shabari lesson notes in kannada ,10th kannada shabari lesson question answer pdf SSLC
ಶಬರಿ ಪಾಠದ ಪ್ರಶ್ನೋತ್ತರಗಳು ನೋಟ್ಸ್ 2023
ತರಗತಿ : 10ನೇ ತರಗತಿ
ಪಾಠದ ಹೆಸರು : ಶಬರಿ
ಕೃತಿಕಾರರ ಹೆಸರು : ಪು.ತಿ ನರಸಿಂಹಚಾರ್ಯ
Table of Contents
ಲೇಖಕರ ಪರಿಚಯ :
ಪು.ತಿ. ನರಸಿಂಹಾಚಾರ್ ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ಯ ಅವರು ಶ . ೧೯೦೫ ರಲ್ಲಿ ಮಂಡ್ಯಜಿಲ್ಲೆಯ ಮೇಲುಕೋಟೆಯಲ್ಲಿ ಜನಿಸಿದರು . ಇವರು ಶಬರಿ , ಅಹಲ್ಯ , ಮೊದಲಾದ ಲಲಿತಪ್ರಬಂಧ ಕೃತಿಗಳನ್ನೂ ರಚಿಸಿದ್ದಾರೆ . ಶ್ರೀಯುತರ ‘ ಶ್ರೀ ಹರಿಚರಿತೆ ‘ ಕೃತಿಗೆ ಕರ್ನಾಟಕ ಸರ್ಕಾರದಿಂದ ‘ ಪಂಪ ಪ್ರಶಸ್ತಿ ‘ ನೀಡಿಗೌರವಿಸಲಾಗಿದೆ . ಶ್ರೀಯುತರಿಗೆ ‘ ಪಂಪ ಪ್ರಶಸ್ತಿ ಮತ್ತುಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ .
Shabari Lesson Notes in Kannada
ಅ ] ಒಂದೊಂದು ವಾಕ್ಯದಲ್ಲಿ ಉತ್ತರಿಸಿ .
೧. ಶ್ರೀರಾಮನಿಗೆ ಸಮರ್ಪಿಸಲು ಶಬರಿಏನನ್ನು ಸಂಗ್ರಹಿಸಿದ್ದಳು ?
ಶ್ರೀರಾಮನಿಗೆ ಸಮರ್ಪಿಸಲು ಶಬರಿ ಪರಿಮಳದ ಹೂವು , ಮಧುಪರ್ಕ ಮತ್ತುರುಚಿಕರ ಹಣ್ಣುಹಂಪಲುಗಳನ್ನು ಸಂಗ್ರಹಿಸಿದ್ದಳು .
೨. ಶಬರಿಗೀತನಾಟಕದ ಕರ್ತೃಯಾರು ?
ಶಬರಿ ಗೀತನಾಟಕದ ಕರ್ತೃ ಪು.ತಿ.ನರಸಿಂಹಾಚಾರ್ಯ
೩ ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು ?
ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಶಬರಿ .
೪. ಶ್ರೀ ರಾಮನ ತಂದೆಯ ಹೆಸರೇನು ?
ಶ್ರೀ ರಾಮನತಂದೆಯ ಹೆಸರು ದಶರಥ ,
೫. ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು ?
ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ದಂಡಕಾರಣ್ಯದಲ್ಲಿ ವಾಸಮಾಡುತ್ತಿದ್ದ ಕಬಂಧ ಎಂಬ ಹೆಸರಿನ ರಾಕ್ಷಸ . ( ದನು ಎಂಬ ಋಷಿ )
ಆ ] ಮೂರು – ನಾಲ್ಕು ವಾಕ್ಯದಲ್ಲಿ ಉತ್ತರಿಸಿ ,
೧. ರಾಮನ ಸ್ವಾಗತಕ್ಕಾಗಿ ಶಬರಿ ಮಾಡಿಕೊಂಡಿದ್ದ ಸಿದ್ಧತೆಗಳೇನು ?
ರಾಮನ ಸ್ವಾಗತಕ್ಕಾಗಿ ಶಬರಿಯು ಸವಿಯಾದ ಬಗೆಬಗೆಯ ಹಣ್ಣುಗಳನ್ನು , ಜೇನುತುಪ್ಪ ಅಧಿಕವಾಗಿರುವ ಮಧುಪರ್ಕವೆಂಬ ಪಾನೀಯವನ್ನು , ಸುವಾಸನೆಯಿಂದ ಕೂಡಿದ ಬಾಡದ ಹೂವುಗಳನ್ನು ಸಂಗ್ರಹಿಸಿ ಸಿದ್ಧಮಾಡಿಕೊಂಡಿದ್ದಳು .
೨. ಲಕ್ಷ್ಮಣನು ಅಣ್ಣನನ್ನು ಹೇಗೆ ಸಂತೈಸಿದನು ತಿಳಿಸಿ ,
ಲಕ್ಷ್ಮಣನು ಸೀತೆಗಾಗಿ ಪರಿತಪಿಸುತ್ತಿದ್ದ ಅಣ್ಣನಾದ ರಾಮನನ್ನು ಕುರಿತು “ ತಾಳಿಕೋ ಅಣ್ಣ ತಾಳಿಕೋ , ಸೂರ್ಯನೇ ತೇಜಗೆಡಲು ಕಾಂತಿಯನ್ನು ನೀಡುವವರು ಯಾರು ? ರಾಮನೇ ಧೈರ್ಯಗೆಡಲು ಲೋಕಕ್ಕೆ ಸೈರ್ಯ ನೀಡುವವರು ಯಾರು ? ” ಎಂದು ಹೇಳಿ ಸಂತೈಸಿದನು .
೩. ಶಬರಿಯು ರಾಮಲಕ್ಷ್ಮಣರನ್ನು ಉಪಚರಿಸಿದ ರೀತಿಯನ್ನು ವಿವರಿಸಿ .
ಶಬರಿಯು ರಾಮಲಕ್ಷ್ಮಣರನ್ನು ಕಂಡು ಬೆರಗಾಗಿ , ಹತ್ತಿರಕ್ಕೆ ಬಂದು , ಮೈಯನ್ನು ಮುಟ್ಟಿ , ಕಾಲಿಗೆ ಬಿದ್ದು ನಮಸ್ಕರಿಸಿ , ಕೈ ಕಣ್ಣಿಗೊತ್ತಿಕೊಂಡಳು . ಬಗೆಬಗೆಯ ಸುವಾಸನೆಯುಳ್ಳ ಹೂಮಾಲೆಯನ್ನು ಕೊರಳಿಗೆ ಹಾಕಿ ಸಂತಸಪಟ್ಟಳು . “ ಜಗದಲ್ಲಿ ಇದರಂತ ರುಚಿಯಾದ ಹಳೇ ಇಲ್ಲ . ನಿಮಗೆಂದೆ ತಂದೆನು ” ಎಂದು ಹೇಳುತ ಸವಿಯಾದ ಹಣ್ಣುಗಳನ್ನು ನೀಡಿ ಉಪಚರಿಸಿದಳು .
೪. ರಾಮನು ಗಿರಿವನವನ್ನು ಏನೆಂದು ಪ್ರಾರ್ಥಿಸಿದನು ?
ರಾಮನು ಗಿರಿವನಗಳನ್ನು ಕುರಿತು “ ಗಿರಿವನಗಳೇ ನಾನು ನಿಮ್ಮನ್ನು ಬೇಡಿಕೊಳ್ಳುವನು . ಹೇಳಿಕೆ ಪ್ರೀತಿಯರಾಣಿ ಸೀತೆಯು ನನಗೆ ದೊರೆಯುವಳೇ ? ಅವಳು ಇರುವ ಸ್ಥಳವನ್ನು ನೀವು ತಿಳಿದಿರುವಿರೇ ? ನನ್ನ ಹೃದಯದ ಈ ದುಃಖವು ನಾಶವಾಗುತ್ತಿಲ್ಲವಲ್ಲ ‘ ಎಂದು ಪ್ರಾರ್ಥಿಸಿದನು .
೫. ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣರು ಶಬರಿಗೆ ಏನು ಹೇಳಿದಳು ?
ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣರು ಶಬರಿಗೆ “ ನಾವು ನಿನ್ನ ಪ್ರೀತಿಯ ಸ್ವಾಗತದಿಂದ ಸಂತಸಗೊಂಡೆವು . ನಿನ್ನ ಸುಖದಲ್ಲಿ ನಮ್ಮ ಸುಖ ಕಂಡೆವು . ಕಣ್ಣಿಗೆ ಕಾಣದ ಆನಂದವನ್ನು ಅನುಭವಿಸುವ ಪುಣ್ಯ ನಮ್ಮದಾಯಿತು . ನಾವು ನಿನಗೆ ಎಂದೆಂದಿಗೂ ಋಣಿಗಳು ” ಎಂದು ಹೇಳಿದರು .
ಇ ] ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ .
೧. ಶಬರಿಯಚಿಂತೆ ಹಿಂಗಿಹೋದ ಸಂದರ್ಭದ ಸ್ವಾರಸ್ಯವನ್ನು ವಿವರಿಸಿ .
ರಾಮಲಕ್ಷ್ಮಣರನ್ನು ಕಂಡು ಶಬರಿ ಹಿಗ್ಗಿ , ಸಂತಸವನ್ನು ತುಂಬಿಕೊಳ್ಳುತ್ತಾಳೆ . ರಾಮಲಕ್ಷ್ಮಣರಿಗೆ ರುಚಿಕರ ಹಣ್ಣುಗಳನ್ನು ನೀಡಿ ಸತ್ಕರಿಸುತ್ತಾಳೆ . ರಾಮನನ್ನು ಕಂಡ ತಾನು ಪರಮಸುಖಿಯೆಂದು ನರ್ತಿಸುತ್ತಾಳೆ . ರಾಮನೂ ಕೂಡ “ ನಿನ್ನ ಆದರದಿಂದ ನಾವು ಸುಖ , ನಿನಗೆ ನಾವು ಋಣಿ ” ಎನ್ನುತ್ತಾನೆ . ಶಬರಿಯು ಕಣ್ಣೀರು ತುಂಬಿಕೊಂಡು “ ನನ್ನ ಜಾಡನ್ನು ಹಿಡಿದು ಬಂದು ಸಂತಸ ನೀಡಿದಿರಿ , ಹಸಿವು ತೃಷೆ ಹಿಂಗಿತೇ ? ನಾನೊಬ್ಬಳು ಬಡವಿ , ನನ್ನ ಮೇಲೆ ಮರುಕ ತೋರಿದಿರಾ ? ” ಎನ್ನುತ್ತಾಳೆ . ಶ್ರೀರಾಮನು “ ನಿನ್ನ ಆತಿಥ್ಯದಲ್ಲಿ ಸ್ವಲ್ಪವೂ ಕೊರತೆಯಿಲ್ಲ . ನಮ್ಮ ಅರಮನೆಗಿಂತ ನಿನ್ನ ಆಶ್ರಮವೇ ಚೆಂದ , ನಿನ್ನ ಮನೆಯೇ ನಮ್ಮಮನೆ , ನೀನೇ ತಾಯಿಯಂತೆ ” ಎನ್ನುತ್ತಾನೆ . ಶಬರಿಯು “ ನಿನ್ನ ರೂಪದಂತೆ ನಿನ್ನ ಮಾತು ಸುಂದರ ಹಾಗೂ ಉದಾರ , ನಾನು ಧನ್ಯಳಾದ ಸಿದ್ಧ ಮಾತಂಗರ ವರ ನನಗೆ ಫಲಿಸಿತು . ನಿಮ್ಮನ್ನು ಕಂಡು ಪುಣ್ಯವು ತುಂಬಿತು . ಗುರುಪೂಜೆಯನ್ನು ಮಾಡಿದ ಪುಣ್ಯ ನನಗೆ ಇಂದು ಸೇರಿತು . ನನ್ನ ಚಿಂತೆಯೆಲ್ಲ ಹಿಂಗಿ ಹೋಯಿತು ” ಎನ್ನುತ್ತಾಳೆ . ಶ್ರೀರಾಮನು ಗುರುಗಳ ಮಹಿಮೆಯನ್ನು ಬಲ್ಲೆನೆಂದು ಹೇಳುತ್ತ “ ದುಃಖವನ್ನು ಮರೆಸಿ , ಶಾಂತಿ ನೀಡುವ ಈ ವನದಲ್ಲಿ ನೀನು ಶುದ್ಧ ಪ್ರೇಮಮೂರ್ತಿಯಾಗಿದ್ದೀಯೆ . ಈ ದಿನ ನಮಗೆ ಸುದಿನ ” ಎಂದು ಶಬರಿಯನ್ನು ಬಾಯಿತುಂಬ ಹೊಗಳುತ್ತಾನೆ .
೨. ಶಬರಿಯ ಸಡಗರ , ಸಂತೋಷ ಮೇಳದವರ ಹಾಡಿನಲ್ಲಿ ಹೇಗೆ ವರ್ಣಿತವಾಗಿದೆ ?
ತಿಳಿಸಿ ರಾಮನು ಬಂದುತನ್ನ ಆಶ್ರಮದಲ್ಲಿ ನಿಂತಿರುವುದನ್ನು ನೋಡಿ ಶಬರಿ ಆಶ್ಚರ್ಯಪಟ್ಟಳು . ರಾಮನ ಹತ್ತಿರ ಬಂದು ಅವನನ್ನು ಮುಟ್ಟಿ , ಪಾದಕ್ಕೆ ನಮಸ್ಕರಿಸಿ , ಕೈಯನ್ನು ಕಣ್ಣಿಗೆ ಒತ್ತಿಕೊಂಡು ಕಣ್ಣೀರು ಸುರಿಸಿದಳು . ಗದ್ಗದ ಸ್ವರದಿಂದ “ ಬನ್ನಿರಿ ” ಎಂದು ಆಹ್ವಾನಿಸಿದಳು . “ ಸಿದ್ಧತೆಯೇ ಇಲ್ಲವಲ್ಲ ” ಎಂದು ಹಂಬಲಿಸಿದಳು . ಮನಸ್ಸಿನ ಬಯಕೆಯಂತೆ ಬಗೆಬಗೆಯ ಕಂಪು ಇರುವ ವನಮಾಲೆಯನ್ನು ರಾಮನ ಕೊರಳಿಗೆ ಇಟ್ಟು ಹಿಗ್ಗಿದಳು . ಜಗತ್ತಿನಲ್ಲಿ ಇಂತಹ ರುಚಿಕರವಾದ ಹದ್ದೇ ಇಲ್ಲವೆಂದು ಹೇಳುತ್ತ . ನಿಮಗಾಗಿ ತಂದಿದ್ದೇನೆಂದು ತಿಳಿಸಿ ರಾಮನ ಕೈಗೆ ಇತ್ತಳು . ಶಬರಿಯ ಸೇವೆಯಿಂದ ರಾಮನು ಸುಪ್ರಸನ್ನನಾದನು . ರಾಮಲಕ್ಷ್ಮಣರು ಧನ್ಯತಾಭಾವದಿಂದ ಮಂದಹಾಸ ಬೀರಿದರು . ಹೀಗೆ ಶಬರಿಯ ಸಡಗರ , ಸಂತೋಷ ಮೇಳದವರ ಹಾಡಿನಲ್ಲಿ ವರ್ಣಿತವಾಗಿದೆ .
೩ ‘ ನಂಬಿ ಕೆಟ್ಟವರಿಲ್ಲ ‘ ಎಂಬ ಮಾತು ಶಬರಿಯ ಪಾಲಿಗೆ ಹೇಗೆ ನಿಜವಾಗಿದೆ ?
