8ನೇ ತರಗತಿ ಸೋಮೇಶ್ವರ ಶತಕ ಕನ್ನಡ ನೋಟ್ಸ್ ಪ್ರಶ್ನೆ ಉತ್ತರ, 8th Standard Someshwara Shataka Kannada Notes Question Answer Pdf Download
ತರಗತಿ : 8ನೇ ತರಗತಿ
ಪದ್ಯದ ಹೆಸರು : ಸೋಮೇಶ್ವರ ಶತಕ
ಕೃತಿಕಾರರ ಹೆಸರು : ಪುಲಿಗೆರೆ ಸೋಮನಾಥ
Table of Contents
ಕೃತಿಕಾರರ ಪರಿಚಯ :
ಪುಲಿಗೆರೆ ಸೋಮನಾಥ
* ಪುಲಿಗೆರೆ ಸೋಮನಾಥನು ಕ್ರಿ.ಶ.ಸುಮಾರು ೧೨೯೯ ರಲ್ಲಿ ಜೀವಿಸಿದ್ದ ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಮುಲಿಗೆರೆಯವನು
* ಈತನು ಪುಲಿಗೆರೆ ಸೋಮನಾಥನೆಂದೇ ಪ್ರಸಿದ್ಧಿಯಾಗಿದ್ದಾನೆ .
* ಕನ್ನಡ ಹಾಗು ಸಂಸ್ಕೃತ ಭಾಷಾಪಂಡಿತನಾದ ಈತನ ಅಂಕಿತ ಹರಹರಾ ಶ್ರೀ ಚನ್ನಸೋಮೇಶ್ವರಾ ,
* ಈತನು ಕನ್ನಡದಲ್ಲಿ ‘ ರತ್ನಕರಂಡಕ ‘ ಕಾವ್ಯವನ್ನು ಚಂಪೂ ಶೈಲಿಯಲ್ಲಿಯೂ ‘ ಸೋಮೇಶ್ವರ ಶತಕ ‘ ವನ್ನು ವೃತ್ತ ಛಂದಸ್ಸಿನಲ್ಲಿಯೂ ರಚಿಸಿದ್ದಾನೆ . [ ಇಲ್ಲಿರುವ ಚೌಪದಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಸಂಪಾದಿಸಿರುವ ಸೋಮೇಶ್ವರ ಶತಕ ಕೃತಿಯಿಂದ ಆಯ್ಕೆಮಾಡಿ ಕೊಳ್ಳಲಾಗಿದೆ . ]
Someshwara Shataka Kannada Notes Question Answer
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ ,
1. ರಾಜನಾದವನ ಕರ್ತವ್ಯವೇನು ?
ಉತ್ತರ : ಪ್ರಜೆಗಳನ್ನು ಪಾಲಿಸುವುದು ರಾಜನಾದವನ ಕರ್ತವ್ಯವಾಗಿದೆ .
2. ಆಲದ ಮರದ ಬೀಜ ಸಿಡಿದು ಭೂಮಿಗೆ ಬಿದ್ದು ಏನಾಗುತ್ತದೆ ?
ಉತ್ತರ : ಆಲದ ಮರದ ಬೀಜ ಸಿಡಿದು ಭೂಮಿಗೆ ಬಿದ್ದು ಹೆಮ್ಮರವಾಗುತ್ತದೆ .
3. ನಿಜವಾದ ಬಂಧು ಯಾರು ?
ಉತ್ತರ : ಯಾರು ನಮ್ಮ ಹಿತವನ್ನು ಬಯಸುವನೋ ಅವನೇ ನಿಜವಾದ ಬಂಧು .
4. ಧಾರ್ಮಿಕನೆಂದು ಯಾರನ್ನು ಕರೆಯಲಾಗಿದೆ ?
ಉತ್ತರ : ತಂದೆ – ತಾಯಿಯನ್ನು ಸಲಹಲು ಬಲ್ಲವನನ್ನು ಧಾರ್ಮಿಕ ಎಂದು ಕರೆಯಲಾಗಿದೆ .
5. ಮುಲಿಗೆರೆ ಸೋಮನಾಥನ ಅಂಕಿತನಾಮವೇನು ?
ಉತ್ತರ : ಮಲಿಗೆರೆ ಸೋಮನಾಥನ ಅಂಕಿತನಾಮ ‘ ಹರಹರಾ ಶ್ರೀ ಚೆನ್ನಸೋಮೇಶ್ವರಾ
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ
1. ಭಟ ಮತ್ತು ದ್ವಿಜರ ಲಕ್ಷಣಗಳೇನು ?
ಉತ್ತರ : ಧೈರ್ಯವಂತನೇ ನಿಜವಾದ ಭಟ , ಒಳ್ಳೆಯ ಆಚಾರವನ್ನು ಹೊಂದಿರುವವನೇ ದ್ವಿಜ ( ಬ್ರಾಹ್ಮಣ ) ಎಂದು ಸೋಮನಾಥ ಹೇಳಿದ್ದಾನೆ .
2. ಸುವ್ರತಿ ಹಾಗೂ ಸುತನ ಬಗೆಗೆ ಕವಿ ಏನು ಹೇಳಿದ್ದಾನೆ ?
ಉತ್ತರ : ವೇದಗಳನ್ನು ಬಿಡದೆ ಪಠಿಸುತ್ತಾ ಪಾಲನೆ ಮಾಡುವವನೇ ಸುವತಿ , ಒಳ್ಳೆಯ ಮಗನೇ ಸದ್ಧತಿಯನ್ನು ತಂದುಕೊಡುತ್ತಾನೆ . ಎಂದು ಸೋಮನಾಥ ಹೇಳಿದ್ದಾನೆ .
ಇ ] ಕೊಟ್ಟಿರುವ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ ,
1. ಬಡವ ಬಲ್ಲಿದನಾಗುವನು ಎಂಬುದಕ್ಕೆ ಕವಿ ನೀಡಿರುವ ನಿದರ್ಶನಗಳಾವುವು ?
ಉತ್ತರ : ಚಂದ್ರನು ಒಂದೇ ಸಮನಾಗಿರುವುದಿಲ್ಲ . ಕಳೆಗುಂದುತ್ತಾನೆ . ಮತ್ತೆ ಹೆಚ್ಚಾಗುವುದಿಲ್ಲವೇ ? ಆಲದ ಮರದ ಕೆಲವು ಬೀಜಗಳಾದರೂ ಸಿಡಿದು , ಭೂಮಿಯಲ್ಲಿ ಚಿಗುರಿ ಹೆಮ್ಮರವಾಗುವುದಿಲ್ಲವೇ ? ಈ ಲೋಕದಲ್ಲಿ ಎಳೆಗರು ಬೆಳೆದು ಎತ್ತಾಗುವುದಿಲ್ಲವೇ ? ಮಿಡಿ ಹಣ್ಣಾಗುವುದಿಲ್ಲವೇ ? ದೇವರ ಕೃಪೆಯೊಂದಿದ್ದರೆ ಕಾಲಾಂತರದಲ್ಲಿ ಬಡವನ್ನು ಸಿರಿವಂತನಾಗುವುದಿಲ್ಲವೇ ? ಎಂಬ ನಿದರ್ಶನಗಳನ್ನು ಕವಿ ನೀಡಿದ್ದಾನೆ .
2. ಶ್ರೇಷ್ಠ ಮಂತ್ರಿಯಲ್ಲಿರಬೇಕಾದ ಲಕ್ಷಣಗಳೇನು ?
ಉತ್ತರ : ಅತಿ ಗಂಭೀರನೂ ಉದಾರನೂ ಧೀರನೂ ಮಹಾ ಸಂಪನ್ನನೂ , ಸತ್ಯಾತ್ಮನೂ ರೂಢಿಯಲ್ಲಿರುವ ಹಲವು ಲಿಪಿ ಭಾಷೆಗಳನ್ನು ಬಲ್ಲವನೂ ಲಂಚಕ್ಕೆ ಕೈ ಚಾಚದವನೂ ವ್ರತವನ್ನು ಪಾಲಿಸುವವನೂ ಧರ್ಮಪರನೂ ವಿಚಾರವಂತನೂ ಸಾಮ , ದಾನ , ಭೇದ , ದಂಡ ಎಂಬ ಚತುರೋಪಾಯಗಳನ್ನು ಬಲ್ಲವನೂ ಒಡೆಯನ ಕಾರ್ಯದಲ್ಲಿ ನಿಷ್ಠೆ ಇರುವವನೂ ಆಗಿರುವವನೇ ನಿಜವಾಗಿ ಒಳ್ಳೆಯ ಮಂತ್ರಿ ಎಂದು ಸೋಮನಾಥ ಹೇಳಿದ್ದಾನೆ .
ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ,
1. “ ಅತಿ ಗಂಭೀರನುದಾರ ಧೀರನು ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಪುಲಿಗೆರೆ ಸೋಮನಾಥನು ಬರೆದಿರುವ ‘ ಸೋಮೇಶ್ವರ ಶತಕ ‘ ಕೃತಿಯಿಂದ ಆರಿಸಲಾಗಿದೆ ‘ ಸೋಮೇಶ್ವರ ಶತಕ ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಕವಿಯು ಸೋಮನಾಥನು ಒಳ್ಳೆಯ ಮಂತ್ರಿಯಲ್ಲಿರ ಬೇಕಾದ ಗುಣಗಳನ್ನು ತಿಳಿಸುವ ಸಂದರ್ಭದಲ್ಲಿ ಆ ಗಂಭೀರನೂ ಉದಾರನೂ ಧೀರನೂ ಹಲವು ಲಿಪಿ – ಭಾಷೆಗಳನ್ನು ಬಲ್ಲವನೂ ಲಂಚಕ್ಕೆ ಕೈ ಚಾಚದವನೂ ಧರ್ಮಪರನ ವಿಚಾರವಂತನೂ ಚತುರೋಪಾಯಗಳನ್ನು ಬಲ್ಲವನೂ ಒಡೆಯನ ಕಾರ್ಯದಲ್ಲಿ ನಿಷ್ಠೆ ಇರುವವನೂ ಆಗಿರುವವನೇ ನಿಜವಾಗಿ ಒಳ್ಳೆಯ ಮಂತ್ರಿ ‘ ಎಂದು ಹೇಳಿದ್ದಾನೆ .
ಸ್ವಾರಸ್ಯ : ಮಂತ್ರಿಯಾದವನಿಗಿರಬೇಕಾದ ಗುಣಗಳಲ್ಲಿ ಗಂಭೀರತೆ , ಉದಾರತೆ ಮತ್ತು ಧೀರತನ ಅತ್ಯವಶ್ಯಕ ಎಂಬುದನ್ನು ಕವಿ ಇ ಸ್ವಾರಸ್ಯಪೂರ್ಣವಾಗಿ ವರ್ಣಿಸಿದ್ದಾನೆ .
2. “ ಉಡುರಾಜ ಕಳೆಗುಂದಿ ಪರ್ಚದಿಹನೆ ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಪುಲಿಗೆರೆ ಸೋಮನಾಥನು ಬರೆದಿರುವ ‘ ಸೋಮೇಶ್ವರ ಶತಕ ‘ ಕೃತಿಯಿಂದ ಆರಿಸಲಾಗಿದೆ ‘ ಸೋಮೇಶ್ವರ ಶತಕ ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಜೀವನದಲ್ಲಿ ಆಶಾವಾದಿಯಾಗಿರಬೇಕು . ಒಂದಲ್ಲಾ ಒಂದು ದಿನ ಒಳ್ಳೆಯದು ಆಗೇ ಆಗುತ್ತದೆ ಎಂಬ ಪ್ರತಿಪಾದಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾನೆ . ಚಂದ್ರನು ಒಂದೇ ಸಮನಾಗಿರುವುದಿಲ್ಲ . ಕಳೆಗುಂದುತ್ತಾನೆ ಮ ಹೆಚ್ಚಾಗುವುದಿಲ್ಲವೇ ? ಅಲದ ಮರದ ಕೆಲವು ಬೀಜಗಳಾದರೂ ಸಿಡಿದು , ಭೂಮಿಯಲ್ಲಿ ಚಿಗುರಿ ಹೆಮ್ಮರವಾಗುವುದಿಲ್ಲವೇ ? ಈ ಲೋಕದ ಎಳೆಗರು ಬೆಳೆದು ಎತ್ತಾಗುವುದಿಲ್ಲವೇ ? ಮಿಡಿ ಹಣ್ಣಾಗುವುದಿಲ್ಲವೇ ? ದೇವರ ಕೃಪೆಯೊಂದಿದ್ದರೆ ಕಾಲಾಂತರದಲ್ಲಿ ಬಡವ ಸಿರಿವಂತನಾಗುವುದಿಲ್ಲವೇ ? ಎಂದು ಕವಿ ಹೇಳಿದ್ದಾನೆ .
ಸ್ವಾರಸ್ಯ : ಪ್ರಕೃತಿಯ ಸ್ವಾಭಾವಿಕ ಕ್ರಿಯೆಗಳನ್ನು ಆಧರಿಸಿ ಬಡವನೂ ಒಂದಲ್ಲಾ ಒಂದು ದಿನ ಸಿರಿವಂತನಾಗುವನು ಎಂದು ಕವಿ ಆಶಾವಾದ ಮೂಡಿಸುವ ಮಾತನ್ನಾಡಿರುವುದು ಇಲ್ಲಿ ಸ್ವಾರಸ್ಯಪೂರ್ಣವಾಗಿದೆ .
3. ‘ ಸದ್ಧರ್ಮದಾ ಸತಿಯೇ ಸರ್ವಕೆ ಸಾಧನಂ “
ಉತ್ತರ : ಆಯ್ಕೆ : ಈ ವಾಕ್ಯವನ್ನು ಪುಲಿಗೆರೆ ಸೋಮನಾಥನು ಬರೆದಿರುವ ‘ ಸೋಮೇಶ್ವರ ಶತಕ ‘ ಕೃತಿಯಿಂದ ಆರಿಸಲಾಗಿರುವ ‘ ಸೋಮೇಶ್ವರ ಶತಕ ” ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಕವಿಯು ಉತ್ತಮ ಬಂಧು , ತಂದೆ , ಹೆಂಡತಿ , ಮಗ , ಗುರು , ಸುವತಿ ಮುಂತಾದವರ ಬಗ್ಗೆ ತಿಳಿಸುವ ಸಂದರ್ಭದಲ್ಲಿ ‘ ಧರ್ಮ ಮಾರ್ಗದಿಂದ ನಡೆದುಕೊಂಡು ಹೋಗುವ ಹೆಂಡತಿಯೇ ನಮ್ಮ ಎಲ್ಲಾ ಸುಖಕ್ಕೂ ಕಾರಣ ‘ ಎಂದು ಹೇಳಿದ್ದಾನೆ .
ಸ್ವಾರಸ್ಯ : ಹೆಂಡತಿ ಧರ್ಮಮಾರ್ಗದಿಂದ ನಡೆದು ಗಂಡನ ಶ್ರೇಯಸ್ಸಿಗೆ ಕಾರಣಳಾಗುತ್ತಾಳೆ , ಎಂದು ಹೇಳುವ ಮೂಲಕ ಜೀವನದಲ್ಲಿ ಆಕೆಯ ಮಹತ್ವವನ್ನು ಇಲ್ಲಿ ಸ್ವಾರಸ್ಯಪೂರ್ಣವಾಗಿ ತಿಳಿಸಲಾಗಿದೆ .
ಉ. ಮೊದಲೆರಡು ಪದಗಳಿಗಿರುವ ಸಂಬಂಧಿಸಿದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ.
1. ಮಿಡಿ : ಪಣ್ಣಾಗದೇ : : ಎಳಗರು : ___________
2. ನೃಗ್ರೋಧ : ಆಲದ ಮರ : : ಉಡುರಾಜ : ___________
3. ಭಕ್ತಿಯುಳ್ಳ : ಆಗಮಸಂದಿ : : ಕಳೆಗುಂದು : ___________
4. ಧರ್ಮ : ಅಧರ್ಮ : : ಬಡವ : ___________
5. ಕಾರ್ಯ : ಕಜ್ಜ : : ಭಕ್ತಿ : ___________
ಸರಿ ಉತ್ತರಗಳು.
1. ಎತ್ತಾಗದೆ
2.. ಚಂದ್ರ
3. ಆದೇಶ ಸಂಧಿ
4. ಬಲ್ಲಿದ
5. ಬಕುತಿ
8th Standard Someshwara Shataka Kannada Notes Question Answer Pdf
ಇತರೆ ಪದ್ಯಗಳು :
8ನೇ ತರಗತಿ ವಚನಾಮೃತ ಕನ್ನಡ ನೋಟ್ಸ್