9ನೇ ತರಗತಿ ಬಲಿಯನಿತ್ತೊಡೆ ಮುನಿವೆಂ ಕನ್ನಡ ನೋಟ್ಸ್, ಪ್ರಶ್ನೋತ್ತರಗಳು ಪದ್ಯದ ನೋಟ್ಸ್ 9ನೇ ತರಗತಿ ಬಲಿಯನಿತ್ತೊಡೆ ಮುನಿವೆಂ ಕನ್ನಡ ನೋಟ್ಸ್ 9th Class Baliyanittode Munivem Kannada Notes Pdf Kseeb Solutions 4th Poem Question Answer in kannada Mcq Download Karnataka Pdf Kseeb Solutions For Class 9 Kannada Poem 4 Baliyanittode Munivem 9th ಬಲಿಯನಿತ್ತೊಡೆ ಮುನಿವೆಂ notes pdf poem summary Baliyanittode munivem summary in kannada Medium kseeb solutions for class 9th kannada 9th ಬಲಿಯನಿತ್ತೊಡೆ ಮುನಿವೆಂ Notes Pdf 2023
Table of Contents
9ನೇ ತರಗತಿ ಬಲಿಯನಿತ್ತೊಡೆ ಮುನಿವೆಂ ಕನ್ನಡ ನೋಟ್ಸ್
ತರಗತಿ: 9ನೇ ತರಗತಿ
ಪಾಠದ ಹೆಸರು: ಬಲಿಯನಿತ್ತೊಡೆ ಮುನಿವೆಂ
9th standard kannada notes Baliyanittode munivem
ರಾಜಪುರವೆಂಬ ಪಟ್ಟಣ . ಅದರ ದೊರೆ ಮಾರಿದತ್ತ , ಆ ಪುರದಲ್ಲಿ ಚಂಡಮಾರಿಯ ದೇವಾಲಯವಿತ್ತು . ಆಶ್ವಯುಜ ಹಾಗೂ ಚೈತ್ರಋತುಗಳಲ್ಲಿ ದೊರೆ ಮತ್ತು ಪ್ರಜೆಗಳು ಜಾತ್ರೆ ನಡೆಸಿ ದೇವಿಯನ್ನು ಆರಾಧಿಸುತ್ತಿದ್ದರು . ಒಮ್ಮೆ ಚೈತ್ರಮಾಸದಲ್ಲಿ ಜಾತ್ರೆ ನಡೆಯಬೇಕಿತ್ತು . ಮಾರಿಗೆ ಬಲಿ ಕೊಡುವುದಕ್ಕಾಗಿ ಮಾನವರನ್ನು ಹಿಡಿದುತರುವಂತೆ ಮಾರಿದತ್ತ , ತಳಾರ ಚಂಡಕರ್ಮನಿಗೆ ಆಜ್ಞಾಪಿಸಿದ ಅವನು ಸುದತ್ತಾಚಾರ್ಯ ಮುನಿಗಳೊಡನೆ ಆ ಮರಕ್ಕೆ ಬಂದು ಭಿಕ್ಷೆಗೆ ಹೊರಟಿದ್ದ ಎಳೆವಯಸ್ಸಿನ ಸಹೋದರ ಸಹೋದರಿಯರಾದ ಅಭಯರುಚಿ ಮತ್ತು ಅಭಯಮತಿಯರನ್ನು ಹಿಡಿದುತಂದ , ಮಾರಿಯ ಮನೆಯ ಭಯಂಕರ ದೃಶ್ಯದಿಂದ ಆ ಮಕ್ಕಳು ಸ್ವಲ್ಪವೂ ವಿಚಲಿತರಾಗಲಿಲ್ಲ . ಅವರ ಧೈರ್ಯ , ಕೈರ್ಯಗಳನ್ನು ಕಂಡು ಬೆಕ್ಕಸಬೆರಗಾದ ಮಾರಿದತ್ತ ಅವರನ್ನು ಬಲಿಕೊಡದೆ ಅವರ ವೃತ್ತಾಂತವನ್ನು ತಿಳಿಯಬಯಸಿದ , ಅಭಯರುಚಿ ತಮ್ಮ ಪೂರ್ವ ಕಥೆಯನ್ನು ನಿರೂಪಿಸಿದ .
ಉಜ್ಜಯನಿಯ ರಾಜಕುಮಾರ ಯಶೋಧರ , ತಂದೆ ಯಶೌಘ , ತಾಯಿ ಚಂದ್ರಮತಿ , ಪತ್ನಿ ಅಮೃತಮತಿ , ಯಶೋಧರ ಅಮೃತಮತಿಯರು ಅನ್ನೋನ್ಯವಾಗಿದ್ದು ಸುಖದಿಂದಿದ್ದರು, ಅತ್ಯಂತ ಚೆಲುವ. ಸುಂದರ , ಸಕಲ ವಿದ್ಯಾಪಾರಂಗತ ಹಾಗೂ ಸುಸಂಸ್ಕೃತನಾದ ಯಶೋಧರನ ಪತ್ನಿ ಅಮೃತಮತಿಯು ಕುರೂಪಿಯಾದ ಅಷ್ಟಾವಂಕ ಮಾವಟಿಗನ ಗಾನಮಾಧುರ‍್ಯಕ್ಕೆ ಮನಸೋತು ಪತಿಗೆ ದ್ರೋಹ ಬಗೆಯುವಳು . ಪತ್ನಿಯ ಹೇಯಕೃತ್ಯವನ್ನು ಕಣ್ಣಾರೆಕಂಡ ಯಶೋಧರ ಅತ್ಯಂತ ಖಿನ್ನನಾಗುವನು , ತಾಯಿ ಚಂದ್ರಮತಿದೇವಿ ಪರಿಪರಿಯಾಗಿ ಬೇಡಿಕೊಂಡಾಗ ಕಾರಣವನ್ನು ಹೇಳಲಾಗದೆ ಕಳೆದ ರಾತ್ರಿ ದುಸ್ವಪ್ನವೊಂದನ್ನು ಕಂಡದ್ದಾಗಿ ಹೇಳುವನು . ಸ್ವಪ್ನದೋಷ ನಿವಾರಣೆಗಾಗಿ ಪ್ರಾಣಿಬಲಿಯನ್ನು ಕೊಡಲು ಒಪ್ಪದೇ ತಾಯಿಯ ಸಮಾಧಾನಕ್ಕಾಗಿ ಹಿಟ್ಟಿನಿಂದ ಮಾಡಿದ ಕೋಳಿಯೊಂದನ್ನು ಬಲಿಕೊಡಲು ಒಪ್ಪುವನು . ಹಿಟ್ಟಿನ ಕೋಳಿಯನ್ನು ಬಲಿಕೊಟ್ಟಾಗ ಆದರೊಳಗೆ ಅಡಗಿದ್ದ ಬೆಂತರವೊಂದು ಕೂಗಿ ಅಸುನೀಗಿತು . ಇದರಿಂದ ಮತ್ತೂ ಯಶೋಧರ , ಮಗನಾದ ಯಶೋಮತಿಗೆ ಪಟ್ಟಕಟ್ಟಿ ಕಾಡಿಗೆ ತಪಕ್ಕೆ ಹೊರಡಲು ಅನುವಾಗುವನು . ವಿಷಯ ತಿಳಿದ ಅಮೃತಮತಿಯು , ಗಂಡ ಹಾಗೂ ಅತ್ತೆಯನ್ನು ವಿಷವಿಕ್ಕಿ ಕೊಲ್ಲುವಳು .
ಸತ್ತ ಯಶೋಧರ – ಚಂದ್ರಮತಿಯರು ಮುಂದಿನ ಜನ್ಮಗಳಲ್ಲಿ ನವಿಲು – ನಾಯಿ , ಹಾವು ಮುಳ್ಳುಹಂದಿ , ಮೀನು – ಮೊಸಳೆ , ಆಡು – ಹೋತ ಮತ್ತು ಕೋಣ – ಹೋತಗಳಾಗಿ ಕಡೆಗೆ ಕೋಳಿ ಪಿಳ್ಳೆಗಳಾಗಿ ಜನಿಸುವರು . ಒಮ್ಮೆ ಅಕಂಪನಮುನಿಯ ಉಪದೇಶವನ್ನು ಕೇಳಿದ ಕೋಳಿಗಳು ಜ್ಞಾತಿಸ್ಮರಗಳಾಗಿ ವ್ರತವನ್ನು ಆಚರಿಸಿ , ಹರ್ಷದಿಂದ ಕಲೆತಾಗ , ವನವಿಹಾರಕ್ಕೆ ಹೋಗಿದ್ದ ಯಶೋಮತಿಯ ಬಾಣಕ್ಕೆ ತುತ್ತಾಗುವುವು ಬಳಿಕ ಯಶೋಮತಿಯ ಪತ್ನಿ ಕುಸುಮಾವಳಿಯ ಮಕ್ಕಳಾಗಿ ಹುಟ್ಟುವುವು . ಆ ಅವಳಿ ಮಕ್ಕಳೇ ಅಭಯರುಚಿ ಮತ್ತು ಅಭಯಮತಿ , ಅವರು ಮುಂದೆ ಸುದತ್ತಾಚಾರರಲ್ಲಿ ಶಿಷ್ಯವೃತ್ತಿಯನ್ನು ಸ್ವೀಕರಿಸಿದರು .
kseeb solutions for class 9th kannada
9ನೇ ತರಗತಿ ಬಲಿಯನಿತ್ತೊಡೆ ಮುನಿವೆಂ ಪದ್ಯದ ಪ್ರಶ್ನೆ ಉತ್ತರಗಳು ನೋಟ್ಸ್ PDF ಅನ್ನು ಈ ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ. ನೀವು ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು 9th Standard ಬಲಿಯನಿತ್ತೊಡೆ ಮುನಿವೆಂ ಪದ್ಯದ Pdf ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು.
9th standard kannada Baliyanittode munivem question answer
ಆತ್ಮೀಯ ವಿಧ್ಯಾರ್ಥಿಗಳೇ, ಇಲ್ಲಿ ನಾವು 9ನೇ ತರಗತಿಯ ಬಲಿಯನಿತ್ತೊಡೆ ಮುನಿವೆಂ ಪದ್ಯದ ನೋಟ್ಸ್ Pdf ನ್ನು ಈ ಕೆಳಗೆ ನೀಡಿರುತ್ತೇವೆ. 9ನೇ ತರಗತಿಯ ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು Baliyanittode munivem ಪದ್ಯದ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳು ವ್ಯಾಕರಣಾಂಶ ಮತ್ತು ಭಾಷಾ ಚಟುವಟಿಕೆ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿದ್ದೇವೆ. 9ನೇ ತರಗತಿಯ ಬಲಿಯನಿತ್ತೊಡೆ ಮುನಿವೆಂ ಪದ್ಯದ ಕನ್ನಡ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
9th Baliyanittode munivem Poem Notes Pdf Download
PDF Name | 9th Standard ಬಲಿಯನಿತ್ತೊಡೆ ಮುನಿವೆಂ ಪದ್ಯದ ನೋಟ್ಸ್ Pdf |
No. of Pages | 10 |
PDF Size | 166KB |
Language | 9ನೇ ತರಗತಿ ಕನ್ನಡ ಮಾಧ್ಯಮ |
Category | ಸಿರಿ ಕನ್ನಡ |
Download Link | Available ✓ |
Topics | 9th Standard Baliyanittode munivem ಪದ್ಯದ ನೋಟ್ಸ್ Pdf |
Baliyanittode munivem kannada poem 9th standard notes
ಇಲ್ಲಿ ನೀವು 9th Standard ಬಲಿಯನಿತ್ತೊಡೆ ಮುನಿವೆಂ ಪದ್ಯದ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 9ನೇ ತರಗತಿ Baliyanittode munivem ಪದ್ಯದ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.
Download NowFAQ:
ಅಭಯರುಚಿಯ ಸಹೋದರಿಯ ಹೆಸರೇನು?
ಅಭಯರುಚಿಯ ಸಹೋದರಿಯ ಹೆಸರು ಅಭಯಮತಿ.
ಅಭಯರುಚಿ ಮತ್ತು ಅಭಯಮತಿಯರನ್ನು ಸೆರೆಹಿಡಿದುದು ಯಾವಾಗ?
ಅಭಯರುಚಿ ಮತ್ತು ಅಭಯಮತಿಯರನ್ನು ಸೆರೆಹಿಡಿದಿದ್ದು ಅವರು ಚರಿಗೆಗೆ (ಭಿಕ್ಷೆಟಾನೆಗೆ) ಬಂದಾಗ ಸೆರೆಹಿಡಿದರು.
ಇತರೆ ವಿಷಯಗಳು :
9th Standard All Chapters Hindi Notes Pdf
9th Standard Science Notes Pdf
9th Class All Chapter English Notes Pdf: