9ನೇ ತರಗತಿ ಕನ್ನಡ ನಾಡು ನುಡಿ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 9th Standard Kannada Nadu Nudi Poem Notes Question Answer Pdf Download, 9th ಕನ್ನಡ ನಾಡು ನುಡಿ Notes
ತರಗತಿ : 9ನೇ ತರಗತಿ
ಪದ್ಯದ ಹೆಸರು : ಕನ್ನಡ ನಾಡು ನುಡಿ
ಕೃತಿಕಾರರ ಹೆಸರು : ಶ್ರೀವಿಜಯ
Table of Contents
ಕವಿ ಪರಿಚಯ :
ಶ್ರೀವಿಜಯ :
ಈತನ ಕಾಲ : ಕ್ರಿ.ಶ. ಸುಮಾರು ೯ ನೆಯ ಶತಮಾನ
* ಆಶ್ರಯದಾತ : ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗ
* ಈತನ ಕೃತಿ ‘ ಕವಿರಾಜಮಾರ್ಗ ‘ ಎಂಬ ಲಕ್ಷಣ ಗ್ರಂಥ ಇದು ಕನ್ನಡ ಭಾಷೆಯಲ್ಲಿ ಉಪಲಬ್ಧವಾಗಿರುವ ಮೊಟ್ಟ ಮೊದಲ ಕೃತಿಯಾಗಿದೆ . ನಯಸೇನ : ಈತನ ಕಾಲ : ಕ್ರಿ.ಶ. ಸುಮಾರು ೧೨ ನೆಯ ಶತಮಾನ ಸ್ಥಳ : ಧಾರವಾಡ ಜಿಲ್ಲೆಯ ಮುಳುಗುಂದ ,
* ಈತನ ಪ್ರಮುಖ ಕೃತಿ : ‘ ಧರ್ಮಾಮೃತ ‘ ಎ ೦ ಬ ಚಂಪೂ ಕಾವ್ಯ
* ಕನ್ನಡದಲ್ಲಿ ಕಾವ್ಯ ರಚನೆಯ ಸಮಯದಲ್ಲಿ ಸಂಸ್ಕೃತ ಶಬ್ದಗಳನ್ನು ಸೇರಿಸುವ ಬಗ್ಗೆ ನಯಸೇನನು ವಿರೋಧ ವ್ಯಕ್ತಪಡಿಸುತ್ತಾನೆ .
* ಕಾವ್ಯ ರಚಿಸುವುದಾದರೆ ಕನ್ನಡದಲ್ಲಿ ರಚಿಸಬೇಕು ಇಲ್ಲವೇ ಸಂಸ್ಕೃತದಲ್ಲಿ ರಚಿಸಬೇಕು . ಇವೆರಡನ್ನು ಬೆರೆಸಿ ಕಾವ್ಯ ರಚನೆ ಮಾಡಿದರೆ ಅದು ಎಣ್ಣೆ – ತುಪ್ಪಗಳ ಮಿಶ್ರಣದಂತೆ ಆಸ್ವಾದ ಆಗುತ್ತದೆ ಎಂಬುದು ಆತನ ಅಭಿಪ್ರಾಯ . ನೇಮಿಚಂದ್ರ : ಈತನ ಕಾಲ : ಕ್ರಿ.ಶ. ಸುಮಾರು ೧೨ ನೆಯ ಶತಮಾನ .
