9ನೇ ತರಗತಿ ಕನ್ನಡ ಸಿರಿಯನಿನ್ನೇನ ಬಣ್ಣಿಪೆನು ನೋಟ್ಸ್, 9th Standard Siriyaninnena Bannipenu Kannada Notes Question Answer, Siriyaninnena Bannipenu Kannada Notes Pdf Download
ತರಗತಿ : 9ನೇ ತರಗತಿ
ಪದ್ಯದ ಹೆಸರು : ಸಿರಿಯನಿನ್ನೇನ ಬಣ್ಣಿಪೆನು
ಕೃತಿಕಾರರ ಹೆಸರು : ರತ್ನಾಕರವರ್ಣಿ
Table of Contents
ಕೃತಿಕಾರರ ಪರಿಚಯ :
ರತ್ನಾಕರವರ್ಣಿ
* ರತ್ನಾಕರವರ್ಣಿಯ ಕಾಲ ಸುಮಾರು ಕ್ರಿಸ್ತ ಶಕ ೧೫೬೦. ಈತನ ಸ್ಥಳ ದಕ್ಷಿಣಕನ್ನಡ ಜಿಲ್ಲೆ ಮೂಡುಬಿದರೆ , ಕನ್ನಡ ಸಾಂಗತ್ಯ ಕವಿಗಳಲ್ಲಿ ಅಗ್ರಗಣ್ಯನಾದ ಇವನು ಸಾಂಗತ್ಯದಲ್ಲಿ ‘ ಭರತೇಶ ವೈಭವ ‘ ಎಂಬ ಬೃಹತ್ ಕಾವ್ಯವನ್ನು ರಚಿಸಿದ್ದಾನೆ . ಇವನು ತಾಳಪ್ರದೇಶದ ಭೈರರಸ ಒಡೆಯರ ಆಸ್ಥಾನದಲ್ಲಿ ‘ ಶೃಂಗಾರಕವಿ ‘ ಎಂದು ಹೆಸರಾಗಿದ್ದನು .
* ಈತನ ಪ್ರಮುಖ ಕೃತಿಗಳೆಂದರೆ : ಭರತೇಶವೈಭವ , ಅಪರಾಜಿತೇಶ್ವರ ಶತಕ , ತ್ರಿಲೋಕಶತಕ , ರತ್ನಾಕರಾಧೀಶ್ವರಶತಕ
* ಇವಲ್ಲದೆ ಸುಮಾರು ಎರಡುಸಾವಿರ ಸಾಂಪ್ರದಾಯಿಕ ಹಾಡುಗಳನ್ನು ರಚಿಸಿದ್ದು , ಅವು ಅಧ್ಯಾತ್ಮ ಗೀತಗಳೆಂದು ಪ್ರಸಿದ್ಧವಾಗಿವೆ .
Siriyaninnena Bannipenu Kannada Notes Question Answer
ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
1. ಭರತ ಚಕ್ರವರ್ತಿ ಓಲಗಕ್ಕೆ ಹೇಗೆ ಬರುತ್ತಾನೆ ?
ಉತ್ತರ : ಭರತ ಚಕ್ರವರ್ತಿಯು ಸೂರ್ಯೋದಯ ಸಮಯದಲ್ಲಿ ಎದ್ದು ದೇವರ ಪೂಜೆಮಾಡಿ ಓಲಗಕ್ಕೆ ಬರುತ್ತಾನೆ .
2. ಆಸ್ಥಾನ ಭವನದೊಳಗೆ ರಾಜನು ಹೇಗೆ ಶೋಭಿಸುವನು ?
ಉತ್ತರ : ದೇವೇಂದ್ರನು ರತ್ನಪುಷ್ಪಕದಲ್ಲಿ ಶೋಭಿಸುವಂತೆ ಭರತ ಚಕ್ರವರ್ತಿಯು ಆಸ್ಥಾನದಲ್ಲಿ ಕಾಂತಿಯಿಂದ ಶೋಭಿಸಿದನು .
3. ಭರತೇಶವೈಭವ ಕಾವ್ಯದ ಕರ್ತೃ ಯಾರು ?
ಉತ್ತರ : ಭರತೇಶವೈಭವ ಕಾವ್ಯದ ಕರ್ತೃ ರತ್ನಾಕರವರ್ಣಿ
4. ಭರತನನ್ನು ಹೊಗಳುತ್ತಿದ್ದ ಮೂರು ಲೋಕಗಳು ಯಾವುವು ?
ಉತ್ತರ : ಭರತನನ್ನು ಹೊಗಳುತ್ತಿದ್ದ ಮೂರು ಲೋಕಗಳು : ಸ್ವರ್ಗ , ಮರ್ತ್ಯ ಮತ್ತು ಪಾತಾಳ
5. ತುಂಬಿದ ಸಭೆಯು ಮೈಮರೆತು ಕಾತುರರಾಗಿದ್ದುದಕ್ಕೆ ಕಾರಣವೇನು ?
