9ನೇ ತರಗತಿ ಊರುಭಂಗ ಕನ್ನಡ ನೋಟ್ಸ್ , 9th Standard Urubhanga Kannada Notes Question Answer Pdf Download
ತರಗತಿ : 9ನೇ ತರಗತಿ
ಪಾಠದ ಹೆಸರು : ಊರುಭಂಗ
ಕೃತಿಕಾರರ ಹೆಸರು : ಭಾಸಕವಿ, ಡಾ ಎಲ್ . ಬಸವರಾಜು
Table of Contents
ಕೃತಿಕಾರರ ಪರಿಚಯ :
ಭಾಸ :
ಭಾಸನು ಸಂಸ್ಕೃತದ ಪ್ರಸಿದ್ಧ ನಾಟಕಕಾರ , ಈತ ಕಾಳಿದಾಸನಿಗಿಂತ ಸುಮಾರು ಐದುನೂರು ವರ್ಷಗಳಷ್ಟು ಹಿಂದಿನವನು ,
* ಈತನ ಕಾಲ ಸುಮಾರು ಕ್ರಿಸ್ತಪೂರ್ವ ೩೦೦ ,
* ಈತನು ಪೂರ್ಣರೂಪದಲ್ಲಿ ೨೫-೩೦ ನಾಟಕಗಳನ್ನು ಬರೆದಿದ್ದು ಲಭಿಸಿರುವ ನಾಟಕಗಳು ೧೪ ಮಾತ್ರ
* ಈತನ ಪ್ರಮುಖ ಕೃತಿಗಳೆಂದರೆ : ಪ್ರತಿಜ್ಞಾಯೌಗಂಧರಾಯಣ , ಸ್ವಪ್ನವಾಸವದತ್ತ , ಚಾರುದತ್ತ ಇವು ಬೃಹತ್ಕಥೆ ಆಧಾರಿತವಾದವು .
* ಪ್ರತಿಮಾ ನಾಟಕ , ಅಭಿಷೇಕ , ಯಜ್ಞಫಲ ಇವು ರಾಮಾಯಣಕ್ಕೆ ಸಂಬಂಧಿಸಿದವು ,
* ಪಂಚರಾತ್ರಾ , ಮಧ್ಯಮ ವ್ಯಾಯೋಗ , ದೂತವಾಕ್ಯ , ದೂತ ಘಟೋತ್ಕಚ , ಕರ್ಣಭಾರ , ಊರುಭಂಗ ಇವು ಮಹಾಭಾರತ ಆಧರಿಸಿ ಈತನು ಬರೆದಿರುವ ನಾಟಕಗಳು ,
* ಡಾ . ಎಲ್ . ಬಸವರಾಜು : ಇವರು ಭಾಸನ ‘ ಊರುಭಂಗ ‘ ವನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದವರು . ಇವರು ಕೋಲಾರದವರು .ಪಂಪಭಾರತದ ಸರಳ ಗದ್ಯಾನುವಾದ ಮೂಲತಃ ಬುದ್ಧಚರಿತದ ಗದ್ಯಾನುವಾದವಾಗಿದೆ . ಇವರು ನೂರಾರು ಸಂಶೋಧನಾ ಕೃತಿಗಳನ್ನು ಪ್ರಕಟಿಸಿದ್ದಾರೆ .
Urubhanga Kannada Notes Question Answer
ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ ,
1. ದುರ್ಯೋಧನನು ದುರ್ಜಯನಿಗೆ ಏನೆಂದು ಬುದ್ಧಿವಾದವನ್ನು ಹೇಳುತ್ತಾನೆ ?
ಉತ್ತರ : ನನಗೆ ಹೇಗೋ ಹಾಗೆ , ಪಾಂಡವರಿಗೂ ವಿಧೇಯನಾಗಿರು ಎಂದು ಹೇಳುತ್ತಾನೆ
2. ಅಶ್ವತ್ಥಾಮನು ದುರ್ಯೋಧನನಿಗೆ “ ತಾನು ಏನು ಮಾಡಲು ಸಿದ್ಧನಾಗಿದ್ದೇನೆ ” ಎಂದು ಹೇಳುತ್ತಾನೆ ?
ಉತ್ತರ : ಅಶ್ವತ್ಥಾಮನು ದುರ್ಯೋಧನನಿಗೆ “ ಕೃಷ್ಣನನ್ನು ಪಾಂಡುತನಯಸಹಿತವಾಗಿ ನಾಶಮಾಡಲು ಸಿದ್ಧನಾಗಿದ್ದೇನೆ ” ಎಂದು ಹೇಳುತ್ತಾನೆ .
3. ಅಶ್ವತ್ಥಾಮನು “ ನಿನ್ನ ದರ್ಪವೆಲ್ಲವೂ ಮುರಿದು ಬಿತ್ತೇ ” ಎಂದಾಗ ದುರ್ಯೋಧನನು ಏನು ಹೇಳುತ್ತಾನೆ ?
ಉತ್ತರ : ಅಶ್ವತ್ಥಾಮನು ನಿನ್ನ ದರ್ಪವೆಲ್ಲವೂ ಮುರಿದು ಬಿತ್ತೇ ಎಂದಾಗ ದುರ್ಯೋಧನನು “ ರಾಜರಿಗೆ ಅಭಿಮಾನವೇ ಶರೀರ ಆ ಅಭಿಮಾನಕ್ಕಾಗಿಯೇ ನಾನು ಯುದ್ಧವನ್ನು ಕೈಗೊಂಡಿದ್ದು ” ಎಂದು ಹೇಳುತ್ತಾನೆ .
4. ದುರ್ಯೋಧನನು ನೆಲಕ್ಕುರುಳಿದ ಭೀಮನನ್ನು ಏನೆಂದು ಮೂದಲಿಸುತ್ತಾನೆ ?
ಉತ್ತರ : ದುರ್ಯೋಧನನು ನೆಲಕ್ಕುರುಳಿದ ಭೀಮನನ್ನು ಕಂಡು “ ಹೆದರಬೇಡ ಭೀಮ , ನೆಲಕ್ಕೆ ಬಿದ್ದ ಶತ್ರುವನ್ನು ಯಾವ ವೀರನೂ ಘಾತಿಸುವುದಿಲ್ಲ ” ಎಂದು ಮೂದಲಿಸುತ್ತಾನೆ ,
5 , ತೊಡೆ ಮುರಿದು ಬಿದ್ದಿದ್ದ ದುರ್ಯೋಧನನ್ನು ನೋಡಲು ಯಾರು ಯಾರು ಬಂದರು ?