* ಈತನ ಕೃತಿಗಳು : ‘ ಲೀಲಾವತೀ ಪ್ರಬಂಧ ‘ ಹಾಗೂ ‘ ಅರ್ಧನೇಮಿ ಪುರಾಣ ‘ * ಈತನು ಕವಿಗಳ ಕಾವ್ಯಶಕ್ತಿಯ ಹೆಗ್ಗಳಿಕೆಯನ್ನು ಬಹು ಸ್ವಾರಸ್ಯಪೂರ್ಣವಾಗಿ ವರ್ಣಿಸಿದ್ದಾನೆ . ಮಹಲಿಂಗರಂಗ : ಈತನ ಕಾಲ : ಕ್ರಿ.ಶ. ಸುಮಾರು ೧೭ ನೆಯ ಶತಮಾನ
* ಇವನ ನಿಜನಾಮ : ಶ್ರೀರಂಗ , ತನ್ನ ಹೆಸರಿನೊಂದಿಗೆ ತಂದೆಯ ಹೆಸರನ್ನು ಸೇರಿಸಿ ಮಹಲಿಂಗರಂಗ ಎಂದು ಕರೆದುಕೊಂಡಿದ್ದಾನೆ .
* ಈತನ ಆರಾಧ್ಯ ದೈವ : ಶ್ರೀಶೈಲ ಮಲ್ಲಿಕಾರ್ಜುನ .
* ಈತನ ಪ್ರಮುಖ ಕೃತಿ : ‘ ಅನುಭವಾಮೃತ ‘ ಇದು ಕನ್ನಡದಿಂದ ಸಂಸ್ಕೃತಕ್ಕೆ ಅನುವಾದಗೊಂಡ ಕೃತಿಯೆಂಬುದು ಇನ್ನೊಂದು ವಿಶೇಷ ಆಂಡಯ್ಯ : ಈತನ ಕಾಲ : ಕ್ರಿ.ಶ. ಸುಮಾರು ೧೩ ನೇ ಶತಮಾನ . * ಆಶ್ರಯದಾತ : ಕದಂಬರ ದೊರೆ ಕಾಮದೇವ , * ಇವನ ಪ್ರಮುಖ ಕೃತಿ : ‘ ಕಬ್ಬಿಗರ ಕಾವ ‘ ಅಥವಾ ‘ ಕಬ್ಬಿಗರ ಕಾವಂ ‘ ಎಂಬ ಚಂಪೂ ಕಾವ್ಯ
* ಕನ್ನಡ ಸಾಹಿತ್ಯದಲ್ಲಿ ಕಬ್ಬಿಗರ ಕಾವಂ ಒಂದು ವಿಶಿಷ್ಟ ಕೃತಿ . ಸಂಸ್ಕೃತದ ಸಹಾಯವನ್ನು ಪಡೆಯದೆ ಕೇವಲ ತದ್ಭವ ಪದಗಳನ್ನೂ ದೇಸೀ ನುಡಿಗಳನ್ನು ಬಳಸಿಕೊಂಡು ಈ ಕೃತಿಯನ್ನು ಕಟ್ಟಲಾಗಿದೆ . ‘ ಕನ್ನಡ ನಾಡು – ನುಡಿ ‘ ಪದ್ಯದಲ್ಲಿ ಇರುವ ಪದ್ಯಗಳನ್ನು ಬಿ.ಎಂ.ಶ್ರೀ . ಅವರು ಸಂಪಾದಿಸಿರುವ ಕನ್ನಡ ಬಾವುಟ ‘ ಕೃತಿಯಿಂದ ಆರಿಸಿಕೊಳ್ಳಲಾಗಿದೆ .
9th Standard Kannada Nadu Nudi Poem Notes Question Answer
ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
1. ಮಹಲಿಂಗರಂಗನ ಪ್ರಕಾರ ಸುಲಿದ ಬಾಳೆಯ ಹಣ್ಣಿನಂತೆ ಇರುವ ಭಾಷೆ ಯಾವುದು ?
ಉತ್ತರ : ಮಹಲಿಂಗರಂಗನ ಪ್ರಕಾರ ಸುಲಿದ ಬಾಳೆಯ ಹಣ್ಣಿನಂತೆ ಇರುವ ಭಾಷೆ ಕನ್ನಡ .
2. ಪದನರಿದು ನುಡಿಯುವವರು ಯಾರು ಎಂದು ಕವಿ ಹೇಳಿದ್ದಾನೆ ?
