8ನೇ ತರಗತಿ ಜೀವನ ದರ್ಶನ ಕನ್ನಡ ನೋಟ್ಸ್ | 8th Standard Jeevana Darshana Kannada Poem Notes

8ನೇ ತರಗತಿ ಜೀವನ ದರ್ಶನ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 8th Standard Jeevana Darshana Kannada Notes Question Answer Pdf Download

ತರಗತಿ : 8ನೇ ತರಗತಿ

ಪದ್ಯದ ಹೆಸರು : ಜೀವನ ದರ್ಶನ

ಕೃತಿಕಾರರ ಹೆಸರು : ಶ್ರೀ ಪಾದರಾಜ, ಗೋಪಾಲದಾಸರು, ವಿಜಯದಾಸರು

ಕೃತಿಕಾರರ ಪರಿಚಯ :

* ಶ್ರೀ ಪಾದರಾಜ :

ಇವರ ಕಾಲ ಕ್ರಿ.ಶ. ಸುಮಾರು ೧೪೦೪ ರಿಂದ ೧೫೦೨ , ಪೂರ್ವಾದ ಹೆಸರು ಲಕ್ಷ್ಮೀನಾರಾಯಣ , ದೈತತತ್ವದ ಪ್ರತಿಪಾದಕರು ಹಾಗೂ ಆದ್ಯ ಕೀರ್ತನಕಾರರು , ಚನ್ನಪಟ್ಟಣ ತಾಲೂಕಿನ ಅಟ್ಟೂರು ಗ್ರಾಮದಲ್ಲಿ ಹುಟ್ಟಿದರು . ಇವರ ತಂದೆ ಶೇಷಗಿರಿಯಪ್ಪ ತಾಯಿ ಗಿರಿಯಮ್ಮ ಇವರ ಅಂಕಿತ ಶ್ರೀರಂಗವಿಠಲ , ಇವರ ಶಿಷ್ಯರಲ್ಲಿ ಪ್ರಮುಖರು ಶ್ರೀವ್ಯಾಸರಾಯರು , ಶ್ರೀಪಾದರಾಜ ಅವರ ೮೨ ಕೀರ್ತನೆಗಳು , ೩ ಸುಳಾದಿಗಳು , ೧೫ ಉಗಾಭೋಗಗಳು , ೧ ದಂಡಕವು ಲಭ್ಯವಾಗಿವೆ .

ಗೋಪಾಲದಾಸರು :

ಇವರ ಕಾಲ ಕ್ರಿ.ಶ. ೧೭೨೧. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮೊಸರುಕಲ್ಲಿನಲ್ಲಿ ಜನಿಸಿದರು . ತಂದೆ ಮುರಾರಿ , ತಾಯಿ ವೆಂಕಮ್ಮ , ಗುರುಗಳು ವಿಜಯದಾಸರು ದಾಸರ ಮೊದಲ ಹೆಸರು ಬಾಗಣ್ಣ , ಇವರ ಅಂಕಿತನಾಮ ಗೋಪಾಲವಿಠಲ , ಇವರ ೯೬ ಕೀರ್ತನೆಗಳು , 70ಸುಳಾದಿಗಳು, ೨೧ ಉಗಾಭೋಗಗಳು ಉಪಲಬ್ದವಾಗಿವೆ.

ವಿಜಯದಾಸರು :

ಇವರ ಕಾಲ ಕ್ರಿ.ಶ , ಸುಮಾರು ( ೧೬೮೨ ೧೭೫೫ ) ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಬೇಕನಪರಿವಿಯಲ್ಲಿ ಜನಿಸಿದರು . ಮೊದಲಿನ ಹೆಸರು ದಾಸಪ್ಪ ತಂದೆ ಶ್ರೀನಿವಾಸ ತಾಯಿ ಕೂಸಮ್ಮ , ಪುರಂದರದಾಸರು ಇವರಿಗೆ ದೀಕ್ಷೆಯಿತ್ತ ಗುರುಗಳು , ಇವರ ಅಂಕಿತನಾಮ ವಿಜಯ ವಿಠಲ , [ ಇಲ್ಲಿರುವ ಚೌಪದಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಬೆಂಗಳೂರು , ಇವರು ಪ್ರಕಟಿಸಿರುವ ‘ ಸಮಗ್ರ ದಾಸ ಸಾಹಿತ್ಯ ‘ ಕೃತಿಯಿಂದ ಯ್ಕೆಮಾಡಿಕೊಳ್ಳಲಾಗಿದೆ . ]

8th Standard Jeevana Darshana Kannada Notes Question Answer

ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ ,

1, ದೇವನು ಯಾವ ಮಂತ್ರಕ್ಕೆ ಒಲಿಯುವನು ?

ಉತ್ತರ : ದೇವನು ಬಕುತಿ ( ಭಕ್ತಿ ) ಎಂಬ ಮಂತ್ರಕ್ಕೆ ಒಲಿಯುವನು .

2. ಸದಾ ಹೃದಯದಲ್ಲಿ ವಾಸಮಾಡುವವನು ಯಾರು ?

ಉತ್ತರ : ಸದಾ ಹೃದಯದಲ್ಲಿ ವಾಸಮಾಡುವವನು ಕಮಲಾಕ್ಷ ಗೋಪಾಲ ವಿಠಲ ( ದೇವರು ) ,

3. ವ್ಯಕ್ತಿಯು ಮುಕ್ತಿ ಪಡೆಯಲು ಏನು ಮಾಡಬೇಕು ?

ಉತ್ತರ : ವ್ಯಕ್ತಿಯು ಮುಕ್ತಿ ಪಡೆಯಲು ಭಕ್ತಿ , ವಿರಕ್ತಿ ಮತ್ತು ಸರ್ವಶಕ್ತಿಗಳನ್ನು ಗಳಿಸಿಕೊಳ್ಳಬೇಕು .

4. ಸುತರಲ್ಲಿ ಎಂಥವ ಗುಣವಿರಬೇಕು ?

ಉತ್ತರ : ಸುತನಲ್ಲಿ ಮತಿವಂತನಾಗಿರುವ ಉತ್ತಮ ಗುಣವಿರಬೇಕು ,

5. ದೇವನು ಯಾರ ಪಾತಕಗಳನ್ನು ಪರಿಹರಿಸುವವನು ?

ಉತ್ತರ : ದೇವನು ತನ್ನನ್ನು ಪ್ರೀತಿಯಿಂದ ಸರಿಸುವವರ ಪಾತಕಗಳನ್ನು ಪರಿಹರಿಸುವವನು ,

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯದಲ್ಲಿ ಉತ್ತರಿಸಿ ,

1. ಮುಕ್ತರಾಗಲು ಏನು ಮಾಡಬೇಕೆಂದು ವಿಜಯದಾಸರು ಹೇಳಿದ್ದಾರೆ ?

ಉತ್ತರ : ಮಾನವನು ಮುಕ್ತನಾಗಲು ಸದಾ ಶ್ರೀಹರಿಯನ್ನು ಪ್ರೀತಿಯಿಂದ ಭಜಿಸಬೇಕು. ಸದಾ ನಮ್ಮಹೃದಯದಲ್ಲಿ ಶ್ರೀಹರಿಯು ವಾಸಿಸುವಂತೆ ಮನಸ್ಸನ್ನು ಶುದ್ಧಯಾಗಿ ಇಟ್ಟುಕೊಂಡಿರಬೇಕು. ಜ್ಞಾನವೆಂಬನವರತ್ನದ ಮಂಟಪದ ಮಧ್ಯದಲ್ಲಿ ಗಾನಲೋಲನಾದ ಶ್ರೀಹರಿಯನ್ನು ಕುಳ್ಳಿರಿಸಿ ಧ್ಯಾನಮಾಡುತ್ತಾ ದೇವನನ್ನುಭಜಿಸಬೇಕು. ಭಕ್ತಿರಸವೆಂಬ ಮುತ್ತು ಮಾಣಿಕ್ಯದ ಹರಿವಾಣದಿಂದ ಮುತ್ತಿನ ಆರತಿಯನ್ನು ಎತ್ತುವ ಮೂಲಕನನ್ನನ್ನು ಮುಕ್ತನನ್ನಾಗಿ ಮಾಡು ಎಂದು ಪ್ರಾರ್ಥಿಸಬೇಕು ಎಂದು ವಿಜಯದಾಸರು ಹೇಳಿದ್ದಾರೆ.

2. ಮುಕ್ತಿ ಪಡೆಯಲು ಹೇಗೆ ನಡೆದುಕೊಳ್ಳಬೇಕು ?

ಉತ್ತರ : ಮುಕ್ತಿಯನ್ನು ಪಡೆಯಲು : ಭಕ್ತಿ , ವಿರಕ್ತಿ ಹಾಗೂ ಸರ್ವ ಶಕ್ತಿಗಳನ್ನು ಗಳಿಸಿಕೊಳ್ಳಬೇಕು . ಉತ್ತಮ ಸತಿ , ಗುಣವಂತನಾದ ಮಗನಿದ್ದು ಅಭಿಪ್ರಾಯದಲ್ಲಿ ಒಮ್ಮತವಿರಬೇಕು . ಶಾಂತನಾಗಿದ್ದು ಜಪ , ತಪ , ಉಪವಾಸ ವ್ರತಗಳನ್ನು ಕೈಗೊಳ್ಳಬೇಕು . ಅಲ್ಲದೆ ಉತ್ತಮರ ಸಹವಾಸ ಮಾಡಬೇಕು . ದೇವರನ್ನು ಸದಾ ನೆನೆಯಬೇಕು .

3. ದೇವನು ತನ್ನ ಭಕ್ತರನ್ನು ಹೇಗೆ ರಕ್ಷಿಸಿದರೆಂದು ಗೋಪಾಲದಾಸರು ಹೇಳಿದ್ದಾರೆ ?

ಉತ್ತರ : ಮೊಸಳೆಗಳಿಂದ ಭಾದಿತರಾದ ತನ್ನ ಭಕ್ತರನ್ನು ಕಾಪಾಡಿದನು . ಅಜಮಿಳ ಎಂಬ ಪಾಪಿ ಕೊನೆಗಾಲದಲ್ಲಿ ನಾರಾಯಣ ಎಂದು ಕೂಗಿದಾಗ ಅವನ ಪಾಪಗಳನ್ನೆಲ್ಲ ಪರಿಹರಿಸಿದನು .

ಇ ] ಕೊಟ್ಟಿರುವ ಪ್ರಶ್ನೆಗಳಿಗೆ ಐದು ಆರು ವಾಕ್ಯದಲ್ಲಿ ಉತ್ತರಿಸಿ ,

1. ಗೋಪಾಲದಾಸರು ದೇವರು ಭಕ್ತಪ್ರಿಯ ಎಂಬುದನ್ನು ಹೇಗೆ ವಿವರಿಸಿದ್ದಾರೆ .

ಉತ್ತರ : ಗೋಪಾಲದಾಸರು ತಮ್ಮ ಕೀರ್ತನೆಯಲ್ಲಿ ದೇವರು ಭಕ್ತ ಪರಾಧೀನ , ಅನಾಥರಕ್ಷಕ , ಭಕ್ತರು ಅಚಲವಾದ ದೃಢಭಕ್ತಿಯಿಂದ ಮೊರೆಯಿಟ್ಟರೆ ಅವರ ಸಂಕಷ್ಟಗಳನ್ನು ಪರಿಹರಿಸುತ್ತಾನೆ . ಪಾತಕಗಳನ್ನು ಮಾಡಿದರು ಸಹ ಪ್ರೀತಿಯಿಂದ ಕರೆದರೆ ಬಂದು ಸಂಕಷ್ಟಗಳನ್ನು ನಿವಾರಿಸುವ ಗುಣ ಈ ಪರಮಾತ್ಮನದು . ಆದುದರಿಂದ ಆ ಭಗವಂತನ್ನು ಹೃದಯಕಮಲದಲ್ಲಿಟ್ಟು ಆರಾಧಿಸಬೇಕು . ನಂಬಿಕೆಟ್ಟವರಿಲ್ಲ , ನಂಬಿಕೆ , ಪ್ರೀತಿ , ದೃಢಸಂಕಲ್ಪಗಳು ಸದಾ ಅಚಲವಾಗಿರಬೇಕು ಎಂದು ಹೇಳಿದ್ದಾರೆ . ನಮ್ಮ ಈ ದೇವರು ಯಾರು ಪ್ರೀತಿಯಿಂದ ತನ್ನನ್ನು ಸ್ಮರಿಸುವರೋ ಅವರ ಪಾಪಗಳನ್ನು ಪರಿಹರಿಸಿ ಕಾಪಾಡುತ್ತಾನೆ . ಮೊಸಳೆಯನ್ನು ಕೊಂದು ಅದರಿಂದ ಭಾದಿತರಾದ ತನ್ನ ಭಕ್ತರನ್ನು ಕಾಪಾಡಿದನು . ಅಜಮಿಳ ಎಂಬ ಪಾಪಿ ಕೊನೆಗಾಲದಲ್ಲಿ ‘ ನಾರಾಯಣ ‘ ಎಂದು ಕೂಗಿದಾಗ ಅವನ ಪಾಪಗಳನ್ನೆಲ್ಲ ಪರಿಹರಿಸಿದನು . ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ಗೋವುಗಳನ್ನೂ ಯದುಕುಲವನ್ನೂ ಸಂರಕ್ಷಿಸಿದನು . ಮೂರು ಲೋಕಗಳಲ್ಲೂ ಮೆರೆಯುತ್ತಾ ತನ್ನನ್ನು ಜಪಿಸುವ ( ಭಜಿಸುವ ) ಭಕ್ತರನ್ನು ಬಿಡದೆ ಕಾಪಾಡುವವನು ಎಂದು ಗೋಪಾಲದಾಸರು ದೇವರನ್ನು ಕುರಿತು ವರ್ಣಿಸಿದ್ದಾರೆ .

2. ಶ್ರೀಪಾದರು ನೀಡಿರುವ ಜೀವನ ಸಂದೇಶ ತಿಳಿಸಿ .

ಉತ್ತರ : ಶ್ರೀಪಾದರಾಜರು ತಮ್ಮ ಕೀರ್ತನೆಯಲ್ಲಿ ಮುಕ್ತಿಯನ್ನು ಬಯಸುವವರಿಗೆ ವಾತಾವರಣ ಹೇಗೆ ಅನುಕೂಲವಾಗಿರಬೇಕು ಎಂದು ತಿಳಿಸುವುದರ ಜೊತೆಗೆ ಲೋಕನೀತಿ ಮತ್ತು ನೀತಿಬೋಧನೆಗಳನ್ನು ತಿಳಿಸಿದ್ದಾರೆ . ಮುಕ್ತಿಯನ್ನು ಬಯಸುವವನಿಗೆ ಭಕ್ತಿ , ವಿರಕ್ತಿ ಮತ್ತು ಭೌತಿಕ , ಬೌದ್ಧಿಕ , ಆಧ್ಯಾತ್ಮಿಕ ಮುಂತಾದ ಸರ್ವಶಕ್ತಿಗಳೂ ಬೇಕು . ಅರ್ಥಮಾಡಿಕೊಂಡು ನಡೆಯುವ , ಒಮ್ಮತದ ಅಭಿಪ್ರಾಯವಿರುವ ಅನುಕೂಲವಾದ ಹೆಂಡತಿ , ಬುದ್ಧಿವಂತನೂ ಗುಣವಂತನೂ ಆದ ಮಗ ಇರಬೇಕು . ನಿಷ್ಠೆಯಿಂದ ಕೂಡಿದ ಜಪ – ತಪ – ನೇಮಗಳನ್ನು ಮಾಡಬೇಕು . ಉಪವಾಸ ವ್ರತ ಮಾಡುವ ಮತ್ತು ನೆಮ್ಮದಿ – ಸಮಾಧಾನಗಳನ್ನು ಹೊಂದಿರಬೇಕು . ಸಜ್ಜನರ ಸಂಗ ಮಾಡಬೇಕು , ದುರ್ಜನರ ಸಂಗವನ್ನು ಬಿಡಬೇಕು , ದೇವರನ್ನು ಭಕ್ತಿ – ನಂಬಿಕೆಗಳಿಂದ ನೆನೆಯಬೇಕು ಎಂದು ಜೀವನ ಸಂದೇಶ ನೀಡಿದ್ದಾರೆ .

ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,

1. “ ನಿನ್ನನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ ”

ಉತ್ತರ : ಆಯ್ಕೆ . ಈ ವಾಕ್ಯವನ್ನು ‘ ಜೀವನ ದರ್ಶನ ಎಂಬ ಪದ್ಯಭಾಗದಲ್ಲಿರುವ ವಿಜಯದಾಸರ ಕೀರ್ತನೆಯಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ವಿಜಯದಾಸರು , ದೇವರನ್ನು ಕುರಿತು ತಮಗೆ ಮುಕ್ತಿ ದಯಪಾಲಿಸು ಎಂದು ಬೇಡುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ . ಶ್ರೀಹರಿಯೇ , ನಾನು ನಿನ್ನ ನಾಮವನ್ನು ಬಿಡುವವನಲ್ಲ . ಆದ್ದರಿಂದ ನನ್ನನ್ನು ನೀನು ಬಿಡುವುದು ಸರಿಯಲ್ಲ . ಘನ ಮಹಿಮಾನ್ವಿತನಾದ ವಿಜಯ ವಿಠಲನೇ ಈ ನಿನ್ನ ಭಕ್ತರ ಮೊರೆಯನ್ನು ಕೇಳು , ಎಂದಿದ್ದಾರೆ .

ಸ್ವಾರಸ್ಯ : ದೇವರು ತನ್ನ ನಾಮಸ್ಮರಣೆ ಮಾಡುವವರನ್ನು ಎಂದಿಗೂ ಕೈಬಿಡುವುದಿಲ್ಲ ಎಂಬುದನ್ನು ಇಲ್ಲಿ ಸ್ವಾರಸ್ಯಪೂರ್ಣವಾಗಿ ಹೇಳಲಾಗಿದೆ .

2. “ ಸುಸಂಗ ಹಿಡಿಯಲೆಬೇಕು ದುಸ್ಸಂಗ ಬಿಡಬೇಕು ”

ಆಯ್ಕೆ : ಈ ವಾಕ್ಯವನ್ನು ‘ ಜೀವನ ದರ್ಶನ ‘ ಎಂಬ ಪದ್ಯಭಾಗದಲ್ಲಿರುವ ಶ್ರೀಪಾದರಾಜರ ಕೀರ್ತನೆಯಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಶ್ರೀಪಾದರಾಜರು , ನಾವು ಎಂತಹವರ ಸಂಗ ಮಾಡಬೇಕು ಎಂದು ಹೇಳುವ ಸಂದರ್ಭದಲ್ಲಿ ಸುಸಂಗ ಅಂದರೆ ಸಜ್ಜನರ ಸಂಗಮಾಡಬೇಕೆಂದು ದುಸ್ಸಂಗ ( ದುರ್ಜನರ ಸಂಗ ) ಬಿಡಬೇಕೆಂದೂ ಹೇಳಿದ್ದಾರೆ .

ಸ್ವಾರಸ್ಯ : ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಬೇಕಾದರೆ ಒಳ್ಳೆಯವರ ಸಂಗ ಮಾಡಬೇಕೆಂದನ್ನು ಸ್ವಾರಸ್ಯಪೂರ್ಣವಾಗಿ ಹೇಳಲಾಗಿದೆ .

3 , “ ಅನಾದಿ ಮೊರೆಯ ಕೇಳಿ ಆ ನಿಮಿಷದೊಳು ಒದಗಿದಾತ ”

ಆಯ್ಕೆ : ಈ ವಾಕ್ಯವನ್ನು ‘ ಜೀವನ ದರ್ಶನ ‘ ಎಂಬ ಪದ್ಯಭಾಗದಲ್ಲಿರುವ ಗೋಪಾಲದಾಸರ ಕೀರ್ತನೆಯಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಗೋಪಾಲದಾಸರು , ದೇವರು ಭಕ್ತರನ್ನು ಕಾಪಾಡಿದ ಬಗ್ಗೆ ತಿಳಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ . ದೇವರು ದಿಕ್ಕಿಲ್ಲದ ಅನಾಥರ ಬಂಧುವಾಗಿದ್ದಾನೆ . ಕಷ್ಟದಲ್ಲಿದ್ದ ಭಕ್ತರ ಮೊರೆಯನ್ನು ಕೇಳಿದ ಕೂಡಲೆ ಬಂದು ಕಾಪಾಡಿದವನು . ಎಂದು ಹೇಳಿದ್ದಾರೆ

ಸ್ವಾರಸ್ಯ : ದೇವರು ಭಕ್ತಪರಾಧೀನ ಎಂಬುದನ್ನು ಇಲ್ಲಿ ಸ್ವಾರಸ್ಯಪೂರ್ಣವಾಗಿ ಹೇಳಲಾಗಿದೆ .

ಉ. ಮೊದಲೆರಡು ಪದಗಳಿಗಿರುವ ಸಂಬಂಧದಂತೆ   ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ.

೧. ಶ್ರೀಪಾದರು : ಅಬ್ಬೂರು : : ಗೋಪಾಲದಾಸರು : _______

೨. ಜ್ಞಾನವೆಂಬೋ : ನವರತ್ನ : : ಭಕ್ತಿರಸವೆಂಬೋ : ________

೩. ಹೃದಯ : ಎದೆ : : ಜ್ಞಾನ : __________

೪. ಗೋಪಾಲದಾಸರು : ಗೋಪಾಲವಿಠಲ : : ವಿಜಯದಾಸರು : ________

೫. ಮೋದ : ಆನಂದ : : ರಮಣ : _____________

ಸರಿ ಉತ್ತರಗಳು.

೧. ಮೊಸರುಕಲ್ಲು ೨. ಮುತ್ತುಮಾಣಿಕ್ಯ ೩. ಜಾನ೪. ವಿಜಯವಿಠಲ ೫. ಪತಿ

8th Standard Jeevana Darshana Kannada Notes Question Answer Pdf

ಇತರೆ ಪದ್ಯಗಳು :

ಸೋಮೇಶ್ವರ ಶತಕ ಕನ್ನಡ ನೋಟ್ಸ್

ವಚನಾಮೃತ ಕನ್ನಡ ನೋಟ್ಸ್

Leave your vote

34 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh