9ನೇ ತರಗತಿ ಕನ್ನಡ ಧರ್ಮಸಮದೃಷ್ಟಿ ಪ್ರಶ್ನೋತ್ತರಗಳು ನೋಟ್ಸ್, 9th Standard Kannada Dharma Samadrusti Question Answer Notes Pdf Download 2022
ತರಗತಿ : 9ನೇ ತರಗತಿ
ಪಾಠದ ಹೆಸರು : ಧರ್ಮಸಮದೃಷ್ಟಿ
ಶಾಸನ ಸಂಬಂಧ ಮಾಹಿತಿ :
ಧರ್ಮಸಮದೃಷ್ಟಿ ಶಾಸನವು ೧೩೬೮ ರ ಅವಧಿಯಲ್ಲಿ ವಿಜಯನಗರ ಸಾಮ್ರಾಜ್ಯದ ಅರಸ ವೀರ ಬುಕ್ಕರಾಯನಿಗೆ ಸಂಬಂಧಿಸಿದ್ದಾಗಿದೆ. ಮತಧರ್ಮ ಸಂಘರ್ಷದಲ್ಲಿ ಜೈನರು ಹಾಗೂ ವೈಷ್ಣವರು ಸಾಮರಸ್ಯದಿಂದ ಬಾಳಬೇಕೆಂದು ಬುಕ್ಕರಾಯನು ವಿಧಿಸಿದ ಕಟ್ಟಳೆಯಿದು . ಈ ಶಾಸನವು ಬುಕ್ಕರಾಯನ ಧರ್ಮಸಮನ್ವಯತೆಯನ್ನು ಬಿಂಬಿಸುತ್ತದೆ . ಈ ಶಾಸನವನ್ನು ಬಿ.ಎಂ. ಶ್ರೀಕಂಠಯ್ಯನವರು ಸಂಪಾದಿಸಿದ ‘ ಕನ್ನಡಬಾವುಟ ‘ ಕೃತಿಯಿಂದ ಆರಿಸಿ ಕೊಳ್ಳಲಾಗಿದೆ .
Table of Contents
Dharma Samadrusti Question Answer Notes
ಅ ] ಒಂದು ವಾಕ್ಯದಲ್ಲಿ ಉತ್ತರಿಸಿ,
1. ಶ್ರೀವೈಷ್ಣವರೊಡನೆ ಮಹಾರಾಜನು ಏನು ಹೇಳಿದನು ?
ಶ್ರೀವೈಷ್ಣವರೊಡನೆ ಮಹಾರಾಜನು ವೈಷ್ಣವ ದರ್ಶನಕ್ಕೂ ಜೈನದರ್ಶನಕ್ಕೂ ಭೇದವಿಲ್ಲವೆಂದು ಹೇಳಿದನು .
2. ರಾಯನು ವಿಧಿಸಿದ ಕಟ್ಟಳೆಯನ್ನು ಮೀರಿದರೆ ಆಗುವ ಪರಿಣಾಮವೇನು ?
ರಾಯರು ವಿಧಿಸಿದ ಕಟ್ಟಳೆಯನ್ನು ಮೀರಿದವನು ರಾಜದೋಹಿ ಆಗುತ್ತಾನೆ .
3. ಬುಕ್ಕರಾಯನ ಹಿರಿಮೆ ಏನು ?
ಅರಿರಾಯ ವಿಭಾಡ ಹಾಗೂ ಭಾಷೆಗೆ ತಪ್ಪುವ ರಾಯರ ಗಂಡ ಎಂಬುದು ಬುಕ್ಕರಾಯನ ಹಿರಿಮೆ .
4. ಬುಕ್ಕರಾಯನ ರಾಜ್ಯಭಾರ ಕಾಲದಲ್ಲಿ ಯಾರೊಳಗೆ ಸಂವಾದ ನಡೆಯಿತು ?
ಬುಕ್ಕರಾಯನ ರಾಜ್ಯಭಾರ ಕಾಲದಲ್ಲಿ ಜೈನರಿಗೂ ಭಕ್ತರಿಗೂ ( ಶ್ರೀವೈಷ್ಣವರಿಗೂ ) ಸಂವಾದ ನಡೆಯಿತು .
5. ನಾಡ ಭವ್ಯ ಜನರು ಬುಕ್ಕರಾಯನ ಬಳಿ ಏನೆಂದು ಬಿನ್ನಹ ಮಾಡಿದರು ?
ನಾಡ ಭವ್ಯ ಜನರು ಬುಕ್ಕರಾಯನ ಬಳಿ ಭಕ್ತರು ( ಶ್ರೀವೈಷ್ಣವರು ) ಮಾಡುವ ಅನ್ಯಾಯಗಳನ್ನು ಬಿನ್ನಹ ಮಾಡಿದರು .
ಆ ] ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .
1. ಬುಕ್ಕರಾಯನು ನಡೆಸಿದ ಧರ್ಮಸಭೆಗೆ ಯಾರನ್ನೆಲ್ಲ ಆಹ್ವಾನಿಸಿದನು ?
ಕೋವಿಲ್ , ತಿರುಮಲೆ , ಪೆರುಮಾಳ್ ಕೋವಿಲ್ , ಮುಖ್ಯಕ್ಷೇತ್ರಗಳ ಸಕಲಾಚಾರ್ಯರು , ಸಕಲ ಧರ್ಮಾನುಯಾಯಿಗಳು , ಸಕಟ ಸಾತ್ವಿಕರು , ಮೊಷಿಕರು , ತಿರುಪಣಿ , ತಿರುವಿಡಿ , ತಣ್ಣೀರವರು , ನಲವತ್ತೆಂಟು ಕುಲದವರು , ಸಾವಂತ ಸಾಮಂತರಾದ ಮಲೆನಾಡಿನವರು , ತಿರಿಕುಲ , ಜಾಂಬವಕುಲ ಒಳಗೊಂಡ ಹದಿನೆಂಟು ನಾಡಿನವರನ್ನು ಬುಕ್ಕರಾಯನು ನಡೆಸಿದ ಧರ್ಮಸಭೆಗೆ ಆಹ್ವಾನಿಸಿದನು .
2. ಜೈನಧರ್ಮದ ಸುಧಾರಣೆಗಾಗಿ ಬುಕ್ಕರಾಯನು ಕೈಗೊಂಡ ಕ್ರಮಗಳೇನು ?
ಜೈನಧರ್ಮದ ಸುಧಾರಣೆಗಾಗಿ ಬುಕ್ಕರಾಯನು ಸಮಸ್ತ ರಾಜ್ಯದ ಜೈನಮತದ ಜನಗಳ ಅನುಮತದಿಂದ “ ಬೆಳುಗೊಳದ ಪುಣ್ಯಕ್ಷೇತ್ರದಲ್ಲಿ ವೈಷ್ಣವ ಅಂಗರಕ್ಷೆಗಾಗಿ ಸಮಸ್ತ ರಾಜ್ಯದೊಳಗೆ ಇರುವಂತಹ ಜೈನರ ಬಾಗಿಲು ಕಟ್ಟಳೆಯಾಗಿ ಮನೆಮನೆಗೆ ವರ್ಷಕ್ಕೆ ಒಂದು ಹಣ ಕೊಡುವುದು . ಹಾಗೆ ಸಂಗ್ರಹಿಸಿದ ಆ ಒಂದು ಹಣದಿಂದ ದೇವರ ಅಂಗರಕ್ಷೆಗೆ ಇಪ್ಪತ್ತು ಆಳುಗಳನ್ನು ನೇಮಿಸಿ , ಉಳಿದ ಹೊನ್ನಿನಿಂದ ಜೀರ್ಣಾವಸ್ಥೆಯಲ್ಲಿರುವ ಜಿನಾಲಯಗಳಿಗೆ ಸುಣ್ಣ ಬಳಿಸುವುದು ಎಂದು ಶಾಸನ ಬರೆಸಿದನು .
3. ‘ ಧರ್ಮಸಮದೃಷ್ಟಿ ‘ ಪಾಠದಲ್ಲಿ ರಾಮಾನುಜಾಚಾರ್ಯರ ಗುಣವಿಶೇಷತೆಯನ್ನು ಹೇಗೆ ಕೊಂಡಾಡಲಾಗಿದೆ ?
