10ನೇ ತರಗತಿ ಕನ್ನಡ ಕೌರವೇಂದ್ರನ ಕೊಂದೆ ನೀನು ಪ್ರಶ್ನೋತ್ತರಗಳು ನೋಟ್ಸ್, 10th Standard Kouravendrana Konde Neenu Kannada Notes Question Answer mcq questions Pdf Download 2023
Table of Contents
ಕವಿ ಪರಿಚಯ :
ಕುಮಾರವ್ಯಾಸ
ಕುಮಾರವ್ಯಾಸ ಎಂದು ಪ್ರಸಿದ್ಧನಾಗಿರುವ ಗದುಗಿನ ನಾರಣಪ್ಪನು ಕ್ರಿ . ಶ.ಸುಮಾರು ೧೪೩೦ ರಲ್ಲಿ ಗದಗ ಪ್ರಾಂತ್ಯದ ಕೋಳಿವಾಡದಲ್ಲಿ ಜನಿಸಿದನು .
* ಇವನು ಕರ್ನಾಟ ಭಾರತ ಕಥಾ ಮಂಜರಿ ಮತ್ತು ಐರಾವತ ಎಂಬ ಕೃತಿಗಳನ್ನು ರಚಿಸಿದ್ದಾನೆ .
* ಈತನು ತನ್ನ ಕೃತಿಯಲ್ಲಿ ರೂಪಕಾಲಂಕಾರವನ್ನು ಹೆಚ್ಚಾಗಿ ಬಳಸಿದ್ದರಿಂದ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಬಿರುದನ್ನು ಪಡೆದಿದ್ದಾನೆ .
* ಕರ್ನಾಟ ಭಾರತ ಕಥಾ ಮಂಜರಿ ಕೃತಿಯನ್ನು ಕನ್ನಡಭಾರತ , ಗದುಗಿನ ಭಾರತ , ಕುಮಾರವ್ಯಾಸ ಭಾರತ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ .
Kouravendrana Konde Neenu Kannada Notes Question Answer
ಆ ] ಒಂದು ವಾಕ್ಯದಲ್ಲಿ ಉತ್ತರಿಸಿ ,
1. ಅಶ್ವಿನೀದೇವತೆಗಳ ವರಬಲದಿಂದ ಜನಿಸಿದವರು ಯಾರು ?
ಅಶ್ವಿನೀದೇವತೆಗಳ ವರಬಲದಿಂದ ಜನಿಸಿದವರು ನಕುಲ ಮತ್ತು ಸಹದೇವ .
2. ಕುಮಾರವ್ಯಾಸನಿಗೆ ಇರುವ ಬಿರುದು ಯಾವುದು ?
ಕುಮಾರವ್ಯಾಸನಿಗೆ ‘ ರೂಪಕ ಸಾಮ್ರಾಜ್ಯ ಚಕ್ರವರ್ತಿ ‘ ಎಂಬ ಬಿರುದು ಇದೆ .
3. ಶ್ರೀಕೃಷ್ಣನು ಕರ್ಣನನ್ನು ರಥದಲ್ಲಿಹೇಗೆ ಕೂರಿಸಿಕೊಂಡನು ?
ಶ್ರೀಕೃಷ್ಣನು ಕರ್ಣನ ಸಂಗಡ ಮೈದುನತನದ ಸರಸವನ್ನು ಮಾಡಿ , ಕೈಹಿಡಿದು ಎಳೆದು ರಥದ ಪೀಠದಲ್ಲಿ ಕೂರಿಸಿದನು .
4. ಕುಮಾರ ವ್ಯಾಸನ ಆರಾಧ್ಯ ದೈವ ಯಾರು ?
ಕುಮಾರವ್ಯಾಸನ ಆರಾಧ್ಯ ದೈವ ಗದುಗಿನ ವೀರನಾರಾಯಣ
5. ನಾರಣಪ್ಪನಿಗೆ ಕುಮಾರವ್ಯಾಸ ಎಂಬ ಹೆಸರು ಏಕೆ ಬಂತು ?
ನಾರಣಪ್ಪನು ವ್ಯಾಸರ ಮಹಾಭಾರತವನ್ನು ಕನ್ನಡದಲ್ಲಿ ಕರ್ನಾಟ ಭಾರತ ಕಥಾಮಂಜರಿ ಎಂಬ ಕೃತಿ ರಚಿಸಿದ್ದರಿಂದ ಸಂಸ್ಕೃತ ಕುಮಾರವ್ಯಾಸ ಎಂಬ ಹೆಸರು ಬಂದಿತು .
ಆ ] ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ .
1. ಕೃಷ್ಣನು ಆಮಿಷಗಳನ್ನು ಒಡ್ಡಿದಾಗ ಕರ್ಣನಮನದಲ್ಲಿ ಮೂಡಿದ ಭಾವನೆಗಳೇನು ?
ಕೃಷ್ಣನು ಕರ್ಣನಿಗೆ ಆಮಿಷಗಳನ್ನು ಒಡ್ಡಿದಾಗ ಕೊರಳಸೆರೆಹಿಗ್ಗಿದವು , ಕಂಬನಿಯು ರಭಸದಿಂದಮುಂದೆ ಬಂದು , ಅಧಿಕವಾಗಿ ಕರ್ಣನು ದುಃಖಗೊಂಡು ಮನದೊಳಗೆ “ ಅಯ್ಯೋ , ದುರ್ಯೋಧನನಿಗೆ ಕೇಡಾಯಿತು ” ಎಂದನು . ಹರಿಯ ಹಗೆತನವು ಹೊಗೆ ತೋರದೆ ಸುಟ್ಟುಹಾಕುವುದಲ್ಲದೆ ಸುಮ್ಮನೆ ಹೋಗುವುದೆ . ಕೃಷ್ಣನು “ ನನ್ನವಂಶದ ರಹಸ್ಯವನ್ನು ತಿಳಿಸಿ ನನ್ನನ್ನು ಕೊಂದನು ” ಎಂದು ಮನದಲ್ಲಿ ನೊಂದುಕೊಂಡನು .
2. ಕೃಷ್ಣನು ಕೌರವೇಂದ್ರನನ್ನು ಕೊಂದನು ಎಂದು ಕರ್ಣಹೇಳಲು ಕಾರಣವೇನು ?
ಕರ್ಣನು ಕೃಷ್ಣನಿಗೆ “ ನಾನು ರಾಜ್ಯದ ಸಿರಿಸಂಪತ್ತಿಗೆ ಸೋಲುವವನಲ್ಲ . ಪಾಂಡವರು ಕೌರವರು ಸೇವೆಯನ್ನು ಮಾಡುವುದು ನನಗೆ ಇಷ್ಟವಿಲ್ಲ . ಆದರೆ ನನ್ನನ್ನು ಕಾಪಾಡಿದ ಒಡೆಯನಾದ ದುರ್ಯೋಧನನಿಗೆ ಶತ್ರುಗಳ ಶಿರವನ್ನು ಕಡಿದು ತಂದು ಒಪ್ಪಿಸುವ ಆವೇಶದಲ್ಲಿ ಇದ್ದೆನು.ಆದರೆ ನೀನು ನನ್ನ ಜನ್ಮ ರಹಸ್ಯವನ್ನು ತಿಳಿಸಿ ದುರ್ಯೋಧನನ್ನು ಕೊಂದೆ ” ಎಂದನು .
3. ಕೃಷ್ಣನು ಕರ್ಣನಮನದಲ್ಲಿ ಯಾವ ರೀತಿಯಲ್ಲಿಭಯವನ್ನು ಬಿತ್ತಿದನು ?
“ ಕರ್ಣ ನಿಮಗೂ ( ಪಾಂಡವರಿಗೂ ) ಯಾದವ ಕೌರವರಿಗೂ ವಂಶ ಗೌರವದಲ್ಲಿ ಭೇದವಿಲ್ಲ . ನೀನು ನಿಜವಾಗಿ ಭೂಮಿಯ ಒಡೆಯ.ಆದರೆ ನಿನಗೆ ಮನದಲ್ಲಿ ಅದರ ಅರಿವಿಲ್ಲ ” ಎಂದು ಹೇಳುತ ಕೃಷ್ಣನು ಕರ್ಣನ ಕಿವಿಯಲ್ಲಿಭಯವನ್ನು ಭಿತ್ತಿದನು .
4. ಕುಂತಿ , ಮಾದ್ರಿಯರು ಯಾರಾರ ಅನುಗ್ರಹದಿಂದ ಮಕ್ಕಳನ್ನು ಪಡೆದರು ?
ಕುಂತಿಯು ಯಮಧರ್ಮನ ಅನುಗ್ರಹದಿಂದ ಧರ್ಮರಾಯನನ್ನು , ವಾಯುವಿನ ಅನುಗ್ರಹದಿಂದ ಭೀಮನನ್ನು ಇಂದನ ಅನುಗ್ರಹದಿಂದ ಅರ್ಜುನನ್ನು ಪಡೆದಳು . ಮಾದ್ರಿಯು ಅಶ್ವಿನೀದೇವತೆಗಳ ಅನುಗ್ರಹದಿಂದ ನಕುಲ ಸಹದೇವರನ್ನು ಪಡೆದಳು .
5. ಯುದ್ಧದ ವಿಚಾರದಲ್ಲಿ ಕರ್ಣನ ತೀರ್ಮಾನವೇನು ?
ಕರ್ಣನು ಕೃಷ್ಣನನ್ನು ಕುರಿತು “ ನಾಳಿನ ಕೌರವರ ಮತ್ತು ಪಾಂಡವರ ಚತುರಂಗ ಬಲದ ನಡುವಿನ ಯುದ್ಧವು ಮೃತ್ಯುದೇವತೆಗೆ ಭೋಜನ ಕೂಟ ಆಗುವುದು . ನಾನು ಕೌರವನ ಉಪಕಾರದ ಋಣ ತೀರಿಸುವಂತೆ ಹೋರಾಡಿ , ಯುದ್ಧರಂಗದಲ್ಲಿ ಲೆಕ್ಕವಿಲ್ಲದಷ್ಟು ವೀರಯೋಧರನ್ನು ಕೊಂದು , ನನ್ನ ಒಡೆಯನಿಗಾಗಿ ಪ್ರಾಣವನ್ನು ಬಿಡುವೆನು . ಸೂರ್ಯನ ಮೇಲಾಣೆ ಪಾಂಡವರನ್ನು ನೋಯಿಸೆನು ” ಎಂದನು .
ಇ ] ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .
1. ಪಾಂಡವರು ಸೋದರರೆಂದು ತಿಳಿದಾಗ ಕರ್ಣನ ಮನಸ್ಥಿತಿಯನ್ನು ತಿಳಿಸಿ .
ಕೃಷ್ಣನು ಕರ್ಣನಿಗೆ ಆಮಿಷಗಳನ್ನು ಒಡ್ಡಿದಾಗ ಕೊರಳಸೆರೆಹಿಗ್ಗಿದವು . ಕಂಬನಿಯು ರಭಸದಿಂದ ಮುಂದೆ ಬಂದು , ಅಧಿಕವಾಗಿ ಕರ್ಣನು ದುಃಖಗೊಂಡು ಮನದೊಳಗೆ “ ಅಯ್ಯೋ , ದುರ್ಯೋಧನನಿಗೆ ಕೇಡಾದುದು ” ಎಂದನು . ತನ್ನ ಜನ್ಮ ರಹಸ್ಯ ತಿಳಿದಾಗ ಅವನಿಗೆ ಸಂತೋಷವಾಗುವುದಕ್ಕೆ ಬದಲಾಗಿ ದುಃಖ ಉಂಟಾಯಿತು . ಅವನಿಗೆ ತಾನು ಏನು ಮಾಡಬೇಕೆಂಬುದು ತಿಳಿಯದಾಯಿತು . ಆಗ ತನ್ನ ಮನಸ್ಸಿನಲ್ಲಿ ಚಿಂತಿಸುತ್ತಾ ‘ ಹರಿಯ ಹಗೆತನವು ಹೊಗೆ ತೋರದೆ ಸುಟ್ಟುಹಾಕುವುದಲ್ಲದೆ : ಸುಮ್ಮನೆ ಹೋಗುವುದೇ ? ಕೃಷ್ಣನು “ ನನ್ನ ವಂಶದ ರಹಸ್ಯವನ್ನು ತಿಳಿಸಿ ನನ್ನನ್ನು ಕೊಂದನು ” ಎಂದು ಮನದಲ್ಲಿ ನೊಂದುಕೊಂಡನು . “ ಮುರುಳು ಮಾಧವ , ನಾನು ರಾಜ್ಯದ ಸಿರಿಸಂಪತ್ತಿಗೆ ಸೋಲುವವನಲ್ಲ , ಪಾಂಡವರು ಕೌರವರು ಸೇವೆಯನ್ನು ಮಾಡುವುದು ನನಗೆ ಇಷ್ಟವಿಲ್ಲ . ಆದರೆ ನನ್ನನ್ನು ಕಾಪಾಡಿದ ಒಡೆಯನಾದ ದುರ್ಯೋಧನನಿಗೆ ಶತ್ರುಗಳ ಶಿರವನ್ನು ಕಡಿದು ತಂದು ಒಪ್ಪಿಸುವ ಆವೇಶದಲ್ಲಿ ಇದ್ದೆನು . ಆದರೆ ನೀನು ನನ್ನ ಜನ್ಮ ರಹಸ್ಯವನ್ನು ತಿಳಿಸಿ ದುರ್ಯೋಧನನ ಕೊಂದೆ ” ಎಂದು ಪರಿತಪಿಸುತ್ತಾ ” ನಾನು ಕೌರವನ ಉಪಕಾರದ ಋಣ ತೀರಿಸುವಂತೆ ಹೋರಾಡಿ , ಯುದ್ಧರಂಗದಲ್ಲಿ ಲೆಕ್ಕವಿಲ್ಲದಷ್ಟು ವೀರಯೋಧರನ್ನು ಕೊಂದು , ನನ್ನ ಒಡೆಯನಿಗಾಗಿ ಪ್ರಾಣವನ್ನು ಬಿಡುವನು . ಸೂರ್ಯನ ಮೇಲಾಣೆ ಪಾಂಡವರನ್ನು ನೋಯಿಸೆನು ” ಎಂದನು .
2. ಕರ್ಣನ ನಿರ್ಧಾರ ಸರಿ ಎನ್ನುವಿರಾ ? ಏಕೆ ?
ಕೃಷ್ಣನು ಕರ್ಣನ ಜನ್ಮ ರಹಸ್ಯವನ್ನು ತಿಳಿಸುತ್ತಾ ಆತನನ್ನು ಸಕಲ ಸಾಮ್ರಾಜ್ಯಕ್ಕೆ ಚಕ್ರವರ್ತಿಯನ್ನಾಗಿ ಮಾಡುವುದಾಗಿ ತಿಳಿಸುತ್ತಾನೆ . ಸೂರನ ಅನುಗ್ರಹದಿಂದ ಜನಿಸಿದ ಕರ್ಣನನ್ನು ಮಗುವಾಗಿದ್ದಾಗ ಕುಂತಿಯು ನೀರಿನಲ್ಲಿ ತೇಲಿಬಿಟ್ಟಿದ್ದರಿಂದ ಅಂಬಿಗನ ಮನೆಯಲ್ಲಿ ಮಾತೃವಾತ್ಸಲ್ಯದಿಂದ ವಂಚಿತನಾಗಿ ಸೂತಪುತ್ರನಾಗಿ ಬೆಳೆಯ ಬೇಕಾಯಿತು . ಸೂತಪತ್ತನೆಂದು ಸಮಾಜದಲ್ಲಿ ಆತನ ಶಕ್ತಿ ಸಾಮರ್ಥ್ಯಕ್ಕೆ ಸೂಕ್ತವಾದ ಸ್ಥಾನಮಾನ ದೊರೆಯಲಿಲ್ಲ . ಅಂತಹ ಸಂದರ್ಭದಲ್ಲಿ ದುರ್ಯೋಧನ ಕರ್ಣನನ್ನು ಗೆಳೆಯನಾಗಿ ಸ್ವೀಕರಿಸಿ ಅಂಗರಾಜ್ಯದ ಅಧಿಪತಿಯನ್ನಾಗಿಸುತ್ತಾನೆ . ಆತನಿಗೆ ಒಂದು ಸ್ಥಾನ , ಗೌರವಗಳನ್ನು ದೊರಕಿಸಿಕೊಡುತ್ತಾನೆ . ಈ ಕಾರಣಗಳಿಂದ ಕರ್ಣನು ದುರ್ಯೋಧನನೇ ತನಗೆ ಒಡೆಯ , ಆತನ ಹಗೆಗಳು ನನಗೂ ಹಗೆಗಳೇ , ಆತನ ಅಭಿಮಾನ ನನ್ನ ಅಭಿಮಾನ , ದುರ್ಯೋಧನನ ಹಾದಿಯನ್ನೇ ಅನುಸರಿಸುತ್ತೇನೆ . ‘ ಯುದ್ಧದಲ್ಲಿ ನಿಜ ಪರಾಕ್ರಮದ ಶ್ರೇಷ್ಠತೆಯನ್ನು ತೋರಿಸುತ್ತೇನೆ ‘ ಎನ್ನುವುದು ಕರ್ಣನ ಜಾಯಮಾನಕ್ಕೆ ಸರಿಯಾಗಿಯೇ ಇದೆ . ಕೌರವನು ತನಗೆ ಮಾಡಿದ ಉಪಕಾರವನ್ನು ಯುದ್ಧರಂಗದಲ್ಲಿ ತೀರಿಸುತ್ತೇನೆ . ತಮ್ಮಂದಿರನ್ನು ನೋಯಿಸದೆ , ಸೈನ್ಯಬಲವನ್ನು ಮಾರಿಗೆ ಔತಣವನ್ನಾಗಿ ನೀಡಿ , ಅನ್ನದಾತನ ಋಣವನ್ನು ಮುಗಿಸಿ , ಶರೀರವನ್ನು ತ್ಯಜಿಸುತ್ತೇನೆ ‘ ಎಂಬ ಕರ್ಣನ ಮಾತು ಆತನ ಸ್ವಾಮಿ ಭಕ್ತಿಗೆ ಸಾಕ್ಷಿಯಾಗಿದೆ . ‘ ಸ್ಥಾನ , ಗೌರವ ಹಾಗೂ ಕೀರ್ತಿ ದೊರಕಿಸಿ ಕೊಟ್ಟ ಒಡೆಯನಿಗೆ ತನ್ನ ಪ್ರಾಣವನ್ನು ಸಮರ್ಪಿಸುವುದು ಧರ್ಮವೇ ಆಗಿದೆ ‘ ಎಂಬ ಕರ್ಣನ ನಿರ್ಧಾರ ಸರಿಯಾಗಿದೆ .
3. ಕರ್ಣನಿಗೆ ಶ್ರೀಕೃಷ್ಣನು ಒಡ್ಡಿದ ಆಮಿಷಗಳೇನು ?
“ ಕರ್ಣ ನಿಮಗೂ ಯಾದವ ಕೌರವರಿಗೂ ವಂಶ ಗೌರವದಲ್ಲಿ ಭೇದವಿಲ್ಲ . ನಿನ್ನಾಣೆ , ನೀನು ನಿಜವಾಗಿ ಭೂಮಿಯ ಒಡೆಯ . ಆದರೆ ನಿನಗೆ ಮನದಲ್ಲಿ ಅದರ ಅರಿವಿಲ್ಲ ” ಎಂದು ಹೇಳುತ್ತ ಕರ್ಣನ ಜನ್ಮವೃತ್ತಾಂತವನ್ನು ಹೇಳಿದ ಕೃಷ್ಣನು ‘ ನಿನ್ನನ್ನು ಹಸ್ತಿನಾಪುರದ ರಾಜ್ಯದ ರಾಜನನ್ನಾಗಿ ಮಾಡುವೆನು . ಪಾಂಡವ ಕೌರವ ರಾಜರು ನಿನ್ನನ್ನು ಓಲೈಸುವರು . ನಿನಗೆ ಎರಡು ವಂಶವು ಮರುಮಾತನಾಡದೆ ಸೇವೆಯನ್ನು ಮಾಡುವುವು . ನೀನು ದುರ್ಯೋಧನನ ಬಾಯೆಂಜಲಿಗೆ ಕೈಯೊಡ್ಡುವುದೇ ಹೇಳು . ಎಡಭಾಗದಲ್ಲಿ ಕೌರವೇಂದರ ಸಮೂಹ , ಬಲಭಾಗದಲ್ಲಿ ಪಾಂಡು ಮಕ್ಕಳ ಸಮೂಹ , ಮುಂದುಗಡೆ ಮಾದ , ಮಾಗಧ , ಯಾದವಾದಿಗಳು , ಮಧ್ಯದಲ್ಲಿ ನೀನು ರಾಜಸಭೆಯಲ್ಲಿ ಪ್ರಕಾಶಿಸುವ ಸೊಬಗನ್ನು ತೊರೆದು , ದುರ್ಯೋಧನ ಹೇಳಿದ ಮಾತಿಗೆಲ್ಲಾ ಒಡೆಯ ಪ್ರಸಾದ , ಅನುಗ್ರಹವಾಗಲಿ ‘ ಎಂಬುದು ನಿನಗೆ ಕಷ್ಟವಾಗುವುದಿಲ್ಲವೇ ? ” ಎಂದು ಆಮಿಷ ಒಡ್ಡಿದನು .
ಈ ] ಸಂದರ್ಭಾನುಸಾರ ಸ್ವಾರಸ್ಯ ಬರೆಯಿರಿ ,
1. “ ಬಾಯ್ಲೆಂಬುಲಕೆ ಕೈಯಾನುವರೆ ”
ಸಂದರ್ಭ : – ಕೃಷ್ಣನು ಪಾಂಡವ ಕೌರವರನಡುವೆ ಸಂಧಿ ಮಾಡಲುಹೋಗಿ , ವಿಫಲನಾಗಿ ಹಿಂದಿರುಗುವಾಗ ಕರ್ಣನನ್ನು ಜೊತೆಯಲ್ಲಿ ಕರೆದುಕೊಂಡು ಬಂದು , ಮೈದುನತನದ ಸರಸದಲ್ಲಿ ಮಾತನಾಡಿಸುವ ಸಂದರ್ಭದಲ್ಲಿ ಈ ಮಾತನ್ನು ಕೃಷ್ಣ ಕರ್ಣನಿಗೆ ಹೇಳುತ್ತಾನೆ .
ಸ್ವಾರಸ್ಯ : – ” ಕರ್ಣ ನೀನು ಹಸ್ತಿನಾಪುರದ ರಾಜನಾದರೆ ನಿನಗೆ ಕೌರವರು ಮತ್ತು ಪಾಂಡವರು ಸೇವೆಯನ್ನು ಮಾಡುವರು ಅದನ್ನು ಬಿಟ್ಟು ನೀನು ದುರ್ಯೋಧನನ ಬಾಯೆಂಜಲಿಗೆ ಕೈಯೊಡ್ಡುವುದು ಸರಿಯೇ ” ಎಂದು ಕೃಷ್ಣನು ಹೇಳಿರುವುದು ಸ್ವಾರಸ್ಯಪೂರ್ಣವಾಗಿದೆ .
2. “ ರವಿಸುತನ ಕಿವಿಯಲ್ಲಿ ಬಿತ್ತಿದನು ಭಯವ “
ಆಯ್ಕೆ : – ಈ ವಾಕ್ಯವನ್ನು ಕುಮಾರವ್ಯಾಸನೆಂದು ಪ್ರಸಿದ್ಧನಾದ ಗದುಗಿನ ನಾರಣಪ್ಪನು ರಚಿಸಿರುವ ‘ ಕರ್ಣಾಟ ಭಾರತ ಕಥಾಮಂಜರಿ ‘ ಎಂಬ ಮಹಾಕಾವ್ಯದಿಂದ ಆಯ್ದ ‘ ಕೌರವೇಂದ್ರನ ಕೊಂದೆ ನೀನು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಸಂದರ್ಭ : – ಕೃಷ್ಣನು ಪಾಂಡವ ಕೌರವರನಡುವೆ ಸಂಧಿ ಮಾಡಲು ಹೋಗಿ , ವಿಫಲನಾಗಿ ಹಿಂದಿರುಗುವಾಗ ಕರ್ಣನನ್ನು ಜೊತೆಯಲ್ಲಿ ಕರೆದುಕೊಂಡು ಬಂದು , ಮೈದುನತನದ ಸರಸದಲ್ಲಿ ಮಾತನಾಡಿಸುವ ಸಂದರ್ಭದಲ್ಲಿ ಈ ಮಾತನ್ನು ಕವಿಯು ಹೇಳುತ್ತಾನೆ .
ಸ್ವಾರಸ್ಯ : – “ ಕರ್ಣ ನಿಮ್ಮಲ್ಲಿ , ಯಾದವರು ಕೌರವರಲ್ಲಿ ಭೇದವಿಲ್ಲ . ಹೇಳುವುದಾದರೆ ವಂಶದಲ್ಲಿ ಮೊದಲೆರಡಿಲ್ಲ ನಿನ್ನಾಣೆ , ರಾಜ ನೀನು , ಮನದಲ್ಲಿ ನಡೆದುದರ ಅರಿವಿಲ್ಲ ” ಎಂದು ಹೇಳುತ ಕೃಷ್ಣನು ಕರ್ಣನ ಕಿವಿಯಲ್ಲಿ ಉಭಯವನ್ನು ( ದ್ವಂದ್ವವನ್ನು ಬಿತ್ತಿದನು ಎಂದು ಕವಿಯು ಸ್ವಾರಸ್ಯಪೂರ್ಣವಾಗಿ ವರ್ಣಿಸುತ್ತಾನೆ .
3. “ ಜೀಯ ಹಸಾದವೆಂಬುದು ಕಿಂಷಂಡಿ ”
ಸಂದರ್ಭ : – ಕೃಷ್ಣನು ಪಾಂಡವ ಕೌರವರ ನಡುವೆ ಸಂಧಿ ಮಾಡಲು ಹೋಗಿ , ವಿಫಲನಾಗಿ ಹಿಂದಿರುಗುವಾಗ ಕರ್ಣನನ್ನು ಜೊತೆಯಲ್ಲಿ ಕರೆದುಕೊಂಡು ಬಂದು , ಮೈದುನತನದ ಸರಸದಲ್ಲಿ ಮಾತನಾಡಿಸುವ ಸಂದರ್ಭದಲ್ಲಿ ಈ ಮಾತನ್ನು ಕೃಷ್ಣನು ಕರ್ಣನಿಗೆ ಹೇಳುತ್ತಾನೆ .
ಸ್ವಾರಸ್ಯ : – “ ಕರ್ಣ ನಿನ್ನ ಎಡಗಡೆ ಕೌರವರು , ಬಲಗಡೆ ಪಾಂಡವರು , ಎದುರಿನಲ್ಲಿ ಮಾದ್ರ ಮಾಗಧ ಯಾದವಾದಿಗಳು ಇರುವಾಗ , ನೀನು ಓಲಗದಲ್ಲಿ ವಿಲಾಸದಿಂದ ಮೆರೆಯುವುದನ್ನು ಬಿಟ್ಟು , ಕೌರವನಿಗೆ ಜೀಯ ಪ್ರಸಾದವೆಂಬುದು ಕಷ್ಟವಾಗುವುದಿಲ್ಲವೇ ? ” ಎಂದು ಕೃಷ್ಣನು ಸ್ವಾರಸ್ಯಪೂರ್ಣವಾಗಿ ಹೇಳುತ್ತಾನೆ .
4 “ ಮಾರಿಗೌತಣವಾಯ್ತು ನಾಳಿನ ಭಾರತವು ”
ಸಂದರ್ಭ : – ಕೃಷ್ಣನು ಪಾಂಡವ ಕೌರವರ ನಡುವೆ ಸಂಧಿ ಮಾಡಲು ಹೋಗಿ , ವಿಫಲನಾಗಿ ಹಿಂದಿರುಗುವಾಗ ಕರ್ಣನನ್ನು ಜೊತೆಯಲ್ಲಿ ಕರೆದುಕೊಂಡು ಬಂದು , ಮೈದುನತನದ ಸರಸದಲ್ಲಿ ಮಾತನಾಡಿಸುವ ಸಂದರ್ಭದಲ್ಲಿ ಈ ಮಾತನ್ನು ಕರ್ಣನು ಕೃಷ್ಣನಿಗೆ ಹೇಳುತ್ತಾನೆ .
ಸ್ವಾರಸ್ಯ : – ಕರ್ಣನು ಮುಂದೆ ನಡೆಯುವ ಮಹಾಭಾರತ ಕುರುಕ್ಷೇತ್ರ ಯುದ್ಧದ ಭೀಕರತೆಯನ್ನು ಈ ಮಾತಿನಲ್ಲಿ ಬಹು ಸ್ವಾರಸ್ಯಪೂರ್ಣವಾಗಿದೆ.
೪. “ ನಿನ್ನಪದೆಸೆಯ ಬಯಸುವನಲ್ಲ”
ಸಂದರ್ಭ : – ಕೃಷ್ಣನು ಪಾಂಡವ ಕೌರವರ ನಡುವೆ ಸಂಧಿ ಮಾಡಲು ಹೋಗಿ , ವಿಫಲನಾಗಿ ಹಿಂದಿರುಗುವಾಗ ಕರ್ಣನನ್ನು ಜೊತೆಯಲ್ಲಿ ಕರೆದುಕೊಂಡು ಬಂದು , ಮೈದುನತನದ ಸರಸದಲ್ಲಿ ಮಾತನಾಡಿಸುವ ಸಂದರ್ಭದಲ್ಲಿ ಈ ಮಾತನ್ನು ಕೃಷ್ಣನು ಕರ್ಣನಿಗೆ ಹೇಳುತ್ತಾನೆ .
ಸ್ವಾರಸ್ಯ : – ತನ್ನಜನ್ಮ ರಹಸ್ಯವನ್ನು ಅರಿತು ಕರ್ಣನು ಮನದಲ್ಲಿ ಚಿಂತಿತನಾಗಿ ಮೌನವಾದಾಗ , ಕೃಷ್ಣನು ಈ ಮಾತನ್ನು ಹೇಳುವುದರ ಮೂಲಕ ಕರ್ಣನನ್ನು ಸಮಾಧಾನಪಡಿಸಿದ್ದು ಸ್ವಾರಸ್ಯಪೂರ್ಣವಾಗಿದೆ .
ಉ ] ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಉತ್ತರದಿಂದ ಪೂರ್ಣಗೊಳಿಸಿ .
1 ) ರಾಜೀವಸಖ ಎಂದರೆ ಸೂರ್ಯ ಎಂದು ಅರ್ಥ .
2 ) ಗದುಗಿನ ಭಾರತವು ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿದೆ .
3 ) ಅಶ್ವಿನೀದೇವತೆಗಳ ವರಬಲದಿಂದ ನಕುಲ – ಸಹದೇವರು ಜನಿಸಿದರು .
4 ) ಕರ್ಣನು ಸೂರ್ಯನ ಅನುಗ್ರಹದಿಂದ ಜನಿಸಿದನು .
5 ) ಗದುಗಿನ ಸಮೀಪದ ಕೋಳಿವಾಡದಲ್ಲಿ ಕುಮಾರವ್ಯಾಸನು ಜನಿಸಿದನು .
ಭಾಷಾ ಚಟುವಟಿಕೆ
ಅ). ಅಲಂಕಾರವನ್ನು ಹೆಸರಿಸಿ , ಸಮನ್ವಯಗೊಳಿಸಿ .
“ ಮಾರಿಗೌತನವಾಯ್ತು ನಾಳಿನ ಭಾರತವು ”
ಆಲಂಕಾರ : ರೂಪಕಾಲಂಕಾರ
ಉಪಮೇಯ : ಭಾರತ ಯುದ್ಧ
ಉಪಮಾನ : ಮಾರಿಯ ಔತಣ
ಸಮನ್ವಯ : ಇಲ್ಲಿ ಉಪಮೇಯವಾಗಿರುವ ಭಾರತ ಯುದ್ದಕ್ಕೂ ಉಪಮಾನವಾರಿರುವ ಮಾರಿಯ ಔತಣಕ್ಕೂ ಅಭೇದ ಕಲ್ಪಿಸಲಾಗಿದೆ . ಆದ್ದರಿಂದ ಇದು ರೂಪಕಾಲಂಕಾರವಾಗಿದೆ .
ಆ). ವಿಗ್ರಹಿಸಿ , ಸಮಾಸದ ಹೆಸರನ್ನು ತಿಳಿಸಿ .
1 ) ಇನತನೂಜ = ತನನ ತನೂಜನು ಯಾರೋ ಅವನೇ ( ಸೂರ್ಯ ) – ಬಹುವೀಹಿಸಮಾಸ
2 ) ದನುಜರಿತು = ದನುಜರಿಗೆ ರಿಪ ( ವೈರಿ ) ಆಗಿರುವವನು ಯಾರೋ ಅವನೇ ( ವಿಷ್ಣು ಅಥವಾ ಕೃಷ್ಣ ) – ಬಹುವೀಹಿಸಮಾಸ
3 ) ಮುರಾರಿ = ಮುರನಿಗೆ ಅರಿ ( ಶತ್ರು ) ಆದವನು ಯಾರೋ ಅವನೇ ( ವಿಷ್ಣು ಅಥವಾ ಕೃಷ್ಣ ಬಹುವೀಹಿ ಸಮಾಸ
4 ) ಮೇದಿನಿಪತಿ = ಮೇದಿನಿಗೆ ( ಭೂಮಿಗೆ ) ಪತಿಯಾದವನು ( ಒಡೆಯನಾದವನು ) ಯಾರೋ ಅವನೇ – ಬಹುವೀಹಿಸಮಾಸ
5 ) ಕೈಯಾನು = ಕೈಯನ್ನು + ಆನು – ಕ್ರಿಯಾಸಮಾಸ .
6 ) ಮಾದ್ರಮಾಗಧಯಾದವರು = ಮಾದರೂ + ಮಾಗಧರೂ + ಯಾದವರೂ – ದ್ವಂದ್ವ ಸಮಾಸ
7 ) ಹೊಗೆದೋರು = ಹೊಗೆಯನ್ನು + ತೋರು – ಕ್ರಿಯಾಸಮಾಸ
8 ) ರಾಜೀವಸಖ = ರಾಜೀವನಿಗೆ ( ತಾವರೆಗೆ ) ಸಖನಾದವನು ಯಾರೋ ಅವನೇ ( ಸೂರ್ಯ ) – ಬಹುವೀಹಿಸಮಾಸ
ಭಾಗ- ಬಿ
ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ ಉತ್ತರನ್ನು ಆರಿಸಿ ಬರೆಯಿರಿ
1. ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸುವ ಅಕ್ಷರವನ್ನು ಹೀಗೆ ಕರೆಯುತ್ತೇವೆ :
ಎ) ಪುತ್ಲ ಡಿ) ಗುರು ಸಿ ) ಲಘು ಡಿ )ಗಣ
2. ಕೈಯಾನು – ಪದವು ಈ ಸಮಾಸವಾಗಿದೆ :
ಎ ) ಕ್ರಿಯಾಸಮಾಸ ಬಿ ) ದ್ವಂದ್ವ ಸಮಾಸ ಸಿ) ಬಹುರ್ವಿಸಮಾಸ ಡಿ)ತತ್ಪುರುಷಸಮಾಸ
3. ಮಾದಮಾಗಧಯಾದವರು – ಇದು ಈ ಸಮಾಸಕ್ಕೆ
ಎ ) ಅಂಶಿಸಮಾಸ ಬಿ ) ತತ್ತರುಷಸಮಾಸ ಸಿ)ದ್ವಿಗುಸಮಾಸ ಡಿ)ದ್ವಂದ್ವಸಮಾಸ
4. ಹಸಾದ – ಪದದ ತತ್ಸಮ ರೂಪ :
ಎ ) ವಿಷಾದ ಬಿ ) ಕೈಯಾನು ಸಿ) ಪಸಾದ ಡಿ)ಪ್ರಸಾದ
5. ದೃಗುಜಲ ಪದದ ಅರ್ಥ ಇದಾಗಿದೆ :
ಎ ) ಕಣ್ಣನೀರು ಬಿ ) ತಿಳಿನೀರು ಸಿ) ಮೃಗಗಳು ಡಿ) ಬಿಸಿನೀರು
6. ಬಹುವೀಹಿ ಸಮಾಸಕ್ಕೆ ಈ ಪದವು ಉದಾಹರಣೆಯಾಗಿದೆ :
ಎ ) ಹೊಗೆದೋರು ಎ ) ಉಪಮಾಲಂಕಾರ ಸಿ)ರಾಜೀವಸಖ ಡಿ)ಬಾಯ್ಡಂಬಲ
7. ಭಾಮಿನಿ ಷಟ್ಟದಿಯಲ್ಲಿನ ಒಟ್ಟು ಮಾತ್ರೆಗಳ ಸಂಖ್ಯೆ :
ಎ ) ೧೦೮ ಬಿ ) ೧೦೨ ಸಿ) ೬೪ ಡಿ) ೧೪೪
8. ದನುಜರಿಪು – ಇದು ಈ ಸಮಾಸಕ್ಕೆ ಉದಾಹರಣೆಯಾಗಿದೆ :
ಎ ) ಕ್ರಿಯಾಸಮಾಸ ಬಿ)ಬಹುರ್ವಿಸಮಾಸ ಸಿ) ದ್ವಂದ್ವಸಮಾಸ ಡಿ) ತತ್ಪುರುಷಸಮಾಸ
9. ಉಪಮಾನ ಉಪಮೇಯಗಳ ನಡುವೆ ಅಭೇದ ಸಂಬಂಧ ಕಲ್ಪಿಸುವ ಅಲಂಕಾರ :
ಬಿ ) ರೂಪಕಾಲಂಕಾರ ಸಿ ) ದೃಷ್ಟಾಂತಾಲಂಕಾರ ಸಿ ) ‘ ಮನ’ಗಣ
10. ಗುರು – ಲಘು ಮೂರಿರಲು ಈ ಗಣವಾಗುತ್ತದೆ .
ಎ ) ಭ-ಯಗಳಿ ಬಿ ) ‘ ಜ -ರ’ಗಣ ಸಿ)’ಮ -ನ’ ಗಣ ಡಿ)’ಸ’ -’ತ ‘ಗಣ
11. ಷಟ್ನದಿಯಲ್ಲಿರುವ ವಿಧಗಳು :
ಎ ) ಆರು ಬಿ ) ಹಸನಾದ ಸಿ) ನಾಲ್ಕು ಡಿ)ಮೂರು
12. ‘ ಕೌಂತೇಯ ‘ – ಪದವು ಈ ಅಕ್ಷರಗಣಕ್ಕೆ ಉದಾಹರಣೆಯಾಗಿದೆ :
ಎ ) ‘ ಯ’ಗಳಿ ಬಿ ) ‘ ಸ’ಗಳಿ ಸಿ ) ‘ತ ‘ ಗಣ ಡಿ)’ಭ ‘ಗಣ
13 , ಒಂದು ಅಕ್ಷರವನ್ನು ಉಚ್ಚರಿಸುವ ಅವಧಿಗೆ ಹೀಗೆನ್ನುತ್ತಾರೆ :
ಎ ) ಗಣ ಬಿ ) ಮಾತ್ರೆ ಸಿ )ಭೋಗ ಡಿ ) ಭಾಮಿನಿ
14 .ಮೂರು – ನಾಲ್ಕು ಮಾತ್ರೆಗಳಿಂದ ಗಣವಿಭಜನೆಯನ್ನು ಮಾಡುವ ಷಟ್ಟದಿ :
ಎ ) ವಾರ್ಧಕ ಬಿ ) ಕುಸುಮ ಸಿ ) ಭೋಗ ಡಿ ) ಭಾಮಿನಿ
15. ಉರವಣಿಸು – ಈ ಪದದ ಅರ್ಥ :
ಎ . ಹೆಚ್ಚಾಗು ಬಿ)ಅವಸರ ಸಿ)ಮನಸ್ಸು ಡಿ)ಕಡಿಮೆಯಾಗು
ಉತ್ತರಗಳು : ೧. ಬಿ , ಗುರು ೨. ಎ . ಕ್ರಿಯಾಸಮಾಸ ೩. ಡಿ . ಬಿ ) ದ್ವಂದ್ವ ಸಮಾಸ ೪.ಡಿ ) ಪ್ರಸಾದ ೫ . ಎ ) ಕಣ್ಣನೀರು ೬. ಸಿ)ರಾಜೀವಸಖ
೭ .ಬಿ ) ೧೦೨ ೮.ಬಿ) ಬಹುರ್ವಿಸಮಾಸ ೯ .ಬಿ ) ರೂಪಕಾಲಂಕಾರ ೧೦ . ಸಿ)’ಮ -ನ’ ಗಣ ೧೧.ಎ ) ಆರು ೧೨. ಸಿ ) ‘ತ ‘ ಗಣ ೧೩. ಬಿ ) ಮಾತ್ರೆ
೧೪ . ಡಿ ) ಭಾಮಿನಿ ೧೫. ಎ . ಹೆಚ್ಚಾಗು
ಮೊದಲೆರೆಡು ಪದಗಳಿಗಿರುವ ಸಂಬಂಧದಂತೆ ಮೂರನೇ ಪದಕ್ಕೆ ಸಂಬಂಧ ಬರೆಯಿರಿ :
1. ಕಂದಪದ್ಯ :: ನಾಲ್ಕುಸಾಲು : : ಷಟ್ಟದಿ: _________
2 . ಋಣ :: ಹಂಗು ::ರಣ: _______
3. ಲಕ್ಷ್ಮೀಶ :: ಷಟ್ಪದಿ ::ಕುಮಾರವ್ಯಾಸ :___________
4. ಪಟ್ಟದಿ :: ಮಾತ್ರಾಗಣ : : ಚಂಪಕಮಾಲಾವೃತ್ತ: _______
5 . ಇನತನೂಜ :: ಬಹುರ್ವಿಸಮಾಸ :: ಮದ್ರಾಮಾಗಧಯದವರು: ____
6. ಲಕ್ಶ್ಮೀಶ : :ಉಪಮಾಲೋಲ :: ಕುಮಾರವ್ಯಾಸ: _________
7.ಉರ್ವಿಯೊಳ್ :: ಸಪ್ತಮಿಸಮಾಸ ::ಸಮಾಜಿಯಂ :ಪಿ__________
8. ಲಘು :: ಒಂದುಮಾತ್ರೆ :: ಗುರು: ______
9. ಮುರಾರಿ::ಕೃಷ್ಣ : :ರವಿಸುತ :______
10.ಹಸಾದ ::ಪ್ರಸಾದ : : ದಾತಾರ : ದ್ವಿಗುಸಮಾಸ: ________
ಉತ್ತರಗಳು : ೧ . ಆರುಸಾಲು ೨. ಯುದ್ಧ ೩. ಭಾಮಿನೀಷಟ್ಪದಿ
೪. ಅಕ್ಷರಗಣ ೫. ದ್ವಂದ್ವಸಮಾಸ ೬. ರೂಪಕಸಾಮ್ರಾಜ್ಯಚಕ್ರವರ್ತಿ ೭ .ದ್ವಿತೀಯ ೮. ಎರೆಡು ಮಾತ್ರೆ ೯.ಕರ್ಣ ೧೦.ದಾತೃ
10th Standard Kouravendrana Konde Neenu Kannada Notes Pdf Download
ಇತರೆ ಪದ್ಯಗಳು :
ಹಕ್ಕಿ ಹಾರುತಿದೆ ನೋಡಿದಿರಾ ಕನ್ನಡ ನೋಟ್ಸ್