9ನೇ ತರಗತಿ ಕನ್ನಡ ಮೌಲ್ವಿ ಪಾಠದ ನೋಟ್ಸ್, 9th Standard Kannada Moulvi Lesson Questions and Answers Notes Pdf Download 2022
ತರಗತಿ : 9ನೇ ತರಗತಿ
ಪಾಠದ ಹೆಸರು : ಕನ್ನಡ ಮೌಲ್ವಿ
ಕೃತಿಕಾರರ ಹೆಸರು : ಗೊರೂರು ರಾಮಸ್ವಾಮಿ ಅಯ್ಯಂಗಾರ್
Table of Contents
ಕೃತಿಕಾರರ ಪರಿಚಯ :
ಗೊರೂರು ರಾಮಸ್ವಾಮಿ ಅಯ್ಯಂಗಾರ್
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕ್ರಿ.ಶ. ೧೯೦೪ ರಲ್ಲಿ ಹಾಸನ ಜಿಲ್ಲೆಯ ಗೊರೂರಿನಲ್ಲಿ ಜನಿಸಿದರು . ಇವರು ಗರುಡಗಂಬದ ದಾಸಯ್ಯ , ಮೆರವಣಿಗೆ , ಹೇಮಾವತಿ ತೀರದಲ್ಲಿ , ಪುನರ್ಜನ್ಯ , ನಮ್ಮ ಊರಿನ ರಸಿಕರು ಮುಂತಾದ ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ . ಅಮೆರಿಕದಲ್ಲಿ ಗೊರೂರು ಕೃತಿ ಪ್ರವಾಸಕಥನವಾಗಿದ್ದು , ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿದೆ . ಇವರಿಗೆ ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್ , ೧೯೬೭ ರಲ್ಲಿ ತರೀಕೆರೆಯಲ್ಲಿ ನಡೆದ ಜಾನಪದ ಸಮ್ಮೇಳನದ ಅಧ್ಯಕ್ಷರಾಗಿ ಮತ್ತು ೧೯೮೨ ರಲ್ಲಿ ಶಿರಸಿಯಲ್ಲಿ ಸಮಾವೇಶಗೊಂಡಿದ್ದ ೫೫ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪುರಸ್ಕೃತರಾಗಿದ್ದಾರೆ.
Kannada Moulvi Lesson Questions and Answers
ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯಗಳಲ್ಲಿ ಉತ್ತರಿಸಿ ,
1 , ಕನ್ನಡ ಮೌಲ್ವಿಯ ವೃತ್ತಿ ಯಾವುದು ?
ಉತ್ತರ : ಕನ್ನಡ ಮೌಲ್ವಿಯವರದು ಪ್ರಾಥಮಿಕ ಶಾಲಾ ಶಿಕ್ಷಕ ವೃತ್ತಿ
2. ಡಿ.ವಿ.ಜಿ.ಯವರ ಯಾವ ಕೃತಿ ಮೌಲ್ವಿಯ ಬಾಯಿಗೆ ಪೂರ್ತಿ ಬರುತಿತ್ತು ?
ಉತ್ತರ : ಡಿ.ವಿ.ಜಿ.ಯವರ ‘ ಉಮರನ ಒಸಗೆ ‘ ಕೃತಿ ಮೌಲ್ವಿಯ ಬಾಯಿಗೆ ಪೂರ್ತಿ ಬರುತಿತ್ತು ,
3. ಮೌಲ್ವಿ ಹಿಡಿದಿದ್ದ ಕನ್ನಡದ ಪುಸ್ತಕ ಯಾವುದು ?
ಉತ್ತರ : ಮೌಲ್ವಿ ಹಿಡಿದಿದ್ದ ಕನ್ನಡದ ಪುಸ್ತಕ ‘ ಕುಮಾರವ್ಯಾಸ ಭಾರತ ‘
4. ಕನ್ನಡದ ಮೌಲ್ವಿ ಎಂದು ಹೆಸರಾಗಿದ್ದವರು ಯಾರು ?
ಉತ್ತರ : ಕನ್ನಡದ ಮೌಲ್ವಿ ಎಂದು ಹೆಸರಾಗಿದ್ದವರು ಒಬ್ಬ ಮುಸ್ಲಿಮ್ ಗುರು .
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ
1. ಮೌಲ್ವಿಯ ವಿದ್ಯಾಭ್ಯಾಸ ಹೇಗಾಯಿತು ?
ಉತ್ತರ : ಮೌಲ್ವಿಯ ಊರಿನಲ್ಲಿ ಉರ್ದು ಶಾಲೆ ಇರಲಿಲ್ಲ . ಅವರ ತಂದೆಯವರಿಗೂ ಉರ್ದು ಓದಲೂ ಬರೆಯಲೂ ಬಾರದು . ಆರು ಮೈಲಿ ದೂರದ ಹಳ್ಳಿಯಲ್ಲಿ ಒಂದು ಉರ್ದು ಶಾಲೆ ಇತ್ತು . ಅಲ್ಲಿಯ ಉಪಾಧ್ಯಾಯರು ವಾರದಲ್ಲಿ ಎರಡು ದಿನ ( ಶನಿವಾರ , ಭಾನುವಾರ ) ಮನೆಗೆ ಬಂದು ತಮ್ಮ ಮಗನಿಗೆ ಉರ್ದು ಪಾಠವನ್ನು ಹೇಳುವಂತೆ ಅವರ ತಂದೆ ಗೊತ್ತು ಮಾಡಿದ್ದರು . ಆ ಉಪಾಧ್ಯಾಯರು ಬುದ್ಧಿವಂತರು . ಆದ್ದರಿಂದ ಮೌಲ್ವಿ ಉರ್ದುವನ್ನು ಬೇಗ ಬೇಗ ಕಲಿತರು .
2. ಮಸೇನ್ ಕೃಷ್ಣನ ಅಭಿನಯದ ಬಗ್ಗೆ ತಿಳಿಸಿ ,
ಮೌಲ್ವಿಯವರ ಬಾಲ್ಯದಲ್ಲಿ ಅವರ ಹಳ್ಳಿಯಲ್ಲಿ ಒಬ್ಬ ಯಕ್ಷಗಾನದಲ್ಲಿ ಕೃಷ್ಣನ ಪಾತ್ರವನ್ನು ಅತ್ಯುತ್ಕೃಷ್ಟವಾಗಿ ಅಭಿನಯಿಸುತ್ತಿದ್ದನು . ರಂಗಸ್ಥಳದಲ್ಲಿ ಬಂದು ನಿಂತರೆ ಅವನ ವೇಷವನ್ನು , ವಾಕ್ ಶುದ್ಧಿಯನ್ನು ನೋಡಿ ವೈದಿಕ ಮನೆತನದ ವೃದ್ಧ ಸ್ತ್ರೀಯರೂ ಸಹ ಮೈ ಮರೆತು “ ಕೃಷ್ಣ ಪರಮಾತ್ಮ ಕಾಪಾಡಪ್ಪ ” ಎಂದು ಕೈ ಮುಗಿದು ಬಿಡುತ್ತಿದ್ದರು . ಆನಂತರ ಮೌಲ್ವಿಯವರು “ ಕೃಷ್ಣ ಪರಮಾತ್ಮನಲ್ಲಿ ಬಂದ ಇವ ಹೊಸಕೇರಿಯ ಹುಸೇನ್ ಸಾಬಿ ” ಎಂದರೂ ಸಹ ಆ ವೃದ್ಧೆಯರು “ ಹುಸೇನ್ ಸಾಬಿಯಂತ ಹುಸೇನ್ ಸಾಬಿ , ನಾವು ಕೈ ಮುಗಿದಿರುವುದು ತಲುಪುವುದು ಶ್ರೀ ಕೃಷ್ಣನಿಗೆ ಇವನು ಯಾರಾದರೇನು ? ” ಎನ್ನುತ್ತಿದ್ದರು . ಕೊನೆಗೆ ಆ ಸಾಹೇಬನಿಗೆ “ ಹುಸೇನ್ ಕೃಷ್ಣ ” ಎಂದೇ ಹೆಸರಾಯಿತು ,
3. ಕನ್ನಡ ಮೌಲ್ವಿಯ ವೇಷಭೂಷಣ ಹೇಗಿತ್ತು ?
ಉತ್ತರ ಕನ್ನಡ ಮೌಲ್ವಿಯು , ಆಜಾನುಬಾಹುವಾಗಿ ಪುಷ್ಟವಾಗಿ ಬೆಳೆದಿದ್ದ ಎತ್ತರದ ಕೆಂಪನೆಯ ಆಳು . ಮುಖದಲ್ಲಿ ಸಹ ಒಳ್ಳೆಯ ಕಳೆ ಇತ್ತು , ಕಣ್ಣಿನ ದೃಷ್ಟಿ ತೀಕ್ಷ್ಯವಾಗಿತ್ತು . ಗಡ್ಡ ಪೂರ್ಣವಾಗಿ ಬೆಳ್ಳಗಾಗಿ ಶುದ್ಧಿ ಮಾಡಿದ್ದ ಹತ್ತಿಯ ತುಪ್ಪಳದಂತೆ ತೋರುತ್ತಿತ್ತು , ವಿಶಾಲವಾದ ಹಣೆ , ಗಂಭೀರವಾದ ಮುಖ , ಮಡಿ – ಮಡಿ ಇಸ್ತೀ ಮಾಡಿದ್ದ ಬೆಳೆಯ ಶರಾಯಿ ( ಕೋಟು ) ಇವುಗಳಿಂದ ಆತನನ್ನು ನೋಡುವವರಿಗೆ ಇವನೊಬ್ಬ ಮರ್ಯಾದಸ್ತ ಸದೃಹಸ್ಥ ಎಂಬ ಭಾವನೆ ಉಂಟಾಗುತ್ತಿತ್ತು .
ಇ ] ಕೊಟ್ಟಿರುವ ಪ್ರಶ್ನೆಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ ,
1. ಗೊರೂರು ಹಾಗೂ ಮೌಲ್ವಿಯ ನಡುವೆ ನಡೆದ ಸಂಭಾಷಣೆಯನ್ನು ಸಂಕ್ಷೇಪಿಸಿ ಬರೆಯಿರಿ .
ಗೊರೂರರು ಪ್ರಯಾಣಿಸುತ್ತಿದ್ದ ಬಸ್ಸಿಗೆ ಒಬ್ಬ ಮುಸಲ್ಮಾನ ಹತ್ತಿದ , ಅವರನ್ನು ಅವನ ಕಡೆಗೆ ಆಕರ್ಷಿಸಿದ್ದು ಆ ಗೃಹಸ್ಥನ ಕೈಲಿದ್ದ ‘ ಕುಮಾರವ್ಯಾಸ ಭಾರತ ‘ ಕೃತಿ , ಹೇಗಾದರೂ ಮಾಡಿ ಆತನನ್ನು ಮಾತನಾಡಿಸಬೇಕು ಎಂದು ಬಳಿಗೆ ಹೋಗಿ ಮಾತನ್ನಾರಂಭಿಸಿದರು .
ಗೊರೂರು : ನಿಮಗೆ ಕನ್ನಡ ಬರುತ್ತದೆಯೇ ?
ಮೌಲ್ವಿ : ಹೌದು , ನಾನು ಕನ್ನಡ ಕಲಿತದ್ದು ಮೂರನೇ ತರಗತಿವರೆಗೆ , ಆದರೆ ಅದರಿಂದಲೇ ಮೂವತ್ತು ವರ್ಷ ನಿಭಾಯಿಸಿಬಿಟ್ಟೆ . ನನಗೆ ನಿವೃತ್ತಿ ಆಯಿತು .
ಗೊರೂರು : ಯಾವ ಕೆಲಸದಿಂದ ನಿವೃತ್ತರಾದಿರಿ ?
ಮೌಲ್ವಿ : ಪ್ರೈಮರಿ ಶಾಲಾ ಉಪಾಧ್ಯಾಯ ವೃತ್ತಿಯಿಂದ ,
ಗೊರೂರು : ಕನ್ನಡ ಉಪಾಧ್ಯಾಯರಾಗಿಯೋ ಉರ್ದು ಉಪಾಧ್ಯಾಯರಾಗಿಯೋ ?
ಮೌಲ್ವಿ : ಕನ್ನಡ ಉಪಾಧ್ಯಾಯರಾಗಿ ,
ಗೊರೂರು : ಹಾಗಾದರೆ ನಿಮಗೆ ಉರ್ದು ಬರುವುದಿಲ್ಲವೇ ?
ಮೌಲ್ವಿ : ನಾನು ಕಲಿತಿದ್ದು , ಉರ್ದು , ಕಲಿಸಿದ್ದು ಕನ್ನಡ , ಆಗ ನಮ್ಮ ಊರಿನಲ್ಲಿ ಉರ್ದು ಶಾಲೆ ಇರಲಿಲ್ಲ . ನಮ್ಮ ತಂದೆಯವರಿಗೂ ಉರ್ದು ಓದಲೂ ಬರೆಯಲೂ ಬಾರದು . ಆರು ಮೈಲಿ ದೂರದ ಹಳ್ಳಿಯಲ್ಲಿ ಒಂದು ಉರ್ದು ಶಾಲೆಯ ಉಪಾಧ್ಯಾಯರು ವಾರದಲ್ಲಿ ಎರಡು ದಿನ ನಮ್ಮ ಮನೆಗೆ ಬಂದು ನನಗೆ ಉರ್ದು ಪಾಠವನ್ನು ಹೇಳುವಂತೆ ನಮ್ಮ ತಂದೆ ಗೊತ್ತು ಮಾಡಿದ್ದರು . ಆ ಉಪಾಧ್ಯಾಯರು ಬುದ್ಧಿವಂತರು , ನಾನು ಉರ್ದುವನ್ನು ಬೇಗ ಬೇಗ ಕಲಿಕೆ ,
ಗೊರೂರು : ಭಾರತದ ಕಥೆಯಲ್ಲಿ ನಿಮ್ಮ ಧರ್ಮ ನಂಬಿಕೆಗೆ ವಿರೋಧವಾದುದು ಏನೂ ಇಲ್ಲವೇ ?
ಮೌಲ್ವಿ : ಇದು ಧರ್ಮದ ಕಥೆ . ಎಲ್ಲ ಮತಗಳೂ ಹೇಳುವುದು ಒಂದೇ ‘ ಮನುಷ್ಯ ಒಳ್ಳೆಯವನಾಗಿರಬೇಕು ‘ ಎಂದು
ಗೊರೂರು : ಕನ್ನಡದಲ್ಲಿ ಹೆಚ್ಚು ಪುಸ್ತಕ ಓದುತ್ತೀರಾ ?
ಮೌಲ್ವಿ : ಹೌದು ಓದುತ್ತೇನೆ , ನಿತ್ಯ ಮಲಗುವುದಕ್ಕೆ ಮುಂಚೆ ಎರಡು ಗಂಟೆಯಾದರೂ ನಾನು ಓದಲೇ ಬೇಕು , ಓದದೇ ಮಲಗಿದರೆ ನಿದ್ರೆ ಬರುವುದಿಲ್ಲ . ಶ್ರೀ ಡಿ.ವಿ.ಗುಂಡಪ್ಪನವರ ‘ ಉಮರನ ಒಸಗೆ ‘ ನನಗೆ ಪೂರ್ತಿ ಬಾಯಿಗೆ ಬರುತ್ತದೆ . ನಿಮ್ಮ ಊರು ಯಾವುದು ?
ಗೊರೂರು : ಹಾಸನದ ಹತ್ತಿರದ ಒಂದು ಹಳ್ಳಿ ಗೊರೂರು ,
ಮೌಲ್ವಿ : ನಾನೂ ಗೊರೂರಿಗೆ ಹೋಗಿದ್ದೇನೆ . ಗೊರೂರು ರಾಮಸ್ವಾಮಿ ಅಯ್ಯಂಗಾರು ಇದಾರಲ್ಲ , ಬಹಳ ಚೆನ್ನಾಗಿ ಕಥೆಗಳನ್ನು ಬರೆಯುತ್ತಾರೆ .
ಗೊರೂರು : ಗೊರೂರಿಗೆ ಹೋಗಿದ್ದಾಗ ಅವರನ್ನು ಸಂಧಿಸಿದ್ದೀರಾ ?
ಮೌಲ್ವಿ : ಇಲ್ಲ . ಆ ವೇಳೆಗೆ ನಾನು ಅವರ ಪುಸ್ತಕಗಳನ್ನು ನೋಡಿರಲಿಲ್ಲ . ಈಚೆಗೆ ಓದಿದೆ . ನೋಡಬೇಕಾದ ಮನುಷ್ಯರು .
ಗೊರೂರು : ಅವರು ನಿಮ್ಮೆದುರಿನಲ್ಲಿ ಈಗ ಬಂದರೆ ಏನು ಮಾಡುತ್ತೀರಿ ?
ಮೌಲ್ವಿ : ಮಾಡುವುದೇನು ? ಅತ್ಯಂತ ಸಂತೋಷದಿಂದ ಆಲಿಂಗನ ಮಾಡಿಕೊಳ್ಳುತ್ತೇನೆ .
ಗೊರೂರು : ನಾನೇ ಆ ಪಾಣಿ ,
ಮೌಲ್ವಿ : ಇವತ್ತೇ ಸುದಿನ , ದೇವರ ದಯೆ ನಾವಿಬ್ಬರೂ ಸೇರಿದೆವು . ( ಎಂದು ಆಲಂಗಿಸಿದರು )
ಈ ] ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ ,
1. “ ಅವರು ನಿಮ್ಮೆದುರಿಗೆ ಬಂದರೆ ಏನು ಮಾಡುತ್ತೀರಿ ? ”
ಆಯ್ಕೆ : ಈ ವಾಕ್ಯವನ್ನು ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ ಕನ್ಯಾಕುಮಾರಿ ಮತ್ತು ಇತರ ಕಥೆಗಳು ‘ ಕಥಾ ಸಂಕಲನದಿಂದ ಆರಿಸಲಾಗಿರುವ ‘ ಕನ್ನಡ ಮೌಲ್ವಿ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಗೊರೂರು ಅವರು ಮೌಲ್ವಿಗೆ ತಮ್ಮದು ‘ ಹಾಸನ ಜಿಲ್ಲೆಯ ಗೊರೂರು ‘ ಎಂದು ಪರಿಚಯ ಮಾಡಿಕೊಂಡಾಗ ಆ ಮೌಲ್ವಿಯ “ ನಾನೂ ಗೊರೂರಿಗೂ ಹೋಗಿದ್ದೇನೆ . ಆ ಗೊರೂರು ರಾಮಸ್ವಾಮಿ ಅಯ್ಯಂಗಾರು ಇದಾರಲ್ಲ , ಬಹಳ ಚೆನ್ನಾಗಿ ಕಥೆಗಳನ್ನು ಬರೆಯುತ್ತಾರೆ ” ಎಂದು ಹೇಳಿದಾಗ ಗೊರೂರರು “ ನೀವು ಅವರನ್ನು ಭೇಟಿಮಾಡಿದ್ದೀರಾ ? ” ಎಂದಾಗ ಅವರು ಇಲ್ಲವೆನ್ನುತ್ತಾರೆ . ಆ ಸಂದರ್ಭದಲ್ಲಿ ಗೊರೂರರು “ ಅವರು ನಿಮ್ಮೆದುರಿಗೆ ಬಂದರೆ ಏನು ಮಾಡುತ್ತೀರಿ ? ” ಎನ್ನುತ್ತಾರೆ .
ಸ್ವಾರಸ್ಯ : ತಮ್ಮ ಎದುರಿಗಿರುವವರು ಗೊರೂರರೆಂದು ತಿಳಿಯದೆ ಗೊರೂರರ ಸಾಹಿತ್ಯ ಮತ್ತು ಅವರನ್ನು ನೋಡುವ ಬಯಕೆಯನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರರಿಗೆ ಹೇಳುವುದು ಇಲ್ಲಿನ ಸ್ವಾರಸ್ಯವಾಗಿದೆ .
2. “ ನಾನೇ ಆ ಪ್ರಾಣಿ ”
ಆಯ್ಕೆ : ಈ ವಾಕ್ಯವನ್ನು ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ ಕನ್ಯಾಕುಮಾರಿ ಮತ್ತು ಇತರ ಕಥೆಗಳು ‘ ಕಥಾ ಸಂಕಲನದಿಂದ ಆರಿಸಲಾಗಿರುವ ‘ ಕನ್ನಡ ಮೌಲ್ವಿ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ , ಸಂದರ್ಭ : ಮೌಲ್ವಿಯವರು ತಮ್ಮ ಎದುರಿಗಿರುವವರು ಗೊರೂರು ಅವರೆಂದು ತಿಳಿಯದೆ “ ಗೊರೂರರು ನೋಡಬೇಕಾದ ಮನುಷ್ಯರು ” ಎಂದು ಹೇಳಿದಾಗ ಗೊರೂರರು “ ಅವರು ನಿಮ್ಮೆದುರಿಗೆ ಬಂದರೆ ಏನು ಮಾಡುತ್ತೀರಿ ? ” ಎಂದಾಗ ಮೌಲ್ವಿಯವರು ಎನ್ನುತ್ತಾರೆ , ಆಗ ಸಾಹೇಬರು “ ಮಾಡುವುದೇನು ? ಅತ್ಯಂತ ಸಂತೋಷದಿಂದ ಆಲಿಂಗನ ಮಾಡಿಕೊಳ್ಳುತ್ತೇನೆ ” ಎಂದರು . ಆ ಸಂದರ್ಭದಲ್ಲಿ ಗೊರೂರರು “ ನಾನೇ ಆ ಪ್ರಾಣಿ ” ಎಂದು ಹಾಸ್ಯವಾಗಿ ಹೇಳುತ್ತಾರೆ .
ಸ್ವಾರಸ್ಯ : ತಮ್ಮ ಎದುರಿಗಿರುವವರು ಗೊರೂರರೆಂದು ತಿಳಿಯದ ಮೌಲ್ವಿ ಮತ್ತು ಆ ಸನ್ನಿವೇಶದಲ್ಲಿ ಗೊರೂರರ ಹಾಸ್ಯ ಪ್ರಜ್ಞೆ ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .
3. “ ನಾನು ಕಲಿತಿದ್ದು ಉರ್ದು , ಕಲಿಸಿದ್ದು ಕನ್ನಡ “
ಆಯ್ಕೆ : ಈ ವಾಕ್ಯವನ್ನು ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ ಕನ್ಯಾಕುಮಾರಿ ಮತ್ತು ಇತರ ಕಥೆಗಳು ‘ ಕಥಾ ಸಂಕಲನದಿಂದ ಆರಿಸಲಾಗಿರುವ ‘ ಕನ್ನಡ ಮೌಲ್ವಿ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಮೌಲ್ವಿಯವರನ್ನು ಕುರಿತು ಸಂದರ್ಭ : ಗೊರೂರರು “ ನೀವು ನಿವೃತ್ತರಾದ್ದು ಕನ್ನಡ ಉಪಾಧ್ಯಾಯರಾಗಿಯೋ ಉರ್ದು ಉಪಾಧ್ಯಾಯರಾಗಿಯೋ ? ” ಎಂದಾಗ ಅವರು “ ಕನ್ನಡ ಉಪಾಧ್ಯಾಯರಾ ” ಎಂದರು ಆಗ ಗೊರೂರರು ಕುತೂಹಲದಿಂದ ” ಹಾಗಾದರೆ ನಿಮಗೆ ಉರ್ದು ಬರುವುದಿಲ್ಲವೇ ? ” ಎಂದು ಕೇಳಿದ ಸಂದರ್ಭದಲ್ಲಿ ಮೌಲ್ವಿಯವರು “ ನಾನು ಕಲಿತಿದ್ದು ಉರ್ದು , ಕಲಿಸಿದ್ದು , ಕನ್ನಡ ” ಎಂದು ಕೇಳಿದರು .
ಸ್ವಾರಸ್ಯ : ಮೌಲ್ವಿಯು ಕಲಿತದ್ದು ಉರ್ದು ಭಾಷೆಯಾದರು ಅವರಿಗೆ ಕನ್ನಡ ಭಾಷೆಯ ಬಗ್ಗೆ ಇದ್ದ ಅಭಿಮಾನ ಇಲ್ಲಿ ಸ್ವಾರಸ್ಯವಾಗಿ ಮೂಡಿಬಂದಿದೆ .
5. “ ನಿಮಗೆ ಕನ್ನಡ ಬರುತ್ತದೆಯೇ ?
” ಆಯ್ಕೆ : ಈ ವಾಕ್ಯವನ್ನು ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ ಕನ್ಯಾಕುಮಾರಿ ಮತ್ತು ಇತರ ಕಥೆಗಳು ‘ ಕಥಾ ಸಂಕಲನದಿಂದ ಆರಿಸಲಾಗಿರುವ ‘ ಕನ್ನಡ ಮೌಲ್ವಿ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಗೊರೂರರು ಪ್ರಯಾಣಿಸುತ್ತಿದ್ದ ಬಸ್ಸಿಗೆ ಒಬ್ಬ ಮುಸಲ್ಮಾನ ಹತ್ತಿದ , ಆಕರ್ಷಕವಾಗಿದ್ದ ಆತನನ್ನು ನೋಡುತ್ತಿದ್ದಂತೆ ಅವರನ್ನು ಆಕರ್ಷಿಸಿದ್ದು ಆ ಗೃಹಸ್ಥನ ಕೈಲಿದ್ದ ‘ ಕುಮಾರವ್ಯಾಸ ಭಾರತ ಕೃತಿ , ಇದ್ದಕ್ಕಿದ್ದಂತೆ ಗೊರೂರರಿಗೆ ಆ ಸಾಹೇಬರ ಬಗ್ಗೆ ಏನೋ ಒಂದು ಅನಿರ್ವಚನೀಯವಾದ ಬಾಂಧವ್ಯ ಉಂಟಾಯಿತು . ಆಗ ಅವರು ಹೇಗಾದರೂ ಮಾಡಿ ಆತನನ್ನು ಮಾತನಾಡಿಸಬೇಕು ಎಂದು ಬಳಿಗೆ ಹೋಗಿ “ ನಿಮಗೆ ಕನ್ನಡ ಬರುತ್ತದೆಯೇ ” ಎಂದು ಆ ಸಂದರ್ಭದಲ್ಲಿ ಕೇಳಿದರು .
ಸ್ವಾರಸ್ಯ : ಜಾತಿ , ಭಾಷೆ , ಪ್ರಾಂತ್ಯಗಳ ಗೊಂದಲದ ಅಂಧಕಾರ ನಮಗೆ ಮುಸುಕಿರುವ ಸಂದರ್ಭದಲ್ಲಿ ಒಬ್ಬ ಮುಸಲ್ಮಾನನ ಕೈಯಲ್ಲಿ ಕುಮಾರವ್ಯಾಸ ಭಾರತ ಇದ್ದದ್ದು ಇಲ್ಲಿನ ಸ್ವಾರಸ್ಯವಾಗಿದೆ .
6. “ ನನ್ನ ಸಮಾನ ಪಾಠ ಮಾಡುವವರು ಯಾರೂ ಇಲ್ಲ ”
ಆಯ್ಕೆ : ಈ ವಾಕ್ಯವನ್ನು ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ ಕನ್ಯಾಕುಮಾರಿ ಮತ್ತು ಇತರ ಕಥೆಗಳು ‘ ಕಥಾ ಸಂಕಲನದಿಂದ ಆರಿಸಲಾಗಿರುವ ‘ ಕನ್ನಡ ಮೌಲ್ವಿ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಗೊರೂರರು ಮೌಲ್ವಿಯವರನ್ನು ಕುರಿತು “ ನೀವು , ಕನ್ನಡ ಪಾಠ ಚೆನ್ನಾಗಿ ಮಾಡುತ್ತೀರಾ ? ” ಎಂದು ಕೇಳಿದ ಸಂದರ್ಭದಲ್ಲಿ ಅವರು ತೃಪ್ತಿಯಿಂದ “ ನನ್ನ ಸಮಾನ ಪಾಠ ಮಾಡುವವರು ಯಾರೂ ಇಲ್ಲವೆಂದು ಪ್ರಶಸ್ತಿಯನ್ನು ಎಲ್ಲರಿಂದಲೂ ಪಡೆದಿದ್ದೇನೆ . ಪ್ರೈಮರಿ ಶಿಕ್ಷಕರ ಸಮ್ಮೇಳನದಲ್ಲಿ ಒಂದು ಮಾದರಿ ಪಾಠ ಮಾಡಲು ಕೊಟ್ಟರು . ಹುಡುಗರು ಎಷ್ಟು ಆಸಕ್ತಿಯಿಂದ ಕೇಳುತ್ತಿದ್ದರೋ , ಉಪಾಧ್ಯಾಯರು ಅಷ್ಟೇ ಆಸಕ್ತಿಯಿಂದ ಕೇಳುತ್ತಿದ್ದರು ” ಎಂದು ಹೇಳಿದರು .
ಸ್ವಾರಸ್ಯ : ಒಬ್ಬ ಮೌಲ್ವಿಯಾಗಿ ಮಾದರಿ ಪಾಠ ನೀಡುವಷ್ಟು ಕನ್ನಡ ಭಾಷೆಯಲ್ಲಿ ಪಾಂಡಿತ್ಯ , ಅಭಿಮಾನ ಹೊಂದಿದ್ದುದು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .
ಭಾಷಾ ಚಟುವಟಿಕೆ
1. ಆಗಮಸಂಧಿ ಎಂದರೇನು ? ಉದಾಹರಣೆ ಕೊಡಿ .
ಉತ್ತರ : ಸ್ವರದ ಮುಂದೆ ಸ್ವರವು ಬಂದು ಸಂಧಿಯಾದಾಗ ಪೂರ್ವಪದದ ಕೊನೆಯ ಸ್ವರ ಹಾಗೂ ಉತ್ತರ ಪದದ ಮೊದಲ ಸ್ವರಗಳ ಮಧ್ಯದಲ್ಲಿ ‘ ಯ್ ‘ ಕಾರವನ್ನು ಅಥವಾ ‘ ವ ‘ ಕಾರವನ್ನು ಹೊಸದಾಗಿ ಸೇರಿಸಿ ಹೇಳಿದರೆ ಅದು ಅಗಮಸಂಧಿ ,
ಉದಾ : ಹಳ್ಳಿ ಅಲ್ಲಿ = ಹಳ್ಳಿಯಲ್ಲಿ
ಭಾವನೆ + ಉಂಟಾಯಿತು = ಭಾವನೆಯುಂಟಾಯಿತು
ಗುರು+ ಅನ್ನು = ಗುರುವನ್ನು
ಸ್ವಾರಸ್ಯ + ಇಲ್ಲ = ಸ್ವಾರಸ್ಯವಿಲ್ಲ .
2. ಆದೇಶಸಂಧಿ ಎಂದರೇನು ? ಉದಾಹರಣೆ ಕೊಡಿ .
ಉತ್ತರ : ಉತ್ತರ ಪದದ ಆದಿಯಲ್ಲಿರುವ ಕತಪ ವ್ಯಂಜನಗಳಿಗೆ ಕ್ರಮವಾಗಿ ಗ , ದ , ಬ ವ್ಯಂಜನಗಳು ಆದೇಶವಾಗುವುವು . ಇದನ್ನು ಆದೇಶಸಂಧಿ ಎನ್ನುವರು .
ಕೆಲವೊಮ್ಮೆ ಉತ್ತರ ಪದದ ಆದಿಯ ಪ್ , ಬ್ , ಮ್ ವ್ಯಂಜನಗಳಿಗೆ ‘ ವ ‘ ಕಾರವು ಆದೇಶವಾಗುವುದು .
ತುದಿ + ಕಾಲಲ್ಲಿ ( ಕ್ > ಗ್ ) = ತುದಿಗಾಲಲ್ಲಿ .
ಹುಲಿ + ತೊಗಲು ( ತ್ > ದ್ ) = ಹುಲಿದೊಗಲು
ಕಣ್ + ಪನಿ ( ಪ್ > ಬ್ ) = ಕಂಬನಿ
ನೀರ್ + ಪನಿ ( ಪ್ > ವ್ ) = ನೀರ್ವನಿ
ಕಡು+ ಬೆಳ್ಪು (ಬ್ > ವ್ ) = ಕಡುವೆಳ್ಪು
ಮೇಲ್ + ಮಾತು ( ಮ್ > ವ್ ) = ಮೆಲ್ವಾತು
3. ಕೊಟ್ಟಿರುವ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ .
1 , ಅಂಧಕಾರ = ಜ್ಞಾನದ ಬಲದಿಂದ ಆಂಧಕಾರವು ದೂರಾಗುತ್ತದೆ
2 , ಹದಿನಾರಾಣೆ = ಹಿಂದಿನ ಕಾಲದಲ್ಲಿ ಹದಿನಾರಾಣೆಯು ಚಲಾವಣೆಯಲ್ಲಿತ್ತು ,
3 , ನಿಭಾಯಿಸು = ಜೀವನದಲ್ಲಿ ಏನೇ ಬಂದರೂ ಧೈರ್ಯದಿಂದ ನಿಭಾಯಿಸಬೇಕು .
4 , ಮುಸುಕಿರುವ = ಮಳೆಗಾಲದಲ್ಲಿ ಹೆಚ್ಚು ಮುಸುಕಿರುವ ವಾತಾವರಣವನ್ನು ಕಾಣುತ್ತೇವೆ
4. ಕೊಟ್ಟಿರುವ ಪದಗಳನ್ನು ಬಿಡಿಸಿ ಸಂಧಿ ಹೆಸರಿಸಿ ,
ಪಾತ್ರವನ್ನು, ಶುದ್ಧಿಯನ್ನು , ಚಳಿಗಾಲ , ಪಡೆದಿದ್ದೇನೆ , ಬೆಮರ್ವನಿ
ಪಾತ್ರ + | ಅನ್ನು = | ಪಾತ್ರವನ್ನು | ವಕಾರಾಗಮಸಂಧಿ |
ಶುದ್ಧಿ + | ಅನ್ನು = | ಶುದ್ಧಿಯನ್ನು | ಯಕಾರಾಗಮಸಂಧಿ |
ಚಳಿ + | ಕಾಲ = | ಚಳಿಗಾಲ | ಆದೇಶಸಂಧಿ |
ಪಡೆದು + | ಇದ್ದೇನೆ = | ಪಡೆದಿದ್ದೇನೆ | ಲೋಪಸಂಧಿ |
ಬೆಮರ್ + | ಪನಿ = | ಬೆಮರ್ವನಿ | ಆದೇಶಸಂಧಿ |
9th Standard Kannada Moulvi Lesson Questions and Answers Notes Pdf
ಇತರೆ ಪಾಠಗಳು :