2nd Puc A Sunny Morning English Notes Pdf Kannada Medium kseeb solutions II puc english Chapter 5 12th Standard Chapter 5 Chapter Question Bank With Answer Mcq Pdf Ncert solutions Ncert solutions for class 12 english A Sunny Morning Download 2nd PUC English Textbook Springs Answers Pdf 2nd year english A Sunny Morning Notes Guide Extract Question Summary Shorts Notes 2023 Karnataka
Table of Contents
Ncert solutions for class 12 english A Sunny Morning
Class: 2nd Puc
Chapter Name: A Sunny Morning
2nd PUC English Textbook Springs Answers Pdf
Second Puc English chapter 5 Notes Pdf Download
ಆತ್ಮೀಯ ವಿಧ್ಯಾರ್ಥಿಗಳೇ, 12ನೇ ತರಗತಿ A Sunny Morning ಪಾಠದ PDFನ ಎಲ್ಲಾ ಪ್ರಶ್ನೆ ಉತ್ತರಗಳನ್ನು ಇಲ್ಲಿ ನೀಡಿದ್ದೇವೆ, ಇದರ ಮೂಲಕ ನೀವು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ವಿಧ್ಯಾರ್ಥಿಗಳಿಗೆ ಸಹಾಯವಾಗುತ್ತದೆ, 12th Class A Sunny Morning ಪಾಠದ ನೋಟ್ಸ್ಲ್ಲಿರುವ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು 12 StdA Sunny Morning ಪಾಠದ PDF ಡೌನ್ಲೋಡ್ ಲಿಂಕನ್ನು ನೀಡಿದ್ದೇವೆ. ಪ್ರೀತಿಯ ವಿಧ್ಯಾರ್ಥಿಗಳೇ, ನೀವು ನಿಮ್ಮ ಜ್ಞಾನ ಮತ್ತು ಕೌಶಲ್ಯದ ಜೊತೆಗೆ ನಾವು ನೀಡಿರುವಂತಹ ನೋಟ್ಸ್ ನ ಸಹಾಯದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಿದೆ.
A Sunny Morning Summary In Kannada
ಈ ಸ್ಪಾನಿಷ್ ಏಕಾಂಕ ನಾಟಕದಲ್ಲಿ ಶ್ರೀ ಗೊನ್ಸಾಲೋ ಮತ್ತು ಶ್ರೀಮತಿ ಲಾರಾ ಎಂಬ ಇಬ್ಬರು ಪ್ರೇಮಿಗಳು ಹಲವು ವರ್ಷದ ನಂತರ ಹಠಾತ್ತಾಗಿ ಭೇಟಿಯಾದ ವಿವರಗಳನ್ನು ವೈನೋದಿಕವಾಗಿ ಚಿತ್ರಿಸಲಾಗಿದೆ.
ಗೊಲ್ಸಾಲೋ ಮತ್ತು ಲಾರಾ ಇಬ್ಬರು ಒಬ್ಬರನ್ನೊಬ್ಬರು ಬಹಳ ಪ್ರೀತಿಸುತ್ತಿದ್ದರು. ಅದರೆ ವಿಧಿ ಅವರನ್ನು ದೂರಮಾಡಿತು. ಈಗ ಅವರಿಬ್ಬರೂ ಎಪ್ಪತ್ತರ ವಯಸ್ಸಿನಲ್ಲಿದ್ದು, ಪ್ರಕಾಶಮಯವಾದ ಒಂದು ಮುಂಜಾನೆ ಪುನಃ ಅವರಿಬ್ಬರ ಭೇಟಿ ಮ್ಯಾಡ್ರಿಡ್ ನಗರದ ಉದ್ಯಾನವನದಲ್ಲಿ ಅನಿರೀಕ್ಷಿತವಾಗಿ ಆಯಿತು. ಶರತ್ಕಾಲದ ಅ ಮುಂಜಾನೆ ಲಾರಾ ತನ್ನ ಸೇವಕಿಯಾದ ಪೆಟ್ರಾಳೊಂದಿಗೆ ಉದ್ಯಾನವನಕ್ಕೆ ಬರುವಳು. ತಾನು ಮಾಮೂಲಿಯಾಗಿ ಕುಳಿತುಕೊಳ್ಳುವ ಬೆಂಚಿನ ಮೇಲೆ ಯಾರೂ ಕುಳಿತಿರದೆ ಅದು ಖಾಲಿಯಿದ್ದುದನ್ನು ಕಂಡು ಲಾರಾಳಿಗೆ ಸಂತೋಷವಾಯಿತು.
ಅದರೆ ಪೆಟ್ರಾ ಅಸಹನೆಯಿಂದ ಇದ್ದುದನ್ನು ನೋಡಿದ ಲಾರಾ, ” ಹೋಗು. ಉದ್ಯಾನವನದ ಕಾವಲುಗಾರನೊಂದಿಗೆ ಹರಟೆ ಹೊಡಿ” ಎಂದು ತಮಾಷೆಯಾಗಿ ಹೇಳಿ ಹತ್ತು ನಿಮಿಷದಲ್ಲಿ ವಾಪಸ್ ಬರುವಂತೆ ಅದೇಶಿಸಿ ಅವಳನ್ನು ಕಳುಹಿಸಿದಳು. ಹೊರಡುವ ಮುಂಚೆ ಅವಳಿಂದ ಬ್ರೆಡ್ ನ ತುಣುಕುಗಳನ್ನು ಪಡೆದುಕೊಂಡ ಲಾರಾ ಅದನ್ನು ಅಲ್ಲದ್ದ ಪಾರಿವಾಳಗಳಿಗೆ ಎರಚಿ ಅವೆಲ್ಲ ಸಂತಸದಿಂದ ತಿನ್ನುವುದನ್ನು ನೊಡುತ್ತಾ ಕುಳಿತಳು.
ಅದೇ ವೇಳೆಗೆ ಸುಮಾರು 70 ವರ್ಷ ವಯಸ್ಸಿನ ಗೊನ್ಸಾಲೋ ತನ್ನ ಸೇವಕ ಜುನಿಟೋನೋಂದಿಗೆ ಪಾರ್ಕಿಗೆ ಬಂದ. ಅವರಿಬ್ಬರೂ ಬಂದಾಗ ಪಾರ್ಕಿನ ಯಾವ ಬೆಂಚುಗಳು ಖಾಲಿ ಇರಲಿಲ್ಲ. ಅವರ ಮಾಮೂಲಿನ ಬೆಂಚನ್ನು ಮೂರು ಮಂದಿ ಪಾದ್ರಿಗಳು ಆಕ್ರಮಿಸಿದ್ದರು. ಸ್ವಲ್ಪ ಸಿಡುಕನೂ ಅಸಹನೆಯ ಸ್ವಭಾವದವನೂ ಆದ ಗೊನ್ಸಾಲೋಗೆ ಕುಳಿತುಕೊಳ್ಳಲು ಸ್ಥಳ ಸಿಗದಿದ್ದಕ್ಕಾಗಿ ಕೋಪ ಬಂತು. ಕಡೆಗೆ ಅವರಿಬ್ಬರೂ ನಡೆಯುತ್ತಾ ಲಾರಾಳು ಪಾರಿವಾಳಗಳಿಗೆ ಆಹಾರ ನೀಡುತ್ತಿದ್ದ ಮೂಲೆಗೆ ಬಂದರು. ಅವರಿಬ್ಬರ ಹೆಜ್ಜೆ ಸಪ್ಪಳದಿಂದ ಹೆದರಿಂದ ಪಾರಿವಾಳಗಳು ಅಲ್ಲಿಂದ ಹಾರಿಹೋದವು.
ಇದರಿಂದ ಕೋಪಗೊಂಡ ಲಾರಾ ಗೊಲ್ಸಾಲೋ ಮತ್ತು ಜುನಿಟೋರನ್ನು ಪಾರಿವಾಳಗಳನ್ನೇಕೆ ಹೆದರಿಸಿ ಓಡಿಸಿದಿರಿ ಎಂದು ಪ್ರಶ್ನಿಸಿದಳು ಅವಳ ಪ್ರಶ್ನೆಗೆ ಉದ್ದಟತನ ಮತ್ತು ಅಲಕ್ಷ್ಯದಿಂದ ಗೊನ್ಸಾಲೊ ಇದು ಸಾರ್ವಜನಿಕ ಉದ್ಯಾನ ನನಗೆ ಬೇಕಾದಂತೆ ನಾನು ಮಾಡುತ್ತೇನೆ. ಎಂದು ಉತ್ತರಿಸಿದ ಹಾಗಾದರೆ ಅ ಪಾದ್ರಿಗಳನ್ನೇಕೆ ಆಕ್ಷೇಪಿಸಿದಿರಿ? ಎಂದು ಆಕೆಯೂ ಎದುರು ಉತ್ತರಿಸಿದಳು.