ಉತ್ತರ : ತುಂಬಿದ ಸಭೆಯು ಭರತ ಚಕ್ರವರ್ತಿಯನ್ನು ನೋಡುವುದಕ್ಕಾಗಿ ಮೈಮರೆತು ಕಾತುರರಾಗಿದ್ದರು .
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .
1. ಭರತ ಚಕ್ರವರ್ತಿ ಓಲಗಮಂಟಪವನ್ನೇರಿದ ಸಂದರ್ಭವನ್ನು ಬಣ್ಣಿಸಿ .
ಉತ್ತರ : ಭರತಚಕ್ರವರ್ತಿಯು ನವರತ್ನ ಹಾಗೂ ಚಿನ್ನದಿಂದ ನಿರ್ಮಿತವಾಗಿದ್ದ ಆಸ್ಥಾನ ಭವನದಲ್ಲಿ , ಸ್ವರ್ಗ ಲೋಕದಲ್ಲಿ ದೇವೇಂದ್ರನು ರತ್ನಪುಷ್ಪಕ ಸಿಂಹಾಸನದಲ್ಲಿ ಶೋಭಿಸುವಂತೆ ಆಸ್ಥಾನದಲ್ಲಿ ಭರತ ಚಕ್ರವರ್ತಿಯು ಕಾಂತಿಯಿಂದ ಶೋಭಿಸಿದನು . ಅಲ್ಲದೆ ಚಾಮರಗಳ ಸಾಲಿನಲ್ಲಿ ಭರತ ಚಕ್ರವರ್ತಿಯು ‘ ಆಗಸದಲ್ಲಿ ತೇಲುವ ಬಿಳಿ ಮೋಡಗಳ ಹಿಂದೆ ಆಗಾಗ ತೋರಿ ಮರೆಯಾಗುವ ಚಂದ್ರನೋ ಸೂರ್ಯನೋ ‘ ಎಂಬಂತೆ ಕಂಗೊಳಿಸಿದನು .
2. ಧ್ಯಾನ ಬೇಸರಾದಾಗ ಏನು ಮಾಡುತ್ತೇನೆಂದು ಕವಿ ಹೇಳುತ್ತಾನೆ ?
ಉತ್ತರ : ಭರತ ಚಕ್ರವರ್ತಿಯು “ ಗುರುವೇ , ಧ್ಯಾನಮಾಡುವುದಕ್ಕೆ ನನಗೆ ಬೇಸರವಾದಾಗ ನಾನು ನಿನ್ನನ್ನು ಮೊದಲು ಮಾಡಿಕೊಂಡು ಕನ್ನಡದಲ್ಲಿ ಒಂದು ಕಥೆಯನ್ನು ಹೇಳುತ್ತೇನೆ . ನನ್ನೊಡೆಯನೇ ಅದು ನಿನ್ನಾಜ್ಞೆ ” ಎಂದು ದೇವರಲ್ಲಿ ಪ್ರಾರ್ಥಿಸುತ್ತಾನೆ .
3. ಬೇರೆಬೇರೆ ಭಾಷಿಕರು ತನ್ನ ಕೃತಿಯನ್ನು ಹೇಗೆ ಹೊಗಳಬೇಕೆಂದು ಕವಿ ಬಯಸುವನು ?
ಉತ್ತರ : ಕವಿ ರತ್ನಾಕರವರ್ಣಿಯು ತಾನು ಬರೆಯುವ ಕಥೆಯನ್ನು ಆಹಾ ಬಹಳ ಚೆನ್ನಾಗಿದೆ ‘ ಎಂದು ಕನ್ನಡಿಗರು , ‘ ರಯ್ಯಾ ಮಂಚದಿ ‘ ( ಬಹಳ ಒಳ್ಳೆಯದು ) ಎಂದು ತೆಲುಗರು , ‘ ಎಂಚ ಪೊರ್ಲಾಂಡ್ ‘ ( ಬಹಳ ಚಂದವಾಯಿತು ) ಎಂದು ತುಳುವರು ಅತ್ಯಾಸಕ್ತಿಯಿಂದ ಕೇಳಿ ಹೊಗಳಬೇಕು ಎಂದು ಬಯಸಿದ್ದಾನೆ .
ಇ ] ಕೊಟ್ಟಿರುವ ಪ್ರಶ್ನೆಗೆ ಏಳು – ಎಂಟು ವಾಕ್ಯಗಳಲ್ಲಿ ಉತ್ತರಿಸಿ .
1. ಭರತ ಚಕ್ರವರ್ತಿಯ ರಾಜದರ್ಬಾರಿನ ವೈಭವವನ್ನು ವಿವರಿಸಿ .
