8ನೇ ತರಗತಿ ಸಪ್ತಾಕ್ಷರಿ ಮಂತ್ರ ಕನ್ನಡ ನೋಟ್ಸ್‌ | 8th Standard Saptakshari Mantra Kannada Notes

8ನೇ ತರಗತಿ ಸಪ್ತಾಕ್ಷರಿ ಮಂತ್ರ ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು, 8th Class Saptakshari Mantra Kannada Notes Question Answer Pdf Download

ತರಗತಿ : 8ನೇ ತರಗತಿ

ಪಾಠದ ಹೆಸರು : ಸಪ್ತಾಕ್ಷರಿ ಮಂತ್ರ

ಕೃತಿಕಾರರ ಹೆಸರು : ಮುದ್ದಣ

Table of Contents

ಕೃತಿಕಾರರ ಪರಿಚಯ :

ಮುದ್ದಣ ( ನಂದಳಿಕೆ ಲಕ್ಷ್ಮೀನಾರಾಯಣ )

* ಲಕ್ಷ್ಮೀನಾರಾಯಣಪ್ಪ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿರುವ ನಂದಳಿಕೆಯಲ್ಲಿ ೧೮೭೦ ಜನವರಿ ೨೪ ರಂದು ಜನಿಸಿದರು . * ತಂದೆ : ತಿಮ್ಮಪ್ಪಯ್ಯ ಮತ್ತು ತಾಯಿ : ಮಹಾಲಕ್ಷಮ್ಮ

* ಈತನನ್ನು ತಾಯಿ ‘ ಮುದ್ದಣ ‘ ಎಂದು ಮುದ್ದಿನಿಂದ ಕರೆಯುತ್ತಿದ್ದಳು . ಹಾಗಾಗಿ ಕನ್ನಡನಾಡು ಈತನನ್ನು ‘ ಮುದ್ದಣ ‘ ಎಂದೇ ಕರೆಯಿತು .

* ಈತನ ಪ್ರಮುಖ ಕೃತಿಗಳೆಂದರೆ : ‘ ರತ್ನಾವತಿ ಕಲ್ಯಾಣ ‘ ಮತ್ತು ‘ ಕುಮಾರವಿಜಯ ‘ ( ಯಕ್ಷಗಾನ ಪ್ರಸಂಗಗಳು ) , ವಾರ್ಧಕ ಷಟ್ನದಿಯಲ್ಲಿ ರಚಿಸಲ್ಪಟ್ಟ ‘ ಶ್ರೀರಾಮಪಟ್ಟಾಭಿಷೇಕಂ ‘ ಕಾವ್ಯ , ಹಳಗನ್ನಡ ಶೈಲಿಯಲ್ಲಿ ಬರೆಯಲ್ಪಟ್ಟ ‘ ಅದ್ಭುತರಾಮಾಯಣ ‘ ಮತ್ತು ‘ ಶ್ರೀರಾಮಾಶ್ವಮೇಧಂ ‘ ಗದ್ಯಕಾವ್ಯಗಳು ಮುದ್ದನಿಂದ ರಚಿತವಾದುವು . * ‘ ಹೊಸಗನ್ನಡದ ಅರುಣೋದಯದ ಮುಂಗೋಳಿ ‘ ಎಂಬ ಪ್ರಶಂಸೆಗೆ ಭಾಜನನಾಗಿದ್ದಾನೆ .

* ಅವರು ೧೯೦೧ ರ ಫೆಬ್ರವರಿ ೧೫ ರಂದು ಇಹಲೋಕ ತ್ಯಜಿಸಿದರು . ( ಪ್ರಸ್ತುತ ಗದ್ಯಭಾಗವನ್ನು ‘ ಸಪ್ತಾಕ್ಷರಿ ಮಂತ್ರ ‘ ಗದ್ಯಭಾಗವನ್ನು ಪ್ರೊ . ಜಿ . ವೆಂಕಟಸುಬ್ಬಯ್ಯ ಅವರು ಸಂಪಾದಿಸಿರುವ , ‘ ಮುದ್ದ ಭಂಡಾರ ‘ ಕೃತಿಯಿಂದ ಆರಿಸಿಕೊಳ್ಳಲಾಗಿದೆ . ]

8th Class Saptakshari Mantra Kannada Notes Question Answer

ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ

1. ಮುನಿಗಳಲ್ಲಿರುವ ಮಂತ್ರದ ಶಕ್ತಿ ಯಾವುದು ?

ಉತ್ತರ : ಬೇಡಿದ ವಸ್ತುವನ್ನು ನೀಡುವ ಮಂತ್ರದ ಶಕ್ತಿ ಮುನಿಗಳಲ್ಲಿದೆ .

2 , ತಪಸ್ವಿಗಳಿಗೆ ಬೇರೆ ಗೊಡವೆ ಇಲ್ಲದಿರಲು ಕಾರಣವೇನು ?

ಉತ್ತರ : ಬೇಡಿದ ವಸ್ತುಗನ್ನು  ನೀಡುವ ಮಂತ್ರದ ಶಕ್ತಿ  ಇರುವುದರಿಂದ ತಪಸ್ವಿಗಳು  ಬೇರೆಗೊಡವೆ ಇಲ್ಲ.

3. ರಾಘವನ ಯಜ್ಞಾಶ್ಚ ಯಾರ ಆಶ್ರಮವನ್ನು ಹೊಕ್ಕಿತು ?

ಉತ್ತರ : ರಾಘವನ ಯಜ್ಞಾಶ್ವ ಅರಣ್ಯಕ ಮುನಿಯ ಆಶ್ರಮವನ್ನು ಹೊಕ್ಕಿತು .

4. ಮನೋರಮೆಯಲ್ಲಿ ಮೂಡಿದ ಸಂದೇಹವೇನು ?

ಉತ್ತರ : ‘ ಸಾವಿರ ಸಾವಿರ ಸಂಖ್ಯೆಯಲ್ಲಿದ್ದ ಸೈನಿಕರಿಗೆ ಭೋಜನವನ್ನು ನೀಡಲು ಆರಣ್ಯಕ ಮುನಿಗೆ ಹೇಗೆ ಸಾಧ್ಯವಾಯಿತು ‘ ಎಂದು ಮನೋರಮೆಗೆ ಸಂದೇಹ ಮೂಡಿತು .

5. ಮುದ್ದಣನಿಗೆ ಸಿದ್ಧಿಸಿದ ಮಂತ್ರದ ಹೆಸರೇನು ?

ಉತ್ತರ : ಮುದ್ದನಿಗೆ ಸಿದ್ಧಿಸಿದ ಮಂತ್ರದ ಹೆಸರು ‘ ಭವತಿ ಭಿಕ್ಷಾಂದೇಹಿ ‘

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ.

1. ಮುದ್ದಣನಿಗೆ ಒಲಿದ ಮಂತ್ರದ ಬಗ್ಗೆ ಮನೋರಮೆಯ ಪ್ರತಿಕ್ರಿಯೆ ಏನು ?

ಉತ್ತರ : ಮುದ್ದಣನು ತನಗೆ ಒಲಿದಿರುವ ಮಂತ್ರ ‘ ಭವತಿ ಭಿಕ್ಷಾಂದೇಹಿ ‘ ಎಂದು ಮನೋರಮೆಗೆ ಹೇಳಿದಾಗ ಅವಳು ಅರೆಮುನಿಸಿನಿಂದ : “ ಹೋಗು , ರಮಣ , ನಿನ್ನ ಮಾತನ್ನು ಕೇಳಿ ನಾನು ನಿಜವೆಂದೇ ಭಾವಿಸಿದೆ . ನೀನು ಮೋಸದ , ಕೊಂಕಿನ ಮಾತನ್ನು ಈ ರೀತಿಯಲ್ಲಿ ಹೇಳುತ್ತಿರುವೆ ಎಂದು ನನಗೆ ತಿಳಿಯಲಿಲ್ಲ . ನೀನು ಕವಿಯೋ ಅಥವಾ ಹಾಸ್ಯಗಾರನೋ ” ಎಂದು ಪ್ರತಿಕ್ರಿಯಿಸುತ್ತಾಳೆ .

2. ತನ್ನ ಆಶ್ರಮಕ್ಕೆ ಬಂದ ಅತಿಥಿಗಳನ್ನು ಅರಣ್ಯಕ ಹೇಗೆ ಸತ್ಕರಿಸಿದನು ?

ಉತ್ತರ : ಬಂದವರಿಗೆ ಕೈಗೆ , ಕಾಲಿಗೆ ನೀರುಕೊಟ್ಟು ಕುಳ್ಳಿರಿಸಿ , ಅವರಿಗೆ ರುಚಿಯಾದ ಊಟವನ್ನು ಉಣಬಡಿಸಿ , ಹೂವಿನಿಂದ ಅಲಂಕರಿಸಿ , ಪರಿಮಳಭರಿತವಾದ ಶ್ರೀಗಂಧವನ್ನು ಸಿಂಪಡಿಸಿ , ಜೊತೆಯಲ್ಲಿದ್ದು ಅವರೊಡನೆ ಹಿತವಾಗಿ ಮಾತನಾಡಿ ಉಪಚರಿಸಿದನು .

3. ಕವಿಗಳಿಗೆ ಒಲಿದಿರುವ ಮಂತ್ರದ ಮಹಿಮೆಯೇನು ?

ಉತ್ತರ : ಕವಿಗಳು ತಮಗೆ ಒಲಿಯುದಿರುವ ಒಂದು ಮಂತ್ರದಿಂದ ಮೂರು ಜಗವನ್ನು ನಾಶಮಾಡುವ , ಹೊಗಳುವ , ತೆಗಳುವ , ಕೊಳ್ಳುವ , ಆಳುವ , ತಾಳುವ , ಹೂಳುವ , ಹೇಳುವ , ಬಾಳುವ , ಶೃಂಗಾರವನ್ನು ವರ್ಣಿಸುವ ಶಕ್ತಿ ಇದೆ ಎಂದು ಕವಿಗಳ ಮಂತ್ರದ ಮಹಿಮೆಯನ್ನು ಕುರಿತು ಮುದ್ದಣ ಹೇಳಿದ್ದಾನೆ .

ಇ ] ಕೊಟ್ಟಿರುವ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ ,

1. ಮುದ್ದಣನಿಗೆ ಒಲಿದ ಮಂತ್ರವನ್ನು ತಿಳಿದುಕೊಳ್ಳುವ ವಿಚಾರದಲ್ಲಿ ಗಂಡ – ಹೆಂಡತಿಯರ ನಡುವೆ ನಡೆದ ಸಂಭಾಷಣೆಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .

ಉತ್ತರ : ( ಮುದ್ದಣನು ಮನೋರಮೆಗೆ ಅಶ್ವಮೇಧಯಾಗದ ಕಥೆಯನ್ನು ಹೇಳುತ್ತಿದ್ದಾಗ ಯಜ್ಞದ ಕುದುರೆ ಆರಣ್ಯಕ ಎಂಬ ಋಷಿಯ ಆಶ್ರಮವನ್ನು ಪ್ರವೇಶಿಸಿದಾಗ ಆ ಋಷಿಯು ಶತ್ರುಘ್ರಾದ್ಯರನ್ನು ಸತ್ಕರಿಸಿದ ಬಗೆಯನ್ನು ವರ್ಣಿಸುತ್ತಾನೆ . ಆಗ ಮನೋರಮೆ ಮುದ್ದಣನನ್ನು ಪಶ್ನಿಸುತ್ತಾಳೆ ….. ] ಮನೋರಮೆ : ಆರಣ್ಯಕ ಮುನಿ ಸಾವಿರ ಸಾವಿರ ಲೆಕ್ಕದಲ್ಲಿದ್ದ ಸೈನ್ಯಕ್ಕೆ ಭೋಜನ ನೀಡಿ ತೃಪ್ತಿಪಡಿಸಿದನೆ ? ಅವನಿಗೆ ಇದು ಹೇಗೆ ಸಾಧ್ಯವಾಯಿತು ? ಮುದ್ದಣ : ಮತ್ತೇನು ಮುನಿಗಳ ಒಂದು ಜಪ – ತಪ – ಮಂತ್ರದ ಶಕ್ತಿ ಬೇಡಿದ ದ್ರವ್ಯವನ್ನು ( ವಸ್ತುವನ್ನು ಕೂಡಲೆ ತಂದುಕೊಡುವುದು , ಮನೋರಮೆ : ಓಹೋ ! ಜಪದ ಶಕ್ತಿಯ ಸಹಾಯ ಇರುವುದರಿಂದಲೇ ತಪಸ್ವಿಗಳು ಬೇರೊಂದರ ಚಿಂತೆಯಿಲ್ಲ . ನೀವು ಅಂತಹ ಒಂದು ಮಂತ್ರವನ್ನು ಹಿರಿಯ ತಪಸ್ವಿಯಿಂದ ಉಪದೇಶ ಪಡೆದುಕೊಂಡರೆ ಆಗುವುದಿಲ್ಲವೇ ? ಮುದ್ದಣ : ನನ್ನ ಗುರುವಿನ ಕಡೆಯಿಂದ ನನಗೂ ಚಿಕ್ಕಂದಿನಲ್ಲೆ ಉಪದೇಶವಾಗಿದೆ . ಮನೋರಮೆ : ನನ್ನ ಪ್ರಿಯನೇ ಅದು ಯಾವುದೋ ಆ ಮಂತ್ರವನ್ನು ನನಗೆ ಹೇಳಾ . ಮುದ್ದಣ : ಎಲೆ ಹೆಣ್ಣೆ ನೀನು ಯಾರಲ್ಲೂ ಎಂದೆಂದಿಗೂ ಹೇಳಬಾರದು , ಜೋಕೆ ! ಮನೋರಮೆ : ನಿನ್ನಾಣ , ಕುಲದೇವರ ಮೇಲಾಣೆ ! ಎಂದಿಗೂ ಬೇರೆಯವರಲ್ಲಿ ಹೇಳುವುದಿಲ್ಲ . ಮುದ್ದಣ : ( ಹಾಸ್ಯದಿಂದ ) ‘ ಭವತಿ ಭಿಕ್ಷಾಂ ದೇಹಿ ‘ ಎಂಬುವುದು ಇದೇ ಕವಿಗಳಿಗೆ ಸಿದ್ಧಿಸಿರುವ ಹೆಮ್ಮೆಯ ಸಪ್ತಾಕ್ಷರಿ ಮಂತ್ರವಾಗಿದೆ . ಮನೋರಮೆ : ( ಆರೆಮುನಿಸಿನಿಂದ ) ಹೋಗು , ನಿನ್ನ ಮಾತನ್ನು ನಿಜವೆಂದೇ ನಂಬಿದೆ . ನಿನ್ನ ಮೋಸದ ಮಾತನ್ನು ಅರಿಯದಾದೆ .

2. ಮುದ್ದಣನು ಪರಿಹಾರ ಮಾಡಿದನೆಂದು ಮನೋರಮೆಯು ಹೇಳಲು ಕಾರಣವೇನು ?

ಉತ್ತರ : ಮುದ್ದನು ಋಷಿಗಳಿಗಿರುವಂತೆ ತನಗೂ ಮಂತ್ರ ಶಕ್ತಿ ಒಲಿದಿದೆ ಎಂದು ಮನೋರಮೆಗೆ ಹೇಳುತ್ತಾನೆ . ಅದನ್ನು ಅವಳು ನಿಜವೆಂದೇ ಭಾವಿಸಿ ‘ ಆ ಮಂತ್ರ ಯಾವುದು ? ‘ ಎಂದಾಗ ಅವನು ‘ ಆ ಮಂತ್ರವನ್ನು ನಿನಗೆ ಹೇಳುತ್ತೇನೆ . ಆದರೆ ಅದನ್ನು ಬೇರೆ ಯಾರಲ್ಲೂ ಹೇಳಬಾರದು ‘ ಎಂದು ಅವಳಲ್ಲಿ ಮತ್ತಷ್ಟು ಕುತೂಹಲ ಕೆರಳಿಸುತ್ತಾನೆ . ಯಾರಲ್ಲಿಯೂ ಹೇಳುವುದಿಲ್ಲ ಎಂದು ಅವಳು ಆಣೆ ಮಾಡುತ್ತಾಳೆ . ಆಗ ಅವನು ತನಗೆ ಒಲಿದಿರುವ ಮಂತ್ರ ” ಭವತಿ ಭಿಕ್ಷಾಂದೇಹಿ ” ಎಂದು ಹೇಳುತ್ತಾನೆ . ಅದನ್ನು ಕೇಳಿ ಮನೋರಮೆಗೆ ನಿರಾಸೆಯಾಗುತ್ತದೆ . ಆದ್ದರಿಂದ ಅವಳು “ ನೀನು ಕೊಂಕಿನ ಮಾತನ್ನು ಈ ರೀತಿಯಲ್ಲಿ ಹೇಳುತ್ತಿರುವೆ ಎಂದು ನನಗೆ ತಿಳಿಯಲಿಲ್ಲ . ನೀನು ಕವಿಯೋ ಅಥವಾ ಹಾಸ್ಯಗಾರನೋ ” ಎಂದು ಮುನಿಸಿನಿಂದ ಹೇಳುತ್ತಾಳೆ ,

ಈ ] ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ ,

1. ‘ ರಾಮಾಶ್ವಮೇಧ ‘ ಕೃತಿಯಲ್ಲಿ ಮುದ್ದಣ ಪರೋಕ್ಷವಾಗಿ ತನ್ನ ಬಾಳಿನ ಕತೆಯನ್ನು ಬಿಚ್ಚಿಟ್ಟಿದ್ದಾನೆ ಎಂಬುದನ್ನು ‘ ಸಪ್ತಾಕ್ಷರಿ ಮಂತ್ರ ‘ ಪಾಠದ ಆಧಾರದಿಂದ ಸಮರ್ಥಿಸಿ

ಉತ್ತರ : ರಾಮಾಶ್ವಮೇಧ ಕಥೆಯನ್ನು ಹೇಳ ಹೊರಡುವ ಕವಿ ಕಾವ್ಯದ ಮಧ್ಯದಲ್ಲಿ ತಮ್ಮ ಜೀವನದ ವಾಸ್ತವತೆಯನ್ನು ಬಿಚ್ಚಿಡುವುದು ಒಂದು ವೈಶಿಷ್ಟ್ಯವೇ ಸರಿ , ಇದು ಮುದ್ದಣ ಮನೋರಮೆಯರ ಸಲ್ಲಾಪವೆಂದೇ ಖ್ಯಾತಿ ಪಡೆದಿದೆ . ಕಾವ್ಯ ಧರ್ಮದೊಳಗೆ ಜೀವನ ಧರ್ಮವನ್ನು ಬೆರೆಸಿ ಹೇಳುವ ಕವಿಯ ಕಲೆಗಾರಿಕೆಯನ್ನು ಮುದ್ದಣನಲ್ಲಿ ಕಾಣಬಹುದಾಗಿದೆ , ಎಷ್ಟೇ ಕಷ್ಟಗಳಿದ್ದರೂ ಮನಸ್ಸನ್ನೇ ಸುಡುವ ಚಿಂತೆಯಿದ್ದರೂ ನವಿರಾದ ಹಾಸ್ಯ ಅವುಗಳನ್ನು ಸ್ವಲ್ಪಕಾಲ ಮರೆಯುವಂತೆ ಮಾಡುತ್ತದೆ . ‘ ಶ್ರೀರಾಮಾಶ್ವಮೇಧ ‘ ಕೃತಿಯಲ್ಲಿ ಮಡದಿ ಮನೋರಮೆ ( ನಿಜನಾಮ ಕಮಲಾಬಾಯಿ ) ಯೊಡನೆ ಸಂವಾದದಲ್ಲಿ ನಿರತನಾದಾಗ ವ್ಯಕ್ತವಾಗುವ ಮಾತುಗಳು ಮುದ್ದಣನ ಕಷ್ಟ ಜೀವನದ ಪ್ರತೀಕವೇ ಆಗಿವೆ . ಪಕೃತ ಗದ್ಯಭಾಗದಲ್ಲಿ ‘ ಸಪ್ತಾಕ್ಷರೀ ಮಂತ್ರದ ಶ್ರೇಷ್ಠತೆಯ ನೆಪದೊಂದಿಗೆ ತನ್ನ ಹಾಗೂ ಅಂದಿನ ಕವಿಗಳ ದಾರಿದ್ರವನ್ನು ಪರೋಕ್ಷವಾಗಿ ಮುದ್ದಣ ವ್ಯಕ್ತಪಡಿಸಿದ್ದಾನೆ , ಹೊರನೋಟಕ್ಕೆ ಕುತೂಹಲಕಾರಿಯೂ ಹಾಸ್ಯಮಯವೂ ಆಗಿದ್ದರೆ ಒಳಗೆ ದಾರುಣ ವ್ಯಥೆಯ ಕಥೆ ಯಲ್ಲಿ ಅಡಗಿರುವುದನ್ನು ಇಲ್ಲಿ ಕಾಣಬಹುದು .

2. ಶುಭಾದ್ಯರನ್ನು ಅರಣ್ಯಕನು ಸತ್ಕರಿಸಿದ ವಿಚಾರದಲ್ಲಿ ಮುದ್ದಣ ಮನೋರಮೆಯರ ಮಧ್ಯೆ ನಡೆದ ಸಂಭಾಷಣೆಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .

ಉತ್ತರ : ರಾಘವನ ಯಜಾರವು ಆರಣ್ಯಕ ಎಂಬ ತಪಸ್ವಿಯ ಪವಿತ್ರ ಆಶ್ರಮಕ್ಕೆ ಪ್ರವೇಶಿಸುತ್ತಿರುವುದನ್ನು ಕಂಡು ಶತುಪ್ಪ ಮೊದಲಾದವರು ಮುನಿಗಳ ದರ್ಶನಕ್ಕೆಂದು ಆಶ್ರಮದ ಒಳಗೆ ಹೋದರು . ಆಗಮಿಸಿದ ಈ ಅತಿಥಿಗಳನ್ನು ಅರಣ್ಯಕ ಮುನಿಗಳು ಬಹಳ ಗೌರವದಿಂದ ಬರಮಾಡಿಕೊಂಡು ತಮ್ಮ ಆತಿಥ್ಯದಿಂದ ಸತ್ಕರಿಸಿದರು . [ ಹೀಗೆ ಕಥೆ ಹೇಳುತ್ತಿದ್ದ ಮುದ್ದಣನು ಇನ್ನು ಮುಂದುವರೆದು ಏನೋ ಹೇಳಬೇಕೆಂದು ಮಾತು ಮುಂದುವರಿಸುತ್ತಿರುವಾಗ ಮನೋರಮೆಗೆ ಮಧ್ಯದಲ್ಲಿ ಸಂಶಯವುಂಟಾಗಿ ಮುದ್ದಣನನ್ನು ಮುಂದಿನಂತೆ ಕೇಳುತ್ತಾಳೆ . ಆಗ ಅವರಿಬ್ಬರ ಸಲ್ಲಾಪ ಆರಂಭವಾಗುತ್ತದೆ . ಮನೋರಮೆಯು ” ನನ್ನ ಚೆಲುವ ಆತಿಥ್ಯವೆಂದರೇನು ? ಬರಿಯ ವಾಯುಪಚಾರವೇ ? ” ಎಂದಾಗ ಮುದ್ದಣ : “ ಅಲ್ಲ ಅಲ್ಲ , ಬರಿಯ ವಾಯುಪಚಾರವಲ್ಲ . ಬಂದವರಿಗೆ ಕೈಗೆ , ಕಾಲಿಗೆ ನೀರುಕೊಟ್ಟು ಕುಳ್ಳಿರಿಸಿ , ಅವರಿಗೆ ರುಚಿಯಾದ ಊಟವನ್ನು ಉಣಬಡಿಸಿ ಜೊತೆಯಲ್ಲಿದ್ದು ಅವರೊಡನೆ ಹಿತವಾಗಿ ಮಾತನಾಡಿ , ಗೌರವಿಸುವುದು . ” ಎನ್ನುತ್ತಾನೆ . ಆಗ ಆಶ್ಚರ್ಯಗೊಂಡ ಮನೋರಮೆ : ” ಹಾಗಿದ್ದರೆ , ಸಾವಿರ ಸಾವಿರ ಲೆಕ್ಕದಲ್ಲಿದ್ದ ಅಷ್ಟೊಂದು ದೊಡ್ಡ ಸೈನ್ಯಕ್ಕೆ ಊಟಕೊಟ್ಟು ತೃಪ್ತಿಪಡಿಸಿದನೆ ? ಅವನಿಗೆ ( ಮುನಿಗೆ ) ಇದು ಹೇಗೆ ಸಾಧ್ಯವಾಯಿತು ? ” ಎನ್ನುತ್ತಾಳೆ . ಅದಕ್ಕೆ ಮುದ್ದಣನು “ ಮತ್ತೇನು ! ಮುನಿಗಳ ಒಂದು ಜಪ – ತಪ – ಮಂತ್ರದ ಶಕ್ತಿಯೇನು ಕಿರಿದೆ ? ಬೇಡಿದ ದ್ರವ್ಯವನ್ನು ( ವಸ್ತುವನ್ನು ) ಕೂಡಲೆ ತಂದುಕೊಡುವುದು , ” ಎಂದು ಸಮರ್ಥಿಸುತ್ತಾನೆ .

ಉ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .

1. ” ಎನ್ನುವರೊಂದಿರಕೆ ನಗುವ

ಉತ್ತರ : ಆಯ್ಕೆ : – ಈ ವಾಕ್ಯವನ್ನು ಪ್ರೊ . ಜಿ . ವೆಂಕಟಸುಬ್ಬಯ್ಯ ಅವರು ಸಂಪಾದಿಸಿರುವ ‘ ಮುದ್ದಣ ಭಂಡಾರ ‘ ಕೃತಿಯಿಂದ ಆರಿಸಲಾದ ‘ ಸಪ್ತಾಕ್ಷರಿ ಮಂತ್ರ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ .ಈ ಸಂದರ್ಭ- ಆರಣ್ಯಕ ಮುನಿಗಳು ತಮಗಿರುವ ಮಂತ್ರ ಶಕ್ತಿಯಿಂದ ಅತಿಥಿಗಳಿಗೆ ಸತ್ಕಾರ ಮಾಡಲು ಸಾಧ್ಯವಾಯಿತು ಎಂದು ಹೇಳಿದಾಗ ಮನೋರಮೆಯು ‘ ತಪಸ್ವಿಗಳಿಗೇನು ಸಂಸಾರದ ಚಿಂತೆಯೇ ? ನಿಮ್ಮಂತಹ ಕವಿಗಳು ಸಂಸಾರದ ಗೊಡವೆ ಇಲ್ಲದೆ ಹಾಳು ಕಥೆ ಬರೆದುಕೊಂಡಿರುವಿರಿ , ನೀವೂ ಕೂಡ ಹಿರಿಯ ಮುನಿಗಳಿಂದ ಮಂತಶಕ್ತಿಯ ಉಪದೇಶ ಪಡೆದುಕೊಂಡರಾಗದೆ ? ‘ ಎಂದು ಛೇಡಿಸಿದ ಸಂದರ್ಭದಲ್ಲಿ ಮುದ್ದಣನು ಈ ಮಾತನ್ನು ಹೇಳುತ್ತಾನೆ . ಸ್ವಾರಸ್ಯ- ಹಿಂದೆ ಕವಿ – ಸಾಹಿತಿಗಳು ಸಾಹಿತ್ಯರಚನೆಯಲ್ಲಿ ಮುಳುಗಿದ್ದು , ಬಡತನದಿಂದ ಸಂಸಾರವನ್ನು ನಡೆಸುತ್ತಿದ್ದ ಬಗ್ಗೆ ಇಲ್ಲಿ ಸ್ವಾರಸ್ಯಕರವಾಗಿ ವ್ಯಕ್ತವಾಗಿದೆ .

2. ‘ ಸಾಲಮೀ ಪರಿಪಾಸಂ ”

ಉತ್ತರ : ಆಯ್ಕೆ : – ಈ ವಾಕ್ಯವನ್ನು ಪ್ರೊ . ಜಿ . ವೆಂಕಟಸುಬ್ಬಯ್ಯ ಅವರು ಸಂಪಾದಿಸಿರುವ ‘ ಮುದ್ದಣ ಭಂಡಾರ ‘ ಕೃತಿಯಿಂದ ಆರಿಸಲಾದ ‘ ಸಪ್ತಾಕ್ಷರಿ ಮಂತ್ರ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : – ಮುದ್ರನನು ತನೆಗೆ ಒಲಿದಿರುವ ಮಂತ್ರ ‘ ಭವತಿ ಭಿಕ್ಷಾಂದೇಹಿ ‘ ಎಂದು ಹೇಳಿದಾಗ ಮನೋರಮೆ ಹುಸಿಮುನಿಸಿನಿಂದ “ ನಿನ್ನ ಮಾತನ್ನು ನಿಜವೆಂದೇ ನಂಬಿದೆ . ನೀನೇನು ಕವಿಯೋ ಹಾಸ್ಯಗಾರನೋ ಎಂದು ಹೇಳತ್ತಾಳೆ . ಆ ಸಂದರ್ಭದಲ್ಲಿ ಮುದ್ದಣನು ” ಈ ಹಾಸ್ಯ ಇಲ್ಲಿಗೇ ಸಾಕು , ಮುಂದಿನ ಕಥೆಯನ್ನು ಕೇಳು ‘ ಎಂದು ಕಥೆ ಮುಂದುವರೆಸುತ್ತಾನೆ .

ಸ್ವಾರಸ್ಯ : – ಇಲ್ಲಿ ಮುದ್ದಣನ ಹಾಸ್ಯ ಪ್ರಜ್ಞೆ , ಮುದ್ದಣ ಮತ್ತು ಆತನ ಪತ್ನಿಯ ನಡುವಿನ ಸರಸ – ಸಲ್ಲಾಪಗಳು ಸ್ವಾರಸ್ಯಕರವಾಗಿ ಮೂಡಿಬಂದಿದೆ .

3“ಎನಗಿದಚ್ಚರಿ ಎಂತುಟಾರ್ತಂ”

ಉತ್ತರ : ಆಯ್ಕೆ : – ಈ ವಾಕ್ಯವನ್ನು ಪ್ರೊ . ಜಿ . ವೆಂಕಟಸುಬ್ಬಯ್ಯ ಅವರು ಸಂಪಾದಿಸಿರುವ ‘ ಮುದ್ದಣ ಭಂಡಾರ ‘ ಕೃತಿಯಿಂದ ಆರಿಸಲಾದ ‘ ಸಪ್ತಾಕ್ಷರಿ ಮಂತ್ರ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : – ಮುದ್ದಣನು ಮನೋರಮೆಗೆ ರಾಮಾಶ್ವಮೇಧದ ಕಥೆ ಹೇಳುತ್ತಾ ಯಜ್ಞದ ಕುದುರೆ ಆರಣ್ಯಕ ಮುನಿಗಳ ಆಶ್ರಮವನ್ನು ಪ್ರವೇಶಿಸಿದಾಗ ಶತ್ರುಪ್ತಿ ಮೊದಲಾದವರನ್ನು ಮುನಿಗಳು ಸತ್ಕರಿಸಿದ ಬಗೆಯನ್ನು ವರ್ಣಿಸಿದ ಸಂದರ್ಭದಲ್ಲಿ ಮನೋರಮೆ ಈ ಮಾತನ್ನು ಹೇಳುತ್ತಾಳೆ . ಅಶ್ರಮವಾಸಿಗಳಾಗಿದ್ದುಕೊಂಡು ಸಾವಿರಾರು ಜನರಿಗೆ ಸತ್ಕರಿಸಲು ಹೇಗೆ ಸಾಧ್ಯವಾಯಿತು ? ಎಂದು ಅಚ್ಚರಿಗೊಂಡು ಅವಳು ಹೀಗೆ ಹೇಳುತ್ತಾಳೆ .

ಸ್ವಾರಸ್ಯ : – ಮುನಿಯಾದವರು ಸಾವಿರಾರು ಜನರಿಗೆ ಸತ್ಕಾರ ಮಾಡಿದ ಪಂಸಗವನ್ನು ಕೇಳಿ ಮನೋರಮೆ ಅಚ್ಚರಿ ಪಟ್ಟಿರುವುದು ಇಲ್ಲಿ ಸ್ವಾರಸ್ಯವಾಗಿದೆ .

4. “ ಅಪ್ಪುದಪ್ಪುದು ತಪ್ಪೇಂ

ಉತ್ತರ : ಆಯ್ಕೆ : – ಈ ವಾಕ್ಯವನ್ನು ಪ್ರೊ . ಜಿ . ವೆಂಕಟಸುಬ್ಬಯ್ಯ ಅವರು ಸಂಪಾದಿಸಿರುವ ‘ ಮುದ್ದಣ ಭಂಡಾರ ‘ ಕೃತಿಯಿಂದ ಆರಿಸಲಾದ ‘ ಸಪ್ತಾಕ್ಷರಿ ಮಂತ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ- ಸಾವಿರಾರು ಜನರಿಗೆ ಸತ್ಕಾರ ಮಾಡಲು ಅರಣ್ಯಕ ಮುನಿಗೆ ಹೇಗೆ ಸಾಧ್ಯವಾಯಿತು ಎಂದು ಮನೋರಮೆ ಮುದ್ದಣನನ್ನು ಕೇಳಿದಾಗ ಮುನಿಗಳಿಗೆ ಹಲವಾರು ಮಂತ್ರಗಳ ಶಕ್ತಿ ಇದೆ ಎಂದು ಮುದ್ದಣ ಹೇಳುತ್ತಾನೆ . ಆಗ ಮನೋರಮೆ ” ಓಹೋ ಆದ್ದರಿಂದಲೇ ತಪಸ್ತಿಗಳಿಗೆ ಯಾವುದೇ ಚಿಂತ ಇಲ್ಲ ” ಎಂದು ಹೇಳಿದ ಸಂದರ್ಭದಲ್ಲಿ ಮುದ್ದನು ಈ ಮಾತನ್ನು ಹೇಳುತ್ತಾನೆ . ಸ್ವಾರಸ್ಯ ಮುನಿಯಾದವರಿಗೆ ಮಂತ್ರಗಳ ಶಕ್ತಿ ಇರುವುದರಲ್ಲಿ ತಪ್ಪೇನಿದೆ ? ಎಂದು ಮುದ್ದಣ ಸಮರ್ಥಿಸಿರುವುದು ಇಲ್ಲಿ ಸ್ವಾರಸ್ಯವಾಗಿದೆ .

ಊ] ಮೊದಲೆರಡು ಪದಗಳಿಗಿರುವ ಸಂಬಂಧದಂತೆ  ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ.

1. ಮೃಷ್ಟಾನ್ನ : ¸ ಸವರ್ಣದೀರ್ಘ ¸ಸಂಧಿ ::   ಒಡನಿರ್ದು  : ಲೋಪಸಂಧಿ

2. ಕಾವ್ಯ : ಕಬ್ಬ          :: ಆಶ್ವರ್ಯ  : ಅಚ್ಚರಿ

3. ಮನ್ನಿಸಿ : ಗೌರವಿಸಿ   :: ಬಾವನ್ನ : ಸುಗಂಧ (ಶ್ರೀಗಂಧ)

4.ಕುವೆಂಪು  : ಕುಪ್ಪಳ್ಳಿ   :: ಮುದ್ದಣ : ನಂದಳಿಕೆ

ಭಾಷಾಭ್ಯಾಸ

ಅ. ಕೊಟ್ಟಿರುವ ಸಮಾಸಪದಗಳನ್ನು ವಿಗ್ರಹಿಸಿ, ಸಮಾಸವನ್ನು ಹೆಸರಿಸಿ.

ಚಳಿಗಾಲ = ಚಳಿಯಾದ + ಕಾಲ – ಕರ್ಮಧಾರಯ ಸಮಾಸ

ಯಜ್ಞತುರಂಗ = ಯಜ್ಞದ + ತುರಗ  –ತತ್ಪುರುಷ ಸಮಾಸ

ಬಾಯುಪಚಾರ = ಬಾಯಿಯಿಂದ+ಉಪಚಾರ -ತತ್ಪುರುಷ ಸಮಾಸ 

ಸವಿಗೂಳು = ¸ ಸವಿಯಾದ +ಕೂಳು  – ಕರ್ಮಧಾರಯ ಸಮಾಸ 

ಮೃಷ್ಟಾನ್ನ = ಮೃಷ್ಟಾವಾದ + ಅನ್ನ – ಕರ್ಮಧಾರಯ ಸಮಾಸ 

ಏಕಾಕ್ಷರೀ = ಏಕವಾದ + ಅಕ್ಷರೀ – ದ್ವಿಗುಸಮಾಸ 

ಪಂಚಾಕ್ಷರೀ = ಪಂಚಗಳಾದ + ಅಕ್ಷರೀ – ದ್ವಿಗು ಸಮಾಸ 

ಮೂಜಗ = ಮೂರು + ಜಗ – ದ್ವಿಗು ಸಮಾಸ 

ಸಪ್ತಾಕ್ಷರೀ = ಸಪ್ತಗಳಾದ ದ + ಅಕ್ಷರೀ – ದ್ವಿಗು ಸಮಾಸ 

8th Class Saptakshari Mantra Kannada Notes Question Answer Pdf

ಇತರೆ ಪಾಠಗಳು :

ಸಾರ್ಥಕ ಬದುಕಿನ ಸಾಧಕ ಕನ್ನಡ ನೋಟ್ಸ್

ತಲಕಾಡಿನ ವೈಭವ ಕನ್ನಡ ನೋಟ್ಸ್

Leave your vote

30 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.