9ನೇ ತರಗತಿ ಕನ್ನಡ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಪದ್ಯದ ನೋಟ್ಸ್, 9th Standard Ninna Muttina Sattigeyanittu Salahu Kannada Notes Question Answer Pdf Download, ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು Question and Answer
ತರಗತಿ : 9ನೇ ತರಗತಿ
ಪದ್ಯದ ಹೆಸರು : ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು
ಕೃತಿಕಾರರ ಹೆಸರು : ರಾಘವಾಂಕ
Table of Contents
ಕವಿ ಪರಿಚಯ :
ರಾಘವಾಂಕ
* ರಾಘವಾಂಕನು ಕ್ರಿ . ಶ . ಸುಮಾರು ೧೨೨೫ ರಲ್ಲಿ ಹಂಪಿಯಲ್ಲಿ ಜೀವಿಸಿದ್ದನು .
* ಇವರು ‘ ರಗಳೆಯ ಕವಿ ‘ ಎಂದು ಪ್ರಸಿದ್ಧನಾದ ಹರಿಹರನ ಸೋದರಳಿಯ ಮತ್ತು ಶಿಷ್ಯನಾಗಿದ್ದನು .
* ವಿರೂಪಾಕ್ಷನ ಪರಮಭಕ್ತನಾದ ಇವನು ರಚಿಸಿರುವ ಕೃತಿಗಳೆಂದರೆ : ಹರಿಶ್ಚಂದ್ರ ಕಾವ್ಯ , ಸಿದ್ಧರಾಮ ಚಾರಿತ್ರ್ಯ , ವೀರೇಶ್ವರ ಚರಿತೆ , ಸೋಮನಾಥ ಚರಿತೆ , ಶರಭ ಚಾರಿತ್ರ್ಯ , ಹರಿಹರ ಮಹತ್ವ ಎಂಬ ಕಾವ್ಯಗಳನ್ನು ಷಟ್ಟದಿ ಛಂದಸ್ಸಿನಲ್ಲಿ ರಚಿಸಿದ್ದಾನೆ .
* ಈತನಿಗೆ ಉಭಯ ಕವಿ ಕಮಲ ರವಿ , ಕವಿ ಶರಭ ಭೇರುಂಡ , ಪಟ್ಟದಿಯ ಬ್ರಹ್ಮ ಎಂಬ ಬಿರುದುಗಳಿದ್ದವು .
ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು question and answer
ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ ,
1. ಗಾನರಾಣಿಯರು ಹರಿಶ್ಚಂದ್ರನನನ್ನು ಏನನ್ನು ಕೊಡು ಎಂದು ಕೇಳಿದರು ?
ಉತ್ತರ : ಗಾನರಾಣಿಯರು ಹರಿಶ್ಚಂದ್ರನನನ್ನು ಮುತ್ತಿನ ಸತ್ತಿಗೆಯನ್ನು ಕೊಡು ಎಂದು ಕೇಳಿದರು .
2. ಸತ್ತಿಗೆಯು ಯಾವಾಗ ದೈವ ಸ್ವರೂಪ ಎಂದು ಹರಿಶ್ಚಂದ್ರನು ಹೇಳುತ್ತಾನೆ ?
ಉತ್ತರ : ಸತ್ತಿಗೆಯು ರಾಜಪಟ್ಟ ಕಟ್ಟುವಾಗ ದೈವ ಸ್ವರೂಪ ಎಂದು ಹರಿಶ್ಚಂದ್ರನು ಹೇಳುತ್ತಾನೆ .
3. ಗಾನರಾಣಿಯರು ಅವನೀಶನನ್ನು ನೋಡಲು ಬಂದದ್ದನ್ನು ಕವಿಯು ಯಾವುದಕ್ಕೆ ಹೋಲಿಸಿದ್ದಾನೆ ?
ಉತ್ತರ : ಗಾನರಾಣಿಯರು ಅವನೀಶನನ್ನು ನೋಡಲು ಬಂದದ್ದನ್ನು ಕವಿಯು ಕಾಳರಾತ್ರಿಯ ಕನೈಯರು ಹಗಲನ್ನು ನೋಡುವುದಕ್ಕೆಂದು ಬಂದಂತೆ ಎಂದು ಹೋಲಿಸಿದ್ದಾನೆ .
4. ಗಾನರಾಣಿಯರಿಗೆ ಹರಿಶ್ಚಂದ್ರನು ಯಾವ ಬಹುಮಾನವನ್ನು ಕೊಟ್ಟನು ?
ಉತ್ತರ : ಗಾನರಾಣಿಯರಿಗೆ ಹರಿಶ್ಚಂದ್ರನು ಸರ್ವಾಭರಣವನ್ನು ಬಹುಮಾನವಾಗಿ ಕೊಟ್ಟನು .
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .
1. ಹರಿಶ್ಚಂದ್ರನು ಮುತ್ತಿನ ಸತ್ತಿಗೆಯನ್ನು ಏಕೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದನು ?
ಉತ್ತರ : ಹರಿಶ್ಚಂದ್ರನು ಗಾನರಾಣಿಯರನ್ನು ಕುರಿತು “ ಸೂರ್ಯವಂಶದ ಪರಂಪರೆಯಲ್ಲಿ ಹುಟ್ಟಿದ ರಾಜರಿಗೆ ಪಟ್ಟವನ್ನು ಕಟ್ಟುವ ಸಮಯದಲ್ಲಿ ಈ ರಾಜಲಾಂಛನವಾದ ಸತ್ತಿಗೆಯು ಇಲ್ಲದಿದ್ದರೆ ರಾಜತನವು ದೊರೆಯುವುದಿಲ್ಲ . ಈ ಭೂಮಿಯ ಮೇಲೆ , ಯುದ್ಧರಂಗದಲ್ಲಿ ಸತ್ತಿಗೆಯನ್ನು ನೋಡಿದ ಶತ್ರುಗಳು ನಿಲ್ಲುವುದಿಲ್ಲ . ಈ ಸತ್ತಿಗೆಯ ನೆರಳಿನಲ್ಲಿ ಯಾವನು ಇರುವನೋ ಆತನಿಗೆ ವಿಪತ್ತು , ಅಡಚಣೆಗಳು , ಬಡತನ , ರೋಗ , ಅಪಕೀರ್ತಿ , ಸೋಲು , ಭಯ ಕಳೆದುಹೋಗುವುದು , ಆದ್ದರಿಂದ ಇದನ್ನು ಕೊಡುವುದಿಲ್ಲ ” ಎಂದನು .
2. ಮುತ್ತಿನ ಸತ್ತಿಗೆಯ ವಿಶೇಷತೆ ಕುರಿತು ಹರಿಶ್ಚಂದ್ರನು ಏನು ಹೇಳುತ್ತಾನೆ ?
ಉತ್ತರ : ಹರಿಶ್ಚಂದ್ರನು ಗಾನರಾಣಿಯರಿಗೆ : “ ಈ ಸತ್ತಿಗೆಯು ಜನರಿಗೆ ಕೊಡಬಾರದು . ವಂಶಪರಂಪರೆಯಿಂದ ಬಂದಿದ್ದರಿಂದ ತಂದೆಯು , ಪಟ್ಟವನ್ನು ಕಟ್ಟುವ ಸಮಯದಲ್ಲಿ ಇದನ್ನು ಪೂಜಿಸಿ ಕೊಳ್ಳುವುದರಿಂದ ಇದು ದೇವರು , ನೆರಳಿನ ತಂಪನ್ನು ಸೊಗಸಾಗಿ ಕೊಡುವುದರಿಂದ ಇದು ಪೋಷಿಸುವ ತಾಯಿ , ಯುದ್ಧದಲ್ಲಿ ಶತ್ರುಗಳನ್ನು ನಡುಗಿಸುವುದರಿಂದ ಇದು ಚತುರಂಗ ಬಲ ಎನಿಸಿಕೊಂಡಿದೆ . ” ಎಂದು ಸತ್ತಿಗೆಯ ವಿಶೇಷತೆಯನ್ನು ತಿಳಿಸಿದನು .
3. ವಿಶ್ವಾಮಿತ್ರನ ತಪೋಬಲದಿಂದ ಜನಿಸಿದ ಕನೈಯರ ರೂಪಲಾವಣ್ಯ ಹೇಗಿತ್ತು ? ವಿವರಿಸಿ .
ಉತ್ತರ : ಕಾಳರಾತ್ರಿಯ ಕನೈಯರು ಹಗಲನ್ನು ನೋಡುವುದಕ್ಕೆಂದು ಬಂದರೋ ದೇವತೆಗಳು ಮತ್ತು ರಾಕ್ಷಸರು ಸಮುದ್ರವನ್ನು ಮಂಥನ ಮಾಡುವ ಸಮಯದಲ್ಲಿ ಹೊರಹೊಮ್ಮಿದ ಹೊಸ ವಿಷದ ಹೊಗೆ ಸುರಿದು , ಕಪ್ಪಾಗಿ ಗಟ್ಟಿಯಾದಂತೆಮನುಷ್ಯರಾದರೋ ! ಬ್ರಹ್ಮನು ನೀಲಿ ಬಣ್ಣದಿಂದ ಮಾಡಿದ ಗೊಂಬೆಗಳು ಜೀವವನ್ನು ಪಡೆದವೋ ! ಎನ್ನುವಂತೆ ಇದ್ದರು .
4. ಗಾನರಾಣಿಯರು ಏನೆಂದು ಹರಿಶ್ಚಂದ್ರನನ್ನು ಕೀರ್ತಿಸಿ ಹಾಡಿದರು ? ವಿವರಿಸಿ ,
ಉತ್ತರ : ಗಾನರಾಣಿಯರು . ಮಹಾರಾಜ ಹರಿಶ್ಚಂದ್ರನನ್ನು ಕುರಿತು : ” ಮಝ , ಭಾಮಿ , ಆದಟರಾಯ , ಮಝರೇ ರಾಯ , ರಾಯದಳವುಳಕಾರ , ರಾಯಕಂಟಕ , ರಾಯಜಗಜೆಟ್ಟಿ , ರಾಯದಲ್ಲ , ರಾಯಶೋಳಾದಳ , ರಾಯಭುಜಬಲಭೀಮ , ರಾಯಮರ್ದನ ” ಎಂದು ಗುಣಗಾನ ಮಾಡುತ್ತಾ “ ಒಡೆಯನೇ ಚಿರಂಜೀವಿಯಾಗು ” ಎಂದು ಕೀರ್ತಿಸಿ ಹಾಡಿದರು .
ಇ ] ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .
1. ಹರಿಶ್ಚಂದ್ರ ಮತ್ತು ಗಾನರಾಣಿಯರ ನಡುವೆ ನಡೆದ ಸಂವಾದವನ್ನು ಸಂಗ್ರಹಿಸಿ ಬರೆಯಿರಿ .
ಉತ್ತರ : ( ಹರಿಶ್ಚಂದ್ರನು ಗಾನರಾಣಿಯರ ನೃತ್ಯವನ್ನು ಮೆಚ್ಚಿ ಆಭರಣಗಳನ್ನು ಬಹುಮಾನವಾಗಿ ನೀಡುತ್ತಾನೆ . ಆಗ ಅವರು ) ಗಾನರಾಣಿಯರು : ಕಡುಬಿಸಿಲಿನಿಂದ ಬಳಲಿ ಬೆಂಡಾಗಿರುವ ನಮಗೆ ನೀನು ಆಭರಣಗಳನ್ನು ಕೊಟ್ಟರೆ ಪ್ರಯೋಜನವೇನು ? ಅದಕ್ಕೆ ಬದಲಾಗಿ ನಿನ್ನ ಮುತ್ತಿನ ಸತ್ತಿಗೆಯನ್ನು ಕೊಟ್ಟು ನಮ್ಮನ್ನು ಕಾಪಾಡು . ಹರಿಶ್ಚಂದ್ರ ಸೂರ್ಯವಂಶದ ಪರಂಪರೆಯ ರಾಜರಿಗೆ ಪಟ್ಟವನ್ನು ಕಟ್ಟುವ ಸಮಯದಲ್ಲಿ ಈ ರಾಜಲಾಂಛನವಾದ ಸತ್ತಿಗೆಯು ಇಲ್ಲದಿದ್ದರೆ ರಾಜತನವು ದೊರೆಯುವುದಿಲ್ಲ . ಆದ್ದರಿಂದ ಇದನ್ನು ಕೊಡಲು ಸಾಧ್ಯವಿಲ್ಲ . ಪ್ರೀತಿಯಿಂದ ಎಲ್ಲವನ್ನು ಕೊಡಬಹುದು . ಹಾಗೆಂದು ತಾಯಿ , ತಂದೆ , ಹೆಂಡತಿ , ದೇವರು ಮತ್ತು ಮನಸಾರೆ ನಂಬಿ ವಿಶ್ವಾಸವಿಟ್ಟ ಪರಿವಾರವನ್ನು ಕೊಡುವ ಶೂರು ಜಗತ್ತಿನಲ್ಲಿ ಇಲ್ಲ . ಗಾ.ರಾ : ಮಹಾರಾಜ ನೀನು ಈಗ ಹೇಳಿದ ಇವರಲ್ಲಿ ಯಾರನ್ನಾದರು ಬೇಡಿದರೆ ಕೊಡಬೇಡ , ಆದರೆ ನಿನ್ನ ಬಳಿ ಇರುವ ಮುತ್ತಿನ ಸತ್ತಿಗೆಯನ್ನು ಕೊಡು ಎಂದರೆ ಲೋಭವೇಕೆ ? ಹರಿಶ್ಚಂದ್ರ ಏಕೆಂದರೆ , ನನಗೆ ಇದಲ್ಲದೆ ಬೇರೆ ತಾಯಿತಂದೆಯರು ಇಲ್ಲ . ವಂಶಪರಂಪರೆಯಿಂದ ಬಂದಿದ್ದರಿಂದ ಇದು ತಂದೆ , ಪಟ್ಟವನ್ನು ಕಟ್ಟುವ ಸಮಯದಲ್ಲಿ ಇದನ್ನು ಪೂಜಿಸಿ ಕೊಳ್ಳುವುದರಿಂದ ಇದು ದೇವರು , ನೆರಳಿನ ತಂಪನ್ನು ಸೊಗಸಾಗಿ ಕೊಡುವುದರಿಂದ ಇದು ನನ್ನನ್ನು ಪೋಷಿಸುವ ತಾಯಿ , ಯುದ್ಧದಲ್ಲಿ ಶತ್ರುಗಳನ್ನು ನಡುಗಿಸುವುದರಿಂದ ಇದೇ ಚತುರಂಗ ಬಲ ಎನಿಸಿಕೊಂಡಿದೆ .
2. ಹರಿಶ್ಚಂದ್ರನು ನೀಡಿದ ಬಹುಮಾನವನ್ನು ತಿರಸ್ಕರಿಸಿ ಗಾನರಾಣಿಯರು ಹೇಳಿದ ಮಾತುಗಳನ್ನು ತಿಳಿಸಿ ,
ಉತ್ತರ : ಹರಿಶ್ಚಂದ್ರನು ನೀಡಿದ . ಬಹುಮಾನವನ್ನು ತಿರಸ್ಕರಿಸಿ ಗಾನರಾಣಿಯರು ಹೀಗೆ ಹೇಳುತ್ತಾರೆ : “ ಬಡತನದ ಸಮಯದಲ್ಲಿ ಆನೆಯು ದೊರೆತು ಫಲವೇನು ? ಬಾಯಾರಿಕೆಯ ಸಮಯದಲ್ಲಿ ತುಪ್ಪವು ದೊರಕಿ ಫಲವೇನು ? ರೋಗಬಂದು ಬಿದ್ದಿರುವಾಗ ರಂಭೆಯು ದೊರಕಿ ಫಲವೇನು ? ಸಾಯುವ ಸಮಯದಲ್ಲಿ ರಾಜ್ಯದ ದೊರೆತನ ದೊರಕಿ ಫಲವೇನು ? ಕಡುಬಿಸಿಲಿನಿಂದ ಬಳಲಿ ಬೆಂಡಾಗಿರುವ ಸಮಯದಲ್ಲಿ ನಮಗೆ ನೀನು ಪ್ರೀತಿಯಿಂದ ಆಭರಣಗಳನ್ನು ಕೊಟ್ಟು ಫಲವೇನು ? ಅದರ ಬದಲು ಸಮುದ್ರದಲ್ಲಿ ಮುಳುಗುವವನಿಗೆ ತೆಪ್ಪವನ್ನು ಬಡವನಿಗೆ ಚಿನ್ನವನ್ನು ಅತಿರೋಗಿಗೆ ಅಮೃತವನ್ನು ಕೊಟ್ಟರೆ ಅವರು ಸಂತೋಷವನ್ನು ಹೊಂದುವರು , ಅವರನ್ನು ಹೋಲುವ ನಮಗೆ ಸುಡುಸುಡನೆ ಸುಡುವ ಈ ಬಿರುಬಿಸಿಲ ಸೆಕೆಯಲ್ಲಿ ಉಸಿರಿನ ಬಿಸಿ ಹೆಚ್ಚಾಗಿ ಉರಿಯಹತ್ತಿದೆ . ನಮ್ಮ ಬಾಯಿ ಬತ್ತಿಹೋಗಿದೆ . ಬಿಸಿಲ ಝಳದಿಂದ ಸಾವು ಆವರಿಸುತ್ತಿದೆ . ಆದ್ದರಿಂದ ನಮಗೆ ನಿನ್ನ ಮುತ್ತಿನ ಸತ್ತಿಗೆಯನ್ನು ಕೊಟ್ಟು ನಮ್ಮನ್ನು ಕಾಪಾಡು ಎಂದರು .
ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .
1. “ ಅನುನಯದೊಳೆಲ್ಲವಂ ಕೊಡಬಹುದು ಬಿಡಬಹುದು “
ಆಯ್ಕೆ : ಈ ವಾಕ್ಯವನ್ನು ರಾಘವಾಂಕನು ರಚಿಸಿರುವ ‘ ಹರಿಶ್ಚಂದ್ರಕಾವ್ಯ ‘ ದಿಂದ ಆರಿಸಿಕೊಳ್ಳಲಾದ ‘ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಹರಿಶ್ಚಂದ್ರನು ಬಹುಮಾನವಾಗಿ ನೀಡಿದ ಆಭರಣಗಳಿಗೆ ಬದಲಾಗಿ ಗಾನರಾಣಿಯರು ನಿನ್ನ ಮುತ್ತಿನ ಸತ್ತಿಗೆಯನ್ನು ನೀಡು ಎಂದು ಕೇಳಿದಾಗ ಹರಿಶ್ಚಂದ್ರನು ಈ ಮಾತನ್ನು ಹೇಳುತ್ತಾನೆ . ಪ್ರೀತಿಯಿಂದ ಎಲ್ಲವನ್ನೂ ಕೊಡಬಹುದು ಬಿಡಬಹುದು . ಹಾಗೆಂದು ತಾಯಿ – ತಂದೆ , ಹೆಂಡತಿ – ಮಕ್ಕಳು . ಬಂಧು – ಬಾಂಧವರು , ದೇವರು , ವಿಶ್ವಾಸವಿಟ್ಟುಕೊಂಡಿರುವ ಪರಿವಾರವನ್ನು ನೀಡಲು ಸಾಧ್ಯವೇ ಎಂದು ಹರಿಶ್ಚಂದ್ರ ಅವರಿಗೆ ಮನವರಿಕೆ ಮಾಡುತ್ತಾನೆ .
ಸ್ವಾರಸ್ಯ : ಕುಟುಂಬ , ಬಂಧು – ಬಾಂಧವರು , ದೇವರು ಮುಂತಾದವರನ್ನು ಯಾರಿಗೂ ಬಿಟ್ಟುಕೊಡದೆ ಕಾಪಾಡುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ಎಂಬುದು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .
2. ” ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಭೂಭುಜಯೆಂದರು “
ಆಯ್ಕೆ : ಈ ವಾಕ್ಯವನ್ನು ರಾಘವಾಂಕನು ರಚಿಸಿರುವ ‘ ಹರಿಶ್ಚಂದ್ರಕಾವ್ಯ ‘ ದಿಂದ ಆರಿಸಿಕೊಳ್ಳಲಾದ ‘ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಹರಿಶ್ಚಂದ್ರನು ತನ್ನ ಬಳಿಗೆ ಬಂದು ಅಮೋಘವಾಗಿ ನರ್ತಿಸಿ ಮನಸ್ಸಿಗೆ ಸಂತಸ ನೀಡಿದ ಗಾನರಾಣಿಯರಿಗೆ ಆಭರಣಗಳನ್ನು ಬಹುಮಾನವಾಗಿ ನೀಡಿದಾಗ ಅವರು ಅದನ್ನು ತಿರಸ್ಕರಿಸಿ ಹರಿಶ್ಚಂದ್ರನಿಗೆ ಈ ಮಾತನ್ನು ಹೇಳುತ್ತಾರೆ . ತಮಗೆ ಈ ಬಹುಮಾನ ನೀಡಿದ್ದು ಸೂಕ್ತವಲ್ಲ ಅದಕ್ಕೆ ಬದಲಾಗಿ ಸತ್ತಿಗೆಯನ್ನು ನೀಡು ಎಂದು ಕೇಳುತ್ತಾರೆ .
ಸ್ವಾರಸ್ಯ : ವಂಶಪಾರ್ಯವಾಗಿ ಬಂದಿರುವ ಪವಿತ್ರವಾದ ರಾಜಲಾಂಛನಗಳಲ್ಲಿ ಒಂದಾದ ಸತ್ತಿಗೆಯನ್ನು ( ಬೆಳ್ಕೊಡೆಯನ್ನು ) ತಮ್ಮ ಬಿಸಿಲಬೇಗೆ ಪರಿಹರಿಸಿಕೊಳ್ಳಲು ಕೇಳುವುದು ಸ್ವಾರಸ್ಯಕರವಾಗಿದೆ .
3. “ ಸಂದ ಕಾರಿರುಳು ಕನ್ನೆಯರು ಹಗಲಂ ನೋಡಲೆಂದು ಬಂದರೊ ”
ಆಯ್ಕೆ : ಈ ವಾಕ್ಯವನ್ನು ರಾಘವಾಂಕನು ರಚಿಸಿರುವ ‘ ಹರಿಶ್ಚಂದ್ರಕಾವ್ಯ ‘ ದಿಂದ ಆರಿಸಿಕೊಳ್ಳಲಾದ ‘ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಹರಿಶ್ಚಂದ್ರನ ಬಳಿಗೆ ಬಂದ ಗಾನರಾಣಿಯರ ರೂಪವನ್ನು ವರ್ಣಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾನೆ . ಕಾರಿರುಳಂತಿರುವ ಕನೈಯರು ಹಗಲಿನಂತೆ ಕಾಂತಿಯುತನಾಗಿದ್ದ ಮಹಾರಾಜನನ್ನು ನೋಡಲೆಂದು ಬಂದರೋ ಎಂದು ವರ್ಣಿಸಲಾಗಿದೆ .
ಸ್ವಾರಸ್ಯ : ಗಾನರಾಣಿಯರನ್ನು ಕಾರಿರುಳಿಗೂ ಹರಿಶ್ಚಂದ್ರನನ್ನು ಹಗಲಿಗೂ ಸಮೀಕರಿಸಿರುವುದು ಸ್ವಾರಸ್ಯಕರವಾಗಿದೆ .
4. “ ಬಡತನದ ಹೊತ್ತಾನೆ ದೊರಕಿ ಫಲವೇನು
ಆಯ್ಕೆ : ಈ ವಾಕ್ಯವನ್ನು ರಾಘವಾಂಕನು ರಚಿಸಿರುವ ‘ ಹರಿಶ್ಚಂದ್ರಕಾವ್ಯ ‘ ದಿಂದ ಆರಿಸಿಕೊಳ್ಳಲಾದ ‘ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಹರಿಶ್ಚಂದ್ರನು ತನ್ನ ಬಳಿಗೆ ಬಂದು ಅಮೋಘವಾಗಿ ನರ್ತಿಸಿ ಮನಸ್ಸಿಗೆ ಸಂತಸ ನೀಡಿದ ಗಾನರಾಣಿಯರಿಗೆ ಆಭರಣಗಳನ್ನು ಬಹುಮಾನವಾಗಿ ನೀಡಿದಾಗ ಅವರು ಅದನ್ನು ತಿರಸ್ಕರಿಸಿ ಹರಿಶ್ಚಂದ್ರನಿಗೆ ಈ ಮಾತನ್ನು ಹೇಳುತ್ತಾರೆ . ತಮಗೆ ಈ ಬಹುಮಾನ ನೀಡಿದ್ದು ಸೂಕ್ತವಲ್ಲ ಎಂದು ಅವರು ಹೇಳುತ್ತಾರೆ .
ಸ್ವಾರಸ್ಯ : ಬಡತನದಿಂದ ಕೂಡಿರುವವನಿಗೆ ಆನೆ ಕೊಡುವುದರಿಂದ ಅವನಿಗೆ ಪ್ರಯೋಜನವಾಗುತ್ತದೆಯೇ ? ಎಂದು ಹೇಳಿರುವುದು ಸ್ವಾರಸ್ಯಕರವಾಗಿದೆ .
ಭಾಷಾ ಚಟುವಟಿಕೆ
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ .
1. ಷಟ್ಟದಿ ಎಂದರೇನು ? ವಿಧಗಳಾವುವು ?
ಉತ್ತರ : ಷಟ್ಟದಿ ಮಾತ್ರಾಗಣಕ್ಕೆ ಸೇರಿದ ಪದ್ಯ ಪ್ರಕಾರ , ಷಟ್ಟದಿಯಲ್ಲಿ ಶರ , ಕುಸುಮ , ಭೋಗ , ಭಾಮಿನಿ , ಪರಿವರ್ಧಿನಿ , ವಾರ್ಧಕ ಎಂಬ ಆರು ವಿಧಗಳಿವೆ.ಷಟ್ – ಆರು , ಪದಿ – ಸಾಲು , ಆರುಸಾಲುಗಳ ಪದ್ಯ – ಷಟ್ಟದಿ .
2. ಭಾಮಿನಿ ಷಟ್ನದಿಯ ಲಕ್ಷಣವೇನು ?
ಉತ್ತರ : 1 , 2 , 4 ಮತ್ತು 5 ನೆಯ ಸಾಲುಗಳಲ್ಲಿ ಮೂರು ಮಾತ್ರೆಗಳ ಗಣದ ಅನಂತರ ನಾಲ್ಕು ಮಾತ್ರೆಗಳ ಗಣಗಳು ಅನುಕ್ರಮವಾಗಿ ಎರಡೆರಡು ಬರುತ್ತವೆ . 3 ಮತ್ತು 6 ನೆಯ ಸಾಲುಗಳಲ್ಲಿ ಮೂರು ಮಾತ್ರೆಗಳ ಗಣದ ಅನಂತರ ನಾಲ್ಕು ಮಾತ್ರೆಗಳ ಗಣಗಳು ಅನುಕ್ರಮವಾಗಿ ಮೂರು ಮೂರು ಇದ್ದು , ಕೊನೆಯಲ್ಲಿ ಒಂದು ಗುರುವಿನಿಂದ ಕೂಡಿರುತ್ತದೆ .
3. ವಾರ್ಧಕ ಷಟ್ನದಿಯ ಲಕ್ಷಣವನ್ನು ವಿವರಿಸಿ .
ಉತ್ತರ : 1. 2. 4 ಮತ್ತು 5 ನೆಯ ಸಾಲುಗಳಲ್ಲಿ 5 ಮಾತ್ರೆಗಳ 4 ಗಣಗಳಿರುತ್ತವೆ . 3. ಮತ್ತು 6 ನೆಯ ಸಾಲುಗಳಲ್ಲಿ 5 ಮಾತ್ರೆಗಳ 6 ಗಣಗಳು ಮತ್ತು ಒಂದು ಗುರು ನಿಯತವಾಗಿರುತ್ತದೆ .
9th Standard Ninna Muttina Sattigeyanittu Salahu Kannada Notes Question Answer Pdf
ಇತರೆ ಪದ್ಯಗಳು :