9ನೇ ತರಗತಿ ಕನ್ನಡ ಹರಲೀಲೆ ಪಾಠದ ಪ್ರಶ್ನೋತ್ತರಗಳು ನೋಟ್ಸ್, 9th Standard Haralile Kannada Notes Question Answer Pdf Download
ತರಗತಿ : 9ನೇ ತರಗತಿ
ಪಾಠದ ಹೆಸರು : ಹರಲೀಲೆ
ಕೃತಿಕಾರರ ಹೆಸರು : ಹರಿಹರ
Table of Contents
ಕೃತಿಕಾರರ ಪರಿಚಯ :
ಹರಿಹರ
* ಹರಿಹರನ ಕಾಲ ಸುಮಾರು ಕ್ರಿಸ್ತ ಶಕ ೧೨೦೦ , ಈತನ ಸ್ಥಳ ಹಂಪೆ .
* ಹಂಪೆಯ ವಿರೂಪಾಕ್ಷ ಈತನ ಆರಾಧ್ಯದೈವ
* ಈತ ಕನ್ನಡ ಸಾಹಿತ್ಯದಲ್ಲಿ ರಗಳ ಕಾವ್ಯಪ್ರಕಾರವನ್ನು ಜೀವಂತಗೊಳಿಸಿದ ಸುಪ್ರಸಿದ್ಧ ಕವಿ .
* ಹರಿಹರನು ‘ ಪಂಪಾಶತಕ ‘ , ‘ ರಕ್ಷಾಶತಕ ‘ ಮತ್ತು ‘ ಮುಡಿಗೆಯ ಅಷ್ಟಕ’ಗಳನ್ನು ವೃತ್ತ ಛಂದಸ್ಸಿನಲ್ಲಿ ರಚಿಸಿದ್ದಾನೆ .
* ಗಿರಿಜಾಕಲ್ಯಾಣ ಪ್ರೌಢಚಂಪೂ ಪರಂಪರೆಯಲ್ಲಿ ರಚಿತವಾಗಿರುವ ಕಾವ್ಯ
* ರಗಳ ಪ್ರಕಾರದಲ್ಲಿ ಹಲವಾರು ಕೃತಿಗಳನ್ನು ಬರೆದಿರುವ ಈತನು ‘ ರಗಳೆ ಕವಿ’ಯೆಂದೇ ಪ್ರಸಿದ್ಧನಾಗಿದ್ದಾನೆ .
Haralile Kannada Notes Question Answer
ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
1. ಹರಲೀಲೆ ಪಾಠದ ಕವಿಯ ಹೆಸರೇನು ?
ಉತ್ತರ : ಹರಲೀಲೆ ಪಾಠದ ಕವಿಯ ಹೆಸರು ಹರಿಹರ .
2. ಗಿರಿಜೆ ಎಲ್ಲಿ ಇರಬೇಕೆಂದು ಶಿವನು ತಿಳಿಸಿದನು ?
ಉತ್ತರ : ಗಿರಿಜೆ ದೇವಾಲಯದಲ್ಲಿ ಇರಬೇಕೆಂದು ಶಿವನು ತಿಳಿಸಿದನು .
3. ಹರಿಹರ ಬರೆದಿರುವ ಎರಡು ಕೃತಿಗಳನ್ನು ಹೆಸರಿಸಿ ,
ಉತ್ತರ : ಹರಿಹರ ಬರೆದಿರುವ ಪ್ರಮುಖ ಕೃತಿಗಳು : ಪಂಪಾಶತಕ ‘ , ‘ ರಕ್ಷಾಶತಕ ‘ ಮತ್ತು ‘ ಮುಡಿಗೆಯ ಅಷ್ಟಕ , ಹಲವಾರು ರಗಳೆಗಳು ಹಾಗೂ ಗಿರಿಜಾಕಲ್ಯಾಣ ‘ ಎಂಬ ಚಂಪೂಕೃತಿ ,
4. ನಂಬಿಯಣ್ಣನ ಪೂರ್ವಜನ್ಮದ ಹೆಸರೇನು ?
ಉತ್ತರ : ನಂಬಿಯಣ್ಣನ ಪೂರ್ವಜನ್ಮದ ಹೆಸರು ಪುಷ್ಪದತ್ತ .
5. ಹರಲೀಲೆ ಪಾಠದ ಮೂಲ ಕೃತಿ ಯಾವುದು ?
ಉತ್ತರ : ಹರಲೀಲೆ ಪಾಠದ ಮೂಲ ಕೃತಿ ‘ ನಂಬಿಯಣ್ಣನ ರಗಳೆ ”
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ .
1. ಚೋಳದೇಶದಲ್ಲಿದ್ದ ಮೂರು ಗ್ರಾಮಗಳನ್ನು ಹೆಸರಿಸಿ .
ಉತ್ತರ : ಚೋಳದೇಶದಲ್ಲಿದ್ದ ಮೂರು ಗ್ರಾಮಗಳೆಂದರೆ : ಮಣಮಂದ ಪುತ್ತೂರು ತಿರುವಾರೂರು ಮತ್ತು ತಿರುವತ್ತಿಯೂರು ,
2. ವಿರೂಪಾಕ್ಷನು ಗಿರಿಜೆಗೆ ಏನೆಂದು ಹೇಳಿದನು ?
ಉತ್ತರ : ಶಿವನು ಗಿರಿಜೆಯನ್ನು ಕುರಿತು ” ದೇವಿ , ಕೇಳು , ನಮ್ಮ ಪುತ್ರನಾದ ಪುಷ್ಪದತ್ತನು ನರಲೋಕದಲ್ಲಿ ( ಬೂಲೋಕದಲ್ಲಿ ) ಹುಟ್ಟಿ , ನಂಬಿ ಎಂಬ ಹೆಸರನ್ನು ಪಡೆದು ಸಂಸಾರದಿಂದ ಕೆಟ್ಟು ಹೋಗುವುದಕ್ಕೆ ಸಿದ್ಧವಾಗಿದ್ದಾನೆ . ಆತನಿಗೆ ಮುಂಚೆ ನೀಡಿದ ನಂಬಿಕೆಯ ಮಾತನ್ನು ಅನುಸರಿಸಿಕೊಂಡು ನಾವು ಕಳುಹಿಸಿದ ರುದ್ರಕನ್ನಿಕೆಯರಿಬ್ಬರೂ ಚೋಳದೇಶದ ತಿರುವಾರೂರು ಮತ್ತು ತಿರುವತ್ತಿಯೂರಿನಲ್ಲಿ ಪರಣೆ ಮತ್ತು ಸಂಕಿಲೆ ಎಂಬ ಹೆಸರಿನಿಂದ ಹುಟ್ಟಿದ್ದಾರೆ . ಅವರನ್ನು ಆತನೊಡನೆ ಸೇರಿಸಿ , ಸಕಲಸುಖವನ್ನು ಪೂಜೆಯಾಗಿ ಸ್ವೀಕರಿಸಿ ಬರುವೆನು ” ಎಂದು ಹೇಳಿದನು .
3. ಕೆಳಗೆ ಬಿದ್ದ ವೃದ್ಧನನ್ನು ನೋಡಿ ನೆರೆದಿದ್ದ ಜನ ಏನೆಂದು ಮಾತನಾಡಿಕೊಂಡರು ?
ಉತ್ತರ : ಕೆಳಗೆ ಬಿದ್ದ ವೃದ್ಧನನ್ನು ನೋಡಿ ಅಲ್ಲಿ ಸೇರಿದ್ದ ಜನರೆಲ್ಲಾ “ ಈ ವೃದ್ಧ ಬ್ರಾಹ್ಮಣನನ್ನು , ಮುಪ್ಪಿನ ಮೂರ್ಖನನ್ನು , ಗೌತಮನ ಗೋವನ್ನು ( ಬಡಕಲಾದ ಗೋವು ) , ಬ್ರಾಹ್ಮಣನನ್ನು ಕೊಂದ ಬ್ರಹ್ಮಹತ್ಯಾದೋಷಿಯನ್ನು ಒಳಗೆ ಬಿಟ್ಟವರಾರು ? ಕರೆದು ತಂದವರು ಯಾರು ? ಇದು ಅಪಶಕುನ , ಇನ್ನೇನು ಈ ಮದುವೆ ಸರಿಯಾಗುವುದಿಲ್ಲ ” ಎಂದು ಮಾತನಾಡಿಕೊಂಡರು .
4. ವೃದ್ಧಮಾಹೇಶ್ವರನು ಶಿವಮಂತ್ರವನ್ನು ಹೇಳುತ್ತಿದ್ದ ರೀತಿಯನ್ನು ತಿಳಿಸಿ ,
ಉತ್ತರ : ವೃದ್ಧಮಾಹೇಶ್ವರನು ಪುಣ್ಯವೇ ಹಣ್ಣಾದಂತೆ ಒಮ್ಮೊಮ್ಮೆ ಕೆಮ್ಮುತ್ತ , ಒಮ್ಮೊಮ್ಮೆ ಗೊರ್ ಗೊರ್ ಎಂದು ಶಬ್ದಮಾಡುತ್ತಾ , ತೊದಲುವ ಮಾತುಗಳಿಂದ ನಮಃಶಿವಾಯ , ನಮಃಶಿವಾಯ ಎನ್ನುತ್ತಿದ್ದನು .
ಇ ] ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು – ಐದು ವಾಕ್ಯಗಳಲ್ಲಿ ಉತ್ತರಿಸಿ .
1. ವೃದ್ಧಮಾಹೇಶ್ವರನನ್ನು ಕವಿ ಹೇಗೆ ವರ್ಣಿಸಿದ್ದಾನೆ ?
ಉತ್ತರ : ಶಿವನು , ಪಾದದಿಂದ ತಲೆಯವರೆಗೂ ಲೇಪಿಸಿಕೊಂಡ ವಿಭೂತಿ , ನರೆತ ತಲೆ , ಸುಕ್ಕುಗಟ್ಟಿದ ದೇಹಹೊಂದಿದನು . ಆತನ ಜಟೆಯಲ್ಲಿದ್ದ ಚಂದ್ರಕಳೆಯೇ ಕೊಡೆಯಾಯಿತು . ಹಿಡಿದಿದ್ದ ತಿಶೂಲ ಕೊಡೆಯ ದಂಡ ( ಖಟ್ವಾಂಗ ) ಊರುಗೋಲಾಯಿತು ( ಯಷ್ಟಿ ) , ಸರ್ಪವು ಪ್ರಮಾಣಪತ್ರವಾಯಿತು . ಬ್ರಹ್ಮನ ಶಿರವೇ ಕಮಂಡಲವಾಯಿತು , ಹುಲಿ ಮತ್ತು ಜಿಂಕೆಯ ಚರ್ಮಗಳು ಉಡುವ ಮತ್ತು ಹೊದೆಯುವ ವಸ್ತ್ರವಾದವು . ಶಿವನು ಕಾಲಿನಿಂದ ಮೆಟ್ಟಿಕೊಂಡಿರುವ ನಾಗಾಸುರ ಎಂಬ ರಾಕ್ಷಸನೆ ಪಾದರಕ್ಷೆಗಳಾಗಿ , ಕೊರಳಿನಲ್ಲಿ ಕಟ್ಟಿಕೊಂಡಿರುವ ತಲೆಬುರುಡೆಗಳ ಹಾರವ ಜಪಮಾಲೆಯಾಯಿತು . ಕೈಯಲ್ಲಿರುವ ಕೊಡೆ , ಮೈಯ ಸುಕ್ಕು , ಜೋತಾಡುವ ಹುಬ್ಬು , ನೇತಾಡುವ ತೋಳಿನ ಚರ್ಮ , ಇಟ್ಟಿರುವ ವಿಭೂತಿ , ನೆಲಕ್ಕೆ ಊರಿದ ಊರುಗೋಲು , ಹಿಡಿದ ಕಮಂಡಲ , ಇಳಿಬಿಟ್ಟ ಬಿಳಿಯಗಡ್ಡ , ನಡುಗುವ ನರೆತ ತಲೆ , ನರೆತು ಹೋಗಿ ಸಡಿಲವಾಗಿರುವ ಸರ್ವಾಂಗದಿಂದ ಶಿಥಿಲವಾಗಿದ್ದ ವೃದ್ಧನು ಪುಣ್ಯವೇ ಹಣ್ಣಾದಂತೆ ಒಮ್ಮೊಮ್ಮೆ ಕೆಮ್ಮುತ್ತ , ಒಮ್ಮೊಮ್ಮೆ ಗೊರ್ ಗೊರ್ ಎಂದು ಶಬ್ದ ಮಾಡುತ್ತಾ , ತೊದಲುವ ಮಾತುಗಳಿಂದ ನಮಃಶಿವಾಯ ? ನಮಃಶಿವಾಯ ಎನ್ನುತ್ತಾ , ಎನ್ನಲಾರದಂತೆ ನಡುಗುತ್ತಾ ಮದುವೆ ಚಪ್ಪರದ ಬಳಿಬಂದನು ” ಎಂದು ಕವಿ ವೃದ್ಧಮಾಹೇಶ್ವರನನ್ನು ವರ್ಣಿಸಿದ್ದಾನೆ .
2. ಮದುವೆ ಮಂಟಪದಲ್ಲಿ ವೃದ್ಧನು ಮಾಡಿದ ಅವಾಂತರಗಳಾವುವು ?
ಉತ್ತರ : ವಿವಾಹ ಮಂಟಪದೊಳಗೆ ಶಿವನು ಮೆಲ್ಲಮೆಲ್ಲನೆ ನೋಡುತ್ತಾ , ಮನದೊಳಗೆ ನಗುತ್ತಾ , ಕೋಲನೂರಿಕೊಂಡು ತಿನ್ನುತ್ತಾ ವಿವಾಹ ಮಂಟಪದ ಬಳಿ ಸಾಲಾಗಿ ಜೋಡಿಸಲಾಗಿದ್ದ ತುಪ್ಪದ ಕೊಡಗಳ ಮೇಲೆ ನಾಲ್ಕೆರಡನ್ನು ಎಡವಿ ‘ ನಮಃಶಿವಾಯ ‘ ಎಂಬ ವೃದ್ಧಧ್ವನಿ ಅವನ ಬಾಯಿಂದ ಬರುತ್ತಿದ್ದಂತೆ ಕೊಡಗಳ ಮೇಲೆ ಬಿದ್ದು ಅಲ್ಲಿ ಕುಳಿತಿದ್ದವರ ಮುಖಕ್ಕೆ , ಕಣ್ಣುಗಳಿಗೆ , ಮೈಯ ಮೇಲೆ ತುಪ್ಪ ಚೆಲ್ಲಿತು . ಅಲ್ಲಿ ನೆರೆದಿದ್ದವರೆಲ್ಲಾ ಹಾಗೆ ಬಿದ್ದ ವೃದ್ಧಮಾಹೇಶ್ವರನನ್ನು ಎತ್ತಿ ನಿಲ್ಲಿಸಿದರು . ಆದರೆ ಅವನು ಅವನು ಒಂದು ಹೆಜ್ಜೆ ಇಟ್ಟು ಮತ್ತೆ ತಡವರಿಸಿ ನಿಲ್ಲಲಾರದೆ ತಟ್ಟನೆ ಘಳಿಗೆಬಟ್ಟಲಿನ ಮೇಲೆ ಬಿದ್ದನು . ಆಗ ಅಲ್ಲಿದ್ದ ಕಳಶ ಒಡೆದು , ಘಳಿಗೆಬಟ್ಟಲು ಮುರಿದು ಹೋಗಿ , ಅಕ್ಕಿಯೆಲ್ಲಾ ಚೆಲ್ಲಿಹೋಯಿತು . ಅಲ್ಲಿದ್ದ ಜೋಯಿಸರು ಚದುರಿ ಅತ್ತಿತ್ತ ಓಡಿಹೋದರು . ನಂತರ ಮೂರ್ಚೆಹೋದಂತೆ ಬಿದ್ದಿದ್ದ ಅವನನ್ನು ಎಲ್ಲರೂ ಸುತ್ತುವರಿದು ನೀರುಹಾಕಿ ಎಚ್ಚರಿಸಿ ನಿಲ್ಲಿಸಿದ ಕೂಡಲೆ ಅವನು ತುಪ್ಪದ ಕೊಡದ ಮೇಲಲ್ಲದೆ ಬೇರೆಲ್ಲಿಗೂ ಬೀಳುತ್ತಿರಲಿಲ್ಲ . ಎಲ್ಲರೂ ಮೆಲ್ಲಗೆ ಅವನ ಕೈಯನ್ನು ಕಾಲನ್ನು ಹಿಡಿದು ಎತ್ತಿಕೊಂಡು ಹೋಗಿ ಚಪ್ಪರದ ಹೊರಗೆ ಮೆಲ್ಲಗೆ ಇಳಿಸಿದರು . ಅವರು ‘ ಇವನನ್ನು ಒಳಗೆ ಬಿಡಬೇಡವೆಮದು ‘ ದ್ವಾರಪಾಲಕನಿಗೆ ಹೇಳಿ ವಿವಾಹಮಂಟಪದ ಬಾಗಿಲನ್ನು ಹಾಕಿಕೊಂಡು ಒಳಗೆ ಹೋಗುವಷ್ಟರಲ್ಲಿ ವೃದ್ಧಮಾಹೇಶ್ವರನು ಅವರಿಗಿಂತ ಮುನ್ನವೇ ಒಳಗೆ ಬಂದು ಅಲ್ಲಿದ್ದ ತೋರಣದ ತಳಿರನ್ನು ಕಿತ್ತು ಬೀಸಾಡುತ್ತಾ ” ಶಿವಾ ಶಿವಾ … ” ಎಂದು ಕೂಗುತ್ತ ಆವಾಂತರ ಮಾಡಿದನು .
3. ಶಿವನು ವೃದ್ಧಮಾಹೇಶ್ವರನಾಗಿ ವೇಷಧರಿಸಲು ಕಾರಣವೇನು ?
ಉತ್ತರ : ಕೈಲಾಸದಲ್ಲಿರುವ ಉದ್ಯಾನವನದಲ್ಲಿ ಇಬ್ಬರು ರುದ್ರಕನ್ನಿಕೆಯರು ಹೂ ಬಿಡಿಸುತ್ತಿದ್ದರು . ಇದನ್ನು ರುದ್ರಗಣದ ಸದಸ್ಯರಲ್ಲೊಬ್ಬನಾದ ಪುಷ್ಪದತ್ತ ಗಮನಿಸಿ ಅವರನ್ನು ಅನುರಾಗ ಭಾವದಿಂದ ನೋಡಿದನು . ಪುಷ್ಪದತ್ತನನ್ನು ಕಂಡ ರುದ್ರಕನ್ನಿಕೆಯರೂ ಅವನನ್ನು ಅದೇ ಭಾವದಿಂದ ನೋಡುತ್ತಿರುವುದನ್ನು ಶಿವ ಗಮನಿಸಿದ ಮತ್ತು ಅಸಮಾಧಾನ ಹೊಂದಿದ . ಕೈಲಾಸದಲ್ಲಿ ಗಣಗಳು ಇಂತಹ ವಿಕಾರಭಾವನೆಗಳನ್ನು ಹೊಂದಿರುವುದು ಅಪರಾಧ . ಹಾಗಾಗಿ ಶಿವನು ಈ ಮೂವರಿಗೂ ಇಹಲೋಕದಲ್ಲಿ ಮನುಜರಾಗಿ ಹುಟ್ಟಿ ಎಂದು ಶಪಿಸಿದನು . ಇದರಿಂದ ನೊಂದ ಪುಷ್ಪದತ್ತ “ ನಿಮ್ಮನ್ನಗಲಿ ನಾನಿರಲಾರೆ ದಯವಿಟ್ಟು ನನ್ನ ತಪ್ಪನ್ನು ಮನ್ನಿಸಿ ” ಎಂದು ಪ್ರಾರ್ಥಿಸಲು , ನೀನು ಈಗ ಭೂಲೋಕದಲ್ಲಿ ಮಾನವನಾಗಿ ಹುಟ್ಟು , ಆದಷ್ಟು ಬೇಗನೆ ನಿನ್ನನ್ನು ಕೈಲಾಸಕ್ಕೆ ಕರೆಸಿಕೊಳ್ಳುವನೆಂದು ಆಶ್ವಾಸನೆ ನೀಡಿದ . ಹೀಗಾಗಿ ಚೋಳದೇಶದ ರಾಜಮನೆತನದಲ್ಲಿ ನಂಬಿಯಣ್ಣನಾಗಿ ಪಷದತ್ತನೂ ಪರವೆ – ಸಂಕಿಲಿಯರಾಗಿ ರುದ್ರಕನ್ನಿಕೆಯರೂ ಹುಟ್ಟಿದರು . ಆ ಕಾರಣಕ್ಕಾಗಿ ಶಿವನು ವೃದ್ಧಮಾಹೇಶ್ವರನಾಗಿ ವೇಷಧರಿಸಿದನು .
ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .
1. ” ನೀನತ್ಯಂತ ಕರುಣಿ ”
ಉತ್ತರ : ಆಯ್ಕೆ : – ಈ ವಾಕ್ಯವನನ್ನು ಹರಿಹರ ಕವಿಯ ‘ ನಂಬಿಯಣ್ಣನ ರಗಳೆ ‘ ಕೃತಿಯಿಂದ ತೆಗೆದುಕೊಳ್ಳಲಾದ ‘ ಹರಲೀಲೆ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : – ನಂಬಿಯಣ್ಣ ಮತ್ತು ಪರವೆ ಸಂಕಿಲಿಯರನ್ನು ಮದುವೆಯ ಮಂಟಪದಿಂದ ಕರೆತರಲು ಭೂಲೋಕಕ್ಕೆ ಹೋಗುವುದಾಗಿ ಶಿವನು ಹೇಳಿದಾಗ ಗಿರಿಜೆ ತಾನೂ ಬರುತ್ತೇನೆಂದು ಕೇಳಿಕೊಳ್ಳುತ್ತಾಳೆ . ಆ ಸಂದರ್ಭದಲ್ಲಿ ಶಿವನು ಹೀಗೆ ಹೇಳುತ್ತಾನೆ . ನೀನು ಕರುಣಾಮಯಿ ಆದರೆ ನಾನು ಮಾಡುವುದು ನಿಷ್ಟುರದ ಕೆಲಸ ಆದ್ದರಿಂದ ನೀನು ಬರುವುದು ಬೇಡವೆನ್ನುತ್ತಾನೆ .
ಸ್ವಾರಸ್ಯ : – ಶಿವನು ನಂಬಿಯಣ್ಣನ ಮದುವೆಯಲ್ಲಿ ಅವಾಂತರ ಮಾಡಲು ಹೋಗುವ ಉದ್ದೇಶ ಹೊಂದಿದ್ದು ಕರುಣಾಮಯಿಯಾದ ಗಿರಿಜೆ ಬಂದರೆ ತನ್ನ ಕಾರ್ಯಕ್ಕೆ ಅಡ್ಡಿಯುಂಟು ಮಾಡಬಹುದೆಂದು ಹೇಳಿರುವುದು ಸ್ವಾರಸ್ಯಕರವಾಗಿದೆ .
2. “ ಸಕಲಸುಖಮಂ ಪೂಜೆಯಾಗಿ ಕೈಕೊಂಡುಬರ್ಪೆನ್ ”
ಉತ್ತರ : ಆಯ್ಕೆ : – ಈ ವಾಕ್ಯವನನ್ನು ಹರಿಹರ ಕವಿಯ ‘ ನಂಬಿಯಣ್ಣನ ರಗಳೆ ‘ ಕೃತಿಯಿಂದ ತೆಗೆದುಕೊಳ್ಳಲಾದ ‘ ಹರಲೀಲೆ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : – ಈ ಮಾತನ್ನು ಶಿವನು ಗಿರಿಜೆಗೆ ಹೇಳುತ್ತಾನೆ . ಶಿವನ ಶಾಪದಿಂದ ಚೋಳದೇಶದಲ್ಲಿ ‘ ನಂಬಿ ‘ ಎಂಬ ಹೆಸರಿನಿಂದ ಜನಿಸಿದ್ದ ಪುಷ್ಪದತ್ತ ಹಾಗೂ ಪರವೆ – ಸಂಕಿಲಿ ಎಂಬ ಹೆಸರಿನಿಂದ ಜನಿಸಿದ್ದ ರುದ್ರಕನ್ನಿಕೆಯರನ್ನು ಅವರಿಗೆ ಮಾತುಕೊಟ್ಟಿದ್ದಂತೆ ಕೈಲಾಸಕ್ಕೆ ಕರೆತರುವುದಕ್ಕಾಗಿ ಹೇಳುತ್ತಾ ಭೂಲೋಕದಲ್ಲಿ ನಂಬಿಯಣ್ಣನ ಮದುವೆಯಲ್ಲಿ ಸಕಲ ಸುಖವನ್ನು ಅವನಿಂದ ಸೇವೆಯಾಗಿ ಪಡೆದು ಬರುತ್ತೇನೆಂದು ಈ ಸಂದರ್ಭದಲ್ಲಿ ಹೇಳುತ್ತಾನೆ .
ಸ್ವಾರಸ್ಯ : – ಭಕ್ತರಕ್ಷಕನಾದ ಶಿವನು ಭುಲೋಕಕ್ಕೆ ಹೋಗಿ ಅಲ್ಲಿ ನಂಬಿಯಣ್ಣನಿಂದ ಸಕಲ ಸುಖವನ್ನು ಪಡೆದು ಬರುವುದಾಗಿ ಹೇಳಿರುವುದು ಸ್ವಾರಸ್ಯಕರವಾಗಿದೆ .
3. “ ಪುಣ್ಯಂ ಪಣ್ಣಾದಂತೆ “
ಉತ್ತರ : ಆಯ್ಕೆ : – ಈ ವಾಕ್ಯವನನ್ನು ಹರಿಹರ ಕವಿಯ ‘ ನಂಬಿಯಣ್ಣನ ರಗಳೆ ‘ ಕೃತಿಯಿಂದ ತೆಗೆದುಕೊಳ್ಳಲಾದ ‘ ಹರಲೀಲೆ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : – ಭೂಲೋಕಕ್ಕೆ ಹೋಗುವಾಗ ಶಿವನು ಧರಿಸಿದ ವೃದ್ಧಮಾಹೇಶ್ವರ ವೇಷವನ್ನು ವರ್ಣಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾನೆ . ಸುಕ್ಕುಗಟ್ಟಿ ನೇತಾಡುವ ಚರ್ಮ , ನೆಲಕ್ಕೆ ಊರಿದ ಊರುಗೋಲು , ಇಳಿಬಿಟ್ಟ ಬಿಳಿಯಗಡ್ಡ , ನಡುಗುವ ನರೆತ ತಲೆ , ಹೀಗೆ ಶಿಥಿಲವಾಗಿದ್ದ ವೃದ್ಧನು ಪುಣ್ಯವೇ ಹಣ್ಣಾದಂತೆ ಇದ್ದನು ಎಂದು ಕವಿ ವರ್ಣಿಸಿದ್ದಾನೆ
ಸ್ವಾರಸ್ಯ : – ಪುಣ್ಯವಿಶೇಷನಾದ ವೃದ್ಧಮಾಹೇಶ್ವರನ ಆ ವೇಷವನ್ನು ಪುಣ್ಯ ಹಣ್ಣಾದಂತೆ ಎಂದು ವರ್ಣಿಸಿರುವುದು ಸ್ವಾರಸ್ಯಕರವಾಗಿದೆ .
4. “ ಈ ವೃದ್ಧಂ ಕಿರುಕುಳನಲ್ಲ ”
ಉತ್ತರ : ಆಯ್ಕೆ : – ಈ ವಾಕ್ಯವನನ್ನು ಹರಿಹರ ಕವಿಯ ‘ ನಂಬಿಯಣ್ಣನ ರಗಳೆ ‘ ಕೃತಿಯಿಂದ ತೆಗೆದುಕೊಳ್ಳಲಾದ ‘ ಹರಲೀಲೆ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : – ವೃದ್ಧಮಾಹೇಶ್ವರನ ಕಾಟತಾಳಲಾರದೆ ಜನರೆಲ್ಲಾ ಸೇರಿ ಅವನನ್ನು ಮದುವೆ ಚಪ್ಪರದ ಹೊರಗೆ ತಂದು ಇಳಿಸಿ ಒಳಗೆ ಹೋಗುವಷ್ಟರಲ್ಲಿ ಅವನು ಅವರಿಗಿಂತ ಮುಂದೆ ಒಳಗೆ ಇದ್ದನು . ಅಲ್ಲದೆ ಅಲ್ಲಿದ್ದ ತೋರಣವನ್ನು ಕಿತ್ತುಹಾಕುತ್ತಾ “ ಶಿವಶಿವಾ … ” ಎನ್ನುತ್ತಿರುವುದನ್ನು ನೋಡಿ ಆ ಜನರೆಲ್ಲಾ ಆಶ್ಚರ್ಯಗೊಂಡು ‘ ಈ ವೃದ್ಧ ನಮಗೆ ಕಿರುಕುಳ ಕೊಡುವವನಲ್ಲ , ಈತನಾರೋ ಪವಾಡ ಪುರುಷನಿರಬೇಕು ‘ ಎಂದು ಮಾತನಾಡಿಕೊಳ್ಳುವ ಸಂದರ್ಭದಲ್ಲಿ ಈ ಮಾತು ಬಂದಿದೆ .
ಸ್ವಾರಸ್ಯ : – ಆತನ ನಡೆವಳಿಕೆಯನ್ನು ನೋಡಿ ಜನರು ಈತ ಕಿರುಕುಳ ಕೊಡಲು ಬಂದವನಲ್ಲ ಎಂದು ಯೋಚಿಸಿದ್ದು ಸ್ವಾರಸ್ಯಪೂರ್ಣವಾಗಿದೆ .
ಉ ] ಕೊಟ್ಟಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ ,
1. ಹರಿಹರನ ಕಾಲ ೧೨೦೦
2. ವೃದ್ಧಮಾಹೇಶ್ವರ ತುಪ್ಪದ ಕೊಡದ ಮೇಲೆ ಬಿದ್ದನು
3. ಹರಲೀಲೆ ಪಾಠವನ್ನು ನಂಬಿಯಣ್ಣನ ರಗಳೆ ರಗಳೆಯಿಂದ ಆಯ್ದುಕೊಳ್ಳಲಾಗಿದೆ .
4. ವೃದ್ಧಮಾಹೇಶ್ವರನು ಕೈಲಾಸದಿಂದ ಮಣಮುಂದಪುತ್ತೂರಿಗೆ ಬಂದನು .
ಹೊಂದಿಸಿ ಬರೆಯಿರಿ
“ಅ” ಪಟ್ಟಿ ‘ ಆ ‘ ಪಟ್ಟಿ
1. ಪುಷ್ಪದತ್ತ ಹಂಪಿ
2 , ರುದ್ರಕನ್ನಿಕೆಯರು ಬಾಗಿಲು
3. ಚೋಳದೇಶ ನಂಬಿಯಣ್ಣ
4. ಕದ ಪರವೆ-ಸಂಕಿಲೆ
5 , ಗಿರಿಜೆ ಮಣಮಂದಪುತ್ತೂರು
ಶಿವ
ಪಾರ್ವತಿ
ಸರಿ ಉತ್ತರಗಳು.
1. ನಂಬಿಯಣ್ಣ
2. ಪರವೆ – ಸಂಕಿಲೆ
3. ಮಣಮಂದಪುತ್ತೂರು
4. ಬಾಗಿಲು
5 ಪಾರ್ವತಿ
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ .
1. ಕರ್ತರಿ ಪ್ರಯೋಗ ವಾಕ್ಯದ ವಿಶೇಷತೆಯನ್ನು ತಿಳಿಸಿ ,
ಉತ್ತರ : ಕರ್ತರಿ ಪ್ರಯೋಗದ ವಾಕ್ಯದ ಕ್ರಿಯಾಪದಕ್ಕೆ ಕರ್ತೃವಿನ ಲಿಂಗ , ವಚನ ಬಂದರೆ ಅದು ಕರ್ತರಿ ಪ್ರಯೋಗ , ಉದಾ : ಅಣ್ಣ ಅನ್ನವನ್ನು ಉಂಡನು . ಇದು ಕರ್ತರಿ ಪ್ರಯೋಗದ ವಾಕ್ಯ ಇಲ್ಲಿ ಕರ್ತೃ ಪದ ಮಲ್ಲಿಂಗ ಇದೆ ಕ್ರಿಯಾಪದ ಉಂಡನು ಪುಲ್ಲಿಂಗ ಇದೆ . ಅಣ್
2. ವಿಧ್ಯರ್ಥಕ ಕ್ರಿಯಾಪದ ಎಂದರೇನು ? ಎರಡು ಉದಾಹರಣೆ ಕೊಡಿ ,
ಉತ್ತರ : ಆಶೀರ್ವಾದ , ಅಪ್ಪಣೆ , ಆಜ್ಞೆ , ಹಾರೈಕೆ ಸಮ್ಮತಿ ಇತ್ಯಾದಿ ವಿಧಿಗಳನ್ನು ಹೊಂದಿರುವ ಕ್ರಿಯಾಪದಗಳ ವಿಧ್ಯರ್ಥಕ ಕ್ರಿಯಾಪದಗಳು . ಉದಾ : ಓದಲಿ , ಆಗಲಿ , ಬರೆಯಲಿ ಇತ್ಯಾದಿ ,
3. ಸಂಭಾವನಾರ್ಥಕ ಕ್ರಿಯಾಪದವನ್ನು ಸೂತ್ರ ಸಹಿತ ವಿವರಿಸಿ ,
ಉತ್ತರ : ಕ್ರಿಯೆ ನಡೆಯುವ ಬಗ್ಗೆ ಸಂಶಯ ಅಥವಾ ಊಹೆಯನ್ನು ವ್ಯಕ್ತಪಡಿಸುವಂತಹ ಪದಗಳೇ ಸಂಭಾವನಾರ್ಥಕ ಕ್ರಿಯಾಪದಗಳು , ಉದಾ : ಅವರು ನಾಳೆ ಬಂದಾರು , – ಚೆಂಡು ಮೇಲಕ್ಕೆ ಹೋದೀತು .
ಈ ವಾಕ್ಯಗಳಲ್ಲಿರುವ ಬಂದಾರು . ಹೋದೀತು ಎಂಬ ಕ್ರಿಯಾಪದಗಳು ಸಂಶಯ ಅಥವಾ ಊಹೆಯನ್ನು ಸೂಚಿಸುತ್ತವೆ .
ಆ ) ಕೊಟ್ಟಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ .
1. ‘ ದೇವರು ಎಲ್ಲರಿಗೂ ಒಳ್ಳೆಯದನ್ನೇ ಉಂಟುಮಾಡಲಿ – ಈ ವಾಕ್ಯದಲ್ಲಿರುವ ಕ್ರಿಯಾಪದ
ಆ ) ದೇವರು ಆ ) ಎಲ್ಲರಿಗೂ ಇ ) ಒಳ್ಳೆಯದನ್ನೆ ಈ ) ಉಂಟುಮಾಡಲಿ
ಉತ್ತರ ಈ) ಉಂಟುಮಾಡಲಿ
2. ಈ ಪದವು ನಿಷೇಧಾರ್ಥಕ ಕ್ರಿಯಾಪದಕ್ಕೆ ಉದಾಹರಣೆ,,,,,,,,,,
ಆ ) ತಿನ್ನನು ಆ ) ತಿನ್ನಲಿ 3 .ತಂದಾನು, 4, ತಿನ್ನುತಾನೆ
ಉತ್ತರ : ಅ ) ತಿನ್ನನು
3. ಇದು ಈ ಗುಂಪಿಗೆ ಸೇರದ ಪದವಾಗಿದೆ,,,,,,,,,,,,,,
ಅ ) ಉತ್ಸಾಹ ಆ) ಉಪಮಾ ಇ ) ಮಂದಾನಿಲ ಈ ) ಲಲಿತ
ಉತ್ತರ :ಆ ) ಉಪಮಾ
4. ‘ ಎಳಸಿರ್ಪ ‘ ಈ ಪದದ ಅರ್ಥ,,,,,,,,,,,
ಅ) ಎಳೆಯದಾಗಿರುವ ಆ ) ಮಿತಿಯಿಲ್ಲದ ಇ ) ರುಚಿಯಾದ ಈ ) ಸುತ್ತುವರಿದಿರುವ
9th Standard Haralile Kannada Notes Question Answer Pdf
ಇತರೆ ಪಾಠಗಳು: