9ನೇ ತರಗತಿ ಬೆಡಗಿನ ತಾಣ ಜಯಪುರ ಕನ್ನಡ ನೋಟ್ಸ್ | 9th Standard Bedagina Tana Jayapura Kannada Notes

9ನೇ ತರಗತಿ ಬೆಡಗಿನ ತಾಣ ಜಯಪುರ ಕನ್ನಡ ನೋಟ್ಸ್ ಪ್ರಶ್ನೆ ಉತ್ತರಗಳು, 9th Standard Bedagina Tana Jayapura Notes in Kannada Question Answer Pdf Download

ತರಗತಿ : 9 ನೇ ತರಗತಿ

ಪಾಠದ ಹೆಸರು : ಬೆಡಗಿನ ತಾಣ ಜಯಪುರ

ಕೃತಿಕಾರರ ಹೆಸರು : ಶಿವರಾಮ ಕಾರಂತ

Table of Contents

ಕೃತಿಕಾರರ ಪರಿಚಯ :

ಶಿವರಾಮ ಕಾರಂತ

ಶಿವರಾಮ ಕಾರಂತರು ( ಕ್ರಿಸ್ತ ಶಕ ೧೯೦೨ ) ಉಡುಪಿ ಜಿಲ್ಲೆಯ ಕೋಟದವರು , ಇವರ ಪ್ರಮುಖ ಕೃತಿಗಳು : ಕಾದಂಬರಿಗಳು : ಚೋಮನದುಡಿ , ಮರಳಿಮಣ್ಣಿಗೆ , ಬೆಟ್ಟದಜೀವ , ಅಳಿದಮೇಲೆ ಮುಂತಾದವು . ಕಥಾಸಂಕಲನಗಳು : ಹಸಿವು , ಹಾವು , ಕವಿ , ಕರ್ಮ , ಕವನ ಸಂಕಲನಗಳು : ರಾಷ್ಟ್ರಗೀತ ಸುಧಾಕರ ಮತ್ತು ಸೀಲ್ಕವನಗಳು , ಪ್ರವಾಸ ಕಥನಗಳು : ಅಬುವಿನಿಂದ ಬರಾಮಕ್ಕೆ , ಅಪೂರ್ವ ಪಶ್ಚಿಮ , ಅರಸಿಕರಲ್ಲ , ಪಾತಾಳಕ್ಕೆ ಪಯಣ , ಈ ಕೃತಿಗಳಲ್ಲದೆ ಹುಚ್ಚು ಮನಸ್ಸಿನ ಹತ್ತು ಮುಖಗಳು ಎಂಬ ಆತ್ಮಕಥನ , ಯಕ್ಷಗಾನ ಬಯಲಾಟ – ಜಾನಪದ ಸಾಹಿತ್ಯ ಮುಂತಾದ ಕೃತಿಗಳನ್ನು ರಚಿಸಿದ್ದಾರೆ . ಇವರಿಗೆ ಲಕಭಿಸಿರುವ ಪ್ರಶಸ್ತಿ ಪುರಸ್ಕಾರಗಳು : . ಮೂಕಜ್ಜಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ , * ಯಕ್ಷಗಾನ ಬಯಲಾಟ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ . ಮೈಮನಗಳ ಸುಳಿಯಲ್ಲಿ ಕೃತಿಗೆ ಪಂಪ ಪ್ರಶಸ್ತಿ ಲಭಿಸಿದೆ . * ಇವರು ೧೯೫೫ ರಲ್ಲಿ ಮೈಸೂರಿನಲ್ಲಿ ನಡೆದ ೩೭ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು . [ ಪ್ರಸ್ತುತ ಗದ್ಯವನ್ನು ಅಬುವಿನಿಂದ ಬರಾಮಕ್ಕೆ ಕೃತಿಯಿಂದ ಆರಿಸಿಕೊಳ್ಳಲಾಗಿದೆ . ]

ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯಗಳಲ್ಲಿ ಉತ್ತರಿಸಿ ,

1. ಜಯಪುರದ ಜನರಿಗೆ ಯಾವ ಯಾವ ಬಣ್ಣಗಳು ಇಷ್ಟ ?

ಉತ್ತರ : ಜಯಪುರದ ಜನರಿಗೆ ಕೆಂಪು , ಕಿತ್ತಳೆ , ಹಳದಿ ಬಣ್ಣಗಳು ಇಷ್ಟ .

2. ಜಯಪುರದ ಪೂರ್ವದ ರಾಜಧಾನಿ ಯಾವುದು ?

ಉತ್ತರ : ಜಯಪುರದ ಪೂರ್ವದ ರಾಜಧಾನಿ ಅಂಬೇರ ವಿಗೆ

3. ಲೇಖಕರಿಗಿದ್ದ ಹಂಬಲವೇನು ?

ಉತ್ತರ : ಜಯಪುರದಲ್ಲಿ ಜಾನಪದ ನೃತ್ಯಗಳನ್ನು ನೋಡಬೇಕೆಂಬುದು ಲೇಖಕರ ಹಂಬಲವಾಗಿತ್ತು ,

4. ರೈಗಳ ಮನೆ ಎಂಥ ಪ್ರದೇಶದಲ್ಲಿತ್ತು ?

ಉತ್ತರ : ಹೊರಗಡೆ ನಾಲ್ಕು ಸುತ್ತಲೂ ಉಸುಬು ಹರಡಿದ್ದ ಮರುಭೂಮಿಯಲ್ಲಿ ರೈಗಳ ಮನೆಯಿತ್ತು .

5. ಲೇಖಕರಿಗೆ ಜಯಪುರದ ಮನೆಗಳ ಮೇಲೆ ಮೋಹವೇಕೆ ?

ಉತ್ತರ : ಜಯಪುರದಲ್ಲಿನ ಒಂದೊಂದು ಮನೆಯೂ ಒಂದೊಂದು ಶೈಲಿಯದೂ ಒಂದೊಂದು ದೇಶದ್ದೂ ಆಗಿ ಕಾಣಿಸುವುದಿಲ್ಲ . ಆದುದರಿಂದಲೇ ಲೇಖಕರಿಗೆ ಅವುಗಳ ಮೇಲೆ ಮೋಹ

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.

1 , ಮೀರಾಬಾಯಿ ದೇವಾಲಯದ ಸೌಂದರ್ಯವನ್ನು ವಿವರಿಸಿ ,

ಉತ್ತರ : ಅಂಬೇರ ಕೋಟೆಯ ಆವರಣದ ಹಿಂದುಗಡೆ ಇರುವ ತಗ್ಗಿನ ಕಣಿವೆಯ ತಳದಲ್ಲಿ ಮೀರಾಬಾಯಿಯ ದೇವಾಲಯವಿದೆ . ಆಕೆ ಗಿರಿಧರನಾಗರನನ್ನು ಪೂಜಿಸಿದ ಸ್ಥಳವದು . ಕೆಳಗಿಳಿದು ಹೋಗಿ ಗುಡಿಯನ್ನು ನೋಡಿದರೆ ಅದರ ಸೊಬಗು ಚೆನ್ನಾಗಿ ಕಾಣುತ್ತದೆ . ಅಲ್ಲಿ ನಕ್ಷತ್ರಾಕೃತಿಯನ್ನು ತುಂಬಿಕೊಂಡ ಗರ್ಭಗೃಹ , ನವರಂಗಗಳಿವೆ .

2. ಲೇಖಕರು ನೋಡಿದ ಜನಪದ ನೃತ್ಯದ ಸೊಬಗನ್ನು ಚಿತ್ರಿಸಿ ,

ಉತ್ತರ : ಅದು ಊರಿನ ಜನಸಾಮಾನ್ಯರ ನೃತ್ಯವಾಗಿತ್ತು . ಇಬ್ಬರು ಯೌವನಸ್ಥರು ಸ್ತ್ರೀಯರ ಉಡುಗೆ ಉಟ್ಟಿದ್ದರು . ಮಾರವಾಡಿ ಸ್ತ್ರೀಯರಂತೆ ತಲೆಗೆ ಸೆರಗು ಹಾಕಿಕೊಂಡು , ಮುಖತೋರಿಸದೆ ಕುಣಿಯತೊಡಗಿದರು . ಹಿಮ್ಮೇಳಕ್ಕೆ ಡೋಲು ತಮಟೆಗಳಿದ್ದವು . ಮುಂಭಾಗದಲ್ಲಿ ಸ್ತ್ರೀವೇಷದ ನರ್ತಕರು ನರ್ತಿಸತೊಡಗಿದರು . ಅವರ ಕಾಲಿನ ನಡಿಗೆಯಲ್ಲೂ ಕೈಗಳ ಚಲನೆಯಲ್ಲೂ ಜಾ ಚೆಲುವುಗಳೆರಡೂ ಇದ್ದವು .

3. ಜಯಪುರದ ಬೀದಿ ಹಾಗೂ ಮನೆಗಳ ಸೌಂದರ್ಯವನ್ನು ವರ್ಣಿಸಿ ,

ಉತ್ತರ : ಜಯಪುರ ನಗರದ ಬೀದಿಗಳು ಬಹಳ ಅಗಲವಾಗಿಯೂ ನೇರವಾಗಿಯೂ ಇವೆ . ಬಹುದೂರದಿಂದ ಕಾಣಿಸುವ ಅಂಗಡಿ ಮನೆಗಳ ದೇಶೀ ವಾಸ್ತುರಚನೆ ಚೆನ್ನಾಗಿ ಶೋಭಿಸುತ್ತದೆ . ಅಲ್ಲಿನ ಒಂದೊಂದು ಮನೆಯೂ ಒಂದೊಂದು ಶೈಲಿಯದೂ ಒಂದೊಂದು ದೇಶದ್ದೂ ಆಗಿ ಕಾಣಿಸುವುದಿಲ್ಲ . ಅಲ್ಲಿನ ಮುಖ್ಯ ಬೀದಿಗಳು ಸಂಧಿಸುವಲ್ಲಿ ಸುಂದರವಾದ ಚೌಕಗಳಿವೆ . ಕೆಲವೊಂದು ಕಡೆಗಳಲ್ಲಿ ಭವ್ಯವಾದ ಮಹಾದ್ವಾರಗಳಿವೆ .

4. ಲೇಖಕರ ಮೊದಲ ಅಂಬೇರ ಭೇಟಿಗೂ ಇತ್ತೀಚಿನ ಭೇಟಿಗೂ ಯಾವ ವ್ಯತ್ಯಾಸವಿತ್ತು ?

ಉತ್ತರ : ಲೇಖಕರು ಹಿಂದೆ ಅಂಬೇರಕ್ಕೆ ಹೋಗಿದ್ದಾಗ ಅಲ್ಲಿ ಜನವಸತಿ ಇದ್ದಿರಲಿಲ್ಲ . ಆಗ ಅಲ್ಲಿನ ಹಲವಾರು ಪ್ರಾಚೀನ ಗುಡಿಗೋಪುರಗಳು ಗೂಬೆಯ ಮನೆಗಳಾಗಿದ್ದವು . ಆದರೆ ಈಗ ಹಾಗಿಲ್ಲ : ನೂರಾರು ಸಿಂಧಿ ಕುಟುಂಬಗಳು ಅಲ್ಲಿ ಮನೆ ಮಾಡಿಕೊಂಡಿವೆ .

ಇ ] ಕೊಟ್ಟಿರುವ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ .

1. ಅಂಬೇರ ಬೆಟ್ಟದ ಮೂರು ಅಂತಸ್ತಿನ ಅರಮನೆಯ ಒಳಾಂಗಣ ಚೆಲುವನ್ನು ತಿಳಿಸಿ .

ಉತ್ತರ : ಅರಮನೆಯ ಮೊದಲ ಅಂತಸ್ತಿನಲ್ಲಿ ಚಿತ್ರ ಕೆಲಸಗಳಿಂದ ಕೂಡಿದ ಹಾಲುಗಲ್ಲಿನ ರಚನೆಯಿಂದ ಕೂಡಿದ ಪುಟ್ಟ ದೇವಾಲಯವಿದೆ . ಅದರ ಗೋಡೆ , ನೆಲ , ಸ್ತಂಭಗಳೂ ಹಾಲುಗಲ್ಲಿನವು . ಮೇಲಿನ ಅಂಗಳವನ್ನೇರಿ ಹೋದರೆ ಅಲ್ಲಿ ದೊಡ್ಡದಾದ , ವಿಶಾಲವಾದ ಹಾಲುಗಲ್ಲಿನ ಸಭಾಂಗಣ ಕಂಡುಬರುತ್ತದೆ . ಅದರ ಚಾವಣಿ , ರಜಪುತಾನದ ಶೈಲಿಯ ಕಮಾನು ಮತ್ತು ಕಂಬಗಳು ತುಂಬ ಲಲಿತವಾಗಿದ್ದು , ಪರಸ್ಪರ ಹೊಂದಿಕೊಂಡು ಸುಂದರವಾಗಿ ಕಾಣುತ್ತದೆ . ಎದುರಿನ ಅಂಗಣವೂ ಸಾಕಷ್ಟು ವಿಶಾಲವಾಗಿದೆ . ಅಲ್ಲಿಂದ ಮೂರನೆಯ ಅಂತಸ್ತಿಗೆ ಹೋದರೆ ರಾಜರ ಅಂತಃಪುರವಿದ್ದು ಅಲ್ಲಿನ ಕೆಲವು ಭಾಗಗಳಲ್ಲಿ ಚಂದ್ರಕಾಂತ ಶಿಲೆಯ ಸುಂದರ ಮಂಟಪಗಳಿವೆ . ಶಿಲೆಯನ್ನು ಕೆತ್ತಿ ಬಣ್ಣದ ಕಲ್ಲುಗಳಿಂದ ಕೊರೆದು ತುಂಬಿಸಿದ ಲತಾಪುಷ್ಪಗಳ ಚಿತ್ರಾವಳಿಗಳೂ ಇವೆ . ಇನ್ನೊಂದೆರಡು ಚಾವಡಿಗಳು ಕನ್ನಡಿಯ ಚೂರುಗಳನ್ನು ಸುಣ್ಣದ ಗಾರೆಯಲ್ಲಿ ಅಂಟಿಸಿ , ಚಿತ್ರವಿಚಿತ್ರ ಪ್ರತಿರೂಪಗಳನ್ನು ನಿರ್ಮಿಸಿ ಅಲಂಕರಿಸಲ್ಪಟ್ಟಿವೆ . ಕತ್ತಲಿನಲ್ಲಿ ದೀವಿಗೆ ಹೊತ್ತಿಸಿದಾಗ ಆ ಲಕೋಪಲಕ್ಷ ಗಾಜಿನ ತುಣುಕುಗಳು ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಡುತ್ತವೆ .

2. ಜಯಪುರದ ಜನರಿಗೆ ಬಣ್ಣಗಳ ಬಗೆಗೆ ಇರುವ ಮೋಹವನ್ನು ತಿಳಿಸಿ ,

ಉತ್ತರ : ಜಯಪುರ ಬಣ್ಣಗಾರರ ತವರೂರು , ಬಣ್ಣ ಹಾಕುವ ಕುಶಲಿಗರು ಆ ಊರಿನಲ್ಲಿ ಬಹಳ ಮಂದಿ ಇದ್ದಾರೆ . ಬಣ್ಣದ ಮೋಹವಿರುವ ಜನರೂ ಬಹಳ ಇದ್ದಾರೆ . ಗಿಡಮರಗಳಿಲ್ಲದ ಸ್ಥಳದಲ್ಲಿ ವಾಸಿಸುವ ಜನರಿಗೆ , ಕಣ್ಣಿನ ತಣಿವು ಹೇಗೆ ಬರಬೇಕು ? ಹಾಗೆಂದೇ ಇಲ್ಲಿನ ಜನರು ಅದರಲ್ಲೂ ಹೆಂಗಸರೂ ರಂಗುರಂಗಿನ ಲಂಗ , ಪಾಯಿಜಾಮಾ , ಸೀರೆ , ರವಿಕೆ , ಮೇಲುದೆ ತೊಡುವ ಅಭ್ಯಾಸದವರು . ಅವರಿಗೆ ಕೆಂಪು , ಕಿತ್ತಳೆ , ಹಳದಿ ಎಂದರೆ ಪ್ರಾಣ . ನಿತ್ಯವೂ ಹೋಳಿ ಹುಣ್ಣಿಮೆ ಮಾಡುವವರಂತೆ ಬಣ್ಣದ ಚೆಲ್ಲಾಟ ಅವರ ಬಟ್ಟೆಗಳಲ್ಲಿ , ಗಂಡಸರೂ ರಂಗುರಾಯರೇ . ಅವರ ಪಂಚೆ , ಅಂಗಿಗಳಲ್ಲಿ ರಂಗು ಕಾಣಿಸದಿದ್ದರೂ ಮುಂಡಾಸಿನ ಮೂವತ್ತು ಮೊಳಗಳಲ್ಲಿ ಮುನ್ನೂರು ಬಣ್ಣಗಳನ್ನು ಮೆರೆಯಿಸುವುದುಂಟು . ಸುತ್ತುಸುತ್ತಿನ ಅವರ ದೇಶೀ ಮುಂಡಾಸನ್ನು ಚೆನ್ನಾಗಿ ಬಿಗಿದುಕೊಂಡಾಗ ಬಲು ಗಂಭೀರವಾಗಿಯೇ ಕಾಣಿಸುತ್ತದೆ .

3. ಜಂತ್ರ ಮಂತ್ರದ ವಿಶೇಷತೆಯನ್ನು ಪರಿಚಯ ಮಾಡಿಕೊಡಿ .

ಉತ್ತರ : ‘ ಜಂತ್ರ ಮಂತ್ರ ‘ ಹಳೆಯ ಕಾಲದ ಖಗೋಳವಿಜ್ಞಾನದ ಪರಿಶೀಲನಾಲಯ , ೪೦೦-೫೦೦ ವರ್ಷಗಳ ಪೂರ್ವದಲ್ಲಿ ಖಗೋಳಶಾಸ್ತ್ರಜ್ಞರು , ಗ್ರಹ , ಸೂರ್ಯ ಚಂದ್ರ , ತಾರಾಮಂಡಲಗಳನ್ನು ಅಳೆದು ಪರಿಶೀಲಿಸಿ ನೋಡುವ ಸಲುವಾಗಿ , ಅಲ್ಲಿ ವಿಚಿತ್ರವಾದ ಸಾಧನಗಳನ್ನು ನೆಟ್ಟಿದ್ದಾರೆ . ಅಂತಹ ಹತ್ತೆಂಟು ವಿಧದ ಸಾಧನಗಳ ವಿಚಿತ್ರ ರಚನೆಗಳಿವೆ . ಗಳಿಗೆ ಅಳೆಯುವುದಕ್ಕೆ ಪ್ರತಿಯೊಂದು ತಿಂಗಳಿನಲ್ಲೂ ಸೂರ್ಯ , ನಕ್ಷತ್ರಗಳ ಗತಿ ಪರಿಶೀಲಿಸುವುದಕ್ಕೆ ಏನೇನೋ ಏರ್ಪಾಟುಗಳಿವೆ . ಪ್ರತಿಯೊಂದು ಸಾಧನದ ಮೇಲೂ ಅವುಗಳ ಉಪಯೋಗ ಮತ್ತು ಕಾಲವನ್ನು ಅಳೆಯುವ ರೀತಿ ಮೊದಲಾದುವನ್ನು ನಮೂದಿಸಿದೆ . ದೂರದರ್ಶಕ ಯಂತ್ರದ ಸಹಾಯವಿಲ್ಲದೆ , ಬರಿಗಣ್ಣಿನಿಂದಲೇ ಖಗೋಳದ ಗ್ರಹಗಳ ಗತಿಯನ್ನು ಅಳೆಯಲು ಮಾಡಿದ ಈ ಸಾಧನಗಳು ಗಣಿತಕ್ಕೂ ಸೂಕ್ಷ್ಮ ಪರಿಶೀಲನೆಗೂ ಹಿರಿಯರು ಸಲ್ಲಿಸಿದ ಕಾಣಿಕೆ .

ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,

1. “ ಪ್ರಾಚೀನ ಗುಡಿಗೋಪುರಗಳು ಗೂಬೆಯ ಮನೆಗಳಾಗಿದ್ದವು ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಶಿವರಾಮಕಾರಂತರು ಬರೆದಿರುವ ಅಬುವಿನಿಂದ ಬರಾಮಕ್ಕೆ ‘ ಕೃತಿಯಿಂದ ಆರಿಸಲಾಗಿರುವ ಬೆಡಗಿನ ತಾಣ ಜಯಪುರ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಲೇಖಕರು ಹದಿನೈದು ವರ್ಷಗಳ ಹಿಂದೆ ಜಯಪುರದ ಸಮೀಪದ ಅಂಬೇರಾಕ್ಕೆ ಭೇಟಿ ನೀಡಿದ್ದಾಗ ಅಲ್ಲಿ ಜನವಸತಿ ಇರಲಿಲ್ಲ . ಅಂದಿಗೂ ಇಂದಿಗೂ ಅಲ್ಲಿ ಉಂಟಾಗಿರುವ ಬದಲಾವಣೆಯನ್ನು ವಿವರಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ . ಹಿಂದೆ ಅಲ್ಲಿನ ಹಲವಾರು ಪ್ರಾಚೀನ ಗುಡಿಗೋಪುರಗಳು ಗೂಬೆಯ ಮನೆಗಳಾಗಿದ್ದವು , ಆದರೆ ಈಗ ಹಾಗಿಲ್ಲ : ನೂರಾರು ಸಿಂಧೀ ಕುಟುಂಬಗಳು ಅಲ್ಲಿ ಮನೆ ಮಾಡಿಕೊಂಡಿವೆ ‘ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ .

ಸ್ವಾರಸ್ಯ : ಅಂದು ಜನವಸತಿ ಇಲ್ಲದೆ ಪ್ರಾಚೀನ ಗುಡಿಗೋಪುರಗಳು ಪಾಳುಬಿದ್ದಿದ್ದವು . ಆದರೆ ಆಧುನಿಕತೆಯ ಪ್ರಭಾವದಿಂದ ಈಗ ಅಲ್ಲಿ ಜನಸಂದಣಿ ಇದೆ ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ .

2. “ ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಡುತ್ತವೆ “

ಉತ್ತರ : ಆಯ್ಕೆ : ಈ ವಾಕ್ಯವನ್ನು ಶಿವರಾಮಕಾರಂತರು ಬರೆದಿರುವ ‘ ಅಬುವಿನಿಂದ ಬರಾಮಕ್ಕೆ ‘ ಕೃತಿಯಿಂದ ಆರಿಸಲಾಗಿರುವ ಬೆಡಗಿನ ತಾಣ ಜಯಪುರ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಅಂಬೇರ ಕೋಟೆಯಲ್ಲಿರುವ ಅರಮನೆಯ ಮೂರನೆಯ ಅಂತಸ್ತಿನಲ್ಲಿ ಕೆಲವು ಚಾವಡಿಗಳಲ್ಲಿ ಕನ್ನಡಿಯ ಚೂರುಗಳನ್ನು ಸುಣ್ಣದ ಗಾರೆಯಲ್ಲಿ ಅಂಟಿಸಿ , ಚಿತ್ರವಿಚಿತ್ರ ಪ್ರತಿರೂಪಗಳನ್ನು ನಿರ್ಮಿಸಿ ಅಲಂಕರಿಸಿದಂತಹ ಕಂಬ , ಮುಚ್ಚಿಕೆಗಳುಳ್ಳ ರಚನೆಯನ್ನು ಕುರಿತು ತಿಳಿಸುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ . ಅಂತಹ ರಚನೆಗಳಿರುವೆಡೆ ಕತ್ತಲಿನಲ್ಲಿ ದೀವಿಗೆ ಹೊತ್ತಿಸಿದಾಗ , ಲಕ್ಷ್ಮೀಪಲಕ್ಷ ಗಾಜಿನ ತುಣುಕುಗಳು ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಡುತ್ತವೆ . ಎಂದು ವರ್ಣಿಸಿದ್ದಾರೆ .

ಸ್ವಾರಸ್ಯ : ಜಯಪುರವನ್ನು ಆಳಿದ ರಜಪೂತ ದೊರೆಗಳ ಕಲಾ ರಸಿಕತೆ ಹಾಗು ಅವರು ಕಲೆಗೆ ನೀಡಿದ ನೀಡಿದ ಪ್ರೋತ್ಸಾಹ ಲೇಖಕರ ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .

3. “ ಅಲ್ಲಿ ಮಧ್ಯಾಹ್ನ ವೇಳೆ ಸ್ನಾನಕ್ಕೆ ನೀರು ಕಾಯಿಸುವ ಅಗತ್ಯವಿಲ್ಲ . ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಶಿವರಾಮಕಾರಂತರು ಬರೆದಿರುವ ‘ ಆಬುವಿನಿಂದ ಬರಾಮಕ್ಕೆ ಕೃತಿಯಿಂದ ಆರಿಸಲಾಗಿರುವ ‘ ಬೆಡಗಿನ ತಾಣ ಜಯಪುರ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕಾರಂತರು ಜಯಪುರದಲ್ಲಿದ್ದ ತಮ್ಮ ಸ್ನೇಹಿತರಾದ ರೈಯವರ ಮನೆಗೆ ಹೋದಾಗ ಅಲ್ಲಿ ತಾವು ಬಿಸಿನೀರಿನ ಸ್ನಾನ ಮಾಡಿದ ಬಗ್ಗೆ ತಿಳಿಸುವ ಸಂದರ್ಭದಲ್ಲಿ ಹೀಗೆ ಹೇಳಿದ್ದಾರೆ . “ ರೈಯವರ ಮನೆ ಸುತ್ತಲೂ ಮರಳು ಹರಡಿದ್ದ ಮರುಭೂಮಿಯಲ್ಲಿತ್ತು . ಅಲ್ಲಿ ಮಧ್ಯಾಹ್ನ ವೇಳೆ ಸ್ನಾನಕ್ಕೆ ನೀರು ಕಾಯಿಸುವ ಅಗತ್ಯವಿಲ್ಲ . ಏಕೆಂದರೆ ಉಸುಬಿನ ಕಾವಿನಿಂದ ನಲ್ಲಿಯ ನೀರು ಕಾದೇ ಬರುತ್ತಿತ್ತು ” ಎಂದು ಹೇಳಿದ್ದಾರೆ .

ಸ್ವಾರಸ್ಯ : ಮರುಭೂಮಿಯಲ್ಲಿ ವಾಸಿಸುವವರ ಜೀವನ ಶೈಲಿಯ ಮೇಲೆ ಅಲ್ಲಿನ ವಾಯುಗುಣ ಬೀರುವ ಪ್ರಭಾವ ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .

4. “ ಗಂಡಸರೂ ರಂಗುರಾಯರೇ ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಶಿವರಾಮಕಾರಂತರು ಬರೆದಿರುವ ‘ ಅಬುವಿನಿಂದ ಬರಾಮಕ್ಕೆ ಕೃತಿಯಿಂದ ಆರಿಸಲಾಗಿರುವ ಬೆಡಗಿನ ತಾಣ ಜಯಪುರ ‘ ಎ೦ಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಲೇಖಕರು ಜಯಪುರದ ಜನರಿಗಿರುವ ಬಣ್ಣಗಳ ವ್ಯಾಮೋಹವನ್ನು ವರ್ಣಿಸುವ ಸಂದರ್ಭದಲ್ಲಿ ಹೀಗೆ ಹೇಳಿದ್ದಾರೆ . ಜಯಪುರದ ಜನರು ಅದರಲ್ಲೂ ಹೆಂಗಸರೂ ರಂಗುರಂಗಿನ ಲಂಗ , ಪಾಯಿಜಾಮಾ , ಸೀರೆ , ರವಿಕೆ , ಮೇಲುದೆ ತೊಡುವ ಅಭ್ಯಾಸದವರು : ಅದರಲ್ಲೂ ಕೆಂಪು , ಕಿತ್ತಳೆ , ಹಳದಿ ಎಂದರೆ ಪ್ರಾಣ , ಗಂಡಸರೂ ರಂಗುರಾಯರೇ , ಅವರ ಪಂಚೆ , ಅಂಗಿಗಳಲ್ಲಿ ರಂಗು ಕಾಣಿಸದಿದ್ದರೂ ಮುಂಡಾಸಿನ ಮೂವತ್ತು ಮೊಳಗಳಲ್ಲಿ ಮುನ್ನೂರು ಬಣ್ಣಗಳನ್ನು ಮೆರೆಯಿಸುತ್ತಾರೆ . ಎಂದು ಲೇಖಕರು ವರ್ಣಿಸಿದ್ದಾರೆ .

ಸ್ವಾರಸ್ಯ : ಜಯಪುರದಲ್ಲಿ ಬಣ್ಣದ ವ್ಯಾಮೋಹ ಹೊಂದಿರುವುದರಲ್ಲಿ ಹೆಂಗಸರಷ್ಟೇ ಅಲ್ಲ ಗಂಡಸರೂ ಮುಂದಿದ್ದಾರೆ ಎಂಬುದು ಲೇಖಕರ ಮಾತಿನ ಸ್ವಾರಸ್ಯವಾಗಿದೆ .

ಉ ) ಬಿಟ್ಟ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಲ ,

I ಜಯಪುರ ಬಣ್ಣಗಾರರ ತವರೂರು

2 , ಚಿತ್ರಕೊರೆದು ಮಾಡಿದ ಹಾಲುಗಲ್ಲಿನ ನೀರ ಕಾಲುವೆಗಳು ,

3 , ರಾಜರ ಅಂತಃಪುರದ ಕೆಲವು ಭಾಗಗಳಲ್ಲಿ ಚಂದ್ರಕಾಂತ ಶಿಲೆಯ ಸುಂದರ ಮಂಟಪಗಳಿವೆ .

4. ಹಿಮ್ಮೇಳಕ್ಕೆ ಡೋಲು ತಮಟೆಗಳಿದ್ದವು .

5. ಮಿತ್ರ ರೈಗಳ ಸತ್ಕಾರಕ್ಕೆ ವಂದನೆ ಸಲ್ಲಿಸಿದೆವು

ಸರಿ ಉತ್ತರಗಳು

1 , ತವರೂರು ,

2 , ಹಾಲುಗಲ್ಲಿನ

3 , ಚಂದ್ರಕಾಂತ ಶಿಲೆಯ

4 ,ಡೋಲು

5 , ಸತ್ಕಾರಕ್ಕೆ

ಊ) ಹೊಂದಿಸಿ ಬರೆಯಿರಿ

ಅ ಪಟ್ಟಿಆ ಪಟ್ಟಿಸರಿ ಉತ್ತರಗಳು
1 , ಅಂಬೇರ     ಸುವರ್ಣ ದೀರ್ಘಸಂದಿ   ಪೂರ್ವದ ರಾಜಧಾನಿ
2 , ಲಕ್ಷೇಪಲಕ್ಷತತ್ಸಮ ಗುಣಸಂಧಿ
3. ಬಣ್ಣಬಣ್ಣಪೂರ್ವದ ರಾಜಧಾನಿ   ಖಗೋಳ ವೀಕ್ಷಣಾಲಯ
4 ಜಂತ್ರ ಮಂತ್ರ   ದ್ವಿರುಕ್ತಿ    ತತ್ಸಮ
ಮಂತ್ರವಾದಿ

ಭಾಷಾ ಚಟುವಟಿಕೆ

ಅ, ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ ,

1 ಸಂಸ್ಕೃತ ಸಂಧಿ ಎಂದರೇನು ? ಅದರ ವಿಧಗಳಾವುವು ?

ಉತ್ತರ : ಸಂಸ್ಕೃತ ಪದಗಳೇ ಸೇರಿ ಸಂಧಿಯಾದರೆ ಅವುಗಳನ್ನು ಸಂಸ್ಕೃತಸಂಧಿ ಎಂದು ಕರೆಯಲಾಗುತ್ತದೆ . ಎರಡು ಸ್ವರಗಳ ನಡುವೆ ಸಂಧಿಯಾದರೆ ಅದು ಸ್ವರಸಂಧಿ , ಸ್ವರಕ್ಕೆ ವ್ಯಂಜನ ಆಥವಾ ವ್ಯಂಜನಕ್ಕೆ ವ್ಯಂಜನ ಸೇರಿ ಸಂಧಿಯಾದರೆ ಅದು ವ್ಯಂಜನಸಂಧಿ .

2 , ಸವರ್ಣದೀರ್ಘಸಂಧಿ ಎಂದರೇನು ?

ಉತ್ತರ : ಸವರ್ಣಸ್ವರಗಳು ಒಂದರ ಮುಂದೆ ಒಂದು ಸೇರಿ ಸಂಧಿಯಾದಾಗ ಅವೆರಡರ ಸ್ಥಾನದಲ್ಲಿ ಅದೇ ಜಾತಿಯ ದೀರ್ಘಸ್ವರ ಆದೇಶವಾಗಿ ಬಂದರೆ ಅದನ್ನು ಸವರ್ಣ ದೀರ್ಘಸಂಧಿ ಎಂದು ಕರೆಯುವರು .

3 , ಗುಣಸಂಧಿ ಎಂದರೇನು ? ಉದಾಹರಣೆ ಕೊಡಿ .

ಉತ್ತರ : ಆ ಆ ಕಾರಗಳಿಗೆ ಆ ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ ಐ ‘ ಕಾರವೂ ಈ ಊ ಕಾರಗಳು ಪರವಾದರೆ ‘ ಓ ‘ ಕಾರವೂ ‘ ಇ ‘ ಕಾರ ಪರವಾದರ ‘ ಆರ್ ‘ ಕಾರವೂ ಆದೇಶವಾಗಿ ಬಂದರೆ ಅದು ಗುಣಸಂಧಿ ,

4 ಸಮಾಸ ಎಂದರೇನು ? ಅದರ ವಿಧಗಳಾವುವು ?

ಉತ್ತರ : ಎರಡು ಅಥವಾ ಅನೇಕ ಪದಗಳು ಅರ್ಥಕ್ಕನುಸಾರವಾಗಿ ಸೇರಿ , ಮಧ್ಯದಲ್ಲಿರುವ ವಿಭಕ್ತಿಪ್ರತ್ಯಯವನ್ನು ಲೋಪ ಮಾಡಿಕೊಂಡು ಒಂದು ಪದವಾಗುವುದಕ್ಕೆ ಸಮಾಸ ಎಂದು ಕರೆಯುವರು . ಇದರಲ್ಲಿ ತತ್ಪುರುಷ , ಕರ್ಮಧಾರಯ , ದ್ವಿಗು , ಅಂತಿ , ದ್ವಂದ್ವ , ಬಹುವ್ರಹಿ , ಕ್ರಿಯಾ , ಗಮಕ ಸಮಾಸ ಎಂಬ ವಿಧಗಳಿವೆ .

5 ಅಂಶಿ ಸಮಾಸ ಎಂದರೇನು ? ಎರಡು ಉದಾಹರಣೆಗಳನ್ನು ಬರೆಯಿರಿ .

