8ನೇ ತರಗತಿ ಯಶೋಧರೆ ಕನ್ನಡ ನೋಟ್ಸ್‌ | 8th Standard Yashodhare Lesson Kannada Notes

8ನೇ ತರಗತಿ ಯಶೋಧರೆ ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು, 8th Standard Yashodhare Kannada Notes, 6th Lesson Yashodhare Question Answer Notes Guide Pdf Download

ತರಗತಿ : 8ನೇ ತರಗತಿ

ಪಾಠದ ಹೆಸರು : ಯಶೋಧರೆ

ಕೃತಿಕಾರರ ಹೆಸರು : ಮಾಸ್ತಿ ವೆಂಕಟೇಶ ಐಯ್ಯಂಗಾರ್

Table of Contents

ಕೃತಿಕಾರರ ಪರಿಚಯ :

ಮಾಸ್ತಿ ವೆಂಕಟೇಶ ಐಯ್ಯಂಗಾರ್

* ಮಾಸ್ತಿ ವೆಂಕಟೇಶ ಐಯ್ಯಂಗಾರ್ ಅವರ ಕಾವ್ಯನಾಮ ‘ ಶ್ರೀನಿವಾಸ ‘ ಮಾಸ್ತಿ ಅವರು ‘ ಸಣ್ಣಕಥೆಗಳ ಜನಕ ‘ ಎಂದೇ ಪ್ರಸಿದ್ಧರು , * ವೆಂಕಟೇಶ ಅಯ್ಯಂಗಾರರು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಎಂಬ ಗ್ರಾಮದಲ್ಲಿ ೬-೬-೧೮೯೧ ರಲ್ಲಿ ಜನಿಸಿದರು .

* ಇವರು ಕಾವ್ಯ , ನಾಟಕ , ಕಾದಂಬರಿ ವಿಮರ್ಶೆ – ಹೀಗೆ ಕನ್ನಡ ಸಾಹಿತ್ಯ ವಿವಿಧ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ . ಇವರ ಸಣ್ಣಕಥೆಗಳು ಒಟ್ಟು ಹದಿಮೂರು ಸಂಪುಟಗಳಲ್ಲಿ ಪ್ರಕಟವಾಗಿವೆ .

* ‘ ಗೌತಮಿ ಹೇಳಿದ ಕಥೆ ‘ , ‘ ಸಾರಿಪತನ ಕೊನೆಯ ದಿನಗಳು ‘ , ‘ ಕುಚೇಲನ ಭಾಗ್ಯ , ‘ ಹೇಮಕೂಟದಿಂದ ಬಂದ ಮೇಲೆ ‘ , ‘ ಚಿಕವೀರರಾಜೇಂದ್ರ ಮೊದಲಾದವು ಇವರ ಪ್ರಮುಖ ಕೃತಿಗಳು . * ಇವರ ಚಿಕ್ಕವೀರರಾಜೇಂದ್ರ ಕೃತಿಗೆ ೧೯೮೩ ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರೆತಿದೆ . ಇವರು ೬-೬-೧೯೮೬ರಲ್ಲಿ ನಿಧನರಾದರು .

8th Standard Kannada Yashodhare Lesson Question Answer

ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ ,

1. ರಾಜನಿಗೆ ಕನಸಿನ ವಿಚಾರವನ್ನು ತಿಳಿಸಿದವರಾರು ?

ಉತ್ತರ : ರಾಜನಿಗೆ ಕನಸಿನ ವಿಚಾರವನ್ನು ಅಂಬಿಕೆ ತಿಳಿಸಿದಳು .

2 , ಸಂಪ್ರದಾಯಕ್ಕೆ ವಿರುದ್ಧವಾದದ್ದು ಯಾವುದು ?

ಉತ್ತರ : ಸಂನ್ಯಾಸಿಯಾದವನು ಸತಿಯನ್ನು ನೋಡುವುದು ಸಂಪ್ರದಾಯಕ್ಕೆ ವಿರುದ್ಧವಾದದ್ದು .

3. ಯಶೋಧರೆ ಮತ್ತೊಮ್ಮೆ ಯಾರನ್ನು ನೀಡಬೇಕೆಂದು ರಾಜನಲ್ಲಿ ಬೇಡುತ್ತಾಳೆ ?

ಉತ್ತರ : ಯಶೋಧರೆ ಮತ್ತೊಮ್ಮೆ ತನ್ನ ಪತಿಯನ್ನು ನೀಡಬೇಕೆಂದು ರಾಜನಲ್ಲಿ ಬೇಡುತ್ತಾಳೆ .

4 , ತಂದೆಯನ್ನು ಕರೆತರಲು ಹೋಗುವೆನೆಂದು ಹೇಳಿದವರಾರು ?

ಉತ್ತರ : ತಂದೆಯನ್ನು ಕರೆತರಲು ಹೋಗುವೆನೆಂದು ರಾಯಲ ಹೇಳಿದನು .

5. ಈಗ ನೀನಿರುವ ಸ್ಥಿತಿ ಯಾವುದೆಂದು ರಾಜ ಹೇಳುತ್ತಾನೆ ?

ಉತ್ತರ : ಈಗ ನೀನಿರುವ ಸ್ಥಿತಿ ಸಂನ್ಯಾಸತ್ವದ ಸ್ಥಿತಿ ಎಂದು ಯಶೋಧರೆಗೆ ರಾಜ ಹೇಳುತ್ತಾನೆ ,

[ ಆ ] ಈ ಕೆಳಗಿನ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯದಲ್ಲಿ ಉತ್ತರಿಸಿ ,

1. ಯಶೋಧರೆ ಮಂಡಿಯೂರಿ ನಮಸ್ಕರಿಸುತ್ತಾ ಏನು ಹೇಳುತ್ತಾಳೆ ‘ ?

ಉತ್ತರ : ಯಶೋಧರೆ ರಾಜನಿಗೆ ಮಂಡಿಯೂರಿ ನಮಸ್ಕರಿಸುತ್ತಾ : ” ಇಂದು ಇರುಳಾಗುವುದು : ಇನ್ನೇನು ಮಾಡುವುದು : ನಿದ್ದೆಯಲ್ಲಿ ಮುಳುಗಿದರೆ ಇನ್ನು ಯಾವ ಕನಸಿನ ಮೊಸಳೆ ಹಿಡಿಯುವುದೊ , ಇನ್ನೆಷ್ಟು ಚಿಂತಿಸಬೇಕೋ , ಎಂದು ಚೇತನಗಳೆಲ್ಲ ನನಗೆ ಭೀತಿಯಲಿ ಕಲಕಿವೆ . ನನ್ನನ್ನು ಉದ್ಧರಿಸಬೇಕು . ” ಎಂದು ಹೇಳುತ್ತಾಳೆ .

2. ರಾಜನು ಈಗ ನೀನಿರುವ ರೀತಿ ಸಂನ್ಯಾಸವಲ್ಲದೆ ಎನ್ನಲು ಕಾರಣವೇನು ?

ಉತ್ತರ : ಸಿದ್ದಾರ್ಥನು ಸಂನ್ಯಾಸ ಸ್ವೀಕರಿಸಿ ತನ್ನನ್ನು ಬಿಟ್ಟು ಹೋದ ನಂತರ ಯಶೋಧರೆಯು ತನ್ನ ಪತಿ ಸಂನ್ಯಾಸ ಸ್ವೀಕರಿಸಿದನೆಂದು ನೆನೆಯುವುದಕ್ಕಾಗಿ ತಾನೂ ಸಹ ಸಂನ್ಯಾಸದ ಉಡುಪನ್ನು ಧರಿಸಿದ್ದಳು . ಆದ್ದರಿಂದ ರಾಜನು ‘ ಈಗ ನೀನಿರುವ ರೀತಿ ಸಂನ್ಯಾಸವಲ್ಲವೆ ? ” ಎಂದು ಹೇಳುತ್ತಾನೆ .

3. ರಾಜನನ್ನು ಪೀಠದಲ್ಲಿ ಕುಳ್ಳಿರಿಸಿ ಯಶೋಧರೆ ಏನೆಂದು ವಿನಂತಿಸುತ್ತಾಳೆ ?

ಉತ್ತರ : ರಾಜನನ್ನು ಪೀಠದಲ್ಲಿ ಕುಳ್ಳಿರಿಸಿ ಯಶೋಧರೆ ರಾಜನಲ್ಲಿ “ ನಾನು ಬಹುದಿನದಿಂದ ನಿಮ್ಮನ್ನು ಬೇಡುತಲಿದ್ದೆ . ನಾನು ನಿಮ್ಮ ಸೋದರಿಯ ಮಗಳೆಂದು ಚಿಕ್ಕವಳಿರುವಾಗಲೇ ಕರೆತಂದು ನನ್ನನ್ನು ಸಾಕಿ ಸಲಹಿದಿರಿ . ನನ್ನನ್ನು ಸೊಸೆಯಾಗಿ ಮನೆ ತುಂಬಿಸಿಕೊಂಡಿರಿ , ಕನಸಿನಲ್ಲು ಊಹಿಸಲಾಗದಂತಹ ಸುಖ – ಸಂತೋಷಗಳನ್ನು ನಾನು ನಿಮ್ಮ ಅರಮನೆಯಲ್ಲಿ ಅನುಭವಿಸಿದನು . ಹಾಗೆಯೇ ನನ್ನ ಪತಿಯನ್ನು ನನಗೆ ಮರಳಿ ನೀಡಿ , ನನ್ನನ್ನು ರಕ್ಷಿಸಿರಿ ” ಎಂದು ಏನಂತಿಸಿದಳು .

4. ಯಶೋಧರೆಯ ಆಂತರ್ಯದಲ್ಲಿರುವ ಸಂದೇಹವೇನು ?

ಉತ್ತರ : ಯಶೋಧರೆಗೆ ತನ್ನ ಪತಿಯನ್ನು ಮತ್ತೊಮ್ಮೆ ನೋಡುವ ಪುಣ್ಯ ತನ್ನ ಕಣ್ಣಳಿಗೆ ಇರುವುದೋ ಇಲ್ಲವೋ ? ಬಾಲಕನು ತನ್ನ ತಂದೆಯ ನೋಡಬೇಕೆಂದು ಆಶಿಸಲು ಬೇಡವೆನ್ನುವುದು ಸರಿಯೇ ಎಂದು ಅಂತರ್ಯದಲ್ಲಿ ಸಂದೇಹ ಹೊಂದಿದ್ದಳು ,

ಇ ] ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಐದು ವಾಕ್ಯದಲ್ಲಿ ಉತ್ತರಿಸಿ .

1. ಯಶೋಧರೆಯ ವಿಧಿಯ ಬಗ್ಗೆ ರಾಜನು ಏನೆಂದು ಹೇಳಿದನು?

ಉತ್ತರ : ಯಶೋಧರೆಯ ವಿಧಿಯ ಬಗ್ಗೆ ರಾಜನು “ವಿಧಿ ಲಿಖಿತವೆಂದು ಸಂಕಟ ಪಡಬೇಡಮ್ಮ ನಿನ್ನ ವಿಧಿ
ಕೆಟ್ಟದೆಂದು ಯೋಚಿಸದಿರು, ನಿನ್ನ ಅರಸನು ಈಗ ಇಡೀ ಲೋಕಕ್ಕೆ ಪೂಜ್ಯನೆನಿಸಿದ್ದಾನೆ. ರಾಜ್ಯವನ್ನಾಳುವ ಬರಿ
ಕಿರಿಯ ಹಿರಿಮೆಯನ್ನು ಬಿಟ್ಟು ಇಡೀ ಜಗತ್ತಿನ ಚಕ್ರವರ್ತಿಯಾಗಿ ಮೆರೆಯುತ್ತಿದ್ದಾನೆ. ಆದ್ದರಿಂದ ಚಿಂತಿಸಬೇಡ.
ಹತ್ತು ವರ್ಷಗಳ ನಿಮ್ಮ ತಪಸ್ಸು ಖಂಡಿತ ವ್ಯರ್ಥವಾಗದು. ಯಜ್ಞ ಯಗಾದಿಗಳಲ್ಲಿ ಪುರೋಹಿತರು ಹೇಳುವ
ಮಂತ್ರದಿಂದ  ದೇವರೇ ಧರೆಗಿಳಿದಂತೆ ನಮ್ಮ ಈ ಬಾಲಕ ತನ್ನ ತಂದೆಯನ್ನು ಖಂಡಿತ ಕರೆತರುವನು.
ಚಿಂತಿಸಬೇಡ” ಎಂದು ಹೇಳಿದನು.

2. ಬೇಹಿನವರನ್ನು ಕಳಿಸುವ ವಿಚಾರದಲ್ಲಿ ರಾಹುಲನ ಅಭಿಪ್ರಾಯವೇನು ?

ಉತ್ತರ : ಮರಳಿ ಅರಮನೆಗೆ ಬರುವ ವಿಚಾರದಲ್ಲಿ ಸಿದ್ಧಾರ್ಥನ ಅನಿಸಿಕೆ ಏನಿರಬಹುದು ? ಎಂದು ತಿಳಿಯಲು ಮಹಾರಾಜನು ಬೇಹುಗಾರರನ್ನು ಕಳುಹಿಸುವುದಾಗಿ ಹೇಳುತ್ತಾನೆ . ಆಗ ರಾಹುಲನು ” ಬೇಹಿನವರು ಬಂದ ನಂತರ ಹೋಗುವುದಂತೆ , ಆದರೆ ಅದನ್ನು ನಾನು ಒಪ್ಪುವುದಿಲ್ಲ , ನಾನೀಗಲೇ ಹೋಗಬೇಕು . ನಿಮಗೇನು ? ಅಣ್ಣನನ್ನು ನೋಡಿರುವಿರಿ : ನೋಡಬೇಕೆಂದಾಸೆ ನಿಮಗೆ ಅಷ್ಟು ಬಲವಾಗಿಲ್ಲ . ಆದರೆ ನಾನವರನ್ನು ನೋಡಿಲ್ಲ . ಇನ್ನೆಷ್ಟು ದಿನಕ್ಕೆ ನೋಡುವುದು ? ನಾನು ತಂದೆಯ ಬಳಿಗೆ ಹೋಗಿದ್ದು ಮರಳಿ ಬರುತ್ತೇನೆ ; ನಿಜವಾಗಿಯೂ ಬರುತ್ತೇನೆ . ಅವರನ್ನು ನಾನು ಕರೆತರುವನು , ಅವರನ್ನು ನೋಡಬೇಕೆಂದು , ಅವರೊಡನಿದ್ದು ಮಾತಾಡಬೇಕೆಂದು , ನನಗೆ ಬಹು ಆಸೆಯಿದೆ . ” ಎಂದು ಅಭಿಪ್ರಾಯಪಡುತ್ತಾನೆ .

ಈ ] ಕೆಳಗಿನ ಹೇಳಿಕೆಗಳನ್ನು ಯಾರು ಯಾರಿಗೆ ಯಾವ ಸಂದರ್ಭದಲ್ಲಿ ಹೇಳಿದರು .

1. “ ಅಮ್ಮಾಜಿ , ನಿನಗೆ ಭಯ ಬೇಡಮ್ಮ ನಾ ಮರಳಿ ಬಹೆನಮ್ಮ ”

ಉತ್ತರ : ಆಯ್ಕೆ : – ಮಾಸ್ತಿ ವೆಂಕಟೇಶ ಐಯ್ಯಂಗಾರ್ ಅವರ ಯಶೋಧರೆ ಎಂಬ ನಾಟಕದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಸಿದ್ಧಾರ್ಥನನ್ನು ಮರಳಿ ಕರೆತರುವ ಬಗ್ಗೆ ಚರ್ಚಿಸುತ್ತಿದ್ದಾಗ ರಾಜನು ಬೇಹಿನವರನ್ನು ಕಳುಹಿಸಿ ಸಿದ್ಧಾರ್ಥನ ಅನಿಸಿಕೆಯನ್ನು ತಿಳಿಯೋಣವೆಂದು ಹೇಳಿದಾಗ ರಾಹುಲನು ಅದಕ್ಕೆ ಒಪ್ಪದೆ ತನ್ನ ತಂದೆಯನ್ನು ನೋಡಲು ತಾನೇ ಹೋಗುತ್ತೇನೆಂದು ಹಟ ಮಾಡುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .

ಸ್ವಾರಸ್ಯ : ರಾಹುಲನನ್ನು ಕಳುಹಿಸಿದರೆ ಅವನೂ ತನ್ನ ತಂದೆಯಂತೆ ಸಂನ್ಯಾಸಿ ಆಗಬಹುದೆಂದು ಯಶೋಧರೆ ಮತ್ತು ರಾಜನಿಗಿದ್ದ ಆತಂಕ , ಅದಕ್ಕೆ ತಾನು ಹಿಂದಿರುಗಿ ಬಂದೇ ಬರುವೆನೆಂದು ರಾಹುಲನು ನೀಡುವ ಭರವಸೆ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .

2 , “ ಸೋದರಿಯ ಸುತೆಯೆಂದು ಎಳೆತನದಲೇ ನನ್ನ ಕರೆತಂದು ಸಾಕಿದಿರಿ “

ಉತ್ತರ : ಆಯ್ಕೆ : – ಮಾಸ್ತಿ ವೆಂಕಟೇಶ ಐಯ್ಯಂಗಾರ್‌ ಅವರ ಯಶೋಧರೆ ಎಂಬ ನಾಟಕದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಯಶೋಧರೆಯು ಸಿದ್ಧಾರ್ಥನ ಭಾವಚಿತ್ರದ ಬಳಿ ದುಃಖಿಸುತ್ತಾ ಕುಳಿತಿದ್ದಾಗ ಅಲ್ಲಿಗೆ ಮಹಾರಾಜ ಬರುತ್ತಾನೆ . ಆತನಲ್ಲಿ ತನ್ನ ಪತಿಯನ್ನು ಮರಳಿ ಕರೆಸಿ ಎಂದು ವಿನಂತಿಸಿಕೊಳ್ಳುವ ಸಂದರ್ಭದಲ್ಲಿ ಹೀಗೆ ಹೇಳುತ್ತಾಳೆ , “ ನಾನು ನಿಮ್ಮ ಸೋದರಿಯ ಮಗಳೆಂದು ಚಿಕ್ಕವಳಿರುವಾಗಲೇ ಕರೆತಂದು ಸಾಕಿ ಸಲಹಿ , ಸೊಸೆಯಾಗಿ ಸ್ವೀಕರಿಸಿದಿರಿ , ಬಹಳ ಸುಖ – ಸಂತೋಷಗಳನ್ನು ನಿಮ್ಮ ಅರಮನೆಯಲ್ಲಿ ಅನುಭವಿಸಿದೆನು . ಹಾಗೆಯೇ ನನ್ನ ಪತಿಯನ್ನು ನನಗೆ ಮರಳಿ ನೀಡಿ ” ಎಂದು ಯಶೋಧರೆ ವಿನಂತಿಸಿಕೊಳ್ಳುತ್ತಾಳೆ . ಸ್ವಾರಸ್ಯ : ಯಶೋಧರೆಯಲ್ಲಿದ್ದ ಸಿದ್ಧಾರ್ಥನ ಅಗಲಿಕೆಯ ನೋವು , ಸಂಕಟ ; ಅದನ್ನು ರಾಜನಲ್ಲಿ ಹೇಳುವ ರೀತಿ ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .

3. ” ನಿದ್ದೆಯಲಿ ಮುಳುಗಲಿನ್ನಾವ ಕನಸಿನ ಮೊಸಳೆ ಹಿಡಿಯುವುದೋ “

ಉತ್ತರ : ಆಯ್ಕೆ : – ಮಾಸ್ತಿ ವೆಂಕಟೇಶ ಐಯ್ಯಂಗಾರ್‌ ಅವರ ಯಶೋಧರೆ ಎಂಬ ನಾಟಕದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ರಾಜನು ನಿನ್ನ ಕನಸಿನ ವಿಚಾರವನ್ನು ಅಂಬಿಕೆ ಹೇಳಿದಳು ‘ ಎಂದು ಹೇಳಿದ ಸಂದರ್ಭದಲ್ಲಿ ಯಶೋಧರೆ ಈ ಮಾತನ್ನಾಡುತ್ತಾಳೆ . ಸಿದ್ಧಾರ್ಥನ ಅಗಲಿಕೆಯ ನೋವು ಮತ್ತು ಚಿಂತೆಗಳಿಂದ ಕೂಡಿದ್ದ ಯಶೋಧರೆಗೆ ಹಿಂದಿನ ರಾತ್ರಿ ಕೆಟ್ಟ ಕನಸೊಂದು ಬಿದ್ದಿತ್ತು . ಹಾಗೆಯೇ ಇಂದು ಇರುಳಾದಾಗ ಮತ್ತೆ ಇನ್ನೆಂತಹ ಕನಸು ಬೀಳೂವುದೋ , ತನ್ನ ಚಿಂತೆಯನ್ನು ಹೆಚ್ಚಿಸುವುದೋ ಎಂದು ಯಶೋಧರೆ ಈ ಸಂದರ್ಭದಲ್ಲಿ ಹೇಳುತ್ತಾಳೆ

ಸ್ವಾರಸ್ಯ : ಸಿದ್ಧಾರ್ಥನೆ ಆಗಲಿಕೆಯು ಯಶೋಧರೆಯ ಮನಸ್ಸಿನ ಮೇಲೆ ಬೀರಿರುವ ಪರಿಣಾಮ ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .

4“ ನಿನ್ನ ವಿಧಿ ಕೆಟ್ಟುದೆಂದೆಣಿಸದಿರು ಅಮ್ಯಾಜಿ ”

ಉತ್ತರ : ಆಯ್ಕೆ : – ಮಾಸ್ತಿ ವೆಂಕಟೇಶ ಐಯ್ಯಂಗಾರ್ ಅವರ ಯಶೋಧರೆ ಎಂಬ ನಾಟಕದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಸಿದ್ಧಾರ್ಥನನ್ನು ಮರಳಿ ಕರೆತರುವ ಬಗ್ಗೆ ಚರ್ಚೆಸುತ್ತಿದ್ದಾಗ ರಾಜನು ಬೇಹಿನವರನ್ನು ಕಳುಹಿಸಿ ಸಿದ್ಧಾರ್ಥನ ಅನಿಸಿಕೆಯನ್ನು ತಿಳಿಯೋಣವೆಂದು ಹೇಳಿದಾಗ ರಾಹುಲನು ಅದಕ್ಕೆ ಒಪ್ಪದೆ ತನ್ನ ತಂದೆಯನ್ನು ನೋಡಲು ತಾನೇ ಹೋಗುತ್ತೇನೆಂದು ಹಟ ಮಾಡುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .

ಸ್ವಾರಸ್ಯ : ರಾಹುಲನನ್ನು ಕಳುಹಿಸಿದರೆ ಅವನೂ ತನ್ನ ತಂದೆಯಂತೆ ಸಂನ್ಯಾಸಿ ಆಗಬಹುದೆಂದು ಯಶೋಧರೆ ಮತ್ತು ರಾಜನಿಗಿದ್ದ ಆತಂಕ , ಅದಕ್ಕೆ ತಾನು ಹಿಂದಿರುಗಿ ಬಂದೇ ಬರುವೆನೆಂದು ರಾಹುಲನು ನೀಡುವ ಭರವಸೆ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.

ಉ. ಹೊಂದಿಸಿ ಬರೆಯಿರಿ.

1.  ಯಶೋಧರೆ         –   ಯುವರಾಣಿ

2. ಶುದ್ಧೋದನ          –  ರಾಜ

3. ಅಂಬಿಕೆ                –  ಸಖಿ

4. ರಾಹುಲ               –  ಬುದ್ಧನ ಮಗ

5. ಸಿದ್ಧಾರ್ಥ              –  ಗೌತಮ ಬುದ್ಧ

ಊ. ಈ ಕೆಳಗಿನ ಪದಗಳಿಗೆ ತದ್ಭವ ಪದಗಳನ್ನು ಬರೆಯಿರಿ.

ವಿನೋದ      –     ಬಿನೋದ, ಬಿನದ

ದುಃಖ          –          ದುಕ್ಕೆ

ರಾಜ          –      ರಾಯ

ಕಾರ್ಯ     –      ಕಜ್ಜ

ಋ. ಈ ಪದಗಳನ್ನು ಬಿಡಿಸಿ ಸಂಧಿಯನ್ನು ಹೆಸರಿಸಿ.

ನಿನ್ನಾಣ್ಮ  =   ನಿನ್ನ  +   ಆಣ್ಮ   =  ಲೋಪ ಸಂಧಿ

ಚಕ್ರಾಧಿಪತಿ =   ಚಕ್ರ  +  ಅಧಿಪತಿ  =  ಸವರ್ಣದೀರ್ಘ ಸಂಧಿ

ಹರಕೆಯನು = ಹರಕೆ  +  ಅನು  =  ಆಗಮ ಸಂಧಿ

ಪತಿಯೊಡನೆ = ಪತಿ   +  ಒಡನೆ  =  ಆಗಮ ಸಂಧಿ

ಇಂದಳುತ   =  ಇಂದು +  ಆಳುತ  =  ಲೋಪ ಸಂದಿ

6th Lesson Yashodhare Question Answer Notes Guide Pdf

ಇತರೆ ಪಾಠಗಳು :

ಹೂವಾದ ಹುಡುಗಿ ಕನ್ನಡ ನೋಟ್ಸ್

ಸಾರ್ಥಕ ಬದುಕಿನ ಸಾಧಕ ಕನ್ನಡ ನೋಟ್ಸ್

Leave your vote

50 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.