ಈಕೆ ಜಗಳವಾಡಲು ಸಿದ್ದಳಿದ್ದಾಳೆ ಎಂಬುದನ್ನು ತಿಳಿದ ಗೊನ್ಸಾಲೋ ಅಪರಿಚಿತಳೊಂದಿಗೆ ಏನು ಜಗಳ? ಎಂದು ಗುಣಗುತ್ತಾ ಅಲ್ಲಿಂದ ಹೊರಟನು. ಅವನ ಈ ಒರಟು ನಡವಳಿಕೆಯ ಬಗ್ಗೆ ಮೊದಲಿಗೆ ಕೋಪಗೊಂಡಳಾದರೂ ಆತ ಆಯಾಸದಿಂದ ಒದ್ದಾಡುತ್ತಾ ಬೆವರುವುದನ್ನು ಕಂಡು ಸ್ವಲ್ಪ ಮರುಕುಗೊಂಡಳು. ತಾನು ಕುಳಿತಿದ್ದ ಬೆಂಚಿನ ಕಡೆಗೆ ಆತ ಮತ್ತೆ ಕಾಲನ್ನು ಎಳೆದುಕೊಂಡು ನಡೆದು ಬರುತ್ತಿರುವುದನ್ನು ಅಕೆ ನೋಡಿ ಎತ್ತಿನ ಗಾಡಿ ಕೂಡ ಇಷ್ಟೊಂದು ಧೂಳನ್ನು ಎಬ್ಬಿಸಿಕೊಂಡು ಬರುವುದಿಲ್ಲ ಎಂದು ಕಟಕಿಯಾಡಿದಳು. ಮೂವರು ಪಾದ್ರಿಗಳು ಇನ್ನೂ ಬೆಂಚಿನ ಬೇರೆಯೇ ಮೇಲೇಯೇ ಕುಳಿತ್ತಿದ್ದರಿಂದ ಅನಿವಾರ್ಯವಾಗಿ ಗೊನ್ಸಾಲೋ ಲಾರಳು ಕುಳಿತಿದ್ದ ಬೆಂಚಿನ ಬಳಿಗೆ ಬರಬೇಕಾಯಿತು, ಹಾಗಾಗಿ ಅತ ಆಕೆಗೆ ಬೆಳಗಿನ ವಂದನೆಗಳನ್ನು ಹೇಳುತ್ತಾ ಬಂದು ಬೆಂಚಿನ ಒಂದು ತುದಿಯಲ್ಲಿ ಕುಳಿತನು.
ಪ್ರತಿವಂದನೆಯನ್ನು ಸಲ್ಲಿಸುವ ಬದಲಿಗೆ ನನ್ನ ಅನುಮತಿ ಇಲ್ಲದೆ ಬೆಂಚಿನ ಮೇಲೆಕೆ ಕುಳಿತುಕೊಂಡಿರಿ? ಎಂದು ಲಾರಾ ಆಕ್ಷೇಪಿಸಿದಳು. ಆತ ಇದು ಸಾರ್ವಜನಿಕ ಸ್ಥಳ. ಇಲ್ಲಿ ಕೂರಲು ಯಾರ ಅನುಮತಿಯೂ ಬೇಕಿಲ್ಲ ಎಂದು ಉತ್ತರಿಸಿದನು. ಹೀಗೆಯೇ ಮಾತಿಗೆ ಮಾತು ಬೆಳೆಯಿತು. ಈ ಮಧ್ಯೆತನ್ನ ಕರವಸ್ತ್ರದಿಂದ ಗೊನ್ಸಾಲೋ ಬೂಟನ್ನು ಒರೆಸಿದ್ದನ್ನೂ ಬೂತಗನ್ನಡಿ ಯಂತಹ ಕನ್ನಡದಿಂದ ಪುಸ್ತಕ ಓದಲು ಯತ್ನಿಸಿದ್ದನ್ನೂ ಆತನ ಬೇಟೆಯ ಪ್ರಯತ್ನಗಳನ್ನೂ ಒಟ್ಟಾರೆ ಆತನ ಎಲ್ಲಾ ನಡವಳಿಕೆಯನ್ನು ಕುರಿತೂ ವ್ಯಂಗ್ಯವಾಗಿ ಮಾತನಾಡುತ್ತಾಳೆ. ನಿಮಗೆ ಸಂಬಂಧಿಸಿದ ವಿಷಯವನ್ನು ಕುರಿತು ಮಾತನಾಡಬೇಡಿ ಎಂದು ಆತ ಹೇಳಿದರೂ ಟೀಕೆ ಮಾಡುವುದನ್ನು ಅಕೆ ಬಿಡಲಿಲ್ಲ.
ಕಡೆಗೆ ಆತ ನನಗೆ ಪುಸ್ತಕ ಓದಲು ಬಿಡಿ ಎಂದು ಕೋರಬೇಕಾಯಿತು. ಓದಲು ಆರಂಭಿಸಲು ಮುನ್ನ ನಶ್ಯವನ್ನು ಹಂಚಿಕೊಳ್ಳುವುದರೊಂದಿಗೆ ಅವರಿಬ್ಬರ ಜಗಳ ಮುಕ್ತಾಯವಾಯಿತು.
ಲಾರಾಳ ಅನುಮತಿಯೊಂದಿಗೆ ಗೊನ್ಸಾಲೋ ಪುಸ್ತಕವನ್ನು ಗಟ್ಟಿಯಾಗಿ ಓದಲು ಆರಂಭಿಸಿದನು. ಅಷ್ಟು ದಪ್ಪದ ಕನ್ನಡಕವನ್ನು ಧರಿಸಿ ಆತ ಕಷ್ಟಪಡುವುದನ್ನು ನೋಡಿ ಆಕೆ ತನ್ನ ಸಂತಾಪ ವ್ಯಕ್ತಪಡಿಸಿದಳು. ಕನ್ನಡವಿಲ್ಲದೆಯೇ ತಾನು ಪುಸ್ತಕ ಓದಬಲ್ಲೆನೆಂದು ಹೇಳಿ ಅದನ್ನು ಮಾಡಿಯೂ ತೋರಿಸಿದಳು. ಅಕೆಯ ಕಣ್ಣಿನ ದೃಷ್ಟಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಗೊನ್ಸಾಲೋ ತಾನು ಚಿಕ್ಕಂದಿನಲ್ಲಿ ಈ ಪುಸ್ತಕದಲ್ಲಿನ ಸೂಕ್ತಿಗಳಂತಹ ರಚನೆಗಳನ್ನು ಬರೆಯುತ್ತಿದ್ದನೆಂದು ಜಂಬಕೊಚ್ವಿಕೊಂಡನು.
ಅನೇಕ ಲೇಖಕರು ಪರಿಚಯ ತನಗಿದೆಯೆಂದು ಹೇಳಿ ತಾನು ಆರು ವರ್ಷದವನಿರುವಾಗಲೇ ಅಮೆರಿಕಾಕ್ಕೆ ಭೇಟಿ ನೀಡಿದ್ದನ್ನು ಹೇಳಿಕೊಂಡನು. ಬಹುಶಃ ನೀವು ಕೊಲಂಬಸ್ ನ ತಂಡದೊಂದಿಗೇ ಅಮೆರಿಕಾಕ್ಕೆ ಹೋಗಿರಬೇಕು. ಎಂದು ಆಕೆ ಹಾಸ್ಯ ಮಾಡಿದಳು. ತನಗೆ ಸಾಕಷ್ಟು ವಯಸ್ಸಾಗಿರುವುದೇನೋ ನಿಜವಾದರ ಕೊಲಂಬಸ್ ನ ಜೊತೆಗೆ ಪ್ರಯಾಣಿಸುವಷ್ಟು ಮುದುಕ ತಾನಲ್ಲವೆಂದು ಆತನೂ ನಗುತ್ತಾ ಉತ್ತರಿಸಿದನು.
ತಾನು ಓದುತ್ತಿದ್ದ ಪುಸ್ತಕದ ಲೇಖಕನಾದ ಕ್ಯಾಂಪೋ ಅಮೋರ್ ನನ್ನು ತಾನು ತನ್ನ ಸ್ವಂತ ಸ್ಥಳವಾದ ವ್ಯಾಲೆನ್ಸಿಯಾದಲ್ಲಿ ಭೇಟಿಯಾಗಿದ್ದ ಎಂದು ಗೊನ್ಸಲೋ ಹೇಳಿ ಕೊಂಡಾಗ ಲಾರಾಳ ಕಿವಿ ನೆಟ್ಟಗಾಯಿತು. ತಾನು ಆ ಊರಿನ ಬಳಿಯ ಮಾರಿಸೆಲ್ಲಾ ಎಂಬ ಹೆಸರಿನ ಮನೆಯಲ್ಲಿ ಹಲವು ಬಾರಿ ವಾಸಿಸಿರುವುದಾಗಿ ಉತ್ತರಿಸಿದಳು. ಆ ಮಾರಿಸೆಲ್ಲಾದಲ್ಲಿ ತಾನು ಲಾರಾ ಲೊರೆಂಟೆ ಎಂಬ ಅದ್ಭುತ ಸೌಂದರ್ಯ ಹುಡುಗಿಯನ್ನು ಕಂಡಿದ್ದೆ ಎಂದು ಗೊನ್ಸಾಲೋ ಹೇಳಿದನು. ಆಕೆಯನ್ನು ಎಲ್ಲರು ರಜತ ಸುಂದರಿ ಎಂದು ಹೊಗಳುತ್ತಿದ್ದದ್ದು ಆಕೆಯ ಅತಿಶಯವಾದ ಸೌಂದರ್ಯ ಕಿಟಕಿಯ ಬಳಿ ನಿಂತು ಆಕೆ ಕೈಯಲ್ಲಿ ಕೆಂಗುಲಾಬಿಯನ್ನು ಹಿಡಿದಿರುತ್ತಿದ್ದದ್ದು ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ವಿವರಿಸಿದನು. ತನ್ನ ಸೋದರ ಸಂಬಂಧಿ ಪ್ರತಿದಿನ ಕುದುರೆಯೇರಿ ಹೋಗಿ ಆಕೆಗೆ ಹೂಗುಚ್ಛ ನೀಡುತ್ತಿದ್ದದ್ದನು ಜ್ಞಾಪಿಸಿಕೊಂಡನು. ಈ ಎಲ್ಲ ಮಾತುಗಳು ಲಾರಾಳನ್ನು ಕುರಿತದ್ದೇ ಆಗಿದ್ದರೂ ಆಕೆ ತನ್ನ ಗುರುತನ್ನು ಬಿಟ್ಟುಕೊಡದೆ ತಾನು ಆ ಲಾರಾಳ ಆಪ್ತ ಗೆಳತಿ ಎಂದು ಹೇಳಿಕೊಂಡಳು. ಆತನೂ ತಾನೆ ಆಕೆಯ ಪ್ರೇಮಿ ಎಂಬ ಗುಟ್ಟನ್ನು ಬಿಟ್ಟುಕೊಡಲಿಲ್ಲ.
ಮುಂದೆ ಇಬ್ಬರೂ ತಮ್ಮ ಕಥೆಗಳನ್ನೇ ಇತರರದು ಎನ್ನುವಂತೆ ನಿರೂಪಿಸುವವರು. ಲಾರಾಳಿಗೆ ಇಷ್ಟವಿಲ್ಲದಿದ್ದರೂ ಆಕೆಯ ತಂದೆ ತಾಯಿ ಅವಳನ್ನು ಊರಿನ ಒಬ್ಬ ಶ್ರೀಮಂತ ವರ್ತಕನಿಗೆ ಕೊಟ್ಟು ಮದುವೆ ಮಾಡಲು ನಿಶ್ಚಯಿಸಿದರು. ಅವಳನ್ನು ಭೇಟಿ ಯಾಗಲೆಂದು ಒಂದು ದಿನ ಆಕೆಯ ಪ್ರೇಮಿ ಬಂದಾಗ ಆ ವ್ಯಾಪಾರಿಗೂ ಆತನಿಗೂ ದ್ವಂದ್ವಯುದ್ದವಾಗಿ ಅದರಲ್ಲಿ ವ್ಯಾಪಾರಿ ಗಾಯಗೊಂಡನು. ಪ್ರೆಮಿ ಹೆದರಿ ಓಡಿ ಹೋದನು. ಸೆವಿಲ್ಲೆಯಲ್ಲಿ ಕೆಲಕಾಲ ಕಳೆದು ಮಾಡ್ರಿಡ್ ಗೆ ಬಂದನು. ಅಲ್ಲಿಂದ ಲಾರಾಳಿಗೆ ಅನೇಕ ಕಾಗದಗಳನ್ನು ಬರೆದರೂ ಆಕೆ ಉತ್ತರಿಸಲಿಲ್ಲ. ಹಾಗಾಗಿ ಬೇಸತ್ತ ಅವನು ಸೈನ್ಯವನ್ನು ಸೇರಿ ಆಫ್ರಿಕಾಕ್ಕೆ ಹೋಗಿ ಹೋರಾಟದಲ್ಲಿ ಸತ್ತನು. ಎಂದು ಗೊನ್ಸಾಲೋ ಹೇಳಿದನು. ಅದಕ್ಕೆ ಪ್ರತಿಯಾಗಿ ಲಾರಾಳು ಕಥೆಯನ್ನು ನಿರೂಪಿಸುತ್ತಾ ಆಕೆ ಅನೇಕ ತಿಂಗಳುಗಳ ಕಾಲ ತನ್ನ ಪ್ರೇಮಿಯಾಗಿ ಕಾದಳು. ಆತನಿಂದ ಯಾವುದೇ ಸುದ್ದಿ ಬಾರದಿದ್ದಾಗ ಸಮುದ್ರ ತೀರಕ್ಕೆ ಹೋಗಿ ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟಳು. ಎಂದಳು.
ಅದರೆ ನಿಜವಾಗಿ ಲಾರಾ ಎರಡು ವರ್ಷಗಳ ಬಳಿಕ ಇನ್ನೊಬ್ಬ ವ್ಯಕ್ತಿಯೊಂದಿಗೆ ಮದುವೆ ಮಾಡಿಕೊಂಡಳು. ಎಂಬ ಸಂಗತಿಯನ್ನು ಆಕೆಯೂ ಗೊನ್ಸಾಲೋ ದ್ವಂದ್ವಯುದ್ದವಾದ ಮೂರು ತಿಂಗಳ ನಂತರ ಒಬ್ಬ ನರ್ತಕಿಯೊಂದಿಗೆ ಪ್ಯಾರೀಸ್ ಗೆ ಓಡಿಹೋಗಿದ್ದನ್ನು ಒಬ್ಬರಿಗೊಬ್ಬರೂ ಹೇಳಲಿಲ್ಲ ಕಡೆಗೆ ತೀರಾ ಅಪರಿಚಿತರಾಗಿದ್ದ ತಾವಿಬ್ಬರೂ ಹೀಗೆ ಒಬ್ಬರೊಬ್ಬರು ಭೇಟಿಯಾಗಿ ಎಷ್ಟೋ ವರ್ಷಗಳ ಹಳೆಯ ಪ್ರಣಯದ ಕಥೆಯನ್ನು ಹಂಚಿಕೊಳ್ಳುವಂತಾಗಿದ್ದು ವಿದಿಯ ಆಟ ಎಂದು ಅವರಿಬ್ಬರೂ ಅಭಿಪ್ರಾಯ ಪಡುತ್ತಾರೆ.
ಮರುದಿನವೂ ಇಲ್ಲಿಗೆ ಬರುತ್ತೀರಾ? ಎಂದು ಲಾರಾ ಆತನನ್ನು ಕೇಳಿದಾಗ ಬಿಸಿಲಿದ್ದರೆ ಖಂಡಿತ ಬರುತ್ತೇನೆ, ಪಾರಿವಾಳಗಳನ್ನು ಬೆದರಿಸುವುದಿಲ್ಲ ಅವುಗಳಿಗೆಂದು ನಾನು ಬ್ರೆಡ್ ನ ತುಂಡುಗಳನ್ನು ತರುತೇನೆ. ಎಂದು ಗೊನ್ಸಾಲೋ ಉತ್ತರಿಸುತ್ತಾನೆ. ಅಷ್ಟರಲ್ಲಿ ಜುನಿಟೋ ಮತ್ತು ಪೆಟ್ರಾ ಇಬ್ಬರೂ ಹಿಂದಿರುಗುತ್ತಾರೆ, ಉದ್ಯಾನವನದ ಕಾವಲುಗಾರರ ನೀಡಿದ್ದ ಹೂಗುಚ್ಚವನ್ನು ಪೆಟ್ರಾ ಲಾರಾಳಿಗೆ ನೀಡುತ್ತಾಳೆ. ಪರಸ್ಪರ ವಂದನೆಗಳನ್ನು ಹೇಳಿ ಲಾರಾ ಮತ್ತು ಗೊನ್ಸಾಲೋ ಅಲ್ಲಿಂದ ಹೊರಡುತ್ತಾರೆ.
ಲಾರಾಳ ಕೈಗಳಿಂದ ಉದುರಿದ್ದ ಹೂಗಳನ್ನು ಗೊನ್ಸಾಲೋ ಬಗ್ಗಿ ಹೆಕ್ಕಿಕೊಳ್ಳುವಾಗ ಲಾರಾ ಹಿಂದಿರುಗಿ ನೋಡುತ್ತಾಳೆ ಅವರಿಬ್ಬರಿಗೂ ತಾವೆ ಅ ಹಳೆಯ ಪ್ರೇಮಿಗಳು ಎಂಬುದು ಖಚಿತಾವಾದರೂ ಹಳೆಯ ಚಿತ್ರಗಳೆ ಉಳಿಯಲಿ ಎಂಬ ಕಾರಣದಿಂದ ಸತ್ಯವನ್ನು ಮುಚ್ಚಿಟ್ಟು ಮುಂದೆ ನಡೆಯುತ್ತಾರೆ,
kseeb solutions II puc english Chapter 5
PDF Name | 2nd Puc English A Sunny Morning Chapter Notes Pdf |
No. of Pages | 05 |
PDF Size | 75KB |
Language | 2nd Puc ಕನ್ನಡ ಮಾಧ್ಯಮ |
Category | English |
Download Link | Available ✓ |
Topics | 2nd Puc English A Sunny Morning Chapter Notes Pdf |
II Puc A Sunny Morning Chapter Notes
2nd Pucವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು A Sunny Morning Chapter ನೋಟ್ಸ್ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 12ನೇ ತರಗತಿ A Sunny Morning Chapter ಪಾಠದ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ. ಈ Pdf ಅನ್ನು ನೀವು ಉಚಿತವಾಗಿ ಹಾಗೂ ಸುಲಭವಾಗಿ ನೋಡಿ ಡೌನ್ಲೋಡ್ ಕೂಡ ಮಾಡಬಹದು. ನಿಮಗಾಗಿ ನಾವು ಈ ನೋಟ್ಸ್ ಅನ್ನು ನೀಡಿದ್ದೇವೆ. Read Online Button ಮೇಲೆ ಕ್ಲಿಕ್ ಮಾಡಿದಾಗ ಈ Pdfಅನ್ನು ವಿಕ್ಷಿಸಬಹುದು ಹಾಗೂ Download Now ಮೇಲೆ ಕ್ಲಿಕ್ ಮಾಡಿ ನೀವು ಈ ನೋಟ್ಸ್ ಅನ್ನು Download ಕೂಡ ಮಾಡಬಹುದು.
12th Standard Chapter 5 Chapter Question Bank With Answer Mcq Pdf
ಇಲ್ಲಿ ನೀವು 2nd Puc A Sunny MorningChapter ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಿಸಬಹುದು.
Read Onlineಇಲ್ಲಿ ನೀವು 12th Standard A Sunny Morning Chapter ಪಾಠದ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
2nd year english A Sunny Morning Pdf
FAQ:
Who does Laura feed the bread crumbs?
A flock of pigeons
How is Dona Laura able to read the poem without her glasses?
She knows every word by heart.