9ನೇ ತರಗತಿ ಕನ್ನಡ ಹೊಸಹಾಡು ಪದ್ಯದ ನೋಟ್ಸ್, 9th Class Hosa Haadu Kannada Notes Pdf Question Answer Pdf Download, 9th ಹೊಸಹಾಡು Notes
ತರಗತಿ : 9ನೇ ತರಗತಿ
ಪದ್ಯದ ಹೆಸರು : ಹೊಸಹಾಡು
ಕೃತಿಕಾರರ ಹೆಸರು : ಕಯ್ಯಾರ ಕಿಞ್ಞಣ್ಣ ರೈ
Table of Contents
ಕೃತಿಕಾರರ ಪರಿಚಯ :
ಕಯ್ಯಾರ ಕಿಞ್ಞಣ್ಣ ರೈ
ಕಯ್ಯಾರ ಕಿಞ್ಞಣ್ಣ ರೈ ಅವರು ( ಕ್ರಿಸ್ತ ಶಕ ೧೯೧೫ ) ಕಾಸರಗೋಡು ಜಿಲ್ಲೆಯ ಕಯ್ಯಾರ ಗ್ರಾಮದವರು . ಇವರ ಪ್ರಮುಖ ಕೃತಿಗಳೆಂದರೆ ; ಶ್ರೀಮುಖ , ಐಕ್ಯಗಾನ , ಪುನರ್ನವ ಚೇತನ ಮತ್ತು ಕೊರಗ , ಗಂಧವತಿ ಮುಂತಾದ ಕವನ ಸಂಕಲನಗಳು : ವಿರಾಗಿಣಿ ಎಂಬ ನಾಟಕ , ಅನ್ನದೇವರು ಮತ್ತು ಇತರ ಕತೆಗಳು ಎಂಬ ಸಣ್ಣಕಥಾ ಸಂಕಲನ : ರತ್ನಾಕರ , ಪರಶುರಾಮ , ಎ . ಬಿ . ಶೆಟ್ಟಿ ಎಂಬ ಜೀವನ ಚರಿತ್ರೆಗಳು , ದುಡಿತವೇ ನನ್ನ ದೇವರು ಎಂಬ ಆತ್ಮಕಥೆ , ಗೋವಿಂದ ಪೈ – ಸ್ಮೃತಿ ಕೃತಿ , ಸಾಹಿತ್ಯ ದೃಷ್ಟಿ – ವಿಮರ್ಶಾ ಕೃತಿ , ಪಂಚಮಿ – ಅನುವಾದ ಕೃತಿ ಮುಂತಾದವು .
ಇವರಿಗೆ ೧೯೬೯ ರಲ್ಲಿ ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಶಸ್ತಿ , ೨೦೦೫ ರಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ , ೨೦೦೬ ರಲ್ಲಿ ನಾಡೋಜ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ಲಭಿಸಿವೆ . ಇವರು ಮಂಗಳೂರಿನಲ್ಲಿ ನಡೆದ ಆರವತ್ತಾರನೆಯ ಅಖಿಲ ಭಾರತ ಕನ್ನಡಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು . ಪ್ರಸ್ತುತ ಪದ್ಯವನ್ನು ಕಯ್ಯಾರ ಕಿಞ್ಞಣ್ಣ ರೈ ಅವರು ಸಂಪಾದಿಸಿರುವ ಶತಮಾನದ ಗಾನ ಕವನಸಂಕಲನ ದಿಂದ ಆರಿಸಿಕೊಳ್ಳಲಾಗಿದೆ .
9th Hosa Haadu Kannada Notes Question Answer
ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯಗಳಲ್ಲಿ ಉತ್ತರಿಸಿ ,
1 ) ಕಡಿದೊಗೆಯಬೇಕಾದ ಪಾಠಗಳು ಯಾವುವು ?
ಉತ್ತರ : ಜಾತಿ – ಕುಲ – ಮತ – ಧರ್ಮ ಎಂಬ ಪಾಶಗಳನ್ನು ಕಡಿದೊಗೆಯಬೇಕು .
2 ) ಕವಿ ಎಂತಹ ಹಾಡು ಹಾಡಬೇಕೆಂದು ಬಯಸುವರು ?
ಉತ್ತರ : ಕವಿ ನವಭಾವ – ನವಜೀವ – ನವಶಕ್ತಿ ತುಂಬಿಸುವ ಹಾಡನ್ನು ಹಾಡಬೇಕು ಎಂದಿದ್ದಾರೆ .
3 ) ಬಾನು ಬುವಿ ಯಾವುದರಿಂದ ಬೆಳಗಬೇಕು ?
ಉತ್ತರ : ಜಡನಿದ್ರೆಯಿಂದ ಎಚ್ಚರಗೊಂಡು ವೀರ ಅಟ್ಟಹಾಸದಲ್ಲಿ ಬಾನು – ಬುವಿ ಬೆಳಗಬೇಕು .
4 ) ವೀರಧ್ವನಿ ಹೇಗೆ ಏರಬೇಕು ?
ಉತ್ತರ : ಬಹಳ ಗಂಭೀರವಾದ ಭಾವನೆಯ ಅಲೆಗಳನ್ನು ಹರಡಿ ವೀರಧ್ವನಿ ಏರಬೇಕು .
5 ) ಹಾಡು ನುಡಿಗುಂಡುಗಳು ಯಾವುದರ ಬೆನ್ನಟ್ಟಬೇಕು ?
ಉತ್ತರ : ಹಾಡು ನುಡಿಗುಂಡುಗಳು ಭಯದ ಬೆನ್ನಟ್ಟಬೇಕು .
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯದಲ್ಲಿ ಉತ್ತರಿಸಿ ,
1 ) ಈ ಹಾಡು ಹೊಸತು ಎಂದು ಕವಿ ಹೇಳಲು ಕಾರಣವೇನು ?
ಉತ್ತರ : ಈ ಹೊಸ ಹಾಡು ಇದೇ ಮೊದಲ ಹಾಡಾಗಿದ್ದು ಇದಕ್ಕೂ ಮೊದಲು ಇಂತಹ ಹಾಡು ಇರಲಿಲ್ಲ . ಅಂದಿನ ಕಷ್ಟಗಳು ಅಂದಂದೇ ಮುಗಿದಿವೆ . ಇಂದು ಅವುಗಳ ಗೊಡವೆ ಇಲ್ಲ . ಆದ್ದರಿಂದ ಈ ಹಾಡು ಹೊಸತು ಹಾಡು ಎಂದು ಕವಿ ಹೇಳಿದ್ದಾರೆ .
2 ) ಕವಿ ಎಂತಹ ಹಾಡನ್ನು ಹಾಡಿದಾಗ ವೀರಧ್ವನಿಯೇರಬೇಕು ಎಂದು ಬಯಸುತ್ತಾರೆ ?
ಉತ್ತರ : ಹೊಸ ಭಾವನೆಯನ್ನು ಮೂಡಿಸುವ , ಹೊಸ ಚೈತನ್ಯ , ಹೊಸ ಶಕ್ತಿಯನ್ನು ತುಂಬಿಸುವ ಹಾಡನ್ನು ಹಾಡಬೇಕು . ಅಂತಹ ಹಾಡನ್ನು ಹಾಡಿದಾಗ ಬಹಳ ಗಂಭೀರವಾದ ಭಾವನೆಯ ತರಂಗಗಳು ಹರಡಿ ವೀರಧ್ವನಿಯೇರಬೇಕು ಎಂದು ಕವಿ ಬಯಸುತ್ತಾರೆ .
3 ) ಕವಿ ಎಂತಹ ಹಾಡು ಗುಡುಗಬೇಕು ಎಂದು ಆಶಿಸುತ್ತಾರೆ ?
ಉತ್ತರ : ಜಾತಿ – ಕುಲ – ಮತ – ಧರ್ಮ ಎಂಬ ಪಾಠಗಳನ್ನು ಕಡಿದೊಗೆದು ಉತ್ಸಾಹದಿಂದ ಎದೆಹಿಗ್ಗಿ ಹಾಡಬೇಕು . ಆ ಹಾಡು ಯುಗಯುಗಗಳಾಚೆಗೂ ಜಗತ್ತಿನ ಮೂಲೆ ಮೂಲೆಗೂ ತಲುಪುವಂತ ಹಾಡು ಗುಡುಗಬೇಕು ಎಂದು ಕವಿ ಆಶಿಸುತ್ತಾರೆ .
ಇ ] ಕೊಟ್ಟಿರುವ ಪ್ರಶ್ನೆಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ ,
1 ) ಹೊಸಹಾಡು ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ ,
ಬದುಕಿಗೆ ಹೊಸ ತಿರುವನ್ನು ನೀಡಬಲ್ಲ , ಹೊಸ ಆಶಯವನ್ನು ಜೀವನದ ಗತಿಯನ್ನು ಬದಲಿಸಿ ಹೊಸ ಹುರುಪನ್ನು ತುಂಬಬಲ್ಲ . ಹಳೆಯ ಮೌಡ್ಯವನ್ನು ಕಡಿದೊಗೆದು ಹೊಸ ಭಾವನೆಗಳನ್ನು ಸೃಜಿಸಬಲ್ಲ ಹೊಸ ಹಾಡನ್ನು ಹಾಡಬೇಕು . ನಮ್ಮನ್ನು ಬಿಗಿದಿರುವ ಜಾತಿ – ಕುಲ – ಮತ – ಧರ್ಮ ಎಂಬ ಪಾಠಗಳನ್ನು ಕತ್ತರಿಸಿ ಉತ್ಸಾಹದಿಂದ ಹಾಡಬೇಕು . ಆ ಸಮಾನತಾ ಭಾವವು ಯುಗಯುಗಗಳಲ್ಲಿ ಜಗತ್ತಿನ ಮೂಲೆ ಮೂಲೆಯನ್ನು ತಲುಪಬೇಕು . ಆ ಹೊಸ ಹಾಡನ್ನು ಉನ್ನತ ಶಿಖರದ ತುದಿಯಲ್ಲಿ ನಿಂತು ಹಾಡಿದಾಗ ಅದರ ನುಡಿಗುಂಡುಗಳು ದಶದಿಕ್ಕಿಗೂ ಸಿಡಿದು ಜನರಲ್ಲಿ ತುಂಬಿರುವ ಭಯವನ್ನು ಓಡಿಸಬೇಕು . ಗಂಡೆದೆಯ ಗರ್ಜನೆಗೆ ನಮ್ಮ ದೇಶದ ಕೋಟ್ಯಂತರ ಜನರು ದನಿಗೂಡಿಸಬೇಕು . ಆ ಒಕ್ಕೊರಲಿನ ಏಕತಾಭಾವದ ಪ್ರತಿಧ್ವನಿಯು ಭೂಮಿ – ಆಕಾಶವನ್ನು ಆವರಿಸಬೇಕು . ಜಡತ್ವದಿಂದ ಕೂಡಿರುವ ಜನರು ಎಚ್ಚೆತ್ತು ಅಂಧಕಾರದ ಕತ್ತಲೆಯಿಂದ ಆವರಿಸಲ್ಪಟ್ಟಿರುವ ಬಾನು ಭೂಮಿಯನ್ನು ಬೆಳಗಬೇಕು . ಪ್ರತಿಯೊಬ್ಬರ ನಡೆ – ನುಡಿಯಲ್ಲಿ ಕ್ರಾಂತಿಯ ಕಿಡಿ ಕೆರಳಬೇಕು , ಜಯವನ್ನು ಹೊಂದಿದ ಮಾತೆಯೇ ನೀನು ಹೆದರದೆ ಧೈರ್ಯದಿಂದ ತಲೆ ಎತ್ತಿ ನೋಡು , ಹಿಂದಿನ ಪಾಡು ಹಿಂದೆಯೇ ಮುಗಿಯಿತು . ಇದೇ ಮೊದಲು , ಇದಕ್ಕಿಂತ ಮುಂಚೆ ಇಂತಹ ಹಾಡು ಇರಲಿಲ್ಲ . ಆದ್ದರಿಂದ ಇಂದು ಇದೇ ಹೊಸಹಾಡು ಎಂದು ಹೇಳುತ್ತಾ ಹೊಸ ಹುರುಪನ್ನು ತುಂಬುವ ಹಾಡು ಇದಾಗಿದೆ . ಇಂತಹ ಸ್ಫೂರ್ತಿಯ ಚಿಲುಮೆಯಾಗುವ ಹಾಡನ್ನು ಹಾಡಬೇಕು , ಅದು ನಿತ್ಯ ನೂತನವಾಗಿರಬೇಕೆಂಬುದು ಪದ್ಯದ ಆಶಯವಾಗಿದೆ .
ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .
1 ) “ ಯುಗಯುಗಗಳಾಚೆಯಲಿ ಲೋಕಲೋಕಾಂತರದಲ್ಲಿ ಆ ಹಾಡು ಗುಡುಗಬೇಕು ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣ ರೈ ಅವರ ಶತಮಾನದ ಗಾನ ಕವನಸಂಕಲನ ದಿಂದ ಆರಿಸಲಾಗಿರುವ ‘ ಹೊಸಹಾಡು ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಳಾಗಿದೆ . ಸಂದರ್ಭ : ನಮ್ಮನ್ನು ಬಿಗಿದಿರುವ ಜಾತಿ – ಕುಲ – ಮತ – ಧರ್ಮ ಎಂಬ ಪಾಠಗಳನ್ನು ಕತ್ತರಿಸಿ ಉತ್ಸಾಹದಿಂದ ಹಾಡಬೇಕು . ಎಂದು ಹೇಳುವ ಸಂದರ್ಭದಲ್ಲಿ ಕವಿ ಆ ಸಮಾನತಾ ಭಾವವು ‘ ಯುಗಯುಗಗಳಲ್ಲಿ ಜಗತ್ತಿನ ಮೂಲೆ ಮೂಲೆಯನ್ನು ತಲುಪಬೇಕು ‘ ಎಂದು ಹೇಳಿದ್ದಾರೆ .
ಸ್ವಾರಸ್ಯ : ಜಾತಿ – ಕುಲ – ಮತ – ಧರ್ಮ ಎಂಬ ಕಟ್ಟಳೆಗಳನ್ನು ಮೀರಿ ನಮ್ಮಲ್ಲಿ ಮನುಜ ಮತದ ಭಾವನೆ ಮೂಡಬೇಕು ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ .
2 ) “ ತೀವ್ರತರ ಗಂಭೀರ ಭಾವನೆಯ ತೆರೆ ಮಸಗಿ ವೀರಧ್ವನಿಯೇರಬೇಕು ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣ ರೈ ಅವರ ಶತಮಾನದ ಗಾನ ಕವನಸಂಕಲನ ದಿಂದ ಆರಿಸಲಾಗಿರುವ ಹೊಸಹಾಡು ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಳಾಗಿದೆ . ಸಂದರ್ಭ : ಬದುಕಿಗೆ ಹೊಸ ತಿರುವನ್ನು ನೀಡಬಲ್ಲ . ಹೊಸ ಆಶಯವನ್ನು ಜೀವನದ ಗತಿಯನ್ನು ಬದಲಿಸಿ ಹೊಸ ಹುರುಪನ್ನು ತುಂಬಬಲ್ಲ ಹಾಡನ್ನು ಹಾಡಬೇಕು ಎಂದು ಹೇಳುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ . ಹೊಸಹಾಡು ಹಾಡಿದಾಗ ಬಹಳ ಗಂಭೀರವಾದ ಭಾವನೆಯು ಎಲ್ಲೆಡೆ ಹರಡಿ ವೀರಧ್ವನಿ ಏರಬೇಕು ಎಂದು ಕವಿ ಹೇಳಿದ್ದಾರೆ .
ಸ್ವಾರಸ್ಯ : ಹೊಸ ಹಾಡನ್ನು ಕೇಳಿದವರಲ್ಲಿ ವೀರತ್ವ ಮೂಡಬೇಕು ಎಂಬುದನ್ನು ವೀರಧ್ವನಿ ಏರಬೇಕು ಎಂದು ಕವಿ ಹೇಳಿರುವುದು ಸ್ವಾರಸ್ಯವಾಗಿದೆ .
3 ) “ ಜಡನಿದ್ರೆ ಸಿಡಿದೆದ್ದ ವೀರಾಟ್ಟಹಾಸದಲ್ಲಿ ಬಾನು ಬುವಿ ಬೆಳಗಬೇಕು ”
“ ನಡೆನುಡಿಗಳೆಡೆಯಲ್ಲಿ ಪದತಾಳ ಗತಿಯಲ್ಲಿ ಕ್ರಾಂತಿಕಿಡಿ ಕೆರಳಬೇಕು “
ಉತ್ತರ : ಆಯ್ಕೆ : ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣ ರೈ ಅವರ ಶತಮಾನದ ಗಾನ ಕವನಸಂಕಲನ ದಿಂದ ಆರಿಸಲಾಗಿರುವ ಹೊಸಹಾಡು ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಳಾಗಿದೆ . ತಮಾನದ ಶಾಸ ಸಂದರ್ಭ : ನಮ್ಮ ನಡೆ – ನುಡಿಗಳಲ್ಲಿ ಕ್ರಾಂತಿ ( ಬದಲಾವಣೆಯನ್ನು ಉಂಟುಮಾಡಬೇಕಾಗಿರುವುದರ ಬಗ್ಗೆ ತಿಳಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ . ನಾವು ಜಡನಿದೆಯಿಂದ ಎಚ್ಚೆತ್ತುಕೊಂಡು ವೀರ ಅಟ್ಟಹಾಸದಿಂದ ಬಾನು ಮತ್ತು ಭೂಮಿಯನ್ನು ಬೆಳಗಬೇಕು ಹಾಗೂ ನಮ್ಮ ಪ್ರತಿ ಹೆಜ್ಜೆಯಲ್ಲೂ ಕ್ರಾಂತಿಯನ್ನುಂಟುಮಾಡಬೇಕು ಎಂದು ಕವಿ ಹೇಳಿದ್ದಾರೆ .
ಸ್ವಾರಸ್ಯ : ಒಳ್ಳೆಯ ಬದಲಾವಣೆಯನ್ನು ಉಂಟುಮಾಡಬೇಕಾದತ ಮೊದಲು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ .
4 ) ” ಇದೋ ಮೊದಲು ಮುನ್ನಿಲ್ಲ ಮುಗಿದುದಂದಿನ ಪಾಡು ಹೊಸತಿಂದು ಹೊಸತು ಹಾಡು ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣ ರೈ ಅವರ ಶತಮಾನದ ಗಾನ ಕವನಸಂಕಲನ ದಿಂದ ಆರಿಸಲಾಗಿರುವ ಹೊಸಹಾಡು ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಕವಿಯು ಹೊಸಹಾಡಿನ ಬಗ್ಗೆ ಹೇಳುತ್ತಾ ಜಯಜನನಿಯಾದ ಭಾರತಾಂಬೆಯನ್ನು ಕುರಿತು “ ಶಿರವೆತ್ತಿ ವೀರಭರವಸೆಯಿಂ ಹೊಸಹಾಡನ್ನು ಕೇಳು ” ಎಂದು ಹೇಳುವ ಸಂದರ್ಭದಲ್ಲಿ ಹಿಂದಿನ ಪಾಡು ಹಿಂದೆಯೇ ಮುಗಿಯಿತು . ಇದೇ ಮೊದಲು . ಇದಕ್ಕಿಂತ ಮುಂಚೆ ಇಂತಹ ಹಾಡು ಇರಲಿಲ್ಲ . ಆದ್ದರಿಂದ ಇಂದು ಇದೇ ಹೊಸಹಾಡು ಎಂದು ಹೇಳಿದ್ದಾರೆ .
ಸ್ವಾರಸ್ಯ : ಹಿಂದೆ ಆಗಿರುವ ಹಳೆಯದನ್ನು ನೆನೆಯುತ್ತಾ ಇಂದಿನ ಅವಕಾಶದಿಂದ ವಂಚಿತರಾಗಬಾರದು ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ .
ಉ ) ಮೊದಲೆರಡು ಪದಗಳಿಗಿರುವ ಸಂಬಂಧದಂತ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ .
1. ದ್ವನಿ : ದನಿ::ಯುಗ:……………………..
2. ಲೋಕಾಂತರ : ಸವರ್ಣದೀರ್ಘ ಸಂಧಿ :: ಉನ್ನತೋನ್ನತ :……….
3. ಬಾನು:ಆಕಾಶ ::ಭಾನು:……….
1. ಜುಗ, 2.ಗುಣಸಂಧಿ 3. ಸೂರ್ಯ
ಊ ) ಕೊಟ್ಟಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ .
ಹೊಸಹಾಡು ‘ ಪದ್ಯದ ಆಕರ ಗ್ರಂಥ……………
( ಪುನರ್ನವ . ಚೇತನ , ಕೊರಗ. ಶತಮಾನದಗಾನ )
2. ‘ ಹೊಸಹಾಡು ‘ ಪದ್ಯದ ಕವಿ,,,,,,,,,
( ಗೋಪಾಲಕೃಷ್ಣ ಅಡಿಗ , ಕಯ್ಯಾರ ಕಿಞ್ಞಣ್ಣ ರೈ , ದ.ರಾ. ಬೇಂದ್ರೆ , ಜಿ . ಎಸ್ . ಶಿವರುದ್ರಪ್ಪ )
3 ಉನ್ನತೋನ್ನತ…………ಶಿಖರವನೇರಿ ಹಾಡಲ್ಲಿ ಹಾಡಬೇಕು)
( ಹಿಮಾಲಯ ,ಘನಹಿವಾದಿ, ಸಹ್ಯಾದ್ರಿ , ವಿಂಧ್ಯಾ )
4 …………….ಧರ್ಮಪಾಠಗಳ ಕಡಿದೊಗೆದು ಎದೆಹಿಗ್ಗಿ ಹಾಡಬೇಕು ( ಜಾತಿ – ಕುಲ – ಮತ ,ಮೇಲು – ಕೀಳು,ಬಡವ – ಬಲ್ಲಿದ , ಹಳ್ಳಿ – ಪಟ್ಟಣ )
ಸರಿ ಉತ್ತರಗಳು
1. ಶತಮಾನದ ಗಾನ
2. ಕಯ್ಯಾರ ಕಿಞಣ್ಣ ರೈ ,
3. ,ಘನಹಿಮಾದಿ
4. ಜಾತಿ – ಕುಲ ಮತ
ಭಾಷಾ ಚಟುವಟಿಕೆ
1 ಅಲಂಕಾರದ ಎರಡು ವಿಧಗಳನ್ನು ಹೆಸರಿಸಿ ,
ಉತ್ತರ : ಅಲಂಕಾರದಲ್ಲಿ ಎರಡು ವಿಧ ಅದು ಅರ್ಥಾಲಂಕಾರ ಮತ್ತು ತಬ್ದಾಲಂಕಾರ ,
2. “ ಬಾನಿನಲಿ ಗಾಳಿಪಟಗಳು ಹಕ್ಕಿಗಳಂತೆ ಹಾರಾಡುತ್ತಿದ್ದವು – ಇಲ್ಲಿರುವ ಅಲಂಕಾರವನ್ನು ಗುರುತಿಸಿ , ಲಕ್ಷಣದೊಂದಿಗೆ ಸಮನ್ವಯಗೊಳಿಸಿ
ಅಲಂಕಾರ :ಉಪಮಾಲಂಕಾರ
ಉಪಮೇಯ:ಬಾನಿನಲ್ಲಿ ಗಾಳಿಪಟಗಳು
ಉಪಮಾನ:ಹಕ್ಕಿಗಳು
ಉಪಮಾವಾಚಕ :ಅಂತೆ
ಸಮಾನಧರ್ಮ:ಹಾರಾಡುವುದು
ಸಮನ್ವಯ: ಉಪಮೇಯವಾದ ಬಾನಿನಲ್ಲಿ ಗಾಳಿಪಟಗಳನ್ನು ಉಪಮಾನವಾದ ಹಕ್ಕಿಗಳಿಗೆ ಹೋಲಿಸಿ ವರ್ಣಿಸಲಾಗಿದೆ . ಎಂಬ ಉಪಮಾವಾಚಕ ಪದವಿದ್ದು , ಹಾರಾಡುತ್ತಿದ್ದವು ಎಂಬ ಇರುವದರಿಂದ ಇದು ಉಪಮಾಲಂಕಾರ
3. ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ
ನವಭಾವ – ನವಜೀವ ನವಶಕ್ತಿ ತುಂಬಿಸುವ ಹಾಡೊಮ್ಮೆ ಹಾಡಬೇಕು ;
ತೀವ್ರತರ ಗಂಭೀರ ಭಾವನೆಯ ತಲೆ ಮಸಗಿ ವೀರಧ್ವನಿಯೇರಬೇಕು ;
ಜಾತಿ – ಕುಲ – ಮತ – ಧರ್ಮ ಪಾಶಗಳ ಕಡಿದೊಗೆದು ಎದೆಹಿಗ್ಗಿ ಹಾಡಬೇಕು;
ಯುಗಯುಗಗಳಾಚೆಯಲಿ ಲೋಕಲೋಕಾಂತದಲಿ ಆ ಹಾಡು ಗುಡುಗಬೇಕು.
ಉನ್ನತೋನ್ನತ ಘನ ಹಿಮಾದ್ರಿ ಶಿಖರವನೇರಿ ಹಾಡಲ್ಲಿ ಹಾಡಬೇಕು ;
ಹಾಡು ನುಡಿಗುಂಡುಗಳು ಹಾರಿ ದಶದಿಕ್ಕಿನಲ್ಲಿ ಭಯದ ಬೆನ್ನಟ್ಟಬೇಕು ;
9th Class Hosa Haadu Kannada Notes Pdf Question Answer Pdf Download, 9th ಹೊಸಹಾಡು Notes
ಇತರೆ ಪಾಠಗಳು :
Thanks
Thank u so much😊
Thanks
Ok
Thank you
thank u
ಥ್ಯಾಂಕ್ಸ್