8ನೇ ತರಗತಿ ಕಟ್ಟುವೆವು ನಾವು ಕನ್ನಡ ನೋಟ್ಸ್ ಪ್ರಶ್ನೆ ಉತ್ತರ, 8th Standard Kattuvevu Naavu Kannada Notes Question Answer Pdf Download
ತರಗತಿ : 8ನೇ ತರಗತಿ
ಪೂರಕ ಪಾಠದ ಹೆಸರು : ಕಟ್ಟುವೆವು ನಾವು
ಕೃತಿಕಾರರ ಹೆಸರು : ಎಂ. ಗೋಪಾಲಕೃಷ್ಣ ಅಡಿಗ
Table of Contents
Kattuvevu Naavu Kannada Notes Question Answer
ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ .
1. ಕೋಟೆಗೋಡೆಗೆ ಮೆಟ್ಟಿಲುಗಳು ಯಾವುದು ?
ಉತ್ತರ : ಕೋಟೆಗೋಡೆಗೆ ನಮ್ಮ ಹೆಣಗಳೇ ಮೆಟ್ಟಿಲು ,
2. ಕವಿ ಯಾರಿಗೆ ವೀಳೆಯವನು ಕೊಡುವೆನೆಂದಿದ್ದಾರೆ ?
ಉತ್ತರ : ತಡೆವವರು , ಹೊಡೆವವರು ಕೆಟ್ಟದ್ದನ್ನು ಮಾತನಾಡುವವರು , ಕೆಡುಕನ್ನು ಬಯಸುವವ ಜನರಿಗೆ ವೀಳೆಯವನು ಕೊಡುವೆನೆಂದು ಕವಿ ಹೇಳಿದ್ದಾರೆ .
3. ಯಾವುದು ಬತ್ತಿಹೋಗುವ ಮುನ್ನ ಹೊಸನಾಡೊಂದನ್ನು ಕಟ್ಟಬೇಕು ?
ಉತ್ತರ : ಕನ್ನಡ ನಾಡನ್ನು ಕಟ್ಟುವ ಉತ್ಸಾಹ ಸಾಹಸಗಳ ಆಲೆಗಳಿಂದ ಅಲ್ಲೋಲಕಲ್ಲೋಲವಾದ ಸಾಗರವು ಬತ್ತಿಹೋಗುವ ಮುನ್ನ ಹೊಸನಾಡೊಂದನ್ನು ಕಟ್ಟಬೇಕು ,
4. ನಮ್ಮೆದೆಯ ಕಾಮಧೇನು ಯಾವುದು ?
ಉತ್ತರ : ನಮ್ಮೆದೆಯ ಕನಸುಗಳೇ ಕಾಮಧೇನು .
5. ನಮ್ಮ ಸುತ್ತಲೂ ಇರುವ ಕಂದಕಗಳಾವುವು ?
ಉತ್ತರ : ನಮ್ಮ ಸುತ್ತಲೂ ಜಾತಿಮತಭೇದಗಳ ಕಂದಕಗಳಿವೆ .
6. ಹೊಸನಾಡೊಂದನ್ನು ಕಟ್ಟ ಬಯಸುವ ಕವಿ ಉತ್ಸಾಹ ಉದ್ಯೋಗದಲ್ಲಿ ಹೇಳುವ ಮಾತುಗಳಾವುವು ?
ಉತ್ತರ : ಹೊಸನಾಡೊಂದನ್ನು ಕಟ್ಟಬಯಸುವ ಕವಿ ಉತ್ಸಾಹ ಉದ್ವೇಗದಲ್ಲಿ , “ ಎಲ್ಲರೂ ತೊಡುಕುಗಳ ಒಡಕುಗಳ ಬಿಡಿಸಿಕೊಂಡು ಹೊರಡುವೆವು . ಎಲ್ಲರೂ ಒಗ್ಗಟ್ಟಾಗಿ ಹೊಸ ನಾಡನ್ನು ಕಟ್ಟುವೆವು , ವೀರ ಯುವಜನದ ಉತ್ಸಾಹದ ಹಾರಾಟಕ್ಕೆ ಆಕಾಶವೇ ಗಡಿ ( ಅಂದರೆ ಉತ್ಸಾಹಕ್ಕೆ ಕೊನೆ ಎನ್ನುವುದೇ ಇಲ್ಲ ) ಅದಕೆ ತಡೆಯಾಗಲು ಎಂದಿಗೂ ಬಿಡುವುದಿಲ್ಲ . ಯಾರಾದರೂ ತಡೆಯುವವರು , ಹೊಡೆಯುವವರು , ಕೆಟ್ಟದ್ದನ್ನು ಬಗೆಯುವವರು , ತಡೆವವರು ಬನ್ನಿರೋ , ಹೊಡೆವವರು ಬನ್ನಿರೋ , ಕೆಡೆನುಡಿವ ಕೆಡೆಬಗೆವ ಕೆಡಕು ಜನರೇ ಬನ್ನಿ ” ಎಂದು ಹೇಳಿದ್ದಾರೆ .
8th Standard Kattuvevu Naavu Kannada Notes Question Answer Pdf
ಇತರೆ ಪದ್ಯಗಳು :