10ನೇ ತರಗತಿ ಹಕ್ಕಿ ಹಾರುತಿದೆ ನೋಡಿದಿರಾ ಪ್ರಶ್ನೆ ಉತ್ತರ ನೋಟ್ಸ್ , 10th Class Hakki Harutide Nodidira Kannada Poem Notes Question Answer Mcq Questions Pdf Download 2023
ತರಗತಿ :10ನೇ ತರಗತಿ
ಪದ್ಯದ ಹೆಸರು : ಹಕ್ಕಿ ಹಾರುತಿದೆ ನೋಡಿದಿರಾ
ಕೃತಿಕಾರರ ಹೆಸರು : ದ.ರಾ.ಬೇಂದ್ರೆ
Table of Contents
hakki harutide nodidira notes
ಕವಿ ಪರಿಚಯ:
ದ.ರಾ.ಬೇಂದ್ರೆ
ಅ೦ಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ದತ್ತಾತ್ರೇಯರಾಮಚಂದ್ರ ಬೇಂದ್ರೆಯವರು ಕ್ರಿ.ಶ ೧೮೯೬ರಲ್ಲಿ ಧಾರವಾಡದಲ್ಲಿ ಜನಿಸಿದರು.ನವೋದಯ ಕನ್ನಡ ಸಾಹಿತ್ಯದ ಪ್ರಮುಖ ಕವಿಗಳಲ್ಲಿಒಬ್ಬರಾದ ದ.ರಾ. ಬೇಂದ್ರೆ ಅವರು ಗರಿ, ಕೃಷ್ಣಕುಮಾರಿ, ಉಯ್ಯಾಲೆ, ಸಖೀಗೀತ, ನಾದಲೀಲೆ, ಮೇಘದೂತ, ಗಂಗಾವತರಣ,ಸರ‍್ಯಪಾನ,ನಗೆಯ ಹೊಗೆ, ಸಾಹಿತ್ಯದವಿರಾಟ್ ಸ್ವರೂಪ ಮೊದಲಾದ ಕೃತಿಗಳನ್ನುರಚಿಸಿದ್ದಾರೇ ಇವರ ಅರಳು-ಮರಳು ಕವನ ಸಂಕಲನಕ್ಕೆ ‘ಕೇಂದ್ರ ಸಾಹಿತ್ಯ ಅಕಾಡೆಮೆಪ್ರಶಸ್ತಿ , ನಾಕುತಂತಿ ಕವನ ಸಂಕಲನಕ್ಕೆ ‘ಜ್ಞಾನಪೀಠಪ್ರಶಸ್ತಿ’ ಲಭಿಸಿದೆ.
10th Hakki Harutide Nodidira Notes Question Answer
ಅ ] ಒಂದು ವಾಕ್ಯದಲ್ಲಿ ಉತ್ತರಿಸಿ .
1. ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ ?
ಹಕ್ಕಿಯು ಸಾರ್ವಭೌಮರ ನೆತ್ತಿಯನ್ನು ಕುಕ್ಕಿದೆ.
2. ಹಕ್ಕಿ ಯಾರನ್ನು ಹರಸಿದೆ ?
ಹಕ್ಕಿ ಹೊಸಗಾಲದ ಹಸುಮಕ್ಕಳನ್ನು ಹರಸಿದೆ.
3. ಹಕ್ಕಿಯು ಯಾವುದರ ಸಂಕೇತವಾಗಿದೆ ?
ಹಕ್ಕಿಯು ಕಾಲಪಕ್ಷಿಯ ಸಂಕೇತವಾಗಿದೆ.
4. ಹಕ್ಕಿ ಯಾವ ವೇಗದಲ್ಲಿ ಹಾರುತ್ತಿದೆ ?
ಹಕ್ಕಿ ಕಣ್ಣು ತೆರೆದು ರೆಪ್ಪೆ ಮುಚ್ಚುವುದರೊಳಗೆ ಗಾವುದ ಗಾವುದ ಗಾವುದ ರೀತಿಯಲ್ಲಿ ವೇಗವಾಗಿ ಹಾರುತ್ತಿದೆ.
5. ಹಕ್ಕಿಯ ಗರಿಯಲ್ಲಿ ಯಾವ ಬಣ್ಣಗಳಿವೆ ?
ಹಕ್ಕಿಯ ಗರಿಯಲ್ಲಿ ಬಿಳಿಹೊಳೆ ಬಣ್ಣಗಳಿವೆ.
6. ಹಕ್ಕಿಯು ಕಣ್ಣುಗಳು ಯಾವುವು ?
ಹಕ್ಕಿಯು ಕಣ್ಣುಗಳು ಸೂರ್ಯ ಚಂದ್ರರು .
7. ಹಕ್ಕಿಯ ಚುಂಚಗಳು ಎಲ್ಲಿಯವರೆಗೆ ಚಾಚಿವೆ ?
ಹಕ್ಕಿಯ ಚುಂಚಗಳು ದಿಗ್ಮಂಡಲ ಅಂಚಿನ ಆಚೆಯವರೆ ಚಾಚಿವೆ.
8.ಹಕ್ಕಿಯು ಯಾವ ಮಾಲೆಯನ್ನು ಸಿಕ್ಕಿಸಿಕೊಂಡಿದೆ ?
ಹಕ್ಕಿಯು ಚಿಕ್ಕೆಯ ಮಾಲೆಯನ್ನು ಸಿಕ್ಕಿಸಿಕೊಂಡಿದೆ.
9.ಹಕ್ಕಿಯು ಯಾವ ಲೋಕದ ಅಂಗಳಕ್ಕೇರಿದೆ ?
ಹಕ್ಕಿಯು ಮಂಗಳ ಲೋಕದ ಅಂಗಳಕ್ಕೇರಿದೆ.
10.ಹಕ್ಕಿಯು ಏನನ್ನು ಒಡೆಯಲು ಹೊಂಚುಹಾಕಿದೆ ?
ಹಕ್ಕಿಯು ಬ್ರಂಹ್ಮಾ೦ಡಗಳನ್ನು ಒಡೆಯಲು ಹೊಂಚುಹಾಕಿದೆ.
11.ಹಕ್ಕಿಯು ಯಾವ ಮೇರೆಯನ್ನು ಮೀರಿದೆ ?
ಹಕ್ಕಿಯು ಬೆಳ್ಳಿಯ ಹಳ್ಳಿಯ ಮೇರೆಯನ್ನು ಮೀರಿದೆ.
12.ಹಕ್ಕಿ ಹಾರುತಿದೆ ನೋಡಿದಿರಾ ! ಕವಿತೆಯನ್ನು ಯಾವ ಕೃತಿಯಿಂದ ಆಯ್ಕೆ ಮಾಡಲಾಗಿದೆ ?
ಹಕ್ಕಿ ಹಾರುತಿದೆ ನೋಡಿದಿರಾ ! ಕವಿತೆಯನ್ನು ಗರಿ ಕೃತಿಯಿಂದ ಆಯ್ಕೆ ಮಾಡಲಾಗಿದೆ.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತರಿಸಿ
1. ಹಕ್ಕಿಯು ಯಾವ ಮೇರೆ ಮೀರಿ, ನೀರನು ಹೀರಿದೆ?
ಕಾಲದ ಹಕ್ಕಿಯು, ಬೆಳ್ಳಿಚುಕ್ಕಿ ಎಂದು ಕರೆಯಲ್ಪಡುವ ಶುಕ್ರಗ್ರಹವೆಂಬ ಹಳ್ಳಿಯ ಮೇರೆಯನ್ನು ಮೀರಿ ಹಾರಿಹೋಗುತ್ತಿದೆ. ತಿಂಗಳೂರು ಅಂದರೆಚ೦ದ್ರಲೋಕ. ಈ ಚಂದ್ರಲೋಕಕ್ಕೆ ಹಕ್ಕಿ ಏರಿ ನೀರಿನ ಸೆಲೆಯನ್ನು ಹುಡುಕಿ ಅದನ್ನು ಹೀರುತ್ತ ಸಂತೋಷವಾಗಿ ಆಡುತ್ತಿದೆ.ಹೆಚ್ಚುವರಿ ಪ್ರಶ್ನೋತ್ತರಗಳು
2.ಕಾಲದ ಹಕ್ಕಿಯ ರೆಕ್ಕೆ ಪುಚ್ಚ ಗರಿಗಳನ್ನು ಯಾವ ಯಾವ ಬಣ್ಣಗಳಿಗೆ ಹೋಲಿಸಿದ್ದಾರೆ ?
ಕಾಲದ ಹಕ್ಕಿಗೆ ಪಕ್ಕೆಯಲ್ಲಿ ಇರುವ ರೆಕ್ಕೆಗಳನ್ನು ಕೆಂಪಾದ , ಹೊಳೆಯುವ ಹೊನ್ನಿನ ಬಣ್ಣ ಬಣ್ಣಗಳಿಗೆ ಹೋಲಿಸಿದ್ದಾರೆ. ಪುಚ್ಚಗಳನ್ನು ಕಪ್ಪು ಮತ್ತು ಬಿಳಿ ಬಣ್ಣಕ್ಕೆ ಹೋಲಿಸಿದ್ದಾರೆ. ಹಾಗೆಯೇ ಹಕ್ಕಿಯ ಗರಿಗಳನ್ನು ಬಿಳಿ-ಹೊಳೆ ಬಣ್ಣಕ್ಕೆ ಹೋಲಿಸಿದ್ದಾರೆ.
3. ಹಕ್ಕಿಯ ಹಾರಾಟವನ್ನು ಆಕಾಶಕ್ಕೆ ಹೇಗೆ ಹೋಲಿಸಿದ್ದಾರೆ ?
ಕಾಲವೆಂಬ ಹಕ್ಕಿಯು ಆಕಾಶ, ಮೋಡ, ಭೂಮಂಡಲಗಳ ಎಲ್ಲಾ ಬಣ್ಣಗಳನ್ನು ಸಮನಾಗಿ ಆವರಿಸಿಕೊಂಡಿದೆ. ಆಕಾಶದಲ್ಲಿರುವ ಮುಗಿಲಿಗೆರೆಕ್ಕೆಗಳೊಡೆದವು ಎಂಬ೦ತೆ, ಆಕಾಶದಲ್ಲಿ ಮಿನುಗುತ್ತಿರುವ ಚಿಕ್ಕೆಗಳ (ನಕ್ಷತ್ರ) ಮಾಲೆಯನ್ನು ಕೊರಳಿಗೆ ಸಿಕ್ಕಿಸಿಕೊಂಡು, ಆಕಾಶದಲ್ಲಿ ಬೆಳಗುತ್ತಿರುವಸೂರ್ಯಚಂದ್ರರನ್ನು ಕಣ್ಣುಗಳನ್ನಾಗಿ್ನಗಿ ಮಾಡಿಕೊಂಡು ಅನಂತದೆಡೆಗೆ ಹಾರಿಹೋಗುತ್ತಿದೆ ಎಂದು ಹಕ್ಕಿಯ ಹಾರಾಟವನ್ನು ಆಕಾಶಕ್ಕೆ ಹೋಲಿಸಿದ್ದಾರೆ.
4. ಹೊಸಗಾಲದ ಹಸುಮಕ್ಕಳನ್ನು ಹಕ್ಕಿ ಹೇಗೆ ಹರಸಿದೆ?
ಕಾಲವು ಯುಗಯುಗಗಳ ಹಣೆಬರೆಹವನ್ನು , ಅಳಿಸಿ ಹಾಕಿ ಹೊಸತನವನ್ನು (ಒಳ್ಳೆತನವನ್ನು) ಹೊಸ ಹಣೆಬರೆಹವನ್ನು ಬರೆದು ಎಲ್ಲರಿಗೂಬದಲಾವಣೆಯಾಗುವ ಒಳ್ಳೆಯ ಭಾಗ್ಯವನ್ನು ತೆರೆದು ಕೊಟ್ಟಿದೆ. ಹಾಗೆಯೇ ರೆಕ್ಕೆಯ ಬೀಸುತ , ಮೇಲಕ್ಕೆ ಹಾರುತ, ಹಾರುವ ಈ ಹೊಸಗಾಲದ ಹಸು ಮಕ್ಕಳಿಗೆ ಹೊಸ ಚೇತನವನ್ನು (ಶಕ್ತಿಯನ್ನು) ನೀಡುತ್ತ , ಉತ್ತಮ ¨ಭವಿಷ್ಯಕ್ಕಾಗಿ ಶುಭ ಹರಸಿದೆ.
5.ಕಾಲಹಕ್ಕಿಯ ಚುಂಚಗಳು ಎಲ್ಲಿಯವರೆಗೆ ಚಾಚಿವೆ ಮತ್ತು ಏಕೆ ?
ಕಾಲವೆಂಬ ಹಕ್ಕಿ ದಿಶಾವಲಯದ (ದಶದಿಕ್ಕುಗಳ ತುದಿ) ತುತ್ತತುದಿಗೆ ಮುಟ್ಟಿದೆ. ದಿಶಾವಲಯದ ಆಚೆಗೆ ತನ್ನಯ ಚುಂಚವನ್ನು ಚಾಚಿದೆ. ಜಗತ್ತಿನಮೂಲವನ್ನು ಒಡೆಯಲು, ಪ್ರಪಂಚದ ವಿಸ್ಮಯವನ್ನು ಭೇಧಿಸಲು ಎಂಬ೦ತೆ ಹೊಂಚುಹಾಕಿದೆ.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1. ಹಕ್ಕಿಯನ್ನು ಕಾಲಗತಿಗೆ ಹೋಲಿಸುತ್ತಾ ಕವಿ ಹೇಳಿರುವ ಮಾತುಗಳಾವುವು ?ಅಥವಾ‘ಹಕ್ಕಿ ಹಾರುತಿದೆ ನೋಡಿದಿರಾ !’ ಪದ್ಯದ ಸಾರಾಂಶವನ್ನು ಬರೆಯಿರಿ.
ಕವಿ ದ.ರಾ.ಬೇಂದ್ರೆ ಅವರು “ಹಕ್ಕಿ ಹಾರುತ್ತಿದೆ ನೋಡಿದಿರಾ’ ಕವನದಲ್ಲಿ ಕಾಲದಗತಿಯನ್ನು ಹಾರುವ ಹಕ್ಕಿಯೊಂದಿಗೆ ಸಮೀಕರಿಸಿ ನೋಡುವಪ್ರಯತ್ನ ಮಾಡಿದ್ದಾರೆ. ಹಕ್ಕಿಯ ಹಾರುವಿಕೆ ಪ್ರಕೃತಿಯ ಸಹಜ ಕ್ರಿಯೆ.ಇದಕ್ಕೆ ಚಲನಶೀಲವಾದ ಕಾಲವನ್ನು ಹೋಲಿಸಿ ವರ್ಣಿಸಿದ್ದಾರೆ.ಕಾಲ, ರಾತ್ರಿ ಕಳೆದು ದಿನ ಬೆಳಕಾಗಿ ಹೀಗೆ ಪುನರಾವರ್ತನೆಯಾಗಿ ಮೇಲೆ, ಕೆಳಗೆ ಸುತ್ತಮುತ್ತ ಕಣ್ಣು ತೆರೆದು ರೆಪ್ಪೆ ಮುಚ್ಚುವುದರೊಳಗೆ ಗಾವುದರೀತಿಯಲಿ ವೇಗವಾಗಿ ಹಾರಿಹೋಗುತ್ತಿದೆ. ಇಂತಹ ಹಕ್ಕಿ ಹಾರಿ (ಕಾಲ ಕಳೆದು) ಹೋಗುವುದಕ್ಕೆ ತಡೆಯಿಲ್ಲ .ಹಕ್ಕಿಯ ಪುಚ್ಚ,ಗರಿ,ರೆಕ್ಕೆಗಳನ್ನು ಭೂತ,ವರ್ತಮಾನ, ¨ಭವಿಷ್ಯತ್ ಕಾಲಗಳಿಗೆ ಹೋಲಿಸಿದ್ದಾರೆ. ನೀಲಮೇಘಮಂಡಲಗಳ ಬಣ್ಣಗಳನ್ನು ಸಮನಾಗಿ ಆವರಿಸಿಕೊಂಡು ಸಮತೆಯನ್ನು ಕಾಣುತಿದೆ. ಮುಗಿಲಿಗೆ ರೆಕ್ಕೆಗೆಳೊಡೆದವೊ ಎಂಬ೦ತೆ ಅನಂತವಾಗಿ ಹಾರಿಹೋಗುತ್ತಿದೆ.ಚಿಕ್ಕೆಗಳ ಮಾಲೆಯನ್ನು ಕೊರಳಿಗೆ ಸಿಕ್ಕಿಸಿಕೊಂಡು,ಸೂರ್ಯಚಂದ್ರರನ್ನು ಕಣ್ಣುಗಳನ್ನಾಗಿ ಮಾಡಿಕೊಂಡು ಅನಂತದೆಡೆಗೆ ಹಾರಿಹೋಗಿದೆ ನೋಡಿದಿರಾ ಎಂಬ ಮಾತನ್ನು ಹೇಳುತ್ತಾರೆ.ರಾಜ್ಯ, ಸಾಮ್ರಾಜ್ಯಗಳನ್ನು ವೈಭವದಿಂದ ಮೆರೆಯುವಂತೆ ಮಾಡಿದ್ದು ಇದೇ ಕಾಲವೆಂಬ ಹಕ್ಕಿ. ರಾಜ ಮಹಾರಾಜರ ಸಣ್ಣದೊಡ್ಡ, ಕೋಟೆಕೊತ್ತಲಗಳನ್ನು ಗಬಕ್ಕನೆ ನಾಶಮಾಡಿದದ್ದು ಕಾಲವೇ. ವಿಶ್ವದ ಎಲ್ಲಾ ಭಾಗಗಳನ್ನು ತೇಲಿಸಿ-ವಲಿಸಿ ಮುಳುಗಿಸಿ, ಸಾರ್ವಭೌಮ ನೆತ್ತಿಯ ಕುಕ್ಕಿ ಹಾರಿಹೋಗಿದೆ.ಕಾಲವು ಯುಗಯುಗಗಳ ಹಣೆಬರೆಹವನ್ನು ಅಳಿಸಿ ಹಾಕಿ ಹೊಸತನದ ಭಾಗ್ಯವನ್ನು ತೆರೆದು ಕೊಟ್ಟಿದೆ. ಹೊಸಗಾಲದ ಹಸುಮಕ್ಕಳಿಗೆ ಹೊಸಚೇತನವನ್ನು ನೀಡುತ್ತ, ಉತ್ತಮ ¨ಭ್ಯವಿಷ್ಯಕ್ಕಾಗಿ ಹರಸಿದೆ. ಬೆಳ್ಳಿಚುಕ್ಕಿ ಎಂದು ಕರೆಯಲ್ಪಡು ವ ಶುಕ್ರಗ್ರಹವೆಂಬ ಹಳ್ಳಿಯ ಮೇರೆಯನ್ನು ಮೀರಿ,ಚಂದ್ರಲೋಕಕ್ಕೆ ಏರಿ ನೀರಿನ್ನು ಹುಡುಕಿ ಹೀರಿದೆ. ಮಂಗಳನ ಅಂಗಳಕ್ಕೆ ಏರಿ ಹೋಗಿದೆ. ವೈಜ್ಞಾನಿಕವಾಗಿ ಭಾರತೀಯರು ಚಂದ್ರ,ಶುಕ್ರ,ಮ೦ಗಳನ ಅಂಗಳಕ್ಕೆ ಹೋಗಿ ಸಂಶೋದನೆ ಮಾಡುವ ಗುರಿಯನ್ನು ಹೊಂದಿದ್ದಾರೆ ಎಂಬ ಮಾತನ್ನು ಪರೋಕ್ಷವಾಗಿ ಅಭಿವ್ಯಕ್ತಪಡಿಸಿದ್ದಾರೆ.ದಶದಿಕ್ಕುಗಳ ತುತ್ತತುದಿಗೆ ಮುಟ್ಟಿ ಅದರ ಆಚೆಗೆ ತನ್ನಯ ಚುಂಚವನ್ನು ಚಾಚಿದೆ. ಜಗತ್ತಿನ ಮೂಲವನ್ನು ಒಡೆಯಲು, ಪ್ರಪಂಚದ ವಿಸ್ಮಯವನ್ನುಭೇದಿಸಲೋ ಎಂಬ೦ತೆ ಹೊಂಚುಹಾಕಿದೆ ಎಂಬ ಮಾತನ್ನು ಹೇಳುತ್ತಾರೆ.
ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
1.“ಬಲ್ಲರು ಯಾರಾ ಹಾಕಿದ ಹೊಂಚ”
ಆಯ್ಕೆ :- ಈ ವಾಕ್ಯವನ್ನುದ.ರಾ.ಬೇಂದ್ರೆ ವಿರಚಿತ ‘ಗರಿ’ ಕವನ ಸಂಕಲನದಿ೦ದ ಆಯ್ದ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಪದ್ಯದಿಂದಆರಿಸಲಾಗಿದೆ.ಸ೦ದರ್ಭ :- ಬೇಂದ್ರೆಯವರ ಕಾಲವೆಂಬ ಹಕ್ಕಿಯು ತನ್ನ ಬಾಹುವಿನಿಂದ ಜಗತ್ತಿನ ರಹಸ್ಯವನ್ನು ಭೇದಿಸುವ ತಂತ್ರವನ್ನು ವಿಶ್ಲೇಷಿಸುವಸಂದರ್ಭದಲ್ಲಿ ಈ ವಾಕ್ಯವನ್ನು ಹೇಳುತ್ತಾರೆ. ಕಾಲವೆಂಬ ಹಕ್ಕಿ ದಿಶಾವಲಯದ ತುತ್ತತುದಿಗೆ ಮುಟ್ಟಿ, ಆಚೆಗೆ ತನ್ನಯ ಕೊಕ್ಕನ್ನು ಚಾಚಿದೆ.ಅದು ಬ್ರಹ್ಮಾಂಡಲಗಳನ್ನು ಒಡೆಯಲೋ ಎಂಬ೦ತೆ ಹೊ೦ಚುಹಾಕಿದೆ ಏನೋ ಬಲ್ಲವರಾರು ? ಸಂದರ್ಭದಲ್ಲಿ ಎಂಬ ವಿಸ್ಮಯವನ್ನು ಅಭಿವ್ಯಕ್ತಪಡಿಸುವ ಈ ವಾಕ್ಯ ಬಂದಿದೆ.
ಸ್ವಾರಸ್ಯ :-ಕಾಲಪಕಾಲಪಕ್ಷಿಯು ಬ್ರಹ್ಮಾಂಡ ರಹಸ್ಯವನ್ನು ¨ಭೇದಿಸಲು ಹೊಂಚು ಹಾಕಿರಬಹುದು!ಎಂಬ ವಿಸ್ಮಯವನ್ನು ಈ ವಾಕ್ಯದಲ್ಲಿಸ್ವಾರಸ್ಯಪೂರ್ಣವಾಗಿ ವರ್ಣಿಸಲಾಗಿದೆ.
2. “ಹೊಸಗಾಲದ ಹಸುಮಕ್ಕಳ ಹರಸಿ”
ಆಯ್ಕೆ :- ಈ ವಾಕ್ಯವನ್ನು ದ.ರಾ.ಬೇಂದ್ರೆ ವಿರಚಿತ ‘ಗರಿ’ ಕವನ ಸಂಕಲನದಿ೦ದ ಆಯ್ದ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಪದ್ಯದಿಂದಆರಿಸಲಾಗಿದೆ.ಸ೦ದರ್ಭ :- ಬೇಂದ್ರೆಯವರು ಯುವ ಜನಾಂಗದ ಉತ್ತಮ ¨ಭವಿಷ್ಯಕ್ಕಾಗಿ ಕಾಲದ ಶುಭ ಹಾರೈಕೆಯನ್ನು ಕುರಿತು ಹೇಳುವ ಸಂದರ್ಭದಲ್ಲಿ ಈ ವಾಕ್ಯವನ್ನು ಹೇಳುತ್ತಾರೆ. ಕಾಲವು ಯುಗಯುಗಗಳ ಹಣೆಬರೆವನ್ನು , ಅಳಿಸಿ ಹಾಕಿ ಹೊಸತನದ ಭಾಗ್ಯವನ್ನು ತೆರೆದು ಕೊಟ್ಟಿದೆ. ಹಾಗೆಯೇರೆಕ್ಕೆಯ ಬಿಚ್ಚಿ ಮೇಲೇರುತ್ತಾ ಹೊಸಗಾಲದ ಹಸು ಮಕ್ಕಳಿಗೆ ಹೊಸ ಚೇತನವನ್ನು ನೀಡುತ,್ತ ಉತ್ತಮ ಭವಿಷ್ಯಕ್ಕಾಗಿ ಶುಭ ಹರಸಿದೆ ಎಂದು ಹೇಳುವ ಸಂದರ್ಭದಲ್ಲಿ ಈ ವಾಕ್ಯ ಬಂದಿದೆ.
ಸ್ವಾರಸ್ಯ :- ಯುವ ಜನಾಂಗದ ¨ವಿಷ್ಯಕ್ಕೆ ಶುಭವಾಗಲಿ ಎಂದು ಹರಸುವ ಕಾಲಪಕ್ಷಿಯ ಗುಣ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ.
3. “ರೆಕ್ಕೆಗಳೆರಡೂ ಪಕ್ಕದಲ್ಲುಂಟು”
ಆಯ್ಕೆ :- ಈ ವಾಕ್ಯವನ್ನುದ.ರಾ.ಬೇಂದ್ರೆ ವಿರಚಿತ ‘ಗರಿ’ ಕವನ ಸಂಕಲನದಿ೦ದ ಆಯ್ದ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಪದ್ಯದಿಂದಆರಿಸಲಾಗಿದೆ.ಸ೦ದರ್ಭ :- ಬೇಂದ್ರೆಯವರು ಕಾಲದ ಗುರುತನ್ನ ಹಕ್ಕಿಯ ರೆಕ್ಕೆಗಳ ಬಣ್ಣದ ರೂಪಗಳಿಗೆ ಹೋಲಿಸುವ ಸಂದರ್ಭದಲ್ಲಿ ಈ ಮಾತನ್ನುತಿಳಿಸಿದ್ದಾರೆ. ಹಕ್ಕಿಗೆ ಕರಿನರೆ ಬಣ್ಣದ ಪುಚ್ಚಳಿವೆ . ಬಿಳಿಹೊಳೆ ಬಣ್ಣದ ಗರಿಗಳಿವೆ ಹಾಗೆಯೇ ಕೆನ್ನನ ಹೊನ್ನನ ಬಣ್ಣ-ಬಣ್ಣಗಳ “ರೆಕ್ಕೆಗಳೆರಡೂಪಕ್ಕದಲುಂಟು” ಅಂದರೆ ಕೆ೦ಪಾದ ಮತ್ತು ಹೊನ್ನಿನ ಬಣ್ಣಗಳ ಹಕ್ಕಿಯ ರೆಕ್ಕೆಗಳು ಪಕ್ಕಿಯಲ್ಲಿವೆ ಎಂದು ವರ್ಣಿಸುವ ಸಂದರ್ಭದಲ್ಲಿ ಈ ವಾಕ್ಯ ಬಂದಿದೆ.
ಸ್ವಾರಸ್ಯ :- ಕಾಲವೆಂಬ ಹಕ್ಕಿಯ ರೆಕ್ಕೆಗಳಿಗಿರುವ ಬಣ್ಣಗಳ ಭೌತಿಕ ರೂಪವನ್ನು ಕಾಲದ ಗುರುತಾಗಿ ಅಭಿವ್ಯಕ್ತಿಸಿರುವುದು ಸ್ವಾರಸ್ಯಪೂರ್ಣವಾಗಿದೆ.
4. “ಸಾರ್ವಭೌಮರಾ ನೆತ್ತಿಯ ಕುಕ್ಕಿ”
ಆಯ್ಕೆ :- ಈ ವಾಕ್ಯವನ್ನು ದ.ರಾ.ಬೇಂದ್ರೆ ವಿರಚಿತ ‘ಗರಿ’ ಕವನ ಸಂಕಲನದಿ೦ದ ಆಯ್ದ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಪದ್ಯದಿಂದಆರಿಸಲಾಗಿದೆ.ಸ೦ದರ್ಭ :- ಕವಿ ದ.ರಾ.ಬೇಂದ್ರೆ ಅವರು ಕಾಲದ ಸಾರ್ವಭೌಮತ್ವವನ್ನು ವಿವರಿಸಿ ವರ್ಣಿಸುವ ಸಂದರ್ಭದಲ್ಲಿ ಈ ವಾಕ್ಯವನ್ನು ಹೇಳುತ್ತಾರೆ.ಕಾಲಪಕ್ಷಿಯು ರಾಜ್ಯ, ಸಾಮ್ರಾಜ್ಯಗಳನ್ನು ವೈಭವದಿ೦ದ ಮೆರೆಯುವಂತೆ ಮಾಡಿ, ಕಾಲಗತಿಯಲ್ಲಿ ರಾಜ ಮಹಾರಾಜರ ಕೋಟೆ-ಕೊತ್ತಲಗಳನ್ನುನಾಶಮಾಡುತ್ತಾ, ಖಂಡ-ಖಂಡಗಳನ್ನು ತೇಲಿಸಿ-ಮುಳುಗಿಸಿ, ಸಾರ್ವಭೌಮರೆಂದು ಮೆರೆದವರ ನೆತ್ತಿಯ ಮೇಲೆ ಕುಕ್ಕಿ ಕೆಳಗೆ ಬೀಳಿಸಿ ಹೊಸಕಿ ಹಾಕಿಹಕ್ಕಿ ಹಾರಿಹೋಗಿದೆ ಎಂದು ಹೇಳುವ ಸಂದರ್ಭದಲ್ಲಿ ಈ ವಾಕ್ಯ ಬಂದಿದೆ.
ಸ್ವಾರಸ್ಯ :- ಕಾಲದ ಗತಿಯಲ್ಲಿ ವೈಭವದಿಂದ ಮೆರೆದ ಸಾರ್ವಭೌಮರೆಲ್ಲರೂ ನಾಮಾವಶೇಷವಾಗಿದ್ದಾರೆ ಎಂಬುದು ಸ್ವಾರಸ್ಯ ಪೂರ್ಣವಾಗಿ ಈ ವಾಕ್ಯದಲ್ಲಿ ವರ್ಣಿತವಾಗಿದೆ.
5. “ಮಂಗಳ ಲೋಕದ ಅಂಗಳಕೇರಿ”
ಆಯ್ಕೆ :- ಈ ವಾಕ್ಯವನ್ನು ದ.ರಾ.ಬೇಂದ್ರೆ ವಿರಚಿತ ‘ಗರಿ’ ಕವನ ಸಂಕಲನದಿ೦ದ ಆಯ್ದ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಪದ್ಯದಿಂದಆರಿಸಲಾಗಿದೆ.ಸ೦ದರ್ಭ:- ಕಾಲದ ವೈಜ್ಞಾನಿಕ ಗತಿಯನ್ನು ಹೇಳುವ ಸಂದರ್ಭದಲ್ಲಿ ದ.ರಾ.ಬೇಂದ್ರೆ ಅವರು ಈ ವಾಕ್ಯವನ್ನು ಹೇಳುತ್ತಾರೆ. ಕಾಲಪಕ್ಷಿಯುಬೆಳ್ಳಿಚುಕ್ಕಿ(ಶುಕ್ರಗ್ರಹ)ಎಂಬ ಹಳ್ಳಿಯ ಮೇರೆಯನ್ನು ದಾಟಿ, ಚಂದ್ರಲೋಕಕ್ಕೆ ಹಾರಿ ನೀರಿನ್ನು ಹೀರಿ ಹಾಗೆಯೇ ಮುಂದೆ ಹಾರಾಡುತ್ತ ಹಾರಾಡುತ್ತಮಂಗಳ ಲೋಕ(ಗ್ರಹ)ದ ಅಂಗಳಕ್ಕೆ ಏರಿ ಹೋಗುತ್ತಿದೆ ಎಂದು ವಿವರಿಸುವ ಸಂದರ್ಭದಲ್ಲಿ ಈ ವಾಕ್ಯ ಬಂದಿದೆ.
ಸ್ವಾರಸ್ಯ :- ವೈಜ್ಞಾನಿಕವಾಗಿ ಭಾರತೀಯರು ಶುಕ್ರ, ಚಂದ್ರ, ಮಂಗಳನ ಅಂಗಳಕ್ಕೆ ಹೋಗಿ ಸಂಶೋಧನೆ ಮಾಡುವ ಗುರಿಯನ್ನು ಪರೋಕ್ಷವಾಗಿಅಭಿವ್ಯಕ್ತಪಡಿಸಿದ್ದಾರೆ.
ವ್ಯಾಕರಣ
ಅ) ಕೊಟ್ಟಿರುವ ಅವ್ಯಯ ಪದಗಳು ಯಾವ ಯಾವ ಅವ್ಯಯಕ್ಕೆ ಸೇರಿವೆ ಎಂಬುದನ್ನು ಗುರುತಿಸಿ.
ಅದುವೇ, ಆದ್ದರಿಂದ, ಅಯ್ಯೋ, ಬೇಗನೆ, ಧಗಧಗ, ಸಾಕು, ಓಹೋ, ಹೌದು, ನೀನೇ, ರೊಯ್ಯನೆ, ಮೆಲ್ಲಗೆ, ಅಲ್ಲದೆ.
ಸಾಮಾನ್ಯವ್ಯಯ | ಬೇಗನೆ, ರೊಯ್ಯನೆ, ಮೆಲ್ಲಗೆ. |
ಭಾವಸೂಚಕಾವ್ಯಯ | ಅಯ್ಯೋ, ಓಹೋ. |
ಅನುಕರಣಾವ್ಯಯ | ಧಗಧಗ |
ಕ್ರಿಯಾರ್ಥಕಾವ್ಯಯ | ಸಾಕು, ಹೌದು. |
ಸಂಬ೦ಧಾರ್ಥಕಾವ್ಯಯ | ಆದ್ದರಿಂದ,ಅಲ್ಲದೆ. |
ಅವಧಾರಣಾರ್ಥಕಾವ್ಯಯ | ಅದುವೇ,ನೀನೇ. |
ಭಾಷಾ ಚಟುವಟಿಕೆ
೧. ಕೊಟ್ಟಿರುವ ಪದಗಳಿಗೆ ಸಮಾನಾರ್ಥಕ ಪದ ಬರೆಯಿರಿ.
ಸೂರ್ಯ, ಮೇಘ, ಗಡ, ಹರಸು, ಒಕ್ಕಿ, ಕೆನ್ನ.
ಸೂರ್ಯ -ರವಿ, ಭಾನು, ಅರ್ಕ, ನೇಸರ, ಭಾಸ್ಕರ | ಗಡ – ಸಣ್ಣಕೋಟೆ | ಒಕ್ಕಿ – ಬೇರ್ಪಡಿಸಿ |
ಮೇಘ –ಮೋಡ ,ಮುಗಿಲು | ಹರಸು-ಆಶೀರ್ವದಿಸು,ಹಾರೈಸು | ಕೆನ್ನ- ಕೆಂಪು, ಕೆಂಬಣ್ಣ |
ಆ). ಕೊಟ್ಟಿರುವ ಪದಗಳಿಗೆ ತತ್ಸಮ-ತದ್ಭವ ಬರೆಯಿರಿ.
ಬಣ್ಣ, ಬ್ರಹ್ಮ, ಚಂದ್ರ, ಯುಗ, ಅಂಗಳ.
ತತ್ಸಮ | ತದ್ಭವ |
ವರ್ಣ | ಬಣ್ಣ |
ಬ್ರಹ್ಮ | ಬೊಮ್ಮ |
ಚ೦ದ್ರ | ಚ೦ದಿರ |
ಯುಗ | ಜುಗ |
ಅ೦ಕಣ | ಅ೦ಗಳ |
ಇ). ಕೊಟ್ಟಿರುವ ಪದಗಳನ್ನು ಬಿಡಿಸಿ, ಸಂಧಿ ಹೆಸರಿಸಿ.
ಇರುಳಳಿದು, ತೆರೆದಿಕ್ಕುವ, ಹೊಸಗಾಲ, ದಿಗ್ಮಂಡಲ, ತಿಂಗಳಿನೂರು.
ಪದಗಳು | ಬಿಡಿಸಿ ಬರೆಯುವುದು | ಸಂಧಿ ಹೆಸರು |
ಇರುಳಳಿದು | ಇರುಳು + ಅಳಿದು | ಲೋಪಸಂಧಿ |
ತೆರೆದಿಕ್ಕುವ | ತೆರೆದು + ಇಕ್ಕುವ | ಲೋಪಸಂಧಿ |
ಹೊಸಗಾಲ | ಹೊಸ + ಕಾಲ | ಆದೇಶ ಸಂಧಿ |
ದಿಗ್ಮ೦ಡಲ | ದಿಕ್ + ಮಂಡಲ | ಜಶ್ತ್ವಸ೦ಧಿ |
ತಿ೦ಗಳಿನೂರು | ತಿ೦ಗಳಿನ + ಊರು | ಲೋಪಸಂಧಿ |
ಈ). ಈ ಪದ್ಯದಲ್ಲಿ ಬರುವ ದ್ವಿರುಕ್ತಿ ಪದಗಳನ್ನು ಪಟ್ಟಿ ಮಾಡಿರಿ.
ಇರುಳಿರುಳು | ದಿನದಿನ | ಗಾವುದಗಾವುದ | ಬಣ್ಣಬಣ್ಣ | ಖಂಡಖ೦ಡ | ಯುಗಯುಗ |
10th Class Hakki Harutide Nodidira Kannada Poem Notes Question Answer Mcq Questions Pdf Download 2023
ಇತರೆ ಪಾಠಗಳು:
ಸುಕುಮಾರಸ್ವಾಮಿಯ ಕಥೆ ಕನ್ನಡ ನೋಟ್ಸ್