‘ ಧರ್ಮಸಮದೃಷ್ಟಿ ‘ ಪಾಠದಲ್ಲಿ ರಾಮಾನುಜಾಚಾರ್ಯರನ್ನು ಪಾಷಂಡ ( ನಾಸ್ತಿಕ ) ಸಾಗರ ಮಹಾಬಡಬಾ ಮುಖಾಗ್ನಿಯಂತಿರುವವರು , ಶ್ರೀರಂಗರಾಜ ಪಾದಕಮಲಗಳಲ್ಲಿ ಮೂಲ ದಾಸರಾದವರು . ಶ್ರೀವಿಷ್ಣುಲೋಕ ಮುನಿಮಂಟಪ ಯತಿರಾಜರಾಜರಂತಿರುವವರು ಎಂದು ಕೊಂಡಾಡಲಾಗಿದೆ . ಮಾರ್ಗದಾಯಿಗಳು , ತಿರುನಾರಾಯಣಪುರ
ಇ ] ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ ,
1. ಬುಕ್ಕರಾಯನು ತನ್ನ ಆಳ್ವಿಕೆಯ ಕಾಲದಲ್ಲಿ ಧರ್ಮಸಮದೃಷ್ಟಿಯನ್ನು ಹೇಗೆ ಆಚರಣೆಗೆ ತಂದನು ?
ಬುಕ್ಕರಾಯನು ತನ್ನ ಆಳ್ವಿಕೆಯ ಕಾಲದಲ್ಲಿ ಜೈನರಿಗೂ ವೈಷ್ಣವರಿಗೂ ಕಲಹವುಂಟಾದಾಗ ಅದನ್ನು ಸರಿಪಡಿಸಲು ಕೋವಿಲ್ , ತಿರುಮಲೆ , ಪೆರುಮಾಳ್ಕೋವಿಲ್ , ತಿರುನಾರಾಯಣಪುರ ಮುಖ್ಯಕ್ಷೇತ್ರಗಳ ಸಕಾಚಾರ್ಯರು , ಸಕಲ ಧರ್ಮಾನುಯಾಯಿಗಳು , ಸಕಟ ಸಾತ್ವಿಕರು , ಮೋಷಿಕರು , ತಿರುಪಣಿ , ತಿರುವಿಡಿ , ತಣ್ಣೀರವರು , ನಲವತ್ತೆಂಟು ಕುಲದವರು , ಮುಂತಾದವರನ್ನು ಒಳಗೊಂಡ ಹದಿನೆಂಟು ನಾಡಿನವರನ್ನು ಬುಕ್ಕರಾಯನು ಧರ್ಮಸಭೆಗೆ ಆಹ್ವಾನಿಸಿದನು . ವೈಷ್ಣವರ ಕೈಯಲ್ಲಿ ಜೈನರ ಕೈಯನ್ನಿಟ್ಟು ಜೈನಧರ್ಮಕ್ಕೂ ವೈಷ್ಣವಧರ್ಮಕ್ಕೂ ಭೇದವಿಲ್ಲವೆಂದು ಹೇಳಿದನು ಮತ್ತು ಜೈನಧರ್ಮಕ್ಕೆ ಈ ಹಿಂದೆ ಇದ್ದಂತೆ ಪಂಚಮಹಾವಾದ್ಯಗಳು , ಕಲಶವೂ ಸಲ್ಲಬೇಕೆಂದೂ ಭಕ್ತರ ( ವೈಷ್ಣವರ ) ದೆಸೆಯಿಂದ ಜೈನರಿಗೆ ಹಾನಿಯುಂಟಾದರೆ ಅದನ್ನು ವೈಷ್ಣವರು ತಮ್ಮ ಹಾನಿಯೆಂದು ಭಾವಿಸಬೇಕೆಂದು ಹೇಳಿದನು . ಸಮಸ್ತ ರಾಜ್ಯದ ಜೈನಮತದ ಜನಗಳ ಅನುಮತದಿಂದ “ ಬೆಳುಗೊಳದ ರಾಜ್ಯದೊಳಗೆ ಇರುವಂತಹ ಜೈನರ ಬಾಗಿಲು ಕಟ್ಟಳೆಯಾಗಿ ಮನೆಮನೆಗೆ ವರ್ಷಕ್ಕೆ ಒಂದು ಪುಣ್ಯಕ್ಷೇತ್ರದಲ್ಲಿ ವೈಷ್ಣವ ಅಂಗರಕ್ಷೆಗಾಗಿ ಸಮಸ್ತ ಹಣ ಕೊಡುವುದು . ಹಾಗೆ ಸಂಗ್ರಹಿಸಿದ ಆ ಒಂದು ಹಣದಿಂದ ದೇವರ ಅಂಗರಕ್ಷೆಗೆ ಇಪ್ಪತ್ತು ಆಳುಗಳನ್ನು ನೇಮಿಸಿ , ಉಳಿದ ಹೊನ್ನಿನಿಂದ ಜೀರ್ಣಾವಸ್ಥೆಯಲ್ಲಿರುವ ಜಿನಾಲಯಗಳಿಗೆ ಸುಣ್ಣ ಬಳಿಸುವುದು ” ಎಂದು ಶಾಸನ ಬರೆಸಿದನು . ಹೀಗೆ ಧರ್ಮಸಮದೃಷ್ಟಿಯನ್ನು ಆಚರಣೆಗೆ ತಂದನು .
ಈ. ಸಂದರ್ಭ ಸಹಿತ ಸ್ವಾರಸ್ಯ ಬರೆಯಿರಿ.
1. “ ಎಲ್ಲಾ ರಾಜ್ಯದೊಳಗುಳ್ಳಂತಹ ಬಸ್ತಿಗಳಿಗೆ ಶ್ರೀಇಂಗವರು ಶಾಸನವ ನಟ್ಟು ಪಾಲಿಸುವರು “
ಆಯ್ಕೆ : – ಈ ವಾಕ್ಯವನ್ನು ಶ್ರೀ ಬಿ . ಎಂ.ಶ್ರೀ ಅವರು ಸಂಪಾದಿಸಿರುವ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ‘ ಧರ್ಮಸಮದೃಷ್ಟಿ ‘ ಶಾಸನದಿಂದ ಆರಿಸಲಾಗಿದೆ . ಸಂದರ್ಭ : – ರಾಜನಾದವೀರಬುಕ್ಕರಾಯನು ಶ್ರೀವೈಷ್ಣವರು ಹಾಗೂ ಜೈನರ ನಡುವೆ ಸಂಘರ್ಷವುಂಟಾದ ಸಮಯದಲ್ಲಿ ಸಭೆ ಕರೆದು , ಅವರ ಕೈ ಕೈ ಹಿಡಿಸಿ ಸಾಮರಸ್ಯದಿಂದ ಇರುವಂತೆ ಸೂಚಿಸಿದ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .
ಸ್ವಾರಸ್ಯ : – ಶ್ರೀವೈಷ್ಣವರು ಜೈನ ಬಸದಿಗಳನ್ನು ಗೌರವಿಸಬೇಕು ಎಂದು ಶಾಸನ ಬರೆಸಿರುವುದರಲ್ಲಿ ರಾಜನಾದ ವೀರಬುಕ್ಕರಾಯನ ಧರ್ಮಸಮದೃಷ್ಟಿಯನ್ನು ಕಾಣಬಹುದಾಗಿದೆ .
2. “ ಪಾಷಂಡ ಸಾಗರ ಮಹಾಬಡವಾಮುಖಾಗ್ನಿ : ”
ಆಯ್ಕೆ : – ಈ ವಾಕ್ಯವನ್ನು ಶ್ರೀ ಬಿ . ಎಂ.ಶ್ರೀ ಅವರು ಸಂಪಾದಿಸಿರುವ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ‘ ಧರ್ಮಸಮದೃಷ್ಟಿ ‘ ಶಾಸನದಿಂದ ಆರಿಸಲಾಗಿದೆ . ಸಂದರ್ಭ : – ವಿಜಯನಗರ ಸಾಮ್ರಾಜ್ಯದ ರಾಜ ವೀರಬುಕ್ಕರಾಯನ ಕಾಲದ ‘ ಧರ್ಮಸಮದೃಷ್ಟಿ ‘ ಶಾಸನದ ಪ್ರಾರಂಭದಲ್ಲಿ ಶ್ರೀರಾಮಾನುಜಾಚಾರ್ಯರನ್ನು ಸ್ಮರಿಸುವ ಸಂದರ್ಭದಲ್ಲಿ ಶಾಸನಕಾರನು ಈ ಮಾತನ್ನು ಹೇಳುತ್ತಾನೆ .
ಸ್ವಾರಸ್ಯ : – ಸಮುದ್ರ ಮಧ್ಯದಲ್ಲಿ ಬಡಬಾನಲ ಇರುವಂತೆ ನಾಸ್ತಿಕರ ನಡುವೆ ಶ್ರೀರಾಮಾನುಜಾಚಾರ್ಯರು ಆಸ್ತಿಕರಾಗಿ ಶೋಭಿಸುತ್ತಿದ್ದರು ಎಂಬುದನ್ನು ಈ ಮಾತಿನಲ್ಲಿ ಬಹುಸ್ವಾರಸ್ಯಪೂರ್ಣವಾಗಿ ವರ್ಣಿಸಲಾಗಿದೆ .
3. “ ಈ ಮಾಡಿದ ಕಟ್ಟಳೆಯನು ಆವನೊಬ್ಬನು ಮೀರಿದವನು ರಾಜದ್ರೋಹಿಯಪ್ಪನು ”
ಆಯ್ಕೆ : – ಈ ವಾಕ್ಯವನ್ನು ಶ್ರೀ ಬಿ . ಎಂ.ಶ್ರೀ ಅವರು ಸಂಪಾದಿಸಿರುವ ‘ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ‘ ಧರ್ಮಸಮದೃಷ್ಟಿ ‘ ಶಾಸನದಿಂದ ಆರಿಸಲಾಗಿದೆ . ಸಂದರ್ಭ : – ರಾಜನಾದವೀರಬುಕ್ಕರಾಯನು ಶ್ರೀವೈಷ್ಣವರು ಹಾಗೂ ಜೈನರ ನಡುವೆ ಸಂಘರ್ಷವುಂಟಾದ ಸಮಯದಲ್ಲಿ ಸಭೆ ಕರೆದು , ಅವರ ಕೈಕೈ ಹಿಡಿಸಿ ಸಾಮರಸ್ಯದಿಂದ ಇರುವಂತೆ ಸೂಚಿಸಿ ಶಾಸನ ಮಾಡಿದ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .
ಸ್ವಾರಸ್ಯ : – ರಾಜನು ಮಾಡಿದ ಶಾಸನವನ್ನು ಯಾರು ಮೀರಬಾರದು : ಮೀರಿದರೆ ಅವರಿಗೆ ರಾಜದ್ರೋಹಿಗೆ ಆಗುವ ಶಿಕ್ಷೆಯು ಆಗುತ್ತದೆ ಎಂಬ ಎಚ್ಚರಿಕೆಯನ್ನು ಈ ಮಾತಿನಲ್ಲಿ ಕಾಣಬಹುದಾಗಿದೆ .
4 “ ಮಿಕ್ಕ ಹೊನ್ನಿಂಗೆ ಜೀರ್ಣಜಿನಾಲಯಂಗಳಿಗೆ ಸೊದೆಯನಿಕ್ಕುವುದು . ”
ಆಯ್ಕೆ : – ಈ ವಾಕ್ಯವನ್ನು ಶ್ರೀ ಬಿ.ಎಂ.ಶ್ರೀ ಅವರು ಸಂಪಾದಿಸಿರುವ ‘ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ‘ ಧರ್ಮಸಮದೃಷ್ಟಿ ‘ ಶಾಸನದಿಂದ ಆರಿಸಲಾಗಿದೆ . ಸಂದರ್ಭ : – ರಾಜನಾದ ವೀರಬುಕ್ಕರಾಯನು ಜೈನಧರ್ಮದ ಸುಧಾರಣೆಗಾಗಿ ಕೈಗೊಳ್ಳಬೇಕಾದ ಕಾರ್ಯಗಳನ್ನು ಸೂಚಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .
ಸ್ವಾರಸ್ಯ : – ಜೀರ್ಣಾವಸ್ಥೆಯಲ್ಲಿರುವ ಜಿನಾಲಯಗಳಿಗೆ ಸುಣ್ಣ ಬಳಿದು ಪುನಶ್ವೇತನಗೊಳಿಸಬೇಕು ಎಂಬ ವಿಶಾಲ ಮನೋಭಾವನೆಯನ್ನು ಈ ಮಾತಿನಲ್ಲಿ ಕಾಣಬಹುದಾಗಿದೆ .
1 ] ತತ್ಸಮ – ತದ್ಭವಗಳು
1 ) ವರ್ಷ – ವರುಷ
2 ) ಲೋಕ – ರೋಗ
3 ) ವೀರ – ಬೀರ
4 ) ಸಾಮಂತ – ಸಾವಂತ
5 ) ತಟ – ದಡ
6 ) ಮುಖ – ಮೊಗ
7 ) ಶ್ರೀ – ಸಿರಿ
8 ) ಮಂಟಪ – ಮಂಡಪ
9 ) ಭಕ್ತ – ಬಕುತ
10 ) ದಿಶಾ – ದೆಸೆ
11 ) ಸುಧೆ – ಸೋಧೆ
12) ದೃಷ್ಟಿ – ದಿಟ್ಟಿ
2 ) ಕೊಟ್ಟಿರುವ ಪದಗಳನ್ನು ಬಿಡಿಸಿ ಸಂಧಿ ಹೆಸರಿಸಿ ,
ಚರಣಾಂಬುಜ , ಮಂಡಳೇಶ್ವರ , ಸಕಳಾಚಾರ , ಭೇದವಿಲ್ಲ . ಕೈವಿಡಿದು , ವೃದ್ದಿಯಾಗಿ , ಭೇದವಾಗಿ , ಕಾಣಲಾಗದು . ಜಿನಾಲಯ , ತಪ್ಪಲೀಯದೆ , ಚಂದ್ರಾರ್ಕ ಚರಣಾಂಬುಜ
ಚರಣಾಂಬುಜ | ಚರಣ + | ಅಂಬುಜ | ಸವರ್ಣದೀರ್ಘ ಸಂಧಿ |
ಮಂಡಳೇಶ್ವರ | ಮಂಡಳ + | ಈಶ್ವರ | ಗುಣಸಂಧಿ |
ಸರಳಾಚಾರ್ಯ | ಸರಳ+ | ಆಚಾರ್ಯ | ಸವರ್ಣದೀರ್ಘ ಸಂಧಿ |
ಭೇದವಿಲ್ಲ | ಭೇದ + | ಇಲ್ಲ | ವಕಾರಾಗಮ ಸಂಧಿ |
ಕೈವಿಡಿದ | ಕೈ+ | ಪಿಡಿದು | ವಕಾರಾಗಮ ಸಂಧಿ |
ವೃದ್ಧಿಯಾಗಿ | ವೃದ್ದ + | ಆಗಿ | ಯಕಾರಾಗಮ ಸಂಧಿ |
ಭೇದವಾಗಿ | ಭೇದ + | ಆಗ | ವಕಾರಾಗಮ ಸಂಧಿ |
ಕಾಣಲಾಗದು | ಕಾಣಲು+ | ಆಗದು | ಲೋಪಸಂಧಿ |
ಜಿನಾಲಯ | ಜಿನ + | ಆಲಯ | ಸವರ್ಣದೀರ್ಘ ಸಂಧಿ |
ತಪ್ಪಲೀಯದೆ | ತಪ್ಪಲು + | ಈಯದೆ | ಲೋಪಸಂಧಿ |
ಚಂದ್ರಾರ್ಕ | ಚಂದ್ರ + | ಅರ್ಕ | ಸವರ್ಣದೀರ್ಘ ಸಂಧಿ |
9ನೇ ತರಗತಿ ಕನ್ನಡ ಧರ್ಮಸಮದೃಷ್ಟಿ ಪ್ರಶ್ನೋತ್ತರಗಳು ನೋಟ್ಸ್, 9th Standard Kannada Dharma Samadrusti Question Answer Notes Pdf
ಇತರೆ ಪಾಠಗಳು: