8ನೇ ತರಗತಿ ರಾಮಧಾನ್ಯ ಚರಿತೆ ಕನ್ನಡ ನೋಟ್ಸ್ ಪ್ರಶ್ನೆ ಉತ್ತರ, 8th Standard Ramadhanya Charite Kannada Notes Question Answer Pdf Download
ತರಗತಿ : 8ನೇ ತರಗತಿ
ಪದ್ಯದ ಹೆಸರು : ರಾಮಧಾನ್ಯ ಚರಿತೆ
ಕೃತಿಕಾರರ ಹೆಸರು : ರಾಮಧಾನ್ಯ ಚರಿತೆ
Table of Contents
ಕೃತಿಕಾರರ ಪರಿಚಯ :
ಕನಕದಾಸ :
ಇವರ ಮೊದಲ ಹೆಸರು ತಿಮ್ಮಪ್ಪನಾಯಕ ಇವರು ಕ್ರಿ.ಶ. ೧೫೦೮ ರಲ್ಲಿ ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ಜನಿಸಿದರು . ಇವರ ತಂದೆ ಬೀರಪ್ಪ ಹಾಗೂ ತಾಯಿ ಬಚ್ಚಮ್ಮ ಇವರ ಆರಾಧ್ಯ ದೈವ ಹಾಗೂ ಅಂಕಿತನಾಮ ಕಾಗಿನೆಲೆ ಆದಿಕೇಶವ ಇವರು ರಚಿಸಿರುವ ಕೃತಿಗಳು : ಹರಿಭಕ್ತಿಸಾರ , ರಾಮಧಾನ್ಯ ಚರಿತೆ , ಮೋಹನ ತರಂಗಿಣಿ , ನಳಚರಿತ್ರೆ , ಇವಲ್ಲದೆ ನೂರಾರು ಕೀರ್ತನೆಗಳು , ಉಗಾಭೋಗ , ಸುಳಾದಿಗಳು ಮತ್ತು ಮಂಡಿಗೆಗಳನ್ನು ರಚಿಸಿದ್ದಾರೆ . [ ಡಾ . ಸಾ.ಶಿ.ಮರುಳಯ್ಯ ಅವರು ಸಂಪಾದಿಸಿರುವ ಕನಕದಾಸರ ಕಾವ್ಯಭಾಗ -೧ ಕೃತಿಯಿಂದ ಆಯ್ಕೆಮಾಡಿಕೊಳ್ಳಲಾಗಿದೆ . ]
Ramadhanya Charite Kannada Notes Question Answer
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
1. ನರೆದಲೆಗ ಯಾರನ್ನು ಆದರಿಸಿ ಸಲಹುತ್ತದೆ ?
ಉತ್ತರ : ನರೆದಲೆಗ ಬರಗಾಲದಲ್ಲಿ ಆಹಾರವಿಲ್ಲದೆ ಸಾಯುವ ಪ್ರಾಣಿಗಳನ್ನು ಆದರಿಸಿ ಸಲಹುತ್ತದೆ .
2. ಹರಿಹರ ವಿರಂಚಿಗಳನ್ನು ಏತಕ್ಕಾಗಿ ಅಯೋಧ್ಯೆಗೆ ಕರೆಸಲಾಗುತ್ತದೆ ?
ಉತ್ತರ : ನರೆದಲೆಗ ( ರಾಗಿ ) ಮತ್ತು ಸ್ನೇಹಿ ( ಭತ್ತ ) ಇವುಗಳಲ್ಲಿ ಯಾರು ಶ್ರೇಷ್ಠ ಎಂಬ ವಿವಾದವನ್ನು ಬಗೆಹರಿಸಲು ಪರಿಪರ ವಿರಂಚಿಗಳನ್ನು ಅಯೋಧ್ಯೆಗೆ ಕರೆಸಲಾಗುತ್ತದೆ .
3. ದೇಶಕ್ಕೆ ಅತಿಶಯವಾದ ಧಾನ್ಯ ಯಾವುದು ?
ಉತ್ತರ : ದೇಶಕ್ಕೆ ಅತಿಶಯವಾದ ಧಾನ್ಯ ‘ ರಾಗಿ ‘
4. ವ್ರಿಹಿ ಯಾರ ಬಾಯಿಗೆ ತುತ್ತು ಎಂದು ಹೇಳಿದೆ ?
ಉತ್ತರ : ವ್ರಿಹಿ ಹಣದ ಬಾಯಿಗೆ ತುತ್ತು ಎಂದು ಹೇಳಿದೆ .
5 , ದಾಶರಥಿ ಎಂದರೆ ಯಾರು ?
ಉತ್ತರ : ದಾಶರಥಿ ಎಂದರೆ ಶ್ರೀರಾಮ .
6. ಸೆರೆಗೆ ಯಾರು ಯಾರನ್ನು ಹಾಕಲಾಗುತ್ತದೆ ?
ಉತ್ತರ : ಸೆರೆಗೆ ರಾಗಿ ಮತ್ತು ಭತ್ತಗಳನ್ನು ಹಾಕಲಾಗುತ್ತದೆ
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .
1 , ವ್ರಿಹಿಯನ್ನು ಯಾವಯಾವ ಮಂಗಳ ಕಾರ್ಯಗಳಲ್ಲಿ ಬಳಸಲಾಗುತ್ತದೆ ?
ಉತ್ತರ : ವ್ರಿಹಿಯನ್ನು ಬ್ರಾಹ್ಮಣರ ಉಪನಯನದಲ್ಲಿ , ವ್ರತಾಚರಣೆಯಲ್ಲಿ , ಒಳ್ಳೆಯ ಭೋಜನದಲ್ಲಿ , ಶ್ರೇಷ್ಠವಾದ ಮಂತಾಕ್ಷತೆಯಲ್ಲಿ , ಶುಭ ಸಮಾರಂಭಗಳಲ್ಲಿ , ಆರತಿಗೆ ಹಿರಿಯರಲ್ಲಿ , ಯಜ್ಞಯಾಗಾದಿಗಳಲ್ಲಿ ( ಕ್ರತು ) , ಅರಮನೆಯಲ್ಲಿ ಹಾಗೂ ದೇವರಿಗೆ ಅತಿಶಯವಾದ ನೈವೇದ್ಯದಲ್ಲಿ ಬಳಸಲಾಗುತ್ತದೆ .
2. ನರೆದಲೆಗನು ವಿಹಿಯನ್ನು ಏನೆಂದು ಹೀಯಾಳಿಸಿತು ?
ಉತ್ತರ : ನರೆದಲೆಗನ್ನು ವಿಹಿಗನನ್ನು “ ನೀನು ಸತ್ಯಹೀನನಾಗಿರುವೆ , ಬಡವರನ್ನು ಕಣ್ಣೆತ್ತಿ ನೋಡುವುದಿಲ್ಲ . ಶ್ರೀಮಂತರನ್ನು ಮಾತ್ರ ಹಿಂಬಾಲಿಸಿ ಹೋಗುವ ಅಪೇಕ್ಷೆ ನಿನ್ನದು . ಹೆತ್ತ ಬಾನಂತಿಯರು ಹಾಗೂ ರೋಗಿಗಳಿಗೆ ನೀನು ಪತ್ಯವಾಗಿರುವೆ ಅಲ್ಲದೆ ಹೆಣದ ಬಾಯಿಗೆ ತುತ್ತಾಗುವೆ , ನಿನ್ನ ಜನ್ಮ ವ್ಯರ್ಥವಾದುದು . ” ಎಂದು ರಾಗಿ ಭತ್ತವನ್ನು ಹೀಯಾಳಿಸಿತು .
3. ಶ್ರೇಷ್ಠವೆಂದು ಹೇಳಲಾಗಿರುವ ಧಾನ್ಯಗಳಾವುವು ?
ಉತ್ತರ : ಕೆಲವರು ಗೋಧಿಯನ್ನು , ಸಾಮೆಯನ್ನು , ನವಣೆಯನ್ನು , ಕಂಬನ್ನು ಜೋಳವನ್ನು ಶ್ರೇಷ್ಠವೆಂದು ಹೇಳಿದರೆ , ಮತ್ತೆ ಕೆಲವರು ಭತ್ತವನ್ನೂ ಮತ್ತು ಹಲವರು ರಾಗಿಯನ್ನು ಶ್ರೇಷ್ಠವೆಂದು ಹೇಳಿದರು .
4. ಗೌತಮರು ನರೆದಲೆಗನೆ ಶ್ರೇಷ್ಠವೆನ್ನಲು ವಿಹಿಯು ಹೇಳಿದ್ದೇನು ?
ಉತ್ತರ : ಗೌತಮರು ನರೆದಲೆಗನೆ ಶ್ರೇಷ್ಠವೆನ್ನಲು ಹಿಯು ಗೌತಮ ಮುನಿಗೆ ಹೀಗೆ ಹೇಳುತ್ತದೆ : “ ಎಲ್ಲಾ ಧರ್ಮಗಳ ಸಾರ ನಿಮಗೆ ತಿಳಿದಿದೆ . ನಿಮಗೆ ಎಲ್ಲರ ಬಗ್ಗೆ ತಿಳಿದಿಲ್ಲವೇ ? ಹೀಗಿದ್ದೂ ಇಲ್ಲಿ ಈ ರೀತಿ ಕಡೆಗಣಿಸಿ ಮಾತನಾಡುವುದು ಸರಿಯೇ ? ಸಾಕು . ಅದು ಹಾಗಿರಲಿ , ಭತ್ತ ನಾನಿರುವಾಗ : ಗೋದಿ ಮೊದಲಾದ ಧಾನ್ಯಗಳೆಲ್ಲಾ ಇಲ್ಲಿರುವಾಗ ಇವರಲ್ಲಿ ರಾಗಿಯೇ ಶ್ರೀಮಂತ ( ಶ್ರೇಷ್ಟಬಲ್ಲಿದ ) ಎಂದು ಹೇಳುವುದು ಇದು ಯಾವ ನ್ಯಾಯ ? ” ಎಂದಿತು .
5. ಶ್ರೀರಾಮನು ಧಾನ್ಯಗಳ ವಿಚಾರದಲ್ಲಿ ಕೈಗೊಂಡ ತೀರ್ಮಾನವೇನು ?
ಉತ್ತರ : ಶ್ರೀರಾಮನು ಅಲ್ಲಿ ನೆರೆದಿದ್ದ ಧಾನ್ಯಗಳ ವಾದವಿವಾದಗಳನ್ನು ಗಮನಿಸಿದ ಮೇಲೆ ಹೀಗೆ ತೀರ್ಪು ನೀಡಿದನು , ‘ ಶ್ರೇಷ್ಟವಾದ ಧಾನ್ಯಗಳಲ್ಲಿ ವ್ರಿಹಿ ಮತ್ತು ನರೆದಲೆಗನೇ ಇರಲಿ , ಆರು ತಿಂಗಳು ಸೆರೆಯಲ್ಲಿ ಹಾಕಿದರೆ ; ಹಿರಿದು ಕಿರಿದೆಂದು ವಾದಿಸುವ ಇವರ ಪೌರುಷವನ್ನು ತಿಳಿಯಬಹುದು . ಇನ್ನು ನಾವು ಆಯೋಧ್ಯಾ ಪಟ್ಟಣಕ್ಕೆ ಹೋಗುತ್ತೇವೆ . ಆ ನಂತರ ನಿಮ್ಮ ಸ್ಥಿತಿಯನ್ನು ಗಮನಿಸಿ ಕರೆಸಿಕೊಳ್ಳುತ್ತೇವೆ . ” ಎಂದು ಹೇಳಿ ಆಯೋಧ್ಯಾ ಪಟ್ಟಣಕ್ಕೆ ಹೋದನು .
ಇ ] ಕೆಳಗಿನ ಪ್ರಶ್ನೆಗಳಿಗೆ ಏಳು – ಎಂಟು ವಾಕ್ಯಗಳಲ್ಲಿ ಉತ್ತರಿಸಿ .
1. ಶ್ರೀರಾಮನು ನರೆದಲೆಗ ಹಾಗೂ ವ್ರಿಹಿಯನ್ನು ಸೆರಮನೆಗೆ ಹಾಕಲು ಕಾರಣವೇನು ?
ಉತ್ತರ : ಶ್ರೀರಾಮನು ವನವಾಸದಿಂದ ಹಿಂದಿರುಗಿ ಬರುವಾಗ ಗೌತಮ ಮುನಿಗಳ ಆಶ್ರಮದಲ್ಲಿ ಭೋಜನದ ನಂತರ ವಿವಿಧ ಭಕ್ಷ್ಯಗಳ ರುಚಿಯ ಬಗ್ಗೆ ಚರ್ಚೆ ನಡೆಯುತ್ತದೆ . ಆಗ ಹನುಮಂತನು ಧಾನ್ಯದ ಸತ್ವವನ್ನು ನೋಡಿ ಶ್ರೇಷ್ಠತೆಯನ್ನು ನಿರ್ಧರಿಸಬೇಕೆನ್ನುತ್ತಾನೆ . ಆಗ ಗೌತಮ ಮುನಿಗಳು ಹಲವು ಧಾನ್ಯಗಳನ್ನು ತರಿಸುತ್ತಾರೆ .ಆಗ ಚರ್ಚೆ ಆರಂಭವಾಗುತ್ತದೆ . ಕೆಲವರು ಗೋಧಿಯನ್ನು ಕೆಲವರು ಸಾಮೆಯನ್ನು , ಕೆಲವರು ನವಣೆಯನ್ನು ಕೆಲವರು ಕಂಬನ್ನು , ಕೆಲವರು ಜೋಳವನ್ನು ಶ್ರೇಷ್ಠವೆಂದು ಹೇಳಿದರೆ , ಮತ್ತೆ ಕೆಲವರು ಭತ್ತವನ್ನೂ ಮತ್ತು ಕೆಲವರು ರಾಗಿಯನ್ನು ಶ್ರೇಷ್ಠವೆಂದು ಹೇಳುತ್ತಾರೆ . ಆಗ ಗೌತಮರು ನರೆದಲೆಗನೇ ಶ್ರೇಷ್ಠ ಎನ್ನುತ್ತಾರೆ . ಆದರೆ ವ್ರಿಹಿಗನು ( ಭತ್ತ ) ಆ ಮಾತನ್ನು ಒಪ್ಪದೆ ತಾನೇ ಶ್ರೇಷ್ಠವೆಂದೂ ಬ್ರಾಹ್ಮಣರ ಉಪನಯನದಲ್ಲಿ , ವ್ರತಾಚರಣೆಯಲ್ಲಿ , ಭೋಜನದಲ್ಲಿ , ಮಂತಾಕ್ಷತೆಯಲ್ಲಿ , ಶುಭ ಸಮಾರಂಭಗಳಲ್ಲಿ ಮುಂತಾದ ಕಾರ್ಯಗಳಲ್ಲಿ ತನ್ನನ್ನು ಬಳಸಲಾಗುತ್ತದೆ . ಆದ್ದರಿಂದ ತಾನೇ ಶ್ರೇಷ್ಠ ಎಂದು ಹೇಳುತ್ತದೆ . ಆಗ ನರೆದಲೆಗೆ ” ಈ ಜಗತ್ತಿಗೆಲ್ಲ ತಿಳಿದಿರುವಂತೆ ; ಮಳೆ ಹೋಗಿ , ಬೆಳೆ ಇಲ್ಲದಂತಾಗಿ , ಘೋರ ಬರಗಾಲದಲ್ಲಿ ಅನ್ನವಿಲ್ಲದೆ ನಾಶವಾಗುವ ಪ್ರಾಣಿಗಳನ್ನು ನಾನು ಆದರಿಸಿ , ಕಾಪಾಡುತ್ತೇನೆ , ಎಲವೋ ಆಗ ನೀನೆಲ್ಲಿರುವೆಯೋ ನಿನ್ನ ಬಳಗ ಎಲ್ಲಿರುವುದೋ ” ಎಂದು ಹೇಳುತ್ತದೆ . ಹೀಗೆ ಅವರಿಬ್ಬರ ನಡುವೆ ತೀವ್ರ ವಾದ – ವಿವಾದ ನಡೆಯುತ್ತದೆ . ಅವರ ವಾದವನ್ನು ನಿಲ್ಲಿಸಲು ಸಾಧ್ಯವಾಗದಿದ್ದಾಗ ಶ್ರೀರಾಮನು “ ಆರು ತಿಂಗಳು ಇವರಿಬ್ಬರನ್ನು ಸೆರೆಯಲ್ಲಿ ಹಾಕಿದರೆ , ಒಂದು ಕಿರಿದೆಂದು ವಾದಿಸುವ ಇವರ ಪೌರುಷವನ್ನು ತಿಳಿಯಬಹುದು . ” ಎಂದು ಹೇಳಿ ಅವರನ್ನು ಸೆರೆಗೆ ಹಾರುತ್ತಾನೆ .
ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,
1. “ ವಿಲಯಕಾಲದೊಳನ್ನವಿಲ್ಲದೆ ಆಳಿದ ಪ್ರಾಣಿಗಳಾಧರಿಸಿ ಸಲಯುವೆ ”
ಆಯ್ಕೆ : ಈ ವಾಕ್ಯವನ್ನು ಕನಕದಾಸರು ಬರೆದಿರುವ ‘ ರಾಮಧಾನ್ಯ ಚರಿತೆ ‘ ಎಂಬ ಕೃತಿಯಿಂದ ಆರಿಸಿಕೊಳ್ಳಲಾಗಿರುವ ‘ ರಾಮಧಾನ್ಯ ಚರಿತೆ ‘ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಈ ಮಾತನ್ನು ವಿಹಿಗನು ನರೆದಲೆಗಳನ್ನು ಹೀಯಾಳಿಸಿದಾಗ ನರೆದಲೆಗಳು ವಿಹಿಯನ್ನು ಕುರಿತು ಈ ಮಾತನ್ನು ಹೇಳುತ್ತದೆ . ಈ ಜಗತ್ತಿಗೆಲ್ಲ ತಿಳಿದಿರುವಂತೆ : ಮಳೆ ಹೋಗಿ , ಬೆಳೆ ಇಲ್ಲದಂತಾಗಿ , ಘೋರ ಬರಗಾಲದಲ್ಲಿ ಅನ್ನವಿಲ್ಲದೆ ನಾಶವಾಗುವ ಪ್ರಾಣಿಗಳನ್ನು ನಾನು ಆದರಿಸಿ ಕಾಪಾಡುತ್ತೇನೆ . ಎಲವೋ ಆಗ ನೀನೆಲ್ಲಿರುವೆಯೋ ನಿನ್ನ ಬಳಗೆ ಎಲ್ಲಿರುವುದೋ ” ಎಂದು ಈ ಸಂದರ್ಭದಲ್ಲಿ ಹೇಳುತ್ತದೆ .
ಸ್ವಾರಸ್ಯ : ಬರಗಾಲದಲ್ಲಿ ಎಲ್ಲರನ್ನು ಸಂರಕ್ಷಿಸುವ ರಾಗಿಯ ಮಹತ್ವ ಇಲ್ಲಿ ಸ್ವಾರಸ್ಯಕರವಾಗಿ ವ್ಯಕ್ತವಾಗಿದೆ .
2. “ ಇವರಿರಲಿ ಸೆರೆಯೊಳಗಾರು ತಿಂಗಳು ”
ಆಯ್ಕೆ : ಈ ವಾಕ್ಯವನ್ನು ಕನಕದಾಸರು ಬರೆದಿರುವ ‘ ರಾಮಧಾನ್ಯ ಚರಿತೆ ‘ ಎಂಬ ಕೃತಿಯಿಂದ ಆರಿಸಿಕೊಳ್ಳಲಾಗಿರುವ ‘ ರಾಮಧಾನ್ಯ ಚರಿತೆ ‘ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಈ ಮಾತನ್ನು ಶ್ರೀರಾಮನು ವಿಹಿಗೆ ಮತ್ತು ನರೆದಲೆಗನ ವಿವಾದವನ್ನು ಬಗೆಹರಿಸುವ ಬಗ್ಗೆ ಸಭೆಯನ್ನು ಕುರಿತು ಈ ಮಾತನ್ನು ಹೇಳುತ್ತಾನೆ . ರಾಗಿ ಮತ್ತು ಭತ್ತ ಇವೆರಡರ ವಾದವಿವಾದಗಳನ್ನು ಆಲಿಸಿದ ರಾಮನು ಅವರಿಬ್ಬರ ಸತ್ಯ ತಿಳಿಯಬೇಕಾದರೆ ಆರು ತಿಂಗಳು ಸೆಲೆಗೆ ಹಾಕಬೇಕೆಂದು ಈ ಸಂದರ್ಭದಲ್ಲಿ ತೀರ್ಮಾನಿಸುತ್ತಾನೆ .
ಸ್ವಾರಸ್ಯ : ರಾಗಿ ಮತ್ತು ಭತ್ತ ಇವೆರಡರಲ್ಲಿ ರಾಗಿಯೇ ಶ್ರೇಷ್ಠವೆಂದು ತಿಳಿದಿದ್ದರೂ ಅದನ್ನು ನಿರೂಪಿಸಲು ರಾಮನು ನಸುನಗುತ್ತಾ ಅವುಗಳ ಸತ್ವ ಪರೀಕ್ಷೆಗೆ ಸರೆವಾಸ ವಿಧಿಸಿದ್ದು ಸ್ವಾರಸ್ಯಕರವಾಗಿದೆ .
3. ” ನಮ್ಮಯ ದೇಶಕತಿಶಯ ನರೆದಲೆಗ
ಆಯ್ಕೆ : ಈ ವಾಕ್ಯವನ್ನು ಕನಕದಾಸರು ಬರೆದಿರುವ ‘ ರಾಮಧಾನ್ಯ ಚರಿತೆ ‘ ಎಂಬ ಕೃತಿಯಿಂದ ಆರಿಸಿಕೊಳ್ಳಲಾಗಿರುವ ‘ ರಾಮಧಾನ್ಯ ಚರಿತೆ ‘ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಈ ಮಾತನ್ನು ಗೌತಮ ಮುನಿಗಳು ಶ್ರೀರಾಮನಿಗೆ ಹೇಳುತ್ತಾರೆ . “ ನಮ್ಮ ದೇಶದಲ್ಲಿ ಶ್ರೇಷ್ಠವೆಂದರೆ ರಾಗಿಯೇ ಸರಿ . ಇವನು ಶಕ್ತಿ ( ಸತ್ವ ) ಹೊಂದಿರುವವನು . ಉಳಿದ ಧಾನ್ಯಗಳೇಕೆ ? ” ಎಂದು ಈ ಸಂದರ್ಭದಲ್ಲಿ ಹೇಳುತ್ತಾರೆ .
ಸ್ವಾರಸ್ಯ : ಸತ್ವಯುತವಾದದ್ದು ರಾಗಿ ಹಾಗೂ ರಾಗಿಯನ್ನೇ ಪ್ರಧಾನ ಆಹಾರವಾಗಿ ಬಳಸುವ ಶ್ರಮಿಕವರ್ಗ ಎಂಬುದನ್ನು ಇಲ್ಲಿ ಕನಕದಾಸರು ಸ್ವಾರಸ್ಯಪೂರ್ಣವಾಗಿ ಪ್ರತಿಪಾದಿಸಿದ್ದಾರೆ .
4. “ ಕುಲಹೀನ ನೀನು ಪ್ರತಿಷ್ಟ ಸುಡು ಮತಿಹೀನ ನೀನು “
ಆಯ್ಕೆ : ಈ ವಾಕ್ಯವನ್ನು ಕನಕದಾಸರು ಬರೆದಿರುವ ‘ ರಾಮಧಾನ್ಯ ಚರಿತೆ ‘ ಎಂಬ ಕೃತಿಯಿಂದ ಆರಿಸಿಕೊಳ್ಳಲಾಗಿರುವ ‘ ರಾಮಧಾನ್ಯ ಚರಿತೆ ‘ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಈ ಮಾತನ್ನು ವಿಹಿಗನು ನರೆದಲೆಗನಿಗೆ ಹೇಳುತ್ತಾನೆ . ಗೌತಮರು ರಾಗಿ ( ನರೆದಲೆಗ ) ಶ್ರೇಷ್ಠ ಎಂಬ ಮಾತನ್ನು ಕೇಳಿ ಕೋಪಗೊಂಡ ಹಿಗ ನರೆದಲೆಗನಿಗೆ “ ಭಗವಂತನೇ ನಮ್ಮಿಬ್ಬರಲ್ಲಿ ಯಾರು ಹೆಚ್ಚು , ಯಾರು ಕಡಿಮೆ ಎಂಬುದನ್ನು ಬಲ್ಲನು , ಜಾನಕಿಯ ಪತಿಯಾದ ಶ್ರೀ ರಾಮನ ಸನಿಹದಲ್ಲಿ ನೀನು ಕುಲಹೀನ , ಅಹಂಕಾರಿ , ಬುದ್ಧಿಗೇಡಿ ” ಎಂದು ಈ ಸಂದರ್ಭದಲ್ಲಿ ಹೀಯಾಳಿಸುತ್ತದೆ .
ಸ್ವಾರಸ್ಯ : ಕೆಳವರ್ಗದ ಮೇಲೆ ಮೇಲ್ವರ್ಗದ ಶೋಷಣೆ ಈ ಮಾತಿನಲ್ಲಿ ವ್ಯಕ್ತವಾಗಿರುವುದು ಸ್ವಾರಸ್ಯವಾಗಿದೆ .
ಉ. ಮೊದಲೆರೆಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಧಿಸಿದ ಪದ ಬರೆಯಿರಿ.
೧. ಪುರಂದರದಾಸರು : ಪುರಂದರವಿಠಲ : : ಕನಕದಾಸರು : ___________
೨. ವ್ರಿಹಿ : ಭತ್ತ : : ನರೆದಲಗ : : ___________
೩. ಬಾಣಂತಿಯರಿಗೆ : ಪಥ್ಯ : : ಹೆಣದ ಬಾಯಿಗೆ : __________
೪. ಕ್ಷಿತಿ : ಭೂಮಿ : : ವಿರಂಚಿ : ____________
೫. ಸೆರೆಯೊಳಗೆ : ಆಗಮಸಂಧಿ : : ತಾನೆಲ್ಲಿ : __________
ಸರಿ ಉತ್ತರಗಳು.
೧. ಕಾಗಿನೆಲೆ ಆದಿಕೇಶವ
೨. ರಾಗಿ
೩. ತುತ್ತು
೪. ಬ್ರಹ್ಮ
೫. ಲೋಪ ಸಂಧಿ
Ramadhanya Charite Kannada Notes Question Answer Pdf
ಇತರೆ ಪದ್ಯಗಳು :