2nd Puc The Voter English Notes Pdf Download

2nd Puc The Voter English Notes Pdf Download kseeb solutions II puc english Chapter 12 Summary of The Voter 2nd puc in Kannada Medium 12th Standard Chapter 12 Chapter Question Bank With Answer Mcq Pdf Second Puc English Lesson 12 Notes Pdf 2022 Karnataka 2nd PUC English Textbook Springs Answers Pdf Guide Ncert solutions for class 12 english The Voter

Second Puc English Lesson 12 Notes Pdf Download 2022

Class: 2nd Puc

Chapter Name: The Voter

kseeb solutions II puc english Chapter 12

2nd Puc The Voter English Notes Pdf Download
2nd Puc The Voter English Notes Pdf Download

Ncert solutions for class 12 english The Voter

2nd Puc ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು The Voter Chapter ನೋಟ್ಸ್‌ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 12ನೇ ತರಗತಿ The Voter Chapter ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

2nd PUC English Textbook Springs Answers Pdf

PDF Name2nd Puc English The Voter Chapter Notes Pdf
No. of Pages03
PDF Size63KB
Language2nd Puc ಕನ್ನಡ ಮಾಧ್ಯಮ
CategoryEnglish
Download LinkAvailable ✓
Topics2nd Puc English 12th Chapter Notes Pdf

Summary of The Voter 2nd puc in Kannada

ನೈಜೀರಿಯಾದ ಖ್ಯಾತ ಲೇಖಕನಾದ ಚಿನುಅ ಅಚಿಬೆ ಈ ಸಣ್ಣಕಥೆಯಲ್ಲಿ ಪ್ರಸ್ತುತ ರಾಜಕಾರಣದ ಚದುರಂಗದಾಟವನ್ನು ವ್ಯಂಗ್ಯದ ಧಾಟಿಯಲ್ಲಿ ನಿರೂಪಿಸಿದ್ದಾರೆ. ಉಮೋಫಿಯಾ ಎನ್ನುವುದು ನೈಜಿರಿಯಾ ಒಂದು ಹಳ್ಳಿ. ಇಲ್ಲಿಯ ಬಹುಪಾಲು ಜನರು ಇಗೋ ಜನಾಂಗಕ್ಕೆ ಸೇರಿದವರಾಗಿದ್ದು ಅನಕ್ಷರಸ್ಥರು ಹಾಗೂ ಬಡವರು. ಈ ಪ್ರದೇಶವನ್ನು ಆಳುತ್ತಿದ್ದ PAP ಎಂಬ ರಾಜಕೀಯ ಪಕ್ಷದ ಆಳ್ವಿಕೆಯ ಅವಧಿ ಮುಗಿದಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ಬರಲಿದೆ. ಕಳೆದ ಬಾರಿ ಹಳ್ಳಿಯ ಜನರೆಲ್ಲಾ ಒಟ್ಟಾಗಿ ಸೇರಿ ಮಾರ್ಕಸ್‌ ಇದೆ ಎಂಬ ಜನನಾಯಕನನ್ನು ಆಯ್ಕೆ ಮಾಡಿ ಕಳುಹಿಸಿದ್ದರು.
ಆತ ಸರ್ಕಾರದಲ್ಲಿ ಸಂಸ್ಕೃತಿ ಇಲಾಖೆಯ ಸಚಿವನೂ ಆಗಿದ್ದ. ಈ ಬಾರಿಯ ಚುನಾವಣೆಯಲ್ಲಿಯೂ ಮಾರ್ಕಸ್‌ ಇದೆ ಸ್ಪರ್ಧಿಸುತ್ತಿದ್ದು ತನಗೆ ಯಾರೂ ಎದುರಾಳಿಗಳಿಲ್ಲದಿರುವುದರಿಂದ ಆರಾಮವಾಗಿ ಗೆದ್ದು ಬರುವೆನೆಂಬ ಭರವಸೆಯಲ್ಲಿದ್ದಾನೆ. ಇತ್ತೀಚೆಗೆ POP ಪಕ್ಷ ಮಡೂಕ ಎಂಬುವನ ನೆತೃತ್ವದಲ್ಲಿ ರೂಪುಗೊಂಡಿದೆಯಾದರೂ ಅದು ಪ್ರಬಲವಾಗಿಲ್ಲ. ಆದರೆ ಕಳೆದ ಬಾರಿಯಷ್ಟು ಸುಲಭವಾಗಿ ಮಾರ್ಕಸ್‌ ಈ ಬಾರಿ ಗೆಲ್ಲುವುದು ಸಾಧ್ಯವಿಲ್ಲವೆಂಬ ಸತ್ಯ ರೂಫ್‌ ಎಂದೇ ಪ್ರಸಿದ್ದನಾಗಿರುವ ರೂಫಸ್‌ ಒಕೇಕೆಗೆ ಅರ್ಥವಾಗಿದೆ.
ರೂಫ್‌ ಉಮೋಫಿಯಾದಲ್ಲಿ ಬಹಳ ಜನಪ್ರಿಯನಾಗಿದ್ದ ವ್ಯಕ್ತಿ ಸ್ವಲ್ಪಮಟ್ಟಿಗೆ ಅಕ್ಷರಸ್ಥನಾಗಿದ್ದ ಆತ ತನ್ನ ಸಮವಯಸ್ಕರಂತೆ ನಗರಕ್ಕೆ ಕೆಲಸಕ್ಕೆಂದು ವಲಸೆ ಹೋಗದೆ ಹಳ್ಳಿಯಲ್ಲೇ ನೆಲೆಸಿದ್ದ. ಹಾಗೆಂದ ಮಾತ್ರಕ್ಕೆ ಅತ ಹಳ್ಳಿಗಮಾರನು ಆಗಿರಲಿಲ್ಲ. ಪೋರ್ಟ್‌ ಹಾರ್ಕೋಟ್‌ ನಲ್ಲಿ ಎರಡು ವರ್ಷಗಳ ಸೈಕಲ್‌ ರಿಪೇರಿಯ ತರಭೇತಿಯ ನಂತರ ಹಳ್ಳಿಯ ಜನರಿಗೆ ಮಾರ್ಗದರ್ಶನ ಮಾಡಿ ನೆರವಾಗಲೆಂದು ಅತ ಹಿಂದಿರುಗಿದ್ದ. ಹಳ್ಳಿಯ ಜನರು ಮಾರ್ಕಸ್‌ ನ ಬಗ್ಗೆ ಯಾವ ಭಾವನೆಯನ್ನು ಹೊಂದಿದ್ದರು ಎಂಬುದು ರೂಫ್ ನಿಗೆ ಅರ್ಥವಾಗಿತ್ತು.
ರಾಜಕಾರಣಕ್ಕೆ ಬಂದು ಮಂತ್ರಿಯಾಗುವ ಮುನ್ನ ಮಾರ್ಕಸ್‌ ಮಿಷನ್‌ ಸ್ಕೂಲ್‌ನಲ್ಲಿ ಶಿಕ್ಷಕನಾಗಿದ್ದ. ಮಾರ್ಕಸ್‌ ಅಷ್ಠೇನೂ ಯಶಸ್ವೀ ಮನುಷ್ಯನಾಗಿರಲಿಲ್ಲ. ಮಹಿಳಾ ಸಹೋದ್ಯೋಗಿಯು ನೀಡಿದ ದೂರಿನಿಂದಾಗಿ ಕೆಲಸ ಕಳೆದುಕೊಳ್ಳುವ ಹಂತದಲ್ಲಿದ್ದ ಮಾರ್ಕಸ್‌ ನಿಗೆ ರಾಜಕಾರಣ ದೊಡ್ಡ ವರದಾನವಾಯಿತು. ಈಗ ಆತ ಗಣ್ಯರಲ್ಲಿ ಅತಿಗಣ್ಯನಾಗಿದ್ದಾನೆ. ಎರಡೆರಡು ಕಾರುಗಳನ್ನೂ ಹೊಂದಿದ್ದಾನೆ ಮತ್ತು ಹಳ್ಳಿಯಲ್ಲಿ ದೊಡ್ಡದಾದ ಬಂಗಲೆಯನ್ನು ಕಟ್ಟಿಸಿದ್ದಾನೆ. ಗೌರವ ಡಾಕ್ಟರೇಟ್‌ ಕೂಡಾ ಗಳಿಸಿದ್ದಾನೆ.
ನಗರದಲ್ಲಿನ ಎಲ್ಲ ಅನುಕೂಲವನ್ನೂ ಬಿಟ್ಟು ಆಗಾಗ ಹಳ್ಳಿಗೆ ಬರುವಷ್ಟು ಉದಾರಹೃದಯಿ ಅವನು ತನ್ನ ಹೊಸ ಮನೆಗೆ ಉಮೋಫಿಯಾ ಮ್ಯಾನ್ಸನ್ಸ್‌ ಎಂದು ಹೆಸರಿಸಿದ ಮಾರ್ಕಸ್‌ ಗೃಹಪ್ರವೇಶದ ದಿನ ಐದು ಕೋಣಗಳನ್ನು ಲೆಕ್ಕವಿಲ್ಲದಷ್ಟು ಕುರಿಗಳನ್ನು ಕಡಿಸಿ ಊರವರಿಗೆಲ್ಲಾ ಔತಣ ಹಾಕಿಸಿದ್ದ. ಊಟ ಮಾಡುವಾಗ ಅವರೆಲ್ಲ ಮಾರ್ಕಸ್‌ ಉದಾರತೆಯನ್ನು ಹಾಡಿಹೊಗಳಿದರಾದರೂ ಅನಂತರ ತಾವು ಓಟಿನ ಚೀಟಿಯ ಪ್ರಾಬಲ್ಯವನ್ನು ಅರಿಯದೆ ಯಾವುದೇ ಪ್ರತಿಫಲ ತೆಗೆದುಕೊಳ್ಳದೇ ಮಾರ್ಕಸ್‌ ನಿಗೆ ಮತನೀಡಿದ್ದು ತಪ್ಪಾಯಿತೆಂದೂ ಮುಂದಿನ ಬಾರಿ ಅ ತಪ್ಪು ಮಾಡಬಾರದೆಂದೂ ತೀರ್ಮಾನಿಸಿದರು,
ಜನರ ಈ ಬದಲಾದ ಭಾವನೆಗಳನ್ನೂ ಕುರಿತು ಚುನಾವಣೆಗೆ ಕೆಲವು ತಿಂಗಳುಗಳ ಮುನ್ನವೆ ಮಾರ್ಕಸ್‌ ನಿಗೆ ಅವನ ಚುನಾವಣಾ ಸಹಾಯಕನಾಗಿದ್ದ ರೂಫ್‌ ಸುಳಿವು ನೀಡಿದ್ದ. ಮಾರ್ಕಸ್‌ ತನ್ನ ಐದು ತಿಂಗಳ ಸಂಬಳವನ್ನು ಮುಂಗಡವಾಗಿ ಪಡೆದು ಅದನ್ನು ಚಿಲ್ಲರೆ ಮಾಡಿಸಿ ಸೆಣಬಿನ ಚೀಲಗಳಲ್ಲಿ ತುಂಬಿಸಿ ತನ್ನ ಬೆಂಬಲಿಗರ ವಶಕ್ಕೆ ಕೊಟ್ಟಿದ್ದ. ಬೆಳಗಿನ ವೇಳೆ ಆತ ಜನರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದ. ರಾತ್ರಿ ವೇಳೆಯಲ್ಲಿ ಅವನ ಬೆಂಬಲಿಗರು ಪಿಸುಗುಟ್ಟುವ ಪ್ರಚಾರಸಭೆಗಳನ್ನು ನಡೆಸಿ ಹಣಹಂಚಿ ಮತಯಾಚನೆ ಮಾಡುತ್ತಿದ್ದರು. ರೂಫ್‌ ಮಾರ್ಕಸ್‌ ನ ಹಿಂಬಾಲಕರ ಮುಖ್ಯಸ್ಥನಾಗಿದ್ದ
ಒಗ್ಗುಫಿ ಎಜೆನ್ಸಾ ಎಂಬ ಬುಡಕಟ್ಟು ನಾಯಕನೊಬ್ಬನ ಮನೆಯಲ್ಲಿ ರೂಫ್‌ ಇಂಥದೊಂದು ಪಿಸುಗುಟ್ಟುವ ಪ್ರಚಾರ ಸಭೆಯನ್ನು ನಡೆಸಿದ. ಐದು ಮಂದಿ ಹಿರಿಯರು ಆ ಸಭೆಯಲ್ಲಿ ಸೇರಿದ್ದರು. ತಮ್ಮ ಊರಿನ ಮಗನಾದ ಮಾರ್ಕಸ್‌ ನನ್ನು ಚುನಾಯಿಸುವ ಅವಕಾಶ ತಮಗೆ ದೊರೆತಿರುವುದು ತಮ್ಮ ಪುಣ್ಯ ಎಂದು ಹೊಗಳಿದ ರೂಫ್‌ ಐದೂ ಮಂದಿಗೆ ತಲಾ ಎರಡೆರಡೂ ಶಿಲ್ಲಿಂಗ್‌ ಗಳನ್ನು ನೀಡಿ ಮಾರ್ಕಸ್ನಿಗೆ ತಮ್ಮ ಕುಟುಂಬದ ಎಲ್ಲರ ಮತಗಳನ್ನೂ ಹಾಕಿಸುವಂತೆ ಅವರಿಗೆ ಮನವಿ ಮಾಡಿದ. ಕೇವಲ ಎರಡು ಶಿಲ್ಲಿಂಗ್‌ ಗಳಿಗಾಗಿ ತಮ್ಮ ಮತಗಳನ್ನು ಮಾರಿಕೊಳ್ಳಲು ಸಾಧ್ಯವಿಲ್ಲ ಎಂದು ಅವರೆಲ್ಲ ಪ್ರತಿಭಟಿಸಿದಾಗ ಮತ್ತೆ ಎರಡೆರಡು ಶಿಲ್ಲಿಂಗ್‌ ಗಳನ್ನು ಆತ ನೀಡಬೇಕಾಯಿತು. ಹಿಂದೆ ತಾವು ನೀಡಿದ ಮತದಿಂದ ಮಾರ್ಕಸ್‌ ಬೇಕಾದಷ್ಟು ಹಣ ಸಂಪಾದಿಸಿದ್ದಾನೆ, ಅದರಲ್ಲಿ ಸ್ವಲ್ಪ ಭಾಗವನ್ನು ನಮಗೂ ಕೊಡಲಿ ಎನ್ನುವುದು ಅವರೆಲ್ಲರ ವಾದವಾಗಿತ್ತು.
ರೂಫ್‌ ನೂ ತನಗೆ ಬೇಕಾದ ಅನುಕೂಲಗಳನ್ನು ಮಾರ್ಕಸ್ ನಿಂದ ಪಡೆದುಕೊಂಡಿದ್ದರಿಂದ ಹೆಚ್ಚಿಗೆ ಹಣ ನೀಡುತ್ತಾ ಆತ ವಿರೋಧಿಗಳಿಗೆ ಬೇಕಾದರೂ ನಿಮ್ಮ ಮತ ಹಾಕಿಕೊಳ್ಳಿ ಎಂದು ಅಸಹನೆಯಿಂದ ನುಡಿದ. ಆದರೆ ಮುಂದೊಂದು ದಿನ ತಾನೆ ಆ ಕೆಲಸ ಮಾಡಬೇಕಾಗಿ ಬರಬಹುದೆಂದು ಆತ ಕಲ್ಪಿಸಿಕೊಂಡಿರಲಿಲ್ಲ. ಅದು ನಡೆದದ್ದು ಹೀಗೆ:
ಮಡೂಕ ಎಂಬ ನಾಯಕ ಆರಂಭಿಸಿದ್ದ POPಪಕ್ಷ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಗೆದ್ದು ಅಧಿಕಾರಕ್ಕೆ ಬರುವ ಸ್ಥಿತಿಯಲ್ಲೇನೋ ಇರಲಿಲ್ಲ. ಆದರೆ ತಾವು PAP ಪಕ್ಷವನ್ನು ವಿರೋಧಿಸುತ್ತೇನೆ. ಎಂಬುದನ್ನು ತೋರ್ಪಡಿಸಲೆಂದೇ ಆ ಪಕ್ಷವೂ ಸಾಕಷ್ಟೂ ಹಣವನ್ನು ಖರ್ಚು ಮಾಡುತ್ತಿತ್ತು.
ಒಂದು ದಿನ ಸಂಜೆ POP ಪಕ್ಷದ ಪ್ರಚಾರ ವಿಭಾಗದ ಮುಖ್ಯಸ್ಥ ರೂಫ್ ನನ್ನು ಕಾಣಲೆಂದು ಬಂದ. ರೂಫ್‌ ನ ಮುಂದೆ ಐದು ಪೌಂಡ್‌ ಹಣವನ್ನು ಇಟ್ಟು ನಿಮ್ಮ ಮತವನ್ನು POP ಪಕ್ಷಕ್ಕೆ ಹಾಕಿ ಎಂದು ಬೇಡಿದ, ಮೊದಲಿಗೆ ತಾನು ಮಾರ್ಕಸ್‌ ನ ಪಕ್ಷದವನೆಂದು ರೂಫ್‌ ತಿರಸ್ಕರಿಸಿದನಾದರೂ ಐದು ಪೌಂಡ್‌ನ ಗರಿಗರಿ ನೋಟಿನ ಆಸೆ ಆತನನ್ನು ಒಪ್ಪುವಂತೆ ಮಾಡಿತು. ಹಣ ತೆಗೆದುಕೊಂಡು ಮತ ಹಾಕದಿದ್ದರೆ “ಐಯಿ” ಎಂಬ ಶಕ್ತಿ ನಿನ್ನನ್ನು ಗಮನಿಸಿ ಕೊಳ್ಳುತ್ತದೆ, ಎಂದು ಹೆದರಿಸಿ ಮುಖ್ಯಸ್ಥ ಹೊರಟು ಹೋದ.
ಚುನಾವಣೆಯ ದಿನ ಬಂದಿತು. ಮಾರ್ಕಸ್‌ ಮತದಾರರ ಹಾಡು, ನೃತ್ಯಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿದ್ದ. ಒಂದೇ ಒಂದು ಮತವೂ ತನ್ನ ವಿರೋಧಿಗೆ ಹೋಗಬಾರದೆಂದು ಆತ ಎಲ್ಲ ಎಚ್ಚರಿಕೆಯನ್ನೂ ವಹಿಸಿದ್ದ. ರೂಫ್‌ ಮತಗಟ್ಟೆಗೆ ಹೋದಾಗ ಅವನ ಮನಸ್ಸು ಹೊಯ್ದಾಡುತ್ತಿತ್ತು. ಇದುವರೆಗೂ ತನಗೆ ಸಹಾಯ ಮಾಡಿದ ಮಾರ್ಕಸ್ ನಿಗೆ ಮತ ಹಾಕುವುದೋ ಅಥವಾ ಐದು ಪೌಂಡ್‌ ನೀಡಿರುವ ಮಡೂಕನಿಗೋ ಎಂದು ಅವನಿಗೆ ದ್ವಂದ್ವ ಹುಟ್ಟಿತ್ತು. “ಐಯಿ” ಯ ಭಯವೂ ಕಾಡುತ್ತಿತ್ತು. ಕಡೆಗೆ ಆತ ಮತಪತ್ರವನ್ನು ಎರಡು ತುಂಡಾಗಿ ಹರಿದು ಒಂದನ್ನು ಮಾರ್ಕಸ್‌ ನ ಪೆಟ್ಟಿಗೆಗೂ ಮತ್ತೊಂದನ್ನು ಮಡೂಕನ ಪೆಟ್ಟಿಗೆಗೂ ಹಾಕಿ ಸಮಾಧಾನದಿಂದ ಹೊರಬಂದ.

The Voter Questions And Answers II Puc

ಆತ್ಮೀಯ ವಿಧ್ಯಾರ್ಥಿಗಳೇ, 12ನೇ ತರಗತಿ The Voter ಪಾಠದ PDFನ ಎಲ್ಲಾ ಪ್ರಶ್ನೆ ಉತ್ತರಗಳನ್ನು ಇಲ್ಲಿ ನೀಡಿದ್ದೇವೆ, ಇದರ ಮೂಲಕ ನೀವು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ವಿಧ್ಯಾರ್ಥಿಗಳಿಗೆ ಸಹಾಯವಾಗುತ್ತದೆ, 12th Class The Voter ಪಾಠದ ನೋಟ್ಸ್‌ಲ್ಲಿರುವ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು 12 Std The Voter ಪಾಠದ PDF ಡೌನ್ಲೋಡ್‌ ಲಿಂಕನ್ನು ನೀಡಿದ್ದೇವೆ. ಪ್ರೀತಿಯ ವಿಧ್ಯಾರ್ಥಿಗಳೇ, ನೀವು ನಿಮ್ಮ ಜ್ಞಾನ ಮತ್ತು ಕೌಶಲ್ಯದ ಜೊತೆಗೆ ನಾವು ನೀಡಿರುವಂತಹ ನೋಟ್ಸ್ ನ ಸಹಾಯದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಿದೆ.

12th Standard Chapter 12 Chapter Question Bank With Answer Mcq Pdf

ಈ Pdf ಅನ್ನು ನೀವು ಉಚಿತವಾಗಿ ಹಾಗೂ ಸುಲಭವಾಗಿ ನೋಡಿ ಡೌನ್ಲೋಡ್‌ ಕೂಡ ಮಾಡಬಹದು. ನಿಮಗಾಗಿ ನಾವು ಈ ನೋಟ್ಸ್‌ ಅನ್ನು ನೀಡಿದ್ದೇವೆ. Read Online Button ಮೇಲೆ ಕ್ಲಿಕ್‌ ಮಾಡಿದಾಗ ಈ Pdfಅನ್ನು ವಿಕ್ಷಿಸಬಹುದು ಹಾಗೂ Download Now ಮೇಲೆ ಕ್ಲಿಕ್‌ ಮಾಡಿ ನೀವು ಈ ನೋಟ್ಸ್‌ ಅನ್ನು Download ಕೂಡ ಮಾಡಬಹುದು.

English The Voter Class 12th Std story Summary Pdf

ಇಲ್ಲಿ ನೀವು 2nd Puc 12th Chapter ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಿಸಬಹುದು.

Read Online

ಇಲ್ಲಿ ನೀವು 12th Standard The Voter ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

2nd puc the voter summary

FAQ:

Where did Roof work as a bicycle repairer’s apprentice?

Port Harcourt.

Who had formed the Progressive Organisation party?

The Progressive Organisation Party had been formed by the tribes down the coast

ಇತರೆ ವಿಷಯ :

All Subjects Notes

Kannada Notes

2nd Puc All Subjects Notes Pdf

English Notes

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.