9th Class Whatever We Do English Notes Pdf 9th Standard Whatever We Do Lesson Extract Questions Answers Pdf 2023 Kseeb Solutions For Class 9 English Chapter 4 Summary In Kannada Download Pdf
Table of Contents
Class 9 English Chapter 4 Question Answer Pdf
Class : 9th Standard
Chapter Name: Whatever We Do
Kseeb Solutions For Class 9 English Chapter 4
English Chapter 4 Summary In Kannada
ಕನ್ನಡದಲ್ಲಿ ಸಾರಾಂಶ:
ನಾವು ಸಂದರ್ಭಕ್ಕನುಸಾರವಾಗಿ ಹೇಗೆ ಉತ್ತಮ ನಡೆನುಡಿಯನ್ನು ಪ್ರದರ್ಶಿಸಬಹುದು ಎಂದು ಈ ಪಾಠದಲ್ಲಿ ಚರ್ಚಿಸಲಾಗಿದೆ.
ನಾವು ಯಾವುದೇ ಕೆಲಸ ಮಾಡಿದರೂ ಅದನ್ನು ಉತ್ತಮವಾಗಿ ಮಾಡಲು ಪ್ರಯತ್ನಿಸಬೇಕು. ನಮ್ಮ ಕೆಲಸ, ನಮ್ಮ ಮಾತು , ಯಾವುದಾದರೂ ಸರಿ ಅದನ್ನು ಉತ್ತಮವಾಗಿ ಮಾಡಬೇಕು. ಜಯ ಮತ್ತು ಅಪಜಯಗಳು ಯಾವಾಗಲು ಪರ್ಯಾಯವೇ ಹೊರತು ನಮ್ಮ ಗುರಿಗಳಲ್ಲ ಆದ್ದರಿಂದ ನಾವು ಪ್ರಗತಿ ಹೊಂದಿದ್ದೇನೆ. ಜಯಿಸಿದ್ದೇವೆ. ಸುಸಂಸ್ಕೃತರಾಗಿದ್ದೇವೆ. ಎಂದು ತೃಪ್ತಿಪಡಬೇಕಾಗಿಲ್ಲ. ನಾವು ನಿರಂತರವಾಗಿ ನಮ್ಮ ಕಾವ್ಯವನ್ನು ಉತ್ತಮವಾಗಿ ಮಾಡಲು ಪ್ರಯತ್ನಿಸಬೇಕು.
ನಾವು ಯಾರಿಗಾದರೂ ಧನ್ಯವಾದ ಹೇಳಬೇಕಾದಾಗ ” ಧನ್ಯವಾದಗಳು ಅಥವಾ ತುಂಭ ಧನ್ಯವಾದಗಳು” ಎಂದು ಹೆಳಿದರೆ ಅಷ್ಟೋಂದು ಉತ್ತಮವಾಗಿರುವುದಿಲ್ಲ. ಅದರ ಬದಲಿಗೆ ಸಮಯ ಮತ್ತು ಸಂದರ್ಭಕ್ಕನುಣವಾಗಿ ಅಥವಾ ನಿಮ್ಮಿಂದ ನನಗೆ ತುಂಬಾ ಸಹಾಯವಾಗೆದೆ. ನನ್ನ ಹೃದಯ ಪೂರ್ವಕ ಧನ್ಯವಾದಗಳು ಎಂದು ಉತ್ತಮ ರೀತಿಯಲ್ಲಿ ಹೇಳಬಹುದು. ಇದು ಧನ್ಯವಾದ ಹೇಳುವ ಸರಳ ರೀತಿ, ನಾವು ಯೋಚಿಸಿದರೆ, ನಾವು ಕಲಿಯಬಹುದು ಎಂದು ನಿರೂಪಕರು ಹೇಳುತ್ತಾ ಈ ವಿಷಯವನ್ನು ಉದಾಹರಣೆ ಮೂಲಕ ವಿವರಿಸುತ್ತಾರೆ, ಲೇಖಕರು ತಾವು ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಯ ಹಿರಿಯ ಅಧಿಕಾರಿಯವರ ಜೊತೆ ಭೇಟಿ ಮಾಡುವುದಿರುತ್ತದೆ. ಆದರೆ ಅವರು ಸ್ವಲ್ಪ ತಡವಾಗಿ ಹೋಗುತ್ತಾರೆ, ಅದಕ್ಕೆ ಅವರು ದಯವಿಟ್ಟು ಕ್ಷಮಿಸಿ ನಿಮ್ಮನ್ನು ಕಾಯುವಂತೆ ಮಾಡಿದೆ ಎಂದು ಕ್ಷಮಾಪಣೆ ಕೇಳುತ್ತಾರೆ. ಅದಕ್ಕೆ ಅವರ ಹಿರಿಯ ಅಧಿಕಾರಿ ಪರವಾಗಿಲ್ಲ ನಿಮಗಾಗಿ ಕಾಯುವುದು ನನಗೆ ಸಂತೋಷದ ವಿಷಯ ಎನ್ನುತ್ತಾರೆ. ಇದೊಂದು ಉತ್ತಮ ನಡವಳಿಕೆಯ ಸಂಭಾಷಣೆ ಲೆಖಕರು ಇನ್ನೂ ಮುಂದುವರಿದು ನಿಮ್ಮ ಈ ಮಾತುಗಳನ್ನು ಕೇಳಲು ನನಗೆ ಸಂತೋಷವಾಗುತ್ತಿದೆ. ಎಂದು ತಾವು ಹೇಳಬಹುದಿತ್ತು ಎನ್ನುತ್ತಾರೆ.
ನಮ್ಮ ನಡೆ-ನುಡಿಯ ಉತ್ತಮತೆಯ ವಿಚಾರವಾಗಿ ಮಾತಾನಾಡಲು ಹೊದಾಗ ಹೋಲಿಕೆಯ ಪ್ರಶ್ನೆ ಏಳುತ್ತದೆ. ಬದಲಿದ್ದರೆ ಉತ್ತಮ ಎಂದು ಹೇಳಬೇಕಾಗುತ್ತದೆ. ಗಿಂತ ಎಂಬ ಪದವನ್ನು ಉಪಯೋಗಿಸಬೇಕಾಗುತ್ತದೆ. ನಾವು ಇನ್ನೊಬ್ಬರಿಗೆ ಹೋಲಿಸಿಕೊಳ್ಳುವ ಬದಲು ನಮಗೆ ನಾವೆ ಹೋಲಿಸಿಕೊಳ್ಳುವುದು ಉತ್ತಮ ಎಂದು ಬುದ್ದಿವಂತರು ಹೇಳುತ್ತಾರೆ. ನಾನು ನನ್ನ ಕಳೆದ ವರ್ಷದ ಕಾರ್ಯಕ್ಷಮತೆಯನ್ನು ಈ ವರ್ಷದ ಕಾರ್ಯಕ್ಷಮತೆಗಿಂತ ಉತ್ತಮವಾಗಿದೆಯೆ ಅಥವಾ ಇಲ್ಲವೆ ಎಂದು ಹೋಲಿಸಿ ನೋಡುತ್ತನೆಂದು ಲೇಖಕರು ಹೇಳುತ್ತಾರೆ.
ನಾವು ಮಾಡುವ ಕೆಲಸಕ್ಕೆ ಮಾತುಗಳನ್ನು ಸೇರಿಸಿ ಮತ್ತು ಮಾತುಗಳನ್ನಾಡುವಾಗ ಕೆಲಸವನ್ನು ಮಾಡುವುದರ ಮೂಲಕ ನಾವು ನಮ್ಮ ನಡೆ – ನುಡಿ ಕಾರ್ಯವನ್ನು ಉತ್ತಮ ಪಡಿಸಿಕೊಳ್ಳಬಹುದು ಇದಕ್ಕಾಗಿ ಲೇಖಕರು ಒಂದು ಘಟನೆಯನ್ನು ವಿವರಿಸುತ್ತಾರೆ. ಒಮ್ಮೆ ಲೇಖಕರು ಲಿಫ್ಟ್ಗಾಗಿ ಕಾಯತ್ತಿರುತ್ತಾರೆ ಲಿಪ್ಟ್ ಬಂದಾಗ ಅದರಲ್ಲಿ ಇಬ್ಬರು ಶಾವು ಲಿಫ್ಟ್ ನಲ್ಲಿ ತುಂಬಿಕೊಂಡು ಬಂದ ಪ್ಯಾಕೆಟ್ಗಳನ್ನು ಅವಸರದಿಂದ ತೆಗೆಯುತ್ತಾರೆ. ಅವರು ಬೇರೆಯವರಿಗೆ ತೊಂದರೆ ಕೊಡಬಾರದೆಂದು ಅವಸರವಾಗಿ ತೆಗೆಯುವುದನ್ನು ಲೇಖಕರು ಕೊಡಬಾರದೆಂದು ಅವಸರವಾಗಿ ತೆಗೆಯುವುದನ್ನು ಲೆಖಕರು ಗಮನಿಸುತ್ತಾರೆ.
ನಂತರ ಅವರು ಲಿಫ್ಟ್ ನಲ್ಲಿ ತಮ್ಮ ತರಭೇತಿ ಕೇಂದ್ರಕ್ಕೆ ಹೋಗುತ್ತಾರೆ ತರಗತಿಯಲ್ಲಿ ನಡೆದ ಘಟನೆಯನ್ನು ತಿಳಿಸುತ್ತಾರೆ. ಈ ಸಂದರ್ಭದಲ್ಲಿ ಆ ಇಬ್ಬರು ಜನ ಇನ್ನು ಹೇಗೆ ಉತ್ತಮವಾಗಿ ವರ್ತಿಸಬಹುದಿತ್ತು. ಎಂದು ಲೇಖಕರು ತರಬೇತಿ ವಿದ್ಯಾರ್ಥಿಗಳನ್ನು ಕೇಳುತ್ತಾರೆ. ಒಂದು ನಿಮಿಷ ಸಾರ್ , ತಕ್ಷಣ ನಮ್ಮ ವಸ್ತುಗಳನ್ನು ತೆಗೆಯುತ್ತೇವೆ.ಎಂದು ಅವರು ನಿಮಗೆ ಹೇಳಬಹುದಿತ್ತು. ಎಂದು ಒಬ್ಬ ವಿದ್ಯಾರ್ಥಿ ಹೇಳುತ್ತಾನೆ. ನೀವು ಅವರಿಗೆ ಸಹಾಯ ಹಸ್ತ ಚಾಚುವುದು ಬಗೆ ಯೋಚಿಸಬಹುದಿತ್ತು. ಎಂದು ಇನ್ನೊಬ್ಬ ವಿದ್ಯಾರ್ಥಿ ಹೇಳುತ್ತಾನೆ.
ಅನೆಕ ಸಾರಿ ನಾವು ಕೇಳಿದ ಹಾಗೆ ವಸ್ತುಗಳನ್ನು ಅಂಗಡಿಯವರು ಒಂದೂ ಮಾತನಾಡದೆ ಸುಮ್ಮನೆ ತಂದು ಕೊಡುತಾ ಕನಿಷ್ಟ “ಸರಿ ಸಾರ್ ” ಎಂದು ಎರಡು ಪದಗಳನ್ನಾದರೂ ಮಾತನಾಡಬಹುದು. ಎಂದು ಲೇಖಕರು ಹೇಳುತ್ತಾರೆ.
ಕೆಲವೊಂದು ಉತ್ತಮ ಹೋಟೇಲ್ಗಳಲ್ಲಿ ಪರಿಚಾರಕರು ಬಂದು ಗುಡ್ ಮಾರ್ನಿಂಗ್ ಅಥವಾ ಸ್ವಾಗತದ ನಗೆ ಬೀರಿ ನಮ್ಮ ಅರ್ಡರ್ ಗಾಗಿ ಕಾಯುತ್ತಾರೆ. ಆದರೆ ಅನೇಕ ಹೋಟೇಲ್ ಗಳಲ್ಲಿ ಆಹಾರ ಅಥವಾ ಉತ್ತಮ ಸೌಲಭ್ಯಗಳಿಲ್ಲದಿದ್ದರೂ ಪರಿಚಾರಕರು ಉತ್ತಮರೀತಿಯಲ್ಲಿ ನಡೆದುಕೊಳ್ಳುವುದಿಲ್ಲ ಎಂದು ಬಂದು ನಿಂತು ನಮ್ಮ ಆರ್ಡರ್ ಗಾಗಿ ಕಾಯುತ್ತಾರೆ. ಏನು ಬೇಕು ಸರಿ ಸಾರ್ ಎಂದು ಎರಡು ಶಬ್ದಗಳನ್ನಾದರೂ ಮಾತನಾಡಬಹುದು.
ವೈದ್ಯರು ರೋಗಿಗಳ ಹತ್ತಿರ ಸೂಕ್ತವಾಗಿ ಮಾತನಾಡುವುದರ ಮೂಲಕ ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಬಹುದು. ಅನೇಕ ವೈದ್ಯರು ತುಂಬ ಗಂಭೀರವಾಗಿ ಅಥವಾ ಮುಖಗಂಟಿಕ್ಕಿ ಕೊಂಡಿರುತ್ತಾರೆ. ತಾವು ತುಂಬ ಗಂಭೀರವಾದ ಕೆಲಸ ಮಾಡುತ್ತಿದ್ದೇವೆಂದು ತಿಳಿದಿರುತ್ತಾರೆ . ವೈದ್ಯರ ಒಳ್ಳೆಯ ಮಾತುಗಳು ವೈದ್ಯೋಪಚಾರದ ಒಂದು ಭಾಗವೂ ಹೌದು ವೈದ್ಯರ ಆಶಿಯತೆಯ ಮಾತುಗಳು ಅಥವಾ ಅವರ ಒಂದು ಮುಗುಳುನಗೆ ರೋಗಿಗಳು ಧೈರ್ಯ ಮಾತುಗಳು ಅಥವಾ ಅವರ ಒಂದು ಮುಗುಳುನಗೆ ರೋಗಿಗಳು ಗುಣಮುಖರಾಗಲು ಸಹಾಯವಾಗುತ್ತದೆ.
ಒಮ್ಮೆ ಲೇಖಕರು “ಸಿಟಿ ಹಾಸ್ಪಿಟಲ್ ಗೆ ಹೋಗಲು ಆಟೋ ಹಿಡಿಯುತ್ತಾರೆ. ಆಟೋದವನು ಸುಮ್ಮನೆ ಮೀಟರ್ ಖಾಕಿ ಕೂರಿಸಿಕೊಂಡು ಹೊರಡುತ್ತಾನೆ. ತಾವು ಹೋಗುವ ಸ್ಥಳಕ್ಕೆ ಅವನು ಕರೆದುಕೊಂಡು ಹೋಗುವುದು. ಒಳ್ಳೆಯ ನಡತೆ, ಆದರೆ ಸರಿ ಸಾರ್, ದಯವಿಟ್ಟು ಬನ್ನಿ ಅಥವಾ ಬನ್ನಿ ಎಂದು ಆಟೋದವನನ್ನು ಹೇಳಬಹುದು ಎಂದು ಲೇಖಕರು ಹೇಳುತ್ತಾರೆ. ಇನ್ನೊಮ್ಮೆ ಲೇಖಕರು ಆಟೋದವನನ್ನು ಸೆಂಟ್ರಲ್ ಮಾರ್ಕೆಟ್ ಗೆ ಕರೆದಾಗ, ಕ್ಷಮಿಸಿ ಸಾರ್ ನಾನು ಆಟೋ ಬಿಟ್ಟು ಕೊಡುವ ಸಮಯ ಎಂದು ವಿಷಯವಾಗಿ ಹೇಳುತ್ತಾನೆ. ಜೊತೆಗೆ ಅವನು ಇನ್ನೊಬ್ಬ ಆಟೋದವನನ್ನು ಕರೆದು ಗುರು. ಸೆಂಟ್ರಲ್ ಮಾರ್ಕೆಟ್ ಗೆ ಕರೆದಾಗ ಕ್ಷಮಿಸಿ ಸಾರ್ ನಾನು ಆಟೋ ಬಿಟ್ಟು ಕೊಡುವ ಸಮಯ ಎಂದು ವಿಷಯವಾಗಿ ಹೇಳುತ್ತಾನೆ. ಜೊತೆಗೆ ಅವನು ಇನ್ನೊಬ್ಬ ಅಟೋದವನನ್ನು ಕರೆದು ಗುರು , ಸೆಂಟ್ರಲ್ ಮಾರ್ಕೆಟ್ ಎಂದಾಗ ಅವನು ಒಪ್ಪುತ್ತಾನೆ. ನಮಗೆ ಅಗುವುದಿಲ್ಲ. ಎಂದು ವಿನಯವಾಗಿ ಹೇಳುವ ರೀತಿಯನ್ನು ಇದು ತೋರಿಸುತ್ತದೆ.
ಭಿಕ್ಷುಕರಿಗೆ ಭಿಕ್ಷೆಯನ್ನು ನೀಡುವುದು. ಒಂದು ಸಾಮಾನ್ಯ ವಿಷಯ ಇದನ್ನು ಸಹ ನಾವು ಕರುಣೆಯಿಂದ ನೀಡಬಹುದು ಆದರೆ ಜನರು ಭಿಕ್ಷುಕರೊಂದಿಗೆ ನಡೆದುಕೊಳ್ಳುವ ರೀತಿಯಿಂದಲೆ ಬೇರೆ ಕೆಲವರು ಭಿಕ್ಷುಕರು ಮುಖವನ್ನು ನೋಡಲೂ ಇಷ್ಟಪಡುವುದಿಲ್ಲ. ಅವರು ತುಂಬಾ ಪೀಡಿಸಿದಾಗ ಮುಂದೆ ಹೋಗು ಮುಂದೆ ಹೋಗಪ್ಪ ಎನ್ನುತ್ತೆವೆ ಕೆಲವರು ಸನ್ನೆಯಿಂದಲೇ ಅವರನ್ನು ದೂರವಿಡುತ್ತಾರೆ. ಭಿಕ್ಷೆ ಕೊಡುವುದು ತುಂಬಾ ಅನಿವಾರ್ಯವಾದಾಗ ಕೆಲವರು ಗೊಂಗುಟ್ಟತ್ತಾ ಕೋಪದಿಂದ ಕೊಡುತ್ತಾರೆ. ನಾವು ಭಿಕ್ಷೆಯನ್ನು ಕೊಡಲು ತಿರ್ಮಾನಿಸಿದರೆ, ಗೌರವದಿಂದ ಕೊಡುವುದು ಉತ್ತಮ ನಡುವಳಿಕೆಯಾಗುತ್ತದೆ. ಬಾಂಬೆಯಲ್ಲಿ ಜನರು ಭಿಕ್ಷೆಯನ್ನು ಕೊಡಲಾಗದಿದ್ದಲ್ಲಿ ವಿನಯದಿಂದ ಮಾಫ್ ಕರೋ ಎನ್ನುತ್ತಾರೆ. ಅಂದರೆ ತಮಗೆ ಭಿಕ್ಷೆ ಕೊಡಲಾಗುತ್ತಿಲ್ಲ ದಯವಿಟ್ಟು ಕ್ಷಮಿಸಿ ಎನ್ನುತ್ತಾರೆ.
ಇಲ್ಲಿ ವಾಹನಗಳನ್ನು ನಿಲ್ಲಿಸಬಾರದು ಇಲ್ಲಿ ಧೂಮಪಾನ ಮಾಡಬಾರದು ಪ್ರವೇಶವಿಲ್ಲ ಸಂದರ್ಶಕರ ವಾಹನಗಳಿಗೆ ಪ್ರವೇಶವಿಲ್ಲ. ಹೀಗೆ ಅನೇಕ ಸೂಚನೆ ಸಲಹೆ, ಮತ್ತು ಅಜ್ಞೆಗಳನ್ನು ನಾವು ನೋಡುತ್ತೆವೆ ಇವು ಸ್ವಲ್ಪ ಒರಟಾಗಿ ಕಾಣಿಸಿದರೂ ಸಹ ಸಾರ್ವಜನಿಕ ಸಲಹ ಸೂಚನೆಗಳು ಸಂಕ್ಷಿಪ್ತವಾಗಿರುವುದು ಅನಿವಾರ್ಯ, ಇಲ್ಲಿ ಧೂಮಪಾನ ಮಾಡದಿರುವುದಕ್ಕಾಗಿ ಧನ್ಯವಾದಗಳು ಎನ್ನುವ ಸಾರ್ವಜನಿಕ ಸೂಚನೆ ಉತ್ತಮ ಬೆಳವಣಿಗೆ.
ಸಲಹೆ, ಸೂಚನೆ ಮತ್ತು ಆಜ್ಞೆಗಳನ್ನು ಅತಿ ನಯವಾಗಿ, ನಾಜೂಕಾಗಿ ಮಾಡಬಹುದು,ದಕ್ಷಿಣಭಾರತದ ಹೋಟೆಲ್ಗಳು ಹಳೆಯ ಮತ್ತು ಸಾಂಪ್ರಾದಾಯಿಕ ತಿಂಡಿ-ತಿನಿಸು ಮತ್ತು ಅಹಾರ ಪದ್ದತಿಗೆ ಹೆಸರುವಾಸಿ. ಅದ್ದರಿಂದ ಕೆಲವು ಹೋಟೆಲ್ ಗಳಿಗೆ ಹೆಚ್ಚು ಜನರ ಅಧಿಕವಾಗಿದ್ದು ಅದನ್ನು ನಿಭಾಯಿಸುವುದರ ಕಷ್ಟವಾಗುತ್ತದೆ. ಅಂತಹ ಹೋಟೆಲ್ ಗಳಲ್ಲಿ ಇಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳಬೇಡಿ ಎನ್ನುವ ಸೂಚನೆಗಳನ್ನು ನಾವು ನೋಡುತ್ತೇನೆ. ಇದು ಅಸಂಬದ ಸೂಚನೆ ಎಂದು ಶ್ರೀಖಲು ಹೇಳುತ್ತಾರೆ. ದಯವಿಟ್ಟು ಕ್ಷಮಿಸಿ ಕಾಯುತ್ತಿರುವ ಗಿರಾಕಿಗಳಿಗೆ ಸ್ಥಳಾವಕಾಶ ಮಾಡಿಕೊಡಿ ದಯವಿಟ್ಟು ಕಾಯುತ್ತಿರುವ ನಿಮ್ಮ ಸ್ನೇಹಿತರಿಗೆ ಅವಕಾಶ ಮಾಡಿಕೊಡಿ ಎನ್ನುವ ಸೂಚನೆಗಳು ತುಂಬಾ ಸೌಜನ್ಯದಿಂದ ಕೂಡಿದಂತಹವು ಎಂದು ಲೇಖಕರು ಹೇಳುತ್ತಾರೆ.
ಖರ್ಚನ್ನು ಕಡಿಮೆ ಮಾಡುವ ದೃಷ್ಟಿಯಿಂದ ಸಂಕ್ಷಿಪ್ತ ಟೆಲಿಗ್ರಾಮ್ ಕಳಿಸುವುದು ಎಲ್ಲರ ಅಭ್ಯಾಸವಾಗಿತ್ತು. ಯಾರಾದರು ತಾನು ಊರಿಗೆ ಬರುತ್ತಿದ್ದೇನೆ, ರೈಲ್ವೇ ಸ್ಟೇಷನ್ ಗೆ ಬಾ ಎಂದು ತನ್ನ ಸಹೋದರನಿಗೆ ಟೆಲಿಗ್ರಾಮ್ ಕಳಿಸುವಾಗ ಗುರುವಾರ ಬಾಂಬೆಗೆ ತಲುಪುತ್ತೇವೆ. ಶತಾಬ್ದಿ- ಸ್ಠೇಷನ್ ನಲ್ಲಿ ಬೇಟಿಯಾಗು ಎಂದು ಕಳಿಸುತ್ತಿದ್ದರು ಕೇವಲ ಒಂದು ಪದ ದಯವಿಟ್ಟು ಎನ್ನುವುದನ್ನು ಉಳಿಸುವುದಕ್ಕಾಗಿ ನಾವು ನಮ್ಮ ಒಳ್ಳೆಯ ತನವನ್ನೆ ಮರೆಯುತ್ತೆನೆ ಎಂದು ಲೇಖಕರು ಹೇಳುತ್ತಾನೆ ಈಗ ಟೆಲಿಫೋನ್ ಮತ್ತು ಮೊಬೈಲ್ ಬಂದಿರುವುದರಿಂದ ಟೆಲಿಗ್ರಾಮ್ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ. ಆದರೆ ಸದಾಚಾರದ ಸಮಸ್ಯೆ ಹಾಗೆ ಉಳಿದೆವೆ. ನಾವು ಯಾರಿಗಾದರೂ ಪೋನು ಮಾಡಿದಾಗ ಯಾರು? ಎಂದು ಕೇಳುವುದೆ ಜಾಸ್ತಿ ದಯವಿಟ್ಟು ತಾವು ಯಾರೆಂದು ಕೇಳಬಹುದೆ ಎಂದು ಉತ್ತಮ ರೀತಿಯಲ್ಲೂ ಪ್ರತಿಕ್ರಿಯಿಸಬಹುದೆಂದು ಲೇಖಕರ ಅಭಿಪ್ರಾಯ.
ಯಾರಾದರೂ ಧನ್ಯವಾದ ತಿಳಿಸಿದಾಗ ಪರವಾಗಿಲ್ಲ ಬಿಡಿ ಅದಲ್ಲ ಏಕೆ? ಎಂದು ಹೇಳುವ ಪರಿಪಾಠವಿತ್ತು. ಆದರೆ ಈಗ ನಿಮ್ಮ ಧನ್ಯವಾದಗಳಿಗೆ ಸ್ವಾಗತ ಅಥವಾ ಸ್ವಾಗತ ಎಂದು ಹೇಳುವ ರೂಢಿ ಉತ್ತಮವಾಗಿದೆ.
ನಾವು ಇನ್ನೊಬ್ಬರ ಜೊತೆ ಮಾತಾನಾಡುವಾಗ ಸಂಭಾಷಣೆಯನ್ನು ಉತ್ತಮ ಪಡಿಸಿಕೊಳ್ಳಬೇಕಾದರೆ ನಾನು ಎಂದು ಮೊದಲು ಉಪಯೋಗಿಸುವ ಬದಲು ನೀವು ಎಂದು ಹೇಳುವುದು ಉತ್ತಮ. ನಮಗೆ ಯಾರಾದರೂ ಒಳ್ಳೆಯ ಔತಣಕೂಟವನ್ನು ಏರ್ಪಡಿಸಿದ್ದಾಗ ನೀವು ಏರ್ಪಡಿಸಿದ ಔತಣಕೂಟ ತುಂಬಾ ಚೆನ್ನಾಗಿತ್ತು. ನಿಮಗೆ ನನ್ನ ಧನ್ಯವಾದಗಳು ಎಂದು ಹೇಳಬಹುದು ಯಾರಾದರೂ ನಮಗೆ ಪತ್ರ ಬರದಿದ್ದರೆ ನಿಮ್ಮ ಪತ್ರವನ್ನು ಓದಿ ನನಗೆ ತುಂಬಾ ಸಂತೋಷವಾಯಿತು. ಎಂದು ಹೇಳಬಹುದು.
ನಮ್ಮ ನಡೆ-ನುಡಿ ಉತ್ತಮಪಡಿಸಿಕೊಳ್ಳಲು ಯಾವುದೆ ಮಿತಿಯಿಲ್ಲ ಯಾವುದೆ ಒಂದು ಕೆಲಸ ಅಥವಾ ಮಾತು ಉತ್ತಮ ಎಂದು ಹೇಳಲು ಸಾದ್ಯವಿಲ್ಲ. ಅದಕ್ಕೆ ಯಾವುದೆ ಒಂದು ಕೆಲಸ ಅಥವಾ ಮಾತು ಉತ್ತಮ ಎಂದು ಹೇಳಲು ಸಾಧ್ಯವಿಲ್ಲ ಅದಕ್ಕೆ ಯಾವುದೆ ನಿಯಮವಿಲ್ಲ ಸಂದರ್ಭಕ್ಕನುಸಾರವಾಗಿ ಉತ್ತಮವಾಗಿ ಮಾತನಾಡಬೆಕು ಮತ್ತು ನಡೆದುಕೊಳ್ಳಬೇಕು ಇದರ ಪ್ರಾಮುಖ್ಯತೆಯ ಅರಿವು ಮತ್ತು ಅದರ ಬಗ್ಗೆ ಜಾಗೃತರಾಗಿರಬೆಕೆಂದು ಲೇಖಕರು ಅಭಿಪ್ರಾಯ ಪಡುತ್ತಾರೆ.
Whatever We Do Pdf 9th Standard
PDF Name | 9th English Whatever We Do Notes Pdf |
No. of Pages | 07 |
PDF Size | 83KB |
Language | English |
Category | English Notes |
Download Link | Available ✓ |
Topics | 9th Class English Whatever We Do Notes Pdf |
9th Standard Whatever We Do Lesson Extract Questions Answers Pdf
9th Standard Whatever We Do Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ
Whatever We Do Lesson In English Notes
Whatever We Do summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
9th Standard Whatever We Do English Notes Pdf
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
ಇಲ್ಲಿ ನೀವು 9th Standard Whatever We Do Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 9th Standard Whatever We Do Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download NowFAQ:
How do you react if others make you wait?
oh! It’s ok”, “It’s pleasure waiting for you”.
The author says, “Let us make them better and better”. What does the word ‘them’ stand for here?
According to author them stands for our actions and our words.