ಉತ್ತರ : ಪದನರಿದು ನುಡಿಯುವವರು ನಾಡವರ್ಗಳು ( ಸಾಮಾನ್ಯ ಜನರು ) ಎಂದು ಕವಿ ಹೇಳಿದ್ದಾನೆ .
3.ತುಪ್ಪದೊಡನೆ ಯಾವುದನ್ನು ಬೆರೆಸಬಾರದು ?
ಉತ್ತರ : ತುಪ್ಪದೊಡನೆ ಎಣ್ಣೆಯನ್ನು ಬೆರೆಸಬಾರದು .
ಆ ] ಈ ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯದಲ್ಲಿ ಉತ್ತರಿಸಿ .
1. ಕವೀಂದ್ರರ ಶ್ರೇಷ್ಠತೆಯನ್ನು ನೇಮಿಚಂದ್ರನು ಹೇಗೆ ವರ್ಣಿಸಿದ್ದಾನೆ ?
ಉತ್ತರ : ನೇಮಿಚಂದ್ರನು ಕವಿಗಳ ಕಾವ್ಯ ಶಕ್ತಿಯನ್ನು ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಾ “ ರಾಮಾಯಣದಲ್ಲಿ ವಾನರ ಸೈನ್ಯವು ಸಮುದ್ರಕ್ಕೆ ಸೇತುವೆಯನ್ನು ಕಟ್ಟಲಿ ಕಟ್ಟದಿರಲಿ , ವಾಮನಾವತಾರದಲ್ಲಿ ವಾಮನನು ಆಕಾಶವನ್ನು ತನ್ನ ಕಾಲಿನಿಂದ ಮುಟ್ಟಲಿ ಮುಟ್ಟದಿರಲಿ . ಮಹಾಭಾರತದಲ್ಲಿ ಅರ್ಜುನನು ಶಿವನ ಗಂಟಲನ್ನು ಒತ್ತಿ ಮೆಟ್ಟಲಿ ಮೆಟ್ಟದಿರಲಿ . ಆದರೆ ಕವಿಗಳು ತಮ್ಮ ಕೃತಿಗಳಲ್ಲಿ ವಾನರ ಸೈನ್ಯದಿಂದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದರು : ವಾಮನನ ಕಾಲಿನಿಂದ ಆಕಾಶವನ್ನು ಮುಟ್ಟಿದರು ; ಅರ್ಜುನನ ಕಾಲಿನಿಂದ ಶಿವನ ಗಂಟಲನ್ನು ಒತ್ತಿ ಮೆಟ್ಟಿದರು : ಇದು ಕವಿಗಳ ಸಾಮರ್ಥ್ಯ ” ಎಂದು ಹೇಳಿದ್ದಾನೆ .
2. ಕನ್ನಡ ನುಡಿಯಲ್ಲೇ ಮೋಕ್ಷ ಸಾಧನೆ ಎಂದು ಕವಿ ಮಹಲಿಂಗರಂಗ ಹೇಗೆ ಸಾಧಿಸುತ್ತಾರೆ ?
ಉತ್ತರ : ಮಹಲಿಂಗರಂಗನು ಕನ್ನಡ ಭಾಷೆಯ ಬಗ್ಗೆ ವರ್ಣಿಸುತ್ತಾ “ ಸುಲಿದ ಬಾಳೆಯ ಹಣ್ಣಿನಂತೆ : ಸಿಗುರು ತೆಗೆದ ಕಬ್ಬಿನಂತೆ : ಶಾಖ ಆರಿಹೋಗಿ ತಣ್ಣಗಾದ ಹಾಲಿನಂತೆ ಸುಲಭವಾಗಿರುವ , ಸುಲಲಿತವಾಗಿರುವ ಕನ್ನಡ ಭಾಷೆಯನ್ನು ಅರಿತು , ಮೋಕ್ಷವನ್ನು ಗಳಿಸಿಕೊಂಡರೆ ಸಾಲದೇ ? ಸಂಸ್ಕೃತ ಭಾಷೆಯಲ್ಲಿ ಅಂತಹುದು ಏನಿದೆ ? ” ಎಂದು ಪತ್ನಿಸುತ್ತಾನೆ . ಮುಕ್ತಿ ಪಡೆಯಲು ಕನ್ನಡದಲ್ಲೇ ದೇವರನ್ನು ಸ್ತುತಿಸಿ ಮುಕ್ತಿ ಪಡೆಯಬಹುದಲ್ಲವೇ ? ಸಂಸ್ಕೃತ ಭಾಷೆಯಷ್ಟೇ ಶಕ್ತಿ ಕನ್ನಡ ಭಾಷೆಗೂ ಇದೆ ಎಂದು ಕವಿ ಅಭಿಪ್ರಾಯಪಟ್ಟಿದ್ದಾನೆ .
3. ಕನ್ನಡಿಗರ ವಿಶೇಷತೆಯನ್ನು ಶ್ರೀ ವಿಜಯ ಹೇಗೆ ಸಾರಿದ್ದಾನೆ ?
ಉತ್ತರ : ಶ್ರೀವಿಜಯನು “ ಕನ್ನಡನಾಡಿನ ಜನರು ಪದದ ಅರ್ಥವನ್ನು ಅರಿತು ಮಾತನಾಡುವ ಸಾಮರ್ಥ್ಯವುಳ್ಳವರು . ತಾವು ಆಡುವ ಮಾತನ್ನು ಅರ್ಥಮಾಡಿಕೊಂಡು ನಡೆಯುವವರಾಗಿದ್ದರು . ಈ ಸಾಮಾನ್ಯ ಜನರು ನಿಜವಾಗಿಯು ಚತುರರು , ಅವರು ಶಿಕ್ಷಣವನ್ನು ಪಡೆಯದಿದ್ದರು . ಕಾವ್ಯವನ್ನು ರಚಿಸುವಷ್ಟು ಪರಿಣತಿ ಹೊಂದಿದ ಬುದ್ಧಿಯುಳ್ಳವರು ” ಎಂದು ಕನ್ನಡಿಗರ ಗುಣ ವಿಶೇಷತೆ ಹಾಗೂ ಕಾವ್ಯ ಶಕ್ತಿಯನ್ನು ವರ್ಣಿಸಿದ್ದಾನೆ .
4. ಕನ್ನಡ ಮತ್ತು ಸಂಸ್ಕೃತ ಭಾಷಾ ಬಳಕೆಯ ಬಗ್ಗೆ ನಯಸೇನ ಏನು ಹೇಳುತ್ತಾನೆ ?
ಉತ್ತರ : ನಯಸೇನನು , ಕಾವ್ಯ ರಚಿಸುವುದಾದರೆ ಶುದ್ಧ ಕನ್ನಡದಲ್ಲಿ ರಚಿಸಬೇಕು ; ಇಲ್ಲವೇ ಪೂರ್ಣವಾಗಿ ಸಂಸ್ಕೃತದಲ್ಲಿ ರಚಿಸಬೇಕು ; ಶುದ್ಧವಾದ ಕನ್ನಡದಲ್ಲಿ ಸಂಸ್ಕೃತವನ್ನು ತಂದು ತುರುಕುವುದು ಸರಿಯೇ ? ಇವೆರಡನ್ನು ಬೆರೆಸಿ ಕಾವ್ಯ ರಚನೆ ಮಾಡಿದರೆ ಅದು ಎಣ್ಣೆ ತುಪ್ಪಗಳ ಅಸ್ವಾದ ಮಿಶ್ರಣವಾಗುತ್ತದೆ ” ಎಂದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ .
5. ಕನ್ನಡ ನಾಡಿನ ಪ್ರಾಕೃತಿಕ ವರ್ಣನೆಯನ್ನು ಆಂಡಯ್ಯ ಕವಿ ಹೇಗೆ ಸಾರಿದ್ದಾರೆ ? ಅಥವಾ ಕನ್ನಡ ನಾಡಿನ ಪ್ರಾಕೃತಿಕ ಸಂಪತ್ತಿನ ಬಗ್ಗೆ ಕವಿಗಳು ಹೇಗೆ ವರ್ಣಿಸಿದ್ದಾರೆ ?
ಉತ್ತರ : ಆಂಡಯ್ಯ ಕನ್ನಡ ನಾಡಿನ ಸಸ್ಯ ಸಂಪತ್ತನ್ನು ಕುರಿತು ಕನ್ನಡನಾಡಿನಲ್ಲಿ ಮಲ್ಲಿಗೆ ಅಲ್ಲದೆ ಸಂಪಗೆ ಅಲ್ಲದೆ , ಕೆಂಪಾದ ತೆಂಗು ಅಲ್ಲದೆ , ನಾವು ಅಲ್ಲದೆ ಅಡಿಕೆ ಅಲ್ಲದೆ : ಗಿಡಮರಗಳೇ ಇಲ್ಲ ” ಎಂದು ವರ್ಣಿಸುತ್ತಾನೆ . ಕನ್ನಡ ನಾಡಿನಲ್ಲಿ ಉತ್ತಮ ಫಲ ನೀಡುವಂತಹ ಸಸ್ಯಗಳು ಸಮೃದ್ಧವಾಗಿವೆ ಎಂಬುದು ಆಂಡಯ್ಯನಿಗೆ ಕನ್ನಡ ನಾಡಿನ ಬಗ್ಗೆ ಇದ್ದ ಅಭಿಮಾನವನ್ನೂ ಅಂದಿನ ಸಮೃದ್ಧಿಯನ್ನೂ ಸೂಚಿಸುತ್ತದೆ .
ಇ ] ಕೆಳಗಿನ ಪ್ರಶ್ನೆಗೆ ಎಂಟು – ಹತ್ತು ವಾಕ್ಯದಲ್ಲಿ ಉತ್ತರಿಸಿ .
1. ಕನ್ನಡ ಭಾಷೆ ಹಾಗೂ ಸಾಹಿತ್ಯದ ಬಗ್ಗೆ ಕವಿಗಳಿಗಿರುವ ಅಭಿಮಾನ ಹೇಗೆ ವ್ಯಕ್ತವಾಗಿದೆ . ?
ಉತ್ತರ : ಶ್ರೀವಿಜಯನು “ ಕನ್ನಡನಾಡಿನ ಸಾಮಾನ್ಯ ಜನರು ನಿಜವಾಗಿಯು ಚತುರರು . ಅವರು ಶಿಕ್ಷಣವನ್ನು ಪಡೆಯದಿದ್ದರು ಕಾವ್ಯವನ್ನು ರಚಿಸುವಷ್ಟು ಪರಿಣತಿ ಹೊಂದಿದ ಬುದ್ಧಿಯುಳ್ಳವರು ” ಎಂದು ಕನ್ನಡಿಗರ ಗುಣ ವಿಶೇಷತೆ ವರ್ಣಿಸಿದ್ದಾನೆ . ನೇಮಿಚಂದ್ರನು ಕವಿಗಳ ಕಾವ್ಯ ಶಕ್ತಿಯನ್ನು ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಾ “ ಕವಿಗಳು ತಮ್ಮ ಕೃತಿಗಳಲ್ಲಿ ವಾನರ ಸೈನ್ಯದಿಂದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದರು . ವಾಮನನ ಕಾಲಿನಿಂದ ಆಕಾಶವನ್ನು ಮುಟ್ಟಿದರು . ಅರ್ಜುನನ ಕಾಲಿನಿಂದ ಶಿವನ ಗಂಟಲನ್ನು ಒತ್ತಿ ಮೆಟ್ಟಿದರು . ಇದು ಕವಿಗಳ ಸಾಮರ್ಥ್ಯ ” ಎಂದು ಹೇಳಿದ್ದಾನೆ . ನಯಸೇನನು , ಕಾವ್ಯ ರಚಿಸುವುದಾದರೆ ಶುದ್ಧ ಕನ್ನಡದಲ್ಲಿ ರಚಿಸಬೇಕು : ಇಲ್ಲವೇ ಪೂರ್ಣವಾಗಿ ಸಂಸ್ಕೃತದಲ್ಲಿ ರಚಿಸಬೇಕು : ಶುದ್ಧವಾದ ಕನ್ನಡದಲ್ಲಿ ಸಂಸ್ಕೃತವನ್ನು ತಂದು ತುರುಕುವುದು ಸರಿಯಲ್ಲ . ಎಂದು ಹೇಳುತ್ತಾ ಅಚ್ಚಗನ್ನಡದ ಪರ ದನಿ ಎತ್ತಿದ್ದಾನೆ . ಮಹಲಿಂಗರಂಗನು ಕನ್ನಡ ಭಾಷೆಯ ಸರಳತೆ , ಮಧುರತೆ , ಶಕ್ತಿಯ ಬಗ್ಗೆ ವರ್ಣಿಸುತ್ತಾ ” ಸುಲಿದ ಬಾಳೆಯ ಹಣ್ಣಿನಂತೆ : ಸಿಗುರು ತೆಗೆದ ಕಬ್ಬಿನಂತೆ : ಶಾಖ ಆರಿಹೋಗಿ ತಣ್ಣಗಾದ ಹಾಲಿನಂತೆ ಸುಲಭವಾಗಿದ್ದು , ಅದರಲ್ಲೇ ಮೋಕ್ಷವನ್ನು ಗಳಿಸಬಹುದು ; ಸಂಸ್ಕೃತ ಭಾಷೆಯಲ್ಲಿ ಅಂತಹುದು ಏನಿದೆ ? ” ಎಂದು ಕನ್ನಡ ಭಾಷೆಯ ಸತ್ವವನ್ನು ಅಭಿಮಾನದಿಂದ ಹೇಳಿಕೊಂಡಿದ್ದಾನೆ .
ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,
1. ಕಟ್ಟುಗೆ ಕಟ್ಟುದಿರ್ಕೆ ಕಡಲಂ ಕಪಿಸಂತತಿ ,
ಆಯ್ಕೆ : ಈ ವಾಕ್ಯವನ್ನು ಕನ್ನಡ ನಾಡು ನುಡಿ ‘ ಪದ್ಯದಲ್ಲಿರುವ ನೇಮಿಚಂದ್ರನು ರಚಿಸಿರುವ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕವಿಗಳ ಕವಿತಾ ಸಾಮರ್ಥ್ಯವನ್ನು ವರ್ಣಿಸುವ ಸಂದರ್ಭದಲ್ಲಿ ನೇಮಿಚಂದನು ಈ ಮಾತನ್ನು ಹೇಳಿದ್ದಾನೆ . ಪ್ರಸಿದ್ಧ ಕಾವ್ಯಗಳಲ್ಲಿ ಬರುವ ಘಟನೆಗಳು ನಡೆದವೋ ಇಲ್ಲವೋ ಆದರೆ ಅವನ್ನು ಕವಿಗಳು ತಮ್ಮ ಕಾವ್ಯಗಳ ಮೂಲಕ ಸಾಧ್ಯವಾಗಿಸಿದ್ದಾರೆ ಎಂದು ಕವಿ ಅಭಿಪ್ರಾಯ ಪಟ್ಟಿದ್ದಾನೆ .
ಸ್ವಾರಸ್ಯ : ‘ ರವಿ ಕಾಣದ್ದನ್ನು ಕವಿ ಕಂಡ ‘ ಎಂಬ ಲೋಕೋಕ್ತಿಯನ್ನು ನೇಮಿಚಂದ್ರನು ಇಲ್ಲಿ ಸ್ವಾರಸ್ಯಕರವಾಗಿ ಸಮರ್ಥಿಸಿದ್ದಾನೆ .