ಉತ್ತರ : ಭರತ ಚಕ್ರವರ್ತಿಯು ಸೂರ್ಯೋದಯದ ಸಮಯದಲ್ಲಿ ಎದ್ದು ದೇವರ ಪೂಜೆಯನ್ನು ಮಾಡಿ , ಆಸ್ಥಾನಕ್ಕೆ ಬಂದು ನಡೆಸಿದ ಒಡೋಲಗ ಬಹಳ ವೈಭವಯುತವಾಗಿತ್ತು . ಭರತಚಕ್ರವರ್ತಿಯ ಆಸ್ಥಾನ ಭವನವು ನವರತ್ನ ಹಾಗೂ ಚಿನ್ನದಿಂದ ನಿರ್ಮಿತವಾಗಿತ್ತು . ಸ್ವರ್ಗ ಲೋಕದಲ್ಲಿ ದೇವೇಂದ್ರನು ರತ್ನಪುಷ್ಪಕ ಸಿಂಹಾಸನದಲ್ಲಿ ಶೋಭಿಸುವಂತೆ ಆಸ್ಥಾನದಲ್ಲಿ ಕಾಂತಿಯಿಂದ ಶೋಭಿಸಿದನು . ‘ ಆಗಸದಲ್ಲಿ ತೇಲುವ ಬಿಳಿ ಮೋಡಗಳ ಹಿಂದೆ ಆಗಾಗ ತೋರಿ ಮರೆಯಾಗುವ ಚಂದ್ರನೋ ಸುರ್ಯನೋ ಎಂಬಂತೆ ‘ ವಿಧವಿಧವಾಗಿ ಪ್ರಕಾಶಿಸುತ್ತಿರುವ ಉದ್ದವಾದ ಚಾಮರಗಳ ಸಾಲಿನ ಹಿಂದೆ ಅವನು ಸಭಿಕರಿಗೆ ಕಾಣುತ್ತಿದ್ದನು . ಆಸ್ಥಾನದಲ್ಲಿ ನೆರೆದಿದ್ದ ಸಭಿಕರೆಲ್ಲ ‘ ತಾವರೆಯು ಸೂರ್ಯನನ್ನು ನೋಡುವಂತೆ , ನೀಲಿ ತಾವರೆ ( ನೈದಿಲೆ ) ಯು ಚಂದ್ರನನ್ನು ನೋಡುವಂತೆ ಅವನನ್ನು ನೋಡಲು ಕಾತುರದಿಂದ ಮೈಮರೆತು ಕಾಯುತ್ತಿದ್ದರು .
ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .
1. “ ಚಂದಿರನೋ ಭಾಸ್ಕರನೋಯೆಂಬಂತೆ ”
ಉತ್ತರ : ಆಯ್ಕೆ : – ಈ ವಾಕ್ಯವನ್ನು ರತ್ನಾಕರವರ್ಣಿಯ ‘ ಭರತೇಶ ವೈಭವ ‘ ಕೃತಿಯಿಂದ ತೆಗೆದುಕೊಳ್ಳಲಾಗಿರುವ ‘ ಸಿರಿಯನಿನ್ನೇನ ಬಣ್ಣಿಪೆನು ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಭರತ ಚಕ್ರವರ್ತಿಯು ಆಸ್ಥಾನದಲ್ಲಿ ಕಾಂತಿಯಿಂದ ಕಂಗೊಳಿಸುತ್ತಿದ್ದ ದೃಶ್ಯವನ್ನು ವರ್ಣಿಸುವ ಸಂದರ್ಭದಲ್ಲಿ ಕವಿ ಮಾತನ್ನು ಹೇಳಿದ್ದಾನೆ . ಚಾಮರಗಳ ಸಾಲಿನ ಹಿಂದೆ ಸಿಂಹಾಸನದಲ್ಲಿ ಕುಳಿತಿದ್ದ ಭರತ ಚಕ್ರವರ್ತಿಯು ‘ ಆಗಸದಲ್ಲಿ ತೇಲುವ ಬಿಳಿ ಮೋಡಗಳ ಹಿಂದೆ ಆಗಾಗ ತೋರಿ ಮರೆಯಾಗುವ ಚಂದ್ರನೋ ಸೂರ್ಯನೋ ‘ ಎಂಬಂತೆ ಕಂಗೊಳಿಸಿದನು . ಸ್ವಾರಸ್ಯ : ಬಿಳಿ ಬಣ್ಣದ ಚಾಮರಗಳನ್ನು ಮೋಡವಾಗಿಯೂ ಭರತೇಶನನ್ನು ಸೂರ್ಯ – ಚಂದ್ರರಾಗಿಯೂ ಕಲ್ಪಿಸಿರುವುದು ಸ್ವಾರಸ್ಯಪೂರ್ಣವಾಗಿದೆ .
2. “ ಕನ್ನಡದೊಳಗೊಂದು ಕಥೆಯ ಪೇಳುವೆನು ”
ಉತ್ತರ : ಆಯ್ಕೆ : – ಈ ವಾಕ್ಯವನ್ನು ರತ್ನಾಕರವರ್ಣಿಯ ‘ ಭರತೇಶ ವೈಭವ ‘ ಕೃತಿಯಿಂದ ತೆಗೆದುಕೊಳ್ಳಲಾಗಿರುವ ‘ ಸಿರಿಯನಿನ್ನೇನ ಬಣ್ಣಿಪೆನು ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕವಿ ರತ್ನಾಕರವರ್ಣಿಯು ತಾನು ಕಾವ್ಯ ಬರೆಯಲು ಕಾರಣ ಮತ್ತು ಪ್ರೇರಕವಾದ ಅಂಶಗಳನ್ನು ತಿಳಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾನೆ . ತನಗೆ ಧ್ಯಾನ ಮಾಡುವುದು ಬೇಸರವಾದಾಗ ತನ್ನ ಧರ್ಮ ದೇವತೆಯನ್ನು ಮೊದಲಾಗಿಟ್ಟುಕೊಂಡು ಕನ್ನಡದಲ್ಲಿ ಕಥೆ ಬರೆಯುವುದಾಗಿ ಹೇಳಿದ್ದಾನೆ .
ಸ್ವಾರಸ್ಯ : ಇಲ್ಲಿ ಕವಿಯು ತನಗೆ ಧ್ಯಾನಮಾಡಲು ಬೇಸರವಾದರೂ ಆ ಧ್ಯಾನವನ್ನು ಕಾವ್ಯರಚನೆಯ ರೂಪದಲ್ಲಿ ಮಾಡುವ ಅಭಿಪ್ರಾಯವನ್ನು ಸ್ವಾರಸ್ಯಪೂರ್ಣವಾಗಿ ವ್ಯಕ್ತಪಡಿಸಿದ್ದಾನೆ .
3. “ ಶ್ರೀ ವಿಲಾಸವನೇನನೆಂಬೆ ? ”
ಉತ್ತರ : ಆಯ್ಕೆ : – ಈ ವಾಕ್ಯವನ್ನು ರತ್ನಾಕರವರ್ಣಿಯ ‘ ಭರತೇಶ ವೈಭವ ‘ ಕೃತಿಯಿಂದ ತೆಗೆದುಕೊಳ್ಳಲಾಗಿರುವ ‘ ಸಿರಿಯನಿನ್ನೇನ ಬಣ್ಣಿಪೆನು ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕವಿ ರತ್ನಾಕರವರ್ಣಿಯು ಭರತ ಚಕ್ರವರ್ತಿಯು ಆಸ್ಥಾನಕ್ಕೆ ಆಗಮಿಸುತ್ತಿದ್ದ ವೈಭವದ ಬಗ್ಗೆ ವರ್ಣಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾನೆ . ಭರತ ಚಕ್ರವರ್ತಿಯು ಒಂದು ದಿನ ಸೂರ್ಯೋದಯದಲ್ಲಿ ಎದ್ದು ದೇವರ ಪೂಜೆಯನ್ನು ಮಾಡಿ , ಆಸ್ಥಾನಕ್ಕೆ ಬಂದು ಒಡೋಲಗ ನಡೆಸಿದ ಆ ಒಂದು ವೈಭವವನ್ನು ಏನೆಂದು ವರ್ಣಿಸಲಿ ಎಂದು ಕವಿ ಹೇಳುತ್ತಾನೆ .
ಸ್ವಾರಸ್ಯ : ಭರತ ಚಕ್ರವರ್ತಿಯ ರಾಜ ವೈಭವ ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ .
ಈ ) ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ .
1. ಬಿನ್ನಹ : ಅರಿಕೆ :: ವಿಭು :………..
2 . ಹೊಗಳು : ತೆಗಳು :: ಕಾರ್ಮುಗಿಲ್ :……………….
3. ಭರತ : ಅಯೋಧ್ಯೆ :: ಬಾಹುಬಲಿ :…………..
4. ನೀಲಾಂಬುಜ : ನೀಲ + ಅಂಬುಜ :: ಚಕ್ರೇಶ್ವರ :……………….
ಸರಿ ಉತ್ತರಗಳು
1. ರಾಜ
2. ಬೆಳ್ಳಗಿಲ್
3. ಪೌದನಪುರ
4. ಚಕ್ರ + ಈಶ್ವರ
Siriyaninnena Bannipenu Kannada Notes Pdf
ಇತರೆ ಪದ್ಯಗಳು :