ಶಬರಿ ಮಾತಂಗ ಋಷಿಯ ಆಶ್ರಮದಲ್ಲಿ ಇರುತ್ತಾಳೆ , ಸಿದ್ಧರಾದ ಮಾತಂಗ ಋಷಿಗಳು ಶಬರಿಯ ಮನದಾಸೆಯನ್ನು ತಿಳಿದವರಾಗಿದ್ದು , “ ರಾಮಲಕ್ಷ್ಮಣರು ಆಶ್ರಮಕ್ಕೆ ಬಂದೇ ಬರುತ್ತಾರೆ . ನಿನ್ನ ಇಷ್ಟಾರ್ಥ ನೆರವೇರುತ್ತದೆ ” ಎಂದಿದ್ದರು . ಅವರ ಮಾತಿನಂತೆ ರಾಮಲಕ್ಷ್ಮಣರು ಶಬರಿಯ ಆಶ್ರಮಕ್ಕೆ ಭೇಟಿ ನೀಡುತ್ತಾರೆ . ಶಬರಿಯು ರಾಮನ ದರ್ಶನದಿಂದ ಪುಳಕಿತಳಾದಳು . ಕುಂಬ ರಾಮನ ದರ್ಶನ ಮಾಡಿ , ಮುಟ್ಟಿ ನಮಸ್ಕರಿಸಿ , ಸಂಭ್ರಮಿಸಿದಳು . ಪರಿಮಳದ ವನಮಾಲೆಯನ್ನು ರಾಮನ ಕೊರಳಿಗೆ ಹಾಕಿ , ರುಚಿಕರ ಹಣ್ಣುಗಳನ್ನು ನೀಡಿ ಉಪಚರಿಸಿದಳು . ಧನ್ಯಳಾದೆನೆಂದು ಸಂತಸ ವ್ಯಕ್ತಪಡಿಸಿದಳು . ಹಲವಾರು ವರ್ಷಗಳಿಂದ ರಾಮನದರ್ಶನಕ್ಕಾಗಿ ಕಾದು , ಮುನಿಗಳ ಮಾತನ್ನು ನಂಬಿ , ರಾಮನು ಬರುವ ಸುದಿನವನ್ನು ಎದುರು ನೋಡುತ್ತಿದ್ದ ಶಬರಿಗೆ ರಾಮನ ದರ್ಶನವಾಯಿತು . ಶಬರಿಯ ಮನದಾಸೆ ಈಡೇರಿತು . ಹಾಗಾಗಿ “ ನಂಬಿಕೆಟ್ಟವರಿಲ್ಲ ‘ ಎಂಬ ಮಾತು ಶಬರಿಯ ಪಾಲಿಗೆ ನಿಜವಾಯಿತು .
ಈ ] ಸಂದರ್ಭ ಸಹಿತ ವಿವರಿಸಿ
೧. “ ನಾಚುತಿಹನಿ ಪೂಜೆಯೇ ನಲುಮೆಯಿಂದ . ”
ಸಂದರ್ಭ : ತನ್ನಿಂದ ಇನಿತು ಉಪಕಾರವಿಲ್ಲದಿದ್ದರು ತನ್ನನ್ನು ಪ್ರೀತಿಯಿಂದ ನೆನೆಯುತ್ತ ಹಂಬಲಿಸುತ್ತಿರುವ ವೃದ್ಧೆ ಶಬರಿಯನ್ನು ಕಂಡ ಸಂದರ್ಭದಲ್ಲಿ ರಾಮನು ಲಕ್ಷ್ಮಣನಿಗೆ ಈ ಮಾತನ್ನು ಹೇಳುತ್ತಾನೆ .
ಸ್ವಾರಸ್ಯ : – ಪೂಜೆಯಾದ ಶಬರಿಯು ತನ್ನನ್ನು ಪ್ರೀತಿಯಿಂದ ನೆನೆಯುತ್ತ , ಬರುವಿಕೆಗಾಗಿ ಭಕ್ತಿಯಿಂದ ಹಂಬಲಿಸುತ್ತ ಇರುವ ದೃಶ್ಯವನ್ನು ನೋಡಿ ರಾಮನು “ ಅವಳ ಅನುರಾಗವನ್ನು ಕಂಡು ನಾಚಿದೆನು ” ಎಂದು ಹೇಳುವುದು ಸ್ವಾರಸ್ಯಪೂರ್ಣವಾಗಿದೆ .
೨. “ ತಾಯಿ , ದಾರಿಗರಿಗೆ ಬೀಡಿಲ್ಲಿ ದೊರೆಯುವುದೇ ? ”
ಸಂದರ್ಭ : -ಮಾತಂಗಾಶ್ರಮವನ್ನು ಪ್ರವೇಶಿಸಿದ ಸಂದರ್ಭದಲ್ಲಿ “ ಎಂದು ಕಾಣುವೆನು ಶ್ರೀರಾಮನನ್ನು , ಸನ್ನಂಗಳ ಮೂರುತಿಯನ್ನು ” ಎಂದು ಹಾಡುತ್ತ ತನಗಾಗಿ ಹಂಬಲಿಸುತ್ತಿರುವ ಶಬರಿಯನ್ನು ಕಂಡು ರಾಮನು ಈ ಮಾತನ್ನು ಹೇಳುತ್ತಾನೆ .
ಸ್ವಾರಸ್ಯ : – ತನಗಾಗಿ ಹಂಬಲಿಸುತ್ತಿರುವ ಶಬರಿಯನ್ನು ಕುರಿತು ರಾಮನು ಏನೂ ಅರಿಯದವನಂತೆ “ ದಾರಿಗರಾದ ನಮಗೆ ಇಲ್ಲಿ ಉಳಿದುಕೊಳ್ಳಲು ಸ್ಥಳಾವಕಾಶ ದೊರೆಯುವುದೇ ? ” ಎಂದು ಕೇಳುವುದು ಸ್ವಾರಸ್ಯಪೂರ್ಣವಾಗಿದೆ .
೩. “ ರೂಪಿನಂತೆ ಮಾತುಕೂಡ ಎನಿತುದಾರವಾಗಿದೆ “?
” ಸಂದರ್ಭ : -ರಾಮನು ಶಬರಿಯ ಅತಿಥಿ ಸತ್ಕಾರದ ಪರಿಯನ್ನು ಕುರಿತು “ ನಿನ್ನಆತಿಥ್ಯದ ಸವಿಯು ಅಯೋಧ್ಯೆಯ ಅರಮನೆಯ ಆತಿಥ್ಯಕ್ಕಿಂತ ಮಿಗಿಲಾದುದು . ಇಷ್ಟು ಪ್ರೀತಿಯನ್ನು ತೋರುವ ನಿನ್ನನ್ನು ತಾಯಿ ಎಂದು ತಿಳಿಯುವೆವು ” ಎಂದ ಸಂದರ್ಭದಲ್ಲಿ ಶಬರಿಯು ಈ ಮಾತನ್ನು ಹೇಳುತ್ತಾಳೆ .
ಸ್ವಾರಸ್ಯ : – ರಾಮನ ಪ್ರೀತಿಯ ಮಾತುಗಳು ಅವನ ರೂಪಿನಂತೆ ಮಧುರವಾದುದು ” ಎಂದು ಹೇಳುವ ಮೂಲಕ ಶಬರಿಯು ರಾಮನ ವ್ಯಕ್ತಿತ್ವವನ್ನು ಬಹುಸ್ವಾರಸ್ಯಪೂರ್ಣವಾಗಿ ವರ್ಣಿಸುತ್ತಾಳೆ .
೪. “ ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು . ”
ಸಂದರ್ಭ : -ರಾಮನದರ್ಶನ ಭಾಗ್ಯದಿಂದ ಸಂತುಷ್ಟಳಾದ ಶಬರಿಯು ಮುಕ್ತಿಯನ್ನು ಪಡೆಯುವುದಕ್ಕಾಗಿ ಅಗ್ನಿ ಪ್ರವೇಶಿಸಿದ ಸಂದರ್ಭದಲ್ಲಿ ರಾಮನು ಈ ಮಾತನ್ನು ಹೇಳುತ್ತಾನೆ . ಒಲಿದವರು ಉರಿವ ಬತ್ತಿಯ ಕಪ್ಪನ್ನು ನೋಡುವುದಿಲ್ಲ ” ಎಂಬ ಮಾತು ಶಬರಿಯ ರಾಮಭಕ್ತಿಯದು
ಸ್ವಾರಸ್ಯ : – “ ಬೆಳಕಿಗೆ ಶ್ರೇಷ್ಠತೆಯನ್ನು ಬಹುಸ್ವಾರಸ್ಯಪೂರ್ಣವಾಗಿ ವರ್ಣಿಸುತ್ತದೆ .
೫. “ ಆವುದೀ ಮರುಳು ? ನಮ್ಮೆಡೆಗೆ ಬರುತಿಹುದು”
ಈ ವಾಕ್ಯವನ್ನು ಪು . ತಿ . ನರಸಿಂಹಾಚಾರ್ ಅವರು ರಚಿಸಿರುವ ‘ ಶಬರಿ ‘ ಗೀತನಾಟಕದಿಂದ ಆಯ್ದ ‘ ಶಬರಿ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ಸಂದರ್ಭ : -ಸೀತಾಪಹರಣದ ಅನಂತರ ಶೋಕತಪ್ತರಾದ ರಾಮಲಕ್ಷ್ಮಣರು ಸೀತೆಯನ್ನು ಹುಡುಕುತ್ತ ತಪಸ್ವಿ ದನುವಿನ ಸೂಚನೆಯಂತೆ ಮತಂಗಾಶ್ರಮವನ್ನು ಪ್ರವೇಶಿಸುವ ಸಂದರ್ಭದಲ್ಲಿ ಎದುರಿಗೆ ಬರುತ್ತಿದ್ದ ವೃದ್ಧೆಯನ್ನು ( ಶಬರಿಯನ್ನು ಕಂಡು ರಾಮನು ಈ ಮಾತನ್ನು ಲಕ್ಷ್ಮಣನಿಗೆ ಹೇಳುತ್ತಾನೆ .
ಸ್ವಾರಸ್ಯ : ಶ್ರೀರಾಮನ ಬರುವಿಕೆಗಾಗಿಕಾದು , ಕಾತರಿಸಿ , ಮರುಳಳಂತೆ ಆಗಿದ್ದ ವೃದ್ಧೆ ಶಬರಿಯನ್ನು ಕಂಡು ರಾಮಲಕ್ಷ್ಮಣರು ಭಯಗೊಂಡದ್ದನ್ನು ಈ ಮಾತಿನಲ್ಲಿ ಸ್ವಾರಸ್ಯ ಪೂರ್ಣವಾಗಿ ವರ್ಣಿಸಲಾಗಿದೆ .
ಅ ] ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ
೧. ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಗಗಳು :
ಅ ) ಐ . ಔ ಆ ) ಅ , ಆ ಇ)ಎ ಏ ಈ ) ಅಂ , ಅಃ
೨ ‘ ದನುಪೇಳ್ದ ದಾರಿಯೊಳೆ ನಾವು ಬಂದಿಹೆವೆ ‘ ಈ ವಾಕ್ಯದ ಕೊನೆಯಲ್ಲಿ ಇರಬೇಕಾದ ಲೇಖನ ಚಿಹ್ನೆ :
ಅ ) ಅರ್ಧವಿರಾಮ ಆ) ಪ್ರಶ್ನಾರ್ತಕ ಇ ) ಆವರಣ ಈ ) ಭಾವಸೂಚಕ
೩. ಕನ್ನಡ ವರ್ಣಮಾಲೆಯಲ್ಲಿರುವ ಅವರ್ಗೀಯ ವ್ಯಂಜನಗಳ ಸಂಖ್ಯೆ :
೨ ) ೧೩ ಆ ) ೨೫ ಇ)೯ ಈ)೩೪
೪) ಮತಂಗಾಶ್ರಮ ‘ ಇಲ್ಲಿರುವ ಸಂಧಿ:
ಅ) ಆಗಮಸಂಧಿ ಆ)ಸವರ್ಣದೀರ್ಘ ಸಂಧಿ ಇ) ಗುಣಸಂಧಿ ಈ) ಲೋಪಸಂಧಿ
೫. ‘ ಅಹುದಹುದು ‘ ಇದು ಈ ವ್ಯಾಕರಣಾಂಶವಾಗಿದೆ :
ಅ ) ಜೋಡುನುಡಿ ಆ) ದ್ವಿರುಕ್ತಿ ಇ) ಅನುಕರಣಾವ್ಯಯ ಈ) ವಿದ್ಯರ್ಥಕ
೬. ‘ ಪೆರೆ ‘ ಪದದಅರ್ಥ:
ಅ) ಚಂದ್ರ ಆ)ಸೂರ್ಯ ಇ)ನಕ್ಷತ್ರ ಈ)ಆಕಾಶ
೭. ‘ ಶೋಕದುಲ್ಕೆ ‘ ಇಲ್ಲಿರುವ ಅಲಂಕಾರ
ಅ ) ಉಪಮ ಆ ) ರೂಪಕ ಇ ) ದೃಷ್ಟಾಂತ ಈ) ಅರ್ಥಾಂತರನ್ಯಾಸ
೮. ಸ್ವಲ್ಪ ಉಸಿರಿನಿಂದ ಉಚ್ಚರಿಸಲ್ಪಡುವ ವ್ಯಂಜನಗಳನ್ನು ಹೀಗೆನ್ನುವರು :
ಅ ) ಅಲ್ಪ ಪ್ರಾಣಗಳು ಆ ) ಮಹಾ ಪ್ರಾಣಗಳು ಇ ) ಅನುನಾಸಿಕಗಳು ಈ) ಸಂಧ್ಯಾಕ್ಷರಗಳು
೯ ಕನ್ನಡ ವರ್ಣಮಾಲೆಯಲ್ಲಿರುವ ಸಂಧ್ಯಾಕ್ಷರಗಳು:
ಅ) ಅಂ, ಅಃ ಆ) ಐ, ಔ ಇ) ಎ,ಏ ಈ)ಉ, ಊ
೧೦. ವರ್ಗದ ಪಂಚಮಾಕ್ಷರಗಳನ್ನು ಅಕ್ಷರಗಳನ್ನು ಹೀಗೆನ್ನುವರು
ಅ) ಅಲ್ಪ ಪ್ರಾಣಗಳು ಆ) ಮಹಾ ಪ್ರಾಣಗಳು ಇ) ವ್ಯಂಜನಾಕ್ಷರ ಈ) ಅನುನಾಸಿಕಗಳು
೧೧) ʼವನಮಾಲೆʼ ಇದು ಈ ಸಮಾಸಕ್ಕೆ ಉದಾಹರಣೆ:
ಅ) ಕರ್ಮಧಾರಯ ಸಮಾಸ ಆ)ಅಂಶಿ ಸಮಾಸ ಇ) ತತ್ಪುರುಷ ಸಮಾಸ ಈ) ಕ್ರಿಯಾಸಮಾಸ
೧೨. ವರ್ಗದ ದ್ವಿತೀಯಾಕ್ಷರಗಳು ಹಾಗೂ ಚತುರ್ಥಾಕ್ಷರಗಳನ್ನು ಹೀಗೆನ್ನುತ್ತಾರೆ :
ಅ ) ಅಲ್ಪಪ್ರಾಣಗಳು ಆ ) ಮಹಾಪ್ರಾಣಗಳು ಇ ) ಅನುನಾಸಿಕಗಳು ಈ ) ಸಂಧ್ಯಾಕ್ಷರಗಳು
thanks