10ನೇ ತರಗತಿ ಕನ್ನಡ ಕೌರವೇಂದ್ರನ ಕೊಂದೆ ನೀನು ನೋಟ್ಸ್ | 10th Standard Kannada Kouravendrana Konde Neenu Notes

10ನೇ ತರಗತಿ ಕನ್ನಡ ಕೌರವೇಂದ್ರನ ಕೊಂದೆ ನೀನು ಪ್ರಶ್ನೋತ್ತರಗಳು ನೋಟ್ಸ್, 10th Standard Kouravendrana Konde Neenu Kannada Notes Question Answer mcq questions Pdf Download 2023

ಕವಿ ಪರಿಚಯ :

ಕುಮಾರವ್ಯಾಸ

ಕುಮಾರವ್ಯಾಸ ಎಂದು ಪ್ರಸಿದ್ಧನಾಗಿರುವ ಗದುಗಿನ ನಾರಣಪ್ಪನು ಕ್ರಿ . ಶ.ಸುಮಾರು ೧೪೩೦ ರಲ್ಲಿ ಗದಗ ಪ್ರಾಂತ್ಯದ ಕೋಳಿವಾಡದಲ್ಲಿ ಜನಿಸಿದನು .

* ಇವನು ಕರ್ನಾಟ ಭಾರತ ಕಥಾ ಮಂಜರಿ ಮತ್ತು ಐರಾವತ ಎಂಬ ಕೃತಿಗಳನ್ನು ರಚಿಸಿದ್ದಾನೆ .

* ಈತನು ತನ್ನ ಕೃತಿಯಲ್ಲಿ ರೂಪಕಾಲಂಕಾರವನ್ನು ಹೆಚ್ಚಾಗಿ ಬಳಸಿದ್ದರಿಂದ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಬಿರುದನ್ನು ಪಡೆದಿದ್ದಾನೆ .

* ಕರ್ನಾಟ ಭಾರತ ಕಥಾ ಮಂಜರಿ ಕೃತಿಯನ್ನು ಕನ್ನಡಭಾರತ , ಗದುಗಿನ ಭಾರತ , ಕುಮಾರವ್ಯಾಸ ಭಾರತ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ .

Kouravendrana Konde Neenu Kannada Notes Question Answer

ಆ ] ಒಂದು ವಾಕ್ಯದಲ್ಲಿ ಉತ್ತರಿಸಿ ,

1. ಅಶ್ವಿನೀದೇವತೆಗಳ ವರಬಲದಿಂದ ಜನಿಸಿದವರು ಯಾರು ?

ಅಶ್ವಿನೀದೇವತೆಗಳ ವರಬಲದಿಂದ ಜನಿಸಿದವರು ನಕುಲ ಮತ್ತು ಸಹದೇವ .

2. ಕುಮಾರವ್ಯಾಸನಿಗೆ ಇರುವ ಬಿರುದು ಯಾವುದು ?

ಕುಮಾರವ್ಯಾಸನಿಗೆ ‘ ರೂಪಕ ಸಾಮ್ರಾಜ್ಯ ಚಕ್ರವರ್ತಿ ‘ ಎಂಬ ಬಿರುದು ಇದೆ .

3. ಶ್ರೀಕೃಷ್ಣನು ಕರ್ಣನನ್ನು ರಥದಲ್ಲಿಹೇಗೆ ಕೂರಿಸಿಕೊಂಡನು ?

ಶ್ರೀಕೃಷ್ಣನು ಕರ್ಣನ ಸಂಗಡ ಮೈದುನತನದ ಸರಸವನ್ನು ಮಾಡಿ , ಕೈಹಿಡಿದು ಎಳೆದು ರಥದ ಪೀಠದಲ್ಲಿ ಕೂರಿಸಿದನು .

4. ಕುಮಾರ ವ್ಯಾಸನ ಆರಾಧ್ಯ ದೈವ ಯಾರು ?

ಕುಮಾರವ್ಯಾಸನ ಆರಾಧ್ಯ ದೈವ ಗದುಗಿನ ವೀರನಾರಾಯಣ

5. ನಾರಣಪ್ಪನಿಗೆ ಕುಮಾರವ್ಯಾಸ ಎಂಬ ಹೆಸರು ಏಕೆ ಬಂತು ?

ನಾರಣಪ್ಪನು ವ್ಯಾಸರ ಮಹಾಭಾರತವನ್ನು ಕನ್ನಡದಲ್ಲಿ ಕರ್ನಾಟ ಭಾರತ ಕಥಾಮಂಜರಿ ಎಂಬ ಕೃತಿ ರಚಿಸಿದ್ದರಿಂದ ಸಂಸ್ಕೃತ ಕುಮಾರವ್ಯಾಸ ಎಂಬ ಹೆಸರು ಬಂದಿತು .

ಆ ] ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ .

1. ಕೃಷ್ಣನು ಆಮಿಷಗಳನ್ನು ಒಡ್ಡಿದಾಗ ಕರ್ಣನಮನದಲ್ಲಿ ಮೂಡಿದ ಭಾವನೆಗಳೇನು ?

ಕೃಷ್ಣನು ಕರ್ಣನಿಗೆ ಆಮಿಷಗಳನ್ನು ಒಡ್ಡಿದಾಗ ಕೊರಳಸೆರೆಹಿಗ್ಗಿದವು , ಕಂಬನಿಯು ರಭಸದಿಂದಮುಂದೆ ಬಂದು , ಅಧಿಕವಾಗಿ ಕರ್ಣನು ದುಃಖಗೊಂಡು ಮನದೊಳಗೆ “ ಅಯ್ಯೋ , ದುರ್ಯೋಧನನಿಗೆ ಕೇಡಾಯಿತು ” ಎಂದನು . ಹರಿಯ ಹಗೆತನವು ಹೊಗೆ ತೋರದೆ ಸುಟ್ಟುಹಾಕುವುದಲ್ಲದೆ ಸುಮ್ಮನೆ ಹೋಗುವುದೆ . ಕೃಷ್ಣನು “ ನನ್ನವಂಶದ ರಹಸ್ಯವನ್ನು ತಿಳಿಸಿ ನನ್ನನ್ನು ಕೊಂದನು ” ಎಂದು ಮನದಲ್ಲಿ ನೊಂದುಕೊಂಡನು .

2. ಕೃಷ್ಣನು ಕೌರವೇಂದ್ರನನ್ನು ಕೊಂದನು ಎಂದು ಕರ್ಣಹೇಳಲು ಕಾರಣವೇನು ?

ಕರ್ಣನು ಕೃಷ್ಣನಿಗೆ “ ನಾನು ರಾಜ್ಯದ ಸಿರಿಸಂಪತ್ತಿಗೆ ಸೋಲುವವನಲ್ಲ . ಪಾಂಡವರು ಕೌರವರು ಸೇವೆಯನ್ನು ಮಾಡುವುದು ನನಗೆ ಇಷ್ಟವಿಲ್ಲ . ಆದರೆ ನನ್ನನ್ನು ಕಾಪಾಡಿದ ಒಡೆಯನಾದ ದುರ್ಯೋಧನನಿಗೆ ಶತ್ರುಗಳ ಶಿರವನ್ನು ಕಡಿದು ತಂದು ಒಪ್ಪಿಸುವ ಆವೇಶದಲ್ಲಿ ಇದ್ದೆನು.ಆದರೆ ನೀನು ನನ್ನ ಜನ್ಮ ರಹಸ್ಯವನ್ನು ತಿಳಿಸಿ ದುರ್ಯೋಧನನ್ನು ಕೊಂದೆ ” ಎಂದನು .

3. ಕೃಷ್ಣನು ಕರ್ಣನಮನದಲ್ಲಿ ಯಾವ ರೀತಿಯಲ್ಲಿಭಯವನ್ನು ಬಿತ್ತಿದನು ?

“ ಕರ್ಣ ನಿಮಗೂ ( ಪಾಂಡವರಿಗೂ ) ಯಾದವ ಕೌರವರಿಗೂ ವಂಶ ಗೌರವದಲ್ಲಿ ಭೇದವಿಲ್ಲ . ನೀನು ನಿಜವಾಗಿ ಭೂಮಿಯ ಒಡೆಯ.ಆದರೆ ನಿನಗೆ ಮನದಲ್ಲಿ ಅದರ ಅರಿವಿಲ್ಲ ” ಎಂದು ಹೇಳುತ ಕೃಷ್ಣನು ಕರ್ಣನ ಕಿವಿಯಲ್ಲಿಭಯವನ್ನು ಭಿತ್ತಿದನು .

4. ಕುಂತಿ , ಮಾದ್ರಿಯರು ಯಾರಾರ ಅನುಗ್ರಹದಿಂದ ಮಕ್ಕಳನ್ನು ಪಡೆದರು ?

ಕುಂತಿಯು ಯಮಧರ್ಮನ ಅನುಗ್ರಹದಿಂದ ಧರ್ಮರಾಯನನ್ನು , ವಾಯುವಿನ ಅನುಗ್ರಹದಿಂದ ಭೀಮನನ್ನು ಇಂದನ ಅನುಗ್ರಹದಿಂದ ಅರ್ಜುನನ್ನು ಪಡೆದಳು . ಮಾದ್ರಿಯು ಅಶ್ವಿನೀದೇವತೆಗಳ ಅನುಗ್ರಹದಿಂದ ನಕುಲ ಸಹದೇವರನ್ನು ಪಡೆದಳು .

5. ಯುದ್ಧದ ವಿಚಾರದಲ್ಲಿ ಕರ್ಣನ ತೀರ್ಮಾನವೇನು ?

ಕರ್ಣನು ಕೃಷ್ಣನನ್ನು ಕುರಿತು “ ನಾಳಿನ ಕೌರವರ ಮತ್ತು ಪಾಂಡವರ ಚತುರಂಗ ಬಲದ ನಡುವಿನ ಯುದ್ಧವು ಮೃತ್ಯುದೇವತೆಗೆ ಭೋಜನ ಕೂಟ ಆಗುವುದು . ನಾನು ಕೌರವನ ಉಪಕಾರದ ಋಣ ತೀರಿಸುವಂತೆ ಹೋರಾಡಿ , ಯುದ್ಧರಂಗದಲ್ಲಿ ಲೆಕ್ಕವಿಲ್ಲದಷ್ಟು ವೀರಯೋಧರನ್ನು ಕೊಂದು , ನನ್ನ ಒಡೆಯನಿಗಾಗಿ ಪ್ರಾಣವನ್ನು ಬಿಡುವೆನು . ಸೂರ್ಯನ ಮೇಲಾಣೆ ಪಾಂಡವರನ್ನು ನೋಯಿಸೆನು ” ಎಂದನು .

ಇ ] ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .

1. ಪಾಂಡವರು ಸೋದರರೆಂದು ತಿಳಿದಾಗ ಕರ್ಣನ ಮನಸ್ಥಿತಿಯನ್ನು ತಿಳಿಸಿ .

ಕೃಷ್ಣನು ಕರ್ಣನಿಗೆ ಆಮಿಷಗಳನ್ನು ಒಡ್ಡಿದಾಗ ಕೊರಳಸೆರೆಹಿಗ್ಗಿದವು . ಕಂಬನಿಯು ರಭಸದಿಂದ ಮುಂದೆ ಬಂದು , ಅಧಿಕವಾಗಿ ಕರ್ಣನು ದುಃಖಗೊಂಡು ಮನದೊಳಗೆ “ ಅಯ್ಯೋ , ದುರ್ಯೋಧನನಿಗೆ ಕೇಡಾದುದು ” ಎಂದನು . ತನ್ನ ಜನ್ಮ ರಹಸ್ಯ ತಿಳಿದಾಗ ಅವನಿಗೆ ಸಂತೋಷವಾಗುವುದಕ್ಕೆ ಬದಲಾಗಿ ದುಃಖ ಉಂಟಾಯಿತು . ಅವನಿಗೆ ತಾನು ಏನು ಮಾಡಬೇಕೆಂಬುದು ತಿಳಿಯದಾಯಿತು . ಆಗ ತನ್ನ ಮನಸ್ಸಿನಲ್ಲಿ ಚಿಂತಿಸುತ್ತಾ ‘ ಹರಿಯ ಹಗೆತನವು ಹೊಗೆ ತೋರದೆ ಸುಟ್ಟುಹಾಕುವುದಲ್ಲದೆ : ಸುಮ್ಮನೆ ಹೋಗುವುದೇ ? ಕೃಷ್ಣನು “ ನನ್ನ ವಂಶದ ರಹಸ್ಯವನ್ನು ತಿಳಿಸಿ ನನ್ನನ್ನು ಕೊಂದನು ” ಎಂದು ಮನದಲ್ಲಿ ನೊಂದುಕೊಂಡನು . “ ಮುರುಳು ಮಾಧವ , ನಾನು ರಾಜ್ಯದ ಸಿರಿಸಂಪತ್ತಿಗೆ ಸೋಲುವವನಲ್ಲ , ಪಾಂಡವರು ಕೌರವರು ಸೇವೆಯನ್ನು ಮಾಡುವುದು ನನಗೆ ಇಷ್ಟವಿಲ್ಲ . ಆದರೆ ನನ್ನನ್ನು ಕಾಪಾಡಿದ ಒಡೆಯನಾದ ದುರ್ಯೋಧನನಿಗೆ ಶತ್ರುಗಳ ಶಿರವನ್ನು ಕಡಿದು ತಂದು ಒಪ್ಪಿಸುವ ಆವೇಶದಲ್ಲಿ ಇದ್ದೆನು . ಆದರೆ ನೀನು ನನ್ನ ಜನ್ಮ ರಹಸ್ಯವನ್ನು ತಿಳಿಸಿ ದುರ್ಯೋಧನನ ಕೊಂದೆ ” ಎಂದು ಪರಿತಪಿಸುತ್ತಾ ” ನಾನು ಕೌರವನ ಉಪಕಾರದ ಋಣ ತೀರಿಸುವಂತೆ ಹೋರಾಡಿ , ಯುದ್ಧರಂಗದಲ್ಲಿ ಲೆಕ್ಕವಿಲ್ಲದಷ್ಟು ವೀರಯೋಧರನ್ನು ಕೊಂದು , ನನ್ನ ಒಡೆಯನಿಗಾಗಿ ಪ್ರಾಣವನ್ನು ಬಿಡುವನು . ಸೂರ್ಯನ ಮೇಲಾಣೆ ಪಾಂಡವರನ್ನು ನೋಯಿಸೆನು ” ಎಂದನು .

2. ಕರ್ಣನ ನಿರ್ಧಾರ ಸರಿ ಎನ್ನುವಿರಾ ? ಏಕೆ ?

ಕೃಷ್ಣನು ಕರ್ಣನ ಜನ್ಮ ರಹಸ್ಯವನ್ನು ತಿಳಿಸುತ್ತಾ ಆತನನ್ನು ಸಕಲ ಸಾಮ್ರಾಜ್ಯಕ್ಕೆ ಚಕ್ರವರ್ತಿಯನ್ನಾಗಿ ಮಾಡುವುದಾಗಿ ತಿಳಿಸುತ್ತಾನೆ . ಸೂರನ ಅನುಗ್ರಹದಿಂದ ಜನಿಸಿದ ಕರ್ಣನನ್ನು ಮಗುವಾಗಿದ್ದಾಗ ಕುಂತಿಯು ನೀರಿನಲ್ಲಿ ತೇಲಿಬಿಟ್ಟಿದ್ದರಿಂದ ಅಂಬಿಗನ ಮನೆಯಲ್ಲಿ ಮಾತೃವಾತ್ಸಲ್ಯದಿಂದ ವಂಚಿತನಾಗಿ ಸೂತಪುತ್ರನಾಗಿ ಬೆಳೆಯ ಬೇಕಾಯಿತು . ಸೂತಪತ್ತನೆಂದು ಸಮಾಜದಲ್ಲಿ ಆತನ ಶಕ್ತಿ ಸಾಮರ್ಥ್ಯಕ್ಕೆ ಸೂಕ್ತವಾದ ಸ್ಥಾನಮಾನ ದೊರೆಯಲಿಲ್ಲ . ಅಂತಹ ಸಂದರ್ಭದಲ್ಲಿ ದುರ್ಯೋಧನ ಕರ್ಣನನ್ನು ಗೆಳೆಯನಾಗಿ ಸ್ವೀಕರಿಸಿ ಅಂಗರಾಜ್ಯದ ಅಧಿಪತಿಯನ್ನಾಗಿಸುತ್ತಾನೆ . ಆತನಿಗೆ ಒಂದು ಸ್ಥಾನ , ಗೌರವಗಳನ್ನು ದೊರಕಿಸಿಕೊಡುತ್ತಾನೆ . ಈ ಕಾರಣಗಳಿಂದ ಕರ್ಣನು ದುರ್ಯೋಧನನೇ ತನಗೆ ಒಡೆಯ , ಆತನ ಹಗೆಗಳು ನನಗೂ ಹಗೆಗಳೇ , ಆತನ ಅಭಿಮಾನ ನನ್ನ ಅಭಿಮಾನ , ದುರ್ಯೋಧನನ ಹಾದಿಯನ್ನೇ ಅನುಸರಿಸುತ್ತೇನೆ . ‘ ಯುದ್ಧದಲ್ಲಿ ನಿಜ ಪರಾಕ್ರಮದ ಶ್ರೇಷ್ಠತೆಯನ್ನು ತೋರಿಸುತ್ತೇನೆ ‘ ಎನ್ನುವುದು ಕರ್ಣನ ಜಾಯಮಾನಕ್ಕೆ ಸರಿಯಾಗಿಯೇ ಇದೆ . ಕೌರವನು ತನಗೆ ಮಾಡಿದ ಉಪಕಾರವನ್ನು ಯುದ್ಧರಂಗದಲ್ಲಿ ತೀರಿಸುತ್ತೇನೆ . ತಮ್ಮಂದಿರನ್ನು ನೋಯಿಸದೆ , ಸೈನ್ಯಬಲವನ್ನು ಮಾರಿಗೆ ಔತಣವನ್ನಾಗಿ ನೀಡಿ , ಅನ್ನದಾತನ ಋಣವನ್ನು ಮುಗಿಸಿ , ಶರೀರವನ್ನು ತ್ಯಜಿಸುತ್ತೇನೆ ‘ ಎಂಬ ಕರ್ಣನ ಮಾತು ಆತನ ಸ್ವಾಮಿ ಭಕ್ತಿಗೆ ಸಾಕ್ಷಿಯಾಗಿದೆ . ‘ ಸ್ಥಾನ , ಗೌರವ ಹಾಗೂ ಕೀರ್ತಿ ದೊರಕಿಸಿ ಕೊಟ್ಟ ಒಡೆಯನಿಗೆ ತನ್ನ ಪ್ರಾಣವನ್ನು ಸಮರ್ಪಿಸುವುದು ಧರ್ಮವೇ ಆಗಿದೆ ‘ ಎಂಬ ಕರ್ಣನ ನಿರ್ಧಾರ ಸರಿಯಾಗಿದೆ .

3. ಕರ್ಣನಿಗೆ ಶ್ರೀಕೃಷ್ಣನು ಒಡ್ಡಿದ ಆಮಿಷಗಳೇನು ?

“ ಕರ್ಣ ನಿಮಗೂ ಯಾದವ ಕೌರವರಿಗೂ ವಂಶ ಗೌರವದಲ್ಲಿ ಭೇದವಿಲ್ಲ . ನಿನ್ನಾಣೆ , ನೀನು ನಿಜವಾಗಿ ಭೂಮಿಯ ಒಡೆಯ . ಆದರೆ ನಿನಗೆ ಮನದಲ್ಲಿ ಅದರ ಅರಿವಿಲ್ಲ ” ಎಂದು ಹೇಳುತ್ತ ಕರ್ಣನ ಜನ್ಮವೃತ್ತಾಂತವನ್ನು ಹೇಳಿದ ಕೃಷ್ಣನು ‘ ನಿನ್ನನ್ನು ಹಸ್ತಿನಾಪುರದ ರಾಜ್ಯದ ರಾಜನನ್ನಾಗಿ ಮಾಡುವೆನು . ಪಾಂಡವ ಕೌರವ ರಾಜರು ನಿನ್ನನ್ನು ಓಲೈಸುವರು . ನಿನಗೆ ಎರಡು ವಂಶವು ಮರುಮಾತನಾಡದೆ ಸೇವೆಯನ್ನು ಮಾಡುವುವು . ನೀನು ದುರ್ಯೋಧನನ ಬಾಯೆಂಜಲಿಗೆ ಕೈಯೊಡ್ಡುವುದೇ ಹೇಳು . ಎಡಭಾಗದಲ್ಲಿ ಕೌರವೇಂದರ ಸಮೂಹ , ಬಲಭಾಗದಲ್ಲಿ ಪಾಂಡು ಮಕ್ಕಳ ಸಮೂಹ , ಮುಂದುಗಡೆ ಮಾದ , ಮಾಗಧ , ಯಾದವಾದಿಗಳು , ಮಧ್ಯದಲ್ಲಿ ನೀನು ರಾಜಸಭೆಯಲ್ಲಿ ಪ್ರಕಾಶಿಸುವ ಸೊಬಗನ್ನು ತೊರೆದು , ದುರ್ಯೋಧನ ಹೇಳಿದ ಮಾತಿಗೆಲ್ಲಾ ಒಡೆಯ ಪ್ರಸಾದ , ಅನುಗ್ರಹವಾಗಲಿ ‘ ಎಂಬುದು ನಿನಗೆ ಕಷ್ಟವಾಗುವುದಿಲ್ಲವೇ ? ” ಎಂದು ಆಮಿಷ ಒಡ್ಡಿದನು .

ಈ ] ಸಂದರ್ಭಾನುಸಾರ ಸ್ವಾರಸ್ಯ ಬರೆಯಿರಿ ,

1. “ ಬಾಯ್ಲೆಂಬುಲಕೆ ಕೈಯಾನುವರೆ ”

ಸಂದರ್ಭ : – ಕೃಷ್ಣನು ಪಾಂಡವ ಕೌರವರನಡುವೆ ಸಂಧಿ ಮಾಡಲುಹೋಗಿ , ವಿಫಲನಾಗಿ ಹಿಂದಿರುಗುವಾಗ ಕರ್ಣನನ್ನು ಜೊತೆಯಲ್ಲಿ ಕರೆದುಕೊಂಡು ಬಂದು , ಮೈದುನತನದ ಸರಸದಲ್ಲಿ ಮಾತನಾಡಿಸುವ ಸಂದರ್ಭದಲ್ಲಿ ಈ ಮಾತನ್ನು ಕೃಷ್ಣ ಕರ್ಣನಿಗೆ ಹೇಳುತ್ತಾನೆ .

ಸ್ವಾರಸ್ಯ : – ” ಕರ್ಣ ನೀನು ಹಸ್ತಿನಾಪುರದ ರಾಜನಾದರೆ ನಿನಗೆ ಕೌರವರು ಮತ್ತು ಪಾಂಡವರು ಸೇವೆಯನ್ನು ಮಾಡುವರು ಅದನ್ನು ಬಿಟ್ಟು ನೀನು ದುರ್ಯೋಧನನ ಬಾಯೆಂಜಲಿಗೆ ಕೈಯೊಡ್ಡುವುದು ಸರಿಯೇ ” ಎಂದು ಕೃಷ್ಣನು ಹೇಳಿರುವುದು ಸ್ವಾರಸ್ಯಪೂರ್ಣವಾಗಿದೆ .

2. “ ರವಿಸುತನ ಕಿವಿಯಲ್ಲಿ ಬಿತ್ತಿದನು ಭಯವ

ಆಯ್ಕೆ : – ಈ ವಾಕ್ಯವನ್ನು ಕುಮಾರವ್ಯಾಸನೆಂದು ಪ್ರಸಿದ್ಧನಾದ ಗದುಗಿನ ನಾರಣಪ್ಪನು ರಚಿಸಿರುವ ‘ ಕರ್ಣಾಟ ಭಾರತ ಕಥಾಮಂಜರಿ ‘ ಎಂಬ ಮಹಾಕಾವ್ಯದಿಂದ ಆಯ್ದ ‘ ಕೌರವೇಂದ್ರನ ಕೊಂದೆ ನೀನು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಸಂದರ್ಭ : – ಕೃಷ್ಣನು ಪಾಂಡವ ಕೌರವರನಡುವೆ ಸಂಧಿ ಮಾಡಲು ಹೋಗಿ , ವಿಫಲನಾಗಿ ಹಿಂದಿರುಗುವಾಗ ಕರ್ಣನನ್ನು ಜೊತೆಯಲ್ಲಿ ಕರೆದುಕೊಂಡು ಬಂದು , ಮೈದುನತನದ ಸರಸದಲ್ಲಿ ಮಾತನಾಡಿಸುವ ಸಂದರ್ಭದಲ್ಲಿ ಈ ಮಾತನ್ನು ಕವಿಯು ಹೇಳುತ್ತಾನೆ .

ಸ್ವಾರಸ್ಯ : – “ ಕರ್ಣ ನಿಮ್ಮಲ್ಲಿ , ಯಾದವರು ಕೌರವರಲ್ಲಿ ಭೇದವಿಲ್ಲ . ಹೇಳುವುದಾದರೆ ವಂಶದಲ್ಲಿ ಮೊದಲೆರಡಿಲ್ಲ ನಿನ್ನಾಣೆ , ರಾಜ ನೀನು , ಮನದಲ್ಲಿ ನಡೆದುದರ ಅರಿವಿಲ್ಲ ” ಎಂದು ಹೇಳುತ ಕೃಷ್ಣನು ಕರ್ಣನ ಕಿವಿಯಲ್ಲಿ ಉಭಯವನ್ನು ( ದ್ವಂದ್ವವನ್ನು ಬಿತ್ತಿದನು ಎಂದು ಕವಿಯು ಸ್ವಾರಸ್ಯಪೂರ್ಣವಾಗಿ ವರ್ಣಿಸುತ್ತಾನೆ .

3. “ ಜೀಯ ಹಸಾದವೆಂಬುದು ಕಿಂಷಂಡಿ ”

ಸಂದರ್ಭ : – ಕೃಷ್ಣನು ಪಾಂಡವ ಕೌರವರ ನಡುವೆ ಸಂಧಿ ಮಾಡಲು ಹೋಗಿ , ವಿಫಲನಾಗಿ ಹಿಂದಿರುಗುವಾಗ ಕರ್ಣನನ್ನು ಜೊತೆಯಲ್ಲಿ ಕರೆದುಕೊಂಡು ಬಂದು , ಮೈದುನತನದ ಸರಸದಲ್ಲಿ ಮಾತನಾಡಿಸುವ ಸಂದರ್ಭದಲ್ಲಿ ಈ ಮಾತನ್ನು ಕೃಷ್ಣನು ಕರ್ಣನಿಗೆ ಹೇಳುತ್ತಾನೆ .

ಸ್ವಾರಸ್ಯ : – “ ಕರ್ಣ ನಿನ್ನ ಎಡಗಡೆ ಕೌರವರು , ಬಲಗಡೆ ಪಾಂಡವರು , ಎದುರಿನಲ್ಲಿ ಮಾದ್ರ ಮಾಗಧ ಯಾದವಾದಿಗಳು ಇರುವಾಗ , ನೀನು ಓಲಗದಲ್ಲಿ ವಿಲಾಸದಿಂದ ಮೆರೆಯುವುದನ್ನು ಬಿಟ್ಟು , ಕೌರವನಿಗೆ ಜೀಯ ಪ್ರಸಾದವೆಂಬುದು ಕಷ್ಟವಾಗುವುದಿಲ್ಲವೇ ? ” ಎಂದು ಕೃಷ್ಣನು ಸ್ವಾರಸ್ಯಪೂರ್ಣವಾಗಿ ಹೇಳುತ್ತಾನೆ .

4 “ ಮಾರಿಗೌತಣವಾಯ್ತು ನಾಳಿನ ಭಾರತವು ”

ಸಂದರ್ಭ : – ಕೃಷ್ಣನು ಪಾಂಡವ ಕೌರವರ ನಡುವೆ ಸಂಧಿ ಮಾಡಲು ಹೋಗಿ , ವಿಫಲನಾಗಿ ಹಿಂದಿರುಗುವಾಗ ಕರ್ಣನನ್ನು ಜೊತೆಯಲ್ಲಿ ಕರೆದುಕೊಂಡು ಬಂದು , ಮೈದುನತನದ ಸರಸದಲ್ಲಿ ಮಾತನಾಡಿಸುವ ಸಂದರ್ಭದಲ್ಲಿ ಈ ಮಾತನ್ನು ಕರ್ಣನು ಕೃಷ್ಣನಿಗೆ ಹೇಳುತ್ತಾನೆ .

ಸ್ವಾರಸ್ಯ : – ಕರ್ಣನು ಮುಂದೆ ನಡೆಯುವ ಮಹಾಭಾರತ ಕುರುಕ್ಷೇತ್ರ ಯುದ್ಧದ ಭೀಕರತೆಯನ್ನು ಈ ಮಾತಿನಲ್ಲಿ ಬಹು ಸ್ವಾರಸ್ಯಪೂರ್ಣವಾಗಿದೆ.

೪. “ ನಿನ್ನಪದೆಸೆಯ ಬಯಸುವನಲ್ಲ”

ಸಂದರ್ಭ : – ಕೃಷ್ಣನು ಪಾಂಡವ ಕೌರವರ ನಡುವೆ ಸಂಧಿ ಮಾಡಲು ಹೋಗಿ , ವಿಫಲನಾಗಿ ಹಿಂದಿರುಗುವಾಗ ಕರ್ಣನನ್ನು ಜೊತೆಯಲ್ಲಿ ಕರೆದುಕೊಂಡು ಬಂದು , ಮೈದುನತನದ ಸರಸದಲ್ಲಿ ಮಾತನಾಡಿಸುವ ಸಂದರ್ಭದಲ್ಲಿ ಈ ಮಾತನ್ನು ಕೃಷ್ಣನು ಕರ್ಣನಿಗೆ ಹೇಳುತ್ತಾನೆ .

ಸ್ವಾರಸ್ಯ : – ತನ್ನಜನ್ಮ ರಹಸ್ಯವನ್ನು ಅರಿತು ಕರ್ಣನು ಮನದಲ್ಲಿ ಚಿಂತಿತನಾಗಿ ಮೌನವಾದಾಗ , ಕೃಷ್ಣನು ಈ ಮಾತನ್ನು ಹೇಳುವುದರ ಮೂಲಕ ಕರ್ಣನನ್ನು ಸಮಾಧಾನಪಡಿಸಿದ್ದು ಸ್ವಾರಸ್ಯಪೂರ್ಣವಾಗಿದೆ .

ಉ ] ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಉತ್ತರದಿಂದ ಪೂರ್ಣಗೊಳಿಸಿ . 

1 ) ರಾಜೀವಸಖ ಎಂದರೆ ಸೂರ್ಯ ಎಂದು ಅರ್ಥ . 

2 ) ಗದುಗಿನ ಭಾರತವು ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿದೆ .

3 ) ಅಶ್ವಿನೀದೇವತೆಗಳ ವರಬಲದಿಂದ ನಕುಲ – ಸಹದೇವರು ಜನಿಸಿದರು .

4 ) ಕರ್ಣನು ಸೂರ್ಯನ ಅನುಗ್ರಹದಿಂದ ಜನಿಸಿದನು . 

5 ) ಗದುಗಿನ ಸಮೀಪದ ಕೋಳಿವಾಡದಲ್ಲಿ ಕುಮಾರವ್ಯಾಸನು ಜನಿಸಿದನು .

ಭಾಷಾ ಚಟುವಟಿಕೆ

 ಅ). ಅಲಂಕಾರವನ್ನು ಹೆಸರಿಸಿ , ಸಮನ್ವಯಗೊಳಿಸಿ . 

“ ಮಾರಿಗೌತನವಾಯ್ತು ನಾಳಿನ ಭಾರತವು ” 

ಆಲಂಕಾರ : ರೂಪಕಾಲಂಕಾರ 

ಉಪಮೇಯ : ಭಾರತ ಯುದ್ಧ 

ಉಪಮಾನ : ಮಾರಿಯ ಔತಣ 

ಸಮನ್ವಯ : ಇಲ್ಲಿ ಉಪಮೇಯವಾಗಿರುವ ಭಾರತ ಯುದ್ದಕ್ಕೂ ಉಪಮಾನವಾರಿರುವ ಮಾರಿಯ ಔತಣಕ್ಕೂ ಅಭೇದ ಕಲ್ಪಿಸಲಾಗಿದೆ . ಆದ್ದರಿಂದ ಇದು ರೂಪಕಾಲಂಕಾರವಾಗಿದೆ .

ಆ). ವಿಗ್ರಹಿಸಿ , ಸಮಾಸದ ಹೆಸರನ್ನು ತಿಳಿಸಿ . 

1 ) ಇನತನೂಜ = ತನನ ತನೂಜನು ಯಾರೋ ಅವನೇ ( ಸೂರ್ಯ ) – ಬಹುವೀಹಿಸಮಾಸ 

2 ) ದನುಜರಿತು = ದನುಜರಿಗೆ ರಿಪ ( ವೈರಿ ) ಆಗಿರುವವನು ಯಾರೋ ಅವನೇ ( ವಿಷ್ಣು ಅಥವಾ ಕೃಷ್ಣ ) – ಬಹುವೀಹಿಸಮಾಸ 

3 ) ಮುರಾರಿ = ಮುರನಿಗೆ ಅರಿ ( ಶತ್ರು ) ಆದವನು ಯಾರೋ ಅವನೇ ( ವಿಷ್ಣು ಅಥವಾ ಕೃಷ್ಣ ಬಹುವೀಹಿ ಸಮಾಸ 

4 ) ಮೇದಿನಿಪತಿ = ಮೇದಿನಿಗೆ ( ಭೂಮಿಗೆ ) ಪತಿಯಾದವನು ( ಒಡೆಯನಾದವನು ) ಯಾರೋ ಅವನೇ – ಬಹುವೀಹಿಸಮಾಸ

5 ) ಕೈಯಾನು = ಕೈಯನ್ನು + ಆನು – ಕ್ರಿಯಾಸಮಾಸ . 

6 ) ಮಾದ್ರಮಾಗಧಯಾದವರು = ಮಾದರೂ + ಮಾಗಧರೂ + ಯಾದವರೂ – ದ್ವಂದ್ವ ಸಮಾಸ

7 ) ಹೊಗೆದೋರು = ಹೊಗೆಯನ್ನು + ತೋರು – ಕ್ರಿಯಾಸಮಾಸ

8 ) ರಾಜೀವಸಖ = ರಾಜೀವನಿಗೆ ( ತಾವರೆಗೆ ) ಸಖನಾದವನು ಯಾರೋ ಅವನೇ ( ಸೂರ್ಯ ) – ಬಹುವೀಹಿಸಮಾಸ

ಭಾಗ- ಬಿ 

ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ ಉತ್ತರನ್ನು ಆರಿಸಿ ಬರೆಯಿರಿ 

1. ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸುವ ಅಕ್ಷರವನ್ನು ಹೀಗೆ ಕರೆಯುತ್ತೇವೆ : 

ಎ) ಪುತ್ಲ ಡಿ) ಗುರು   ಸಿ ) ಲಘು  ಡಿ )ಗಣ 

2. ಕೈಯಾನು – ಪದವು ಈ ಸಮಾಸವಾಗಿದೆ : 

ಎ ) ಕ್ರಿಯಾಸಮಾಸ  ಬಿ ) ದ್ವಂದ್ವ ಸಮಾಸ  ಸಿ) ಬಹುರ್ವಿಸಮಾಸ ಡಿ)ತತ್ಪುರುಷಸಮಾಸ 

3. ಮಾದಮಾಗಧಯಾದವರು – ಇದು ಈ ಸಮಾಸಕ್ಕೆ 

ಎ ) ಅಂಶಿಸಮಾಸ  ಬಿ ) ತತ್ತರುಷಸಮಾಸ  ಸಿ)ದ್ವಿಗುಸಮಾಸ  ಡಿ)ದ್ವಂದ್ವಸಮಾಸ 

 4. ಹಸಾದ – ಪದದ ತತ್ಸಮ ರೂಪ : 

ಎ ) ವಿಷಾದ ಬಿ ) ಕೈಯಾನು  ಸಿ) ಪಸಾದ  ಡಿ)ಪ್ರಸಾದ 

5. ದೃಗುಜಲ ಪದದ ಅರ್ಥ ಇದಾಗಿದೆ :

ಎ ) ಕಣ್ಣನೀರು ಬಿ ) ತಿಳಿನೀರು ಸಿ) ಮೃಗಗಳು ಡಿ) ಬಿಸಿನೀರು 

6. ಬಹುವೀಹಿ ಸಮಾಸಕ್ಕೆ ಈ ಪದವು ಉದಾಹರಣೆಯಾಗಿದೆ : 

ಎ ) ಹೊಗೆದೋರು ಎ ) ಉಪಮಾಲಂಕಾರ  ಸಿ)ರಾಜೀವಸಖ ಡಿ)ಬಾಯ್ಡಂಬಲ 

7. ಭಾಮಿನಿ ಷಟ್ಟದಿಯಲ್ಲಿನ ಒಟ್ಟು ಮಾತ್ರೆಗಳ ಸಂಖ್ಯೆ : 

ಎ ) ೧೦೮ ಬಿ ) ೧೦೨   ಸಿ) ೬೪ ಡಿ) ೧೪೪

8. ದನುಜರಿಪು – ಇದು ಈ ಸಮಾಸಕ್ಕೆ ಉದಾಹರಣೆಯಾಗಿದೆ :

ಎ ) ಕ್ರಿಯಾಸಮಾಸ ಬಿ)ಬಹುರ್ವಿಸಮಾಸ  ಸಿ) ದ್ವಂದ್ವಸಮಾಸ ಡಿ) ತತ್ಪುರುಷಸಮಾಸ 

9. ಉಪಮಾನ ಉಪಮೇಯಗಳ ನಡುವೆ ಅಭೇದ ಸಂಬಂಧ ಕಲ್ಪಿಸುವ ಅಲಂಕಾರ : 

ಬಿ ) ರೂಪಕಾಲಂಕಾರ ಸಿ ) ದೃಷ್ಟಾಂತಾಲಂಕಾರ ಸಿ ) ‘ ಮನ’ಗಣ

10. ಗುರು – ಲಘು ಮೂರಿರಲು ಈ ಗಣವಾಗುತ್ತದೆ .

 ಎ ) ಭ-ಯಗಳಿ ಬಿ ) ‘ ಜ -ರ’ಗಣ ಸಿ)’ಮ -ನ’ ಗಣ   ಡಿ)’ಸ’ -’ತ ‘ಗಣ 

11. ಷಟ್ನದಿಯಲ್ಲಿರುವ ವಿಧಗಳು :

  ಎ ) ಆರು ಬಿ ) ಹಸನಾದ ಸಿ) ನಾಲ್ಕು ಡಿ)ಮೂರು 

12. ‘ ಕೌಂತೇಯ ‘ – ಪದವು ಈ ಅಕ್ಷರಗಣಕ್ಕೆ ಉದಾಹರಣೆಯಾಗಿದೆ :

 ಎ ) ‘ ಯ’ಗಳಿ ಬಿ ) ‘ ಸ’ಗಳಿ ಸಿ ) ‘ತ  ‘ ಗಣ ಡಿ)’ಭ ‘ಗಣ  

13 , ಒಂದು ಅಕ್ಷರವನ್ನು ಉಚ್ಚರಿಸುವ ಅವಧಿಗೆ ಹೀಗೆನ್ನುತ್ತಾರೆ :

 ಎ ) ಗಣ ಬಿ ) ಮಾತ್ರೆ  ಸಿ )ಭೋಗ  ಡಿ ) ಭಾಮಿನಿ  

14 .ಮೂರು – ನಾಲ್ಕು ಮಾತ್ರೆಗಳಿಂದ ಗಣವಿಭಜನೆಯನ್ನು ಮಾಡುವ ಷಟ್ಟದಿ : 

ಎ ) ವಾರ್ಧಕ ಬಿ ) ಕುಸುಮ ಸಿ ) ಭೋಗ   ಡಿ ) ಭಾಮಿನಿ 

15. ಉರವಣಿಸು – ಈ ಪದದ ಅರ್ಥ : 

 ಎ . ಹೆಚ್ಚಾಗು  ಬಿ)ಅವಸರ  ಸಿ)ಮನಸ್ಸು ಡಿ)ಕಡಿಮೆಯಾಗು 

 ಉತ್ತರಗಳು : ೧. ಬಿ , ಗುರು  ೨. ಎ . ಕ್ರಿಯಾಸಮಾಸ   ೩. ಡಿ . ಬಿ ) ದ್ವಂದ್ವ ಸಮಾಸ  ೪.ಡಿ ) ಪ್ರಸಾದ  ೫ . ಎ ) ಕಣ್ಣನೀರು ೬. ಸಿ)ರಾಜೀವಸಖ

೭ .ಬಿ ) ೧೦೨ ೮.ಬಿ) ಬಹುರ್ವಿಸಮಾಸ ೯ .ಬಿ ) ರೂಪಕಾಲಂಕಾರ ೧೦ . ಸಿ)’ಮ -ನ’ ಗಣ  ೧೧.ಎ ) ಆರು  ೧೨.  ಸಿ ) ‘ತ  ‘ ಗಣ ೧೩. ಬಿ ) ಮಾತ್ರೆ 

೧೪ .  ಡಿ ) ಭಾಮಿನಿ   ೧೫.  ಎ . ಹೆಚ್ಚಾಗು

ಮೊದಲೆರೆಡು ಪದಗಳಿಗಿರುವ ಸಂಬಂಧದಂತೆ ಮೂರನೇ ಪದಕ್ಕೆ ಸಂಬಂಧ ಬರೆಯಿರಿ :

1. ಕಂದಪದ್ಯ ::  ನಾಲ್ಕುಸಾಲು : : ಷಟ್ಟದಿ: _________

2 . ಋಣ  ::    ಹಂಗು   ::ರಣ: _______

3. ಲಕ್ಷ್ಮೀಶ  :: ಷಟ್ಪದಿ   ::ಕುಮಾರವ್ಯಾಸ :___________

4. ಪಟ್ಟದಿ    ::   ಮಾತ್ರಾಗಣ : :   ಚಂಪಕಮಾಲಾವೃತ್ತ: _______

5 . ಇನತನೂಜ    ::    ಬಹುರ್ವಿಸಮಾಸ   ::   ಮದ್ರಾಮಾಗಧಯದವರು: ____

6. ಲಕ್ಶ್ಮೀಶ       :    :ಉಪಮಾಲೋಲ   ::   ಕುಮಾರವ್ಯಾಸ: _________

7.ಉರ್ವಿಯೊಳ್    ::  ಸಪ್ತಮಿಸಮಾಸ ::ಸಮಾಜಿಯಂ :ಪಿ__________

8. ಲಘು       ::      ಒಂದುಮಾತ್ರೆ     :: ಗುರು: ______

9. ಮುರಾರಿ::ಕೃಷ್ಣ : :ರವಿಸುತ :______

10.ಹಸಾದ ::ಪ್ರಸಾದ : : ದಾತಾರ : ದ್ವಿಗುಸಮಾಸ: ________

ಉತ್ತರಗಳು : ೧ . ಆರುಸಾಲು  ೨. ಯುದ್ಧ    ೩. ಭಾಮಿನೀಷಟ್ಪದಿ  

೪. ಅಕ್ಷರಗಣ    ೫. ದ್ವಂದ್ವಸಮಾಸ    ೬. ರೂಪಕಸಾಮ್ರಾಜ್ಯಚಕ್ರವರ್ತಿ ೭ .ದ್ವಿತೀಯ      . ಎರೆಡು ಮಾತ್ರೆ   ೯.ಕರ್ಣ  ೧೦.ದಾತೃ

10th Standard Kouravendrana Konde Neenu Kannada Notes Pdf Download

ಇತರೆ ಪದ್ಯಗಳು :

ಹಲಗಲಿ ಬೇಡರು ಕನ್ನಡ ನೋಟ್ಸ್

ಹಕ್ಕಿ ಹಾರುತಿದೆ ನೋಡಿದಿರಾ ಕನ್ನಡ ನೋಟ್ಸ್

Leave your vote

24 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.