9ನೇ ತರಗತಿ ಧರ್ಮಸಮದೃಷ್ಟಿ ಕನ್ನಡ ನೋಟ್ಸ್‌ | 9th Standard Dharma Samadrusti Kannada Notes

9ನೇ ತರಗತಿ ಕನ್ನಡ ಧರ್ಮಸಮದೃಷ್ಟಿ ಪ್ರಶ್ನೋತ್ತರಗಳು ನೋಟ್ಸ್‌, 9th Standard Kannada Dharma Samadrusti Question Answer Notes Pdf Download 2022

ತರಗತಿ : 9ನೇ ತರಗತಿ

ಪಾಠದ ಹೆಸರು : ಧರ್ಮಸಮದೃಷ್ಟಿ

ಶಾಸನ ಸಂಬಂಧ ಮಾಹಿತಿ :

ಧರ್ಮಸಮದೃಷ್ಟಿ ಶಾಸನವು ೧೩೬೮ ರ ಅವಧಿಯಲ್ಲಿ ವಿಜಯನಗರ ಸಾಮ್ರಾಜ್ಯದ ಅರಸ ವೀರ ಬುಕ್ಕರಾಯನಿಗೆ ಸಂಬಂಧಿಸಿದ್ದಾಗಿದೆ. ಮತಧರ್ಮ ಸಂಘರ್ಷದಲ್ಲಿ ಜೈನರು ಹಾಗೂ ವೈಷ್ಣವರು ಸಾಮರಸ್ಯದಿಂದ ಬಾಳಬೇಕೆಂದು ಬುಕ್ಕರಾಯನು ವಿಧಿಸಿದ ಕಟ್ಟಳೆಯಿದು . ಈ ಶಾಸನವು ಬುಕ್ಕರಾಯನ ಧರ್ಮಸಮನ್ವಯತೆಯನ್ನು ಬಿಂಬಿಸುತ್ತದೆ . ಈ ಶಾಸನವನ್ನು ಬಿ.ಎಂ. ಶ್ರೀಕಂಠಯ್ಯನವರು ಸಂಪಾದಿಸಿದ ‘ ಕನ್ನಡಬಾವುಟ ‘ ಕೃತಿಯಿಂದ ಆರಿಸಿ ಕೊಳ್ಳಲಾಗಿದೆ .

Dharma Samadrusti Question Answer Notes

ಅ ] ಒಂದು ವಾಕ್ಯದಲ್ಲಿ ಉತ್ತರಿಸಿ,

1. ಶ್ರೀವೈಷ್ಣವರೊಡನೆ ಮಹಾರಾಜನು ಏನು ಹೇಳಿದನು ?

ಶ್ರೀವೈಷ್ಣವರೊಡನೆ ಮಹಾರಾಜನು ವೈಷ್ಣವ ದರ್ಶನಕ್ಕೂ ಜೈನದರ್ಶನಕ್ಕೂ ಭೇದವಿಲ್ಲವೆಂದು ಹೇಳಿದನು .

2. ರಾಯನು ವಿಧಿಸಿದ ಕಟ್ಟಳೆಯನ್ನು ಮೀರಿದರೆ ಆಗುವ ಪರಿಣಾಮವೇನು ?

ರಾಯರು ವಿಧಿಸಿದ ಕಟ್ಟಳೆಯನ್ನು ಮೀರಿದವನು ರಾಜದೋಹಿ ಆಗುತ್ತಾನೆ .

3. ಬುಕ್ಕರಾಯನ ಹಿರಿಮೆ ಏನು ?

ಅರಿರಾಯ ವಿಭಾಡ ಹಾಗೂ ಭಾಷೆಗೆ ತಪ್ಪುವ ರಾಯರ ಗಂಡ ಎಂಬುದು ಬುಕ್ಕರಾಯನ ಹಿರಿಮೆ .

4. ಬುಕ್ಕರಾಯನ ರಾಜ್ಯಭಾರ ಕಾಲದಲ್ಲಿ ಯಾರೊಳಗೆ ಸಂವಾದ ನಡೆಯಿತು ?

ಬುಕ್ಕರಾಯನ ರಾಜ್ಯಭಾರ ಕಾಲದಲ್ಲಿ ಜೈನರಿಗೂ ಭಕ್ತರಿಗೂ ( ಶ್ರೀವೈಷ್ಣವರಿಗೂ ) ಸಂವಾದ ನಡೆಯಿತು .

5. ನಾಡ ಭವ್ಯ ಜನರು ಬುಕ್ಕರಾಯನ ಬಳಿ ಏನೆಂದು ಬಿನ್ನಹ ಮಾಡಿದರು ?

ನಾಡ ಭವ್ಯ ಜನರು ಬುಕ್ಕರಾಯನ ಬಳಿ ಭಕ್ತರು ( ಶ್ರೀವೈಷ್ಣವರು ) ಮಾಡುವ ಅನ್ಯಾಯಗಳನ್ನು ಬಿನ್ನಹ ಮಾಡಿದರು .

ಆ ] ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

1. ಬುಕ್ಕರಾಯನು ನಡೆಸಿದ ಧರ್ಮಸಭೆಗೆ ಯಾರನ್ನೆಲ್ಲ ಆಹ್ವಾನಿಸಿದನು ?

ಕೋವಿಲ್ , ತಿರುಮಲೆ , ಪೆರುಮಾಳ್ ಕೋವಿಲ್ , ಮುಖ್ಯಕ್ಷೇತ್ರಗಳ ಸಕಲಾಚಾರ್ಯರು , ಸಕಲ ಧರ್ಮಾನುಯಾಯಿಗಳು , ಸಕಟ ಸಾತ್ವಿಕರು , ಮೊಷಿಕರು , ತಿರುಪಣಿ , ತಿರುವಿಡಿ , ತಣ್ಣೀರವರು , ನಲವತ್ತೆಂಟು ಕುಲದವರು , ಸಾವಂತ ಸಾಮಂತರಾದ ಮಲೆನಾಡಿನವರು , ತಿರಿಕುಲ , ಜಾಂಬವಕುಲ ಒಳಗೊಂಡ ಹದಿನೆಂಟು ನಾಡಿನವರನ್ನು ಬುಕ್ಕರಾಯನು ನಡೆಸಿದ ಧರ್ಮಸಭೆಗೆ ಆಹ್ವಾನಿಸಿದನು .

2. ಜೈನಧರ್ಮದ ಸುಧಾರಣೆಗಾಗಿ ಬುಕ್ಕರಾಯನು ಕೈಗೊಂಡ ಕ್ರಮಗಳೇನು ?

ಜೈನಧರ್ಮದ ಸುಧಾರಣೆಗಾಗಿ ಬುಕ್ಕರಾಯನು ಸಮಸ್ತ ರಾಜ್ಯದ ಜೈನಮತದ ಜನಗಳ ಅನುಮತದಿಂದ “ ಬೆಳುಗೊಳದ ಪುಣ್ಯಕ್ಷೇತ್ರದಲ್ಲಿ ವೈಷ್ಣವ ಅಂಗರಕ್ಷೆಗಾಗಿ ಸಮಸ್ತ ರಾಜ್ಯದೊಳಗೆ ಇರುವಂತಹ ಜೈನರ ಬಾಗಿಲು ಕಟ್ಟಳೆಯಾಗಿ ಮನೆಮನೆಗೆ ವರ್ಷಕ್ಕೆ ಒಂದು ಹಣ ಕೊಡುವುದು . ಹಾಗೆ ಸಂಗ್ರಹಿಸಿದ ಆ ಒಂದು ಹಣದಿಂದ ದೇವರ ಅಂಗರಕ್ಷೆಗೆ ಇಪ್ಪತ್ತು ಆಳುಗಳನ್ನು ನೇಮಿಸಿ , ಉಳಿದ ಹೊನ್ನಿನಿಂದ ಜೀರ್ಣಾವಸ್ಥೆಯಲ್ಲಿರುವ ಜಿನಾಲಯಗಳಿಗೆ ಸುಣ್ಣ ಬಳಿಸುವುದು ಎಂದು ಶಾಸನ ಬರೆಸಿದನು .

3. ‘ ಧರ್ಮಸಮದೃಷ್ಟಿ ‘ ಪಾಠದಲ್ಲಿ ರಾಮಾನುಜಾಚಾರ್ಯರ ಗುಣವಿಶೇಷತೆಯನ್ನು ಹೇಗೆ ಕೊಂಡಾಡಲಾಗಿದೆ ?

‘ ಧರ್ಮಸಮದೃಷ್ಟಿ ‘ ಪಾಠದಲ್ಲಿ ರಾಮಾನುಜಾಚಾರ್ಯರನ್ನು ಪಾಷಂಡ ( ನಾಸ್ತಿಕ ) ಸಾಗರ ಮಹಾಬಡಬಾ ಮುಖಾಗ್ನಿಯಂತಿರುವವರು , ಶ್ರೀರಂಗರಾಜ ಪಾದಕಮಲಗಳಲ್ಲಿ ಮೂಲ ದಾಸರಾದವರು . ಶ್ರೀವಿಷ್ಣುಲೋಕ ಮುನಿಮಂಟಪ ಯತಿರಾಜರಾಜರಂತಿರುವವರು ಎಂದು ಕೊಂಡಾಡಲಾಗಿದೆ . ಮಾರ್ಗದಾಯಿಗಳು , ತಿರುನಾರಾಯಣಪುರ

ಇ ] ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ ,

1. ಬುಕ್ಕರಾಯನು ತನ್ನ ಆಳ್ವಿಕೆಯ ಕಾಲದಲ್ಲಿ ಧರ್ಮಸಮದೃಷ್ಟಿಯನ್ನು ಹೇಗೆ ಆಚರಣೆಗೆ ತಂದನು ?

ಬುಕ್ಕರಾಯನು ತನ್ನ ಆಳ್ವಿಕೆಯ ಕಾಲದಲ್ಲಿ ಜೈನರಿಗೂ ವೈಷ್ಣವರಿಗೂ ಕಲಹವುಂಟಾದಾಗ ಅದನ್ನು ಸರಿಪಡಿಸಲು ಕೋವಿಲ್ , ತಿರುಮಲೆ , ಪೆರುಮಾಳ್ಕೋವಿಲ್ , ತಿರುನಾರಾಯಣಪುರ ಮುಖ್ಯಕ್ಷೇತ್ರಗಳ ಸಕಾಚಾರ್ಯರು , ಸಕಲ ಧರ್ಮಾನುಯಾಯಿಗಳು , ಸಕಟ ಸಾತ್ವಿಕರು , ಮೋಷಿಕರು , ತಿರುಪಣಿ , ತಿರುವಿಡಿ , ತಣ್ಣೀರವರು , ನಲವತ್ತೆಂಟು ಕುಲದವರು , ಮುಂತಾದವರನ್ನು ಒಳಗೊಂಡ ಹದಿನೆಂಟು ನಾಡಿನವರನ್ನು ಬುಕ್ಕರಾಯನು ಧರ್ಮಸಭೆಗೆ ಆಹ್ವಾನಿಸಿದನು . ವೈಷ್ಣವರ ಕೈಯಲ್ಲಿ ಜೈನರ ಕೈಯನ್ನಿಟ್ಟು ಜೈನಧರ್ಮಕ್ಕೂ ವೈಷ್ಣವಧರ್ಮಕ್ಕೂ ಭೇದವಿಲ್ಲವೆಂದು ಹೇಳಿದನು ಮತ್ತು ಜೈನಧರ್ಮಕ್ಕೆ ಈ ಹಿಂದೆ ಇದ್ದಂತೆ ಪಂಚಮಹಾವಾದ್ಯಗಳು , ಕಲಶವೂ ಸಲ್ಲಬೇಕೆಂದೂ ಭಕ್ತರ ( ವೈಷ್ಣವರ ) ದೆಸೆಯಿಂದ ಜೈನರಿಗೆ ಹಾನಿಯುಂಟಾದರೆ ಅದನ್ನು ವೈಷ್ಣವರು ತಮ್ಮ ಹಾನಿಯೆಂದು ಭಾವಿಸಬೇಕೆಂದು ಹೇಳಿದನು . ಸಮಸ್ತ ರಾಜ್ಯದ ಜೈನಮತದ ಜನಗಳ ಅನುಮತದಿಂದ “ ಬೆಳುಗೊಳದ ರಾಜ್ಯದೊಳಗೆ ಇರುವಂತಹ ಜೈನರ ಬಾಗಿಲು ಕಟ್ಟಳೆಯಾಗಿ ಮನೆಮನೆಗೆ ವರ್ಷಕ್ಕೆ ಒಂದು ಪುಣ್ಯಕ್ಷೇತ್ರದಲ್ಲಿ ವೈಷ್ಣವ ಅಂಗರಕ್ಷೆಗಾಗಿ ಸಮಸ್ತ ಹಣ ಕೊಡುವುದು . ಹಾಗೆ ಸಂಗ್ರಹಿಸಿದ ಆ ಒಂದು ಹಣದಿಂದ ದೇವರ ಅಂಗರಕ್ಷೆಗೆ ಇಪ್ಪತ್ತು ಆಳುಗಳನ್ನು ನೇಮಿಸಿ , ಉಳಿದ ಹೊನ್ನಿನಿಂದ ಜೀರ್ಣಾವಸ್ಥೆಯಲ್ಲಿರುವ ಜಿನಾಲಯಗಳಿಗೆ ಸುಣ್ಣ ಬಳಿಸುವುದು ” ಎಂದು ಶಾಸನ ಬರೆಸಿದನು . ಹೀಗೆ ಧರ್ಮಸಮದೃಷ್ಟಿಯನ್ನು ಆಚರಣೆಗೆ ತಂದನು .

ಈ. ಸಂದರ್ಭ ಸಹಿತ ಸ್ವಾರಸ್ಯ ಬರೆಯಿರಿ.

1. “ ಎಲ್ಲಾ ರಾಜ್ಯದೊಳಗುಳ್ಳಂತಹ ಬಸ್ತಿಗಳಿಗೆ ಶ್ರೀಇಂಗವರು ಶಾಸನವ ನಟ್ಟು ಪಾಲಿಸುವರು “

ಆಯ್ಕೆ : – ಈ ವಾಕ್ಯವನ್ನು ಶ್ರೀ ಬಿ . ಎಂ.ಶ್ರೀ ಅವರು ಸಂಪಾದಿಸಿರುವ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ‘ ಧರ್ಮಸಮದೃಷ್ಟಿ ‘ ಶಾಸನದಿಂದ ಆರಿಸಲಾಗಿದೆ . ಸಂದರ್ಭ : – ರಾಜನಾದವೀರಬುಕ್ಕರಾಯನು ಶ್ರೀವೈಷ್ಣವರು ಹಾಗೂ ಜೈನರ ನಡುವೆ ಸಂಘರ್ಷವುಂಟಾದ ಸಮಯದಲ್ಲಿ ಸಭೆ ಕರೆದು , ಅವರ ಕೈ ಕೈ ಹಿಡಿಸಿ ಸಾಮರಸ್ಯದಿಂದ ಇರುವಂತೆ ಸೂಚಿಸಿದ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .

ಸ್ವಾರಸ್ಯ : – ಶ್ರೀವೈಷ್ಣವರು ಜೈನ ಬಸದಿಗಳನ್ನು ಗೌರವಿಸಬೇಕು ಎಂದು ಶಾಸನ ಬರೆಸಿರುವುದರಲ್ಲಿ ರಾಜನಾದ ವೀರಬುಕ್ಕರಾಯನ ಧರ್ಮಸಮದೃಷ್ಟಿಯನ್ನು ಕಾಣಬಹುದಾಗಿದೆ .

2. “ ಪಾಷಂಡ ಸಾಗರ ಮಹಾಬಡವಾಮುಖಾಗ್ನಿ : ”

ಆಯ್ಕೆ : – ಈ ವಾಕ್ಯವನ್ನು ಶ್ರೀ ಬಿ . ಎಂ.ಶ್ರೀ ಅವರು ಸಂಪಾದಿಸಿರುವ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ‘ ಧರ್ಮಸಮದೃಷ್ಟಿ ‘ ಶಾಸನದಿಂದ ಆರಿಸಲಾಗಿದೆ . ಸಂದರ್ಭ : – ವಿಜಯನಗರ ಸಾಮ್ರಾಜ್ಯದ ರಾಜ ವೀರಬುಕ್ಕರಾಯನ ಕಾಲದ ‘ ಧರ್ಮಸಮದೃಷ್ಟಿ ‘ ಶಾಸನದ ಪ್ರಾರಂಭದಲ್ಲಿ ಶ್ರೀರಾಮಾನುಜಾಚಾರ್ಯರನ್ನು ಸ್ಮರಿಸುವ ಸಂದರ್ಭದಲ್ಲಿ ಶಾಸನಕಾರನು ಈ ಮಾತನ್ನು ಹೇಳುತ್ತಾನೆ .

ಸ್ವಾರಸ್ಯ : – ಸಮುದ್ರ ಮಧ್ಯದಲ್ಲಿ ಬಡಬಾನಲ ಇರುವಂತೆ ನಾಸ್ತಿಕರ ನಡುವೆ ಶ್ರೀರಾಮಾನುಜಾಚಾರ್ಯರು ಆಸ್ತಿಕರಾಗಿ ಶೋಭಿಸುತ್ತಿದ್ದರು ಎಂಬುದನ್ನು ಈ ಮಾತಿನಲ್ಲಿ ಬಹುಸ್ವಾರಸ್ಯಪೂರ್ಣವಾಗಿ ವರ್ಣಿಸಲಾಗಿದೆ .

3. “ ಈ ಮಾಡಿದ ಕಟ್ಟಳೆಯನು ಆವನೊಬ್ಬನು ಮೀರಿದವನು ರಾಜದ್ರೋಹಿಯಪ್ಪನು ”

ಆಯ್ಕೆ : – ಈ ವಾಕ್ಯವನ್ನು ಶ್ರೀ ಬಿ . ಎಂ.ಶ್ರೀ ಅವರು ಸಂಪಾದಿಸಿರುವ ‘ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ‘ ಧರ್ಮಸಮದೃಷ್ಟಿ ‘ ಶಾಸನದಿಂದ ಆರಿಸಲಾಗಿದೆ . ಸಂದರ್ಭ : – ರಾಜನಾದವೀರಬುಕ್ಕರಾಯನು ಶ್ರೀವೈಷ್ಣವರು ಹಾಗೂ ಜೈನರ ನಡುವೆ ಸಂಘರ್ಷವುಂಟಾದ ಸಮಯದಲ್ಲಿ ಸಭೆ ಕರೆದು , ಅವರ ಕೈಕೈ ಹಿಡಿಸಿ ಸಾಮರಸ್ಯದಿಂದ ಇರುವಂತೆ ಸೂಚಿಸಿ ಶಾಸನ ಮಾಡಿದ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .

ಸ್ವಾರಸ್ಯ : – ರಾಜನು ಮಾಡಿದ ಶಾಸನವನ್ನು ಯಾರು ಮೀರಬಾರದು : ಮೀರಿದರೆ ಅವರಿಗೆ ರಾಜದ್ರೋಹಿಗೆ ಆಗುವ ಶಿಕ್ಷೆಯು ಆಗುತ್ತದೆ ಎಂಬ ಎಚ್ಚರಿಕೆಯನ್ನು ಈ ಮಾತಿನಲ್ಲಿ ಕಾಣಬಹುದಾಗಿದೆ .

4 “ ಮಿಕ್ಕ ಹೊನ್ನಿಂಗೆ ಜೀರ್ಣಜಿನಾಲಯಂಗಳಿಗೆ ಸೊದೆಯನಿಕ್ಕುವುದು . ”

ಆಯ್ಕೆ : – ಈ ವಾಕ್ಯವನ್ನು ಶ್ರೀ ಬಿ.ಎಂ.ಶ್ರೀ ಅವರು ಸಂಪಾದಿಸಿರುವ ‘ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ‘ ಧರ್ಮಸಮದೃಷ್ಟಿ ‘ ಶಾಸನದಿಂದ ಆರಿಸಲಾಗಿದೆ . ಸಂದರ್ಭ : – ರಾಜನಾದ ವೀರಬುಕ್ಕರಾಯನು ಜೈನಧರ್ಮದ ಸುಧಾರಣೆಗಾಗಿ ಕೈಗೊಳ್ಳಬೇಕಾದ ಕಾರ್ಯಗಳನ್ನು ಸೂಚಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .

ಸ್ವಾರಸ್ಯ : – ಜೀರ್ಣಾವಸ್ಥೆಯಲ್ಲಿರುವ ಜಿನಾಲಯಗಳಿಗೆ ಸುಣ್ಣ ಬಳಿದು ಪುನಶ್ವೇತನಗೊಳಿಸಬೇಕು ಎಂಬ ವಿಶಾಲ ಮನೋಭಾವನೆಯನ್ನು ಈ ಮಾತಿನಲ್ಲಿ ಕಾಣಬಹುದಾಗಿದೆ .

1 ] ತತ್ಸಮ – ತದ್ಭವಗಳು

1 ) ವರ್ಷ – ವರುಷ

2 ) ಲೋಕ – ರೋಗ

3 ) ವೀರ – ಬೀರ

4 ) ಸಾಮಂತ – ಸಾವಂತ

5 ) ತಟ – ದಡ

6 ) ಮುಖ – ಮೊಗ

7 ) ಶ್ರೀ – ಸಿರಿ

8 ) ಮಂಟಪ – ಮಂಡಪ

9 ) ಭಕ್ತ – ಬಕುತ

10 ) ದಿಶಾ – ದೆಸೆ

11 ) ಸುಧೆ – ಸೋಧೆ

12) ದೃಷ್ಟಿ – ದಿಟ್ಟಿ

2 ) ಕೊಟ್ಟಿರುವ ಪದಗಳನ್ನು ಬಿಡಿಸಿ ಸಂಧಿ ಹೆಸರಿಸಿ ,

 ಚರಣಾಂಬುಜ , ಮಂಡಳೇಶ್ವರ , ಸಕಳಾಚಾರ , ಭೇದವಿಲ್ಲ . ಕೈವಿಡಿದು , ವೃದ್ದಿಯಾಗಿ , ಭೇದವಾಗಿ , ಕಾಣಲಾಗದು . ಜಿನಾಲಯ , ತಪ್ಪಲೀಯದೆ , ಚಂದ್ರಾರ್ಕ ಚರಣಾಂಬುಜ

ಚರಣಾಂಬುಜ ಚರಣ +ಅಂಬುಜಸವರ್ಣದೀರ್ಘ ಸಂಧಿ
ಮಂಡಳೇಶ್ವರ ಮಂಡಳ +ಈಶ್ವರ     ಗುಣಸಂಧಿ
ಸರಳಾಚಾರ್ಯಸರಳ+ಆಚಾರ್ಯಸವರ್ಣದೀರ್ಘ ಸಂಧಿ
ಭೇದವಿಲ್ಲಭೇದ +ಇಲ್ಲ         ವಕಾರಾಗಮ ಸಂಧಿ
ಕೈವಿಡಿದಕೈ+ಪಿಡಿದುವಕಾರಾಗಮ ಸಂಧಿ
ವೃದ್ಧಿಯಾಗಿವೃದ್ದ +ಆಗಿಯಕಾರಾಗಮ ಸಂಧಿ
ಭೇದವಾಗಿಭೇದ +ಆಗವಕಾರಾಗಮ ಸಂಧಿ
ಕಾಣಲಾಗದುಕಾಣಲು+ಆಗದುಲೋಪಸಂಧಿ
ಜಿನಾಲಯಜಿನ +ಆಲಯಸವರ್ಣದೀರ್ಘ ಸಂಧಿ
ತಪ್ಪಲೀಯದೆತಪ್ಪಲು +ಈಯದೆಲೋಪಸಂಧಿ
ಚಂದ್ರಾರ್ಕಚಂದ್ರ +ಅರ್ಕಸವರ್ಣದೀರ್ಘ ಸಂಧಿ

9ನೇ ತರಗತಿ ಕನ್ನಡ ಧರ್ಮಸಮದೃಷ್ಟಿ ಪ್ರಶ್ನೋತ್ತರಗಳು ನೋಟ್ಸ್‌, 9th Standard Kannada Dharma Samadrusti Question Answer Notes Pdf

ಇತರೆ ಪಾಠಗಳು:

ಕನ್ನಡ ಮೌಲ್ವಿ ಪಾಠದ ನೋಟ್ಸ್

ಬೆಡಗಿನ ತಾಣ ಜಯಪುರ ಕನ್ನಡ ನೋಟ್ಸ್

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.