ಉತ್ತರ : ತೊಡೆ ಮುರಿದು ಬಿದ್ದಿದ್ದ ದುರ್ಯೋಧನನ್ನು ನೋಡಲು ಬಲರಾಮ , ಧೃತರಾಷ್ಟ್ರ , ಗಾಂಧಾರಿ , ದುರ್ಜಯ ಮತ್ತು ಅಶ್ವತ್ಥಾಮ ಬಂದರು .
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ ,
1. ದುರ್ಜಯನು ತನ್ನ ಬಳಿ ಬರುತ್ತಿರುವುದನ್ನು ಕಂಡ ದುರ್ಯೋಧನನು ಏನೆಂದುಕೊಳ್ಳುತ್ತಾನೆ ? ಉ
ತ್ತರ : ದುರ್ಜಯನ್ನು ತನ್ನ ಬಳಿ ಬರುತ್ತಿರುವುದನ್ನು ಕಂಡ ದುರ್ಯೋಧನನು : “ ಅಹ ಈ ಚಿಣ್ಣನೂ ಬಂದ ಹೃದಯದಲ್ಲಿ ಸದಾ ಸನ್ನಿಹಿತವಾಗಿರುವ ಪತ್ರಸ್ನೇಹವು ನನ್ನನ್ನೀಗ ದಹಿಸುತ್ತಿದೆ . ನನ್ನ ತೊಡೆಯ ಮೇಲೆ ಮಲಗಲು ಯೋಗ್ಯನಾದ ಈ ಹಸುಳೆ ದುರ್ಜಯನು ದುಃಖ ಎಂದರೇನೆಂಬುದನ್ನೇ ಅರಿಯ , ಸೋತುಬಿದ್ದು ಈ ದುರವಸ್ಥೆಯಲ್ಲಿರುವ ನನ್ನನ್ನು ಕಂಡು ಏನೆಂದಾನೋ ? ” ಎಂದುಕೊಳ್ಳುತ್ತಾನೆ .
2. ಪಾಂಡವರು ತನ್ನ ದರ್ಪವನ್ನು ಮುರಿದರೆಂಬ ಮಾತು ಅತ್ಯಲ್ಪ ಎಂಬುದನ್ನು ದುರ್ಯೋಧನನನು ಹೇಗೆ ಸಮರ್ಥಿಸಿದ್ದಾನೆ ?
ಉತ್ತರ : ಅಶ್ವತ್ಥಾಮನು ದುರ್ಯೋಧನನಲ್ಲಿ ‘ ಭೀಮನಿಂದ ನಿನ್ನ ದರ್ಪವೂ ಮುರಿದುಬಿತ್ತೆ ‘ ಎಂದು ಹೇಳಿದಾಗ ದುರ್ಯೋಧನನು “ ನೋಡು ಗುರುಪುತ್ರ , ಸಭೆಯಲ್ಲಿ ದೌಪದಿಯನ್ನು ಮುಂದಲೆ ಹಿಡಿದು ಎಳೆದಾಡಿದೆವು . ಪಗಡೆ ಆಟದ ನೆಪದಲ್ಲಿ ಸೋತ ಪಾಂಡವರನ್ನು ವನ್ಯಮೃಗಗಳೊಡಗೂಡಿಸಿ ಕಾಡಿನಲ್ಲಿ ತಿರನೆ ತಿರುಗಾಡಿಸಿದೆವು . ಇವುಗಳ ಮುಂದೆ ಪಾಂಡವರು ನನ್ನ ದರ್ಪವನ್ನು ಮುರಿದರೆಂಬ ಮಾತು ಅತ್ಯಲ್ಪವಲ್ಲವೇ ? ಆಲೋಚಿಸಿ ನೋಡು ” ಎಂದು ಅಶ್ವತ್ಥಾಮನಿಗೆ ಹೇಳಿದನು .
3. ಅಶ್ವತ್ಥಾಮನು ಕೃಷ್ಣನನ್ನು ಚಿಮ್ಮಿಬಿಡುತ್ತೇನೆ ಎಂದಾಗ ದುರ್ಯೋಧನನು ಏನು ಹೇಳಿದನು ?
ಉತ್ತರ : ಅಶ್ವತ್ಥಾಮನು ಕೃಷ್ಣನನ್ನು ಚಿಮ್ಮಿಬಿಡುತ್ತೇನೆ ಎಂದಾಗ ದುರ್ಯೋಧನನು “ ಅಯ್ಯಾ , ಬೇಡ , ಹಾಗೆನ್ನಬೇಡ , ಅಭಿಷಿಕ್ಕ ರಾಜರೆಲ್ಲರೂ ಭೂಮಿತಾಯ ಮಡಿಲಲ್ಲಿ ಮಲಗಿಬಿಟ್ಟರು . ಕರ್ಣನು ಸ್ವರ್ಗಸ್ಥನಾದನು : ಭೀಷ್ಮಾಚಾರ್ಯರ ದೇಹವಾತವಾಯಿತು . ನನ್ನ ತಮ್ಮಂದಿರೂ ಗತಿಸಿಹೋದರು . ನನ್ನ ಗತಿಯೂ ಹೀಗಾಯಿತು . ಗುರುಪುತ್ರ , ಇನ್ನು ಬಿಲ್ಲನ್ನು ಬಿಸಾಡು , ” ಎಂದು ಹೇಳಿದನು .
4 , ಅಶ್ವತ್ಥಾಮನ ಧನುಷ್ಠಾಂಕಾರ ಕೇಳಿದ ಬಲರಾಮನು ನುಡಿದ ನುಡಿಗಳೇನು ?
ಉತ್ತರ : ಅಶ್ವತ್ಥಾಮನ ಧನುಷ್ಠಾಂಕಾರ ಕೇಳಿದ ಬಲರಾಮನು ಆಕಾಶದ ಕಡೆ ನಿಟ್ಟಿಸಿ , ” ರಣದುಂದುಭಿಗಳ ಮೊಳಗು ನಿಂತು ಮೂಕವಾದ , ಬಾಳಿ ಕವಚ – ಚಾಮರ – ಛತ್ರಗಳು ಚೆಲ್ಲಿರುವ ಯೋಧರೂ ಸೂತರೂ ಸತ್ತು ಬಿದ್ದಿರುವ ಈ ರಣರಂಗದಲ್ಲಿ ತನ್ನ ಧನುಷ್ಠಂಕಾರದಿಂದ ಕಾಗೆಗಳ ಗುಂಪನ್ನು ಹೆದರಿಸಿ , ಆಕಾಶದ ತುಂಬ ಚದುರುವಂತೆ ಮಾಡಿದವನು ಯಾರು ? ” ಎಂದು ಹೇಳಿದನು .
ಇ ] ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .
1. ದುರ್ಯೋಧನ ಮತ್ತು ದುರ್ಜಯರ ನಡುವೆ ನಡೆದ ಸಂಭಾಷಣೆಯನ್ನು ಸಂಗ್ರಹಿಸಿ ಬರೆಯಿರಿ .
ಉತ್ತರ : ಧೃತರಾಷ್ಟ್ರನು ಮರಿ , ದುರ್ಜಯ , ಹೋಗಪ್ಪ – ನಿಮ್ಮಪ್ಪಾಜಿ ಎಲ್ಲಿರುವನೋ ಹುಡುಕು ಹೋಗು . ಎಂದಾಗ ದುರ್ಜಯನು ಆಗಲಿ ತಾತ , ( ಮುಂದೆ ನಡೆದು ) ತಾತ , ಇದೋ ಹೊರಟೆ .
( ಎಂದು ಓಡುತ್ತ ) ಅಪ್ಪಾರ್ಜಿ ಎಲ್ಲಿದ್ದೀರಾ ? ಎಂದು ಹುಡುಕುತ್ತಾ ಬರುವುದನ್ನು ನೋಡಿದ ದುರ್ಯೋಧನನು ಸೋತುಬಿದ್ದು ಈ ದುರವಸ್ಥೆಯಲ್ಲಿರುವ ನನ್ನನ್ನು
ಕಂಡು ಏನೆಂದಾನೋ ? ಎಂದು ಯೋಚಿಸಿ ಅಪ್ಪಾ ದುರ್ಜಯ , ಇಲ್ಲಿಗೇಕೆ ಬಂದೆ ?
ಅಎಂದು ಕೇಳಿದಾಗ ನೀವು ತಡಮಾಡಿದಿರಿ . ಹೊತ್ತಾಯಿತೆಂದು ಬಂದೆ . ಎಂದು ದುರ್ಜಯನ್ನು ಹೇಳಿ , ಅಪ್ಪಾಜಿ , ನಾನು ನಿಮ್ಮ ತೊಡೆಯ ಮೇಲೆ ಕುಳಿತುಕೊಳ್ಳುತ್ತೇನೆ ! ಎಂದಾಗ ‘ ಬೇಡಪ್ಪ ಬೇರೆ ಎಲ್ಲಿಯಾದರೂ ಕುಳಿತುಕೋ ‘ ಎಂದು ಹೇಳುತ್ತಾನೆ .
ಇದುವರೆಗೂ ನೀನು ಕುಳಿತು , ಆಡಿ , ಮಲಗಿ ,ನಿನಗೆ ಚಿರಪರಿಚಿತವಾಗಿದ್ದ ಈ ತೊಡೆಯನ್ನು ನಿನ್ನ ಭಾಗಕ್ಕಿಲ್ಲವಪ್ಪ ಎಂಬ ಮಾತು . ದುರ್ಜಯನಿಗೆ ಅರ್ಥವಾಗದೇ ಯಾಕಪ್ಪಾಜಿ , ನೀವೆಲ್ಲಿಗೆ ಹೋಗುತ್ತೀರಿ ? ಎಂದು ಕೇಳುತ್ತಾನೆ .
ಇದಕ್ಕೆ ದುರ್ಯೋಧನನು ನನ್ನ ತಮ್ಮಂದಿರು ಇರುವಲ್ಲಿಗೆ ಹೋಗುತ್ತೇನೆ . ಅಪ್ಪಾಜಿ , ನನ್ನನ್ನೂ ಅಲ್ಲಿಗೆ ಕರೆದುಕೊಂಡು ಹೋಗಿ , ಎಂದು ಕೇಳುತ್ತಾನೆ . ಹೋಗು ಮಗನೇ , ಹಾಗೆಂದು ವೃಕೋದರನನ್ನು ಕೇಳು ಹೋಗು ಎಂದು ದುರ್ಯೋಧನನು ಹೇಳುತ್ತಾನೆ .
ದುರ್ಜಯ : ಬನ್ನಿರಪ್ಪಾಜಿ ಹೋಗೋಣ , ನಮ್ಮನ್ನು ಹುಡುಕುತ್ತಿದ್ದಾರೆ . ದುರ್ಯೋಧನ : ಯಾರಪ್ಪ ? ದುರ್ಜಯ : ಅಜ್ಜ , ಅಜ್ಜಿ ಎಲ್ಲರೂ . ದುರ್ಯೋಧನ : ಮಗು ಹೋಗು , ನಾನು ನಡೆಯಲಾರೆನಪ್ಪ , ದುರ್ಜಯ : ನಿಮ್ಮನ್ನೆತ್ತಿಕೊಳ್ಳುತ್ತೇನೆ ಬನ್ನಿರಪ್ಪಾಜಿ !
ದುರ್ಯೋಧನ : ಅಪ್ಪಾ ದುರ್ಜಯ , ನೀನಿನ್ನೂ ಚಿಕ್ಕವನು .ದುರ್ಜಯ : ( ಧೃತರಾಷ್ಟ್ರನ ಕಡೆ ತಿರುಗಿ , ತಾತ , ಬನ್ನಿ , ಅಪ್ಪಾಜಿಯಲ್ಲಿದ್ದಾರೆ . ಈ ರೀತಿ ದುರ್ಯೋಧನ ಮತ್ತು ದುರ್ಜಯರ ನಡುವೆ ನಡೆದ ಸಂಭಾಷಣೆ ನಡೆಯಿತು .
2. ಅಶ್ವತ್ಥಾಮನು ದುರ್ಯೋಧನನ ಬಳಿಸಾರುವ ಮೊದಲು ಆಡಿದ ನುಡಿಗಳನ್ನು ಸಂಕ್ಷಿಪ್ತವಾಗಿ ಬರೆಯಿರಿ ,
ಉತ್ತರ : ಸಮರಸಂರಂಭದಲ್ಲಿ ಉಭಯಬಲಜಲಧಿಗಳೂ ಸಂಧಿಸಿದಾಗ ನೆಗೆದ ಶಸ್ತ್ರಗಳೆಂಬ ಮೊಸಳೆಗಳಿಂದ ಕಡಿವಡೆದ ದೇಹಗಳ ಮತ್ತು ಕೊನೆಯುಸಿರೆಳೆಯುತ್ತ ಕಂಠಗತವಾದ ಪಾಣಗಳ ಸಮರಶ್ರೇಷ್ಠ ರಾಜರೇ , ಕೇಳಿ , ನೀವೆಲ್ಲ ಕಿವಿಗೊಟ್ಟು ಕೇಳಿ ;ತಕ್ಕಿಗೊಳಗಾಗಿ ತೊಡೆ ಮುರಿಸಿಕೊಂಡ ಕೌರವನು ನಾನಲ್ಲ ! ಶಿಥಿಲವೂ ವಿಫಲವೂ ಆದ ಅಸ್ತ್ರಗಳನ್ನು ಹಿಡಿದ ಸೂತಪತ್ರ ನಾನಲ್ಲ ; ಆಯುಧಗಳನ್ನು ಹಿಡಿದು ರಣಾಂಗಣದಲ್ಲಿ ಏಕಾಂಗಿಯಾಗಿ ನಿಂತಿದ್ದೇನೆ :ನಾನು ದ್ರೋಣಪುತ್ತ ನಾನು ನಮ್ಮ ತಂದೆಗೆ ಉತ್ತರ ಕ್ರಿಯೆಗಳನ್ನ ಮಾಡುವ ಮೊದಲೇ ದುರ್ಯೋಧನನು ಪಾಂಡವರಿಂದ ಮೋಸಕ್ಕೆ ಒಳಗಾದನಲ್ಲಾ ! ಇದನ್ನು ಯಾರು ತಾನೇ ನಂಬಿಯಾರು ? ರಥಗಳ ಮೇಲೆ , ಆನೆಗಳ ಮೇಲೆ ಕುಳಿತು ,ಕೈಗಳಲ್ಲಿ ಬಿಲ್ಲುಗಳನ್ನು ಹಿಡಿದು , ಆಂಜಲಿಬದ್ಧರಾಗಿ ಉತ್ಕಂಠತೆಯಿಂದ ದುರ್ಯೋಧನನ ಆಜ್ಞೆಗಾಗಿ ಕಾಯುತ್ತಿದ್ದ ಹನ್ನೊಂದು ಆಶೋಹಿಣೀ ಸೇನೆಯ ರಾಜರಿದ್ದರು ; ಪರಶುರಾಮನ ಹರಿತವಾದ ಬಾಣಗಳೂ ಭೇದಿಸಲಾರದ ಕವಚವನ್ನು ತೊಟ್ಟ ಭೀಷ್ಮಾಚಾರ್ಯರು ,ದ್ರೋಣಚಾರ್ಯರಂತಹವರು ರಣದ ಮುಂಚೂಣಿಯಲ್ಲಿ ಇಂಥವರಿದ್ದೂ ಸ್ವಯಂ ಅತಿರಥನಾದ ದುರ್ಯೋಧನನಿಗೆ ಕಾಲಮಹಿಮೆಯಿಂದ ಸೋಲಾಯಿತು .ಗಾಂಧಾರೀ ಪುತ್ರನಲ್ಲಿರುವನೋ ?! ಇದೋ ರಣಾರ್ಣವ ಪಾರಂಗತನಾದ ಕುರುರಾಜನು ಇಳೆಗುರುಳಿದ ಗಜ – ತುರಗ – ನರ ರಥಗಳ ಪ್ರಾಕಾರದ ಮಧ್ಯದಲ್ಲಿದ್ದಾನೆ .ಇಟ್ಟ ಕಿರೀಟ ಕೆಳಗುರುಳಿ , ಕೆಂಗೂದಲೆಲ್ಲ ಕೆದರಿ , ಗದೆಯ ಪೆಟ್ಟಿಂದಾದ ಹುಣ್ಣುಗಳಿಂದ ರಕ್ತ ಸುರಿದು , ಮೈಯೆಲ್ಲ ಕೆಂಪಾಗಿ , ಮೃತ್ಯುಶಯ್ಕೆಯ ಮೇಲಿರುವ ದುರ್ಯೋಧನನು ಪಡುವಣ ಪರ್ವತವನ್ನೇರಿ ಅಸ್ತಂಗತನಾಗುವ ಸಂಧ್ಯಾವಗಾಢ ಸೂರ್ಯನಂತಿರುವನು . ( ಬಳಿ ಸಾರಿ ) , ಅಯ್ಯಾ . ಕುರುರಾಜ , ಏನಿದು ? ಎಂಬ ನುಡಿಗಳನ್ನಾಡುತ್ತಾನೆ .
3. ದುರ್ಯೋಧನನು ತಂದೆತಾಯಿಗಳಿಗೆ ಅಭಿವಂದಿಸುವ ಸಂದರ್ಭದಲ್ಲಿ ಧೃತರಾಷ್ಟ್ರ – ದುರ್ಯೋಧನರ ನಡುವೆ ನಡೆದ ಸಂಭಾಷಣೆಯನ್ನು ಸಂಕ್ಷಿಪ್ತವಾಗಿ ಬರೆಯಿರಿ ,
ಉತ್ತರ : ಧೃತರಾಷ್ಟ್ರ – ದುರ್ಯೋಧನರ ನಡುವೆ ನಡೆದ ಸಂಭಾಷಣೆ : ( ಧೃತರಾಷ್ಟ್ರ ದುಃಖಿಸುತ್ತಿದ್ದಾನೆ ) ದುರ್ಯೋಧನ : ಅಪ್ಪಾಜಿ , ಈಗ ದುಃಖಿಸುವುದರಿಂದೇನು ಪ್ರಯೋಜನ ? ಧೃತರಾಷ್ಟ್ರ : ಅಪ್ಪಾ , ದುಃಖಿಸದೆ ಹೇಗೆ ಇರಲಿ ? ಯುದ್ಧದಲ್ಲಿ ನಿನ್ನ ನೂರು ಜನ ತಮ್ಮಂದಿರು ಈಗಾಗಲೇ ಹತರಾಗಿದ್ದಾರೆ ! ಇನ್ನು ಉಳಿದಿರುವ ನೀನೊಬ್ಬನೂ ಗತಿಸಿದರೆ ಸರ್ವವೂ ನಾಶವಾದಂತೆಯೇ ( ಎಂದು ಕೆಳಗೆ ಬೀಳುವನು ) . ದುರ್ಯೋಧನ : ಅಯ್ಯೋ , ಪೂಜ್ಯರಾದ ತಾವು ಬಿದ್ದಿರಾ ? ಅಪ್ಪಾಜಿ , ಅಮ್ಮನನ್ನು ಸಮಾಧಾನಪಡಿಸಿ , ಏಳಿ ಧೃತರಾಷ್ಟ್ರ : ಅಪ್ಪಾ , ನಾನೇನೆಂದು ಸಮಾಧಾನಪಡಿಸಲಿ ? ದುರ್ಯೋಧನ : ಯುದ್ಧದಲ್ಲಿ ಹಿಮ್ಮೆಟ್ಟದೆ . ಹುಮ್ಮಸ್ಸಿನಿಂದ ಹೋರಾಡಿ ಹತನಾದನೆಂದು ಸಮಾಧಾನಪಡಿಸಿರಿ . ಅಪ್ಪಾಜಿ , ಹೇಗೋ ಶೋಕವನ್ನು ನಿಗಹಿಸಿಕೊಳ್ಳುವುದರ ಮೂಲಕ ನನ್ನನ್ನು ಅನುಗ್ರಹಿಸಿ , ( ತಂದೆಯ ಕಾಲ್ಗಳಿಗೆ ತಲೆಯನ್ನು ಮುಟ್ಟಿಸಿ ) ಇದೋ , ಇಂದು ನಿಮ್ಮ ಮುಂದೆ ಮಾತ್ರ ತಗ್ಗಿರುವ ಈ ತಲೆಯಿಂದ ನಿಮಗೆ ನಮಸ್ಕರಿಸಿ , ಯಾವ ಘನತೆಯಿಂದ ನಾನು ಹುಟ್ಟಿದೆನೋ ಅದೇ ಘನತೆಯಿಂದ ಸ್ವರ್ಗಕ್ಕೆ ಹೋಗುತ್ತೇನೆ . ಧೃತರಾಷ್ಟ್ರ : ಹುಟ್ಟುಕುರುಡನೂ , ವೃದ್ಧನೂ ಆದ ನನಗೆ ಬಾಳಿನ ಆಶೆಯೆಲ್ಲ . ಇಂಗಿಹೋಗಿದೆಯಾದರೂ , ನನಗೆ ಉಂಟಾಗಿರುವ ಈ ಮತ್ತಶೋಕವು ನನ್ನ ಆತ್ಮವನ್ನು ಆಕ್ರಮಿಸಿಬಿಟ್ಟಿದೆ .
ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ,
1. “ ಹೋಗು ಮಗನೇ , ಹಾಗೆಂದು ವೃಕೋದರನನ್ನು ಕೇಳು ಹೋಗು .”
ಉತ್ತರ : ಆಯ್ಕೆ : ಈ ವಾಕ್ಯವನ್ನು ಡಾ . ಎಲ್ . ಬಸವರಾಜು ಅವರು ಅನುವಾದಿಸಿರುವ ಭಾಸನ ‘ ಊರುಭಂಗ ‘ ಎಂಬ ಕೃತಿಯಿಂದ ತೆಗೆದುಕೊಳ್ಳಲಾಗಿರುವ ‘ ಊರುಭಂಗ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ದುರ್ಯೋಧನನು ದುರ್ಜಯನನ್ನು ತಡೆಯುತ್ತಾ “ ನೀನು ಆಡಿ ಬೆಳೆದ ಈ ತೊಡೆ ಇನ್ನು ನಿನ್ನ ಭಾಗ್ಯಕ್ಕಿಲ್ಲ ” ಎಂದು ಹೇಳಿದಾಗ ಬಾಲಕ ದುರ್ಜಯನ್ನು “ ಏಕೆ , ನೀವೆಲ್ಲಿಗೆ ಹೋಗುವಿರಿ ? ” ಎಂದು ಕೇಳುತ್ತಾನೆ . ಆಗ ದುರ್ಯೋಧನ “ ನನ್ನ ತಮ್ಮಂದಿರು ಇರುವಲ್ಲಿಗೆ ” ಎಂದಾಗ ಅವನು “ ನನ್ನನ್ನೂ ಅಲ್ಲಿಗೆ ಕರೆದುಕೊಂಡು ಹೋಗಿ ” ಎಂದು ಹೇಳಿದ ಸಂದರ್ಭದಲ್ಲಿ ದುರ್ಯೋಧನನು ಈ ಮಾತನ್ನು ಹೇಳುತ್ತಾನೆ .
ಸ್ವಾರಸ್ಯ : ಮೋಸದಿಂದ ತನ್ನ ತೊಡೆ ಮುರಿದವನು ಭೀಮನಾದ್ದರಿಂದ ತಮ್ಮಂದಿರು ಇರುವಲ್ಲಿಗೆ ಕಳುಹಿಸುತ್ತಿರುವವನೂ ಅವನೇ . ಆದ್ದರಿಂದ ವೃಕೋದರನ್ನು ಕೇಳು ಹೋಗು ಎಂಬ ಮಾತು ಸ್ವಾರಸ್ಯಕರವಾಗಿದೆ .
2. “ಅಂತಹವನೂ ಇಂದು ನನ್ನನ್ನು ಮೋಸದಿಂದ ಗೆದ್ದನೆಂದರೆ ನಾನು ಸೋತಂತಾಗಲಿಲ್ಲ . ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಡಾ . ಎಲ್ . ಬಸವರಾಜು ಅವರು ಅನುವಾದಿಸಿರುವ ಭಾಸನ ‘ ಊರುಭಂಗ ‘ ಎಂಬ ಕೃತಿಯಿಂದ ತೆಗೆದುಕೊಳ್ಳಲಾಗಿರುವ ‘ ಊರುಭಂಗ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಭೀಮನು ಮೋಸದಿಂದ ತೊಡೆಗೆ ಹೊಡೆದು ಉರುಳಿಸಿದ ಬಗ್ಗೆ ಬಲರಾಮನು ಕೋಪಗೊಂಡಾಗ ದುರ್ಯೋಧನನು ಈ ಮಾತನ್ನು ಹೇಳುತ್ತಾನೆ . ಅರಗಿನ ಮನೆಯಲ್ಲಿ , ಕುಬೇರನ ಮನೆಯಲ್ಲಿ ಪಾರಾದ , ಹಿಡಿಂಬಾಸುರನನ್ನು ಕೊಂದ ಶಕ್ತಿಶಾಲಿ ಭೀಮನೂ ತನ್ನನ್ನು ಮೋಸದಿಂದ ಕೊಂದನು . ಇದರಿಂದ ತಾನು ಸೋತಂತಾಗಲಿಲ್ಲ . ಎಂದು ಈ ಸಂದರ್ಭದಲ್ಲಿ ದುರ್ಯೋಧನನು ಹೇಳುತ್ತಾನೆ . ಸ್ವಾರಸ್ಯ : ಭೀಮನಂತಹ ಬಲಶಾಲಿಯಿಂದಲೂ ತನ್ನನ್ನು ನೇರವಾಗಿ ಸೋಲಿಸಲಾಗಲಿಲ್ಲ ಎಂಬ ಮಾತು ಸ್ವಾರಸ್ಯಪೂರ್ಣವಾಗಿದೆ.
3. “ ನನ್ನ ಹಲಾಯುಧದಿಂದ ಭೀಮನದೆಯನ್ನು ಉತ್ತು ಬರುತ್ತೇನೆ . ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಡಾ . ಎಲ್ . ಬಸವರಾಜು ಅವರು ಅನುವಾದಿಸಿರುವ ಭಾಸನ ‘ ಊರುಭಂಗ ‘ ಎಂಬ ಕೃತಿಯಿಂದ ತೆಗೆದುಕೊಳ್ಳಲಾಗಿರುವ ‘ ಊರುಭಂಗ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ . ಬಲರಾಮನು ನೋಡನೋಡುತ್ತಿದ್ದಂತೆ ಭೀಮನು ತನ್ನ ಗದೆಯಿಂದ ದುರ್ಯೋಧನನ ತೊಡೆಗೆ ಹೊಡೆದು ಉರುಳಿಸುತ್ತಾನೆ . ಆಗ ಕೋಪಗೊಂಡ ಬಲರಾಮನು “ ಯುದ್ಧ ನಿಯಮವನ್ನೂ , ನನ್ನನ್ನೂ ಕಡೆಗಣಿಸಿ ತೊಡೆಗೆ ಹೊಡೆದುರುಳಿಸಿದ ಭೀಮನ ಎದೆಯನ್ನು ತನ್ನ ಹಲಾಯುಧದಿಂದ ಉತ್ತು ಬರುತ್ತೇನೆ ” ಎಂದು ಈ ಸಂದರ್ಭದಲ್ಲಿ ಹೇಳುತ್ತಾನೆ .
ಸ್ವಾರಸ್ಯ : ಭೀಮನ ಎದೆಯನ್ನು ತನ್ನ ಆಯುಧವಾದ ನೇಗಿಲಿನಿಂದ ಉಳುತ್ತೇನೆ ಎಂಬುದು ಇಲ್ಲಿ ಸ್ವಾರಸ್ಯಕರವಾಗಿದೆ .
3. “ ನಿನಗೆ ಚಿರಪರಿಚಿತವಾಗಿದ್ದ ಈ ತೊಡೆಯನ್ನು ನಿನ್ನ ಭಾಗಕ್ಕಿಲ್ಲವಲ್ಲ ! ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಡಾ . ಎಲ್ . ಬಸವರಾಜು ಅವರು ಅನುವಾದಿಸಿರುವ ಭಾಸನ ‘ ಊರುಭಂಗ ‘ ಎಂಬ ಕೃತಿಯಿಂದ ತೆಗೆದುಕೊಳ್ಳಲಾಗಿರುವ ‘ ಊರುಭಂಗ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಭೀಮನಿಂದ ತೊಡೆ ಮುರಿಯಲ್ಪಟ್ಟು ಬಿದ್ದಿದ್ದ ದುರ್ಯೋಧನನನ್ನು ಹುಡುಕಿಕೊಂಡು ಆತನ ಮಗನಾದ ದುರ್ಜಯ ಹಾಗೂ ಧೃತರಾಷ್ಟ್ರ ಮತ್ತು ಗಾಂಧಾರಿ ಬರುತ್ತಾರೆ . ಆಗ ದುರ್ಜಯನು ದುರ್ಯೋಧನನ ತೊಡೆಯ ಮೇಲೆ ಕೂರಲು ಬಂದಾಗ ದುರ್ಯೋಧನನು ನೋವಿನಿಂದ ತಡೆಯುತ್ತಾ “ ನೀನು ಆಡಿ ಬೆಳೆದ ಈ ತೊಡೆ ಇನ್ನು ನಿನ್ನ ಭಾಗ್ಯಕ್ಕಿಲ್ಲ ” ಎಂದು ಈ ಸಂದರ್ಭದಲ್ಲಿ ಹೇಳುತ್ತಾನೆ .
ಸ್ವಾರಸ್ಯ : ತೊಡೆ ಮುರಿದುಹೋಗಿದ್ದು , ಇನ್ನೇನೋ ತಾನು ಅಸುನೀಗಲಿರುವ ದುರ್ಯೋಧನನು ಇನ್ನು ಮುಂದೆ ನೀನು ಕುಳಿತುಕೊಳ್ಳಲು ಈ ತೊಡೆ ಸಿಗುವುದಿಲ್ಲ ‘ ಎಂದು ಹೇಳುವ ಮಾತು ಸ್ವಾರಸ್ಯಪೂರ್ಣವಾಗಿದೆ .
ಉ ] ಬಿಟ್ಟ ಸ್ಥಳದಲ್ಲಿ ಸೂಕ್ತಪದವನ್ನು ತುಂಬಿರಿ .
೧. ಕುರುಕುಲದ ಪಿತೃಗಳಿಗೆ ಜಲಾಂಜಲಿ ಕೊಡಲು ಪಾಂಡವ ಮೇಘಗಳು ಜೀವಿಸಿರಲಿ .
೨. ಎರಡು ತೊಡೆಗಳನ್ನಷ್ಟೇ ಅಲ್ಲ , ತಂದೆತಾಯಿಗಳಿಗೆ ಅಭಿವಂದಿಸುವ ನನ್ನ ಭಾಗ್ಯವನ್ನೂ ಅಪಹರಿಸಿಬಿಟ್ಟ .
೩. ಹೃದಯದಲ್ಲಿ ಸದಾ ಸನ್ನಿಹಿತವಾಗಿರುವ ಪುತಸ್ನೇಹವು ನನ್ನನ್ನೀಗ ದಹಿಸುತ್ತಿದೆ .
೪ , ಅಪ್ಪಾಜಿ , ನಾನು ನಿಮ್ಮ ತೊಡೆಯ ಮೇಲೆ ಕುಳಿತುಕೊಳ್ಳುತ್ತೇನೆ !
೫. ಮೃತ್ಯುಶಯ್ಕೆಯ ಮೇಲಿರುವ ದುರ್ಯೋಧನನು ಪಡುವಣ ಪರ್ವತವನ್ನೇರಿ ಸೂರ್ಯನಂತಿರುವನು .
ಭಾಷಾ ಚಟುವಟಿಕೆ :
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ .
1. ಕ್ರಿಯಾಪದ ಎಂದರೇನು ?
ಉತ್ತರ : ಕ್ರಿಯೆ ಪೂರ್ಣಗೊಂಡಿದೆ ಎಂಬ ಅರ್ಥವನ್ನು ಸೂಚಿಸುವ ಪದವೇ ಕ್ರಿಯಾಪದ
2. ಕ್ರಿಯಾಪ್ರಕೃತಿ ಎಂದರೇನು ? ಉದಾಹರಣೆ ಕೊಡಿ .
ಉತ್ತರ : ಕ್ರಿಯಾರ್ಥವನ್ನು ಕೊಡುವ ಮತ್ತು ಪ್ರತ್ಯಯವನ್ನು ಹೊಂದದಿರುವ ಶಬ್ದವು ಕ್ರಿಯಾ ಪಕೃತಿ ಅಥವಾ ಧಾತು .
ಉದಾಹರಣೆ : ಮಾಡು , ತಿನ್ನ , ಹೋಗು , ಮಲಗು , ಓದು , ಕೇಳು , ನೋಡು , ಬರು ಇತ್ಯಾದಿ .
3. ಸಕರ್ಮಕ ಧಾತುವನ್ನು ಉದಾಹರಣೆ ಸಹಿತ ವಿವರಿಸಿ ,
ಉತ್ತರ : ಕರ್ಮಪದವನ್ನು ಬಯಸುವ ಧಾತುಗಳೇ ಸಕರ್ಮಕ ಧಾತುಗಳು , ಉದಾ :
ರಾಮನು ಗಿಡವನ್ನು ನೆಟ್ಟನು .
ಶಿಲ್ಪಿಗಳು ಗುಡಿಯನ್ನು ಕಟ್ಟಿದರು
ವಿದ್ಯಾರ್ಥಿಗಳು ಪಾಠವನ್ನು ಓದಿದರು .
ರಾಮನು ಏನನ್ನು ನೆಟ್ಟನು ಎಂಬ ಪ್ರಶ್ನೆಗೆ – ಗಿಡವನ್ನು
ಶಿಲ್ಪಗಳು ಏನು ಕಟ್ಟಿದರು ಎಂಬ ಪ್ರಶ್ನೆಗೆ – ಗುಡಿಯನ್ನು
ವಿದ್ಯಾರ್ಥಿಗಳು ಏನನ್ನು ಓದಿದರು ಎಂಬ ಪ್ರಶ್ನೆಗೆ – ಪಾಠವನ್ನು
ಎಂಬ ಉತ್ತರ ದೊರೆಯುತ್ತದೆ . ಮತ್ತು ಕರ್ಮಪದಗಳು ಇಲ್ಲಿ ಮುಖ್ಯವಾಗುತ್ತವೆ .
4. ಅಕರ್ಮಕ ಧಾತುಗಳಿಗೆ ಐದು ನಿದರ್ಶನ ಕೊಡಿ .
ಉತ್ತರ : ಕರ್ಮಪದವನ್ನು ಬಯಸದೇ ಇರುವ ಧಾತುಗಳೇ ಅಕರ್ಮಕ ಧಾತುಗಳು , ಉವಾ :
ಕೂಸು ಮಲಗಿತು .
ಅವನು ಬದುಕಿದನು .
ಆಕಾಶ ಹೊಳೆಯುತ್ತಿದೆ .
ಗಾಳಿಯು ಬೀಸುತ್ತಿದೆ .
ಮಲಗು , ಬದುಕು , ಹೊಳೆಯು , ಬೀಸು ಎಂಬ ಧಾತುಗಳು ಕರ್ಮಪದಗಳನ್ನು ಬಯಸುವುದಿಲ್ಲ .
5. ಹಳಗನ್ನಡ ವಿಭಕ್ತಿ ಪ್ರತ್ಯಯಗಳಾವುವು ?
ಉತ್ತರ : ಮ್.ಆ ೦ , ಇಂ , ಇಂದಂ , ಇಂದೆ , ಗೆ , ಕೆ . ಕೈ , ಅತ್ತಣಿಂ , ಅತ್ತಣಿಂದಂ , ಅತ್ತಣಿಂದ , ಅ , ಒಳ್
6. ವಿಭಕ್ತಿ ಪಲ್ಲಟ ಎಂದರೇನು ?
ಉತ್ತರ : ನಾವು ಮಾತನಾಡುವಾಗ ಪ್ರಕೃತಿಗಳಿಗೆ ಯಾವ ವಿಭಕ್ತಿ ಪ್ರತ್ಯಯವನ್ನು ಬಳಸಬೇಕೋ ಅದನ್ನು ಬಳಸದೆ ಬೇರೆ ವಿಭಕ್ತಿ ಪ್ರತ್ಯಯವನ್ನು ಬಳಸಿ ಮಾತಾನಾಡುವುದುಂಟು .
ಹೀಗೆ ಒಂದು ವಿಭಕ್ತಿ ಪ್ರತ್ಯಯದ ಬದಲಿಗೆ ಅರ್ಥ ವ್ಯತ್ಯಾಸವಾಗದಂತೆ ಇನ್ನೊಂದು ವಿಭಕ್ತಿ ಪ್ರತ್ಯಯವನ್ನು ಬಳಸುವ ಕ್ರಮಕ್ಕೆ ‘ ವಿಭಕ್ತಿ ಪಲ್ಲಟ ‘ ಎಂದು ಹೇಳುತ್ತೇವೆ .
ಆ ) ಕೊಟ್ಟಿರುವ ವಾಕ್ಯಗಳಲ್ಲಿ ಸಕರ್ಮಕ ಮತ್ತು ಅಕರ್ಮಕ ಧಾತುಗಳನ್ನು ಗುರುತಿಸಿ ಬರೆಯಿರಿ
1. ವಿದ್ಯಾರ್ಥಿನಿಯರು ಆಟವನ್ನು ಆಡಿದರು .- ಸಕರ್ಮಕ ಧಾತು
2. ಗಾಳಿಯು ಬೀಸುತ್ತಿದೆ .- ಸಕರ್ಮಕ ಧಾತು
3. ಹಕ್ಕಿಗಳು ಚಿಲಿಪಿಲಿಗುಟ್ಟಿದವು .- ಅಕರ್ಮಕ ಧಾತು
4. ರೈತನು ಹೊಲವನ್ನು ಉಳುತ್ತಾನೆ .- ಅಕರ್ಮಕ ಧಾತು
ಇ ) ಕೊಟ್ಟಿರುವ ಗಾದೆಗಳ ಅರ್ಥವನ್ನು ವಿವರಿಸಿ ಬರೆಯಿರಿ .
ಆರೋಗ್ಯವೇ ಭಾಗ್ಯ .
ವೇದ ಸುಳ್ಳಾದರೂ ಗಾದೆ ಸುಳ್ಳಾಗದು . ಗಾದೆಗಳು ವೇದಗಳಿಗೆ ಸಮ . ಇವು ನಮ್ಮ ಹಿರಿಯರ ಅನುಭವದ ಮಾತುಗಳು , ಗಾದೆಗಳು ನೋಡಲು ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ , ಅಂತಹ ಗಾದೆಗಳಲ್ಲಿ ಆರೋಗ್ಯವೇ ಭಾಗ್ಯ ಈ ಗಾದೆ ಮಾತು ಸಹ ಒಂದು .ಮನುಷ್ಯ ನೆಮ್ಮದಿಯಿಂದ ಬಾಳಬೇಕು . ಆನಂದದಿಂದ ಬದುಕಬೇಕು ಅವನಿಗೆ ಅಂತಹ ನೆಮ್ಮದಿ ಆನಂದಗಳನ್ನು ಉತ್ತಮ ಆರೋಗ್ಯ ಭಾಗ್ಯವು ಮಾತ್ರ ನೀಡುತ್ತದೆ .
ಆರೋಗ್ಯದಿಂದಲೇ ಭಾಗ್ಯವೆಂದ ಮೇಲೆ ಅವನು ಅಂತಹ ಆರೋಗ್ಯ ಭಾಗ್ಯವನ್ನು ಪಡೆದಿರಲೇಬೇಕಾಗುತ್ತದೆ .ಮನುಷ್ಯ ಬದುಕಿರುವ ತನಕವೂ ಆರೋಗ್ಯ ಭಾಗ್ಯ ಅತಿ ಮುಖ್ಯ . ಅದರ ರಕ್ಷಣೆಗಾಗಿ ಸದಾ ಕಾಲವೂ ಎಚ್ಚರದಿಂದಿರುವದೆ ಅಷ್ಟೇ ಮುಖ್ಯ . ಮನುಷ್ಯನಿಗೆ ಸಂಪತ್ತು ಎಷ್ಟೆ ಇದ್ದರೂ ಆರೋಗ್ಯ ಸರಿಯಿಲ್ಲದಿದ್ದರೂ ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ .
ಸಂಪತ್ತಿಲ್ಲದಿದ್ದರೂ ಆರೋಗ್ಯ ಸರಿಯಾಗಿದ್ದರೆ ಯಾವ ಆರೋಗ್ಯ ಸರಿಯಾಗಿದ್ದರೆ ಯಾವ ಸಂದರ್ಭದಲ್ಲಾದರೂ ನಾವು ಹಣವನ್ನು ಸಂಪಾದಿಸಬಹುದು . ದುಡಿಯುವ ಶಕ್ತಿ ಅವಶ್ಯಕ . ಅದಕ್ಕಾಗಿ ನಮಗೆ ಆರೋಗ್ಯ ಬೇಕು .ನಾವು ಎಲ್ಲಾ ಸಂದರ್ಭದಲ್ಲೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು .
ಕೊಟ್ಟಿದ್ದು ತನಗೆ : ಬಚ್ಚಿಟ್ಟಿದ್ದು ಪರರಿಗೆ
ವೇದ ಸುಳ್ಳಾದರೂ ಗಾದೆ ಸುಳ್ಳಾಗದು . ಗಾದೆಗಳು ವೇದಗಳಿಗೆ ಸಮ . ಇವು ನಮ್ಮ ಹಿರಿಯರ ಅನುಭವದ ಮಾತುಗಳು .ಗಾದೆಗಳು ನೋಡಲು ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ , ಅಂತಹ ಗಾದೆಗಳಲ್ಲಿ ಈ ಗಾದೆ ಮಾತು ಸಹ ಒಂದು . ತಾನು ಮಾಡಿದ ದಾನ ಯಾವತ್ತಿದ್ದರೂ ತನ್ನನ್ನು ಕಾಯುತ್ತದೆ .
ತನಗೆ ಕಷ್ಟ ಬಂದಾಗ ಬೇರೆಯವರು ನನಗೂ ಸಹಾಯ ಮಾಡುತ್ತಾರೆ ಎಂಬ ನಂಬಿಕೆ ಇರಬೇಕು . ದಾನ ಮಾಡದೆ ಎಲ್ಲ ಸಂಪತ್ತನ್ನು ಬಚ್ಚಿಟ್ಟರೆ ಅದು ಬೇರೆಯವರ ಪಾಲಾಗುವುದು ಖಂಡಿತ .
ಆದ್ದರಿಂದ ತನ್ನ ಸಂಪತ್ತಿನಲ್ಲಿ ಸ್ವಲ್ಪ ಭಾಗವನ್ನಾದರೂ ದಾನ ಮಾಡಬೇಕು ಎಂಬುದು ಈ ಗಾದೆಯ ಹೇಳಿಕೆ ಇಲ್ಲಿ ದಾನದ ಶ್ರೇಷ್ಠತೆಯನ್ನ ಹೇಳಿದೆ . ನಾವು ಮಾಡುವ ದಾನವನ್ನು ಪ್ರಚಾರ ಮಾಡಬಾರದು . ನಿಸ್ವಾರ್ಥ ಭಾವನೆಯಿಂದ ದಾನ ಮಾಡಬೇಕು
9th Standard Urubhanga Kannada Notes Question Answer Pdf
ಇತರೆ ಪಾಠಗಳು: