9ನೇ ತರಗತಿ ಪ್ರಜಾನಿಷ್ಠೆ ಪಾಠದ ಪ್ರಶ್ನೋತ್ತರಗಳು ನೋಟ್ಸ್, 9th Standard Prajanishte Kannada Notes Question Answer Pdf Download
ತರಗತಿ : 9ನೇ ತರಗತಿ
ಪಾಠದ ಹೆಸರು : ಪ್ರಜಾನಿಷ್ಠೆ
ಕೃತಿಕಾರರ ಹೆಸರು : ಸಾ . ಶಿ .ಮರುಳಯ್ಯ
Table of Contents
ಕೃತಿಕಾರರ ಪರಿಚಯ :
ಸಾ . ಶಿ .ಮರುಳಯ್ಯ :
ಶ್ರೀ ಸಾಸಲು ಶಿವರುದ್ರಯ್ಯ ಮರುಳಯ್ಯ ಇವರು ಕ್ರಿ.ಶ. 1931 ರಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ಜನಿಸಿದರು, ಇವರ ತಂದೆ ಶಿವರುದ್ರಯ್ಯ , ತಾಯಿ ಸಿದ್ದಮ್ಮ , ಇವರು ಕ್ರಿಶ 1956 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ . ಎ . ಪದವಿಯನ್ನು ಮತ್ತು ಕ್ರಿ ಶ 1971 ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ‘ ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ ‘ ಕುರಿತ ಮಹಾಪ್ರಬಂಧಕ್ಕೆ ಪಿಎಚ್.ಡಿ . ಪದವಿಯನ್ನು ಪಡೆದರು . ಕ್ರಿ . ಶ . 1999 ರಿಂದ 1998 ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು . ರಾಜ್ಯಭಾಷಾ ಆಯೋಗದ ಸದಸ್ಯರಾಗಿಯೂ ಸೇವೆಯನ್ನು ಸಲ್ಲಿಸಿದರು .
Prajanishte Kannada Notes Question Answer
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ ,
1. ಬನದಮ್ಮನ ಹಳ್ಳಿಯ ಜನರು ಎಲ್ಲಿ ಪಂಚಾಯಿತಿ ಸೇರಿದ್ದರು ?
ಉತ್ತರ : ಬನದಮ್ಮನ ಹಳ್ಳಿಯ ಜನರು ಬನಶಂಕರಿಯ ದೇವಾಲಯದ ಮುಂಭಾಗದ ಕಟ್ಟೆಯ ಮೇಲೆ ಪಂಚಾಯಿತಿ ಸೇರಿದ್ದರು .
2. ಬನದಮ್ಬನ ಹಳ್ಳಿಯ ಪಂಚಾಯಿತಿಯಲ್ಲಿ ಯಾರಾರ ನಡುವಿನ ನ್ಯಾಯ ತೀರ್ಮಾನವಾಗುತ್ತಿತ್ತು ?
ಉತ್ತರ : ಬನದಮ್ಮನ ಹಳ್ಳಿಯ ಪಂಚಾಯಿತಿಯಲ್ಲಿ ಬೀರಣ್ಣ ಮತ್ತು ಈರಣ್ಣರ ನಡುವಿನ ನ್ಯಾಯ ತೀರ್ಮಾನವಾಗುತ್ತಿತ್ತು .
3. ಚೋಳರು ಮತ್ತು ಹೊಯ್ಸಳರ ನಡುವೆ ಎಲ್ಲಿ ಯುದ್ಧ ನಡೆಯಿತು ?
ಉತ್ತರ : ಚೋಳರು ಮತ್ತು ಹೊಯ್ಸಳರ ನಡುವೆ ಮಳವಳ್ಳಿ , ಮುಡುಕುತೊರೆಗಳ ಬಳಿಯಲ್ಲಿ ಯುದ್ಧ ನಡೆಯಿತು .
4. ಸಾಮ್ರಾಟನು ರಾಜಧಾನಿಯಲ್ಲಿ ಇಲ್ಲದಿದ್ದಾಗ ರಾಜ್ಯದ ಸಂರಕ್ಷಕರಾಗಿ ನಿಂತಿದ್ದವರು ಯಾರು ?
ಉತ್ತರ : ಸಾಮ್ರಾಟನು ರಾಜಧಾನಿಯಲ್ಲಿ ಇಲ್ಲದಿದ್ದಾಗ ರಾಜ್ಯದ ಸಂರಕ್ಷಕರಾಗಿ ನಿಂತಿದ್ದವರು ರಾಣಿ ಶಾಂತಲಾದೇವಿ ಮತ್ತು ಯುವರಾಜ ಉದಯಾದಿತ್ಯ
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .
1. ಬನದಮ್ಮನ ಹಳ್ಳಿಯ ದೇವಾಲಯದ ಮುಂದೆ ಯಾದ ವಿಚಾರವಾಗಿ ಚರ್ಚೆ ನಡೆದಿತ್ತು ?
ಉತ್ತರ : ಬೀರಣ್ಣ ತನ್ನ ಹೊಲವನ್ನು ನೂರೆಂಟು ಹೊನ್ನಿಗೆ ಈರಣ್ಣನಿಗೆ ಮಾಡಿದ್ದನು . ಈರಣ್ಣ ಹೊಲ ಉಳುತ್ತಿದ್ದಾಗ ಆ ಹೊಲದಲ್ಲಿ ಒಂದು ಕೊಪ್ಪರಿಗೆಯನ್ನು ಹೊನ್ನು ಸಿಕ್ಕಿತು . ಅವನು ಅದನ್ನು ಪೂಜೆ ಮಾಡಿ ಬೀರಣ್ಣನ ಮನೆಗೆ ತೆಗೆದುಕೊಂಡು ಹೋಗಿ ” ಈ ಹೊನ್ನು ನಿನ್ನದು ತೆಗೆದುಕೋ ” ಎಂದನು . ಆದರೆ ಬೀರಣ್ಣ “ ನಿನಗೆ ಹೊಲ ಮಾರಿದ ಮೇಲೆ ಅದು ನಿನಗೇ ಸೇರಬೇಕು . ಅದು ನನ್ನದಲ್ಲ ” ಎಂದು ನಿರಾಕರಿಸಿದನು . ಆ ವಿಚಾರವಾಗಿ ಬನದಮ್ಮನ ಹಳ್ಳಿಯ ದೇವಾಲಯದ ಮುಂದೆ ಚರ್ಚೆ ನಡೆದಿತ್ತು . “ ಬೊಕ್ಕಸಕ್ಕೆ ಸೇರಲು ಇದು ಸಾಮ್ರಾಟರ ದುಡಿಮೆಯಲ್ಲ … ಅವರ ಬೆವರಿನ ಫಲ ಅಲ್ಲ … ಅದು ಪ್ರಜೆಗಳ ಬೆವರಿನ ಫಲ ಆದ್ದರಿಂದ ಅದು ಪ್ರಜೆಗಳಿಗೆ ಸೇರಬೇಕು ” ಎಂದು ಅಭಿಪ್ರಾಯಪಟ್ಟಳು .
2. ಹಲವರು ತಲಕಾಡನ್ನು ಲೂಟಿ ಮಾಡಬೇಕೆಂದು ಹೇಳಿದಾಗ ದೊರೆ ವಿಷ್ಣುವರ್ಧನನು ಏನೆಂದು ಹೇಳಿದನು ?
ಉತ್ತರ : ತಲಕಾಡಿನ ಲೂಟಿಯ ಬಗ್ಗೆ ವಿಷ್ಣುವರ್ಧನನು , “ ಸೆರೆ ಸಿಕ್ಕ ಸೈನಿಕರ ಮೇಲೆ ದೌರ್ಜನ್ಯ ನಡೆಸುವುದು ಯೋಧ ಧರ್ಮ ಅಲ್ಲ : ಸೋತ ಸಾಮ್ರಾಜ್ಯವನ್ನು ಲೂಟಿ ಮಾಡುವುದು ಯುದ್ಧ ಧರ್ಮವಲ್ಲ . ಆ ಕಾರಣ ನೀವೆಲ್ಲರೂ ತಲಕಾಡವರನ್ನು ತಮ್ಮವರೆಂದೇ ತಿಳಿದು ನಡೆಸಿಕೊಳ್ಳಿ . ಅವರ ಮನೋಭೀತಿಯನ್ನು ದೂರ ಮಾಡಿ ಶಾಂತಿ ಸ್ಥಾಪನೆ ಮಾಡಿ , ನಾಲ್ಕು ದಿನಗಳಾದ ಮೇಲೆ ರಾಜಧಾನಿಗೆ ಹಿಂದಿರುಗೋಣ . ” ಎಂದು ಹೇಳಿದನು .
3. ದೈವದವರ ತೀರ್ಪಿನ ಬಗೆಗೆ ಶಾಂತಲೆಯ ಅಭಿಪ್ರಾಯವೇನು ?
ಉತ್ತರ : ಈರಣ್ಣ ಮತ್ತು ಬೀರಣ್ಣ ಇಬ್ಬರೂ ಕೊಪ್ಪರಿಗೆ ಬಂಗಾರವನ್ನು ತಮ್ಮ ಬಳಿ ಇಟ್ಟುಕೊಳ್ಳಲು ಒಪ್ಪದಿದ್ದಾಗ ಗ್ರಾಮದ ಮುಖ್ಯಸ್ಥ ಕೇತುಮಲ್ಲ ‘ ಇಬ್ಬರಿಗೂ ಬೇಡವಾದ ಹಣ ರಾಜ್ಯದ ಬೊಕ್ಕಸ ಸೇರಲಿ ‘ ಎಂದನು . ನ್ಯಾಯ ತೀರ್ಮಾನ ಮಾಡುತ್ತಾನೆ . ಕೂಡಲೆ ಮರದ ಮರೆಯಲ್ಲಿದ್ದ ಶಾಂತಲೆ ಮುಂದೆ ಬಂದು , “ ಕೂಡದು … ಕೂಡದು … ‘ – ಎಂದು ಕೂಗಿದಳು . ಬೊಕ್ಕಸಕ್ಕೆ ಸೇರಲು ಇದು ಸಾಮ್ರಾಟರ ದುಡಿಮೆಯಲ್ಲ …ಅವರ ಬೆವರಿನ ಫಲ ಅಲ್ಲ … ಅದು ಪ್ರಜೆಗಳ ಬೆವರಿನ ಫಲ ” ಆದ್ದರಿಂದ ಅದು ನಿಮ್ಮ ಊರಿನ ಹಣ ನಿಮೂರಿನ ಏಳಿಗೆಗಾಗಿಯೇ ವಿನಿಯೋಗವಾಗಲಿ . ” ಎಂದು ಅಭಿಪ್ರಾಯ ಪಟ್ಟಳು
4. ಶಾಂತಲೆಯು ನೀಡಿದ ತೀರ್ಪೇನು ?
ಉತ್ತರ : ” ಇದು . ದೈವದ ದುಡ್ಡು , ದೇವಕಾರ್ಯಕ್ಕೆ ವಿನಿಯೋಗವಾಗಬೇಕಾದ್ದು ಧರ್ಮ . ನಮ್ಮ ಸಂಸ್ಕೃತಿಯ ಶ್ರೀಮಂತಿಕೆಗೆ ಸಾಕ್ಷಿಯಾಗಿ ಒಂದು ಕಲಾದೇಗುಲವನ್ನು ರಾಜಧಾನಿ ದ್ವಾರಸಮುದ್ರದಲ್ಲಿ ನಿರ್ಮಿಸಬೇಕು , ಅವಳಿ ದೇಗುಲಗಳ ಶಿಲ್ಪಕಲೆ ಹೊಯ್ಸಳರ ಶೈಲಿಗೆ ಮಾದರಿಯಾಗಿರಬೇಕು … ಒಂದು ಕಲಾಪೂರ್ಣ ದೇವಾಲಯಕ್ಕಾಗಿ ಈ ಹೊನ್ನು ವಿನಿಯೋಗವಾಗಲಿ , ಆ ದೇವಾಲಯಗಳನ್ನು ಕೇತಮಲ್ಲನಾಯಕರ ಹೆಸರಿನಲ್ಲಿ ಕಟ್ಟಬೇಕು ” ಎಂದು ಶಾಂತಲೆ ತೀರ್ಪು ನೀಡಿದಳು .
ಇ ] ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ
1. ಬನದಮ್ಮನ ಹಳ್ಳಿಯ ಪಂಚಾಯಿತಿಯಲ್ಲಿ ನಡೆದ ನ್ಯಾಯ ಹಾಗೂ ಅದರ ತೀರ್ಪಿನ ಬಗ್ಗೆ ವಿವರಿಸಿ ,
ಉತ್ತರ : ಪಂಚಾಯಿತಿಯಲ್ಲಿ ಬೀರಣ್ಣ ಮತ್ತು ಈರಣ್ಣ ಒಬ್ಬರಿಗೊಬ್ಬರು ಹೊನ್ನು ತಮ್ಮದಲ್ಲ ಎಂದಾಗ ಊರಿನ ಮುಖಂಡ ಕೀತಮಲ್ಲನು ” ಇವರಿಬ್ಬರಿಗೂ ಬೇಡವೆಂದ ಮೇಲೆ ಈ ಹೊನ್ನು ರಾಜ್ಯದ ಬೊಕ್ಕಸಕ್ಕೆ ಸೇರಲಿ ” ಎಂದನು . ಇದನ್ನೆಲ್ಲ ಉದಯಾದಿತ್ಯನೊಡನೆ ಮರೆಯಲ್ಲಿ ನಿಂತು ನೋಡುತ್ತಿದ್ದ ಶಾಂತಲೆ “ ಕೂಡದು .. ಕೂಡದು .. ” ಎಂದಾಗ ಎಲ್ಲರ ಗಮನ ಅತ್ತ ಹೋಯಿತು . ಕೇತಮಲ್ಲನು ಗಂಡುಡೆಯಲ್ಲಿದ್ದ ಶಾಂತಲೆಯನ್ನು ಗುರುತಿಸದೆ “ ನೀವು … ಈ ಹೊನ್ನು ರಾಜ್ಯದ ಬೊಕ್ಕಸಕ್ಕೆ ಸೇರಬಾರದು ಅಂದಿರಲ್ಲಾ ಯಾಕೆ ? ” ಎಂದನು ಅದಕ್ಕವಳು ” ಬೊಕ್ಕಸಕ್ಕೆ ಸೇರಲು ಇದು ಸಾಮ್ರಾಟರ ದುಡಿಮೆಯಲ್ಲ … ಅದು ಪ್ರಜೆಗಳ ಬೆವರಿನ ಫಲ ! ಆದ್ದರಿಂದ ಅದು ಪ್ರಜೆಗಳಿಗೇ ಸೇರಬೇಕು ” ಎಂದಳು . ಆ ಮಾತಿಗೆ ಕೇಶಮಲ್ಲನು “ ಹಾಗಾದರೆ ಪ್ರಜೆಗಳು ಯಾರವರು ? ಹೊಯ್ಸಳೇಶ್ವರರ ಮಕ್ಕಳಲ್ಲವೇ ? ಮಕ್ಕಳ ದುಡಿಮೆ ತಂದೆಯದಲ್ಲವೇ ? ” ಎಂದನು . ಅವನ ವಾದವನ್ನು ಕೇಳಿದ ಶಾಂತಲೆ “ ನಿಮ್ಮ ಊರಿನ ಹಣ ನಿಮ್ಮ ಊರಿಗೆ ವಿನಿಯೋಗವಾಗಲಿ ” ಎಂದಳು . ನಂತರ ಉದಯಾದಿತ್ಯ ಅವರು ಗಂಡುಡೆಯಲ್ಲಿರುವ ಶಾಂತಲಾದೇವಿ ಎಂದು ತಿಳಿಸಿದ ನಂತರ ಎಲ್ಲರೂ ಅವರಿಗೆ ತಮ್ಮ ಭಕ್ತಿ ಸಮರ್ಪಿಸಿದರು . ನಂತರ ಊರಿನ ಜನ ತಮಗೆ ಆ ಹೊನ್ನಿನ ಅವಶ್ಯಕತೆಯಿಲ್ಲ . ಅದು ರಾಜ್ಯದ ಕ್ಷೇಮಕ್ಕೆ ಮೀಸಲು . ಎಂದಾಗ “ ಇದು ದೈವದ ದುಡ್ಡು , ದೇವಕಾರ್ಯಕ್ಕೆ ವಿನಿಯೋಗವಾಗಬೇಕಾದ್ದು ಧರ್ಮ . ರಾಜಧಾನಿ ದ್ವಾರಸಮುದ್ರದಲ್ಲಿ ಹೊಯ್ಸಳರ ಶೈಲಿಗೆ ಮಾದರಿಯಾದಂತಹ ಅವಳಿ ದೇವಾಲಯ ನಿರ್ಮಾಣಕ್ಕಾಗಿ ಈ ಹೊನ್ನು ವಿನಿಯೋಗವಾಗಲಿ ” ಎಂದು ಶಾಂತಲೆ ತೀರ್ಪು ನೀಡಿದಳು .
2. ಚೋಳ ದೊರೆ ಕುಲೋತ್ತುಂಗನು ಹೊಯ್ಸಳ ಸಾಮ್ರಾಜ್ಯದ ಮೇಲೆ ಯುದ್ಧ ಸಾರಲು ಇದ್ದ ಕಾರಣ ಹಾಗೂ ಪರಿಣಾಮವನ್ನು ವಿವರಿಸಿ .
ಉತ್ತರ : ದಿನೇದಿನೇ ಪ್ರವರ್ಧಮಾನಕ್ಕೆ ಬರುತ್ತಿರುವ ವಿಷ್ಣುವರ್ಧನನನ್ನು ಬಡಿಯಬೇಕೆಂದು ಶತ್ರು ರಾಜರುಗಳನೇಕರು ಹವಣಿಸುತ್ತಿದ್ದರು . ಅವರಲ್ಲಿ ಚೋಳಮಂಡಲದ ಕುಲೋತ್ತುಂಗ ಪ್ರಮುಖನಾದವನು . ಕುಲೋತ್ತುಂಗ ಪ್ರಚಂಡ ಆಶಾವಾದಿ . ಅಖಂಡ ಭರತಖಂಡದ ಒಡೆತನವನ್ನು ಬಯಸುತ್ತಿದ್ದ ದುರಾಶಾಪಿಶಾಚಿ , ಗಂಗ ಸಾಮ್ರಾಜ್ಯವನ್ನು ತನ್ನ ವಶ ಮಾಡಿಕೊಳ್ಳಲೆಂದು ಆಶಿಸಿ , ಅಡಿಯಮನನ್ನು ಪ್ರಚೋದಿಸಿ ದ್ವಾರಸಮುದ್ರದ ಮೇಲೆ ಕಳುಹಿಸಿದ . ಇದನ್ನು ಗುಪ್ತಚಾರರಿಂದ ತಿಳಿದ ಹೊಯ್ಸಳೇಶ್ವರನು ಸಕಲ ಸೇನಾ ಸಮೇತನಾಗಿ ಯುದ್ಧಕ್ಕೆ ಸನ್ನದ್ಧನಾದನು . ದ್ವಾರಸಮುದ್ರದ ಸೇನೆ ತಲಕಾಡಿನ ಕಡೆಗೆ ಜೈತ್ರಯಾತ್ರೆ ಹೊರಟಿತು . ಮಳವಳ್ಳಿ , ಮುಡುಕುತೊರೆಗಳ ಬಳಿಯಲ್ಲಿ ಘನಘೋರ ಯುದ್ಧ ನಡೆದು , ಹೊಯ್ಸಳರ ಕೈ ಮೇಲಾಗಿ ಚೋಳಸೇನೆ ಕಂಗಾಲಾಯಿತು . ಆದಿಯಮ ಯುದ್ಧದಲ್ಲಿ ಮಡಿದ . ಅವನ ಸತ್ತ ಸುದ್ದಿ ತಿಳಿಯುತ್ತಲೆ ಚೋಳಸೇನೆ ದಿಕ್ಕಾಪಾಲಾಗಿ ಓಡಿತು . ತಲಕಾಡ ಕೋಟೆ ಸುಲಭವಾಗಿ ವಿಷ್ಣುವರ್ಧನ ಭೂಪಾಲನ ಕೈವಶವಾಯಿತು . ಸಮಸ್ತ ಸೇನೆಯು ‘ ತಲಕಾಡುಗೊಂಡನಿಗೆ ಜಯವಾಗಲಿ ‘ ಎಂದು ಜೈಕಾರ ಹಾಕಿತು .
ಈ ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .
1. “ ಸೆರೆಸಿಕ್ಕ ಸೈನಿಕರ ಮೇಲೆ ದೌರ್ಜನ್ಯ ನಡೆಸುವುದು ಯೋಧ ಧರ್ಮವಲ್ಲ ”
ಆಯ್ಕೆ : ಈ ವಾಕ್ಯವನ್ನು ಸ.ಶಿ.ಮರುಳಯ್ಯ ಅವರು ಅವರು ರಚಿಸಿರುವ ‘ ನಾಟ್ಯ ಮಯೂರಿ ‘ ಎಂಬ ಕೃತಿಯಿಂದ ಆಯ್ಕೆಮಾಡಲಾದ ‘ ಪ್ರಜಾನಿಷ್ಠೆ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ . ವಿಷ್ಣುವರ್ಧನನು ಕುಲೋತ್ತುಂಗ ಚೋಳನ ದಂಡನಾಯಕ ಆದಿಯಮನನ್ನು ಯುದ್ಧದಲ್ಲಿ ಸೋಲಿಸಿ , ತಲಕಾಡನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ ಹಲವರು ತಲಕಾಡು ನಗರವನ್ನು ಲೂಟಿ ಮಾಡಬೇಕೆಂದು ಇಚ್ಚಿಸಿದ ಸಂದರ್ಭದಲ್ಲಿ ಪ್ರಜಾಪಾಲಕನಾದ ವಿಷ್ಣುವರ್ಧನನ್ನು ಸೈನಿಕರಿಗೆ “ ಸೆರೆ ಸಿಕ್ಕ ಸೈನಿಕರ ಮೇಲೆ ದೌರ್ಜನ್ಯ ನಡೆಸುವುದು ಯೋಧ ಧರ್ಮ ಅಲ್ಲ : ಸೋತ ಸಾಮ್ರಾಜ್ಯವನ್ನು ಲೂಟಿ ಮಾಡುವುದು ಯುದ್ಧ ಧರ್ಮವಲ್ಲ ” ಎಂದು ಹೇಳುತ್ತಾನೆ .
ಸ್ವಾರಸ್ಯ : ಇಲ್ಲಿ ವಿಷ್ಣುವರ್ಧನನಲ್ಲಿದ್ದ ಮಾನವೀಯ ಗುಣ ಹಾಗೂ ಪ್ರಜಾಹಿತಚಿಂತನೆ ಸ್ವಾರಸ್ಯಕರವಾಗಿ ವ್ಯಕ್ತಗೊಂಡಿದೆ .
2. “ ತಲಕಾಡುಗೊಂಡನಿಗೆ ಜಯವಾಗಲಿ ”
ಆಯ್ಕೆ : ಈ ವಾಕ್ಯವನ್ನು ಸ.ಶಿ.ಮರುಳಯ್ಯ ಅವರು ಅವರು ರಚಿಸಿರುವ ‘ ನಾಟ್ಯ ಮಯೂರಿ ‘ ಎಂಬ ಕೃತಿಯಿಂದ ಆಯ್ಕೆಮಾಡಲಾದ ‘ ಪ್ರಜಾನಿಷ್ಠೆ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ವಿಷ್ಣುವರ್ಧನನು ಕುಲೋತ್ತುಂಗ ಚೋಳನ ದಂಡನಾಯಕ ಆದಿಯಮನನ್ನು ಯುದ್ಧದಲ್ಲಿ ಸೋಲಿಸಿ , ತಲಕಾಡನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ ಸಮಸ್ತ ಸೇನೆಯು ಈ ರೀತಿ ಜೈಕಾರ ಹಾಕಿತು .
ಸ್ವಾರಸ್ಯ : ಇಲ್ಲಿ ವಿಷ್ಣುವರ್ಧನನ ಸೈನಿಕ ಶಕ್ತಿ , ತಲಕಾಡನ್ನು ವಶಪಡಿಸಿಕೊಂಡ ನಂತರ ಸೈನಿಕರ ವಿಜಯೋತ್ಸಾಹ ಸ್ವಾರಸ್ಯಕರವಾಗಿ ವ್ಯಕ್ತಗೊಂಡಿದೆ .
3. “ ತಂಬುಲ ಉಗದ ಮ್ಯಾಲೆ ಮತ್ತೆ ಎತ್ತಿ ಬಾಯಿಗಾಕ್ಕೊಳ್ಳೋ ಕೆಟ್ಟತನ ಬ್ಯಾಡಾ ”
ಆಯ್ಕೆ : ಈ ವಾಕ್ಯವನ್ನು ಸ.ಶಿ.ಮರುಳಯ್ಯ ಅವರು ಅವರು ರಚಿಸಿರುವ ‘ ನಾಟ್ಯ ಮಯೂರಿ ‘ ಎಂಬ ಕೃತಿಯಿಂದ ಆಯ್ಕೆಮಾಡಲಾದ ‘ ಪ್ರಜಾನಿಷ್ಠೆ ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಈರಣ್ಣನು ಬೀರಣ್ಣನಿಂದ ಕೊಂಡುಕೊಂಡ ಹೊಲದಲ್ಲಿ ಉಳುತ್ತಿದ್ದಾಗ ಅಲ್ಲಿ ಒಂದು ಕೊಪ್ಪರಿಗೆಯಷ್ಟು ಹೊನ್ನು ಸಿಕ್ಕಿತು . ಅವನು ಅದನ್ನು ಪೂಜೆ ಮಾಡಿ ಬೀರಣ್ಣನ ಮ ತೆಗೆದುಕೊಂಡು ಹೋಗಿ ಇದು ನಿನ್ನ ಹೊಲದಲ್ಲಿ ಸಕ್ಕಿದೆ ತೆಗೆದುಕೋ ‘ ಎಂದನು . ಸಂದರ್ಭದಲ್ಲಿ ಬೀರಣ್ಣ ನಿನಗೆ ಹೊಲ ಮಾರಿದ ಮೇಲೆ ಅದು ನಿನಗೇ ಸೇರಬೇಕು . ಅದು ನನ್ನದಲ್ಲ . ತಂಬುಲ ಉಗದ ಮ್ಯಾಲೆ ಮತ್ತೆ ಎತ್ತಿ ಬಾಯಿಗಾಕ್ಕೊಳ್ಳೋ ಕೆಟ್ಟತನ ಬ್ಯಾಡಾ ‘ ಎಂದು ನಿರಾಕರಿಸಿದನು .
ಸ್ವಾರಸ್ಯ : ಈ ಸಂದರ್ಭದಲ್ಲಿ ಈರಣ್ಣ ಮತ್ತು ಬೀರಣ್ಣ ಇವರಿಬ್ಬರಲ್ಲಿದ್ದ ನಿಸ್ವಾರ್ಥತೆ , ದುರಾಸೆ ಇಲ್ಲದ ಧರ್ಮಪರತೆ ಸ್ವಾರಸ್ಯಕರವಾಗಿ ಮೂಡಿಬಂದಿದೆ .
ಈ ] ಬಿಟ್ಟಸ್ಥಳದಲ್ಲಿ ಸೂಕ್ತಪದವನ್ನು ತುಂಬಿರಿ .
೧. ದ್ವಾರಸಮುದ್ರದ ಸೇನೆ ತಲಕಾಡಿನ ಕಡೆಗೆ ಚೈತ್ರಯಾತ್ರೆ ಹೊರಟಿತು
೨. ಮಾನವ ತನ್ನ ಮಾನವೀಯ ಗುಣಗಳನ್ನು ಗಾಳಿಯಲ್ಲಿ ತೂರಿಬಿಡಬಾರದು .
೩. ನಿಮ್ಮ ಊರಿನ ಹಣ ನಮ್ಮೂರಿನ ಏಳಿಗೆಗಾಗಿಯೇ ವಿನಿಯೋಗವಾಗಲಿ ,
೪. ಬನದಮ್ಮನ ಹಳ್ಳಿಯ ಜನರಿಗೆ ಸ್ವರ್ಗ ಒಂದೇ ಮೆಟ್ಟಿಲಲ್ಲಿ ಉಳಿಯಿತು .
ಭಾಷಾ ಚಟುವಟಿಕೆ
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ .
1 , ಅನುನಾಸಿಕ ಸಂಧಿ ಎಂದರೇನು ? ಉದಾಹರಣೆ ಕೊಡಿ.
ಉತ್ತರ : ಕ.ಚ,ಟ ಕಾರಗಳಿಗೆ ಯಾವುದೇ ಅನುನಾಸಿಕವು ಪರವಾದರೂ ಕ ,ಕೈ , ಚ ಕೈ ಟ ಕೈ ಣ , ತ ಕೈ ನ ಪ ಕ್ಕೆ ಮ ಅನುನಾಸಿಕವು ಆದೇಶವಾಗಿ ಬಂದರೆ ಅನುಷಾಸಿಕ ಎನ್ನುವರು .
ಉದಾ:
ಚಿತ್ + ಮೂರ್ತಿ =ಚಿನ್ಮೂರ್ತಿ
ಷಟ್ + ಮುಖ =ಷಣ್ಮುಖ
ಸತ್ + ಮಾನ =ಸನ್ಮಾನ
ಚಿತ್ + ಮಯ =ಚಿನ್ಮಯ
2 , ಕ್ರಿಯಾಸಮಾಸ ಎಂದರೇನು ? ಉದಾಹರಣೆ ಕೊಡಿ,
ಉತ್ತರ : ಪೂರ್ವಪದವು ದ್ವಿತೀಯ ವಿಭಂಶವಾಗಿದ್ದು ಉತ್ತರಪದದಲ್ಲಿರುವ ಕ್ರಿಯೆಯೊಡನೆ ಸೇರಿ ಆದ ಸಮಾಸವೆ . ಕ್ರಿಯಾಸಮಾಸ ,
ಉದಾ : ಮನೆಯನ್ನು + ಕಟ್ಟಿದನು = ಮನೆಕಟ್ಟಿದನು . ..
ಮೈದಡವಿ . ಬಟ್ಟೆಯನ್ನು ಮೈಯನ್ನು ಮರೆತು ಮೈಮರೆತು .
ಕೈಯಂ + ಪಿಡಿದು = ಕೈವಿಡಿದು
ತಲೆಯನ್ನು + ಇಟ್ಟು = ತಲೆಯಿಟ್ಟು
ಮೈಯನ್ನು + ತಡವಿ = ಮೈದಡವಿ
ಕಣ್ಣನ್ನು + ತೆರೆ = ಕಣ್ಣರೆ
ಬಟ್ಟೆಯನ್ನು + ತೋರು = ಬಟ್ಟೆದೋರು .
ಆ ) ಕೊಟ್ಟಿರುವ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ನಾಲ್ಕನೆಯ ಪದವನ್ನು ಬರೆಯಿರಿ
1,ಯ್,ರ್,ಲ್,ವ್, ಅವರ್ಗೀಯ ವ್ಯಂಜನಗಳು :ಙ್, ಞ್, ಣ್, ನ್, ಮ್ : ……….
2 , ಷಡಂಗ : ಜಶ್ವಸಂದಿ: ಷಣ್ಮಾಸ :………
3. ಈ ಹೊನ್ನು : ಗಮಕ ಸಮಾಸ : ಸ್ಥಾಪನೆ ಮಾಡು:…………
4. ವಾಗ್ದೇವಿ :ಜಶ್ವಸಂದಿ :: ಜಗಜ್ಯೋತಿ:……….
ಸರಿ ಉತ್ತರಗಳು,
೧, ಅನುನಾಸಿಕಾಕ್ಷರಗಳು . 2 ,ಅನುನಾಸಿಕ ಸಂಧಿ 3,ಕಿಯಾ ಸಮಾಸ 4. ಶ್ಚುತ್ವ ಸಂಧಿ
ಈ ) ಕೊಟ್ಟಿರುವ ಗಾದೆ ಮಾತುಗಳನ್ನು ವಿಸ್ತರಿಸಿ ಬರೆಯಿರಿ ,
1. ” ಹಿತ್ತಲ ಗಿಡ ಮದ್ದಲ್ಲ “
ವೇದ ಸುಳ್ಳಾದರೂ ಗಾದೆ ಸುಳ್ಳಾಗದು , ಗಾದೆಗಳು ವೇದಗಳಿಗೆ ಸಮ . ಇವು ನಮ್ಮ ಹಿರಿಯರ ಅನುಭವದ ಮಾತುಗಳು , ಗಾದೆಗಳು ನೋಡಲು ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ , ಆಂತಹ ಗಾದೆಗಳಲ್ಲಿ ಈ ಗಾದೆ ಮಾತು ಸಹ ಒಂದು.
ತಮ್ಮ ತಮ್ಮ ಮನೆಯ ಅಂಗಳದಲ್ಲಿ ಬೆಳೆದ ಗಿಡ ಮರಗಳಿಗೆ ನಾವು ಹೆಚ್ಚು ಪ್ರಾಮುಖ್ಯತೆ ಕೊಡುವುದಿಲ್ಲ .
ತಮ್ಮ ಬಳಿ ಇರುವ ವಸ್ತುಗಳಿಗೆ , ಮನುಷ್ಯರಿಗೆ ನಮ್ಮ ಮನಸ್ಸಿನಲ್ಲಿ ಗೌರವ , ಬೆಲೆ ಇರುವುದಿಲ್ಲ , ಹಳೆಯ ಕಾಲದಲ್ಲಿ ಎಲ್ಲಾ ರೋಗಗಳಿಗೆ ಗಿಡಮೂಲಿಕೆಗಳಿಂದ ಔಷಧಿ ತಯಾರಿಸಿ ರೋಗವನ್ನು ಗುಣ ಪಡಿಸುತ್ತಿದ್ದರು .
ನಮ್ಮ ಮನೆಯ ಹಿತ್ತಲಲ್ಲಿ ಬೆಳೆದ ಗಿಡಗಳಿಂದ ಮಾಡಿದ ಮದ್ದನ್ನು ಕುಲ್ಲಕವಾಗಿ ಕಾಣುವ ಮನೋಭಾವನೆ ಇತ್ತು ,
ಅದೇ ಬೇರೆಯವರ ತೋಟದ ಗಿಡದಿಂದ ತಯಾರಿಸಿದ ಔಷಧಿಗೆ ಬೆಲೆ ಹೆಚ್ಚು ಕೊಡುತ್ತಿದ್ದರು.ಆದರಿಂದ ಈ ಗಾದೆ ಹುಟ್ಟಿದೆ . ಪ್ರಸ್ತುತ ದಿನಮಾನಗಳಲ್ಲಿ ನಮ್ಮ ಮನೆಯಲ್ಲಿ ಇರುವ ವಸ್ತಗಳಿಗೆ ನಾವು ಬೆಲೆಕೊಡದೆ ಅಕ್ಕಪಕ್ಕದ ಮನೆಗಳ ವಸ್ತುಗಳನ್ನು ನೋಡಿ ದುಭಾರಿ ವಸ್ತುಗಳು ,ಬೆಲೆ ಬಾಳುವ ವಸ್ತುಗಳು ಅವರ ಬಳಿ ಇವೆ .
ನಮ್ಮಲ್ಲಿ ಈ ರೀತಿ ವಸ್ತುಗಳು ಎಲ್ಲಾ ಎಂದು ಕೊರಗುತ್ತೇವೆ , ಒಮ್ಮೊಮ್ಮೆ ಖಿನ್ನತೆಗೂ ನಮ್ಮ ಬಳಿ ಏನಿರುತ್ತದೆ ಅದು ಯಾವಾಗಲೂ ಬೆಲೆ ಕಡಿಮೆ ನಮ್ಮ ಕೈಗೆ ಯಾವುದು ಎಟಕುವುದಿಲ್ಲವೋ ಅದರ ಬೆಲೆ ಜಾಸ್ತಿ ಅನ್ನಿಸುತ್ತದೆ ,
ಸುಲಭವಾಗಿ ಸಿಗುತ್ತದೆ ‘ ಎಂದ ಮಾತ್ರಕ್ಕೆ ಆ ವಸ್ತುವಿಗೆ ಬೆಲೆ ಇಲ್ಲ ಎಂದು ಭಾವಿಸಬಾರದು . ನಮ್ಮ ಜೊತೆಗೆ ಇರುವ ವಸ್ತು , ವ್ಯಕ್ತಿಗಳನ್ನು ಅರ್ಥಮಾಡಿಕೊಂಡು ಜೀವನ ನಡೆಸಬೇಕು .
2. ” ದೂರದ ಬೆಟ್ಟ ನುಣ್ಣಗೆ “
ವೇದ ಸುಳ್ಳಾದರೂ ಗಾದೆ ಸುಳ್ಳಾಗದು . ಗಾದೆಗಳು ವೇದಗಳಿಗೆ ಸಮ . ಇವು ನಮ್ಮ ಹಿರಿಯರ ಅನುಭವದ ಮಾತುಗಳು . ಗಾದೆಗಳು ನೋಡಲು ವಾಮನನಾದರೂ ಆರ್ಥದಲ್ಲಿ ತ್ರಿವಿಕ್ರಮನಂತೆ , ಅಂತಹ ಗಾದೆಗಳಲ್ಲಿ ಈ ಗಾದೆ ಮಾತು ಸಹ ಒಂದು . ದೂರದಲ್ಲಿರುವ ಬೆಟ್ಟ ನೋಡುವುದಕ್ಕೆ ಚಿಕ್ಕದಾಗಿ ಕಾಣಿಸುತ್ತದೆ .
ದೂರದಿಂದ ಅದನ್ನು ಸುಲಭವಾಗಿ ಹತ್ತಬಹುದು ಎಂದು ಅನ್ನಿಸುತ್ತದೆ . ಆದರೆ ಬೆಟ್ಟದ ನಿಜ ಸ್ವರೂಪ ತಿಳಿಯಬೇಕಾದರೆ ಹತ್ತಿರ ಹೋಗಿ ನೋಡಬೇಕು . ಆಗ ಬೆಟ್ಟದ ಮೇಲಿರುವ ಕಲ್ಲು ಮುಳ್ಳು , ಅದರ ಎತ್ತರ ಎಷ್ಟು ಎಂದು ತಿಳಿಯುತ್ತದೆ .
ಹತ್ತಿರ ಹೋಗಿ ನೋಡಿದಾಗ , ದೂರದಿಂದ ಅಂದುಕೊಂಡಷ್ಟು ಸುಲಭವಾಗಿ ಅದನ್ನು ಹತ್ತಲು ಸಾಧ್ಯವಿಲ್ಲ ಎನ್ನುವ ಅರಿವು ನಮಗೆ ಆಗುತ್ತದೆ .ಹಾಗೆಯೇ ಸಂಬಂಧಗಳು ಸಹ ದೂರದಿಂದ ನೋಡಿದಾಗ ಎಲ್ಲಾರೂ ನಮ್ಮವರೇ ಎಂದು ಗೊತ್ತಾಗುತ್ತದೆ .
‘ದೂರವಿದ್ದರೆ ಪರಿಮಳ , ಹತ್ತಿರ ಬಂದರೆ ವಾಸನೆ ‘ ಎಂಬ ಮಾತಿನಂತೆ ಮನುಷ್ಯನ ನಿಜವಾದ ಬಣ್ಣ ತಿಳಿಯಲು ಅವನ ಜೊತೆಗೆ ಇದ್ದು ನೋಡಬೇಕು . ಪ್ರಪಂಚದಲ್ಲಿ ಎಲ್ಲಾರಿಗೂ ಕಷ್ಟ ಬರುತ್ತದೆ ಎಂಬ ಅಂಶವನ್ನು ನಾವು ಮರೆಯಬಾರದು .
ದೇವರು ನನಗೆ ಮಾತ್ರ ಕಷ್ಟ ಕೊಟ್ಟಿದ್ದಾನೆ . ಬೇರೆಯವರು ನಗುನಗುತ್ತಾ ಜೀವನ ಸಾಗಿಸುತ್ತಿದ್ದಾರೆ . ಎಂದು ಕೊಂಡು ಕೊರಗಬಾರದು . ಅವರ ಜೀವನದಲ್ಲಿ ಎಷ್ಟು ಕಷ್ಟಗಳಿವೆ ಎಂದು ಅವರ ಹತ್ತಿರ ಹೋದಾಗ ತಿಳಿಯುತ್ತದೆ . ಎಲ್ಲಾರ ಮನೆಯ ದೋಸೆನೂ ತೂತೆ ಎಂಬ ಸತ್ಯ ತಿಳಿದು ಬದುಕಬೇಕಾಗಿದೆ.
9th Standard Prajanishte Kannada Notes Question Answer Pdf
ಇತರೆ ವಿಷಯಗಳು :
ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ಕನ್ನಡ ನೋಟ್ಸ್