ಉತ್ತರ : ಪೂರ್ವೋತ್ತರ ಪದಗಳು ಆಂಶಾಂತಿ ಭಾವ ಸಂಬಂಧದಿಂದ ಸೇರಿ ಸಮಾಸವಾಗುವಾಗ ಪೂರ್ವಪದದ ಅರ್ಥವು ಪ್ರಧಾನವಾಗಿದ್ದರೆ ಅದು ಅಂಶಿಸಮಾಸ

ಉದಾ :

ತಲೆಯ+ಹಿಂದು=ಹಿಂದಲೆ

ಮನೆಯ+ನಡು =ನಡುಮನೆ

ಹುಬ್ಬಿನ+ಕೊನೆ =ಕೊನೆಹುಬ್ಬು

ನಾಲಿಗೆಯ+ತುದಿ=ತುದಿನಾಲಗೆ

6. ದ್ವಂದ್ವ ಸಮಾಸ ಎಂದರೇನು ? ಎರಡು ಉದಾಹರಣೆಗಳನ್ನು ಬರೆಯಿರಿ .

ಉತ್ತರ : ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲಾ ಪದಗಳ ಅರ್ಥವೂ ಪ್ರಧಾನವಾಗಿ ಇರುವ ಸಮಾಸವೇ ದ್ವಂದ್ವ ಸಮಾಸ ,

ಉದಾ :

ರಾಮನೂ + ಲಕ್ಷ್ಮಣನೂ = ರಾಮಲಕ್ಷ್ಮಣರು

ಕೆರೆಯೂ + ಕಟ್ಟೆಯೂ + ಬಾವಿಯ = ಕೆಲೆಕಟ್ಟೆಬಾವಿಗಳು ,

ಆನೆಯೂ +ಕುದುರೆಯೂ + ಒಂಟೆಯ = ಆನೆಕುದುರೇಒಂಟೆಗಳು .

ಗಿಡವೂ+ಮರವೂ + ಬಳ್ಳಿಯೂ = ಗಿಡಮರಬಳ್ಳಿಗಳು .

ಹೊಲವೂ + ಮನೆಯ = ಹೊಲಮನಗಳು.

ಮಠವೂ +  ಮನೆಯೂ =ಮನೆಮಠಗಳು.

ಗುಡುಗು+ಸಿಡಿಲು+ ಮಿಂಚೂ = ಗುಡುಗುಸಿಡಿಲುಮಿಂಚುಗಳು ,

ಸೂರ್ಯನೂ+ ಚಂದ್ರನೂ+ ನಕ್ಷತ್ರವೂ = ಸೂರ್ಯಚಂದ್ರನಕ್ಷತ್ರಗಳು ,

ಕುರಿಯೂ +ತುರಗವೂ+ ರಥವೂ = . ಕರಿತುರಗರಥಗಳು .

ಗಿರಿಯೂ + ದುರ್ಗ ವೂ + ವನವೂ = ಗಿರಿವನದುರ್ಗಗಳು .

ಆ , ಕೊಟ್ಟಿರುವ ಪದಗಳಲ್ಲಿ ಅನುಸ್ವಾರ – ವಿಸರ್ಗ ಸಹಿತ ಅಕ್ಷರಗಳನ್ನು ಗುರುತಿಸಿ ಬರೆಯಿರಿ ,

ಸ್ವತಃ   ( ತಃ )                       ಸುಂದರ ( ಸುಂ ) . ರಂಗುರಂಗಿನ ( ರಂ , ರಂ )

ಕೆಂಪು( ಕೆಂ )                       ದುಃಖ ( ದುಃ ) ಹಿಂದೊಮ್ಮೆ ( ಹಿಂ)

ಗಂಡಸರು (ಗಂ)                  ಆಂತಃಕರಣ( ಅಂ,ತಃ , ) ಪಂಚೆ ( ಪಂ )

ಅಂಗಿ ( ಅಂ)                       ಮುಂಡಾಸು ( ಮುಂ ) ಆಂಬೇರ ( ಅಂ )

ಸಭಾಂಗಣ ( ಭಾಂ )            ಅಂತಃಪುರ ( ಅಂ , ತಃ )ಪುನಃ  (ನಃ)

ಜಂತ್ರಮಂತ್ರ( ಜಂ,ಮಂ)     ಅಂತಸ್ತು ಅಂ )

ಇ , ಕೊಟ್ಟಿರುವ ಪದಗಳಲ್ಲಿ ಅನುನಾಸಿಕ ಅಕ್ಷರಗಳನ್ನು ಗುರುತಿಸಿ ಬರೆಯಿರಿ

ನಗರ ( ನ )         ಮಧ್ಯ (ಮ)           ಪರಿಣಾಮ(ಣಾ)    ಬಣ್ಣ(ಣ್ಣ)

ನಿತ್ಯ ( ನಿ )           ಜನ ( ನ )              ಮನೆ (ಮ,ನೆ)       ಕಣಿವೆ (ಣಿ)

ಮಂದಿರ (ಮ)     ವಿಜ್ಞಾನ ( ಜ್ಞಾ)

9th Standard Bedagina Tana Jayapura Notes in Kannada Question Answer Pdf Download

ಇತರೆ ಪಾಠಗಳು:

ಕನ್ನಡ ಮೌಲ್ವಿ ಪಾಠದ ನೋಟ್ಸ್

Leave your vote

51 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.