8ನೇ ತರಗತಿ ಸಾರ್ಥಕ ಪೂರಕ ಪಾಠ ಪ್ರಶ್ನೆ ಉತ್ತರ ನೋಟ್ಸ್, 8th Standard Sarthaka Kannada Notes Question Answer Pdf Download
ತರಗತಿ : 8ನೇ ತರಗತಿ
ಪೂರಕ ಪಾಠದ ಹೆಸರು : ಸಾರ್ಥಕ
ಕೃತಿಕಾರರ ಹೆಸರು : ದಿನಕರ ದೇಸಾಯಿ
Table of Contents
8th Standard Sarthaka Kannada Notes Question Answer
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ .
1. ದೇಹ ಏಕೆ ವ್ಯರ್ಥವಾಗಿದೆ ?
ಉತ್ತರ : ತನ್ನ ಸ್ವಾರ್ಥವ ನೆನೆದು ದೇಹ ವ್ಯರ್ಥವಾಗಿದೆ .
2. ಬೂದಿಯನ್ನು ಕೊಳದಲ್ಲಿ ಬಿಡುವುದರಿಂದ ಬದುಕು ಧನ್ಯವಾಗುವುದು ಹೇಗೆ ? ವಿವರಿಸಿ .
ಉತ್ತರ : ದೇಹದ ಬೂದಿಯನ್ನು ತಾವರೆಯು ಬೆಳೆಯುವ ಕೊಳದಲ್ಲಿ ಬಿಟ್ಟಾಗ ಆ ಬೂದಿ ಕೆಸರನು ಸೇರಿ ಹೊಸ ತಾವರೆಯು ಅರಳಿದರೆ ಆ ಮೂಲಕ ಹುಟ್ಟು ಸಾವಿನಲ್ಲಿ ಧನ್ಯವಾಗುತ್ತದೆ . ಎಂದು ಕವಿ ಹೇಳಿದ್ದಾರೆ .
3. ಗಾಳಿಯಲ್ಲಿ ಬೂದಿಯನ್ನು ತೂರಿದಾಗ ಎಲ್ಲಿ ಬೀಳುತ್ತದೆ ?
ಉತ್ತರ : ಗಾಳಿಯಲ್ಲಿ ಬೂದಿಯನ್ನು ತೂರಿದಾಗ ಭತ್ತ ಬೆಳೆಯುವಲ್ಲಿ ಬೀಳುತ್ತದೆ .
4. ಬೂದಿಯನ್ನು ಹೊಳೆಯಲ್ಲಿ ಹರಿಯಬಿಟ್ಟಾಗ ಯಾರಿಗೆ ಸಿಗುತ್ತದೆ ?
ಉತ್ತರ : ಬೂದಿಯನ್ನು ಹೊಳೆಯಲ್ಲಿ ಹರಿಯಬಿಟ್ಟಾಗ ಮೀನಿಗೆ ಸಿಗುತ್ತದೆ .
5. ಸಾರ್ಥಕ ಪದ್ಯದ ಯಾವ ಅಂಶಗಳನ್ನು ನೀವು ಮೆಚ್ಚುವಿರಿ ?
ಉತ್ತರ : ಮಾನವನ್ನು ಸ್ವಾರ್ಥಿಯಾಗಿದ್ದಾನೆ . ಆತನು ಬದುಕಿದ್ದಾಗ ಆತನ ಜೀವನ ಸಾರ್ಥಕತೆ ಪಡೆಯದಿದ್ದರೂ ಸತ್ತಮೇಲಾದರು ಧನ್ಯತೆಯನ್ನು ಪಡೆಯಲಿ ಎಂದು ಕವಿ ಮಾರ್ಮಿಕವಾಗಿ ಹೇಳಿರುವ ಮಾತು ಮೆಚ್ಚುವ ಅಂಶವಾಗಿದೆ . ಸತ್ತ ನಂತರ ದೇಹವನ್ನು ಸುಡಲಾಗುತ್ತದೆ . ಆನಂತರ ಆ ಬೂದಿಯನ್ನು ಭತ್ತಬೆಳೆಯುವ ಗದ್ದೆಗೆ , ಮೀನು ವಾಸಿಸುವ ಹೊಳೆಗೆ , ತಾವರೆ ಬೆಳೆಯುವ ಕೊಳಕ್ಕೆ ಹಾಕುವುದರ ಮೂಲಕ ಸತ್ತಮೇಲಾದರೂ ಪರೋಪಕಾರಕ್ಕೆ ದೇಹ ಬಳಕೆಯಾಗಲಿ ಎಂದು ಕವಿ ಹೇಳಿರುವ ಮಾತುಗಳು ಮೆಚ್ಚುಗೆಯಾಗುತ್ತದೆ .
8th Standard Sarthaka Kannada Notes Question Answer Pdf
ಇತರೆ ಪದ್ಯಗಳು :