9ನೇ ತರಗತಿ ಗುಣಸಾಗರಿ ಪಂಡರಿಬಾಯಿ ಕನ್ನಡ ಪ್ರಶ್ನೋತ್ತರಗಳು ನೋಟ್ಸ್, 9th Standard Gunasagari Pandari Bai in Kannada Notes Question Answer Pdf Download
Table of Contents
ಪಠ್ಯ ಪೂರಕ ಅಧ್ಯಯನ
ತರಗತಿ : 9ನೇ ತರಗತಿ
ಪಾಠದ ಹೆಸರು : ಗುಣಸಾಗರಿ ಪಂಢರಿಬಾಯಿ
Gunasagari Pandari Bai in Kannada Notes Question Answer
ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ .
1. ರಂಗರಾವ್ ಅವರು ಮಗಳ ಹೆಸರನ್ನು ಪಂಡರಿಬಾಯಿ ಎಂದು ಬದಲಾಯಿಸಲು ಕಾರಣವೇನು ?
ಉತ್ತರ : ಪಂಡರಾಪುರದ ಪಂಡರಿನಾಥನಲ್ಲಿ ಅತೀವ ಶ್ರದ್ಧೆ ಮತ್ತು ಭಕ್ತಿಗಳನ್ನು ಹೊಂದಿದ್ದ ರಂಗರಾವ್ , ಗೀತಾ ಎನ್ನುವ ಮಗಳ ಹೆಸರನ್ನು ಪಂಡರಿಬಾಯಿ ಎಂದು ಬದಲಿಸಿದರು .
2. * ಪಂಡರಿಬಾಯಿ ನಾಟಕ ರಂಗಕ್ಕೆ ಪ್ರವೇಶಿಸಬೇಕಾಗಿ ಬಂದದ್ದು ಯಾಕೆ ? ಅಥವಾ * ಪಂಡರಿಬಾಯಿಯವರು ನಾಟಕದಲ್ಲಿ ಬಣ್ಣ ಹಚ್ಚಲು ಕಾರಣವೇನು ?
ಉತ್ತರ : ‘ ಆದರ್ಶ ನಾಟಕ ಸಂಘ ‘ ಪ್ರದರ್ಶಿಸುತ್ತಿದ್ದ ನಾಟಕದಲ್ಲಿ ಅಭಿನಯಿಸುತ್ತಿದ್ದ ನಟಿ ಇನ್ನೇನು ನಾಟಕ ಆರಂಭಕ್ಕೆ ಅರ್ಧಗಂಟೆ ಬಾಕಿ ಇರುವಾಗ ‘ ಬರುವುದಿಲ್ಲ ‘ ಎಂಬ ವಾರ್ತೆ ಕಳಿಸಿದಳು . ನಾಟಕದ ಟಿಕೇಟುಗಳು ಪೂರ್ತಿ ಮಾರಾಟವಾಗಿದ್ದವು . ನಾಟಕ ನಿಂತರೆ ಕುಟುಂಬ ಬಹುದೊಡ್ಡ ಕಷ್ಟಕ್ಕೆ ಸಿಕ್ಕಿಕೊಳ್ಳುತ್ತಿತ್ತು . ಆ ಪಾತ್ರವನ್ನು ತಂಗಿ ಪಂಢರಿಬಾಯಿ ಕೈಲಿ ಏಕೆ ಮಾಡಿಸಬಾರದು ? ಎಂಬ ಆಲೋಚನೆ ಅಣ್ಣ ವಿಮಾಲಾನಂದನಿಗೆ ಬಂತು . ಆದ್ದರಿಂದ ಪಂಡರೀಬಾಯಿಯವರು ಆ ನಾಟಕದಲ್ಲಿ ನಟಿಸುವ ಮೂಲಕ ನಾಟಕ ರಂಗ ಪ್ರವೇಶಿಸಿದರು .
3. ಪಂಡರಿಬಾಯಿ ಅವರಿಗೆ ಜೀವಮಾನ ಸಾಧನೆಗಾಗಿ ಯಾವ ಪ್ರಶಸ್ತಿಯನ್ನು ನೀಡಲಾಗಿದೆ ?
ಉತ್ತರ : ಪಂಡರಿಬಾಯಿ ಅವರಿಗೆ ಜೀವಮಾನ ಸಾಧನೆಗಾಗಿ ೨೦೦೦ ದಲ್ಲಿ ಫಿಲ್ಮಫೇರ್ ಪ್ರಶಸ್ತಿಯನ್ನು ನೀಡಲಾಗಿದೆ .
4. ಪಂಡರಿಬಾಯಿ ಅವರ ತಂದೆ ತಾಯಿಯವರ ಹೆಸರೇನು ?
ಉತ್ತರ : ಪಂಡರಿಬಾಯಿ ಅವರ ತಂದೆ ರಂಗರಾವ್ ಮತ್ತು ತಾಯಿ ಕಾವೇರಿಬಾಯಿ .
5. ಪಂಡರಿಬಾಯಿಯವರು ನಟಿಸಿದ ಮೊದಲ ಚಿತ್ರದ ಹೆಸರೇನು ?
ಉತ್ತರ : ಪಂಡರಿಬಾಯಿ ಯವರು ನಟಿಸಿದ ಮೊದಲ ಚಿತ್ರ ‘ ವಾಣಿ ‘
6. ಪಂಡರಿಬಾಯಿಯವರು ಯಾರ ಮನಸ್ಸಿನಲ್ಲಿ ಅಮರರಾದರು ?
ಉತ್ತರ : ಪಂಡರಿಬಾಯಿಯವರು ಕಲಾರಸಿಕರ ಮನಸ್ಸಿನಲ್ಲಿ ಅಮರರಾದರು .
7. ಪಂಡರಿಬಾಯಿಯವರು ಕಲಾವಿದೆಯಾಗಿ ರೂಪುಗೊಳ್ಳಲು ಸಹಕರಿಸಿದ ಅಂಶಗಳು ಯಾವುವು ?
ಉತ್ತರ : ಚಿಕ್ಕಂದಿನಿಂದಲೇ ಪಂಡರಿಬಾಯಿ ಅವರಿಗೆ ಸಂಗೀತದ ಅಭ್ಯಾಸವಾಗಿತ್ತು . ಹರಿಕಥೆ ಮಾಡುವುದನ್ನು ಕೀರ್ತನೆ ಹಾಡುವುದನ್ನು ಇವರು ಕಲಿತಿದ್ದರು . ಅಲ್ಲದೆ ಮನೆಯಲ್ಲಿದ್ದ ಸೃಜನಶೀಲ ವಾತಾವರಣ ಪಂಡರಿಬಾಯಿಯವರ ” ಕಲಾವಿದೆ ‘ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿತು .
9th Standard Gunasagari Pandari Bai in Kannada Notes Question Answer Pdf
ಇತರೆ ಪದ್ಯಗಳು :
ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು