9ನೇ ತರಗತಿ ಕನ್ನಡ ನಿಯತಿಯನಾರ್ ಮೀರಿದಪರ್ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 9th standard Niyatiyanar Meeridapar Kannada Poem Notes Question Answer Pdf Download,9th ನಿಯತಿಯನಾರ್ ಮೀರಿದಪರ್ Notes
ತರಗತಿ : 9ನೇ ತರಗತಿ
ಪದ್ಯದ ಹೆಸರು : ನಿಯತಿಯನಾರ್ ಮೀರಿದಪರ್
ಕೃತಿಕಾರರ ಹೆಸರು : ಜನ್ನ
Table of Contents
ಕೃತಿಕಾರರ ಪರಿಚಯ :
ಜನ್ನ
* ಜನ್ನನ ಕಾಲ ಸುಮಾರು ಕ್ರಿ.ಶ. ೧೨೨೫ , ಈತನ ಸ್ಥಳ : ಹಾಸನ ಜಿಲ್ಲೆಯ ಹಳೇಬೀಡು
* ಈತನು ನರಸಿಂಹಬಲ್ಲಾಳನ ಆಸ್ಥಾನದಲ್ಲಿ ದಂಡಾಧಿಪತಿಯೂ ಮಂತ್ರಿಯೂ ಆಗಿದ್ದನು .
* ಹೊಯ್ಸಳರ ಬಲ್ಲಾಳನಿಂದ ಕವಿಚಕ್ರವರ್ತಿ ಅಭಿಧಾನವನ್ನು ಪಡೆದಿದ್ದನು .
* ಈತನು ಜೈನ ಧಾರ್ಮಿಕ ಕಾವ್ಯಗಳನ್ನು ರಚಿಸಿ ಆಹಿಂಸಾ ತತ್ವವನ್ನು ಕಾವ್ಯಗಳಲ್ಲಿ ಸಂದೇಶ ರೂಪದಲ್ಲಿ ನೀಡಿದನು .
* ಈತನ ಕೃತಿಗಳೆಂದರೆ : ಯಶೋಧರ ಚರಿತೆ , ಅನಂತನಾಥಪುರಾಣ ಮತ್ತು ಅನುಭವ ಮುಕುರ ,
Niyatiyanar miridapar Kannada Notes Question Answer
ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
1. ಯಾವ ದೇವತೆಯ ಹೆಸರಿನಲ್ಲಿ ಜಾತ್ರೆಯು ನಡೆಯುತ್ತಿತ್ತು ?
ಉತ್ತರ : ಚಂಡಮಾರಿ ದೇವತೆಯ ಹೆಸರಿನಲ್ಲಿ ಜಾತ್ರೆಯು ನಡೆಯುತ್ತಿತ್ತು .
2. ಮುತ್ತುಗದ ಹೂವುಗಳು ಎಲ್ಲಿ ಉದುರಿ ಬಿದ್ದಿದ್ದವು ?
ಉತ್ತರ : ಮುತ್ತುಗದ ಹೂವುಗಳು ಮಾವಿನ ಮರದ ಕೆಳಗೆ ಮಾಂಸದ ತುಂಡುಗಳಂತೆ ಬಿದ್ದಿದವು .
3. ವನದಲ್ಲಿ ಅರಗಿಳಿಗಳು ಏನೆಂದು ಉಲಿಯುತ್ತಿದ್ದವು ?
ಉತ್ತರ : ವನದಲ್ಲಿ ಅರಗಿಳಿಗಳು “ ಎಲೈ ಮಾರಿಯೇ , ಮಲಯ ಮಾರುತನು ಸಾಷ್ಟಾಂಗ ನಮಸ್ಕಾರ ಮಾಡುತ್ತಾ ಬಂದನು , ಈ ಕಡೆ ಗಮನ ಹರಿಸು ” ಎಂದು ಉಲಿಯುತ್ತಿದ್ದವು .
4. ಚಂಡಕರ್ಮನು ಯಾರನ್ನು ಹಿಡಿದು ತಂದನು ?
ಉತ್ತರ : ಚಂಡಕರ್ಮನು ಅಭಯರುಚಿಯು ಅಭಯಮತಿಯರನ್ನು ಹಿಡಿದು ತಂದನು .
5 , ಮಾರಿದತ್ತನ ಬಳಿಯಿದ್ದ ತಳಾರನ ಹೆಸರೇನು ?
ಉತ್ತರ : ಮಾರಿದತ್ತನ ಬಳಿಯಿದ್ದ ತಳಾರನ ಹೆಸರು ಚಂಡಕರ್ಮ
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .
1. ಚಂಡಕರ್ಮನು ಎಂತಹ ಬಲಿಯನ್ನು ಹುಡುಕಿ ಹೊರಟನು ?
ಉತ್ತರ : ಚಂಡಕರ್ಮನು ಎಳೆಯ ವಯಸ್ಸಿನ , ಶುಭಲಕ್ಷಣದ , ಬುದ್ಧಿವಂತರಾದ , ಒಳ್ಳೆಯ ವಂಶದಲ್ಲಿ ಜನಿಸಿದ ಇಬ್ಬರು ಮನುಷ್ಯರನ್ನು ಬಲಿಗಾಗಿ ಹುಡುಕಲು ಹೊರಟನು .
2. ಅಭಯರುಚಿಯು ಅಭಯಮತಿಗೆ ಏನೆಂದು ಧೈರ್ಯವನ್ನು ಹೇಳಿದನು ?
ಉತ್ತರ : ಅಭಯರುಚಿಯು ತನ್ನ ತಂಗಿಯಾದ ಆಭಯಮತಿಯನ್ನು ಕುರಿತು “ ನೀತಿವಂತಳೇ ಕೇಳು , ವಿಧಿ ನಿಯಮವನ್ನು ಮೀರಲು ಯಾರಿಗೆ ಸಾಧ್ಯವಾಗುತ್ತದೆ ? ನಿನಗೆ ಭಯವೇಕೆ ? ಇಂತಹ ಸಮಯದಲ್ಲಿ ಬಂದ ಕಷ್ಟವನ್ನು ಸಹಿಸಿಕೊಳ್ಳಬೇಕು . ಸಂಭವಿಸುವ ಪರಿಷಹಗಳನ್ನು ( ೨೨ ಬಗೆಯ ಕೇಶಗಳನ್ನು ಜಯಿಸುವುದೇ ನಿಜವಾದ ತಪಸ್ಸು ತಪಸ್ಸಿಗೆ ಬೇರೆ ಎರಡು ಕೋಡು / ಕೊಂಬುಗಳಿವೆಯೇ ? ” ಎಂದು ಧೈರ್ಯ ಹೇಳಿದನು .
3. ಮಾವಿನ ಮರದಡಿಯಲ್ಲಿ ಉದುರಿದ್ದ ಮುತ್ತುಗದ ಹೂವುಗಳು ಹೇಗೆ ಕಾಣುತ್ತಿದ್ದವು ?
ಉತ್ತರ : ಚಂಡಮಾರಿ ದೇವತೆಗೆ ಹರಕೆ ಒಪ್ಪಿಸುವುದಕ್ಕಾಗಿ ವಸಂತನು ಶಿಶಿರ ಋತುವನ್ನು ಹಿಡಿದು , ಹೂವನ್ನು ಬಿಟ್ಟ ಮಾವಿನ ಮರದ ಮಣೆಯ ಮೇಲೆ ಕತ್ತರಿಸಿದ ( ತುಂಡರಿಸಿದ ) ಮಾಂಸದ ತುಂಡುಗಳಂತೆ ಆ ವನದಲ್ಲಿ ಉದುರಿದ್ದ ಮುತ್ತುಗದ ಹೂವಿನ ಮೊಗ್ಗುಗಳು ಕಾಣುತ್ತಿದ್ದವು .
4. ಮಾರಿದತ್ತ ಹಾಗೂ ಜನರು ಏಕೆ ಒಂದೆಡೆ ಸೇರಿದ್ದರು ?
ಉತ್ತರ : ಮಾರಿದತ್ತನೂ ಪುರಜನರೂ ಅವರವರಿಗೆ ಇಷ್ಟವಾದ ರೀತಿಯಲ್ಲಿ ಚಂಡಮಾರಿಗೆ ಹರಕೆ ಒಪ್ಪಿಸಿ ಅವಳಿಗೆ ಸಂತೋಷವನ್ನು ಉಂಟುಮಾಡಲೆಂದು ಹಾಗೂ ಜಾತ್ರೆಯಲ್ಲಿ ಸೇರಿದರು .
ಇ ] ಕೊಟ್ಟಿರುವ ಪ್ರಶ್ನೆಗೆ ಸುಮಾರು ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .
1. ‘ ನಿಯತಿಯನಾರ್ ಮೀಡಿದಪರ್ ‘ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .
ಉತ್ತರ : ಚಂಡಮಾರಿ ದೇವತೆಗೆ ಹರಕೆ ಒಪ್ಪಿಸುವುದಕ್ಕಾಗಿ ವಸಂತನು ಶಿಶಿರ ಋತುವನ್ನು ಹಿಡಿದು , ಕತ್ತರಿಸಿದ ಮಾಂಸದ ತುಂಡುಗಳಂತೆ ವನದಲ್ಲಿ ಮುತ್ತುಗದ ಹೂವಿನ ಮೊಗ್ಗುಗಳು ಕಾಣುತ್ತಿದ್ದವು . ಆಗ “ ಎಲೈ ಮಾರಿಯೇ , ವಸಂತ ಬಂದನು . ಈ ಕಡೆ ಗಮನ ಹರಿಸು ” ಎನ್ನುವಂತೆ ವನದಲ್ಲಿ ಅರಗಿಳಿಗಳು ನುಡಿದವು , ಆ ವಸಂತಮಾಸದಲ್ಲಿ ಮಾರಿದತ್ತನೂ ಪುರಜನರೂ ಅವರವರಿಗೆ ಇಷ್ಟವಾದ ರೀತಿಯಲ್ಲಿ ಚಂಡಮಾರಿಗೆ ಹರಕೆ ಒಪ್ಪಿಸಿ ಪೂಜಿಸಲೆಂದು ಜಾತ್ರೆಯಲ್ಲಿ ಸೇರಿದರು . ಚಂಡಮಾರಿ ದೇವಾಲಯದಲ್ಲಿ ಮಹಾರಾಜ ಮಾರಿದತ್ತನು ಚಂಡಕರ್ಮ ಎಂಬ ತಳಾರನಿಗೆ “ ಲಕ್ಷಣವಾದ ಇಬ್ಬರು ಮನುಷ್ಯರನ್ನು ಬಲಿ ಕೊಡುವುದಕ್ಕಾಗಿ ಕರೆದು ತಾ ” ಎಂದು ಹೇಳಿದನು . ಆಗ ಅವನು ಇಬ್ಬರು ಮನುಷ್ಯರನ್ನು ಹುಡುಕುತ್ತಾ ಹೊರಟನು . ಅದೇ ಸಮಯಕ್ಕೆ ಸುದತ್ತಾಚಾರ್ಯರೆಂಬ ಮುನಿಗಳು ಅಭಯರುಚಿ ಮತ್ತು ಅಭಯಮತಿ ಎಂಬ ಇಬ್ಬರು ಮಕ್ಕಳನ್ನು ಭಿಕ್ಷೆಯನ್ನು ತರಲು ಕಳುಹಿಸಿದರು . ಆ ಇಬ್ಬರೂ ಗುರುಗಳ ಪಾದಕ್ಕೆ ನಮಸ್ಕರಿಸಿ ಚರಿಗೆಗೆ ಹೋಗುತ್ತಿದ್ದಾಗ ಚಂಡಕರ್ಮನು ಅವರಿಬ್ಬರನ್ನು ‘ ಎಳೆಯ ಜಿಂಕೆಯ ಮರಿಗಳನ್ನು ಹುಲಿ ಹಿಡಿಯುವಂತೆ ‘ ಹಿಡಿದನು . ಚಂಡಕರ್ಮನು ಅವರನ್ನು ಹೊತ್ತುಕೊಂಡು ಹೋಗುವ ಸಮಯದಲ್ಲಿ ಅಭಯರುಚಿಯು ತನ್ನ ತಂಗಿ ಅಭಯಮತಿಯನ್ನು ಕುರಿತು “ ಎಲೈ ತಾಯಿ , ಮರಣದ ಬಗ್ಗೆ ಭಯಪಡಬೇಡ . ಇಂತಹ ಸಮಯದಲ್ಲಿ ಕಷ್ಟವನ್ನು ಸಹಿಸಿಕೊಳ್ಳಬೇಕು . ಅದೇ ನಿಜವಾದ ತಪಸ್ಸು ; ತಪಸ್ಸಿಗೆ ಬೇರೆ ಎರಡು ಕೊಂಬುಗಳಿವೆಯೇ ? ” ಎಂದು ಧೈರ್ಯ ಹೇಳಿದನು .
ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .
1. “ ನಿಯತಿಯನಾರ್ ಮೀಟಿದಪರ್ ”
ಆಯ್ಕೆ : ಈ ವಾಕ್ಯವನ್ನು ಜನ್ನನು ರಚಿಸಿರುವ ‘ ಯಶೋಧರ ಚರಿತೆ ‘ ಎಂಬ ಕೃತಿಯಿಂದ ಆರಿಸಲಾಗಿರುವ ‘ ನಿಯತಿಯನಾರ್ ಮೀಡಿದಪರ್ ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಅಭಯರುಚಿ ಮತ್ತು ಅಭಯಮತಿ ಎಂಬ ಆ ಇಬ್ಬರನ್ನು ಪಾಪಕರ್ಮನಾದ ಚಂಡಕರ್ಮನು ಹೊತ್ತುಕೊಂಡು ಹೋಗುವ ಸಂದರ್ಭದಲ್ಲಿ ಅಭಯರುಚಿಯು ತನ್ನ ತಂಗಿ ಅಭಯಮತಿಗೆ ಧೈರ್ಯ ತುಂಬುತ್ತಾ “ ಮರಣಕ್ಕಾಗಿ ಹೆದರಬೇಡ , ವಿಧಿ ನಿಯಮವನ್ನು ಯಾರುತಾನೆ ಮೀರಲು ಸಾಧ್ಯ ? ” ಎಂದು ಬುದ್ಧಿವಾದ ಹೇಳುತ್ತಾನೆ .
ಸ್ವಾರಸ್ಯ : ಅಭಯರುಚಿಯಲ್ಲಿದ್ದ ವಯಸ್ಸಿಗೆ ಮೀರಿದ ಅನುಭವ , ಧೈರ್ಯ ಹಾಗೂ ವಿಚಾರಶಕ್ತಿ ಅವನ ಈ ಮಾತಿನಲ್ಲಿ ಸ್ವಾರಸ್ಯಕರವಾಗಿ ವ್ಯಕ್ತವಾಗಿದೆ .
2. ” ತರಕ್ಷು ಪಿಡಿವಂತೆ ಚಂಡಕರ್ಮ ೦ ಪಿಡಿದಂ ”
ಆಯ್ಕೆ : ಈ ವಾಕ್ಯವನ್ನು ಜನ್ನನು ರಚಿಸಿರುವ ‘ ಯಶೋಧರ ಚರಿತೆ ‘ ಎಂಬ ಕೃತಿಯಿಂದ ಆರಿಸಲಾಗಿರುವ ‘ ನಿಯತಿಯನಾರ್ ಮೀಡಿದಪರ್ ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಮಹಾರಾಜನ ಆಜ್ಞೆಯಂತೆ ಬಲಿಕೊಡುವುದಕ್ಕಾಗಿ ಇಬ್ಬರು ಮನುಷ್ಯರನ್ನು ಚಂಡಕರ್ಮನು ಹುಡುಕುತ್ತಾ ಹೋಗುತ್ತಿರುವಾಗ ಅದೇ ಮಾರ್ಗವಾಗಿ ಭಿಕ್ಷೆಗೆ ತೆರಳುತ್ತಿದ್ದ ಅಭಯರುಚಿ ಮತ್ತು ಅಭಯಮತಿ ಎಂಬ ಮಕ್ಕಳನ್ನು ಅವನು ಹಿಡಿದುಕೊಂಡ ಬಗೆಯನ್ನು ವರ್ಣಿಸುವ ಸಂದರ್ಭದಲ್ಲಿ ‘ ಜಿಂಕೆಗಳನ್ನು ಹುಲಿ ಹಿಡಿಯುವಂತೆ ಹಿಡಿದನು ‘ ಎಂದು ಕವಿ ಈ ಹೇಳಿದ್ದಾನೆ .
ಸ್ವಾರಸ್ಯ : ಇಲ್ಲಿ ಕಾಡು ಜಿಂಕೆಗಳ ಜೋಡಿಯನ್ನು ಹುಲಿ ಹಿಡಿಯುವುದಕ್ಕೆ ಹೋಲಿಸಿರುವುದು ಈ ಸಂದರ್ಭಕ್ಕೆ ಸ್ವಾರಸ್ಯಪೂರ್ಣವಾಗಿದೆ . .
3. “ ಪೂಜೆಯೊಳೆಂದಿನ ಪರಿ ತಪ್ಪ ದೇವಿ ತಪ್ಪದೆ ಮಾಣಳ ”
ಆಯ್ಕೆ : ಈ ವಾಕ್ಯವನ್ನು ಜನ್ನನು ರಚಿಸಿರುವ ‘ ಯಶೋಧರ ಚರಿತೆ ‘ ಎಂಬ ಕೃತಿಯಿಂದ ಆರಿಸಲಾಗಿರುವ ‘ ನಿಯತಿಯನಾರ್ ಮೀಡಿದಪರ್ ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಮಹಾರಾಜ ಮಾರಿದತ್ತನು ಚಂಡಕರ್ಮನಿಗೆ “ ಇಬ್ಬರು ಮನುಷ್ಯರನ್ನು ಕರೆದುಕೊಂಡು ಬಾ . ಅವರನ್ನು ಕೊಂದು ದೇವಿಗೆ ಪೂಜೆಯನ್ನು ಸಲ್ಲಿಸುವೆನು . ಎಂದಿನ ಪದ್ಧತಿಯಂತೆ ಬಲಿಯನ್ನು ಕೊಡದೆ ತಪ್ಪಿಸಿದರೆ , ಚಂಡಮಾರಿ ದೇವತೆಯು ಕೆಡಕು ಮಾಡದೆ ಬಿಡುವುದಿಲ್ಲ ” ಎಂದು ಈ ಸಂದರ್ಭದಲ್ಲಿ ಹೇಳುತ್ತಾನೆ .
ಸ್ವಾರಸ್ಯ : ಇಲ್ಲಿ ಮಾರಿದತ್ತ ಮಹಾರಾಜನಿಗೆ ಚಂಡಮಾರಿ ದೇವತೆಯ ಮೇಲಿದ್ದ ಭಯ – ಭಕ್ತಿಭಾವಗಳು ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .
4.“ ಅಭೀತೆಯಾಗೆಲಗೆ ತಾಯೆ ಮರಣದ ದೆಸೆಯೊಳ್ ”
ಆಯ್ಕೆ : ಈ ವಾಕ್ಯವನ್ನು ಜನ್ನನು ರಚಿಸಿರುವ ‘ ಯಶೋಧರ ಚರಿತೆ ‘ ಎಂಬ ಕೃತಿಯಿಂದ ಆರಿಸಲಾಗಿರುವ ‘ ನಿಯತಿಯನಾರ್ ಮೀಡಿದಪರ್ ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಅಭಯರುಚಿ ಮತ್ತು ಅಭಯಮತಿ ಎಂಬ ಆ ಇಬ್ಬರನ್ನು ಪಾಪಕರ್ಮನಾದ ಚಂಡಕರ್ಮನು ಹೊತ್ತುಕೊಂಡು ಹೋಗುವ ಸಂದರ್ಭದಲ್ಲಿ ಅಭಯರುಚಿಯು ತನ್ನ ತಂಗಿ ಅಭಯಮತಿಯನ್ನು ಕುರಿತು “ ಎಲೈ ತಾಯಿ , ಮರಣದ ಬಗ್ಗೆ ಭಯಪಡಬೇಡ ” ಎಂದು ಹೇಳುತ್ತಾನೆ .
ಸ್ವಾರಸ್ಯ : ಚಂಡಕರ್ಮನು ಬಲಿಗಾಗಿ ಹೊತ್ತುಕೊಂಡು ಹೋಗುತ್ತಿದ್ದರೂ ಬಾಲಕನಾದ ಅಭಯರುಚಿಯು ಅಂಜದೆ ತನ್ನ ಸಹೋದರಿಗೆ ಧೈರ್ಯ ತುಂಬುವ ಸಮಯಪ್ರಜ್ಞೆ ಇಲ್ಲಿ ಸ್ವಾರಸ್ಯಕರವಾಗಿದೆ .
ಭಾಷಾ ಚಟುವಟಿಕೆ
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ .
1. ಮಾತ್ರೆಗಳಲ್ಲಿ ಎಷ್ಟು ವಿಧ ? ಅವು ಯಾವುವು ?
ಉತ್ತರ : ಮಾತ್ರೆಗಳಲ್ಲಿ ಎರಡು ವಿಧ . ಅವೇ ಲಘು ಮತ್ತು ಗುರು , ಲಘುವನ್ನು ‘ V ‘ ಎಂತಲೂ ಗುರುವನ್ನು – ಎಂತಲೂ ಗುರುತಿಸಲಾಗುವುದು ,
2 , ಲಘು ಮತ್ತು ಗುರು ಎಂದರೇನು ? ಕನ್ನಡ
ಉತ್ತರ : ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸಬಹುದಾದ ಅಕ್ಷರವೇ ಲಘು ಎರಡು ಅಥವಾ ಎರಡಕ್ಕಿಂತ ಹೆಚ್ಚು ಮಾತ್ರಾ ಕಾಲದಲ್ಲಿ ಉಚ್ಚರಿಸಬಹುದಾದ ಅಕ್ಷರವೇ ಗುರು .
3 , ಕಂದ ಪದ್ಯದ ಲಕ್ಷಣವನ್ನು ಬರೆಯಿರಿ .
ಉತ್ತರ :
೧, ನಾಲ್ಕು ಪಾದಗಳಿರಬೇಕು .
೨, ಒಂದು ಮತ್ತು ಮೂರನೆಯ ಪಾದಗಳು ಪರಸ್ಪರ ಸಮವಾಗಿದ್ದು ನಾಲ್ಕು ಮಾತ್ರೆಗಳ ತಲಾ ಮೂರು ಮೂರು ಗಣಗಳಿರಬೇಕು .
೩, ಎರಡು ಮತ್ತು ನಾಲ್ಕನೆಯ ಪಾದಗಳು ಪರಸ್ಪರ ಸಮವಾಗಿದ್ದು ನಾಲ್ಕು ಮಾತ್ರೆಗಳ ತಲಾ ಐದೈದು ಗಣಗಳಿರಬೇಕು .
೪, ಪ್ರತಿ ಪಾದವೂ ಆದಿಪ್ರಾಸದಿಂದ ಕೂಡಿರಬೇಕು .
ಆ ) ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ , ಕಂಠಪಾಠ ಮಾಡಿರಿ ,
ಮಾರಿ ಮಲಯಾಳಂ ನವ
ನೀರಜವನವೆಂಬ ಕೆಂಡದೊಳ್ ದಂಡನಮ
ಸ್ಕಾರದೆ ಬಂದಪನಿತ್ತವ
ಧಾರಿಪುದೆಂಬಂತಿರುಲಿದುವರಗಳಿ ಬನದೊಳ್
ನಿಯತಿಯನಾರ್ ಮೀಟಿದಪರ್
ಭಯಮೇವುದೊ ಮುಟ್ಟಿದೆಡೆಗೆ ಸೈರಿಸುವುದೆ ಕೇಳ್
ನಯವಿದೆ ಪತ್ತೆ ಪರೀಷಹ
ಜಯಮ ತಪಂ ತಪಕ ಬೇಟಿ ಕೋಡೆರಡೊಳವೇ
ಇ ) ಈ ಕೆಳಗಿನ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ , ಗಣ ವಿಭಾಗ ಮಾಡಿ , ಛಂದಸ್ಸಿನ ಹೆಸರನ್ನು ಬರೆಯಿರಿ .
9th standard Niyatiyanar Meeridapar Kannada Poem Notes Question Answer Pdf
ಇತರೆ ಪದ್ಯಗಳು :