2. ಕಳೆದ ಸಿಗುರಿನ ಕಬ್ಬಿನಂದದಿ ,
ಆಯ್ಕೆ : ಈ ವಾಕ್ಯವನ್ನು ಕನ್ನಡ ನಾಡು ನುಡಿ ‘ ಪದ್ಯದಲ್ಲಿರುವ ಮಹಲಿಂಗರಂಗನು ರಚಿಸಿರುವ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕನ್ನಡ ಭಾಷೆಯ ಸರಳತೆ ಮತ್ತು ಅದರ ಶಕ್ತಿಯನ್ನು ಕುರಿತು ವರ್ಣಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾನೆ . ತಣ್ಣಗಿನ ಹಾಲಿನಂತೆ , ಸಿಗುರಿಲ್ಲದ ಕಬ್ಬಿನಂತೆ , ಸುಲಿದ ಬಾಳೆಯ ಹಣ್ಣಿನಂತೆ ಕನ್ನಡ ಸುಲಭ ಮತ್ತು ರುಚಿಕರವೆಂದಿದ್ದಾನೆ . ಸ್ವಾರಸ್ಯ : ಕನ್ನಡ ಭಾಷೆಯ ಸರಳ ಸುಂದರತೆಯನ್ನೂ ಮುಕ್ತಿಗಾಗಿ ಕನ್ನಡವೇ ಲೇಸೆಂಬುದನ್ನೂ ಕವಿ ಸ್ವಾರಸ್ಯಕರವಾಗಿ ಹೇಳಿದ್ದಾನೆ .
ಸ್ವಾರಸ್ಯ : ಸಂಸ್ಕೃತ ಭಾಷೆಯ ಪ್ರಭಾವಕ್ಕೆ ಸಿಕ್ಕಿ ನಾಶವಾಗುತ್ತಿದ್ದ ಅಚ್ಚ ಕನ್ನಡ ಭಾಷೆಯನ್ನು ಸಂರಕ್ಷಿಸಲು ನಯಸೇನ ಕವಿ , ದನಿ ಎತ್ತಿರುವುದು ಇಲ್ಲಿ ಸ್ವಾರಸ್ಯಕರವಾಗಿದೆ .
3. ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣಿತಮತಿಗಳ್ ,
ಆಯ್ಕೆ : ಈ ವಾಕ್ಯವನ್ನು ಕನ್ನಡ ನಾಡು ನುಡಿ ‘ ಪದ್ಯದಲ್ಲಿರುವ ಶ್ರೀವಿಜಯ ರಚಿಸಿರುವ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕವಿರಾಜಮಾರ್ಗದಲ್ಲಿ ಶ್ರೀವಿಜಯನು ಕನ್ನಡನಾಡಿನ ಶ್ರೀಸಾಮಾನ್ಯರೂ ಸಹ ಹೇಗೆ ಕಾವ್ಯ ರಚನಾ ಶಕ್ತಿಯನ್ನು ಹೊಂದಿದ್ದರೆಂಬುದನ್ನು ವರ್ಣಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾನೆ . ಕನ್ನಡ ನಾಡಿನ ಸಾಮಾನ್ಯಜನರು ಓದು – ಬರೆಹ ಕಲಿಯದಿದ್ದರೂ ಕಾವ್ಯ ಪ್ರಯೋಗಮಾಡುವುದರಲ್ಲಿ ಪರಿಣಿತರಾಗಿದ್ದರು ಎಂದು ಕವಿ ಹೇಳಿದ್ದಾನೆ .
ಸ್ವಾರಸ್ಯ : ಇಲ್ಲಿ ಕನ್ನಡ ನಾಡಿನ ಜನಪದರ ಕವಿತಾ ಸಾಮರ್ಥ್ಯವನ್ನು ಕುರಿತು ಕವಿ ಹೆಮ್ಮೆಯಿಂದ ಹೊಗಳಿರುವುದು ಸ್ವಾರಸ್ಯಕರವಾಗಿದೆ .
4. ತಕ್ಕುದೆ ಬೆರೆಸ ಧೃತಮುಮಂ ತೈಲಮುಮಂ ,
ಆಯ್ಕೆ : ಈ ವಾಕ್ಯವನ್ನು ‘ ಕನ್ನಡ ನಾಡು ನುಡಿ ‘ ಪದ್ಯದಲ್ಲಿರುವ ನಯಸೇನನು ರಚಿಸಿರುವ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ನಯಸೇನನು , ಕಾವ್ಯ ರಚಿಸುವುದಾದರೆ ಶುದ್ಧ ಕನ್ನಡದಲ್ಲಿ ರಚಿಸಬೇಕು . ಇಲ್ಲವೇ ಪೂರ್ಣವಾಗಿ ಸಂಸ್ಕೃತದಲ್ಲಿ ರಚಿಸಬೇಕು ; ಶುದ್ಧವಾದ ಕನ್ನಡದಲ್ಲಿ ಸಂಸ್ಕೃತವನ್ನು ತಂದು ತುರುಕುವುದು ಸರಿಯಲ್ಲ . ಇವೆರಡನ್ನು ಬೆರೆಸಿ ಕಾವ್ಯ ರಚನೆ ಮಾಡಿದರೆ ಅದು ಎಣ್ಣೆ ತುಪ್ಪಗಳ ಅಸ್ವಾದ ಮಿಶ್ರಣವಾಗುತ್ತದೆ ” ಎಂದು ಈ ಸಂದರ್ಭದಲ್ಲಿ ಹೇಳಿದ್ದಾನೆ .
5. ದಾಳಿಂಬಮಲ್ಲದೊಪ್ಪುವ ಚೆಂದೆಂಗಲ್ಲದೆ .
ಆಯ್ಕೆ : ಈ ವಾಕ್ಯವನ್ನು ಕನ್ನಡ ನಾಡು ನುಡಿ ‘ ಪದ್ಯದಲ್ಲಿರುವ ಆಂಡಯ್ಯನು ರಚಿಸಿರುವ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಆಂಡಯ್ಯ ಕವಿ ಕನ್ನಡ ನಾಡಿನ ಸಸ್ಯ ಸಂಪತ್ತನ್ನು ಕುರಿತು ವರ್ಣಿಸುವ ಸಂದರ್ಭದಲ್ಲಿ “ ಕನ್ನಡನಾಡಿನಲ್ಲಿ ಮಲ್ಲಿಗೆ ಅಲ್ಲದೆ ಸಂಪಗೆ ಅಲ್ಲದೆ : ಕೆಂಪಾದ ತೆಂಗು ಅಲ್ಲದೆ , ಮಾವು ಅಲ್ಲದೆ ಅಡಿಕೆ ಅಲ್ಲದೆ : ಗಿಡಮರಗಳೇ ಇಲ್ಲ ” ಎಂದು ವರ್ಣಿಸಿದ್ದಾನೆ .
ಸ್ವಾರಸ್ಯ : ಆಂಡಯ್ಯನಿಗೆ ಕನ್ನಡ ನಾಡಿನ ಬಗ್ಗೆ ಇದ್ದ ಅಭಿಮಾನವನ್ನೂ ಅಂದಿನ ಸಮೃದ್ಧಿಯನ್ನೂ ಇದು ಸೂಚಿಸುತ್ತದೆ .
9th Standard Kannada Nadu Nudi Poem Notes Question Answer Pdf Download
ಇತರೆ ಪದ್ಯಗಳು:
ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಪದ್ಯದ ನೋಟ್ಸ್
ಧನ್ಯವಾದಗಳು . ಸಮರ್ಪಕವಾದ ಉತ್ತರಗಳು. ಬಹಳ ಸೊಗಸಾಗಿದೆ
Superub answer