10ನೇ ತರಗತಿ ಸುಕುಮಾರಸ್ವಾಮಿಯ ಕಥೆ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು,Sukumara Swamy Kathe Notes in Kannada Question Answer Pdf Download 2022 kseeb solutions for class 10 kannada chapter 8
ತರಗತಿ : 10ನೇ ತರಗತಿ
ಪಾಠದ ಹೆಸರು : ಸುಕುಮಾರಸ್ವಾಮಿಯ ಕಥೆ
ಕೃತಿಕಾರರ ಹೆಸರು : ಶಿವಕೋಟ್ಯಾಚಾರ್ಯ
Table of Contents
ಲೇಖಕರ ಪರಿಚಯ :
ಶಿವಕೋಟ್ಯಾಚಾರ್ಯ
ಶಿವಕೋಟ್ಯಾಚಾರ್ಯ ಕನ್ನಡದ ಪ್ರಥಮ ಗದ್ಯಕೃತಿ ‘ ವಡ್ಡಾರಾಧನೆ’ಯ ಕರ್ತೃ , ಇವನ ಕಾಲ ಕ್ರಿ . ಶ . ಸುಮಾರು ೧೦ ನೆಯ ಶತಮಾನ . ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಕೋಗಳಿ ನಾಡಿನವನು . ಜೈನ ಧಾರ್ಮಿಕ ಕಥೆಗಳ ಸಂಗ್ರಹವಾದ ವಡ್ಡಾರಾಧನೆಯಲ್ಲಿ ೧೯ ಕಥೆಗಳಿವೆ . ಈ ಕಥೆಗಳ ನಾಯಕರೆಲ್ಲ ಧರ್ಮವೀರರು . ಕೆಲವರು ಮೋಕ್ಷವನ್ನು ಸಂಪಾದಿಸಿಕೊಳ್ಳುತ್ತಾರೆ . ಕೆಲವರು ಸರ್ವಾರ್ಥಸಿದ್ಧಿಯೆಂಬ ಸ್ವರ್ಗಕ್ಕೆ ಹೋಗುತ್ತಾರೆ ಎಂದು ಈ ಕಥೆಗಳು ಸಾರುತ್ತವೆ
Sukumara Swamy Kathe Notes Question Answer
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ .
1. ಯಶೋಭದ್ರೆಯು ರತ್ನ ಕಂಬಳಿಗಳನ್ನು ಯಾರಿಗೆ ಕೊಟ್ಟಳು ?
ಉ : ಯಶೋಭದ್ರೆಯು ರತ್ನ ಕಂಬಳಿಗಳನ್ನು ತನ್ನ ಮೂವತ್ತೆರಡು ಸೊಸೆಯರಿಗೆ ಕೊಟ್ಟಳು .
2. ಅರಸ ವೃಷಭಾಂಕನ ಉಂಗುರವು ಯಾವಾಗ ಕೆಳಕ್ಕೆ ಬಿದ್ದಿತು ?
ಉ : ಅರಸ ವೃಷಭಾಂಕನ ಉಂಗುರವು ಮಜ್ಜನ ( ಸ್ನಾನ ) ಮಾಡುವ ಸಮಯದಲ್ಲಿ ಕೆಳಕ್ಕೆ ಬಿದ್ದಿತು .
3. ಸುಕುಮಾರಸ್ವಾಮಿಯ ತಂದೆತಾಯಿಗಳ ಹೆಸರೇನು ?
ಉ : ಸುಕುಮಾರಸ್ವಾಮಿಯ ತಂದೆ ಸೂರದತ್ತ , ತಾಯಿ ಯಶೋಭದ್ರೆ ,
4. ಸುಕುಮಾರಸ್ವಾಮಿಗೆ ಯಾವ ಪಟ್ಟವನ್ನು ಕಟ್ಟಲಾಯಿತು ?
ಉ : ಸುಕುಮಾರಸ್ವಾಮಿಗೆ ಸೆಟ್ಟಿಯ ಪಟ್ಟವನ್ನು ಕಟ್ಟಲಾಯಿತು .
5. ನೈಮಿತ್ತಿಕನು ಸುಕುಮಾರಸ್ವಾಮಿಯ ಬಗ್ಗೆ ಏನು ಹೇಳಿದನು ?
ಉ : ನೈಮಿತ್ತಿಕನು “ ಎಂದು ಈತನು ಋಷಿಗಳನ್ನು ನೋಡುವನೋ ಅಂದು ತಪಸ್ಸಿಗೆ ಹೋಗುತ್ತಾನೆ ” ಎಂದು ಹೇಳಿದನು .
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .
1. ಅರಸ ವೃಷಭಾಂಕನು ಆಶ್ಚರ್ಯಗೊಳ್ಳಲು ಕಾರಣವೇನು ?
ಉ : ಒಮ್ಮೆ ಒಬ್ಬ ವರ್ತಕನು ಲಕ್ಷದೀನಾರ ( ಚಿನ್ನದ ನಾಣ್ಯಗಳ ಬೆಲೆಬಾಳುವ ರತ್ನಗಂಬಳಿಗಳನ್ನು ಮಾರಲು ಉಜ್ಜಯಿನಿಗೆ ತೆಗೆದುಕೊಂಡು ಬಂದಿದ್ದಾಗ ಆ ಪಟ್ಟಣವನ್ನಾಳುವ ವೃಷಭಾಂಕನೆಂಬ ರಾಜ ಮತ್ತು ಮಹಾರಾಣಿ ಅವುಗಳ ಬೆಲೆ ಹೆಚ್ಚಾಯಿತೆಂದು ಕ್ರಯಕ್ಕೆ ಕೊಳ್ಳಲಿಲ್ಲ . ಆದರೆ ಸುಕುಮಾರ ಸ್ವಾಮಿಯ ತಾಯಿ ಅಷ್ಟೂ ಬೆಲೆಕೊಟ್ಟು ಖರೀದಿಸಿ ಅವುಗಳನ್ನು ಮೂವತ್ತೆರಡು ತುಂಡುಗಳನ್ನಾಗಿ ಮಾಡಿ ಸೊಸೆಯಂದಿರಿಗೆ ಪಾದುಕೆಗಳಿಗೆ ಸಿಕ್ಕಿಸಿಕೊಳ್ಳಲು ಕೊಟ್ಟಳು . ಈ ಸಂಗತಿಯನ್ನು ತಿಳಿದು ರಾಜನು ಆಶ್ಚರ್ಯಪಟ್ಟನು .
