9ನೇ ತರಗತಿ ಪ್ರಜಾನಿಷ್ಠೆ ಕನ್ನಡ ನೋಟ್ಸ್ | 9th Standard Prajanishte Lesson Kannada Notes

9ನೇ ತರಗತಿ ಪ್ರಜಾನಿಷ್ಠೆ ಪಾಠದ ಪ್ರಶ್ನೋತ್ತರಗಳು ನೋಟ್ಸ್‌, 9th Standard Prajanishte Kannada Notes Question Answer Pdf Download

ತರಗತಿ : 9ನೇ ತರಗತಿ

ಪಾಠದ ಹೆಸರು : ಪ್ರಜಾನಿಷ್ಠೆ

ಕೃತಿಕಾರರ ಹೆಸರು : ಸಾ . ಶಿ .ಮರುಳಯ್ಯ

Table of Contents

ಕೃತಿಕಾರರ ಪರಿಚಯ :

ಸಾ . ಶಿ .ಮರುಳಯ್ಯ :

ಶ್ರೀ ಸಾಸಲು ಶಿವರುದ್ರಯ್ಯ ಮರುಳಯ್ಯ ಇವರು ಕ್ರಿ.ಶ. 1931 ರಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ಜನಿಸಿದರು, ಇವರ ತಂದೆ ಶಿವರುದ್ರಯ್ಯ , ತಾಯಿ ಸಿದ್ದಮ್ಮ , ಇವರು ಕ್ರಿಶ 1956 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ  ಕನ್ನಡ ಎಂ . ಎ . ಪದವಿಯನ್ನು ಮತ್ತು ಕ್ರಿ ಶ 1971 ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ‘ ಕೆಳದಿಯ   ಅರಸರು ಮತ್ತು ಕನ್ನಡ ಸಾಹಿತ್ಯ ‘ ಕುರಿತ ಮಹಾಪ್ರಬಂಧಕ್ಕೆ ಪಿಎಚ್.ಡಿ . ಪದವಿಯನ್ನು ಪಡೆದರು . ಕ್ರಿ . ಶ . 1999 ರಿಂದ 1998 ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು . ರಾಜ್ಯಭಾಷಾ ಆಯೋಗದ ಸದಸ್ಯರಾಗಿಯೂ ಸೇವೆಯನ್ನು ಸಲ್ಲಿಸಿದರು .

Prajanishte Kannada Notes Question Answer

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ ,

1. ಬನದಮ್ಮನ ಹಳ್ಳಿಯ ಜನರು ಎಲ್ಲಿ ಪಂಚಾಯಿತಿ ಸೇರಿದ್ದರು ?

ಉತ್ತರ : ಬನದಮ್ಮನ ಹಳ್ಳಿಯ ಜನರು ಬನಶಂಕರಿಯ ದೇವಾಲಯದ ಮುಂಭಾಗದ ಕಟ್ಟೆಯ ಮೇಲೆ ಪಂಚಾಯಿತಿ ಸೇರಿದ್ದರು .

2. ಬನದಮ್ಬನ ಹಳ್ಳಿಯ ಪಂಚಾಯಿತಿಯಲ್ಲಿ ಯಾರಾರ ನಡುವಿನ ನ್ಯಾಯ ತೀರ್ಮಾನವಾಗುತ್ತಿತ್ತು ?

ಉತ್ತರ : ಬನದಮ್ಮನ ಹಳ್ಳಿಯ ಪಂಚಾಯಿತಿಯಲ್ಲಿ ಬೀರಣ್ಣ ಮತ್ತು ಈರಣ್ಣರ ನಡುವಿನ ನ್ಯಾಯ ತೀರ್ಮಾನವಾಗುತ್ತಿತ್ತು .

3. ಚೋಳರು ಮತ್ತು ಹೊಯ್ಸಳರ ನಡುವೆ ಎಲ್ಲಿ ಯುದ್ಧ ನಡೆಯಿತು ?

ಉತ್ತರ : ಚೋಳರು ಮತ್ತು ಹೊಯ್ಸಳರ ನಡುವೆ ಮಳವಳ್ಳಿ , ಮುಡುಕುತೊರೆಗಳ ಬಳಿಯಲ್ಲಿ ಯುದ್ಧ ನಡೆಯಿತು .

4. ಸಾಮ್ರಾಟನು ರಾಜಧಾನಿಯಲ್ಲಿ ಇಲ್ಲದಿದ್ದಾಗ ರಾಜ್ಯದ ಸಂರಕ್ಷಕರಾಗಿ ನಿಂತಿದ್ದವರು ಯಾರು ?

ಉತ್ತರ : ಸಾಮ್ರಾಟನು ರಾಜಧಾನಿಯಲ್ಲಿ ಇಲ್ಲದಿದ್ದಾಗ ರಾಜ್ಯದ ಸಂರಕ್ಷಕರಾಗಿ ನಿಂತಿದ್ದವರು ರಾಣಿ ಶಾಂತಲಾದೇವಿ ಮತ್ತು ಯುವರಾಜ ಉದಯಾದಿತ್ಯ

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

1. ಬನದಮ್ಮನ ಹಳ್ಳಿಯ ದೇವಾಲಯದ ಮುಂದೆ ಯಾದ ವಿಚಾರವಾಗಿ ಚರ್ಚೆ ನಡೆದಿತ್ತು ?

ಉತ್ತರ : ಬೀರಣ್ಣ ತನ್ನ ಹೊಲವನ್ನು ನೂರೆಂಟು ಹೊನ್ನಿಗೆ ಈರಣ್ಣನಿಗೆ ಮಾಡಿದ್ದನು . ಈರಣ್ಣ ಹೊಲ ಉಳುತ್ತಿದ್ದಾಗ ಆ ಹೊಲದಲ್ಲಿ ಒಂದು ಕೊಪ್ಪರಿಗೆಯನ್ನು ಹೊನ್ನು ಸಿಕ್ಕಿತು . ಅವನು ಅದನ್ನು ಪೂಜೆ ಮಾಡಿ ಬೀರಣ್ಣನ ಮನೆಗೆ ತೆಗೆದುಕೊಂಡು ಹೋಗಿ ” ಈ ಹೊನ್ನು ನಿನ್ನದು ತೆಗೆದುಕೋ ” ಎಂದನು . ಆದರೆ ಬೀರಣ್ಣ “ ನಿನಗೆ ಹೊಲ ಮಾರಿದ ಮೇಲೆ ಅದು ನಿನಗೇ ಸೇರಬೇಕು . ಅದು ನನ್ನದಲ್ಲ ” ಎಂದು ನಿರಾಕರಿಸಿದನು . ಆ ವಿಚಾರವಾಗಿ ಬನದಮ್ಮನ ಹಳ್ಳಿಯ ದೇವಾಲಯದ ಮುಂದೆ ಚರ್ಚೆ ನಡೆದಿತ್ತು . “ ಬೊಕ್ಕಸಕ್ಕೆ ಸೇರಲು ಇದು ಸಾಮ್ರಾಟರ ದುಡಿಮೆಯಲ್ಲ … ಅವರ ಬೆವರಿನ ಫಲ ಅಲ್ಲ … ಅದು ಪ್ರಜೆಗಳ ಬೆವರಿನ ಫಲ ಆದ್ದರಿಂದ ಅದು ಪ್ರಜೆಗಳಿಗೆ ಸೇರಬೇಕು ” ಎಂದು ಅಭಿಪ್ರಾಯಪಟ್ಟಳು .

2. ಹಲವರು ತಲಕಾಡನ್ನು ಲೂಟಿ ಮಾಡಬೇಕೆಂದು ಹೇಳಿದಾಗ ದೊರೆ ವಿಷ್ಣುವರ್ಧನನು ಏನೆಂದು ಹೇಳಿದನು ?

ಉತ್ತರ : ತಲಕಾಡಿನ ಲೂಟಿಯ ಬಗ್ಗೆ ವಿಷ್ಣುವರ್ಧನನು , “ ಸೆರೆ ಸಿಕ್ಕ ಸೈನಿಕರ ಮೇಲೆ ದೌರ್ಜನ್ಯ ನಡೆಸುವುದು ಯೋಧ ಧರ್ಮ ಅಲ್ಲ : ಸೋತ ಸಾಮ್ರಾಜ್ಯವನ್ನು ಲೂಟಿ ಮಾಡುವುದು ಯುದ್ಧ ಧರ್ಮವಲ್ಲ . ಆ ಕಾರಣ ನೀವೆಲ್ಲರೂ ತಲಕಾಡವರನ್ನು ತಮ್ಮವರೆಂದೇ ತಿಳಿದು ನಡೆಸಿಕೊಳ್ಳಿ . ಅವರ ಮನೋಭೀತಿಯನ್ನು ದೂರ ಮಾಡಿ ಶಾಂತಿ ಸ್ಥಾಪನೆ ಮಾಡಿ , ನಾಲ್ಕು ದಿನಗಳಾದ ಮೇಲೆ ರಾಜಧಾನಿಗೆ ಹಿಂದಿರುಗೋಣ . ” ಎಂದು ಹೇಳಿದನು .

3. ದೈವದವರ ತೀರ್ಪಿನ ಬಗೆಗೆ ಶಾಂತಲೆಯ ಅಭಿಪ್ರಾಯವೇನು ?

ಉತ್ತರ : ಈರಣ್ಣ ಮತ್ತು ಬೀರಣ್ಣ ಇಬ್ಬರೂ ಕೊಪ್ಪರಿಗೆ ಬಂಗಾರವನ್ನು ತಮ್ಮ ಬಳಿ ಇಟ್ಟುಕೊಳ್ಳಲು ಒಪ್ಪದಿದ್ದಾಗ ಗ್ರಾಮದ ಮುಖ್ಯಸ್ಥ ಕೇತುಮಲ್ಲ ‘ ಇಬ್ಬರಿಗೂ ಬೇಡವಾದ ಹಣ ರಾಜ್ಯದ ಬೊಕ್ಕಸ ಸೇರಲಿ ‘ ಎಂದನು . ನ್ಯಾಯ ತೀರ್ಮಾನ ಮಾಡುತ್ತಾನೆ . ಕೂಡಲೆ ಮರದ ಮರೆಯಲ್ಲಿದ್ದ ಶಾಂತಲೆ ಮುಂದೆ ಬಂದು , “ ಕೂಡದು … ಕೂಡದು … ‘ – ಎಂದು ಕೂಗಿದಳು . ಬೊಕ್ಕಸಕ್ಕೆ ಸೇರಲು ಇದು ಸಾಮ್ರಾಟರ ದುಡಿಮೆಯಲ್ಲ …ಅವರ ಬೆವರಿನ ಫಲ ಅಲ್ಲ … ಅದು ಪ್ರಜೆಗಳ ಬೆವರಿನ ಫಲ ” ಆದ್ದರಿಂದ ಅದು ನಿಮ್ಮ ಊರಿನ ಹಣ ನಿಮೂರಿನ ಏಳಿಗೆಗಾಗಿಯೇ ವಿನಿಯೋಗವಾಗಲಿ . ” ಎಂದು ಅಭಿಪ್ರಾಯ ಪಟ್ಟಳು

4. ಶಾಂತಲೆಯು ನೀಡಿದ ತೀರ್ಪೇನು ?

ಉತ್ತರ : ” ಇದು . ದೈವದ ದುಡ್ಡು , ದೇವಕಾರ್ಯಕ್ಕೆ ವಿನಿಯೋಗವಾಗಬೇಕಾದ್ದು ಧರ್ಮ . ನಮ್ಮ ಸಂಸ್ಕೃತಿಯ ಶ್ರೀಮಂತಿಕೆಗೆ ಸಾಕ್ಷಿಯಾಗಿ ಒಂದು ಕಲಾದೇಗುಲವನ್ನು ರಾಜಧಾನಿ ದ್ವಾರಸಮುದ್ರದಲ್ಲಿ ನಿರ್ಮಿಸಬೇಕು , ಅವಳಿ ದೇಗುಲಗಳ ಶಿಲ್ಪಕಲೆ ಹೊಯ್ಸಳರ ಶೈಲಿಗೆ ಮಾದರಿಯಾಗಿರಬೇಕು … ಒಂದು ಕಲಾಪೂರ್ಣ ದೇವಾಲಯಕ್ಕಾಗಿ ಈ ಹೊನ್ನು ವಿನಿಯೋಗವಾಗಲಿ , ಆ ದೇವಾಲಯಗಳನ್ನು ಕೇತಮಲ್ಲನಾಯಕರ ಹೆಸರಿನಲ್ಲಿ ಕಟ್ಟಬೇಕು ” ಎಂದು ಶಾಂತಲೆ ತೀರ್ಪು ನೀಡಿದಳು .

ಇ ] ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ

1. ಬನದಮ್ಮನ ಹಳ್ಳಿಯ ಪಂಚಾಯಿತಿಯಲ್ಲಿ ನಡೆದ ನ್ಯಾಯ ಹಾಗೂ ಅದರ ತೀರ್ಪಿನ ಬಗ್ಗೆ ವಿವರಿಸಿ ,

ಉತ್ತರ : ಪಂಚಾಯಿತಿಯಲ್ಲಿ ಬೀರಣ್ಣ ಮತ್ತು ಈರಣ್ಣ ಒಬ್ಬರಿಗೊಬ್ಬರು ಹೊನ್ನು ತಮ್ಮದಲ್ಲ ಎಂದಾಗ ಊರಿನ ಮುಖಂಡ ಕೀತಮಲ್ಲನು ” ಇವರಿಬ್ಬರಿಗೂ ಬೇಡವೆಂದ ಮೇಲೆ ಈ ಹೊನ್ನು ರಾಜ್ಯದ ಬೊಕ್ಕಸಕ್ಕೆ ಸೇರಲಿ ” ಎಂದನು . ಇದನ್ನೆಲ್ಲ ಉದಯಾದಿತ್ಯನೊಡನೆ ಮರೆಯಲ್ಲಿ ನಿಂತು ನೋಡುತ್ತಿದ್ದ ಶಾಂತಲೆ “ ಕೂಡದು .. ಕೂಡದು .. ” ಎಂದಾಗ ಎಲ್ಲರ ಗಮನ ಅತ್ತ ಹೋಯಿತು . ಕೇತಮಲ್ಲನು ಗಂಡುಡೆಯಲ್ಲಿದ್ದ ಶಾಂತಲೆಯನ್ನು ಗುರುತಿಸದೆ “ ನೀವು … ಈ ಹೊನ್ನು ರಾಜ್ಯದ ಬೊಕ್ಕಸಕ್ಕೆ ಸೇರಬಾರದು ಅಂದಿರಲ್ಲಾ ಯಾಕೆ ? ” ಎಂದನು ಅದಕ್ಕವಳು ” ಬೊಕ್ಕಸಕ್ಕೆ ಸೇರಲು ಇದು ಸಾಮ್ರಾಟರ ದುಡಿಮೆಯಲ್ಲ … ಅದು ಪ್ರಜೆಗಳ ಬೆವರಿನ ಫಲ ! ಆದ್ದರಿಂದ ಅದು ಪ್ರಜೆಗಳಿಗೇ ಸೇರಬೇಕು ” ಎಂದಳು . ಆ ಮಾತಿಗೆ ಕೇಶಮಲ್ಲನು “ ಹಾಗಾದರೆ ಪ್ರಜೆಗಳು ಯಾರವರು ? ಹೊಯ್ಸಳೇಶ್ವರರ ಮಕ್ಕಳಲ್ಲವೇ ? ಮಕ್ಕಳ ದುಡಿಮೆ ತಂದೆಯದಲ್ಲವೇ ? ” ಎಂದನು . ಅವನ ವಾದವನ್ನು ಕೇಳಿದ ಶಾಂತಲೆ “ ನಿಮ್ಮ ಊರಿನ ಹಣ ನಿಮ್ಮ ಊರಿಗೆ ವಿನಿಯೋಗವಾಗಲಿ ” ಎಂದಳು . ನಂತರ ಉದಯಾದಿತ್ಯ ಅವರು ಗಂಡುಡೆಯಲ್ಲಿರುವ ಶಾಂತಲಾದೇವಿ ಎಂದು ತಿಳಿಸಿದ ನಂತರ ಎಲ್ಲರೂ ಅವರಿಗೆ ತಮ್ಮ ಭಕ್ತಿ ಸಮರ್ಪಿಸಿದರು . ನಂತರ ಊರಿನ ಜನ ತಮಗೆ ಆ ಹೊನ್ನಿನ ಅವಶ್ಯಕತೆಯಿಲ್ಲ . ಅದು ರಾಜ್ಯದ ಕ್ಷೇಮಕ್ಕೆ ಮೀಸಲು . ಎಂದಾಗ “ ಇದು ದೈವದ ದುಡ್ಡು , ದೇವಕಾರ್ಯಕ್ಕೆ ವಿನಿಯೋಗವಾಗಬೇಕಾದ್ದು ಧರ್ಮ . ರಾಜಧಾನಿ ದ್ವಾರಸಮುದ್ರದಲ್ಲಿ ಹೊಯ್ಸಳರ ಶೈಲಿಗೆ ಮಾದರಿಯಾದಂತಹ ಅವಳಿ ದೇವಾಲಯ ನಿರ್ಮಾಣಕ್ಕಾಗಿ ಈ ಹೊನ್ನು ವಿನಿಯೋಗವಾಗಲಿ ” ಎಂದು ಶಾಂತಲೆ ತೀರ್ಪು ನೀಡಿದಳು .

2. ಚೋಳ ದೊರೆ ಕುಲೋತ್ತುಂಗನು ಹೊಯ್ಸಳ ಸಾಮ್ರಾಜ್ಯದ ಮೇಲೆ ಯುದ್ಧ ಸಾರಲು ಇದ್ದ ಕಾರಣ ಹಾಗೂ ಪರಿಣಾಮವನ್ನು ವಿವರಿಸಿ .

ಉತ್ತರ : ದಿನೇದಿನೇ ಪ್ರವರ್ಧಮಾನಕ್ಕೆ ಬರುತ್ತಿರುವ ವಿಷ್ಣುವರ್ಧನನನ್ನು ಬಡಿಯಬೇಕೆಂದು ಶತ್ರು ರಾಜರುಗಳನೇಕರು ಹವಣಿಸುತ್ತಿದ್ದರು . ಅವರಲ್ಲಿ ಚೋಳಮಂಡಲದ ಕುಲೋತ್ತುಂಗ ಪ್ರಮುಖನಾದವನು . ಕುಲೋತ್ತುಂಗ ಪ್ರಚಂಡ ಆಶಾವಾದಿ . ಅಖಂಡ ಭರತಖಂಡದ ಒಡೆತನವನ್ನು ಬಯಸುತ್ತಿದ್ದ ದುರಾಶಾಪಿಶಾಚಿ , ಗಂಗ ಸಾಮ್ರಾಜ್ಯವನ್ನು ತನ್ನ ವಶ ಮಾಡಿಕೊಳ್ಳಲೆಂದು ಆಶಿಸಿ , ಅಡಿಯಮನನ್ನು ಪ್ರಚೋದಿಸಿ ದ್ವಾರಸಮುದ್ರದ ಮೇಲೆ ಕಳುಹಿಸಿದ . ಇದನ್ನು ಗುಪ್ತಚಾರರಿಂದ ತಿಳಿದ ಹೊಯ್ಸಳೇಶ್ವರನು ಸಕಲ ಸೇನಾ ಸಮೇತನಾಗಿ ಯುದ್ಧಕ್ಕೆ ಸನ್ನದ್ಧನಾದನು . ದ್ವಾರಸಮುದ್ರದ ಸೇನೆ ತಲಕಾಡಿನ ಕಡೆಗೆ ಜೈತ್ರಯಾತ್ರೆ ಹೊರಟಿತು . ಮಳವಳ್ಳಿ , ಮುಡುಕುತೊರೆಗಳ ಬಳಿಯಲ್ಲಿ ಘನಘೋರ ಯುದ್ಧ ನಡೆದು , ಹೊಯ್ಸಳರ ಕೈ ಮೇಲಾಗಿ ಚೋಳಸೇನೆ ಕಂಗಾಲಾಯಿತು . ಆದಿಯಮ ಯುದ್ಧದಲ್ಲಿ ಮಡಿದ . ಅವನ ಸತ್ತ ಸುದ್ದಿ ತಿಳಿಯುತ್ತಲೆ ಚೋಳಸೇನೆ ದಿಕ್ಕಾಪಾಲಾಗಿ ಓಡಿತು . ತಲಕಾಡ ಕೋಟೆ ಸುಲಭವಾಗಿ ವಿಷ್ಣುವರ್ಧನ ಭೂಪಾಲನ ಕೈವಶವಾಯಿತು . ಸಮಸ್ತ ಸೇನೆಯು ‘ ತಲಕಾಡುಗೊಂಡನಿಗೆ ಜಯವಾಗಲಿ ‘ ಎಂದು ಜೈಕಾರ ಹಾಕಿತು .

ಈ ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .

1. “ ಸೆರೆಸಿಕ್ಕ ಸೈನಿಕರ ಮೇಲೆ ದೌರ್ಜನ್ಯ ನಡೆಸುವುದು ಯೋಧ ಧರ್ಮವಲ್ಲ ”

ಆಯ್ಕೆ : ಈ ವಾಕ್ಯವನ್ನು ಸ.ಶಿ.ಮರುಳಯ್ಯ ಅವರು ಅವರು ರಚಿಸಿರುವ ‘ ನಾಟ್ಯ ಮಯೂರಿ ‘ ಎಂಬ ಕೃತಿಯಿಂದ ಆಯ್ಕೆಮಾಡಲಾದ ‘ ಪ್ರಜಾನಿಷ್ಠೆ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ . ವಿಷ್ಣುವರ್ಧನನು ಕುಲೋತ್ತುಂಗ ಚೋಳನ ದಂಡನಾಯಕ ಆದಿಯಮನನ್ನು ಯುದ್ಧದಲ್ಲಿ ಸೋಲಿಸಿ , ತಲಕಾಡನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ ಹಲವರು ತಲಕಾಡು ನಗರವನ್ನು ಲೂಟಿ ಮಾಡಬೇಕೆಂದು ಇಚ್ಚಿಸಿದ ಸಂದರ್ಭದಲ್ಲಿ ಪ್ರಜಾಪಾಲಕನಾದ ವಿಷ್ಣುವರ್ಧನನ್ನು ಸೈನಿಕರಿಗೆ “ ಸೆರೆ ಸಿಕ್ಕ ಸೈನಿಕರ ಮೇಲೆ ದೌರ್ಜನ್ಯ ನಡೆಸುವುದು ಯೋಧ ಧರ್ಮ ಅಲ್ಲ : ಸೋತ ಸಾಮ್ರಾಜ್ಯವನ್ನು ಲೂಟಿ ಮಾಡುವುದು ಯುದ್ಧ ಧರ್ಮವಲ್ಲ ” ಎಂದು ಹೇಳುತ್ತಾನೆ .

ಸ್ವಾರಸ್ಯ : ಇಲ್ಲಿ ವಿಷ್ಣುವರ್ಧನನಲ್ಲಿದ್ದ ಮಾನವೀಯ ಗುಣ ಹಾಗೂ ಪ್ರಜಾಹಿತಚಿಂತನೆ ಸ್ವಾರಸ್ಯಕರವಾಗಿ ವ್ಯಕ್ತಗೊಂಡಿದೆ .

2. “ ತಲಕಾಡುಗೊಂಡನಿಗೆ ಜಯವಾಗಲಿ ”

ಆಯ್ಕೆ : ಈ ವಾಕ್ಯವನ್ನು ಸ.ಶಿ.ಮರುಳಯ್ಯ ಅವರು ಅವರು ರಚಿಸಿರುವ ‘ ನಾಟ್ಯ ಮಯೂರಿ ‘ ಎಂಬ ಕೃತಿಯಿಂದ ಆಯ್ಕೆಮಾಡಲಾದ ‘ ಪ್ರಜಾನಿಷ್ಠೆ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ವಿಷ್ಣುವರ್ಧನನು ಕುಲೋತ್ತುಂಗ ಚೋಳನ ದಂಡನಾಯಕ ಆದಿಯಮನನ್ನು ಯುದ್ಧದಲ್ಲಿ ಸೋಲಿಸಿ , ತಲಕಾಡನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ ಸಮಸ್ತ ಸೇನೆಯು ಈ ರೀತಿ ಜೈಕಾರ ಹಾಕಿತು .

ಸ್ವಾರಸ್ಯ : ಇಲ್ಲಿ ವಿಷ್ಣುವರ್ಧನನ ಸೈನಿಕ ಶಕ್ತಿ , ತಲಕಾಡನ್ನು ವಶಪಡಿಸಿಕೊಂಡ ನಂತರ ಸೈನಿಕರ ವಿಜಯೋತ್ಸಾಹ ಸ್ವಾರಸ್ಯಕರವಾಗಿ ವ್ಯಕ್ತಗೊಂಡಿದೆ .

3. “ ತಂಬುಲ ಉಗದ ಮ್ಯಾಲೆ ಮತ್ತೆ ಎತ್ತಿ ಬಾಯಿಗಾಕ್ಕೊಳ್ಳೋ ಕೆಟ್ಟತನ ಬ್ಯಾಡಾ ”

ಆಯ್ಕೆ : ಈ ವಾಕ್ಯವನ್ನು ಸ.ಶಿ.ಮರುಳಯ್ಯ ಅವರು ಅವರು ರಚಿಸಿರುವ ‘ ನಾಟ್ಯ ಮಯೂರಿ ‘ ಎಂಬ ಕೃತಿಯಿಂದ ಆಯ್ಕೆಮಾಡಲಾದ ‘ ಪ್ರಜಾನಿಷ್ಠೆ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಈರಣ್ಣನು ಬೀರಣ್ಣನಿಂದ ಕೊಂಡುಕೊಂಡ ಹೊಲದಲ್ಲಿ ಉಳುತ್ತಿದ್ದಾಗ ಅಲ್ಲಿ ಒಂದು ಕೊಪ್ಪರಿಗೆಯಷ್ಟು ಹೊನ್ನು ಸಿಕ್ಕಿತು . ಅವನು ಅದನ್ನು ಪೂಜೆ ಮಾಡಿ ಬೀರಣ್ಣನ ಮ ತೆಗೆದುಕೊಂಡು ಹೋಗಿ ಇದು ನಿನ್ನ ಹೊಲದಲ್ಲಿ ಸಕ್ಕಿದೆ ತೆಗೆದುಕೋ ‘ ಎಂದನು . ಸಂದರ್ಭದಲ್ಲಿ ಬೀರಣ್ಣ ನಿನಗೆ ಹೊಲ ಮಾರಿದ ಮೇಲೆ ಅದು ನಿನಗೇ ಸೇರಬೇಕು . ಅದು ನನ್ನದಲ್ಲ . ತಂಬುಲ ಉಗದ ಮ್ಯಾಲೆ ಮತ್ತೆ ಎತ್ತಿ ಬಾಯಿಗಾಕ್ಕೊಳ್ಳೋ ಕೆಟ್ಟತನ ಬ್ಯಾಡಾ ‘ ಎಂದು ನಿರಾಕರಿಸಿದನು .

ಸ್ವಾರಸ್ಯ : ಈ ಸಂದರ್ಭದಲ್ಲಿ ಈರಣ್ಣ ಮತ್ತು ಬೀರಣ್ಣ ಇವರಿಬ್ಬರಲ್ಲಿದ್ದ ನಿಸ್ವಾರ್ಥತೆ , ದುರಾಸೆ ಇಲ್ಲದ ಧರ್ಮಪರತೆ ಸ್ವಾರಸ್ಯಕರವಾಗಿ ಮೂಡಿಬಂದಿದೆ .

ಈ ] ಬಿಟ್ಟಸ್ಥಳದಲ್ಲಿ ಸೂಕ್ತಪದವನ್ನು ತುಂಬಿರಿ .

೧. ದ್ವಾರಸಮುದ್ರದ ಸೇನೆ ತಲಕಾಡಿನ ಕಡೆಗೆ ಚೈತ್ರಯಾತ್ರೆ ಹೊರಟಿತು

೨. ಮಾನವ ತನ್ನ ಮಾನವೀಯ ಗುಣಗಳನ್ನು ಗಾಳಿಯಲ್ಲಿ ತೂರಿಬಿಡಬಾರದು .

೩. ನಿಮ್ಮ ಊರಿನ ಹಣ ನಮ್ಮೂರಿನ ಏಳಿಗೆಗಾಗಿಯೇ ವಿನಿಯೋಗವಾಗಲಿ ,

೪. ಬನದಮ್ಮನ ಹಳ್ಳಿಯ ಜನರಿಗೆ ಸ್ವರ್ಗ ಒಂದೇ ಮೆಟ್ಟಿಲಲ್ಲಿ ಉಳಿಯಿತು .

ಭಾಷಾ ಚಟುವಟಿಕೆ

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ .

1 , ಅನುನಾಸಿಕ ಸಂಧಿ ಎಂದರೇನು ? ಉದಾಹರಣೆ ಕೊಡಿ.

ಉತ್ತರ : ಕ.ಚ,ಟ ಕಾರಗಳಿಗೆ ಯಾವುದೇ ಅನುನಾಸಿಕವು ಪರವಾದರೂ ಕ ,ಕೈ  , ಚ ಕೈ ಟ ಕೈ ಣ , ತ ಕೈ ನ ಪ ಕ್ಕೆ ಮ ಅನುನಾಸಿಕವು ಆದೇಶವಾಗಿ ಬಂದರೆ ಅನುಷಾಸಿಕ ಎನ್ನುವರು .

ಉದಾ:

ಚಿತ್‌      +     ಮೂರ್ತಿ  =ಚಿನ್ಮೂರ್ತಿ

ಷಟ್‌     +     ಮುಖ      =ಷಣ್ಮುಖ

ಸತ್‌      +     ಮಾನ      =ಸನ್ಮಾನ

ಚಿತ್‌     +     ಮಯ      =ಚಿನ್ಮಯ

2 , ಕ್ರಿಯಾಸಮಾಸ ಎಂದರೇನು ? ಉದಾಹರಣೆ ಕೊಡಿ,

ಉತ್ತರ : ಪೂರ್ವಪದವು ದ್ವಿತೀಯ ವಿಭಂಶವಾಗಿದ್ದು ಉತ್ತರಪದದಲ್ಲಿರುವ ಕ್ರಿಯೆಯೊಡನೆ ಸೇರಿ ಆದ ಸಮಾಸವೆ . ಕ್ರಿಯಾಸಮಾಸ ,

ಉದಾ : ಮನೆಯನ್ನು + ಕಟ್ಟಿದನು = ಮನೆಕಟ್ಟಿದನು . ..

ಮೈದಡವಿ . ಬಟ್ಟೆಯನ್ನು ಮೈಯನ್ನು ಮರೆತು ಮೈಮರೆತು .

ಕೈಯಂ         + ಪಿಡಿದು   = ಕೈವಿಡಿದು

ತಲೆಯನ್ನು   + ಇಟ್ಟು     = ತಲೆಯಿಟ್ಟು

ಮೈಯನ್ನು  + ತಡವಿ     = ಮೈದಡವಿ

ಕಣ್ಣನ್ನು       + ತೆರೆ        = ಕಣ್ಣರೆ

ಬಟ್ಟೆಯನ್ನು + ತೋರು = ಬಟ್ಟೆದೋರು .

ಆ ) ಕೊಟ್ಟಿರುವ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ನಾಲ್ಕನೆಯ ಪದವನ್ನು ಬರೆಯಿರಿ

1,ಯ್‌,ರ್‌,ಲ್‌,ವ್‌, ಅವರ್ಗೀಯ ವ್ಯಂಜನಗಳು :ಙ್‌, ಞ್‌, ಣ್‌, ನ್‌, ಮ್  : ……….

2 , ಷಡಂಗ : ಜಶ್ವಸಂದಿ: ಷಣ್ಮಾಸ :………

3. ಈ ಹೊನ್ನು : ಗಮಕ ಸಮಾಸ : ಸ್ಥಾಪನೆ ಮಾಡು:…………

4. ವಾಗ್ದೇವಿ :ಜಶ್ವಸಂದಿ :: ಜಗಜ್ಯೋತಿ:……….

ಸರಿ ಉತ್ತರಗಳು,

೧, ಅನುನಾಸಿಕಾಕ್ಷರಗಳು .  2 ,ಅನುನಾಸಿಕ ಸಂಧಿ   3,ಕಿಯಾ ಸಮಾಸ  4. ಶ್ಚುತ್ವ ಸಂಧಿ

ಈ ) ಕೊಟ್ಟಿರುವ ಗಾದೆ ಮಾತುಗಳನ್ನು ವಿಸ್ತರಿಸಿ ಬರೆಯಿರಿ ,

1. ” ಹಿತ್ತಲ ಗಿಡ ಮದ್ದಲ್ಲ “

          ವೇದ ಸುಳ್ಳಾದರೂ ಗಾದೆ ಸುಳ್ಳಾಗದು , ಗಾದೆಗಳು ವೇದಗಳಿಗೆ ಸಮ . ಇವು ನಮ್ಮ ಹಿರಿಯರ ಅನುಭವದ ಮಾತುಗಳು , ಗಾದೆಗಳು ನೋಡಲು ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ , ಆಂತಹ ಗಾದೆಗಳಲ್ಲಿ ಈ ಗಾದೆ ಮಾತು ಸಹ ಒಂದು.

      ತಮ್ಮ ತಮ್ಮ ಮನೆಯ ಅಂಗಳದಲ್ಲಿ ಬೆಳೆದ ಗಿಡ ಮರಗಳಿಗೆ ನಾವು ಹೆಚ್ಚು ಪ್ರಾಮುಖ್ಯತೆ ಕೊಡುವುದಿಲ್ಲ .

ತಮ್ಮ ಬಳಿ ಇರುವ ವಸ್ತುಗಳಿಗೆ , ಮನುಷ್ಯರಿಗೆ ನಮ್ಮ ಮನಸ್ಸಿನಲ್ಲಿ ಗೌರವ , ಬೆಲೆ ಇರುವುದಿಲ್ಲ , ಹಳೆಯ ಕಾಲದಲ್ಲಿ ಎಲ್ಲಾ ರೋಗಗಳಿಗೆ ಗಿಡಮೂಲಿಕೆಗಳಿಂದ ಔಷಧಿ ತಯಾರಿಸಿ ರೋಗವನ್ನು ಗುಣ ಪಡಿಸುತ್ತಿದ್ದರು .

ನಮ್ಮ ಮನೆಯ ಹಿತ್ತಲಲ್ಲಿ ಬೆಳೆದ ಗಿಡಗಳಿಂದ ಮಾಡಿದ ಮದ್ದನ್ನು ಕುಲ್ಲಕವಾಗಿ ಕಾಣುವ ಮನೋಭಾವನೆ ಇತ್ತು ,

ಅದೇ ಬೇರೆಯವರ ತೋಟದ ಗಿಡದಿಂದ ತಯಾರಿಸಿದ ಔಷಧಿಗೆ ಬೆಲೆ ಹೆಚ್ಚು ಕೊಡುತ್ತಿದ್ದರು.ಆದರಿಂದ ಈ ಗಾದೆ ಹುಟ್ಟಿದೆ . ಪ್ರಸ್ತುತ ದಿನಮಾನಗಳಲ್ಲಿ ನಮ್ಮ ಮನೆಯಲ್ಲಿ ಇರುವ ವಸ್ತಗಳಿಗೆ ನಾವು ಬೆಲೆಕೊಡದೆ ಅಕ್ಕಪಕ್ಕದ ಮನೆಗಳ ವಸ್ತುಗಳನ್ನು ನೋಡಿ ದುಭಾರಿ ವಸ್ತುಗಳು ,ಬೆಲೆ ಬಾಳುವ ವಸ್ತುಗಳು ಅವರ ಬಳಿ ಇವೆ .

ನಮ್ಮಲ್ಲಿ ಈ ರೀತಿ ವಸ್ತುಗಳು ಎಲ್ಲಾ ಎಂದು ಕೊರಗುತ್ತೇವೆ , ಒಮ್ಮೊಮ್ಮೆ ಖಿನ್ನತೆಗೂ ನಮ್ಮ ಬಳಿ ಏನಿರುತ್ತದೆ ಅದು ಯಾವಾಗಲೂ ಬೆಲೆ ಕಡಿಮೆ ನಮ್ಮ ಕೈಗೆ ಯಾವುದು ಎಟಕುವುದಿಲ್ಲವೋ ಅದರ ಬೆಲೆ ಜಾಸ್ತಿ ಅನ್ನಿಸುತ್ತದೆ ,

ಸುಲಭವಾಗಿ ಸಿಗುತ್ತದೆ ‘ ಎಂದ ಮಾತ್ರಕ್ಕೆ ಆ ವಸ್ತುವಿಗೆ ಬೆಲೆ ಇಲ್ಲ ಎಂದು ಭಾವಿಸಬಾರದು . ನಮ್ಮ ಜೊತೆಗೆ ಇರುವ ವಸ್ತು , ವ್ಯಕ್ತಿಗಳನ್ನು ಅರ್ಥಮಾಡಿಕೊಂಡು ಜೀವನ ನಡೆಸಬೇಕು .

2. ” ದೂರದ ಬೆಟ್ಟ ನುಣ್ಣಗೆ “

ವೇದ ಸುಳ್ಳಾದರೂ ಗಾದೆ ಸುಳ್ಳಾಗದು . ಗಾದೆಗಳು ವೇದಗಳಿಗೆ ಸಮ . ಇವು ನಮ್ಮ ಹಿರಿಯರ ಅನುಭವದ ಮಾತುಗಳು . ಗಾದೆಗಳು ನೋಡಲು ವಾಮನನಾದರೂ ಆರ್ಥದಲ್ಲಿ ತ್ರಿವಿಕ್ರಮನಂತೆ , ಅಂತಹ ಗಾದೆಗಳಲ್ಲಿ ಈ ಗಾದೆ ಮಾತು ಸಹ ಒಂದು . ದೂರದಲ್ಲಿರುವ ಬೆಟ್ಟ ನೋಡುವುದಕ್ಕೆ ಚಿಕ್ಕದಾಗಿ ಕಾಣಿಸುತ್ತದೆ .

ದೂರದಿಂದ ಅದನ್ನು ಸುಲಭವಾಗಿ ಹತ್ತಬಹುದು ಎಂದು ಅನ್ನಿಸುತ್ತದೆ . ಆದರೆ ಬೆಟ್ಟದ ನಿಜ ಸ್ವರೂಪ ತಿಳಿಯಬೇಕಾದರೆ ಹತ್ತಿರ ಹೋಗಿ ನೋಡಬೇಕು . ಆಗ ಬೆಟ್ಟದ ಮೇಲಿರುವ ಕಲ್ಲು ಮುಳ್ಳು , ಅದರ ಎತ್ತರ ಎಷ್ಟು ಎಂದು ತಿಳಿಯುತ್ತದೆ .

ಹತ್ತಿರ ಹೋಗಿ ನೋಡಿದಾಗ , ದೂರದಿಂದ ಅಂದುಕೊಂಡಷ್ಟು ಸುಲಭವಾಗಿ ಅದನ್ನು ಹತ್ತಲು ಸಾಧ್ಯವಿಲ್ಲ ಎನ್ನುವ ಅರಿವು ನಮಗೆ ಆಗುತ್ತದೆ .ಹಾಗೆಯೇ ಸಂಬಂಧಗಳು ಸಹ ದೂರದಿಂದ ನೋಡಿದಾಗ ಎಲ್ಲಾರೂ ನಮ್ಮವರೇ ಎಂದು ಗೊತ್ತಾಗುತ್ತದೆ .

‘ದೂರವಿದ್ದರೆ ಪರಿಮಳ , ಹತ್ತಿರ ಬಂದರೆ ವಾಸನೆ ‘ ಎಂಬ ಮಾತಿನಂತೆ ಮನುಷ್ಯನ ನಿಜವಾದ ಬಣ್ಣ ತಿಳಿಯಲು ಅವನ ಜೊತೆಗೆ ಇದ್ದು ನೋಡಬೇಕು . ಪ್ರಪಂಚದಲ್ಲಿ ಎಲ್ಲಾರಿಗೂ ಕಷ್ಟ ಬರುತ್ತದೆ ಎಂಬ ಅಂಶವನ್ನು ನಾವು ಮರೆಯಬಾರದು .

ದೇವರು ನನಗೆ ಮಾತ್ರ ಕಷ್ಟ ಕೊಟ್ಟಿದ್ದಾನೆ . ಬೇರೆಯವರು ನಗುನಗುತ್ತಾ ಜೀವನ ಸಾಗಿಸುತ್ತಿದ್ದಾರೆ . ಎಂದು ಕೊಂಡು ಕೊರಗಬಾರದು . ಅವರ ಜೀವನದಲ್ಲಿ ಎಷ್ಟು ಕಷ್ಟಗಳಿವೆ ಎಂದು ಅವರ ಹತ್ತಿರ ಹೋದಾಗ ತಿಳಿಯುತ್ತದೆ . ಎಲ್ಲಾರ ಮನೆಯ ದೋಸೆನೂ ತೂತೆ ಎಂಬ ಸತ್ಯ ತಿಳಿದು ಬದುಕಬೇಕಾಗಿದೆ.

9th Standard Prajanishte Kannada Notes Question Answer Pdf

ಇತರೆ ವಿಷಯಗಳು :

ಧರ್ಮಸಮದೃಷ್ಟಿ ಕನ್ನಡ ನೋಟ್ಸ್‌

ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ಕನ್ನಡ ನೋಟ್ಸ್

Leave your vote

23 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.