9ನೇ ತರಗತಿ ಕನ್ನಡ ಮರಳಿ ಮನೆಗೆ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 9th Standard Marali Manege Kannada Notes Question Answer Pdf Download
ತರಗತಿ : 9ನೇ ತರಗತಿ
ಪದ್ಯದ ಹೆಸರು : ಮರಳಿ ಮನೆಗೆ
ಕೃತಿಕಾರರ ಹೆಸರು : ಅರವಿಂದ ಮಾಲಗತ್ತಿ
Table of Contents
ಕವಿ ಪರಿಚಯ :
ಅರವಿಂದ ಮಾಲಗತ್ತಿ
* ಅರವಿಂದ ಮಾಲಗತ್ತಿ ಅವರು ಕ್ರಿ . ಶ . ೧೯೫೬ ರಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಜನಿಸಿದರು .
* ಇವರು ಪ್ರಸ್ತುತ ಮೈಸೂರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ . ಇವರು ಸಂಶೋಧನೆ ಮತ್ತು ವೈಚಾರಿಕ ಲೇಖನಗಳಿಂದ ಪ್ರಸಿದ್ಧರಾಗಿದ್ದಾರೆ . ವಿಶ್ವವಿದ್ಯಾನಿಲಯದ
* ಇವರ ಪ್ರಮುಖ ಕೃತಿಗಳೆಂದರೆ : ‘ ವಿಶ್ವತೋಮುಖ -ಹೂ ಬಲುಭಾರ ‘ , ‘ ಮೂಕನಿಗೆ ಬಾಯಿ ಬಂದಾಗ ‘ , ‘ ಕಪ್ಪುಕಾವ್ಯ ‘ ‘ ಮೂರನೆಯ ಕಣ್ಣು ‘ ‘ ನಾದ – ನಿನಾದ ‘ , ‘ ಸಿಲಿಕಾನ್ ಸಿಟಿ ಮತ್ತು ಕೋಗಿಲೆ ‘ , ‘ ಚಂಡಾಲ ಸ್ವರ್ಗಾರೋಹಣಂ ‘ ಕವನ ಸಂಕಲನಗಳನ್ನು ರಚಿಸಿದ್ದಾರೆ . ‘ ಕಾರ್ಯ ‘ ಎಂಬ ಕಾದಂಬರಿಯನ್ನೂ ಮುಗಿಯದ ಕತೆಗಳು ‘ ಎಂಬ ಕಥಾ ಸಂಕಲನವನ್ನೂ ` ಗೌರ್ಮೆಂಟ್ ಬ್ರಾಹ್ಮಣ ‘ ಎಂಬ ಆತ್ಮಕಥನವನ್ನೂ ಬರೆದಿದ್ದಾರೆ .
* ಇವರಿಗೆ ದೊರೆತಿರುವ ಪ್ರಶಸ್ತಿಗಳೆಂದರೆ : ‘ ಮೂಕನಿಗೆ ಬಾಯಿ ಬಂದಾಗ ‘ ಕವನ ಸಂಕಲನಕ್ಕೆ ‘ ದೇವರಾಜ ಬಹದ್ದೂರ್ ಪ್ರಶಸ್ತಿ ‘ , ‘ ಕಪ್ಪು ಕಾವ್ಯ ‘ ಕೃತಿಗೆ ‘ ನರಸಿಂಹಯ್ಯ ಪುರಸ್ಕಾರ ‘ ಮತ್ತು ‘ ಗೌರ್ಮೆಂಟ್ ಬ್ರಾಹ್ಮಣ ‘ ಕೃತಿಗೆ ‘ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ .
9th Standard Marali Manege Kannada Notes Question Answer
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
1. ನಮ್ಮ ನಡೆ ಯಾರ ನಡೆಯಂತೆ ಇರಬೇಕು ?
ಉತ್ತರ : ನಮ್ಮ ನಡೆ ಬುದ್ಧನ ನಡೆಯಂತೆ ಇರಬೇಕು .
2. ಬುದ್ಧನು ಲುಂಬಿನಿಯ ವನಕ್ಕೆ ಯಾವ ರೀತಿ ಬರಬೇಕು ?
ಉತ್ತರ : ಬುದ್ಧನು ಲುಂಬಿನಿಯ ವನಕ್ಕೆ ವೈಶಾಖ ಬಂದಂತೆ ಬರಬೇಕು .
3. ಮಹಾಮನೆಯಲ್ಲಿ ಯಾವ ಮಂತ್ರವನ್ನು ಸಾರಬೇಕು ?
ಉತ್ತರ : ಮಹಾಮನೆಯಲ್ಲಿ ‘ ಬಹುಜನತೆಯ ಹಿತವೇ ಬಹುಜನತೆಯ ಸುಖವು ‘ ಮಂತ್ರವನ್ನು ಸಾರಬೇಕು .
4. ಮನೆಯ ಬಾಗಿಲು ಯಾರಿಗಾಗಿ ತೆರೆದಿಹುದು ?
ಉತ್ತರ : ಮನೆಯ ಬಾಗಿಲು ಬುದ್ಧನಿಗಾಗಿ ತೆರೆದಿಹುದು .
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ .
1. ಬುದ್ಧನು ಬೋಧಿಸಿದ ಪಂಚಶೀಲತತ್ತ್ವಗಳು ಯಾವುವು ?
ಉತ್ತರ : ೧ ) ಯಾವುದೇ ಜೀವಿಗಳನ್ನು ಕೊಲ್ಲದಿರುವುದು ಅಥವಾ ಹಿಂಸೆ ಮಾಡದಿರುವುದು .
೨ ) ನಮ್ಮದಲ್ಲದ ವಸ್ತುವನ್ನು ಕದಿಯದಿರುವುದು ಅಥವಾ ತೆಗೆದುಕೊಳ್ಳದಿರುವುದು .
೩ ) ಶೀಲಹರಣ ಮಾಡದಿರುವುದು ಅಥವಾ ಅತ್ಯಾಚಾರ ಮಾಡದಿರುವುದು ,
೪ ) ಸುಳ್ಳನ್ನು ಹೇಳದಿರುವುದು ಅಥವಾ ಅಸತ್ಯವನ್ನು ನುಡಿಯದಿರುವುದು .
೫ ) ಮಾದಕ ಪಾನೀಯ ಅಥವಾ ಮಾದಕ ವಸ್ತುಗಳನ್ನು ಸೇವಿಸದಿರುವುದು , ಇವು ಬುದ್ಧನ ಪಂಚಶೀಲ ತತ್ವಗಳಾಗಿವೆ .
2. ಬುದ್ಧನ ನಡೆ ಏನು ? ವಿವರಿಸಿ .
ಉತ್ತರ : ಬುದ್ಧನ ನಡೆಯು ಜಾತಿ – ಧರ್ಮ , ಲಿಂಗಭೇದ , ಮೇಲು – ಕೀಳುಗಳ ಗಡಿಯನ್ನು ಮೀರಿ ನಿಂತಿದೆ . ಬುದ್ಧನ ತತ್ವಗಳೇ ನಮ್ಮ ನುಡಿಯಾಗಿ ಬುದ್ಧ ಮಾರ್ಗವೆ ನಮ್ಮ ಮಾರ್ಗವಾಗುವ ಮೂಲಕ ಸಮಾನತೆಯ ಸಮಾಜ ಸ್ಥಾಪಿತವಾಗಬೇಕು . ಎಂಬುದು ಕವಿಯ ಆಶಯವಾಗಿದೆ .
3. ಬುದ್ಧನೆಂದರೆ ಏನೇನು ಎಂದು ಕವಿಗಳು ಹೇಳುತ್ತಾರೆ ?
ಉತ್ತರ : ‘ ಬುದ್ಧನೆಂದರೆ ನಿತ್ಯ , ಬುದ್ಧನೆಂದರೆ ಸತ್ಯ , ಬುದ್ಧನೆಂದರೆ ಶಾಂತಿ , ಬುದ್ಧನೆಂದರೆ ಕ್ರಾಂತಿ , ಬುದ್ಧನೆಂದರೆ ಕರುಣೆ , ಬುದ್ಧನೆಂದರೆ ಬೆಳಕು ‘ ಎಂದು ಕವಿ ಹೇಳಿದ್ದಾರೆ .
4. ಭವ್ಯ ಮನುಜರಾಗಿ ಬಾಳಲು ನಮ್ಮಲ್ಲಿ ಇರಬೇಕಾದ ಗುಣಗಳಾವುವು ?
ಉತ್ತರ : ಸ್ವಾರ್ಥವನ್ನು ತೊರೆದು ; ಬಹುಜನತೆಯ ಹಿತವೇ ಬಹುಜನತೆಯ ಸುಖ ಎಂಬ ಭಾವನೆ ಇರಬೇಕು . ನಮ್ಮ ಉಸಿರಿನ ನೀತಿ ಹಾಗೂ ನಮ್ಮ ಮನೆಯ ರೀತಿಗಳು ಮಹಾಮನೆಯ ಮಹಾಮಂತ್ರ ಎಂಬ ಗುಣ ನಮ್ಮಲ್ಲಿದ್ದಾಗ ನಾವು ಭವ್ಯ ಮನುಜರಾಗಿ ಬಾಳಬಹುದು .
ಇ ] ಕೊಟ್ಟಿರುವ ಪ್ರಶ್ನೆಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .
1. ‘ ಮರಳಿ ಮನೆಗೆ ‘ ಕವನದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .
ಉತ್ತರ : ‘ ಮರಳಿ ಮನೆಗೆ ‘ ಕವನವು ಇಂದಿನ ಸ್ಥಿತಿಗೆ ಬುದ್ಧನ ಆಗಮನದ ಪ್ರಸ್ತುತತೆಯನ್ನು ಸಮರ್ಥವಾಗಿ ಅಭಿವ್ಯಕ್ತಿಸುತ್ತದೆ . “ ಇಂದಿನ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಲು ಬುದ್ಧನ ಬೆಳಕು ನಮಗೆ ಅವಶ್ಯಕ . ಬುದ್ಧನು ಸತ್ಯ , ಶಾಂತಿ , ಕರುಣೆಯ ಬೆಳಕು . ನಾವು ದಿವ್ಯವಾದ ಜಗತ್ತಿನ ಭವ್ಯವಾದ ಮನುಜರಾಗಿ ಬದುಕ ಬೇಕಾದರೆ ಬುದ್ಧನ ಉಪದೇಶ ಅನುಸರಿಸುವುದು ಬಹುಮುಖ್ಯವಾಗಿದೆ . ನಾವೆಲ್ಲರೂ ಜಾತಿಯ ಸೀಮೆಯಾಚೆಗೆ ಬಂದು , ಧರ್ಮದ ಗಡಿಯಾಚೆಗೆ ನಿಂದು , ಲಿಂಗಭೇದ ಮಾಡದೆ , ಮೇಲುಕೀಳು ಮನೋಭಾವನೆಯನ್ನು ತೊರೆದು ಬಾಳಿ ಬದುಕಲು ನಮ್ಮ ನಡೆ ಬುದ್ಧನ ಕಡೆಗೆ ಇರಬೇಕು , ನಮ್ಮ ನುಡಿಯು ಬುದ್ಧನ ನುಡಿಯಾಗಬೇಕು , ಅದಕ್ಕೆ ಬುದ್ಧನು ನಮ್ಮ ಮನೆಗೆ , ಮನಕ್ಕೆ ಮರಳಿ ಬರಬೇಕು ” ಎಂಬುದು ಈ ಕವನದ ಆಶಯವಾಗಿದೆ .
ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ
1. “ ಬಯಲಿನಲಿ ಬಂಧನ ಮೆಚ್ಚಳಾ ತಾಯಿ ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಅರವಿಂದ ಮಾಲಗತ್ತಿಯವರು ಬರೆದಿರುವ ‘ ವಿಶ್ವತೋಮುಖ – ಹೂ ಬಲುಭಾರ ‘ ಎಂಬ ಕವನ ಸಂಕಲನದಿಂದ ತೆಗೆದುಕೊಳ್ಳಲಾಗಿರುವ ‘ ಮರಳಿ ಮನೆಗೆ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಬುದ್ಧ ನಮಗೆ ತಂದೆ , ತಾಯಿ , ಬಂಧು – ಬಳಗವಾಗಿ ನಮ್ಮ ಯಾವ ಯಾವ ನಡೆಯನ್ನು ಮೆಚ್ಚುವುದಿಲ್ಲ ಎಂದು ಹೇಳುವ ಸಂದರ್ಭದಲ್ಲಿ ಕವಿ ನಾವು ಬುದ್ಧಮಾರ್ಗವನ್ನು ಮೀರಿದಾಗ ತಂದೆಯಂತಹ ಬುದ್ಧ ಮೆಚ್ಚುವುದಿಲ್ಲ . ಹಾಗೆಯೇ ಮುಕ್ತಿಯ ಬಯಲನ್ನು ಬಯಸುವವರು ಸಂಸಾರ ಬಂಧನಕ್ಕೆ ಸಿಲುಕಿದರೆ ತಾಯಿ ಸ್ವರೂಪದ ಬುದ್ಧ ನಮ್ಮನ್ನು ಮೆಚ್ಚುವುದಿಲ್ಲ ಎಂದು ಕವಿ ಹೇಳಿದ್ದಾರೆ .
ಸ್ವಾರಸ್ಯ : ವಿಶಾಲ ಹೃದಯಿಯಾದ ಬುದ್ಧನನ್ನು ನಮ್ಮ ಹಲವಾರು ಸಂಬಂಧಗಳೊಂದಿಗೆ ಪರಿಭಾವಿಸಿರುವುದು ಸ್ವಾರಸ್ಯಪೂರ್ಣವಾಗಿದೆ .
2 , “ ದಿವ್ಯ ಜಗದ ಭವ್ಯ ಮನುಜರಾಗಿ ನೀವು ಬಾಳಿರೊ “
ಉತ್ತರ : ಆಯ್ಕೆ : ಈ ವಾಕ್ಯವನ್ನು ಅರವಿಂದ ಮಾಲಗತ್ತಿಯವರು ಬರೆದಿರುವ ‘ ವಿಶ್ವತೋಮುಖ – ಹೂ ಬಲುಭಾರ ‘ ಎಂಬ ಕವನ ಸಂಕಲನದಿಂದ ತೆಗೆದುಕೊಳ್ಳಲಾಗಿರುವ ‘ ಮರಳಿ ಮನೆಗೆ ” ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಸ್ವಾರ್ಥವನ್ನು ತೊರೆದು : ಬಹುಜನತೆಯ ಹಿತವೇ ಬಹುಜನತೆಯ ಸುಖ ಎಂಬ ಭಾವನೆ ಇರಬೇಕು . ಹಾಗೂ ನಮ್ಮ ಉಸಿರಿನ ನೀತಿ ಹಾಗೂ ನಮ್ಮ ಮನೆಯ ರೀತಿಗಳು ಮಹಾಮನೆಯ ಮಹಾಮಂತ್ರ ಎಂಬ ಭಾವನೆ ನಮ್ಮಲ್ಲಿದ್ದಾಗ ನಾವು ಭವ್ಯ ಮನುಜರಾಗಿ ಬಾಳಬಹುದು ಎಂದು ಕವಿ ಈ ಸಂದರ್ಭದಲ್ಲಿ ಹೇಳಿದ್ದಾರೆ . ಸ್ವಾರಸ್ಯ : “ ಸರ್ವೇಜನಾಃ ಸುಖಿನೋಭವಂತು ” ಎಂಬಂತೆ ಬಹುಜನತೆಯ ಸುಖವನ್ನು ಬಯಸುವ ಮೂಲಕ ಮಾನವೀಯತೆಯಿಂದ ಬಾಳಬೇಕು ಎಂಬುದು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತಗೊಂಡಿದೆ .
3 , “ ಬಾರಯ್ಯ ಬಾರೊ ಬೆಳಕಿನ ಆದಿಗೆ ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಅರವಿಂದ ಮಾಲಗತ್ತಿಯವರು ಬರೆದಿರುವ ‘ ವಿಶ್ವತೋಮುಖ – ಹೂ ಬಲುಭಾರ ‘ ಎಂಬ ಕವನ ಸಂಕಲನದಿಂದ ತೆಗೆದುಕೊಳ್ಳಲಾಗಿರುವ ‘ ಮರಳಿ ಮನೆಗೆ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಇಂದು ಸಮಾಜದಲ್ಲಿ ಜಾತಿ – ಧರ್ಮ , ಲಿಂಗಭೇದ , ಮೇಲು – ಕೀಳುಗಳು ಹೆಚ್ಚಾಗಿದ್ದು ಅಶಾಂತಿ ತಲೆದೋರಿದೆ . ಅಜ್ಞಾನದ ಕತ್ತಲೆಯನ್ನು ನೀಗಿಸಲು ಮರಳಿ ಭೂಮಿಗೆ ( ಮನೆಗೆ ಬಾ ಎಂದು ಬುದ್ಧನಲ್ಲಿ ಕವಿ ಮೊರೆಯಿಡುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ .
ಸ್ವಾರಸ್ಯ : ಇಂದಿನ ದಿನಗಳಲ್ಲಿ ಬುದ್ಧನ ಸಂದೇಶಗಳು ಹೆಚ್ಚು ಪ್ರಸ್ತುತವಾಗಿವೆ . ಬುದ್ಧನ ತತ್ವಗಳು ಮತ್ತೆ ಬೆಳಕಿಗೆ ಬರಬೇಕು . ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ .
4 , ” ಬುದ್ಧನೆಂದರೆ ಕರುಣೆ ಬುದ್ಧನೆಂದರೆ ಬೆಳಕು ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಅರವಿಂದ ಮಾಲಗತ್ತಿಯವರು ಬರೆದಿರುವ ‘ ವಿಶ್ವತೋಮುಖ – ಹೂ ಬಲುಭಾರ ‘ ಎಂಬ ಕವನ ಸಂಕಲನದಿಂದ ತೆಗೆದುಕೊಳ್ಳಲಾಗಿರುವ ‘ ಮರಳಿ ಮನೆಗೆ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಬುದ್ಧನಲ್ಲಿದ್ದ ಗುಣ ಹಾಗೂ ಸಾಮರ್ಥ್ಯಗಳನ್ನು ವರ್ಣಿಸುವ ಸಂದರ್ಭದಲ್ಲಿ ಬುದ್ಧನೆಂದರೆ ಏನೇನು ಎಂದು ತಿಳಿಸುತ್ತಾ ಬುದ್ಧನೆಂದರೆ ಸತ್ಯ , ಶಾಂತಿ , ಕ್ರಾಂತಿ , ಕರುಣೆ ಮತ್ತು ಬೆಳಕುಗಳ ಪ್ರತೀಕ ಎಂದು ಹೇಳಿದ್ದಾರೆ .
ಸ್ವಾರಸ್ಯ : ಇಂದಿನ ದಿನಗಳಲ್ಲಿ ಬುದ್ಧನ ಈ ಗುಣಗಳು ಅತ್ಯವಶ್ಯಕವಾಗಿರುವುದನ್ನು ಕವಿ ತಿಳಿಸಿರುವ ರೀತಿ ಸ್ವಾರಸ್ಯಪೂರ್ಣವಾಗಿದೆ .
5. “ ಬುದ್ಧ ನಡೆಯಮ್ಮನಡೆ ಬುದ್ಧ ನುಡಿಯೆಮ್ಮನುಡಿ “
ಉತ್ತರ : ಆಯ್ಕೆ : ಈ ವಾಕ್ಯವನ್ನು ಅರವಿಂದ ಮಾಲಗತ್ತಿಯವರು ಬರೆದಿರುವ ‘ ವಿಶ್ವತೋಮುಖ – ಹೂ ಬಲುಭಾರ ‘ ಎಂಬ ಕವನ ಸಂಕಲನದಿಂದ ತೆಗೆದುಕೊಳ್ಳಲಾಗಿರುವ ‘ ಮರಳಿ ಮನೆಗೆ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಜಾತಿ – ಮತ – ಧರ್ಮಗಳನ್ನು ಮೀರಿ , ಲಿಂಗಭೇದ , ಮೇಲು – ಕೀಳುಗಳನ್ನು ತೊರೆದು ಬುದ್ಧನ ನಡೆ – ನುಡಿಗಳನ್ನು ಅನುಸರಿಸಬೇಕೆಂದು ಆಶಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ .
ಸ್ವಾರಸ್ಯ : ಸರ್ವಸಮಾನತೆಯಿಂದ ಕೂಡಿದ ಸಮಾಜ ನಿರ್ಮಾಣವಾಗಬೇಕಾದಲ್ಲಿ ನಾವು ಬುದ್ಧನ ನಡೆ – ನುಡಿಗಳನ್ನು ಪಾಲಿಸಬೇಕೆಂದಿರುವುದು ಇಲ್ಲಿ ಸ್ವಾರಸ್ಯಪೂರ್ಣವಾಗಿದೆ .
ಉ ) ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ .
1. ನಿತ್ಯ : ಅನಿತ್ಯ : : ಸತ್ಯ ;……….
2. ನಮ್ಮುಸಿರು : ಲೋಪ ಸಂಧಿ : ಸೀಮೆಯಾಚೆ :……………
3. ರಥ : ತೇರು : : ಪಥ :…………
4. ಸುಖವು : ಪ್ರಥಮ ವಿಭಕ್ತಿ : : ಮನೆಗೆ :…………..
5. ನಿತ್ಯ : ನಿಚ್ಚ : : ವೈಶಾಖ :…………
ಸರಿ ಉತ್ತರಗಳು .
1. ಅಸತ್ಯ , ಮಿಥ್ಯ
2 , ಆಗಮಸಂಧಿ ( ಯಕಾರಾಗಮಸಂಧಿ )
3. ದಾರಿ
4. ಚತುರ್ಥಿ ವಿಭಕ್ತಿ
5. ಬೇಸಿಗೆ
9th Standard Marali Manege Kannada Notes Question Answer Pdf
ಇತರೆ ಪದ್ಯಗಳು :