ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್! ತುಟ್ಟಿಭತ್ಯೆ (Dearness Allowance – DA) ಏರಿಕೆ ಸಂಬಂಧ ಹೊಸ ಮಾಹಿತಿ ಹೊರಬಿದ್ದಿದ್ದು, ಈ ಕುರಿತು ಸರ್ಕಾರಿ ನೌಕರರ ಸಂಘ ಅಪ್‌ಡೇಟ್ ನೀಡಿದೆ.ಸಂಪೂರ್ಣ ಲೇಖನವನ್ನು ಕೊನೆವರೆಗೆ ನೋಡಿ !
Table of Contents
ತುಟ್ಟಿಭತ್ಯೆ ಏರಿಕೆಯ ಬಗ್ಗೆ ಹಿನ್ನೆಲೆ:
- ಕೇಂದ್ರ ಸರ್ಕಾರದ ಮಾಹಿತಿ :
ಕೇಂದ್ರ ಸರ್ಕಾರವು ದೀಪಾವಳಿ ಹಬ್ಬದ ಮುನ್ನವೇ ತನ್ನ ನೌಕರರಿಗೆ ತುಟ್ಟಿಭತ್ಯೆ ಹಾಗೂ ತುಟ್ಟಿ ಪರಿಹಾರ (Dearness Relief – DR) ಹೆಚ್ಚಳ ಘೋಷಿಸಿತ್ತು.
ಇದರ ಬೆನ್ನಲ್ಲೇ, ರಾಜ್ಯ ಸರ್ಕಾರವು ತನ್ನ ನೌಕರರ ತುಟ್ಟಿಭತ್ಯೆ ಏರಿಕೆ ಕುರಿತು ನಿರೀಕ್ಷೆ ಮೂಡಿಸಿತು. - ರಾಜ್ಯ ಸರ್ಕಾರದ ವಿಳಂಬ:
ನವೆಂಬರ್ ಮೊದಲ ವಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ನೌಕರರ ಸಂಘ ಮನವಿ ಸಲ್ಲಿಸಿದರೂ ಈ ಸಂಬಂಧ ಯಾವುದೇ ಅಧಿಕೃತ ಆದೇಶ ಹೊರಬಿದ್ದಿರಲಿಲ್ಲ.
ನೌಕರರ ಸಂಘದ ತೀರ್ವ ಹೋರಾಟ:
- ಪತ್ರ ಬರೆದ ಅಧ್ಯಕ್ಷ:
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಬಾಕಿ ತುಟ್ಟಿಭತ್ಯೆಯನ್ನು ನಗದು ರೂಪದಲ್ಲಿ 01-07-2024 ರಿಂದ ಅನ್ವಯಿಸುವಂತೆ ಒತ್ತಾಯಿಸಿದ್ದಾರೆ. - ನೀಡಲಾದ ಭರವಸೆ:
ಈ ಕುರಿತು ಎಲ್. ಕೆ. ಅತೀಕ್ ಅವರ ನೇತೃತ್ವದಲ್ಲಿ ಸಂಘದ ನಿಯೋಗವು ಆರ್ಥಿಕ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿ ಸ್ಪಷ್ಟನೆ ಪಡೆಯಿತು.
ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆ 15ನೇ ಕಂತಿನ ಹಣ ಬಿಡುಗಡೆ! ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ನೋಡಿ
ಹೊಸ ಮಾಹಿತಿ :
ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ ಮಾಹಿತಿ:
- ಟೆಲಿಗ್ರಾಮ್ ಗ್ರೂಪ್ನಲ್ಲಿ ಪೋಸ್ಟ್:
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವೇದಿಕೆಯಲ್ಲಿ, ಸಿ. ಎಸ್. ಷಡಾಕ್ಷರಿಯವರ ಹೆಸರಿನಲ್ಲಿ, ನವೀಕೃತ ಮಾಹಿತಿಯನ್ನು ಪೋಸ್ಟ್ ಮಾಡಲಾಗಿದೆ. - ಅಧಿಕೃತ ಆದೇಶದ ನಿರೀಕ್ಷೆ:
ಈ ಪೋಸ್ಟ್‌ನಲ್ಲಿ ಮುಖ್ಯಮಂತ್ರಿಗಳ ಸ್ಪಂದನೆ ಸಕಾರಾತ್ಮಕವಾಗಿದೆ ಎಂಬುದು ತಿಳಿದುಬಂದಿದೆ. ತುಟ್ಟಿಭತ್ಯೆ ಏರಿಕೆ ಕುರಿತು ಅಧಿಕೃತ ಆದೇಶವನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ಹೇಳಲಾಗಿದೆ.
ಸಭೆಯ ನಿರ್ಣಾಯಕ ಕ್ಷಣ:
- ಮಂತ್ರಿ ಮಂಡಳಿಯ ಸಭೆ:
ನವೆಂಬರ್ 28ರಂದು, ವಿಧಾನ ಸೌಧದಲ್ಲಿ ಮಧ್ಯಾಹ್ನ 3 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ.
ಈ ಸಭೆಯಲ್ಲಿ ತುಟ್ಟಿಭತ್ಯೆ ಏರಿಕೆ ಕುರಿತ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
ರಾಜ್ಯ ಸರ್ಕಾರಿ ನೌಕರರು ಈ ನಿರೀಕ್ಷಿತ ಹೆಚ್ಚಳದಿಂದ ಉತ್ಸಾಹಿತರಾಗಿದ್ದಾರೆ. ಸರ್ಕಾರ ಈ ಸಂಬಂಧ ತೀರ್ಮಾನ ಕೈಗೊಂಡು ಆದೇಶ ಹೊರಡಿಸಿದರೆ ನೌಕರರ ತುಂಬ ಖುಷಿ ಆಗುತ್ತೆ . ಈ ಲೇಖನವನ್ನು ಎಲ್ಲಾ ಸರ್ಕಾರಿ ನೌಕರರಿಗೂ ಶೇರ್ ಮಾಡಿ ಧನ್ಯವಾದಗಳು
ಇತರೆ ವಿಷಯಗಳು :
- ಸ್ವಾವಲಂಬಿ ಸಾರಥಿ ಯೋಜನೆ: ವಾಹನ ಖರೀದಿಗೆ ಸಹಾಯಧನ ಪ್ರತಿಯೊಬ್ಬರು ಅರ್ಜಿ ಸಲ್ಲಿಸಿ
- ಕರ್ನಾಟಕ ಬ್ಯಾಂಕ್ ನೇಮಕಾತಿ : ₹24,050 ಸಂಬಳ ತಕ್ಷಣ ಅರ್ಜಿ ಸಲ್ಲಿಸಿ