9th Standard The Three Questions English Notes Pdf

9th Standard The Three Questions English Notes Pdf Summary In Kannada 9th Class The Three Questions Extract Questions Answers Pdf 9th the three questions answers Mcq Pdf kseeb solutions English Notes Class 9 English Chapter 2 Download 2023

9th Standard The Three Questions English Notes Pdf

Class : 9th Standard

Chapter Name:  The Three Questions

9th Standard The Three Questions English Notes Pdf
9th Standard The Three Questions English Notes Pdf

9th Standard The Three Questions Pdf Summary In kannada

ಕನ್ನಡ ಸಾರಾಂಶ “ಮೂರು ಪ್ರಶ್ನೆಗಳು”
ಈ ಕಥೆಯಲ್ಲಿ ರಾಜನೊಬ್ಬನ ಮೂರು ಪ್ರಶ್ನೆಗಳು ಮತ್ತು ಅವುಗಳಿಗೆ ಅವು ಉತ್ತರಗಳನ್ನು ಪಡೆದ ಬಗೆಯನ್ನು ಕೌಂಟ್‌ ಲಿಯೋ ಟಾಲ್‌ ಸ್ಟಾಯ್‌ ಅವರು ಸುಂದರವಾಗಿ ವಿವರಿಸಿದ್ದಾರೆ. ಒಬ್ಬ ರಾಜನಿಗೆ ತಾನು ಮೂರು ಪ್ರಶ್ನೆಗಳಿಗೆ ಉತ್ತರವನ್ನು ತಿಳಿದುಕೊಂಡರೆ ತನ್ನ ಜೀವನದಲ್ಲಿ ವಿಫಲನಾಗುವುದಿಲ್ಲ ಎನ್ನುವ ಯೋಚನೆ ಬರುತ್ತದೆ. ಆ ಮೂರು ಪ್ರಶ್ನೆಗಳು ಹೀಗಿದ್ದವು. 1. ಯಾವುದಾದರೂ ಕೆಲಸವನ್ನು ಅರಂಭಿಸಲು ಸೂಕ್ತ ಸಮಯ ಯಾವುದು? 2. ರಾಜ ಯಾರನ್ನು ಪ್ರಮುಖ ವ್ಯಕ್ತಿ ಎಂದು ನಿರ್ಧರಿಸಬೇಕು? ಹಾಗೂ 3ನೇ ಪ್ರಶ್ನೆ ರಾಜನ ಪ್ರಮುಖ ಕಾರಣವೇನು?
ತನ್ನ ಈ ಮೂರು ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದವರಿಗೆ ಬಹುಮಾನವನ್ನು ನೀಡುವುದಾಗಿ ತಿಳಿಸಿ ತನ್ನ ರಾಜ್ಯಾದ್ಯಂತ ಧೂತರನ್ನು ಕಳಿಸುತ್ತಾನೆ. ಅನೇಕ ಬುದ್ದಿವಂತರು ರಾಜನಲ್ಲಿಗೆ ಬಂದು ಬೇರೆ ಬೇರೆ ರೀತಿಯ ಉತ್ತರಗಳನ್ನು ಕೊಡುತ್ತಾರೆ.
ರಾಜನ ಮೊದಲ ಪ್ರಶ್ನೆಗೆ ಕೆಲವರು ಕೊಟ್ಟ ಉತ್ತರಗಳು ಹೀಗಿದ್ದವು. ರಾಜ ವೇಳಾಪಟ್ಟಿಯನ್ನು ತಯಾರಿಸಿಕೊಂಡು ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ರಾಜ ಕೆಲಸ ಮಾಡಲು ಸೂಕ್ತ ಸಮಯ ಯಾವುದು ಎಂದು ಮೊದಲೇ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ರಾಜನಿಗೆ ಕೆಲಸ ಮಾಡಲು ಒಂದು ಬುದ್ದಿವಂತರ ಸಮಿತಿ ರಚಿಸಬೇಕು ಎಂದು ಹೇಳುತ್ತಾರೆ. ತುರ್ತು ಕೆಲಸಗಳನ್ನು ಮಾಡುವುದೇ ಸೂಕ್ತ ಸಮಯ ಎಂದು ಮತ್ತು ಕೆಲವರು ಹೇಳುತ್ತಾರೆ. ತುರ್ತು ಕೆಲಸಗಳನ್ನು ಮಾಡಲು ಸೂಕ್ತ ಸಮಯ ಯಾವುದು ಎಂದು ನಿರ್ಧರಿಸಲು ಭವಿಷ್ಯವನ್ನು ತಿಳಿಯಬೇಕು. ಭವಿಷ್ಯವನ್ನು ತಿಳಿಯಲು ಜ್ಯೋತಿಷಿಗಳ ಹತ್ತಿರ ಹೋಗಬೇಕು ಎಂದು ಕೆಲವರು ಹೇಳುತ್ತಾರೆ.
ರಾಜನ ಎರಡನೆ ಪ್ರಶ್ನೆಗೆ, ಕೆಲವರು ರಾಜನ ಸಲಹಾ ಸಮಿತಿಯವರು ಪ್ರಮುಖರು ಎಂದು ಹೇಳಿದರೆ, ಇನ್ನು ಕೆಲವರು ಪುರೋಹಿತರು, ವೈದ್ಯರು ರಾಜನಿಗೆ ಪ್ರಮುಖರು ಎಂದು ಹೇಳುತ್ತಾರೆ. ಇನ್ನು ಕೆಲವರು ಉಜನಿ ಸೈನಿಕರು ತುಂಬಾ ಅವಶ್ಯಕವಾಗುತ್ತಾರೆ. ಎಂದು ಹೇಳುತ್ತಾರೆ.
ರಾಜನ ಮೂರನೇ ಪ್ರಶ್ನೆಗೆ ರಾಜ ಇತರ ರಾಜ್ಯಗಳ ಮೇಲೆ ದಾಳಿ ಮಾಡಬೇಕು, ಯುದ್ದ ಮಾಡಬೇಕು, ಧಾರ್ಮಿಕ ಪೂಜಾ ಕಾರ್ಯಗಳನ್ನು ಮಾಡಬೇಕು ಎಂದು ಬೇರೆ ಬೇರೆ ಉತ್ತರಗಳನ್ನು ಕೊಡುತ್ತಾರೆ.
ತನ್ನ ಪ್ರಶ್ನೆಗಳಿಗೆ ಬೇರೆ ಬೇರೆ ಉತ್ತರಗಳು ಬಂದಿದ್ದರಿಂದ ರಾಜನಿಗೆ ತೃಪ್ತಿಯಾಗುವ ಬದಲು ಗೊಂದಲದಲ್ಲಿ ಬೀಳುತ್ತಾನೆ. ಆದ್ದರಿಂದ ರಾಜ ಬುದ್ದಿವಂತಿಕೆಗೆ ಹೆಸರುವಾಸಿಯಾದ ಒಬ್ಬ ಜ್ಞಾನಿಯನ್ನು ಭೇಟಿ ಮಾಡಿ ಸಲಹೆ ಕೇಳಲು ತೀರ್ಮಾನಿಸುತ್ತಾನೆ. ರಾಜ ಸಾಮಾನ್ಯ ಪ್ರಜೆಯಂತೆ ವೇಷ ಧರಿಸಿ ಬುದ್ದಿವಂತನನ್ನು ಬೇಟಿ ಮಾಡಲು ಹೋಗುತ್ತಾನೆ.
ರಾಜ ಜ್ಞಾನಿಯ ಮನೆಯ ಹತ್ತಿರ ಹೋದಾಗ ಜ್ಞಾನಿ ತನ್ನ ಮನೆಯ ಮುಂದೆ ಗುದ್ದಲಿಯಿಂದ ಮಣ್ಣನ್ನು ಅಗಿಯುತ್ತಿರುವುದನ್ನು ನೋಡುತ್ತಾನೆ, ಜ್ಞಾನಿ ರಾಜನನ್ನು ಸ್ವಾಗತಿಸಿ ಮನಃ ತನ್ನ ಕಾಯಕವನ್ನು ಮುಂದುವರಿಸುತ್ತಾನೆ. ರಾಜ ಜ್ಞಾನಿಯ ಹತ್ತಿರ ಹೋಗಿ ತನ್ನ ಮೂರು ಪ್ರಶ್ನೆಗಳಿಗೆ ಉತ್ತರ ಹೇಳಬೇಕೆಂದು ಮೂರು ಪ್ರಶ್ನೆಗಳನ್ನು ಹೇಳುತ್ತಾನೆ.
ಜ್ಞಾನಿ ರಾಜ ಕೇಳಿದ ಪ್ರಶ್ನೆಗಳನ್ನು ಕೇಳಿಸಿಕೊಂಡರೂ ಮಾತಾನಾಡುವುದಿಲ್ಲ. ನಿಮಗೆ ತುಂಬಾ ಆಯಾಸವಾಗಿರಬೇಕು ನನಗೂ ಒಂದು ಗುದ್ದಲಿಯನ್ನು ಕೊಡಿ. ನಾನು ಕೆಲಸ ಮಾಡುತ್ತೆನೆನೆಂದು ರಾಜ ಜ್ಞಾನಿಯನ್ನು ಕೇಳುತ್ತಾನೆ. ಜ್ಞಾನಿ ರಾಜನಿಗೆ ಧನ್ಯವಾದ ಹೇಳುತ್ತಾ ಅವನಿಗೂ ಒಂದು ಗುದ್ದಲಿಯನ್ನು ಕೊಡುತ್ತಾನೆ, ರಾಜ ನೆಲವನ್ನು ಅಗೆಯಯುತ್ತಾ ಮಧ್ಯೆ ಮಧ್ಯ ಪ್ರಶ್ನೆಗಳಿಗೆ ಉತ್ತರ ಹೇಳಬೇಕೆಂದು ಕೇಳುತ್ತಾನೆ, ಆದರೆ ಜ್ಞಾನಿ ಯಾವುದೇ ಉತ್ತರ ಕೊಡುವುದಿಲ್ಲ. ಸಂಜೆ ಸೂರ್ಯ ಮುಳುಗುವ ಸಮಯದಲ್ಲಿ ರಾಜ ಗುದ್ದಲಿಯನ್ನು ನೆಲದ ಮೇಲೆ ಇಟ್ಟು ಜ್ಞಾನಿಯ ಹತ್ತಿರ ನಾನು ನಿನ್ನ ಹತ್ತಿರ ಮೂರು ಪ್ರಶ್ನೆಗಳಿಗೆ ಉತ್ತರ ಕೇಳಲು ಬಂದಿದ್ದೇನೆ. ನೀವು ಉತ್ತರವನ್ನು ಹೇಳಿದರೆ ನಾನು ವಾಪಸ್ಸಾಗುತ್ತೇನೆ ಎಂದು ಜ್ಞಾನಿಗ ಹೇಳುತ್ತಾನೆ.

ಅಷ್ಟರಲ್ಲಿ ಯಾರೋ ಓಡಿಬರುತ್ತಿದ್ದಾರೆ ಎಂದು ಜ್ಞಾನಿ ಹೇಳುತ್ತಾನೆ ರಾಜ ತಿರುಗಿ ನೋಡಿದಾಗ ಒಬ್ಬ ಗಡ್ಡಧಾರಿ ವ್ಯಕ್ತಿ ಓಡುತ್ತಾ ಅವರ ಕಡೆ ಬರುತ್ತಿರುತ್ತಾರೆ. ಅವನು ತನ್ನ ಕೈಗಳಿಂದ ಹೊಟ್ಟೆಯನ್ನು ಒತ್ತಿ ಹಿಡಿದುಕೊಂಡಿರುತ್ತಾನೆ. ಹೊಟ್ಟೆಯಿಂದ ರಕ್ತ ಸೋರುತ್ತಿರುತ್ತದೆ. ಅವನು ರಾಜನ ಹತ್ತಿರ ಬಂದು ಪ್ರಜ್ಞಾಹೀನನಾಗಿ ನೆಲದ ಮೇಲೆ ಬೀಳುತ್ತಾನೆ. ರಾಜ ಮತ್ತು ಜ್ಞಾನಿ ಅವನ ಬಟ್ಟೆಯನ್ನು ತೆಗೆದು ನೋಡಿದಾಗ ಅವನ ಹೊಟ್ಟೆಯ ಭಾಗದಲ್ಲಿ ದೊಡ್ಡ ಗಾಯವಾಗಿರುತ್ತದೆ. ರಾಜ ತನ್ನ ಕರವಸ್ತ್ರದಿಂದ ರಕ್ತವನ್ನು ಒರೆಸುತ್ತಾನೆ ಆದರೆ ರಕ್ತ ನಿಲ್ಲುವುದಿಲ್ಲ ರಕ್ತ ನಿಲ್ಲುವವರೆಗೆ ರಾಜ ಗಾಯವನ್ನು ಒರೆಸಿ ಅದಕ್ಕೆ ಬಟ್ಟೆ ಕಟ್ಟುತ್ತಾನೆ.
ಆತ ನಿಶ್ಯಬ್ದನಾಗಿ ಮಲಗುತ್ತಾನೆ. ತುಂಬಾ ರಾಜನಿಗೂ ಆಯಾಸವಾಗಿ ಇಂದು ರಾತ್ರಿ ಅಲ್ಲಿಯೇ ನಿದ್ದೆ ಹೋಗುತ್ತಾನೆ. ಬೆಳಗ್ಗೆ ಎದ್ದಾಗ ರಾಜನಿಗೆ ತಾನು ಎಲ್ಲಿದ್ದೇನೆ, ಗಡ್ಡದಾರಿ ಮನುಷ್ಯ ಯಾರು ಎಂದು ಯೋಚಿಸುವಷ್ಟರಲ್ಲಿ ನನ್ನನ್ನು ಕ್ಷಮಿಸಬೇಕು ಎಂದು ಆ ವ್ಯಕ್ತಿ ರಾಜನಲ್ಲಿ ಕೇಳುತ್ತಾನೆ. ನೀನು ಯಾರು ಎಂದೇ ನನಗೆ ಗೊತ್ತಿಲ್ಲ ನಿನ್ನನ್ನ್ನು ನಾನು ಕ್ಷಮಿಸುವಂತಹ ತಪ್ಪು ಏನು ಮಾಡಿರುವೆ ಎಂದು ರಾಜ ಆತನಿಗೆ ಕೇಳುತ್ತಾನೆ.
ನಾನು ನಿಮಗೆ ಗೊತ್ತಿಲ್ಲ ಆದರೆ ನೀವು ನನಗೆ ಗೊತ್ತು, ನಾನು ನಿಮ್ಮ ಶತ್ರು ನೀವು ನನ್ನ ಸಹೋದರನನ್ನು ಕೊಂದು , ನನ್ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದೀರಿ. ಅದ್ದರಿಂದ ನಾನು ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಿದ್ದೆ. ನೀವು ನಿನ್ನೆ ಮನೆಗೆ ವಾಪಸ್ಸಾಗುವಾಗ ನಿಮ್ಮನ್ನು ಕೊಲ್ಲಬೇಕೆಂದು ನಿರ್ಧರಿಸಿದ್ದೆ ಆದರೆ ಸಂಜೆಯಾದರು ನೀವು ವಾಪಸ್ಸಾಗಲಿಲ್ಲ ಅದ್ದರಿಂದ ನಾನು ಅಡಗಿದ್ದ ಸ್ಥಳವನ್ನು ಬಿಟ್ಟು ಹೊರಟೆ.ನಿಮ್ಮ ಅಂಗರಕ್ಷಕ ನನ್ನನ್ನು ಗುರುತಿಸಿ ಗಾಯಗೊಳಿಸಿದ. ನಾನು ಅವನಿಂದ ತಪ್ಪಿಸಿಕೊಂಡೆ. ಅದರೆ ನೀವು ನನ್ನ ಗಾಯಕ್ಕೆ ಬಟ್ಟೆ ಕಟ್ಟಿ ನನ್ನ ಜೀವನವನ್ನು ಉಳಿಸಿದಿರಿ. ನಾನು ಬದುಕಿದರೆ, ನಿಮ್ಮ ನಂಬಿಕಸ್ಥ ಸೇವಕನಾಗಿ ಸೇವೆ ಮಾಡುತ್ತೇನೆ,ಎಂದು ಗಡ್ಡಧಾರಿ ವ್ಯಕ್ತಿ ರಾಜನಿಗೆ ಹೇಳುತ್ತಾನೆ.
ಒಬ್ಬ ಶತ್ರುವಿನ ಜೊತೆ ಸುಲಭಬಾಗಿ ಶಾಂತಿ ಮತ್ತು ಸ್ನೇಹ ಮಾಡಿಕೊಂಡಿದ್ದಕ್ಕಾಗಿ ರಾಜನಿಗೆ ತುಂಬಾ ಸಂತೋಷವಾಗುತ್ತದೆ, ರಾಜ ಅವನನ್ನು ಕ್ಷಮಿಸುವುದರ ಜೊತೆಗೆ ಅವನ ಆಸ್ತಿಯನ್ನು ಅವನಿಗೆ ಹಿಂದಿರುಗಿಸುತ್ತಾನೆ. ರಾಜ ಅವನನ್ನು ಅಲ್ಲಿಯೇ ಬಿಟ್ಟು ಗುಡಿಸಲಿನಿಂದ ಹೊರಬಂದು ಮುನಿಯ ಹತ್ತಿರ ಹೋಗಿ “ನಾನು ಮತ್ತೊಮ್ಮೆ ಬೇಡಿಕೊಳ್ಳುತ್ತೇನೆ, ನನ್ನ ಪ್ರಶ್ನೆಗಳಿಗೆ ಉತ್ತರಿಸಿ.” ಎಂದು ಕೇಳುತ್ತಾನೆ.
ನಿಮ್ಮ ಪ್ರಶ್ನೆಗಳಿಗೆ ಈಗಾಗಲೇ ಉತ್ತರಿಸಲಾಗಿದೆ. ಎಂದು ಮುನಿ ರಾಜನಿಗೆ ಹೇಳುತ್ತಾನೆ ರಾಜ ತನಗೆ ಅರ್ಥವಾಗಿಲ್ಲವೆಂದು, ವಿವರಿಸಿ ಹೇಳಲು ಕೇಳುತ್ತಾನೆ. ಮುನಿಯು ರಾಜನಿಗೆ ಈ ರೀತಿ ವಿವರಿಸಿ ಹೇಳುತ್ತಾನೆ ಹಿಂದಿನ ದಿನ ರಾಜ ಮುನಿಯ ಮೇಲೆ ಕನಿಕರ ತೋರಿ ನೆಲವನ್ನು ಅಗೆಯೇ ಹೋಗಿದ್ದರೆ, ರಾಜ ಮನೆಗೆ ಹೋಗುತ್ತಿದ್ದ. ಆಗ ರಾಜನ ಶತ್ರು ಆತನ ಮನೆಗೆ ಹೋಗುತ್ತಿದ್ದ. ಆಗ ರಾಜನ ಶತೃ ಆತನ ಮೇಲೆ ದಾಳಿ ಮಾಡಿ ಕೊಲ್ಲುತ್ತಿದ್ದ ಆದ್ದರಿಂದ ರಾಜನಿಗೆ ನೆಲವನ್ನು ಅಗೆಯುತ್ತಿದ್ದ. ಆದ್ದರಿಂದ ರಾಜನಿಗೆ ನೆಲವನ್ನು ಅಗೆಯುತ್ತಿದ್ದ. ಸಮಯ ಅತಿ ಮುಖ್ಯವಾಗಿತ್ತು. ಮತ್ತು ಮುನಿಯು ರಾಜನಿಗೆ ಪ್ರಮುಖವಾದ ವ್ಯಕ್ತಿ ಅಗಿದೆ. ರಾಜ ಮುನಿಗೆ ಸಹಾಯ ಮಾಡಿದ್ದು ಅತಿ ಪ್ರಮುಖ ಕರ್ತವ್ಯವಾಗಿತ್ತು. ನಂತರ ಓಡಿ ಬಂದ ಗಡ್ಡದಾರಿ ವ್ಯಕ್ತಿಯ ಗಾಯಕ್ಕೆ ಬಟ್ಟೆ ಕಟ್ಟಿ ರಕ್ತ ನಿಲ್ಲುವಂತೆ ಮಾಡಿದ್ದು ಅತೀ ಪ್ರಮುಖ ಕರ್ತವ್ಯ.
ಇಲ್ಲದಿದ್ದರೆ ಅ ವ್ಯಕ್ತಿ ಬದುಕುಳಿಯುತ್ತಿರಲಿಲ್ಲ. ರಾಜ ಆತನಿಗೆ ಬಟ್ಟೆ ಕಟ್ಟಿದ್ದ ಸಮಯ ಪ್ರಮುಖವಾಗಿತ್ತು. ಮತ್ತು ಆ ವ್ಯಕ್ತಿ ಆಗ ರಾಜನಿಗೆ ಪ್ರಮುಖವಾಗಿದ್ದ ಈ ಮುನಿಯ ಪ್ರಕಾರ ಯಾವುದಾದರು ಕೆಲಸ ಮಾಡಲು ಅತಿ ಮುಖ್ಯವಾದ ಸಮಯ ಎಂದರೆ “ಈಗ” ಇದು ಮುಖ್ಯವಾದ ಸಮಯ ಏಕೆಂದರೆ ಈ ಅವಧಿಯಲ್ಲಿ ನಮಗೆ ಸೂಕ್ತವಾಗಿ ಏಕೆಂದರೆ ಈ ಅವಧಿಯಲ್ಲಿ ನಮಗೆ ಸೂಕ್ತವಾಗಿ ನಿರ್ಧರಿಸಿ ಕೆಲಸ ಮಾಡಲು ಶಕ್ತಿಯಿರುತ್ತದೆ. ಉತ್ತಮ ಕಾರ್ಯಕ್ಕಾಗಿ ನಿರ್ದಿಷ್ಟ ಸಮಯದಲ್ಲಿ ನಾವು ಯಾರ ಜೊತೆ ಇರುತ್ತೇವೆಯೋ ಆ ವ್ಯಕ್ತಿ ನಮಗೆ ಪ್ರಮುಖನಾಗುತ್ತಾನೆ. ಅ ವ್ಯಕ್ತಿಗೆ ಮಾಡುವ ಒಳ್ಳೆಯ ಕಾರ್ಯನ ಅತಿ ಮುಖ್ಯ ಕೆಲಸ ಏಕೆಂದರೆ ನಾವು ಇತರರಿಗೆ ಒಳ್ಳೆ ಕೆಲಸ ಮಾಡುವುದಕ್ಕೋಸ್ಕರ ಈ ಭೂಮಿಗೆ ಕಳಿಸಲ್ಪಟ್ಟಿದ್ದೇವೆ. ಈ ರೀತಿಯಾಗಿ ಮುನಿ ರಾಜನಿಗೆ ಪ್ರಶ್ನೆಗಳಿಗೆ ಉತ್ತರಿಸುತ್ತಾನೆ. ರಾಜನ ಮುನಿಯ ಉತ್ತರದಿಂದ ಸಮಾಧಾನವಾಗಿ ಹಿಂತಿರುಗುತ್ತಾನೆ.

The Three Questions Pdf 9th Standard

PDF Name9th English The Three Questions Notes Pdf
No. of Pages04
PDF Size66KB
LanguageEnglish
CategoryEnglish Notes
Download LinkAvailable ✓
Topics9th Class English The Three Questions Notes Pdf

9th Class The Three Questions Extract Questions Answers Pdf

9th Standard The Three Questions Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ

kseeb solutions English Notes Class 9 English Chapter 2

The Three Questions summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

English class 9th pdf Download

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

ಇಲ್ಲಿ ನೀವು 9th Standard The Three Questions Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 9th Standard The Three Questions Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

FAQ:

what thought came to the king?

the thought came to the king that the would never fail if he knew three things

Who did the king decide to seek advice from?

Ans: The king decided to seek the advice of a certain hermit, who was widely known for his wisdom.


ಇತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

9ನೇ ತರಗತಿ ಕನ್ನಡ ನೋಟ್ಸ್‌

10ನೇ ತರಗತಿ ಕನ್ನಡ ನೋಟ್ಸ್

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.