2nd Puc English Water Notes Pdf ದ್ವಿತೀಯ ಪಿ.ಯು.ಸಿ ಇಂಗ್ಲೀಷ್ ನೋಟ್ಸ್ 14ನೇ ಪಾಠ 12th Standard Chapter 14 Chapter Extract Question Bank With Answer Mcq Pdf kseeb solutions Karnataka Second Puc Water lesson pdf English Notes Pdf Download 2023 Water Lesson short Story summary In Kannada Medium 2nd PUC English Textbook Springs Answers Pdf Ncert solutions for class 12 english Water
Table of Contents
ದ್ವಿತೀಯ ಪಿ.ಯು.ಸಿ ಇಂಗ್ಲೀಷ್ ನೋಟ್ಸ್ Chapter 14
Water notes class 12
Class: 2nd Puc
Chapter Name: Water
kseeb solutions II puc english Chapter 14
Second Puc Water lesson pdf English Notes Pdf Download
12th Class Water ಪಾಠದ ನೋಟ್ಸ್‌ಲ್ಲಿರುವ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು 12 Std Water ಪಾಠದ PDF ಡೌನ್ಲೋಡ್ ಲಿಂಕನ್ನು ನೀಡಿದ್ದೇವೆ. ಪ್ರೀತಿಯ ವಿಧ್ಯಾರ್ಥಿಗಳೇ, ನೀವು ನಿಮ್ಮ ಜ್ಞಾನ ಮತ್ತು ಕೌಶಲ್ಯದ ಜೊತೆಗೆ ನಾವು ನೀಡಿರುವಂತಹ ನೋಟ್ಸ್ ನ ಸಹಾಯದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಿದೆ.
Water Lesson short summary In Kannada Medium
ಪ್ರಸ್ತುತ ಪದ್ಯದಲ್ಲಿ ಕವಯಿತ್ರಿ ಚಲ್ಲಪಳ್ಳಿ ಸ್ವರೂಪ ರಾಣಿಯು ದಲಿತ ಸಮುದಾಯವು ಅನುಭವಿಸುತ್ತಿರುವ ಅತ್ಯಂತ ದಾರುಣವಾದ ಪರಿಸ್ಥಿತಿಯನ್ನು ಮನಸ್ಸು ಕರಗುವಂತೆ ವಿವರಿಸಿದ್ದಾರೆ.
ಜೀವಿಗಳೆಲ್ಲವೂ ಉಳಿವಿಗೆ ಅತ್ಯಾವಶ್ಯಕವಾಗಿ ಬೇಕಿರುವುದು ನೀರು, ಆದರೆ ಶತಮಾನಗಳಿಂದ ಭಾರತದಲ್ಲಿ ಮೇಲ್ವರ್ಗದ ಜನರು ದಲಿತ ಸಮುದಾಯಕ್ಕೆ ನೀರನ್ನು ಕೊಡದೆ ಅವರನ್ನು ಶೋಷಿಸುತ್ತಾ ಬಂದಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಬಾವಿಗಳಿರುತ್ತವೆ, ಪ್ರತಿಬಾರಿ ಆ ಬಾವಿಯಿಂದ ಯಾರೆ ನೀರು ಸೇದಿದರು ಅದರಲ್ಲಿ ಸ್ವಲ್ಪ ಬಾಗ ಹೊರಕ್ಕೆ ತುಳುಕುತ್ತದೆ,
ಹಾಗಾಗಿ ಬಾವಿಯ ಅಂಚಿನಲ್ಲಿ ಎಲ್ಲ ಕಾಲದಲ್ಲಿಯೂ ಒದ್ದೆ, ಚೌಗು ಇದ್ದೇ ಇರುತ್ತದೆ. ಅದೇ ರೀತಿಯಲ್ಲಿ ದಲಿತರನ್ನು ಅಸ್ವೃಶ್ಯತೆಯ ಹೆಸರಿನಲ್ಲಿ ಮೇಲ್ವರ್ಗದ ಜನರು ಯಾವಾಗಲೂ ನೀರು ಕೊಡದೆ ಶೋಷಿಸುತ್ತಲೇ ಬಂದಿದ್ದಾರೆ. ಎಂದಿರುವ ಕವಯಿತ್ರಿ ಈ ಸತ್ಯ ನೀರಿಗೆ ಮಾತ್ರವೇ ಗೊತ್ತು ಎಂದು ವಿಷಾದಿಸಿದ್ದಾರೆ, ಸಮಾರಿಯಾ ಎಂಬ ಜಾಗದ ಕೆಳವರ್ಗದ ಮಹಿಳೆಯಿಂದ ನೀರನ್ನು ಕೇಳಿ ಕುಡಿದ ಮೇಲ್ವರ್ಗಕ್ಕೆ ಸೇರಿದ ಏಸುಕ್ರಿಸ್ತನ ಉದಾಹರಣೆಯನ್ನು ನೀಡುವ ಮೂಲಕ ನೀರು ಹೇಗೆ ಎಲ್ಲರಿಗೂ ಅತ್ಯಗತ್ಯ ಎಂಬುದನ್ನು ಅಕೆ ನಿರೂಪಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಇರುವ ಸಾರ್ವಜನಿಕರ ಬಳಕೆಯ ಬಾವಿಗಳಲ್ಲಿ ನೀರನ್ನು ತಾನೆ ಸೇದಿಕೊಳ್ಳಲು ದಲಿತವರ್ಗದವರಿಗೆ ಅವಕಾಶವಿರುವುದಿಲ್ಲ. ಅವರು ವರ್ಣಾಶ್ರಮ ಧರ್ಮದಲ್ಲಿ ನಾಲ್ಕನೆಯವರಾದ ಶೂದ್ರರು ಬಂದು ನೀರು ಸೇದಿ ಹಾಕುವವರೆಗೆ ಕಾಯಬೇಕು. ಹಾಗೆ ಹಾಕೂವಾಗಲೂ ಸ್ವಲ್ಪ ನೀರು ಹಾಕಿಸಿಕೊಳ್ಳುವವರ ಮೇಲೆ ಬೀಳುತ್ತದೆ.
ಒಬ್ಬ ಬಾಲಕಿ ಹೀಗೆ ಮೇಲ್ವರ್ಗದವರಿಂದ ನೀರನ್ನು ಹಾಕಿಸಿಕೊಳ್ಳುವಾಗ ನೀರು ಆಕೆಯ ಮೇಲೆಲ್ಲ ಚೆಲ್ಲಿ ಆಕೆ ಪೂರ್ತಿಯಾಗಿ ತೊಯ್ದು ಹೋಗುತ್ತಾಳೆ .ಅಸ್ಪೃಶ್ಯತೆಯ ಹೆಸರಿನಲ್ಲಿ ನಡೆಯುವ ಅಮಾನವೀಯ ಘಟನೆಗಳಿಗೆ ಇದೊಂದು ಉದಾಹರಣೆ ಎಂದು ಕವಯಿತ್ರಿ ವಿವರಿಸಿದ್ದಾಳೆ.
ಪ್ರಕಾಶಂ ಜಿಲ್ಲೆಯ ಚಿರಾಲಾ ತಾಲೂಕಿನ ಮಾದಿಗಪಲ್ಲಿ ಎಂಬ ಗ್ರಾಮದಲ್ಲಿ 1985ರಲ್ಲಿ ಇಬ್ಬರು ಮೇಲ್ವರ್ಗದ ಯುವಕರು ಗಲೀಜಾದ ಬಕೇಟುಗಳನ್ನು ಕುಡಿಯುವ ನೀರಿನಲ್ಲಿ ತೊಳೆಯುತ್ತಿದ್ದರು. ಇದನ್ನು ಒಬ್ಬ ದಲಿತ ಯುವಕ ಆಕ್ಷೇಪಿಸಿದಾಗ ಅವರಿಬ್ಬರೂ ಸೇರಿ ಆತನ ಮೇಲೆ ಆಕ್ರಮಣ ಮಾಡಿದರು. ಕಡೆಗೆ ಮುನ್ನಂಗಿ ಸುವಾರ್ತ ಎಂಬ ದಲಿತ ಮಹಿಳೆ ತನ್ನಲ್ಲಲಿದ್ದ ಪಾತ್ರೆಯಿಂದ ಹೊಡೆತವನ್ನು ತಡೆದು ಅ ಹುಡುಗನನ್ನು ಉಳಿಸಿದಳು. ಆಮೇಲೆ ಮೇಲ್ವರ್ಗದ ಜನ ಗುಂಪು ಕಟ್ಟಿಕೊಂಡು ಬಂದು ಕೆಳವರ್ಗದವರ ಮೇಲೆ ಆಕ್ರಮಣ ನಡೆಸಿ ಸೇಡು ತೀರಿಸಿಕೊಂಡು ಬಂದು ಕೆಳವರ್ಗದವರ ಮೇಲೆ ಅಕ್ರಮಣ ನಡೆಸಿ ಸೇಡು ತೀರಿಸಕೊಂಡರು. ಎಂದಿದ್ದಾರೆ ಕವಯಿತ್ರಿ.
ತಮಗೆ ಎಲ್ಲಿ ನೀರು ಕಂಡರೂ ತಮ್ಮ ಊರಿನ ದಲಿತರೇ ನೆನಪಾಗುತ್ತಾರೆ. ಎಂದು ಕವಯಿತ್ರಿ ಹೇಳುತ್ತಾರೆ. ದಲಿತರಿಗೆ ವಾರಕ್ಕೊಮ್ಮೆ ಸ್ನಾನಮಾಡಲು ನೀರು ಸಿಕ್ಕರೆ ಅದು ಅವರಿಗೆ ಉಲ್ಲಾಸದ ದಿನ. ಆದರೆ ಮೇಲ್ವರ್ಗದವರು ದಿನಕ್ಕೆ ಎರಡು ಬಾರಿ ಸ್ನಾನಮಾಡುವ ವೈಭವವನ್ನು ಅನುಭವಿಸುತ್ತಿದ್ದಾರೆ. ಮಾಲಪಲ್ಲಿ ಎಂಬ ಗ್ರಾಮದಲ್ಲಿ ಅಗ್ನಿದುರಂತ ನಡೆದು ದಲಿತರ ಗುಡಿಸಲುಗಳೆಲ್ಲ ಸುಟ್ಟುಹೊದವು. ಕೆಲವು ಕೊಡ ನೀರು ದೊರೆತಿದ್ದರೆ ಬೆಂಕಿಯನ್ನು ಆರಿಸಬಹುದಿತ್ತು. ಎಂದು ಆಕೆ ವಿವರಿಸಿದ್ದಾರೆ.
ಲೇಖಕಿಯ ಪ್ರಕಾರ ನೀರು ಇಂದು ಸಾಮಾಜಿಕ ಸುಧಾರಣೆಯ ಮಾಧ್ಯಮವಾಗಿದೆ. ಹೇಗೆಂದರೆ 1927ರಲ್ಲಿ ಅಂದಿನ ಮುಂಬಯಿ ರಾಜ್ಯದ ಕೊಲಾಬಾ ಜಿಲ್ಲೆಯ ಮಹದ್ ಎಂಬ ಗ್ರಾಮದ ಬಳಿಯ ಚಡಾರ್ ಕೆರೆಯ ನೀರನ್ನು ಕುಡಿಯುವ ಮೂಲಕ ಡಾ|| ಬಿ,ಆರ್, ಅಂಬೇಡ್ಕರ್ ರವರು ಆವರೆಗೆ ಆಸ್ಪೃಶ್ಯರಿಗೆ ಇದ್ದ ನಿರ್ಬಂಧವನ್ನು ತೆಗೆದುಹಾಕಿದರು. ಎಂದು ಲೇಖಕಿ ಜ್ಞಾಪಿಸಿಕೊಂಡಿದ್ದಾರೆ;
ದಲಿತರು ಪಡೆಯುವ ಒಂದೊಂದು ಹನಿ ಕುಡಿಯುವ ನೀರೂ ಅವರು ಶತಮಾನಗಳ ಕಾಲ ಸುರಿಸಿದ ಕಣ್ಣೀರಿನ ಪ್ರತೀಕವಾಗಿದೆ. ಅವರೆಲ್ಲ ನೀರಿಗಾಗಿ ಹಲವು ಬಾರಿ ಹೋರಾಡಿದ್ದಾರೆ. ಪ್ರತಿಬಾರಿ ಬೇಕಾದಷ್ಟುರಕ್ತ ಹರಿದಿದೆಯಾದರೂ ಅವರಿಗೆ ಬೊಗಸೆ ನೀರೂ ಸಿಕ್ಕಿಲ್ಲ ಎಂದು ಆಕೆ ದುಃಖಿಸಿದ್ದಾರೆ
ಯಾವ ನೀರನ್ನು ನೀಡಲು ಮೇಲ್ವರ್ಗದವರು ನಿರಾಕರಿಸಿದರೋ ಅದೇ ನೀರು ಸುನಾಮಿಯಾಗಿ ಸಾವಿರಾರು ಜನರನ್ನು ಬಲಿ ತೆಗೆದುಕೊಳ್ಳುವ ಮೂಲಕ ದಲಿತರನ್ನು ಶೋಷಿಸಿದವರ ವಿರುದ್ದ ಸೇಡು ತೀರಿಸಿಕೊಂಡಿದೆ ಎಂದು ಕವಯಿತ್ರಿ ಹೇಳಿದ್ದಾರೆ.
ಜಾಗತಿಕ ಮಾರುಕಟ್ಟೆಯ ಕಾರಣದಿಂದಾಗಿ ಇಂದು ನೀರು ಹೊಸ ಅವತಾರವನ್ನು ತಳೆದಿದೆ. ಬಿಸ್ಥೆರಿ ಬಾಟಲುಗಳಲ್ಲಿ ಕುಳಿತು ಅದು ಏನೂ ಗೊತ್ತೇ ಇಲ್ಲದ ಮುಗ್ದನಂತೆ ನಟಿಸುತ್ತಿದೆ. ಯಾವ ಕೆರೆಕೊಳಗಳಿಗೆ ದಲಿತು ಬಾರದಂತೆ ನಿರ್ಬಂದಿಸಲಾಗುತ್ತಿತ್ತೋ ಅಂತಹ ಸ್ಥಳಗಳಿಂದ ವಿದೇಶಿ ಕಂಪನಿಗಳು ನೀರನ್ನು ತುಂಬಿ ಬಾಟಲುಗಳಲ್ಲಿ ಮಾರುತ್ತಿದ್ದಾರೆ. ಈಗ ನಿಮ್ಮ ಸಾಮಾಜಿಕ ನಿಷಧ ಎಲ್ಲಿ ಹೋಯಿತು? ಎಂದು ಲೇಖಕಿ ವೆಲ್ವರ್ಗದವರನ್ನು ಸಿಟ್ಟಿನಿಂದ ಪ್ರಶ್ನಿಸುತ್ತಿದ್ದಾರೆ.
ನೀರು ಇಂದು ಕೇವಲ ಒಂದು ಸಾಮಾನ್ಯ ವಸ್ತುವಾಗಿ ಉಳಿದಿಲ್ಲ. ಅದೊಂದು ಅಂತಾರಾಷ್ಟ್ರೀಯ ಮಾರುಕಟ್ಟೆಯ ಮಾರಾಟದ ವಸ್ತುವಾಗಿದೆ. ಇಂದು ಯಾರು ದಲಿತರನ್ನು ನೀರಿನಿಂದ ದೂರವಿಡುವಂತಿಲ್ಲ ಎಂಬ ಹೇಳಿಕೆಯೊಂದಿಗೆ ಈ ಕವಿತೆ ಮುಕ್ತಾಯವಾಗಿದೆ.
Water Chapter Questions And Answers II Puc
PDF Name | 2nd Puc English Water Chapter Notes Pdf |
No. of Pages | 04 |
PDF Size | 69KB |
Language | 2nd Puc ಕನ್ನಡ ಮಾಧ್ಯಮ |
Category | English |
Download Link | Available ✓ |
Topics | 2nd Puc English 14th Chapter Notes Pdf |
Ncert solutions for class 12 english Water
ಪ್ರೀತಿಯ ವಿಧ್ಯಾರ್ಥಿಗಳೇ, 12ನೇ ತರಗತಿ Water ಪಾಠದ PDFನ ಎಲ್ಲಾ ಪ್ರಶ್ನೆ ಉತ್ತರಗಳನ್ನು ಇಲ್ಲಿ ನೀಡಿದ್ದೇವೆ, ಇದರ ಮೂಲಕ ನೀವು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ವಿಧ್ಯಾರ್ಥಿಗಳಿಗೆ ಸಹಾಯವಾಗುತ್ತದೆ,
2nd Puc ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು Water Chapter ನೋಟ್ಸ್ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 12ನೇ ತರಗತಿ Water Chapter ಪಾಠದ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
2nd PUC English Textbook Springs Answers Pdf
ಈ Pdf ಅನ್ನು ನೀವು ಉಚಿತವಾಗಿ ಹಾಗೂ ಸುಲಭವಾಗಿ ನೋಡಿ ಡೌನ್ಲೋಡ್ ಕೂಡ ಮಾಡಬಹದು. ನಿಮಗಾಗಿ ನಾವು ಈ ನೋಟ್ಸ್ ಅನ್ನು ನೀಡಿದ್ದೇವೆ. Read Online Button ಮೇಲೆ ಕ್ಲಿಕ್ ಮಾಡಿದಾಗ ಈ Pdfಅನ್ನು ವಿಕ್ಷಿಸಬಹುದು ಹಾಗೂ Download Now ಮೇಲೆ ಕ್ಲಿಕ್ ಮಾಡಿ ನೀವು ಈ ನೋಟ್ಸ್ ಅನ್ನು Download ಕೂಡ ಮಾಡಬಹುದು.
English Water Class 12th Std story Summary Pdf
ಇಲ್ಲಿ ನೀವು 2nd Puc 14th Chapter ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಿಸಬಹುದು.
Read Onlineಇಲ್ಲಿ ನೀವು 12th Standard Water ಪಾಠದ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Now12th Standard Chapter 14 Chapter Extract Question Bank With Answer Mcq Pdf
FAQ:
How many times did the dalits bathe?
Once a week
How many times did the entire village other than the dalits bathe?
Twice a day.
ಇತರೆ ವಿಷಯ :
2nd Puc All Subjects Notes Pdf