and pomegranate trees.