8ನೇ ತರಗತಿ ಕನ್ನಡ ಆಹುತಿ ಪ್ರಶ್ನೆ ಉತ್ತರ ನೋಟ್ಸ್, 8th Standard Ahuti Kannada Notes Question Answer Pdf Download
ತರಗತಿ : 8ನೇ ತರಗತಿ
ಪೂರಕ ಪಾಠದ ಹೆಸರು : ಆಹುತಿ
ಕೃತಿಕಾರರ ಹೆಸರು : ಕೊಡಗಿನ ಗೌರಮ್ಮ
Table of Contents
8th Standard Ahuti Kannada Notes Question Answer Pdf
ಅ] ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ .
೧. ರೈಲಿನಲ್ಲಿ ಸಿಕ್ಕಿದ ಮುದುಕನ ಉದ್ಯೋಗವೇನು ?
ಉತ್ತರ : ರೈಲಿನಲ್ಲಿ ಸಿಕ್ಕಿದ ಮುದುಕನ ಉದ್ಯೋಗ ರತ್ನದ ವ್ಯಾಪಾರ ಮಾಡುವುದು .
೨. ಯುವಕನು ರೈಲಿನಲ್ಲಿ ಸಿಕ್ಕಿದ ಮುದುಕನ ಮನೆಗೆ ಏಕೆ ಬಂದನು ?
ಉತ್ತರ : ಯುವಕನ ಕೈಲಿದ್ದ ಹಣವೆಲ್ಲಾ ಖರ್ಚಾಗಿ ಮುಂದೇನು ಮಾಡಬೇಕೆಂದು ದಿಕ್ಕು ತೋಚದೇ ಮುದುಕನ ಮನೆಗೆ ಹೋದನು .
೩ ಮುದುಕನ ಮಗಳು ಮತ್ತು ಸೊಸೆಯ ಹೆಸರೇನು ?
ಉತ್ತರ : ಮುದುಕನ ಮಗಳ ಹೆಸರು ಸೀತೆ ಮತ್ತು ಸೊಸೆಯ ಹೆಸರು ಶಾಂತಿ ,
೪. ವರದಕ್ಷಿಣೆಯ ಪಿಶಾಚಿ ಯಾರನ್ನು ಬಲಿ ತೆಗೆದುಕೊಂಡಿದೆ ?
ಉತ್ತರ : ವರದಕ್ಷಿಣೆಯ ಪಿಶಾಚಿ ಶಾಂತಿಯನ್ನು ಬಲಿ ತೆಗೆದುಕೊಂಡಿತು .
೫. ಯುವಕನು ಬಡವರ ಹುಡುಗಿಯನ್ನು ಮದುವೆಯಾಗದಿರಲು ಕಾರಣಗಳೇನು ?
ಉತ್ತರ : ಯುವಕನಿಗೆ ತಾನು ಐಶ್ವರ್ಯವಂತರ ಅಳಿಯನಾಗಬೇಕೆಂದು ಬಹಳ ಆಸೆಯಿತ್ತು . ಇಂಗ್ಲೆಂಡಿಗೆ ಹೋಗಿ ಬ್ಯಾರಿಸ್ಟರನಾಗಬೇಕೆಂಬುದು ಅವನ ಬಲವಾದ ಇಚ್ಛೆ ಇಂಗ್ಲೆಂಡಿಗೆ ಹೋಗಬೇಕಾದರೆ ಹಣಬೇಕು . ಐಶ್ವರ್ಯವಂತರ ಅಳೆಯನಾದರೆ ತಾನು ಇಂಗ್ಲೆಂಡಿಗೆ ಸುಲಭವಾಗಿ ಹೋಗಬಹುದು ಎಂಬ ಕಾರಣದಿಂದ ಅವನು ಆ ಬಡವರ ಹುಡುಗಿಯನ್ನು ಮದುವೆಯಾಗಲು ಇಷ್ಟಪಡಲಿಲ್ಲ .
೬. ಪತ್ರಿಕೆಯನ್ನು ತೋರಿಸಿ ವಿಜಯಳು ಅಣ್ಣನಿಗೆ ಏನು ಹೇಳಿದಳು ?
ಉತ್ತರ : ಪತ್ರಿಕೆಯನ್ನು ತೋರಿಸಿ ವಿಜಯಳು ಅಣ್ಣನಿಗೆ “ ನೋಡುತ್ತಿದ್ದುದು ನೀನು ಕೊಂದ ಹುಡುಗಿಯನ್ನು ” ಎಂದು ಹೇಳಿದಳು .
8th Standard Ahuti Kannada Notes Question Answer Pdf
ಇತರೆ ಪಾಠಗಳು :
ಸಪ್ತಾಕ್ಷರಿ ಮಂತ್ರ ಕನ್ನಡ ನೋಟ್ಸ್