2. ವೃಷಭಾಂಕನು ಸುಕುಮಾರಸ್ವಾಮಿಗೆ ವ್ಯಾದಿಯಿದೆ ಎಂದುಕೊಳ್ಳಲು ಕಾರಣವೇನು ?
ಉ : ವೃಷಭಾಂಕನು ಸುಕುಮಾರ ಸ್ವಾಮಿಯ ಮನೆಗೆ ಆಗಮಿಸಿದಾಗ , ಸ್ವಜನರೂ ಸೇವಕರೂ ಬಿಳಿ ಸಾಸುವೆಗಳನ್ನು ಮಂಗಳಕರವೆಂದು ಇಬ್ಬರಿಗೂ ಮಂತ್ರಾಕ್ಷತೆಯನ್ನು ಹಾಕಿದರು . ಆ ಬಿಳಿ ಸಾಸವೆಕಾಳುಗಳು ಸುಕುಮಾರಸ್ವಾಮಿ ಕುಳಿತಿದ್ದ ಆಸನದಲ್ಲಿ ಒತ್ತುತ್ತಿದುದರಿಂದ ಸೊಂಟವನ್ನು ಅತ್ತಿತ್ತ ಹೊರಳಾಡಿಸುತ್ತಿದ್ದುದನ್ನೂ ದೀಪ ನೋಡಿದಾಗ ಅವನಗೆ ಕಣ್ಣೀರು ಸುರಿಯುತ್ತಿತ್ತು . ಅಲ್ಲದೆ ಊಟಮಾಡುವಾಗ ಸುಕುಮಾರಸ್ವಾಮಿ ಆಹಾರದ ಅರ್ಧಾಂಶವನ್ನು ನುಂಗುತ್ತಾ ಇನ್ನುಳಿದ ಅರ್ಧಾಂಶ ಆಹಾರವನ್ನು ಉಗುಳುತ್ತಿದ್ದನು . ಅದನ್ನು ಅರಸನು ನೋಡಿ ಸುಕುಮಾರಸ್ವಾಮಿಗೆ ವ್ಯಾದಿಯಿದೆ ಎಂದು ಭಾವಿಸಿದನು .
3. ಸುಕುಮಾರಸ್ವಾಮಿಯು ಹೇಗೆ ಸುಖಭೋಗಗಳನ್ನು ಅನುಭವಿಸುತ್ತಿದ್ದನು ?
ಉ : ಸುಕುಮಾರಸ್ವಾಮಿಯು ತಾರುಣ್ಯವನ್ನು ಪಡೆದು ಅತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿಯಿಂದ ಕೂಡಿದವನಾದನು . ಅವನಿಗೆ ಮೂವತ್ತೆರಡು ಲತಾಗೃಹಗಳೂ ಅತ್ಯಂತ ರೂಪ , ಲಾವಣ್ಯ , ಸೌಭಾಗ್ಯ , ಕಾಂತಿ , ಹಾವ , ಭಾವ , ವಿಲಾಸ , ವಿಭ್ರಮಗಳಿಂದ ಕೂಡಿದ ದೇವತಾಸ್ತ್ರೀಯರನ್ನು ಹೋಲುವ ಮೂವತ್ತೆರಡು ಮಂದಿ ದಿವ್ಯರಾದ ಸ್ತ್ರೀಯರೂ ಇದ್ದರು , ಮೂವತ್ತೆರಡು ಬಗೆಯ ನಾಟ್ಯಗಳು , ಮೂವತ್ತೆರಡು ಕೋಟಿ ಹೊನ್ನು , ಐದು ಬಗೆಯ ರತ್ನಗಳು ಎಂಬಿವೆಲ್ಲವುಗಳನ್ನು ಹೊಂದಿದ್ದ ಸುಕುಮಾರಸ್ವಾಮಿ ಎಲ್ಲಾ ರೀತಿಯ ಸುಖಗಳನ್ನು ಅನುಭವಿಸುತ್ತಿದ್ದನು .
4 , ಸುಕುಮಾರಸ್ವಾಮಿಯ ವ್ಯಾದಿಗೆ ಮದ್ದನ್ನು ಏಕೆ ಮಾಡಿಸಿಲ್ಲ ಎಂದು ಅರಸನು ಕೇಳಿದಾಗ ತಾಯಿ ಯಶೋಭದ್ರೆಯು ಏನೆಂದು ಹೇಳಿದಳು ?
ಉ : ಅರಸ ವೃಷಭಾಂಕನು ಯಶೋಭದ್ರೆಯನ್ನು ಕುರಿತು “ ಸುಕುಮಾರನಿಗೆ ಸೊಂಟದ ರೋಗಕ್ಕೂ ಕಣ್ಣೀರು ಸುರಿಯುವುದಕ್ಕೂ ಊಟ ಸೇರದಿರುವುದಕ್ಕೂ ಏಕೆ ಔಷಧ ಮಾಡಿಸಿಲ್ಲ?’ ಎಂದು ಕೇಳಿದಾಗ ಅವಳು “ ಒಡೆಯರೇ , ಇವು ರೋಗಗಳಲ್ಲ , ಮಂತ್ರಾಕ್ಷತೆಯಾಗಿ ಹಾಕಿದ ಬಿಳಿ ಸಾಸವೆಗಳು ಒತ್ತಿದುದರಿಂದ ಸಹಿಸದಾದನು . ಅವನು ಯಾವಾಗಲೂ ಮಾಣಿಕ್ಯ ರತ್ನದ ಬೆಳಕಿನಲ್ಲಿ ಇರುವುದರಿಂದ ದೀಪದ ಬೆಳಕನ್ನು ಸಹಿಸಲಾರದೆ ಅವನ ಕಣ್ಣಿನಲ್ಲಿ ನೀರು ಬರುತ್ತಿತ್ತು , ನೀವು ಬಂದ ಸಂದರ್ಭದಲ್ಲಿ ತಾವರೆ ನೈದಿಲೆ ಹೂಗಳ ಸುವಾಸನೆಯಿಂದ ಕೂಡಿದ ಅಕ್ಕಿಯೊಂದಿಗೆ ಬೇರೆ ಅಕ್ಕಿಯನ್ನು ಮಿಶ್ರಮಾಡಿ ಬೇಯಿಸಿದ ಅನ್ನವನ್ನು ಬಡಿಸಿದ್ದರಿಂದ ಅವನು ಸುವಾಸನೆಯ ಅಕ್ಕಿಯ ಅನ್ನವನ್ನು ನುಂಗುತ್ತಿದ್ದನು , ಉಳಿದ ಅನ್ನವನ್ನು ಉಗುಳುತ್ತಿದ್ದನು . ಆದುದರಿಂದಲೇ ಇವನಿಗೆ ಈ ಅವಸ್ಥೆಗಳಾಗಿವೆ ” ಎಂದು ಹೇಳಿದಳು . ಅದನ್ನು ಕೇಳಿ ಅರಸನು ಆಶ್ಚರ್ಯಪಟ್ಟನು .
ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .
1. ಸುಕುಮಾರಸ್ವಾಮಿಯ ಕಥೆಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .
ಉಜ್ಜಯಿನಿಯೆಂಬ ಪಟ್ಟಣದಲ್ಲಿ ಯಶೋಭದ್ರೆ ಮತ್ತು ಸೂರದತ್ತ ಎಂಬ ದಂಪತಿಗೆ ಸುಕುಮಾರಸ್ವಾಮಿಯೆಂಬ ಮಗ ಜನಿಸಿದನು . ಆ ದಿನವೇ ವೈರಾಗ್ಯವುಂಟಾಗಿ ಸೂರದತ್ತ ಸೆಟ್ಟಿಯು ಸುಕುಮಾರಸ್ವಾಮಿಗೆ ಸೆಟ್ಟ ಪಟ್ಟವನ್ನು ಕಟ್ಟಿ ತಪಸ್ಸಿಗೆ ತೆರಳಿದನು . ಸುಕುಮಾರಸ್ವಾಮಿಯು ಬೆಳೆದು ದೊಡ್ಡವನಾಗಿ ಅತ್ಯಂತ ಸುಂದರನಾಗಿದ್ದನಲ್ಲದೆ ಬಹಳ ವೈಭವ – ಸುಖ – ಸಂತೋಷಗಳಿಂದ ಕೂಡಿದ್ದನು . ಒಂದು ದಿನ ಅರಮನೆಗೆ ಬಂದ ಒಬ್ಬ ಜೋಯಿಸನು ” ಈ ಸುಕುಮಾರಸ್ವಾಮಿ ಯಾವಾಗ ಋಷಿಗಳ ರೂಪವನ್ನು ಕಾಣುವನೋ ಅಂದೇ ತಪಸ್ಸಿಗೆ ತೆರಳುವನು ” ಎಂದು ಭವಿಷ್ಯನುಡಿದುದನ್ನು ಕೇಳಿದ ಯಶೋಭದ್ರೆ ತನ್ನ ಮನೆಗೆ ಋಷಿಗಳು ಪ್ರವೇಶಿಸದಂತೆ ಕಾವಲಿಟ್ಟಳು .ಮನೆಗೆ ಬಂದ ರಾಜನೇ ಕೊಂಡುಕೊಳ್ಳಾಗದ ರತ್ನಗಂಬಳಿಗಳನ್ನು ಸುಕುಮಾರ ಸ್ವಾಮಿಯ ತಾಯಿ ಲಕ್ಷದಿನಾರ ಕೊಟ್ಟು ಖರೀದಿಸಿ ಅವುಗಳನ್ನು ಮೂವತ್ತೆರಡು ತುಂಡುಗಳನ್ನಾಗಿ ಮಾಡಿ ಸೊಸೆಯಂದಿರಿಗೆ ಪಾದುಕೆಗಳಿಗೆ ಸಿಕ್ಕಿಸಿಕೊಳ್ಳಲು ಕೊಟ್ಟಳು . ಈ ಸಂಗತಿಯನ್ನು ರಾಜ ವೃಷಭಾಂಕನು ತಿಳಿದು ಆಶ್ಚರ್ಯಪಟ್ಟು ಅವರ ವೈಭವವನ್ನು ನೋಡಲು ಸುಕುಮಾರಸ್ವಾಮಿಯ ಮನೆಗೆ ಬಂದಾಗ ರತ್ನಾದಿಗಳಿಂದ ಸ್ವಾಗತಿಸಿದರು . ರಾಜನ ಅಪೇಕ್ಷೆಯಂತೆ ಯಶೋಭದ್ರೆ ಮಾಳಿಗೆಗೆ ಹೋಗಿ ಸುಕುಮಾರಸ್ವಾಮಿಯನ್ನು ಕರೆತಂದಳು . ಅವನನ್ನು ನೋಡಿದ ರಾಜನು ‘ ನಾನು ಕಣ್ಣನ್ನು ಪಡೆದದ್ದು ಇಂದು ಸಾರ್ಥಕವಾಯಿತು ‘ ಎಂದು ಅಪ್ಪಿಕೊಂಡು ಶ್ರೇಷ್ಟವಾದ ಆಸನದ ಮೇಲೆ ತನ್ನ ಜೊತೆಯಲ್ಲಿ ಕುಳ್ಳಿರಿಸಿಕೊಂಡನು . ಆಗ ಮಂಗಳಕರವೆಂದು ಸೇವಕರು , ಬಿಳಿ ಸಾಸುವೆಗಳನ್ನು ಇಬ್ಬರಿಗೂ ಮಂತ್ರಾಕ್ಷತೆಯನ್ನು ಹಾಕಿದರು .
