9ನೇ ತರಗತಿ ಕನ್ನಡ ಪಾರಿವಾಳ ಪದ್ಯದ ನೋಟ್ಸ್ | 9th Standard Kannada Parivaala Poem Notes

9ನೇ ತರಗತಿ ಕನ್ನಡ ಪಾರಿವಾಳ ಪದ್ಯದ ಪ್ರಶ್ನೋತ್ತರಗಳು ನೋಟ್ಸ್, 9th Parivala Poem Notes Question Answer Pdf Download, 9th Class Parivala Poem Notes

ತರಗತಿ : 9ನೇ ತರಗತಿ

ಪದ್ಯದ ಹೆಸರು : ಪಾರಿವಾಳ

ಕೃತಿಕಾರರ ಹೆಸರು : ಸು . ರಂ . ಎಕ್ಕುಂಡಿ

ಕೃತಿಕಾರರ ಪರಿಚಯ :

ಸು . ರಂ . ಎಕ್ಕುಂಡಿ

ಸು . ರಂ . ಎಕ್ಕುಂಡಿ ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗಣ್ಣ ಎಕ್ಕುಂಡಿ . ಇವರು ಹುಟ್ಟಿದ್ದು ೧೯೨೩ ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ . ಇವರ ಕೃತಿಗಳು : ಕವನ ಸಂಕಲನ : ಶ್ರೀ ಆನಂದ ತೀರ್ಥರು , ಸಂತಾನ , ಹಾವಾಡಿಗರ ಹುಡುಗ , ಮತ್ಸ ಗಂಧಿ , ಬಕುಳದ ಹೂಗಳು . ಕಥಾಸಂಕಲನ : ನೆರಳು , ಕಾದಂಬರಿ : ಪ್ರತಿಬಿಂಬಗಳು . ಪ್ರಶಸ್ತಿಗಳು : ಸೋವಿಯತ್ ಲ್ಯಾಂಡ್‌ನ ನೆಹರು ಪುರಸ್ಕಾರ , ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ , ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿವೆ . ಪ್ರಸ್ತತ ‘ ಪಾರಿವಾಳ ‘ ಪದ್ಯವನ್ನು ಸು . ರಂ . ಎಕ್ಕುಂಡಿ ಅವರ ‘ ಸಮಗ್ರ ಕಥನ ಕವನಗಳು ‘ ಎಂಬ ಕೃತಿಯಿಂದ ಆರಿಸಲಾಗಿದೆ .

9th Class Parivala Poem Notes Question Answer

ಅ ] ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .

1 ) ಬಲೆಯಲ್ಲಿದ್ದ ಮರಿಗಳು ಹೊರಗೆ ಬರಲು ಏನು ಮಾಡಿದವು ?

ಉತ್ತರ : ಬಲೆಯಲ್ಲಿದ್ದ ಮರಿಗಳು ಹೊರಗೆ ಬರಲು ಕಿರುಚತೊಡಗಿದವು .

2) ಏನನ್ನು ತೊರೆದು ಬಾಳಬೇಕು ?

ಉತ್ತರ : ವ್ಯಾಮೋಹವನ್ನು ತೊರೆದು ಬಾಳಬೇಕು .

3 ) ಮುದ್ದು ಪಾರಿವಾಳಗಳ ಜೋಡಿ ಎಲ್ಲಿ ಸಂಸಾರ ಹೂಡಿದ್ದವು ?

ಉತ್ತರ : ಮುದ್ದು ಪಾರಿವಾಳಗಳ ಜೋಡಿ ದಟ್ಟಕಾಡಿನಲ್ಲಿ ಹೆಮ್ಮರದ ಪೊಟರೆಯಲ್ಲಿ ಸಂಸಾರ ಹೂಡಿತ್ತು .

4 ) ಜೋಡಿ ಪಾರಿವಾಳಗಳು ಹೇಗೆ ಬಾಳುತ್ತಿದ್ದವು ?

ಉತ್ತರ : ಜೋಡಿ ಪಾರಿವಾಳಗಳು ಹಗಲಿರುಳು ಜೊತೆಗೂಡಿ ಬಾಳಿದವು .

ಆ ] ಈ ಪ್ರಶ್ನೆಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

1 ) ಬೇಡ ಏನು ಮಾಡಿದನು ?

ಉತ್ತರ : ಹಸಿದಿದ್ದ ಬೇಡನೊಬ್ಬನು ಪಾರಿವಾಳಗಳು ವಾಸವಾಗಿದ್ದ ಮರದ ಬಳೆಬಂದು ಬಲೆಯನ್ನು ಹರಡಿದನು . ಆ ಬಲೆಗೆ ಬಿದ್ದ ಪಾರಿವಾಳಗಳ ಸಂಸಾರವನ್ನು ಹೊತ್ತುಕೊಂಡು ಹೋದನು .

2 ) ಪಾರಿವಾಳಗಳ ಆನಂದಕ್ಕೆ ಕಾರಣವೇನು ?

ಉತ್ತರ : ಪಾರಿವಾಳವು ಇಟ್ಟ ಮೊಟ್ಟೆ ಒಡೆದು ಮರಿಗಳು ಹೊರ ಬಂದಾಗ ಅವುಗಳ ಪ್ರೀತಿ ಹೆಚ್ಚಾಯಿತು . ಪ್ರತಿನಿತ್ಯ ಆ ಮರಿಗಳ ಮಧುರವಾದ ಚಿಲಿಪಿಲಿ ಸದ್ದು ಕೇಳುತ್ತಾ ಪಾರಿವಾಳಗಳಿಗೆ ಆನಂದವಾಯಿತು .

ಇ ] ಈ ಪ್ರಶ್ನೆಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ

1 ) ‘ ಪಾರಿವಾಳ ‘ ಪದ್ಯದ ಕಥೆಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .

ದಟ್ಟವಾದ ಕಾಡಿನ ಹೆಮ್ಮರದ ಪೊಟರೆಯಲ್ಲಿ ಪಾರಿವಾಳಗಳ ಜೋಡಿ ವಾಸವಾಗಿದ್ದವು . ಅವು ಪರಸ್ಪರ ಒಂದನ್ನೊಂದು ಬಿಟ್ಟಿರದಷ್ಟು ಪ್ರೀತಿ ಹೊಂದಿದ್ದವು . ಒಮ್ಮೆ ಹೆಣ್ಣು ಪಾರಿವಾಳವು ಮೊಟ್ಟೆಗಳನ್ನು ಇಟ್ಟಿತು . ಆ ಮೊಟ್ಟೆಗಳು ಒಡೆದು ಹೊರಬಂದು ಚಿಲಿಪಿಲಿ ಸದ್ದು ಮಾಡುವುದನ್ನು ಕೇಳುತ್ತಾ ಪಾರಿವಾಳಗಳು ಆನಂದದಿಂದ ಬಾಳುತ್ತಿದ್ದವು . ಹೀಗಿರುವಾಗ ಒಂದು ದಿನ ಒಬ್ಬ ಬೇಡನು ಬಲೆ ಹಾಕಿದನು . ಆಟವಾಡುತ್ತಿದ್ದ ಪುಟ್ಟಮರಿಗಳು ಬೇಡನು ಹಾಕಿದ್ದ ಬಲೆಗೆ ಸಿಕ್ಕಿಬಿದ್ದವು . ಬಿಡಿಸಿಕೊಳ್ಳಲು ಕಿರುಚಾಡತೊಡಗಿದವು . ಬಲೆಗೆ ಸಿಲುಕಿದ ಪುಟ್ಟ ಮರಿಗಳನ್ನು ಕಂಡ ತಾಯಿ ಪಾರಿವಾಳ ತಾನೂ ಬಲೆಗೆ ದುಮುಕಿತು . ಹೆಣ್ಣು ಪಾರಿವಾಳವನ್ನು ಬಿಟ್ಟಿರಲಾರದ ಗಂಡುಪಾರಿವಾಳವು ಕಣ್ಣೀರಿಡುತ್ತಾ ತಾನೂ ಬಲೆಯ ಒಳಗೆ ಹೋಯಿತು . ಹೀಗೆ ಜೋಡಿ ಪಾರಿವಾಳಗಳು ಕುರುಡು ವಾತ್ಸಲ್ಯದ ಅವಿವೇಕದಿಂದ ತಾವೂ ಬಲೆಗೆ ಸಿಲುಕಿ ಬೇಡನ ಪಾಲಾದವು . ‘ ಮೋಹ ‘ ಎಂಬುದು ಸರ್ವನಾಶಕ್ಕೆ ಕಾರಣ . ವ್ಯಾಮೋಹ ತೊರೆದು ತಾಳ್ಮೆಯಿಂದ ಯೋಚಿಸಿ ಕಾರ್ಯ ಸಾಧನೆ ಮಾಡಬೇಕು ಎಂಬುದೇ ಈ ಕಥನ ಕವನದ ಆಶಯವಾಗಿದೆ .

2 ) ಜೋಡಿ ಪಾರಿವಾಳಗಳ ದುಡುಕಿನ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ?

ಉತ್ತರ : ಜೋಡಿ ಪಾರಿವಾಳಗಳು ದುಡುಕಿನಿಂದ ತಮ್ಮ ಮರಿಗಳ ಮೇಲಿನ ವ್ಯಾಮೋಹದಿಂದ ತಾವೂ ಸಹ ಬೇಡನಿಗೆ ಆಹಾರವಾದದ್ದು ಸರಿಯಲ್ಲ . ತಮ್ಮ ಮರಿಗಳು ಬಲೆಗೆ ಸಿಕ್ಕಿಕೊಂಡದನ್ನು ನೋಡಿದ ಹೆಣ್ಣು ಪಾರಿವಾಳ ವಿವೇಚನೆಯಿಲ್ಲದೆ ಮರಿಗಳ ಮೇಲಿನ ಅತಿಯಾದ ವಾತ್ಸಲ್ಯದಿಂದ ತಾನೂ ಬಲೆಗೆ ಸಿಕ್ಕಿಕೊಂಡಿತು . ಹೆಣ್ಣು ಪಾರಿವಾಳವನ್ನು ಬಿಟ್ಟಿರದಷ್ಟು ಹಚ್ಚಿಕೊಂಡಿದ್ದ ಗಂಡು ಪಾರಿವಾಳವು ತಾನೂ ಕೂಡ ಬಲೆಗೆ ಸಿಕ್ಕಿಕೊಂಡಿತು . ಹೀಗೆ ಜೋಡಿ ಪಾರಿವಾಳಗಳು ಅತಿಯಾದ ವ್ಯಾಮೋಹದಿಂದ ಪ್ರಾಣ ಕಳೆದುಕೊಂಡವು . ಸಾಧ್ಯವಾದರೆ ತಮ್ಮನ್ನೂ ರಕ್ಷಿಸಿಕೊಂಡು ಮರಿಗಳನ್ನು ಕಾಪಾಡಲು ಯೋಚಿಸಬಹುದಿತ್ತು . ಸಾಧ್ಯವಾಗದಿದ್ದರೆ ತಾವಾದರೂ ಬದುಕಬಹುದಿತ್ತು . ಆದ್ದರಿಂದ ವ್ಯಾಮೋಹ ಒಳ್ಳೆಯದಲ್ಲ ಎಂದು ಹೇಳಬಹುದು .

ಈ) ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ .

1 ) “ ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ಧಿ ”

ಉತ್ತರ : – ಆಯ್ಕೆ : ಈ ವಾಕ್ಯವನ್ನು ಸು.ರಂ.ಎಕ್ಕುಂಡಿ ಅವರ ‘ ಸಮಗ್ರ ಕಥನ ಕವನಗಳು ‘ ಎಂಬ ಕೃತಿಯಿಂದ ತೆಗೆದುಕೊಳ್ಳಲಾಗಿರುವ ‘ ಪಾರಿವಾಳ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಜೋಡಿ ಪಾರಿವಾಳಗಳು ಮರಿಗಳ ಮೇಲಿನ ಕುರುಡು ವಾತ್ಸಲ್ಯದ ಅವಿವೇಕದಿಂದ ತಾವೂ ಬಲೆಗೆ ಸಿಲುಕಿ ಬೇಡನ ಪಾಲಾದವು . ‘ ಮೋಹ ‘ ಎಂಬುದು ಸರ್ವನಾಶಕ್ಕೆ ಕಾರಣ ಎಂದು ಹೇಳುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ .

ಸ್ವಾರಸ್ಯ : ವ್ಯಾಮೋಹ ತೊರೆದು ತಾಳ್ಮೆಯಿಂದ ಯೋಚಿಸಿ ಕಾರ್ಯಸಾಧನೆ ಮಾಡಬೇಕು . ಅತಿಯಾದ ವ್ಯಾಮೋಹ ಒಳ್ಳೆಯದಲ್ಲ ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ .

2 ) “ ಒಳಗೆ ಬಂದಿತು ಬಳಿಗೆ ಬಿಕ್ಕಿ ಬಿಕ್ಕಿ ”

ಉತ್ತರ : – ಆಯ್ಕೆ : ಈ ವಾಕ್ಯವನ್ನು ಸು.ರಂ.ಎಕ್ಕುಂಡಿ ಅವರ ‘ ಸಮಗ್ರ ಕಥನ ಕವನಗಳು ‘ ಎಂಬ ಕೃತಿಯಿಂದ ತೆಗೆದುಕೊಳ್ಳಲಾಗಿರುವ ‘ ಪಾರಿವಾಳ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಪಾರಿವಾಳಗಳ ಪುಟ್ಟಮರಿಗಳು ಬೇಡನ ಬಲೆಗೆ ಸಿಕ್ಕಿಬಿದ್ದವು . ಬಿಡಿಸಿಕೊಳ್ಳಲು ಕಿರುಚಾಡತೊಡಗಿದವು . ಬಲೆಗೆ ಸಿಲುಕಿದ ಪುಟ್ಟ ಮರಿಗಳನ್ನು ಕಂಡ ತಾಯಿ ಪಾರಿವಾಳ ತಾನೂ ಬಲೆಗೆ ದುಮುಕಿತು . ಹೆಣ್ಣು ಪಾರಿವಾಳವನ್ನು ಬಿಟ್ಟಿರಲಾರದ ಗಂಡುಪಾರಿವಾಳವು ಕಣ್ಣೀರಿಡುತ್ತಾ ತಾನೂ ಬಲೆಯ ಒಳಗೆ ಹೋಯಿತು ಎಂದು ಹೇಳುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ .

ಸ್ವಾರಸ್ಯ : ಜೋಡಿ ಪಾರಿವಾಳಗಳ ಕುರುಡು ವಾತ್ಸಲ್ಯವು ಇಲ್ಲಿ ಸ್ವಾರಸ್ಯವಾಗಿ ಮೂಡಿಬಂದಿದೆ .

ಭಾಷಾ ಚಟುವಟಿಕೆ

1 .ರೂಪಕಾಲಂಕಾರವನ್ನು ನಿದರ್ಶನದ ಮೂಲಕ ವಿವರಿಸಿ

ಲಕ್ಷಣ : ಉಪಮೇಯ , ಉಪಮಾಗಳು ಎರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವ ಅಲಂಕಾರವೇ ರೂಪಕಾಲಂಕಾರ

ಉದಾ : ಸೀತೆಯ ಮುಖ ಕಮಲ ಅರಳಿತು

ಉಪಮೇಯ :  ಸೀತೆಯ ಮುಖ

ಉಪಮಾನ : ಕಮಲ

ಅಲಂಕಾರ : ರೂಪಕಾಲಂಕಾರ

ಸಮನ್ವಯ : ಉಪಮೇಯವಾದ ಸೀತೆಯ ಮುಖವನ್ನು ಉಪಮಾನವಾದ ಕಮಲಕ್ಕೆ ಅಭೇದವಾಗಿ ರೂಪಿಸಿದೆ ಹಾಗಾಗಿ ಸಮನ್ವಯ ಇದು ರೂಪಕಾಲಂಕಾರ

2 , “ಸಾವಿತ್ರಿಯ ಮುಖಕಮಲ ಅರಳಿತು” ಇಲ್ಲಿರುವ ಅಲಂಕಾರವನ್ನು ಹೆಸರಿಸಿ ಸಮನ್ವಯಿಸಿರಿ

ಲಕ್ಷಣ : ಉಪಮೇಯ, ಉಪಮಾನಗಳು ಎರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವ ಅಲಂಕಾರವೇ ರೂಪಕಾಲಂಕಾರ ,

ಉಪಮೇಯ : ಸಾವಿತ್ರಿಯ ಮುಖ

ಉಪಮಾನ : ಕಮಲ

ಅಲಂಕಾರ : ರೂಪಕಾಲಂಕಾರ

ಸಮನ್ವಯ : ಉಪಮೇಯವಾದ ಸಾವಿತ್ರಿಯ ಮುಖವನ್ನು ಉಪಮಾನವಾದ ಕಮಲ ಕೈ ಅಭೇದವಾಗಿ ರೂಪಿಸಿದೆ . ಹಾಗಾಗಿ ಇದು ರೂಪಕಾಲಂಕಾರ

3,  “ಶಾಲೆಗೆ ಈ ವಿದ್ಯಾರ್ಥಿಯೊಂದು ರತ್ನ” 

ಲಕ್ಷಣ : ಉಪಮೇಯ , ಉಪಮಾಗಳು ಎರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವ ಅಲಂಕಾರವೇ ರೂಪಕಾಲಂಕಾರ

ಉಪಮೇಯ : ವಿದ್ಯಾರ್ಥಿ

ಉಪಮಾನ   :  ರತ್ನ

ಅಲಂಕಾರ    : ರೂಪಕಾಲಂಕಾರ

ಸಮನ್ವಯ    : ಉಪಮೇಯವಾದ ವಿದ್ಯಾರ್ಥಿಯನ್ನು ಉಪಮಾನವಾದ ರತ್ನ ಕೈ ಅಭೇದವಾಗಿ ರೂಪಿಸಿದೆ . ಹಾಗಾಗಿ ಇದು ರೂಪಕಾಲಂಕಾರ ,,

4, ” ಮನೆಯೇ ಧರ್ಮಾಶ್ರಮ “

ಲಕ್ಷಣ            :          ಉಪಮೇಯ , ಉಪಮಾಗಳು ಎರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವ ಅಲಂಕಾರವೇ ರೂಪಕಾಲಂಕಾರ

ಉಪಮೇಯ   :          ಮನೆ

ಉಪಮಾನ     :          ಧರ್ಮಾಶ್ರಮ

ಅಲಂಕಾರ     :          ರೂಪಕಾಲಂಕಾರ

ಸಮನ್ವಯ     :          ಉಪಮೇಯವಾದ ಮನೆಯನ್ನು ಉಪಮಾನವಾದ ಧರ್ಮಾಶ್ರಮಕ್ಕೆ ಅಭೇದವಾಗಿ ರೂಪಿಸಿದೆ ಹಾಗಾಗಿ ಇದು                                                     ರೂಪಕಾಲಂಕಾರ

5. ‘ ಪಾರಿವಾಳ ‘ ಪದ್ಯದಲ್ಲಿರುವ ಅಂತ್ಯಪ್ರಾಸ ಪದಗಳನ್ನು ಪಟ್ಟಿಮಾಡಿ .

ಹೂಡಿ   –   ಜೋಡಿ

ಒಂದನೊಂದು  –  ಬಂದು

ಕೇಳಿ                  –   ಬಾಳಿ

ಸೆರೆಗೆ                  –   ಹೊರಗೆ

ಹಕ್ಕಿ                    –  ಬಿಕ್ಕಿ

ಹಿಂಡು                –   ಕೊಂಡು

ಬಾಳಬೇಕು           –   ತಾಳಬೇಕು

9th Class Parivala Poem Notes Question Answer Pdf

ಇತರೆ ಪಾಠಗಳು :

ಹೊಸಹಾಡು ಪದ್ಯದ ನೋಟ್ಸ್

ಹರಲೀಲೆ ಪಾಠದ ನೋಟ್ಸ್

Leave your vote

79 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh