9ನೇ ತರಗತಿ ಜನಪದ ಕಲೆಗಳ ವೈಭವ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 9th Standard Janapada Kalegala Vaibhava Kannada Notes Question Answer Pdf Download
ತರಗತಿ : 9ನೇ ತರಗತಿ
ಪಾಠದ ಹೆಸರು : ಜನಪದ ಕಲೆಗಳ ವೈಭವ
Table of Contents
ಕೃತಿಕಾರರ ಪರಿಚಯ :
ಪ್ರಕೃತ ಜನಪದ ಕಲೆಗಳ ವೈಭವ – ಜಾನಪದ ಗದ್ಯ ಭಾಗವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿರುವ ಜಾನಪದ ವಿಷಯ ವಿಶ್ವಕೋಶ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ [ ಕರ್ನಾಟಕ ] ಹೊರತಂದಿರುವ ‘ ವಿಷಯ ಸಂಪದೀಕರಣ ಸಂಪನ್ಮೂಲ ಸಾಹಿತ್ಯ – ಕನ್ನಡ ಭಾಷ ” ಕೃತಿಗಳಲ್ಲಿರುವ ಸಂಪನ್ಮೂಲದ ಆಧಾರದಿಂದ ಈ ಗದ್ಯ ಭಾಗವನ್ನು ನಿಗದಿಪಡಿಸಿದೆ
Janapada Kalegala Vaibhava Kannada Notes Question Answer
ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಡೊಳ್ಳು ಕುಣಿತ ಯಾವ ಸಂಪ್ರದಾಯಕ್ಕೆ ಸೇರಿದ ಕುಣಿತವಾಗಿದೆ ?
ಉತ್ತರ : ಡೊಳ್ಳು ಕುಣಿತ ಬೀರೇಶ್ವರ ಸಂಪ್ರದಾಯಕ್ಕೆ ಸೇರಿದ ಕುಣಿತವಾಗಿದೆ .
2. ಭರಮ ದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮ ಯಾವಾಗ ನಡೆಯುತ್ತದೆ ?
ಉತ್ತರ : ಭರಮ ದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮವು ಶ್ರಾವಣ ಸೋಮವಾರ , ಅಮಾವಾಸ್ಯೆಯ ದಿನ ಮತ್ತು ಯುಗಾದಿಯಂದು ಪಲ್ಲಕ್ಕಿ ಉತ್ಸವದ ತರುವಾಯ ನಡೆಯುತ್ತದೆ .
3. ವೀರಗಾಸೆಯಲ್ಲಿ ಬಳಸುವ ವಾದ್ಯಗಳು ಯಾವುವು ?
ಉತ್ತರ : ವೀರಗಾಸೆಯಲ್ಲಿ ಬಳಸುವ ವಾದ್ಯಗಳು : ಪಂಚವಾದ್ಯಗಳಾದ ತಾಳ , ಶ್ರುತಿ , ಚಮಾಳ , ಓಲಗ ಮತ್ತು ಕರಡೆ ,
4. ‘ ಕಂಸಾಳೆ ‘ ಎಂಬ ಹೆಸರು ಹೇಗೆ ಬಂದಿತು ?
ಉತ್ತರ : ಸಂಸ್ಕೃತದ ‘ ಕಾಂಸತಾಲ್ಯ ‘ ಪದದ ತದ್ಭವ ರೂಪವೇ ‘ ಕಂಸಾಳೆ ‘ ಎಂದಾಗಿದೆ .
5. ಯಕ್ಷಗಾನದ ಮೂರು ಶೈಲಿಗಳು ಯಾವುವು ?
ಉತ್ತರ : ಯಕ್ಷಗಾನದ ಮೂರು ಶೈಲಿಗಳು ತೆಂಕುತಿಟ್ಟು , ಬಡಗುತಿಟ್ಟು ಮತ್ತು ಬಡಬಡಗುತಿಟ್ಟು ,
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .
1. ಯಕ್ಷಗಾನದಲ್ಲಿ ತೆಂಕುತಿಟ್ಟು ಮತ್ತು ಬಡಗುತಿಟ್ಟುಗಳ ವೈಶಿಷ್ಟ್ಯವೇನು ? ವಿವರಿಸಿ ,
ಉತ್ತರ : ಯಕ್ಷಗಾನದಲ್ಲಿ ತೆಂಕುತಿಟ್ಟಿನ ಚಂಡೆ ವಾದಕನಿಗೆ ಆಸನ ವ್ಯವಸ್ಥೆಯಿರುವುದಿಲ್ಲ . ಪಾತ್ರಧಾರಿಗಳಿಗೆ ಒಂದು ಸಿಂಹಾಸನವಿರುತ್ತದೆ . ಬಡಗುತಿಟ್ಟಿನಲ್ಲಿ ಇದರ ಬದಲಿಗೆ ರಥದ ಆಕೃತಿಯ ಆಸನವನ್ನು ಸಾಂಪ್ರದಾಯಿಕವಾಗಿ ಬಳಸುತ್ತಾರೆ .
2. ಚೌಕಿಯಲ್ಲಿ ನಡೆಯುವ ವಿಶೇಷಗಳೇನು ? ವಿವರಿಸಿ ,
ಉತ್ತರ : ರಂಗಸ್ಥಳ ಸಮೀಪವಿರುವ ನೇಪಥ್ಯ ( ತೆರೆಯ ಹಿಂಭಾಗ ) ವೇ ಚೌಕಿ ಅಥವಾ ಬಣ್ಣದ ಮನೆ , ಭಾಗವತರು ಹಿಮ್ಮೇಳ ಹಾಗೂ ಪಾತ್ರಧಾರಿಗಳೊಂದಿಗೆ ಇಲ್ಲಿಗೆ ಆಗಮಿಸುತ್ತಾರೆ . ಪಾತ್ರಧಾರಿಗಳು ತಮ್ಮ ಬಣ್ಣಗಳನ್ನು ತಾವೇ ಹಚ್ಚಿಕೊಳ್ಳುತ್ತಾರೆ . ಮೊದಲು ಚೌಕಿಯಲ್ಲಿ ಗಣಪತಿ ಪೂಜೆ ನಡೆಯುತ್ತದೆ .
2. ದೇವರಗುಡ್ಡರಿಗೆ ಕಂಸಾಳೆಯ ಬಗ್ಗೆ ಇರುವ ಗೌರವ ಭಾವನೆ ಹೇಗೆ ವ್ಯಕ್ತಗೊಂಡಿದೆ ?
ವಿವರಿಸಿ . ಉತ್ತರ : ಕಂಸಾಳೆಯ ಮಹಿಮೆ ಅಪಾರ ಎಂದು ಭಾವಿಸುವ ಗುಡ್ಡರು ಅದನ್ನು ಕೈಗೆತ್ತಿಕೊಳ್ಳುವ ಮೊದಲು “ ಏಳ್ಳಲೆ ಹೆತ್ತಯ್ಯ ನಮ್ಮಪ್ಪಾಜಿ ಮಾಯ್ಯಾರ ಮಾದೇವ ನಿನ್ನ ಪಾದವೇ ಗತಿಕಣಪ್ಪ ಶರಣು ಶರಣಾರ್ಥಿ ” ಎಂದು ನಮಸ್ಕರಿಸಿ ಕಣ್ಣಿಗೊತ್ತಿಕೊಂಡು ಅನಂತರ ಬಾರಿಸಲು ಪ್ರಾರಂಭಿಸುವರು .
3. ವೀರಗಾಸೆ ಕುಣಿತದ ವೇಷಭೂಷಣಗಳು ಹೇಗಿರುತ್ತವೆ ? ವಿವರಿಸಿ .
ಉತ್ತರ : ವೀರಗಾಸೆ ಕುಣಿತದವರ ವೇಷಭೂಷಣ ವಿಶೇಷವಾಗಿರುತ್ತದೆ . ಬಿಳಿಯ ಪಂಚೆಯ ವೀರಗಚ್ಚೆ , ತಲೆಗೆ ಅರಿಶಿಣ ಅಥವಾ ನೀಲಿ ಬಣ್ಣದ ರುಮಾಲು , ಕಾವಿ ಬಣ್ಣದ ಕಸೆಯಂಗಿ , ಕೊರಳಲ್ಲಿ ರುದಾಕ್ಷಿ ಸರ , ಹಣೆಗೆ ವಿಭೂತಿ , ಕರ್ಣಕುಂಡಲ , ಸೊಂಟಪಟ್ಟಿ , ಬಿಚ್ಚುಗತ್ತಿ ಹಾಗೂ ಕಾಲೆಜ್ಜೆ ಧರಿಸುತ್ತಾರೆ .
4. ಭರಮದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮ ಹೇಗೆ ನಡೆಯುತ್ತದೆ ?
ಉತ್ತರ : ಭರಮದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮ ನಡೆಯುತ್ತದೆ . ಅದರಂತೆ ಭಕ್ತರು ದೇವರ ಮುಮ್ಮೇಳದವರಾಗಿ ಒಬ್ಬರು ಡೊಳ್ಳು ಬಾರಿಸುತ್ತ ಹಾಡು ಹೇಳುತ್ತಾರೆ . ಹಿಮ್ಮೇಳದಲ್ಲಿ ಹಲವರು ತಾಳ ಮತ್ತು ಕೊಳಲು ಬಾರಿಸುತ್ತ ಮುಮ್ಮೇಳದವರು ಹೇಳಿಕೊಟ್ಟ ಹಾಡಿನ ಭಾಗವನ್ನು ಹೇಳುತ್ತಾರೆ . “ ಸ್ವಾಮಿ ನಮ್ಮಯ ದೇವರು ಬಂದಾನ ಬನ್ನಿರೇ ಗುರುವೇ ನಮ್ಮಯ ದೇವರು ಬಂದಾನ ಬನ್ನಿರೇ ” ಎಂದು ಡೊಳ್ಳಿನ ಹಾಡು ಆರಂಭವಾಗುತ್ತದೆ .
ಇ ] ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .
1. ಬೀಸು ಕಂಸಾಳೆಯ ವೈಶಿಷ್ಟ್ಯತೆಯನ್ನು ವಿವರಿಸಿ ,
ಉತ್ತರ : ಬೀಸುಕಂಸಾಳೆ , ದೇವರಗುಡ್ಡರ ವಿಶಿಷ್ಟ ನೃತ್ಯ , ಕರ್ನಾಟಕದ ಜನಪದ ನೃತ್ಯಗಳಲ್ಲಿ ಪೂರ್ವವಾದುದು . ಇದರಲ್ಲಿ ಕಾರ್‌ಬಟ್ಟು , ತಟ್‌ಬಟ್ಟು ಮುಂತಾದ ಬಗೆಗಳಿವೆ . ನಾಲ್ಕು ಮಂದಿ ಗುಡ್ಡರು ಒಂದುಕಡೆ ನಿಂತು ಲಿಂಗ ಬಾ , ಮುದ್ದುಲಿಂಗ ಬಾ , ನಮ್ಮ ಮುದ್ದು ಮಾದಯ್ಯನ ಲಿಂಗ ಬಾ ಎಂದು ಹಾಡುತ್ತಾರೆ . ಕಂಸಾಳೆ ಹಿಡಿದ ಗುಡ್ಡ ತಾಳಕ್ಕೆ ತಕ್ಕಂತೆ ವಿವಿಧ ವಿನ್ಯಾಸದಲ್ಲಿ ಬಾರಿಸುತ್ತ ಕುಣಿಯುತ್ತಾನೆ . ತಲೆಯ ಮೇಲೆ , ಬೆನ್ನ ಹಿಂದೆ , ಕಾಲ ಕೆಳಗೆ ಕುಳಿತು , ನಿಂತು , ಬಾಗಿ , ಬಳುಕಿ ತೀವ್ರಗತಿಯಲ್ಲಿ ನರ್ತಿಸುವ ಭಂಗಿ ಆಶ್ಚರ್ಯಕರ ಹಾಗೂ ಅದ್ಭುತ . ಒಮ್ಮೊಮ್ಮೆ ಇಬ್ಬರು ಗುಡ್ಡರು ಕಲೆತು ನರ್ತಿಸುವುದುಂಟು . ಒಬ್ಬರ ಕಂಸಾಳೆಗೆ ಮತ್ತೊಬ್ಬರು ಕುಟ್ಟುತ್ತಾ ಕುಣಿಯುವ ವೈಖರಿ ಆಕರ್ಷಕವಾಗಿರುತ್ತದೆ .
2. ಡೊಳ್ಳು ಬಾರಿಸುವ ಕಲಾವಿದರ ವೇಷಭೂಷಣಗಳು ಹೇಗಿರುತ್ತವೆ ?
ಉತ್ತರ : ‘ ಡೊಳ್ಳು ‘ . ಚರ್ಮವಾದ್ಯ ಪೊಳ್ಳು ಪಡಗದ ಎರಡೂ ಬಾಯಿಗಳಿಗೆ ತೊಗಲು ಹೊದಿಸಿದ ಎರಡು ಪರಡೆಗಳನ್ನಿಟ್ಟು ಹಗ್ಗದಿಂದಬಿಗಿದಿರುತ್ತಾರೆ . ಬಲಗೈಯಲ್ಲಿ ಬಾರಿಸುವ ‘ ಗುಣಿ ‘ ಇರುತ್ತದೆ . ಸಾಮಾನ್ಯವಾಗಿ ಡೊಳ್ಳು ಬಾರಿಸುವವರು ದೇಹದ ಮೇಲುಭಾಗಕ್ಕೆ ಕರಿಯ ಕಂಬಳಿಯನ್ನೂ ಸೊಂಟದ ಭಾಗಕ್ಕೆ ಮೊಳಕಾಲು ಮೇಲೆ ಬರುವಂತೆ ಕಚ್ಚೆಪಂಚೆಯನ್ನೂ ಉಡುತ್ತಾರೆ . ಕೆಲವೊಮ್ಮೆ ಹುಲಿಯ ಚರ್ಮದ ರೀತಿಯ ಉಡುಪನ್ನೂ ಧರಿಸುತ್ತಾರೆ . ಕುಣಿತದ ಕಾಲಕ್ಕೆ ವಾದ್ಯಗಾರರು ಹಸಿರು ಇಲ್ಲವೇ ಕೆಂಪು ಬಣ್ಣದ ಗಗ್ಗರಿ , ಅಂಗಿ ಟೊಪ್ಪಿಗೆ ತೊಡುವರು . ಎರಡೂ ಕೈಗಳಲ್ಲೂ ಅದೇ ಬಣ್ಣದ ಕರವಸ್ತ್ರ ಹಿಡಿದಿರುತ್ತಾರೆ . ಕುಣಿತಕ್ಕೆ ಹಿನ್ನೆಲೆಯಾಗಿ ಡೊಳ್ಳು , ತಾಳ ಮತ್ತು ಕೊಳಲು ಇರುತ್ತವೆ .
3. ವೀರಗಾಸೆ ನರ್ತಕನ ಒಡಪಿನೊಂದಿಗಿನ ಕುಣಿತ ಹೇಗಿರುತ್ತದೆ ?
ಉತ್ತರ : “ ಆಹಹಾ ರುದ್ರಾ ಅಹಹಾ ದೇವಾ ” ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ . ಈ ಕುಣಿತದಲ್ಲಿ ವೀರಭದ್ರ ಹುಟ್ಟಿದ ಸಂದರ್ಭದ ವರ್ಣನೆ ಮಾಡಲಾಗುತ್ತದೆ . ಈ ರೀತಿಯಲ್ಲಿ ಒಡವನ್ನು ಹೇಳಲಾಗುತ್ತದೆ : “ ವೀರಭದ್ರದೇವರು ಹುಟ್ಟಿದ ರೂಪ ಎಂತು ಎಂದೊಡೆ ಹುಟ್ಟಿದಾಗಲೆ ಹೂವಿನಗಾಸೆ , ಮಂಜುಳಗಾಸೆ , ಬ್ರಹ್ಮಗಾಸೆ , ವಿಷ್ಣುಗಾಸೆ , ರುದ್ರಗಾಸೆ , ಮೆಟ್ಟಿದ ಹೊನ್ನಾವಿಗೆ , ಸಾವಿರ , ಶಿರ , ಮೂರುಸಾವಿರ ನಯನ , ಎರಡುಸಾವಿರ ಭುಜ , ಕೆಕ್ಕರಿಸಿದ ಕಣ್ಣು , ಜುಂಜುಮಂಡೆ ಇಂತಪ್ಪ ಶ್ರೀ ವೀರಭದ್ರದೇವರು ಹೋಮದ ಕುಂಡದ ಒಳಗೆ ಹೇಗೆ ಬರುತ್ತಾರೆಂದರೆ …… ವೀರಗಾಸೆಯ ನರ್ತಕನು ದಕ್ಷಯಾಗ , ವೀರಭದ್ರನ ಜನನ ಮತ್ತು ವೀರಭದ್ರನ ವಿಜಯ ಮುಂತಾದ ಒಡಪುಗಳನ್ನು ಹೇಳುತ್ತಾನೆ . ಇದಕ್ಕೆ ‘ ಖಡ್ಗ ‘ ಎಂದು ಕರೆಯುತ್ತಾರೆ . ಉತ್ತರಕರ್ನಾಟಕದಲ್ಲಿ ಒಡಪು ‘ ಎನ್ನುವರು . ಮತ್ತೊಬ್ಬ ವ್ಯಕ್ತಿ “ ಭಲರೇ ವೀರ , ಅಹಹಾ ವೀರ ” ಎಂದು ಕಾಕು ಹೇಳುತ್ತ ಜಾಗಟೆ ಬಡಿಯುತ್ತ ನಿಧಾನವಾಗಿ ವೀರಭದ್ರನ ಸುತ್ತ ತಿರುಗುತ್ತಾನೆ .
4. ಯಕ್ಷಗಾನದ ವೈಶಿಷ್ಟ್ಯ ಹಾಗೂ ಪೂರ್ವರಂಗದ ಉದ್ದೇಶವೇನು ?
ಉತ್ತರ : ಯಕ್ಷಗಾನದ ಪೂರ್ವರಂಗ ವಿಶಿಷ್ಟವಾದುದು . ಮೊದಲು ಚೌಕಿಯಲ್ಲಿ ಗಣಪತಿ ಪೂಜೆ ನಡೆಯುತ್ತದೆ . ತದನಂತರ ಕೋಡಂಗಿಗಳು ರಂಗ ಪ್ರವೇಶಿಸುವರು , ಗಣಪತಿ ಸ್ತುತಿಯ ಬಳಿಕ ವಿಷ್ಣು , ಪರಮೇಶ್ವರ , ದುರ್ಗೆ ಮೊದಲಾದ ದೇವತೆಗಳ ಸ್ತುತಿಯನ್ನು ಭಾಗವತರು ಮಾಡುತ್ತಾರೆ . ಹಾಡಿನ ಆನಂತರ ಭಾಗವತರಿಂದ ಸಭಾವಂದನೆ ಅನಂತರ ಕೋಡಂಗಿಗಳು ಕುಣಿದು ಕುಪ್ಪಳಿಸಿ ಪ್ರೇಕ್ಷಕರನ್ನು ರಂಜಿಸುತ್ತಾರೆ . ಅನಂತರ ಬಾಲಗೋಪಾಲರ ಆಗಮನ ಹಾಗೂ ಸ್ತ್ರೀ ವೇಷಗಳ ಕುಣಿತ , ಪುರುಷರೇ ಸ್ತ್ರೀ ವೇಷ ಹಾಕುವುದು ಯಕ್ಷಗಾನದ ವೈಶಿಷ್ಟ್ಯ . ಯಕ್ಷಗಾನದ ಪೂರ್ವರಂಗ ಎಂದು ಕರೆಯಲಾಗುವ ಬಾಲಗೋಪಾಲ , ಸ್ತ್ರೀ ವೇಷಗಳ ಉದ್ದೇಶ ಮುಂದಿನ ಕಥಾ ಪ್ರಸಂಗಕ್ಕೆ ಪ್ರೇಕ್ಷಕರನ್ನು ಮಾನಸಿಕವಾಗಿ ಅಣಿಗೊಳಿಸುವುದೇ ಆಗಿದೆ . ಮುನಾ ದೇವತಾ ಸ್ತುತಿ ಆದನಂತರ ಅಂದಿನ ಪ್ರಸಂಗಕ್ಕೆ ಸಂಬಂಧಿಸಿದಂತೆ ಒಡೋಲಗ ಪಾರಂಭವಾಗುತ್ತದೆ . ಪಾತ್ರಧಾರಿಗಳು ಭಾಗವತರಿಗೆ ಅನಂತರ ರಂಗಸ್ಥಳಕ್ಕೆ ವಂದಿಸಿ ಕುಣಿದು ತಮ್ಮ ಸಾಮರ್ಥ್ಯ ಪ್ರದರ್ಶಿಸುತ್ತಾರೆ .
ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,
1. “ ಭಲರೇ ವೀರ, ಅಹಹಾ ವೀರ ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಜನಪದ ಕಲೆಗಳ ವೈಭವ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ವೀರಗಾಸೆಯ ಕುಣಿತದ ಸಂದರ್ಭದಲ್ಲಿ ನೃತ್ಯಗಾರ ಖಡ್ಗ ಅಥವಾ ಒಡಪಿನೊಂದಿಗೆ ಕುಣಿತ ಪ್ರಾರಂಭಿಸುತ್ತಾನೆ . ಅದಕ್ಕೆ ಉತ್ತೇಜನ ನೀಡುವಂತೆ ಮತ್ತೊಬ್ಬ “ ಭಲರೇ ವೀರ , ಅಹಹಾ ವೀರ ” ಎಂದು ಕಾಕು ಹೇಳುತ್ತ ಜಾಗಟೆ ಬಡಿಯುತ್ತ ನಿಧಾನವಾಗಿ ವೀರಭದ್ರನ ಸುತ್ತ ತಿರುಗುತ್ತಾನೆ ಎಂದು ಈ ಸಂದರ್ಭದಲ್ಲಿ ಹೇಳಲಾಗಿದೆ .
ಸ್ವಾರಸ್ಯ : ವೀರಗಾಸೆ : ಸಂಪ್ರದಾಯದಲ್ಲಿ ಒಡಪಿಗೆ ತಕ್ಕಂತೆ ಕಾಕು ಹಾಕುತ್ತಾ ಕುಣಿಯುವವನಿಗೆ ಪ್ರೇರಣೆ ನೀಡುವುದು ಸ್ವಾರಸ್ಯಕರವಾಗಿದೆ .
2. “ ಮಳ್ಳಲೆ ಹೆತ್ತಯ್ಯ ನಮ್ಮಪ್ಪಾಜಿ ಮಾಯ್ಕಾರ ಮಾದೇವ ನಿನ್ನ ಪಾದವೇ ಗತಿಕಣಪ್ಪ ಶರಣು ಶರಣಾರ್ಥಿ “
ಉತ್ತರ : ಆಯ್ಕೆ : ಈ ವಾಕ್ಯವನ್ನು ‘ ಜನಪದ ಕಲೆಗಳ ವೈಭವ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕಂಸಾಳೆಯ ಗುಡ್ಡರು ತಮ್ಮ ಪವಿತ್ರ ಸಾಧನವಾದ ಕಂಸಾಳೆಯನ್ನು ಭಕ್ತಿ ಹಾಗೂ ಗೌರವ ಭಾವನೆಯಿಂದ ಕಾಣುವ ಬಗೆಯನ್ನು ತಿಳಿಸುವ ಸಂದರ್ಭದಲ್ಲಿ ಈ ಮಾತನ್ನು ಉದಾಹರಿಸಲಾಗಿದೆ . ಕಂಸಾಳೆಯ ಮಹಿಮೆ ಅಪಾರ ಎಂದು ಭಾವಿಸುವ ಗುಡ್ಡರು ಅದನ್ನು ಕೈಗೆತ್ತಿಕೊಳ್ಳುವ ಮೊದಲು “ ಮಳ್ಳಲೆ ಹತ್ತಯ್ಯ ನಮ್ಮಪ್ಪಾಜಿ ಮಾಯ್ಕಾರ ಮಾದೇವ ನಿನ್ನ ಪಾದವೇ ಗತಿಕಣಪ್ಪ ಶರಣು ಶರಣಾರ್ಥಿ ” ಎಂದು ನಮಸ್ಕರಿಸಿ ಕಣ್ಣಿಗೊತ್ತಿಕೊಂಡು ಅನಂತರ ಬಾರಿಸಲು ಪ್ರಾರಂಭಿಸುವರು .
ಸ್ವಾರಸ್ಯ : ಕಂಸಾಳೆ ಗುಡ್ಡರಿಗೆ ಕಂಸಾಳೆ ಹಾಗೂ ಮಹದೇಶ್ವರನ ಬಗ್ಗೆ ಹೊಂದಿರುವ ಭಕ್ತಿ – ಗೌರವಗಳು ಈ ಮಾತುಗಳಲ್ಲಿ ಸ್ವಾರಸ್ಯಕರವಾಗಿ ವ್ಯಕ್ತವಾಗಿದೆ ,
3. “ ಅಹಹಾ ರುದ್ರಾ ಅಹಹಾ ದೇವಾ ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಜನಪದ ಕಲೆಗಳ ವೈಭವ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ವೀರಗಾಸೆಯ ಕುಣಿತ ಒಡಪಿನೊಂದಿಗೆ ಹೇಗೆ ಆರಂಭವಾಗುತ್ತದೆ ಎಂದು ವಿವರಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಲಾಗಿದೆ . “ ಆಹಹಾ ರುದ್ರಾ ಅಹಹಾ ದೇವಾ ” ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ . ಈ ಕುಣಿತದಲ್ಲಿ ವೀರಭದ್ರ ಹುಟ್ಟಿದ ಸಂದರ್ಭದ ವರ್ಣನೆ ಮಾಡಲಾಗುತ್ತದೆ . ಸ್ವಾರಸ್ಯ : ವೀರಗಾಸೆಯ ಹೆಸರಿಗೆ ತಕ್ಕಂತೆ ಉತ್ಸಾಹ ತುಂಬಿದ ವೀರತನದ ಮಾತುಗಳಿಂದ ಕುಣಿತ ಆರಂಭವಾಗುವುದು ಸ್ವಾರಸ್ಯವಾಗಿದೆ .
4. ” ಸ್ವಾಮಿ ನಮ್ಮಯ ದೇವರು ಬಂದಾನ ಬನ್ನಿರೇ ”
ಉತ್ತರ : ಆಯ್ಕೆ : ಈ ವಾಕ್ಯವನ್ನು ‘ ಜನಪದ ಕಲೆಗಳ ವೈಭವ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಡೊಳ್ಳುಕುಣಿತದ ಸಂದರ್ಭದಲ್ಲಿ ಹಾಡಲಾಗುವ ಹಾಡಿನ ವೈಶಿಷ್ಟ್ಯದ ಬಗ್ಗೆ ತಿಳಿಸುವ ಸಂದರ್ಭದಲ್ಲಿ ಅವರು ಹಾಡುವ ಹಾಡನ್ನು ಉದಾಹರಿಸಲಾಗಿದೆ . ಯುಗಾದಿಯಂದು ಪಲ್ಲಕ್ಕಿ ಉತ್ಸವದ ತರುವಾಯ ಭರಮದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮ ನಡೆಯುತ್ತದೆ . ತಾಳ ಮತ್ತು ಕೊಳಲು ಬಾರಿಸುತ್ತ ಮುಮ್ಮೇಳದವರು ಹೇಳಿಕೊಟ್ಟ ಹಾಡಿನ ಭಾಗವನ್ನು ಹೇಳುತ್ತಾರೆ .
ಸ್ವಾರಸ್ಯ : ಡೊಳ್ಳುಕುಣಿತದಲ್ಲಿ ಹೇಳುವ ಕಥನ ಕವನಗಳಿಗೆ ರಗಳೆ ಬಳಸಿರುವುದು ಹಾಗೂ ತಾಳ – ಮೇಳದಿಂದ ಕೂಡಿದ ಹಾಡನ್ನು ಜತನವಾಗಿ ಕಾಯ್ದುಕೊಂಡು ಬಂದಿರುವುದು ಸ್ವಾರಸ್ಯಕರವಾಗಿದೆ .
5. “ ದುಷ್ಟ ನಿಗ್ರಹ , ಶಿಷ್ಟ ಪರಿಪಾಲನೆ . ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಜನಪದ ಕಲೆಗಳ ವೈಭವ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಯಕ್ಷಗಾನದ ಪ್ರಸಂಗಗಳನ್ನು ರಚಿಸುವಾಗ ಪ್ರಮುಖವಾಗಿ ಪಾಲಿಸಲಾಗುವ ತತ್ವವನ್ನು ಕುರಿತು ಈ ಸಂದರ್ಭದಲ್ಲಿ ಹೇಳಲಾಗಿದೆ . ಯಕ್ಷಗಾನ ಜನರಲ್ಲಿ ಧಾರ್ಮಿಕ ಮತ್ತು ನೀತಿ ಪ್ರಶ್ನೆಗಳನ್ನು ಬೆಳೆಸಲು ಸಹಕಾರಿಯಾಗಿದೆ . ಯಕ್ಷಗಾನ ಪ್ರಸಂಗ ರಚಿಸಿದವರು ದುಷ್ಟನಿಗ್ರಹ ಶಿಷ್ಟಪರಿಪಾಲನೆ ತತ್ವಗಳನ್ನು ಪ್ರಸಂಗಗಳಲ್ಲಿ ಅಳವಡಿಸಿರುತ್ತಾರೆ .
ಸ್ವಾರಸ್ಯ : ಯಕ್ಷಗಾನ ” ಕೇವಲ ಮನರಂಜನೆ ಮಾತ್ರವಾಗಿರದೆ ಜನರಲ್ಲಿ ಮೌಲ್ಯಗಳನ್ನು ಬೆಳೆಸುವ ಮಾಧ್ಯಮವಾಗಿರುವುದು ಸ್ವಾರಸ್ಯಕರವಾಗಿದೆ .
ಉ ] ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗೂ ನಾಲ್ಕು ಸಂಭಾವ್ಯ ಉತ್ತರಗಳನ್ನು ನೀಡಿದೆ , ಅವುಗಳಲ್ಲಿ ಸೂಕ್ತ ಉತ್ತರವನ್ನು ಆರಿಸಿ ಬರೆಯಿರಿ .
1. ವೀರಗಾಸೆ ವೀರಶೈವ ಸಂಪ್ರದಾಯಕ್ಕೆ ಸೇರಿದ ನೃತ್ಯ .
2. ಕಂಸಾಳೆಗುಡ್ಡರು ಕಂಸಾಳೆಯನ್ನು ಕೈಗೆತ್ತಿಕೊಳ್ಳವ ಮೊದಲು ಮಹದೇಶ್ವರ ದೇವರನ್ನು ಸ್ಮರಿಸುತ್ತಾರೆ .
3. ಡೊಳ್ಳು ಕುಣಿತದ ಕಲಾವಿದರು ಹಾಡುವ ಬೀರೇಶ್ವರ ದೇವರ ಹಾಡು ಕಾವ್ಯಗೀತೆಗೆ ಉದಾಹರಣೆ .
4. ಯಕ್ಷಗಾನದಲ್ಲಿ ರಂಗಸ್ಥಳದ ಸಮೀಪವಿರುವ ನೇಪಥ್ಯವನ್ನು ಚೌಕಿ ಎಂದು ಕರೆಯುತ್ತಾರೆ .
ಊ) ಹೊಂದಿಸಿ ಬರೆಯಿರಿ
ಅ ಪಟ್ಟಿ ಆ ಪಟ್ಟಿ ಸರಿ ಉತ್ತರಗಳು
1. ವೀರಭದ್ರ ಕಾಲಿಸತಾಲ್ಯ 1, ಒಡಪು
2. ಕಂಸಾಳ ಚರ್ಮವಾದ್ಯ 2. ಕಾಲಸಪಾಳ್ಯ
3 , ಡೊಳ್ಳು ಮಹಾಕಾವ್ಯ 3. ಧರ್ಮವಾದ್ಯ
4. ಯಕ್ಷಗಾನ ವೇಷಭೂಷಣ 4 ಭಾಗವತ
5. ಮಹದೇಶ್ವರ ಭಾಗವತ 5 ,ಒಳ್ಳಲೆ ಹೆತ್ತಯ್ಯ
ಏಳ್ಳಲೆ ಹೆತ್ತಯ್ಯ
ದೀವಟಿ
ಸರಿ ಉತ್ತರಗಳು .
1, ಒಡಪು
2. ಕಾಲಸಪಾಳ್ಯ
3. ಧರ್ಮವಾದ್ಯ
4 ಭಾಗವತ
5 ,ಒಳ್ಳಲೆ ಹೆತ್ತಯ್ಯ
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ .
1 ಕ್ರಿಯಾಪದ ಎಂದರೇನು ?
ಉತ್ತರ : ಕ್ರಿಯೆಯನ್ನು ಸೂಚಿಸುವ ಪದಗಳೇ ಕ್ರಿಯಾಪದಗಳು ,
2. ಕ್ರಿಯಾಪ್ರಕೃತಿ ಎಂದರೇನು ? ಉದಾಹರಣೆ ಕೊಡಿ ,
ಉತ್ತರ : ಕ್ರಿಯಾರ್ಥವನ್ನು ಸೂಚಿಸುವ ಪ್ರತ್ಯಯವನ್ನು ಹೊಂದದಿರುವ ಪದವೇ ಕ್ರಿಯಾಪ್ರಕೃತಿ ಅಥವಾ ಧಾತು , ಕ್ರಿಯಾಪದದ ಮೂಲರೂಪವೇ ಧಾತು .
ಉದಾ : ನೋಡು , ಹಾಡು , ಜೋಗ , ಕೇಳು , ಮಾಡು .
1 ಸಕರ್ಮಕ ಧಾತುವನ್ನು ಉದಾಹರಣೆ ಸಹಿತ ವಿವರಿಸಿ ,
ಉತ್ತರ : ಕರ್ಮಪದವನ್ನು ಬಯಸುವ ಧಾತುಗಳೇ ಸಕರ್ಮಕ ಧಾತುಗಳು ,
ಉದಾ : ರಾಮನು ಗಿಡವನ್ನು ನೆಟ್ಟನು . ಶಿಲ್ಪಿಗಳು ಗುಡಿಯನ್ನು ಕಟ್ಟಿದರು . ವಿದ್ಯಾರ್ಥಿಗಳು ಪಾಠವನ್ನು ಓದಿದರು .
2 , ಅಕರ್ಮಕ ಧಾತುಗಳಿಗೆ ಐದು ನಿದರ್ಶನ ಕೊಡಿ .
ಉತ್ತರ : ಅಕರ್ಮಕ ಧಾತುಗಳು : -ಕರ್ಮಪದವನ್ನು ಬಯಸದೇ ಇರುವ ಧಾತುಗಳೇ ಅಕರ್ಮಕ ಧಾತುಗಳು .
ಉದಾ : ಕೂಸು ಮಲಗಿತು . ಅವನು ಬದುಕಿದನು . ಆಕಾಶ ಹೊಳೆಯುತ್ತಿದೆ ; ಗಾಳಿಯು ಬೀಸುತ್ತಿದೆ . ಮಲಗು , ಬದುಕು , ಹೋಳಿ , ಬೀಸು ಎಂಬ ಧಾತುಗಳು ಕರ್ಮಪದಗಳನ್ನು ಬಯಸುವುದಿಲ್ಲ ,
ಆ ) ಕೊಟ್ಟಿರುವ ವಾಕ್ಯಗಳಲ್ಲಿ ಸಕರ್ಮಕ ಮತ್ತು ಅಕರ್ಮಕ ಧಾತುಗಳನ್ನು ಗುರುತಿಸಿ ಬರೆಯಿರಿ
1. ರೈತನು ಹೊಲವನ್ನು ಉಳುತ್ತಾನೆ .
ಉತ್ತರ : ಉಳುತ್ತಾನೆ = ಸಕರ್ಮಠ ಧಾತು – ಉಳು
2. ಗಾಳಿಯು ಬೀಸುತ್ತಿದೆ .
ಉತ್ತರ : ಬೀಸುತ್ತಿದೆ . ಅಕರ್ಮಕ ಧಾತು ~ ಬೀಸು .
3 , ಹಕ್ಕಿಗಳು ಚಿಲಿಪಿಲಿಗುಟ್ಟಿದವು ,
ಉತ್ತರ : ಗುಟ್ಟಿದವು = ಅಕರ್ಮಕಧಾತು = ಗುಟ್ಟು
4 ವಿದ್ಯಾರ್ಥಿನಿಯರು ಆಟವನ್ನು ಆಡಿದರು ,
ಉತ್ತರ : ಆಡಿದರು = ಸಕರ್ಮಕ ಧಾತು – ಆಡು
9th Standard Janapada Kalegala Vaibhava Kannada Notes Question Answer Pdf
ಇತರೆ ಪಾಠಗಳು:
ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ಕನ್ನಡ ನೋಟ್ಸ್