2nd Puc English Everything I Need to Know I Learned In The Forest Notes Pdf | ದ್ವಿತೀಯ ಪಿ.ಯು.ಸಿ ಇಂಗ್ಲೀಷ್‌ ನೋಟ್ಸ್‌

Second Puc English chapter 4 Notes Pdf Download 12th Standard Everything I Need to Know I Learned In The Forest Notes Pdf Ncert solutions kseeb solutions II puc english Chapter 4 Question Bank With Answer Mcq 2nd PUC English Textbook Springs Answers Pdf 12th Class english Everything I Need to Know I Learned In The Forest Chapter summary In Kannada Medium Karnataka 2023

Ncert solutions for class 12 english Everything I Need to Know I Learned In The Forest

Class: 2nd Puc

Chapter Name: Everything I Need to Know I Learned In The Forest

2nd PUC English Textbook Springs Answers Pdf

2nd Puc English Everything I Need to Know I Learned In The Forest Notes Pdf
2nd Puc English Everything I Need to Know I Learned In The Forest Notes Pdf

Second Puc English chapter 4 Notes Pdf Download

ಆತ್ಮೀಯ ವಿಧ್ಯಾರ್ಥಿಗಳೇ, 12ನೇ ತರಗತಿ Everything I Need to Know I Learned In The Forest ಪಾಠದ PDFನ ಎಲ್ಲಾ ಪ್ರಶ್ನೆ ಉತ್ತರಗಳನ್ನು ಇಲ್ಲಿ ನೀಡಿದ್ದೇವೆ, ಇದರ ಮೂಲಕ ನೀವು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ವಿಧ್ಯಾರ್ಥಿಗಳಿಗೆ ಸಹಾಯವಾಗುತ್ತದೆ, 12th Class Everything I Need to Know I Learned In The Forest ಪಾಠದ ನೋಟ್ಸ್‌ಲ್ಲಿರುವ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು 12 Std Everything I Need to Know I Learned In The Forest ಪಾಠದ PDF ಡೌನ್ಲೋಡ್‌ ಲಿಂಕನ್ನು ನೀಡಿದ್ದೇವೆ. ಪ್ರೀತಿಯ ವಿಧ್ಯಾರ್ಥಿಗಳೇ, ನೀವು ನಿಮ್ಮ ಜ್ಞಾನ ಮತ್ತು ಕೌಶಲ್ಯದ ಜೊತೆಗೆ ನಾವು ನೀಡಿರುವಂತಹ ನೋಟ್ಸ್ ನ ಸಹಾಯದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಿದೆ.

kseeb solutions II puc english Chapter 4

PDF Name2nd Puc English Everything I Need to Know I Learned In The Forest Chapter Notes Pdf
No. of Pages05
PDF Size75KB
Language2nd Puc ಕನ್ನಡ ಮಾಧ್ಯಮ
CategoryEnglish
Download LinkAvailable ✓
Topics2nd Puc English Everything I Need to Know I Learned In The Forest Chapter Notes Pdf

II Puc Everything I Need to Know I Learned In The Forest Chapter Notes

2nd Pucವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು Everything I Need to Know I Learned In The Forest Chapter ನೋಟ್ಸ್‌ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 12ನೇ ತರಗತಿ Everything I Need to Know I Learned In The Forest Chapter ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

12th Class english Everything I Need to Know I Learned In The Forest Chapter summary In Kannada

ಡಾ|| ವಂದನಾ ಶಿವಾರವರು ಈ ಪಾಠದಲ್ಲಿ ತಾವು ಹೇಗೆ ಅರಣ್ಯಗಳಿಂದ ಪರಿಸರದ ಪ್ರಾಥಮಿಕ ಪಾಠಗಳನ್ನು ಕಲಿತರೆಂಬುದನ್ನು ವಿವರಿಸಿದ್ದಾರೆ, ಅವರು ಬರೆದ ಎರಡು ಬೇರೆ ಬೇರೆ ಲೇಖನಗಳನ್ನು ಜೋಡಿಸಿ ಈ ಪಠ್ಯವನ್ನು ಸಿದ್ದಪಡಿಸಲಾಗಿದೆ.
ಅಂತಾರಾಷ್ಟ್ರೀಯ ಖ್ಯಾತಿಯ ಪರಿಸರವಾದಿಯಾಗಿರುವ ವಂದನಾ ಶಿವರವರು ಹುಟ್ಟಿ ಬೆಳೆದದ್ದು ಹಿಮಾಲಯದ ತಪ್ಪಲು ಪ್ರದೇಶದಲ್ಲಿ ಈಕೆಯ ತಂದೆ ಒಬ್ಬ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದುದ್ದರಿಂದ ಆಕೆಯ ಬಾಲ್ಯದ ದಿನಗಳು ಅರಣ್ಯದ ಹಸಿರು ಪ್ರದೇಶದಲ್ಲಿಯೆ ಕಳೆಯಿತು. ಆಕೆಯ ತಾಯಿ ಮೂಲತಃ ಈಗ ಅರಣ್ಯದ ಹಸಿರು ಪ್ರದೇಶದಲ್ಲಿಯೇ ಕಳೆಯಿತು. ಆಕೆಯ ತಾಯಿ ಮೂಲತಃ ಈಗ ಪಾಕಿಸ್ತಾನಕ್ಕೆ ಸೇರಿರುವ ಲಾಹೋರಿನವರು. ಭಾರತದ ವಿಭಜನೆಯ ನಂತರ ಭಾರತಕ್ಕೆ ಬಂದು ನೆಲಸಿ ಕೃಷಿ ಕಾರಗಳಲ್ಲಿ ತೊಡಗಿದರು. ಆಕೆ ಕಾಡು. ಮರಗಳು, ಅರಣ್ಯದ ನಾಗರಿಕತೆಗಳು ಮುಂತಾದವುಗಳನ್ನು ಕುರಿತು ಹಾಡುಗಳನ್ನು ಕಟ್ಟಿ ಹಾಡುತ್ತಿದ್ದರು. ವಂದನಾರವರ ಮೇಲೆ ಈ ಎಲ್ಲ ಪ್ರಭಾವಗಳಿದ್ದವು.
ʼಚಿಪ್ಲೋʼ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುವುದರೊಂದಿಗೆ ಲೇಖಕಿಯ ಪರಿಸರ ಚಳುವಳಿಯ ಇತಿಹಾಸ ಆರಂಭವಾಗುತ್ತದೆ. 1970ರ ದಶಕದಲ್ಲಿ ಹಿಮಾಲಯದ ಘಾಲ್‌ ಪ್ರದೇಶದಲ್ಲಿ ಮರಮುಟ್ಟುಗಳಿಗಾಗಿ ಅಗಧ ಪ್ರಮಾಣದಲ್ಲಿ ಕಾಡಿನ ಮರಗಳನ್ನು ಕಡಿಯಲು ಆರಂಭಿಸಲಾಯಿತು ಇದರಿಂದಾಗಿ ಭೂಕುಸಿತ ಮತ್ತು ಪ್ರವಾಹಗಳು ಹೆಚ್ಚಿದವು. ಕುಡಿಯುವ ನೀರು, ಪ್ರಾಣಿಗಳಿಗೆ ಮೇವು ಹಾಗೂ ಉರುವಲಿನ ಲಭ್ಯತೆ ಕಡಿಮೆಯಾಗತೊಡಗಿತು. ಅ ಪ್ರದೇಶದ ಹೆಣ್ಣುಮಕ್ಕಳು ಸೌದೆ ಹಾಗೂ ಕುಡಿಯುವ ನೀರಿಗಾಗಿ ಹತ್ತಾರು ಕಿಲೋಮೀಟರ್‌ ಗಳ ದೂರಕ್ಕೆ ನಡೆದು ಹೋಗಬೇಕಾಯಿತು. ನಮ್ಮ ಆಹಾರ, ನೀರು, ಉರುವಲು ಎಲ್ಲಕ್ಕೂ ಕಾಡುಗಳೆ ಮೂಲ ಆಧಾರ. ಕಾಡುಗಳನ್ನು ಉಳಿಸಿಕೊಳ್ಳದಿದ್ದರೆ ನಮ್ಮ ಅಳಿವು ಖಚಿತ ಎಂಬುದು ಆ ಗ್ರಾಮೀಣ, ಅನಕ್ಷರಸ್ಥ ಮಹಿಳೆಯರಿಗೆ ಅರ್ಥವಾಯಿತು. ಕೂಡಲೇ ಅವರೆಲ್ಲ ಒಗ್ಗಟ್ಟಾದರೂ ಮರಗಳನ್ನು ಅಪ್ಪಿಕೊಂಡು ಮರಗಳನ್ನು ಕತ್ತರಿಸುವ ಮೊದಲು ನಮ್ಮನ್ನು ಕೊಲ್ಲಿ ಎಂದು ಹಠ ಹಿಡಿದರು. ಕಡೆಗೆ ಕಾಡಿನ ಲೂಟಿಕೋರರು ಮಹಿಳೆಯರ ಈ ಚಳುವಳಿಗೆ ಮಣಿಯಬೇಕಾಯಿತು.
ತಮ್ಮ ಪಿ.ಎಚ್.ಡಿ. ಅಧ್ಯಯನಕ್ಕೆ ಕೆನಡಾಕ್ಕೆ ಹೋಗುವ ಮೊದಲು 1973ರಲ್ಲಿ ವಂದನಾರವರು ಹಿಮಾಲು ಪ್ರಾಂತ್ಯಕ್ಕೆ ಭೇಟಿನೀಡಿದರು. ಅಲ್ಲಿಯ ಕಾಡುಗಳಲ್ಲಿ ಸುತ್ತಾಡುವುದು ಹಾಗು ನೀರಿನ ಝರಿಗಳಲ್ಲಿ ಈಜುವುದು ಅವರ ಉದ್ದೇಶವಾಗಿತ್ತು. ಆದರೆ ಅಲ್ಲಿಯ ಕಾಡುಗಳು ಮಾಯಾವಾಗಿದ್ದವು, ನದಿಗಳಲ್ಲಿ ನೀರು ತೊಟ್ಟಿಕ್ಕುತ್ತಿತ್ತು. ಆ ಕ್ಷಣವೆ ತಾವೂ ಕೂಡಾ ಚಿತ್ತೋ ಚಳುವಳಿಯಲ್ಲಿ ಸಕ್ರಿಯವಾಗಿ ಸ್ವಯಂಸೇವಕಿಯಾಗಿ ಭಾಗವಹಿಸಬೇಕೆಂದು ತೀರ್ಮಾನಿಸಿದರು. ತಮ್ಮ ಬಿಡುವಿನ ವೇಳೆಯಲ್ಲಿ ಪಾದಯಾತ್ರೆ, ಅರಣ್ಯನಾಶದ ದಾಖಲೀಕರಣ, ಮುಂತಾದವುಗಳಲ್ಲಿ ತೊಡಗಿ ಚಿಪ್ರೋ ಚಳುವಳಿಯ ಸಂದೇಶವನ್ನು ಎಲ್ಲೆಡೆ ಪಸರಿಲಾರಂಭಿಸಿದರು.
ಮುಂದಿನ ಭಾಗಗಳಲ್ಲಿ ಲೇಖಕಿಯು ಅದ್ವಾನಿ ಎಂಬ ಪುಟ್ಟಹಳ್ಳಿಯಲ್ಲಿ 1977ರಲ್ಲಿ ನಡೆದ ಒಂದು ಮನಮುಟ್ಟುವ ಘಟನೆಯನ್ನು ವಿವರಿಸಿದ್ದಾರೆ. ಆ ಪುಟ್ಟ ಹಳ್ಳಿಯಲ್ಲಿದ್ದ ಬಚ್ಚದೇವಿ ಎಂಬ ಮಹಿಳೆಯು ಕಾಡಿನ ಮರಗಳನ್ನು ಕಡಿಯುವ ಪರವಾನಗಿ ಹೊಂದಿದ್ದ ತನ್ನ ಗಂಡನ ವಿರುದ್ದವೇ ಹೋರಾಟಕ್ಕೆ ಇಳಿದಿದ್ದಳು. ಮರಗಳನ್ನು ಕಡಿಯಲೆಂದು ಅರಣ್ಯಾಧಿಕಾರಿಗಳು ಬಂದಾಗ ಹಳ್ಳಿಯ ಮಹಿಳೆಯರೆಲ್ಲಾ ಮಧ್ಯಾಹ್ನದ ನಡು ಬಿಸಿಲಿನಲ್ಲೂ ಲಾಟೀನುಗಳನ್ನು ಬೆಳಗಿಕೊಂಡು ಕಾಡಿನಲ್ಲಿ ಗುಂಪು ಸೇರಿದ್ದರು. ಹೀಗೇಕೆ? ಎಂದು ಪ್ರಶ್ನಿಸಿದಾಗ “ನಿಮಗೆಲ್ಲ ಅರಣ್ಯಶಾಸ್ತ್ರ ಎಂದರೆ ಏನೆಂದು ಕಲಿಸಲು” ಎಂದು ಅವರು ಉತ್ತರ ನೀಡಿದರು. ಆಗ ಅಧಿಕಾರಿಗಳುʼ ನೀವೆಲ್ಲ ದಡ್ಡರು.
ನಿಮಗೆ ಕಾಡುಗಳ ಮಹತ್ವ ತಿಳಿದಿಲ್ಲ. ಕಾಡುಗಳು ಮರಮುಟ್ಟುಗಳು, ಗೋಂದು ಮುಂತಾದ ಉತ್ಪನ್ನಗಳನ್ನು ನೀಡುವ ಮೂಲಕ ನಮಗೆ ಲಾಭ ತಂದು ಕೊಡುತ್ತವೆ. ಎಂದರು. ಅಗ ಆ ಮಹಿಳೆಯರೆಲ್ಲ ಒಟ್ಟಾಗಿ ಹಾಡಿ ಕಾಡು ಮಣ್ಣಿನ ಸವಕಳಿಯನ್ನು ಮಾತ್ರವಲ್ಲದೆ ಭೂಮಿಯ ಮೇಲಿರುವ ಎಲ್ಲ ಜೀವಿಗಳಿಗೆ ಅಧಾರವಾಗಿದೆ” ಎಂಬುದನ್ನು ತಿಳಿಸಿಕೊಟ್ಟರು.
ಮುಂದಿನ ಅಧ್ಯಾಯದ ಶೀರ್ಷಿಕೆ “Beyond Monocultures” (ಏಕಫಸಲಿನ ಕೃಷಿಗಳನ್ನು ಮೀರಿ). ಇತ್ತೀಚಿನ ದಿನಗಳಲ್ಲಿ ನಾವು ಒಂದೇ ತಳಿಯ ಧಾನ್ಯಗಳನ್ನು ಬೆಳೆಯುತ್ತಿದ್ದೇವೆ. ಆದರೆ ಚಿಪ್ರೋ ಚಳುವಳಿಯು ತನಗೆ ಜೀವವೈವಿಧ್ಯದ ಮಹತ್ವ ಮತ್ತು ಆ ವೈವಿಧ್ಯತೆಯ ಕಾರಣದಿಂದಾಗಿ ಹೇಗೆ ಪ್ರಕೃತಿಯ ಸಮತೋಲನ ಸಾಧ್ಯವಾಯಿತು. ಎಂಬುದನ್ನು ಕಲಿಸಿಕೊಟ್ಟಿತು ಎಂಬುದನ್ನು ಲೇಖಕಿ ಇಲ್ಲಿ ವಿವರಿಸಿದ್ದಾರೆ. ರೈತರ ಹೊಲಗಳಿಂದ ವಿಧವಿಧವಾದ ಧಾನ್ಯಗಳ ಅನೇಕ ತಳಿಗಳನ್ನು ಅವರು ಸಂಗ್ರಹಿಸಿದರು. ಇವುಗಳೆಲ್ಲವನ್ನೂ ಪ್ರಾಯೋಗಿಕವಾಗಿ ಬೆಳೆಸಲೆಂದು ʼನವಧಾನ್ಯʼದಲ್ಲಿದೆ ಎಂದು ಉತ್ತರ ಎಂಬುದು ಲೇಖಕಿಯ ಅಭಿಪ್ರಾಯ, ಜೀವವೈವಿಧ್ಯದ ಸಂರಕ್ಷಣೆ ಹಾಗೂ ಸಾವಯುವ ಕೃಷಿಯ ಅಭಿವೃದ್ದಿಗಾಗಿ ನವಧಾನ್ಯದ ಮೂಲಕ ನಡೆಸಿದ ಚಳುವಳಿಯಿಂದಾಗಿ ಇಡಿಯ ದೇಶದಾದ್ಯಂತ ನೂರಕ್ಕೂ ಹೆಚ್ಚು ಸಮುದಾಯ ಬೀಜ ನಿಧಿಯನ್ನು ಸ್ಥಾಪಿಸುವುದು ಮತ್ತು ಮೂರು ಸಾವಿರಕ್ಕೂ ಹೆಚ್ಚು ಭತ್ತದ ತಳಿಗಳನ್ನು ಸಂರಕ್ಷಿಸುವುದು ಸಾಧ್ಯವಾಗಿದೆ. ಎಂದು ಆಕೆ ಹೇಳಿದ್ದಾರೆ.
ಕೃಷಿಕರಿಗೆ ಪೆಟೋಲ್‌, ಡೀಸೆಲ್‌ ಮುಂತಾದ ಇಂದನಗಳ್ನು ಬಳಸುವ ಬದಲಿಗೆ ಸೌರಶಕ್ತಿಯನ್ನು ಬಳಸುವುದನ್ನು ಮತ್ತು ರಾಸಾಯನಿಕ ಗೊಬ್ಬರಗಳ ಬದಲಿಗೆ ಸಾವಯವ ಗೊಬ್ಬರವನ್ನು ಉಪಯೋಗಿಸುವುದನ್ನು ನವಧಾನ್ಯ ಚಳುವಳಿ ಹೆಳಿಕೊಟ್ಟಿದೆ. ” ಜೀವವೈವಿಧ್ಯವು ನನಗೆ ಸಮೃದ್ದಿ, ಸ್ವಾತಂತ್ರ್ಯ ಸಹಕಾರ ಮತ್ತು ಸಹಬಾಳ್ವೆಯನ್ನು ಕಲಿಸಿಕೊಟ್ಟಿದೆ. ಎಂದು ವಂದನಾ ಶಿವ ಹೇಳುತ್ತಾರೆ. Rights of Nature on the Global Stage (ಜಾಗತಿಕ ಹಂತದಲ್ಲಿ ಪ್ರಕೃತಿಯ ಹಕ್ಕುಗಳು)
ಎನ್ನುವುದು ಮುಂದಿನ ಭಾಗದ ಶೀರ್ಷಿಕೆಯಾಗಿದೆ. ಈ ಭಾಗದಲ್ಲಿ ಲೇಖಕಿಯು ಪ್ರಕೃತಿಗೂ ತನ್ನದೇ ಆದ ಕೆಲವು ಹಕ್ಕುಗಳಿವೆ ಎಂದು ಪ್ರತಿಪಾದಿಸಿದ್ದಾರೆ. ಪ್ರಕೃತಿಗೂ ತನ್ನದೇ ಆದ ಕೆಲವು ಹಕ್ಕುಗಳಿವೆ ಎಂದು ಪ್ರತಿಪಾದಿಸಿದ್ದಾರೆ. ಪ್ರಕೃತಿಯ ಹಕ್ಕುಗಳ ಅಂಶಗಳನ್ನು ಮೊಟ್ಟಮೊದಲ ಬಾರಿಗೆ ಈಕ್ವೆಡಾರ್‌ ಎಂಬ ದೇಶವು ತನ್ನ ಸಂವಿಧಾನದಲ್ಲಿ ಅಳವಡಿಸಿಕೊಂಡಿತು.
ಇದರ ಪ್ರಭಾವದಿಂದಾಗಿ ಅನೇಕ ಮಹತ್ವದ ಅಂತಾರಾಷ್ಟ್ರೀಯ ತೀರ್ಮಾನಗಳನ್ನು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಲಾಯಿತು. ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿಯು ಈ ಬಗ್ಗೆ ಒಂದು ವರದಿಯನ್ನು ಹೊರಡಿಸಿದ್ದು ಇದರ ಶೀರ್ಷಿಕೆಯು ” Harmony with Nature” (ಪ್ರಕೃತಿಯೊಂದಿಗೆ ಸಾಮರಸ್ಯ) ಎಂಬುದಾಗಿದೆ. ತಾನು ಪ್ರಕೃತಿಯ ಒಂದು ಅವಿಭಾಜ್ಯ ಅಂಗ ಎಂಬುದನ್ನು ಮಾನವ ಅರಿಯದಿರುವುದರಿಂದಲೇ ಪ್ರಕೃತಿಯನ್ನು ನಾಶಮಾಡುವ ಪ್ರವೃತ್ತಿ ಅವನಲ್ಲಿ ಕಂಡುಬರುತ್ತದೆ. ಪ್ರಕೃತಿಯ ನಾಶವೆಂದರೆ ಅಂತಿಮವಾಗಿ ತನ್ನ ನಾಶವೇ ಆಗಿದೆ ಎಂಬುವುದನ್ನು ಈಗಲಾದರೂ ನಾವು ತಿಳಿಯಬೇಕಿದೆ. ಎಂದು ಅ ವರದಿಯು ಹೇಳಿದೆ ಎಂದು ಲೇಖಕಿ ವಿವರಿಸಿದ್ದಾರೆ. ಭೇವಾದ (Separatism) ವೇ ಪ್ರಕೃತಿ-ಮನುಷ್ಯನ ನಡುವಣ ಸೌಹಾರ್ದರಹಿತತೆಗೆ ಹಾಗೂ ಪ್ರಕೃತಿಯ ಮೇಲಿನ ಅತ್ಯಾಚಾರಕ್ಕೆ ಮೂಲ ಕಾರಣ ಎಂಬುದು ಲೇಖಕಿಯ ಅಭಿಪ್ರಾಯ, ಪಶ್ಚಿಮ ಆಪ್ರಿಕಾದ ಪರಿಸರವಾದಿಯಾದ ಕಾರ್ಮಕ್ಕಲಿನನ್‌ ಹೇಳುವಂತೆ. ವರ್ಣಭೇದ ನೀತಿಯಿಂದ ಕಾಣುವ ಹಂತವನ್ನು ದಾಟಿದ್ದೇವೆ. ಆದರೆ ಪ್ರಕೃತಿಯಿಂದ ಮನುಷ್ಯ ದೂರ ಮತ್ತು ಬೇರೆ ಎಂಬ ಭೇದವಾದ ಇನ್ನೂ ಅಳಿಯಬೇಕಾಗಿದೆ. ಎಂದು ಲೇಖಕಿ ಅಭಿಪ್ರಾಯಪಡುತ್ತಾರೆ.

ಕೈಗಾರೀಕರಣಯುಗಕ್ಕೆ ಮುನ್ನ ಜೀವಿಗಳು ಪ್ರಕೃತಿಯ ಅವಿಭಾಜ್ಯ ಅಂಗ ಎಂದು ಜನರು ನಂಬಿದ್ದರು. ಅದರೆ ವೈಜ್ಞಾನಿಕ ಚಿಂತನೆ ಬೆಳೆದಂತೆ ಭೂಮಿಯು ಒಂದು ನಿರ್ಜೀವ ವಸ್ತು, ಜೀವಿಗಳಿಗೂ ಅದಕ್ಕೂ ಸಂಬಂಧವಿಲ್ಲ ಎಂಬ ಆಲೋಚನೆ ಬೆಳೆಯಿತು. ಅಂದಿನಿಂದ ಭೂಮಿಯ ಮೇಲೆ ಮನುಷ್ಯನ ದಬ್ಬಾಳಿಕೆ ಆರಂಭವಾಯಿತು. ಕೈಗಾರಿಕಾ ಕ್ರಾಂತಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಭೂಮಿಯನ್ನು ಬಲಿಕೊಡಲಾಯಿತು. ವೈವಿಧ್ಯಮಯವಾದ ಬೆಳೆಗಳ ಬದಲಾಗಿ ಏಕರೂಪದ ತಳಿಗಳನ್ನು ಬೆಳೆಯುವ ವಿಧಾನ ಜಾರಿಗೆ ಬಂದಿತು. ಭೂಮಿತಾಯಿ ಎಂದು ಕರೆಯಲಾಗುತ್ತಿದ್ದ ಭೂಮಿ ಈ ಹಂತದಲ್ಲಿ ಖಾಲಿಜಾಗ ಎಂಬ ಹೆಸರನ್ನು ಪಡೆಯಿತು.
ಆಧುನಿಕ ವಿಜ್ಞಾನದ ಜನಕ ಎಂದು ಹೆಸರಾದ ಪ್ರಾನ್ಸಿಸ್‌ ಬೇಕನ್‌ ಈ ಸಿದ್ದಾಂತದ ಪ್ರತಿಪಾದಕ. ಆತನ ಸಿದ್ದಾಂತಗಳಿಂದ ಪ್ರಚೋದಿತವಾದ ವಿಜ್ಞಾನಿಗಳು ಭೂಮಿಯ ಹೊಟ್ಟೆಯನ್ನು ಬಗೆದು ಕಬ್ವಿಣ, ಚಿನ್ನ, ತಾಮ್ರ ಮುಂತಾದ ಲೋಹಗಳನ್ನೂ ಕಾಡಿನ ಮರಮುಟ್ಟುಗಳನ್ನೂ ಅಗಾಧ ಪ್ರಮಾಣದಲ್ಲಿ ಮನುಕುಲದ ಬಳಕೆಗಾಗಿ ಉಪಯೋಗಿಸಲು ಬೇಕಾದ ವಿಧಾನ ತಂತ್ರಜ್ಞಾನಗಳನ್ನು ರೂಪಿಸಿದರು. ಇದೆಲ್ಲವುಗಳಿಂದಾಗಿ ಕೈಗಾರಿಕೆಗಳು ಹೆಚ್ಚಿದವು, ನಗರಗಳು ರೂಪುಗೊಂಡವು. ನಗರ ಸಂಸ್ಕೃತ ಬೆಳೆದು ಗ್ರಾಮೀಣ ಹಾಗೂ ಅರಣ್ಯ ಪದ್ದತಿಗಳು ತೊಂದರೆಗೆ ಈಡಾದವು. ಮುಂದಿನ ಅಧ್ಯಾಯವನ್ನು ಲೇಖಕಿ what Nature Teachaes ಎಂದು ಕರೆದಿದ್ದಾರೆ, ನಾವು ಇಂದು ಜಾಗತಿಕರಣ ಕಾರಣದಿಂದಾಗಿ ಬಹುಮುಖಿಯಾದ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇದಕ್ಕೆ ಮುಖ್ಯ ಕಾರಣ ನಾವು ಪ್ರಕೃತಿಯನ್ನು ನಿರ್ಜೀವ ವಸ್ತುವೆಂದು ಭಾವಿಸಿರುವುದು.
ನಮ್ಮ ಚಿಂತನಾ ವಿಧಾನ ಬದಲಾಗಿ ಪರಿಸರ ಪ್ರಜ್ಞೆಎಲ್ಲರಲ್ಲು ಮೂಡಬೇಕು. ಪ್ರಕೃತಿ ನಮ್ಮೆಲ್ಲರ ಮಾರ್ಗದರ್ಶಕ ಎಂದು ಲೇಖಕಿ ಹೇಳಿದ್ದಾರೆ. ತಮ್ಮ ನವದಾನ್ಯ ಫಾರಂನಲ್ಲಿ ಭೂ ವಿಶ್ವವಿದ್ಯಾಲಯ ವಿದ್ದು ಅದು ʼಭೂ ಪ್ರಜಾಪ್ರಭುತ್ವವೆಂದರೆ ಜೀವಜಾಲದಲ್ಲಿ ಎಲ್ಲ ಪ್ರಭೇದಗಳಿಗೂ ಸ್ವತಂತ್ರವಾಗಿ ಅಭಿವೃದ್ದಿ ಹೊಂದಲು ಅವಕಾಶ ನೀಡುವುದು. ಮನುಷ್ಯ ಈ ಭೂಕುಟುಂಬದಲ್ಲಿ ಒಬ್ಬ ಸದಸ್ಯನಾಗಿದ್ದು ಇತರ ಎಲ್ಲ ಪ್ರಭೇದಗಳನ್ನು ಗುರುತಿಸುವಮ ಸಂರಕ್ಷಿಸುವ ಹಾಗೂ ಅವುಗಳ ಹಕ್ಕುಗಳನ್ನು ಸಂರಕ್ಷಿಸುವ ಹೊಣೆಗಾರಿಕೆಯನ್ನು ಹೊಂದಿದ್ದಾನೆ, ನವದಾನ್ಯದಲ್ಲಿರುವ ಭೂ ವಿಶ್ವವಿದ್ಯಾಲಯದಲ್ಲಿ ಕೃಷಿಕರು, ಶಾಲಾಮಕ್ಕಳು ಮುಂತಾದ ವಿಶ್ವದ ವಿವಿದ ಭಾಗಗಳಿಂದ ಆಗಮಿಸಿರುವ ಎಲ್ಲ ಜನರೂ ಜೀವಂತ ಬೀಜಗಳು (living Seeds)ಸಜೀವವಾದ ಭೂಮಿ ಹಾಗೂ ಜೀವಾಜಾಲದೊಂದಿಗೆ ಸಂಪರ್ಕ ಪಡೆಯುತ್ತಾರೆ, ಅಲ್ಲಿಯ ಎರಡು ಪ್ರಮುಖ ವ್ಯಾಸಂಗ ಮಾಲೆಗಳೆಂದರೆ ಸಾವಯವ ಕೃಷಿ ಮತು ಕೃಷಿ ಪರಿಸರ ವಿಜ್ಞಾನದ A-Z ಮತ್ತು ಗಾಂಧಿ ಮತ್ತು ಜಾಗತೀಕರಣ.
ವಂದನಾ ಶಿವರ ಭೂ ವಿಶ್ವವಿದ್ಯಾಲಯಕ್ಕೆ ಪ್ರೇರಣೆ ದೊರೆತಿರುವುದು ರವೀಂದ್ರನಾಥ ಠಾಕೂರರ ʼಶಾಂತಿನಿಕೇತನʼದಿಂದ. ಠಾಕೂರರು ತಮ್ಮ ತಪೋವನ ಎನ್ನುವ ಪ್ರಬಂಧದಲ್ಲಿ ಭಾರತದ ನಾಗರೀಕತೆಯ ಪುನಶ್ವೇತನದ ಮೂಲವಿರುವುದು ಜನಭರಿತವಾದ ನಗರಗಳಲಲ್ಲ. ಬದಲಿಗೆ ದಟ್ಟವಾದ ಕಾಡುಗಳಲ್ಲಿ, ಭಾರತೀಯ ದಾರ್ಶನಿಕರ ಉದಾತ್ತ ಚಿಂತನೆಗಳು ಜನದಟ್ಟಣೆಯ ಮಧ್ಯದಲ್ಲಿ ಹುಟ್ಟಿಲ್ಲ, ಬದಲಿಗೆ ನದಿ. ಬೆಟ್ಟ ಕಾಡುಗಳೊಂದಿಗೆ ಅವರು ನಡೆಸಿದ ಅನುಸಂಧಾನದಿಂದ ಮೂಡಿದೆ. ಅರಣ್ಯದ ಶಾಂತಿಯು ಮಾನವನ ಬೌದ್ದಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಅಲ್ಲಿನ ವೈವಿದ್ಯತೆ ಚರಾಚರಗಳನ್ನು ಒಗ್ಗೂಡಿಸುವ ಶಕ್ತಿಯೂ ಆಗಿದೆ. ಎಂದಿದ್ದಾರೆ.
ಠಾಕೂರರ ಪ್ರಕಾರ ಕಾಡು ಎನ್ನುವುದು ಕೇವಲ ಜ್ಞಾನ ಹಾಗೂ ಸ್ವಾತಂತ್ರದ ಪ್ರತೀಕ ಮಾತ್ರವಲ್ಲ. ಬದಲಿಗೆ ಅದು ಸೌಂದರ್ಯ ಹಾಗೂ ರಸಾಗುಭವ, ಸಂತೋಷ, ಸಾಮರಸ್ಯಗಳ ಸಂಕೇತವೂ ಆಗಿದೆ. ಹೀಗೆ ಅರಣ್ಯಗಳು ನಮಗೆ ಐಕ್ಯತೆ ಹಾಗೂ ಸಹಾನುಭೂತಿಯನ್ನು ಕಲಿಸುತ್ತವೆ.
ಕೊಳ್ಳುಬಾಕತನ ಮತ್ತು ಲೋಭ ಯಾವಾಗ ಕೊನೆಯಾಗುವುದೋ ಆ ನಿಮಿಷದಿಂದ ಆನಂದಕರವಾದ ಜೀವನ ಪ್ರಾರಂಭವಾಗುತ್ತದೆ. ಎಂಬ ಹೇಳಿಕೆಯೊಂದಿಗೆ ವಂದನಾರವರು ತಮ್ಮ ಪ್ರಬಂಧವನ್ನು ಮುಕ್ತಾಯಗೊಳಿಸಿದ್ದಾರೆ.

Class 12th Everything I Need to Know I Learned In The Forest Chapter ಪಾಠದ ನೋಟ್ಸ್‌

ಈ Pdf ಅನ್ನು ನೀವು ಉಚಿತವಾಗಿ ಹಾಗೂ ಸುಲಭವಾಗಿ ನೋಡಿ ಡೌನ್ಲೋಡ್‌ ಕೂಡ ಮಾಡಬಹದು. ನಿಮಗಾಗಿ ನಾವು ಈ ನೋಟ್ಸ್‌ ಅನ್ನು ನೀಡಿದ್ದೇವೆ. Read Online Button ಮೇಲೆ ಕ್ಲಿಕ್‌ ಮಾಡಿದಾಗ ಈ Pdfಅನ್ನು ವಿಕ್ಷಿಸಬಹುದು ಹಾಗೂ Download Now ಮೇಲೆ ಕ್ಲಿಕ್‌ ಮಾಡಿ ನೀವು ಈ ನೋಟ್ಸ್‌ ಅನ್ನು Download ಕೂಡ ಮಾಡಬಹುದು.

12th Standard Chapter 4 Chapter Question Bank With Answer Mcq Pdf

ಇಲ್ಲಿ ನೀವು 2nd Puc Everything I Need to Know I Learned In The Forest Chapter ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಿಸಬಹುದು.

Read Online

ಇಲ್ಲಿ ನೀವು 12th Standard Everything I Need to Know I Learned In The Forest Chapter ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

FAQ:

Name the prominent South African environmentalist mentioned in the essay. 

Cormac Cullinan

Who is called the father of modern science?

Francis Bacon

ಇತರೆ ವಿಷಯ :

All Subjects Notes

Kannada Notes

English Notes

Leave your vote

-1 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.