ಬಿಳಿ ಸಾಸವೆಕಾಳುಗಳು ಸುಕುಮಾರಸ್ವಾಮಿ ಕುಳಿತಿದ್ದ ಆಸನದಲ್ಲಿ ಒತ್ತುತ್ತಿದ್ದುದರಿಂದ ಅವನು ಸೊಂಟವನ್ನು ಅತ್ತಿತ್ತ ಹೊರಳಾಡಿಸುತ್ತಿದ್ದುದನ್ನೂ ದೀಪ ನೋಡಿದಾಗ ಕಣ್ಣೀರು ಸುರಿವುದನ್ನೂ ಕಂಡು ಈತನಿಗೆ ಏನೋ ರೋಗವಿದೆ ಎಂದು ಭಾವಿಸಿಕೊಂಡಿದ್ದನು . ನಂತರ ರಾಜನು ಸುಕುಮಾರಸ್ವಾಮಿಯ ಮನೆಯಲ್ಲಿದ್ದ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಅವನ ಬೆರಳಿನಲ್ಲಿದ್ದ ಅಮೂಲ್ಯವಾದ ಉಂಗುರ ಬಿದ್ದು ಹೋಯಿತು . ಅದನ್ನು ಹುಡುಕುವುದಕ್ಕಾಗಿ ಆ ಕೆರೆಯ ಎದುರಿನ ತೂಬನ್ನು ತೆಗೆದು ನೀರನ್ನು ಬಿಟ್ಟನು . ಅಲ್ಲಿ ರಾಶಿರಾಶಿಯಾಗಿದ್ದ ರತ್ನಗಳ ಹಲವು ಆಭರಣಗಳನ್ನು ಕಂಡು ಬಹಳ ಆಶ್ಚರ್ಯಪಟ್ಟನು . ಆನಂತರ ಊಟಮಾಡುತ್ತಿರುವಾಗ ಸುಕುಮಾರಸ್ವಾಮಿ ಆಹಾರದ ಅರ್ಧಾಂಶವನ್ನು ನುಂಗುತ್ತಿದ್ದನು . ಇನ್ನುಳಿದ ಅರ್ಧಾಂಶ ಆಹಾರವನ್ನು ಉಗುಳುತ್ತಿದ್ದನು . ಊಟದ ಬಳಿಕ ಅರಸನು ಯಶೋಭದ್ರೆಯನ್ನು ಕುರಿತು “ ಸುಕುಮಾರನಿಗೆ ಸೊಂಟದ ರೋಗಕ್ಕೂ ಕಣ್ಣೀರು ಸುರಿಯುವುದಕ್ಕೂ ಊಟ ಸೇರದಿರುವುದಕ್ಕೂ ಏಕೆ ಔಷಧ ಮಾಡಿಸಿಲ್ಲ ? ‘ ಎಂದು ಕೇಳಿದಾಗ ಆಕೆ “ ಒಡೆಯರೆ , ಅವನಿಗೆ ಇವು ರೋಗಗಳಲ್ಲ . ಮಂತ್ರಾಕ್ಷತೆಯಾಗಿ ಹಾಕಿದ ಬಿಳಿ ಸಾಸವೆಗಳು ಒತ್ತಿದುದರಿಂದ ಸಹಿಸದಾದನು . ಯಾವಾಗಲೂ ಮಾಣಿಕ್ಯ ರತ್ನದ ಬೆಳಕಿನಲ್ಲಿ ಇರುತ್ತಿದ್ದ ಅವನು ಇಂದು ದೀಪದ ಬೆಳಕನ್ನು ಸಹಿಸಲಾರದೆ ಅವನ ಕಣ್ಣಿನಲ್ಲಿ ನೀರು ಬರುತ್ತಿತ್ತು . ನೀವು ಬಂದ ಸಂದರ್ಭದಲ್ಲಿ ತಾವರೆ ನೈದಿಲೆ ಹೂಗಳ ಸುವಾಸನೆಯಿಂದ ಕೂಡಿದ ಅಕ್ಕಿಯೊಂದಿಗೆ ಬೇರೆ ಅಕ್ಕಿಯನ್ನು ಮಿಶ್ರಮಾಡಿ ಬೇಯಿಸಿದ ಅನ್ನವನ್ನು ಬಡಿಸಿದ್ದರಿಂದ ಅವನು ಸುವಾಸನೆಯ ಅಕ್ಕಿಯ ಅನ್ನವನ್ನು ನುಂಗುತ್ತಿದ್ದನು . ಉಳಿದ ಅನ್ನವನ್ನು ಉಗುಳುತ್ತಿದ್ದನು . ಆದುದರಿಂದಲೇ ಇವನಿಗೆ ಈ ಅವಸ್ಥೆಗಳಾಗಿವೆ ” ಎಂದು ಹೇಳಿದಳು . ಅದನ್ನೆಲ್ಲ ಕೇಳಿ ಅರಸನು ಆಶ್ಚರ್ಯಪಟ್ಟನು , “ ಈತನ ಒಂದು ಕ್ಷಣದ ಸುಖ – ಭೋಗಗಳಿಗೆ ನನ್ನ ಇಡೀ ಅರಸುತನದ ಕಾಲದಲ್ಲಿ ಅನುಭವಿಸಿದ ಭೋಗ 2 ಉಪಭೋಗಗಳು ಸಮಾನವಾಗುವುದಿಲ್ಲ . ಆದುದರಿಂದ “ ಲೋಕದಲ್ಲಿ ನಿಜವಾಗಿಯೂ ಈತನೇ ಸುಖಿ ” ಎಂದು ಸಂತಸಗೊಂಡು ಅರಸನು ಅವನಿಗೆ ‘ ಅವಂತಿ ಸುಕುಮಾರ ‘ ಎಂದು ಹೆಸರನ್ನಿಟ್ಟನು .
2. ‘ ಸುಕುಮಾರ ‘ – ಎಂಬ ಹೆಸರು ಸುಕುಮಾರ ಸ್ವಾಮಿಗೆ ಹೇಗೆ ಅನ್ವರ್ಥವಾಗುತ್ತದೆ ? ವಿವರಿಸಿ ,
ಸುಕುಮಾರಸ್ವಾಮಿಯು ಶ್ರೀಮಂತಿಕೆ – ಗುಣ – ಸೌಂದರ್ಯದಲ್ಲಿ ವೈಭವದಿಂದ ಕೂಡಿದ್ದು ಅವನಿಗೆ ‘ ಸುಕುಮಾರ ‘ ಎಂಬ ಹೆಸರು ಅನ್ವರ್ಥವಾಗಿ ಒಪ್ಪುತ್ತದೆ ಎಂಬುದಕ್ಕೆ ಅನೇಕ ನಿದರ್ಶನಗಳನ್ನು ನೀಡಬಹುದು . ಅವನು ಅತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿಯಿಂದ ಕೂಡಿದವನಾದನು , ಅವನಿಗೆ ಮೂವತ್ತೆರಡು ಲತಾಗೃಹಗಳೂ ಅತ್ಯಂತ ರೂಪ , ಲಾವಣ್ಯ , ಸೌಭಾಗ್ಯ , ಕಾಂತಿ , ಹಾವ , ಭಾವ , ವಿಲಾಸ , ವಿಭ್ರಮಗಳಿಂದ ಕೂಡಿದ ದೇವತಾಸ್ತ್ರೀಯರನ್ನು ಹೋಲುವ ಮೂವತ್ತೆರಡು ಮಂದಿ ದಿವ್ಯರಾದ ಸ್ತ್ರೀಯರೂ ಇದ್ದರು , ಮೂವತ್ತೆರಡು ಬಗೆಯ ನಾಟ್ಯಗಳು , ಮೂವತ್ತೆರಡು ಕೋಟಿ ಹೊನ್ನು , ಐದು ಬಗೆಯ ರತ್ನಗಳು ಎಂಬಿವೆಲ್ಲವುಗಳನ್ನು ಹೊಂದಿದ್ದ ಸುಕುಮಾರಸ್ವಾಮಿ ಎಲ್ಲಾ ರೀತಿಯ ಸುಖಗಳನ್ನು ಅನುಭವಿಸುತ್ತಿದ್ದನು . ಅರಸನಾದ ವೃಷಭಾಂಕನು ಮನೆಗೆ ಬಂದಾಗ ಸುಕುಮಾರಸ್ವಾಮಿಯ ಮನೆಯ ಸೇವಕರು ಬಿಳಿ ಸಾಸುವೆಗಳನ್ನು ಮಂಗಳಕರವೆಂದು ಹಾಕಿದರು . ಆಗ ಬಿಳಿ ಸಾಸವೆಕಾಳುಗಳು ಸುಕುಮಾರಸ್ವಾಮಿ ಕುಳಿತಿದ್ದ ಆಸನದಲ್ಲಿ ಒತ್ತುತ್ತಿದುದರಿಂದ ಅವನು ಸೊಂಟವನ್ನು ಅತ್ತಿತ್ತ ಹೊರಳಾಡಿಸುತ್ತಿದ್ದನು .
ದೀಪ ನೋಡಿದಾಗ ಅವನಿಗೆ ಕಣ್ಣೀರು ಸುರಿಯುತ್ತಿತ್ತು . ಅಲ್ಲದೆ ಊಟಮಾಡುವಾಗ ಸುಕುಮಾರಸ್ವಾಮಿ ಆಹಾರದ ಅರ್ಧಾಂಶವನ್ನು ನುಂಗುತ್ತಾ ಇನ್ನುಳಿದ ಅರ್ಧಾಂಶ ಆಹಾರವನ್ನು ಉಗುಳುತ್ತಿದ್ದನು . ಅದನ್ನು ಅರಸನು ನೋಡಿ ಸುಕುಮಾರಸ್ವಾಮಿಗೆ ವ್ಯಾದಿಯಿದೆ ಎಂದು ಭಾವಿಸಿದನು . ಅದನ್ನೆಲ್ಲ ನೋಡಿ ರಾಜನು ಯಶೋಭದ್ರೆಯನ್ನು ಈ ಬಗ್ಗೆ ವಿಚಾರಿಸಿದಾಗ ಅವಳು “ ಒಡೆಯರೆ , ಅವನಿಗೆ ಇವು ರೋಗಗಳಲ್ಲ , ಮಂತ್ರಾಕ್ಷತೆಯಾಗಿ ಹಾಕಿದ ಬಿಳಿ ಸಾಸವೆಗಳು ಒತ್ತಿದುದರಿಂದ ಸಹಿಸದಾದನು . ಯಾವಾಗಲೂ ಮಾಣಿಕ್ಯ ರತ್ನದ ಬೆಳಕಿನಲ್ಲಿ ಇರುತ್ತಿದ್ದ ಅವನು ಇಂದು ದೀಪದ ಬೆಳಕನ್ನು ಸಹಿಸಲಾರದೆ ಅವನ ಕಣ್ಣಿನಲ್ಲಿ ನೀರು ಬರುತ್ತಿತ್ತು . ನೀವು ಬಂದ ಸಂದರ್ಭದಲ್ಲಿ ತಾವರೆ ನೈದಿಲೆ ಹೂಗಳ ಸುವಾಸನೆಯಿಂದ ಕೂಡಿದ ಅಕ್ಕಿಯೊಂದಿಗೆ ಬೇರೆ ಅಕ್ಕಿಯನ್ನು ಮಿಶ್ರಮಾಡಿ ಬೇಯಿಸಿದ ಅನ್ನವನ್ನು ಬಡಿಸಿದ್ದರಿಂದ ಅವನು ಸುವಾಸನೆಯ ಅಕ್ಕಿಯ ಅನ್ನವನ್ನು ನುಂಗುತ್ತಿದ್ದನು . ಉಳಿದ ಅನ್ನವನ್ನು ಉಗುಳುತ್ತಿದ್ದನು . ಆದುದರಿಂದಲೇ ಇವನಿಗೆ ಈ ಅವಸ್ಥೆಗಳಾಗಿವೆ ‘ ಎಂದು ಹೇಳಿದಳು . ಅದನ್ನು ಕೇಳಿದ ಕೂಡಲೇ ಸ್ವತಃ ರಾಜನೇ “ ಈತನ ಒಂದು ಕ್ಷಣದ ಸುಖ – ಭೋಗಗಳಿಗೆ ನನ್ನ ಇಡೀ ಅರಸುತನದ ಕಾಲದಲ್ಲಿ ಅನುಭವಿಸಿದ ಭೋಗ ಉಪಭೋಗಗಳು ಸಮಾನವಾಗುವುದಿಲ್ಲ . ಆದುದರಿಂದ “ ಲೋಕದಲ್ಲಿ ನಿಜವಾಗಿಯೂ ಈತನೇ ಸುಖ ” ಎಂದು ಸಂತಸಗೊಂಡು ಅರಸನು ಅವನಿಗೆ ಅವಂತಿ ಸುಕುಮಾರ ‘ ಎಂದು ಹೆಸರನ್ನಿಟ್ಟನು . ಈ ಎಲ್ಲಾ ಕಾರಣಗಳಿಂದ ಸುಕುಮಾರಸ್ವಾಮಿಗೆ ‘ ಸುಕುಮಾರ ‘ ಎಂಬ ಹೆಸರು ಅನ್ವರ್ಥವಾಗಿ ಒಪ್ಪುತ್ತದೆಂದು ಹೇಳಬಹುದು .
ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .
1 , ” ನಮ್ಮನಾಳ್ವರುಮೊಳರೆ ಎಂದು ವಿಸ್ಮಯಂಬಟ್ಟು ”
ಆಯ್ಕೆ : ಈ ವಾಕ್ಯವನ್ನು ಶಿವಕೋಟ್ಯಾಚಾರ್ಯರು ಬರೆದಿರುವ ‘ ವಡ್ಡಾರಾಧನೆ ‘ ಎಂಬ ಕೃತಿಯಿಂದ ಆರಿಸಲಾದ ‘ ಸುಕುಮಾರಸ್ವಾಮಿ ಕಥೆ ‘ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ರಾಜ ವೃಷಭಾಂಕನು ಸುಕುಮಾರಸ್ವಾಮಿಯ ಮನೆಗೆ ಬಂದು ” ಸುಕುಮಾರನು ಎಲ್ಲಿದ್ದಾನೆ ? ” ಎಂದು ಕೇಳಿದಾಗ ಅದಕ್ಕೆ ಉತ್ತರವಾಗಿ “ ಸ್ವಾಮಿ , ಅವನು ಬಹಳ ಸಾಧು , ನೀವು ಬಂದುದನ್ನು ಅವನು ತಿಳಿದಿಲ್ಲ . ಉಪ್ಪರಿಗೆಯ ಮೇಲೆ ಇದ್ದಾನೆ ‘ ಎಂದು ಯಶೋಭದ್ರೆ ಸುಕುಮಾರನಲ್ಲಿಗೆ ಹೋಗಿ ” ಮಗನೇ , ರಾಜರು ಬಂದಿದ್ದಾರೆ ಬಾ ಹೋಗೋಣ ” ಎಂದಳು . ಆಗ ಸುಕುಮಾರನು ” ರಾಜರೆಂದರೆ ಯಾರು ? ” ಎಂದು ಕೇಳಲು , ತಾಯಿಯು ” ನಮ್ಮನ್ನು ಆಳುವವರು ” ಎಂದು ಹೇಳಿದ ಸಂದರ್ಭದಲ್ಲಿ ಸುಕುಮಾರನು ಈ ಮಾತನ್ನು ಹೇಳುತ್ತಾನೆ .
ಸ್ವಾರಸ್ಯ : ಹೊರಗಿನ ಪ್ರಪಂಚದ ಅರಿವೇ ಇಲ್ಲದ ಸುಕುಮಾರನು ತನ್ನ ಮನೆಯೇ ಅರಮನೆ , ನಾವೇ ಆಳುವವರೆಂದು ಭಾವಿಸಿದ್ದ ಸುಕುಮಾರಸ್ವಾಮಿಯು ನಮ್ಮನ್ನು ಆಳುವವರೂ ಇದ್ದಾರೆಯೇ ಎಂದು ವಿಸ್ಮಯಪಡುವುದು ಇಲ್ಲಿ ಸ್ವಾರಸ್ಯಕರವಾಗಿದೆ .
2. “ ಆವಂತಿ ಸುಕುಮಾರನೆಂದು ಹೆಸರನಿಟ್ಟಂ ”
ಆಯ್ಕೆ : ಈ ವಾಕ್ಯವನ್ನು ಶಿವಕೋಟ್ಯಾಚಾರ್ಯರು ಬರೆದಿರುವ ‘ ವಡ್ಡಾರಾಧನೆ ‘ ಎಂಬ ಕೃತಿಯಿಂದ ಆರಿಸಲಾದ ‘ ಸುಕುಮಾರಸ್ವಾಮಿ ಕಥೆ ‘ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಸುಕುಮಾರನ ತಾಯಿಯ ಮೂಲಕ ಆತನ ವೈಭವ – ಗುಣ – ನಡತೆಗಳನ್ನೂ ಆತನು ಅನುಭವಿಸುತ್ತಿದ್ದ ಸುಖ ಭೋಗಗಳನ್ನೂ ಕೇಳಿದ ಕೂಡಲೇ ಸ್ವತಃ ರಾಜನೇ ” ಈತನ ಒಂದು ಕ್ಷಣದ ಸುಖ – ಭೋಗಗಳಿಗೆ ನನ್ನ ಇಡೀ ಅರಸುತನದ ಕಾಲದಲ್ಲಿ ಅನುಭವಿಸಿದ ಭೋಗ ? ಉಪಭೋಗಗಳು ಸಮಾನವಾಗುವುದಿಲ್ಲ . ಆದುದರಿಂದ ” ಲೋಕದಲ್ಲಿ ನಿಜವಾಗಿಯೂ ಈತನೇ ಸುಖಿ ” ಎಂದು ಸಂತಸಗೊಂಡ ಸಂದರ್ಭದಲ್ಲಿ ಅರಸನು ಅವನಿಗೆ ‘ ಅವಂತಿ ಸುಕುಮಾರ ‘ ಎಂದು ಹೆಸರನ್ನಿಟ್ಟನು , ಎಂಬಲ್ಲಿ ಈ ಮಾತು ಬಂದಿದೆ .
ಸ್ವಾರಸ್ಯ : ಸ್ವತಃ ರಾಜನೇ ಸುಕುಮಾರಸ್ವಾಮಿಯ ವೈಭವವನ್ನು ಮೆಚ್ಚಿ , ಈತನ ವೈಭವದ ಮುಂದೆ ತನ್ನ ವೈಭವ ಏನೇನೂ ಅಲ್ಲ . ಎಂದು ಅವನಿಗೆ ‘ ಅವಂತಿ ಸುಕುಮಾರ ‘ ಎಂದು ಹೆಸರಿಟ್ಟದ್ದು ಸ್ವಾರಸ್ಯಮೂರ್ಣವಾಗಿ ಮೂಡಿಬಂದಿದೆ .
3.“ ರಿಸಿಯರ ರೂಪಂ ಕಾಣುಮಂದೀತನುಂ ತಪಂಬಡುಗುಮ್ ”
ಆಯ್ಕೆ : ಈ ವಾಕ್ಯವನ್ನು ಶಿವಕೋಟ್ಯಾಚಾರ್ಯರು ಬರೆದಿರುವ ‘ ವಡ್ಡಾರಾಧನೆ ‘ ಎಂಬ ಕೃತಿಯಿಂದ ಆರಿಸಲಾದ ‘ ಸುಕುಮಾರಸ್ವಾಮಿ ಕಥೆ ‘ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಸುಕುಮಾರಸ್ವಾಮಿಯ ಭವಿಷ್ಯವನ್ನು ಯಶೋಭದ್ರೆಗೆ ಹೇಳುವ ಸಂದರ್ಭದಲ್ಲಿ ಜೋಯಿಸರು ಈ ಮಾತನ್ನು ಹೇಳುತ್ತಾರೆ . ಒಂದು ದಿನ ಅರಮನೆಗೆ ಬಂದ ಒಬ್ಬ ಜೋಯಿಸನು ” ಈ ಸುಕುಮಾರಸ್ವಾಮಿ ಯಾವಾಗ ಋಷಿಗಳ ರೂಪವನ್ನು ಕಾಣುವನೋ ಅಂದೇ ತಪಸ್ಸಿಗೆ ತೆರಳುವನು ” ಎಂದು ಭವಿಷ್ಯನುಡಿದುದನ್ನು ಕೇಳಿದ ಯಶೋಭದ್ರೆ ತನ್ನ ಮನೆಗೆ ಋಷಿಗಳು ಪ್ರವೇಶಿಸದಂತೆ ಕಾವಲಿಟ್ಟಳು .
ಸ್ವಾರಸ್ಯ : ಇಲ್ಲಿ ವಿಧಿಯನ್ನು ಯಾರಿಂದಲು ಬದಲಾಯಿಸಲು ಸಾಧ್ಯವಿಲ್ಲ ಎಂಬುದು ಸತ್ಯವಾದರೂ ಸುಕುಮಾರಸ್ವಾಮಿ : ವೈರಾಗ್ಯ ಹೊಂದುವುದನ್ನು ತಡೆಯಲು ಯಶೋಭದ್ರೆ ಮಾಡುವ ಪ್ರಯತ್ನ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ .
4 ,“ಅರ್ಧಾಹಾರಮಂ ನುಂಗುಗುದರ್ಧಾಹಾರಮನುಗುಟ್ಟುಮದಂ ನೋಡಿ ”
ಆಯ್ಕೆ : ಈ ವಾಕ್ಯವನ್ನು ಶಿವಕೋಟ್ಯಾಚಾರ್ಯರು ಬರೆದಿರುವ ‘ ವಡ್ಡಾರಾಧನೆ ‘ ಎಂಬ ಕೃತಿಯಿಂದ ಆರಿಸಲಾದ ‘ ಸುಕುಮಾರಸ್ವಾಮಿ ಕಥೆ ‘ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ರಾಜನು ಸುಕುಮಾರನೊಂದಿಗೆ ಊಟದ ತಟ್ಟೆಯ ಮುಂದೆ ಕುಳಿತುಕೊಂಡು ಹಲವು ವಿಧದ ಸವಿಯಾದ ಆಹಾರವನ್ನು ಊಟಮಾಡುತ್ತಿದ್ದ ಸಂದರ್ಭದಲ್ಲಿ ಈ ಮಾತನ್ನು ಕವಿ ಹೇಳಿದ್ದಾರೆ . ಸುಕುಮಾರಸ್ವಾಮಿ ಆಹಾರದ ಅರ್ಧಾಂಶವನ್ನು ನುಂಗುತ್ತಿದ್ದನು . ಇನ್ನುಳಿದ ಅರ್ಧಾಂಶ ಆಹಾರವನ್ನು ಉಗುಳುತ್ತಿದ್ದನು . ಅದನ್ನು ಅರಸನು ನೋಡಿ ಇದು ಒಂದು ಬಗೆಯ ರೋಗ , ಊಟದ ಮೇಲೆ ರುಚಿಯಿಲ್ಲದುದು ” ಎಂದು ಭಾವಿಸಿಕೊಂಡನು .
ಸ್ವಾರಸ್ಯ : ಇಲ್ಲಿ ಸುಕುಮಾರಸ್ವಾಮಿಯ ವೈಭವದ ಉತ್ತುಂಗ ಸ್ಥಿತಿ ಮತ್ತು ಆತನ ಸುಕೋಮಲತೆ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ .
ಭಾಷಾ ಚಟುವಟಿಕೆ
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ .
1. ನಾಮಪದ ಎಂದರೇನು ? ಉದಾಹರಿಸಿರಿ .
ನಾಮ ಪ್ರಕೃತಿಗಳಿಗೆ ವಿಭಕ್ತಿ ಪ್ರತ್ಯಯಗಳು ಸೇರಿ ಆಗುವ ಪದವೇ ನಾಮಪದ . ಉದಾ : ‘ ಭೀಮ ‘ ಎನ್ನುವುದು ನಾಮ ಪ್ರಕೃತಿ , ಅನ್ನು ಎನ್ನುವುದು ವಿಭಕ್ತಿ ಪ್ರತ್ಯಯ ‘ ಭೀಮನನ್ನು ‘ ಎನ್ನುವುದು ನಾಮಪದ . [ ಭೀಮ + ಅನ್ನು = ಭೀಮನನ್ನು
2. ನಾಮವಾಚಕಗಳ ವಿಧಗಳನ್ನು ಪಟ್ಟಿಮಾಡಿರಿ .
ನಾಮವಾಚಕಗಳನ್ನು ವಸ್ತುವಾಚಕ , ಗುಣವಾಚಕ , ಸಂಖ್ಯಾವಾಚಕ , ಸಂಖ್ಯೆಯವಾಚಕ , ಭಾವನಾಮ , ಪರಿಮಾಣವಾಚಕ , ದಿಗ್ವಾಚಕ , ಸರ್ವನಾಮ ಎಂಬ ಗುಂಪುಗಳಾಗಿ ವಿಂಗಡಿಸಬಹುದು .
3. ಕೃದಂತ ಎಂದರೇನು ? ಉದಾಹರಣೆಗಳನ್ನು ಬರೆಯಿರಿ .
ಧಾತುಗಳಿಗೆ ಕೃತ ಪ್ರತ್ಯಯಗಳು ಸೇರಿ ಕೃದಂತಗಳೆನಿಸುತ್ತವೆ , ಇದಕ್ಕೆ ಕೃನ್ನಾಮಗಳೆಂಬ ಹೆಸರೂ ಇದೆ , ಕೃದಂತಗಳಲ್ಲಿ ಕೃದಂತನಾಮ , ಕೃದಂತಭಾವನಾಮ , ಕೃದಂತಾವ್ಯಯಗಳೆಂದು ಮೂರು ವಿಧಗಳಿವೆ . ಉದಾ : ಕೃದಂತನಾದುಕ್ಕೆ ಮಾಡಿದ , ಮಾಡುವ , ಮಾಡದ , ಕೃದಂತ ಭಾವನಾಮಕ್ಕೆ ಮಾಟ , ತಿನ್ನುವಿಕೆ , ನಡೆತ , ಓಟ ಕೃದಂತಾವ್ಯಯ : ಮಾಡಿ , ತಿಂದು , ನಡೆಯುತ್ತ , ಓಡಿ
ಆ ) ಕೊಟ್ಟಿರುವ ಪದಗಳನ್ನು ಕೃದಂತನಾಮ , ಕೃದಂತಭಾವನಾಮ , ಕೃದಂತಾವ್ಯಯಗಳಾಗಿ ವಿಂಗಡಿಸಿ ಬರೆಯಿರಿ .
ಮಾಟ, ಓಡಿದ, ತಿಂದು, ನೋಡಿ, ಆಟ, ನೋಡಿದ.
ಕೃದಂತ ನಾಮ: ಓಡಿದ, ನೋಡಿದ
ಕೃದಂತ ಭಾವನಾಮ: ಮಾಟ , ಆಟ
ಕೃದಂತಾವ್ಯಯ: ನೋಡಿ, ತಿಂದು
ಇ ) ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸೂಕ್ತವಾದುದನ್ನು ಆರಿಸಿ ಬರೆಯಿರಿ ,
1. ವರ್ತಮಾನ ಕೃದಂತನಾಮಕ್ಕೆ ಈ ಪದವು ಉದಾಹರಣೆಯಾಗಿದೆ.
ಅ) ಬರೆಯುವ ಆ) ಬರೆದ ಇ) ಬರೆಯದ ಈ) ಬರೆಹ
ಉತ್ತರ: ಅ) ಬರೆಯುವ
2.‘ನೋಟ’ ಎಂಬುದು ಈ ವ್ಯಾಕರಣಾಂಶವಾಗಿದೆ.
ಅ) ಕೃದಂತನಾಮ ಆ) ಕೃದಂತಭಾವನಾಮ ಇ) ಕೃದಂತಾವ್ಯಯ ಈ)ತದ್ಧಿತಾಂತ
ಉತ್ತರ: ಆ) ಕೃದಂತಭಾವನಾಮ
3. ಇವುಗಳಲ್ಲಿ ಕೃದಂತಾವ್ಯಯಕ್ಕೆ ಉದಾಹರಣೆಯಾದ ಪದ.
ಅ) ತೊಡುಗೆ ಆ) ತಿನ್ನುವಿಕೆ ಇ) ನಡೆಯುವ ಈ) ಮಾಡಲಿಕ್ಕೆ
ಉತ್ತರ: ಈ) ಮಾಡಲಿಕ್ಕೆ
4. ‘ಲೋಕದೊಳ್’ ಎಂಬುದು ಈ ವಿಭಕ್ತಿಯಲ್ಲಿದೆ .
ಅ) ಪ್ರಥಮ ಆ) ತೃತೀಯಾ ಇ) ಪಂಚಮೀ ಈ) ಸಪ್ತಮೀ
ಉತ್ತರ: ಈ) ಸಪ್ತಮೀ
ಈ ) ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ನಾಲ್ಕನೆಯ ಪದ ಬರೆಯಿರಿ .
1. ನದಿ, ಪರ್ವತ : ರೂಢನಾಮ : : ವ್ಯಾಪಾರಿ, ವಿಜ್ಞಾನಿ : ಅನ್ವರ್ಥನಾಮ
2. ನಾನು, ನೀನು : ಪುರುಷಾರ್ಥಕ ಸರ್ವನಾಮ : : ಯಾರು? ಏನು? : ಪ್ರಶ್ನಾರ್ಥಕ ಸರ್ವನಾಮ
3. ಅಷ್ಟು : ಪರಿಮಾಣ ವಾಚಕ : : ಹನ್ನೆರಡು : ಸಂಖ್ಯಾವಾಚಕ
4. : ಪಟ್ಟಣ : : ಕಸವರ : ಚಿನ್ನ
Sukumara Swamy Kathe Notes in Kannada Question Answer Pdf Download 2022
ಇತರ ಪಾಠಗಳು: